ಆರೋಗ್ಯಕರ ಗರ್ಭಧಾರಣೆ-ಇಲ್ಲಿದೆ ಕೆಲವು ಸೂತ್ರಗಳು

ಗರ್ಭಧಾರಣೆಯು ಒಂದು ಮಹತ್ವದ ಕಾಲವಾಗಿದ್ದು, ನೀವು ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಒಂದು ಭ್ರೂಣವು ಆರೋಗ್ಯವಂತ ಶಿಶುವಾಗಿ ಪ್ರಗತಿ ಹೊಂದಲು ಅನೇಕ ಅಂಶಗಳು ಪರಿಣಾಮ ಬೀರುತ್ತದೆ. ನಿಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ ನಿಮ್ಮ ಆರೋಗವಂತ ಶಿಶುವಿಗೋಸ್ಕರ ನೀವು ಕೆಲವು ಚಟುವಟಿಕೆಗಳಿಂದ ದೂರವಾಗಿರಬೇಕಾಗುತ್ತದೆ.

ನಿಮ್ಮ ಆಹಾರದ ಕಡೆ ಗಮನವಿರಲಿ :

ಅನೇಕ ಮಹಿಳೆಯರು ‘ಇಬ್ಬರಿಗಾಗಿ ತಿನ್ನಬೇಕು’ ಎಂಬ ಭಾವನೆ ಹೊಂದಿರುತ್ತಾರೆ. ಆದರೆ, ಮಹಿಳೆಯರು ಗರ್ಭಧರಿಸಿದಾಗ ಪ್ರತಿದಿನ 200 ರಿಂದ 300 ಕ್ಯಾಲೋರಿಗಳಷ್ಟು ಹೆಚ್ಚುವರಿ ಆಹಾರದ ಅಗತ್ಯವಿರುತ್ತದೆ ಎಂದು ಸಂಶೋಧನೆ ತೋರಿಸಿದ್ದು, ಅದನ್ನು ನೀವು ಯಾವುದೇ ರೂಪದಲ್ಲಿ ಸೇವಿಸಬಹುದು. ಇಲ್ಲಿ ಮುಖ್ಯವಾದ ಸಂಗತಿ ಎಂದರೆ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿಗೆ ಅಗತ್ಯವಾದ ಪ್ರೊಟೀನ್, ವಿಟಮಿನ್‍ಗಳು ಮತ್ತು ಖನಿಜಗಳು ನಿಮಗೆ ಲಭಿಸಿದೆಯೇ ಎಂಬುದನ್ನು ನೀವು ಖಾತರಿ ಮಾಡಿಕೊಳ್ಳಬೇಕು. ಈ 200 ರಿಂದ 300 ಹೆಚ್ಚುವರಿ ಕ್ಯಾಲೋರಿಗಳು ಚಾಕೋಲೆಟ್‍ಗಳು ಅಥವಾ ಜಂಕ್‍ಫುಡ್ ಮೇಲೆ ಅವಲಂಬಿತವಾಗಿರಬಾರದು. ಬದಲಿಗೆ ಹಣ್ಣುಗಳು ಮತ್ತು ತರಕಾರಿಗಳು ಇತ್ಯಾದಿ ಒಳಗೊಂಡಿರಬೇಕು. ಅಲ್ಲದೇ ನೀವು ನೀರು ಸೇವಿಸುವ ಪ್ರಮಾಣವನ್ನೂ ಹೆಚ್ಚಿಸಬೇಕಾಗುತ್ತದೆ. ಇದು ಮಲಬದ್ಧತೆಯನ್ನು ತಡೆಗಟ್ಟಲು ನೆರವಾಗುತ್ತದೆ. ಉತ್ತಮ ಪೋಷಕಾಂಶ ಆಹಾರಗಳು ಬೆಳೆಯುತ್ತಿರುವ ನಿಮ್ಮ ಶಿಶುವಿಗೆ ತುಂಬಾ ಮುಖ್ಯ. ನೀವು ದಿನನಿತ್ಯ 400 ರಿಂದ 1000 ಮೈಕ್ರೋಗ್ರಾಮ್‍ಗಳಷ್ಟು ‘ಬಿ’ ವಿಟಮಿನ್‍ನನ್ನು (ಫೋಲಿಕ್ ಆಸಿಡ್) ಸೇವಿಸಬೇಕಾಗುತ್ತದೆ. ಇದು ಸೊಪ್ಪುಗಳು, ಕಿತ್ತಳೆ ರಸ ಮತ್ತು ಹುರುಳಿಯಲ್ಲಿ ಹೇರಳವಾಗಿರುತ್ತದೆ.

ಮಲ್ಪಿವಿಟಮಿನ್‍ಗಳು ಮತ್ತು ಖನಿಜ ಆಹಾರವನ್ನು ಸೇವಿಸಿ :

ನೀವು ಗರ್ಭಧರಿಸಿದ ಸಮಯದಿಂದಲೂ ನಿಮಗೆ ಉತ್ತಮ ಪ್ರಮಾಣದ ಮಲ್ಟಿವಿಟಮಿನ್‍ಗಳು ಮತ್ತು ಖನಿಜಯುಕ್ತ ಆಹಾರಗಳ ಅಗತ್ಯವಿರುತ್ತದೆ. ಈಗ ವಿಶೇಷವಾಗಿ ಗರ್ಭಿಣಿಯರಿಗಾಗಿಯೇ ರೂಪಿಸಲಾದ ವಿಟಮಿನ್ ಮತ್ತು ಖನಿಜಯುಕ್ತ ಸುರಕ್ಷಿತ ಔಷಧಿಗಳು ಲಭಿಸುತ್ತವೆ. ನೀವು ಗರ್ಭಧರಿಸಲು ಯೋಜನೆ ರೂಪಿಸುವುದಕ್ಕೂ ಇಂಥ ಆಹಾರವನ್ನು ಸೇವಿಸಲು ಆರಂಭಸಿದರೆ ಉತ್ತಮ. ಇದರಿಂದ ಗರ್ಭಧಾರಣೆ ಮತ್ತು ಗರ್ಭಾವಸ್ಥೆಯ ಕಾಲದುದ್ದಕ್ಕೂ ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯನ್ನು ಸರಿದೂಗಿಸಿಕೊಳ್ಳಬಹುದು.

ಪ್ರತಿದಿನ ಸಾಧಾರಣ ಪ್ರಮಾಣದಲ್ಲಿ ವ್ಯಾಯಾಮ ಮಾಡಿ :

ಗರ್ಭಿಣಿಯಾಗಿದ್ದಾಗ ಅದು ನೀವು ಸುಮ್ಮನೇ ಕೂರುವ ಸಮಯವಲ್ಲ ಎಂಬುದು ನಿಮಗೆ ನೆನಪಿರಲಿ. ನಿಮಗೆ ಸೂಕ್ತ ವಿಶ್ರಾಂತಿಯು ತುಂಬಾ ಮುಖ್ಯವಾದರೂ ಕೂಡ, ಆರೋಗ್ಯವಂತ ಗರ್ಭಿಣಿಯರು ಪ್ರತಿ ದಿನ 30 ನಿಮಿಷಗಳ ಕಾಲ ಸಾಧಾರಣ ಪ್ರಮಾಣದಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ಬಹುತೇಕ ತಜ್ಞರು ನಂಬಿದ್ದಾರೆ. ಆದರೆ, ವಿಪರೀತ ಶ್ರಮದಾಯಕ ವ್ಯಾಯಾಮ ಬೇಡ. ಸಾಧಾರಣ ಪ್ರಮಾಣದಲ್ಲಿ ವ್ಯಾಯಾಮ ಮಾಡುವುದರಿಂಗ ಗರ್ಭವತಿಯರ ಭೌತಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿ ಸುಧಾರಿಸಿ, ಭ್ರೂಣಕ್ಕೆ ಆಮ್ಲಜನಕದ ಹರಿವು ಹೆಚ್ಚಾಗುತ್ತದೆ. ಆದರಿಂದ ಅತಿ ಶ್ರಮದ ವ್ಯಾಯಾಮವು ಅಪಾಯಕಾರಿ.

ವಿಷಯುಕ್ತ ರಾಸಾಯನಿಕಗಳ ಸಂಪರ್ಕದಿಂದ ದೂರವಿರಿ :

ವಿಶೇಷವಾಗಿ ನೀವು ಗರ್ಭಧರಿಸಿದ ಆರಂಭದಲ್ಲಿ ಬಣ್ಣ ಬಳಿದ ಮನೆಯಲ್ಲಿ ತುಂಬಾ ಹೊತ್ತು ಇರುವುದು ಹಾಗೂ ಹೊಸ ಕಾರ್ಪೆಟ್ ಮೇಲೆ ಮಲಗುವುದು ಒಳ್ಳೆಯದಲ್ಲ. ಏಕೆಂದರೆ ಗರ್ಭಧಾರಣೆಯ ಪ್ರಾರಂಭಿಕ ಹಂತಗಳಲ್ಲಿ ಭ್ರೂಣವು ತುಂಬಾ ಸೂಕ್ಷ್ಮವಾಗಿರುವುದರಿಂದ ಇವುಗಳಿಂದ ರಾಸಾಯನಿಕ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಕೀಟನಾಶಕಗಳಂಥ ಅಸ್ವಾಭಾವಿಕ ರಾಸಾಯನಿಕಗಳ ಬಗ್ಗೆ ನೀವು ಎಚ್ಚರ ವಹಿಸಬೇಕು. ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸುವಾಗ ಅವುಗಳನ್ನು ಚೆನ್ನಾಗಿ ತೊಳೆಯಿರಿ ಅಥವಾ ಹಣ್ಣುಗಳು ಅಥವಾ ತರಕಾರಿಗಳ ಹೊರಗಿನ ಚರ್ಮವನ್ನು ತೆಗೆಯಿರಿ, ಇದರಿಂದ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಉಳಿದಿರುವ ಕೀಟನಾಶಕಗಳನ್ನು ದೂರವಿಟ್ಟಂತೆ ಆಗುತ್ತದೆ.

ಆಲ್ಕೋಹಾಲ್ ಸೇವಿಸಬೇಡಿ :

ಕಡಿಮೆ ತೂಕದ ಶಿಶು ಜನಿಸುವುದು ಬೇಡವಾದರೆ ಹಾಗೂ ನೀವು ಸಮಸ್ಯೆಗೆ ಸಿಲುಕುವುದು ಇಷ್ಟವಿಲ್ಲದ್ದಿದ್ದರೆ ನೀವು ಗರ್ಭಿಣಿ ಎಂಬುದು ಖಾತರಿಯಾದ ಕೂಡಲೇ ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಿ. ಆಲ್ಕೋಹಾಲ್ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಮಹಿಳೆಯರಲ್ಲಿ ಹಾರ್ಮೋನು ಉತ್ಪಾದನೆ ಮೇಲೆ ದುಷ್ಟರಿಣಾಮ ಉಂಟಾಗುತ್ತದೆ.

ಧೂಮಪಾನ ಮಾಡಬೇಡಿ :

ಧೂಮಪಾನ ಮಾಡುವಾಗ ಸೇವಿಸಲ್ಪಡುವ ರಾಸಾಯನಿಕವು ಅವಧಿಗೆ ಮುನ್ನ ಶಿಶು ಜನನ, ಆಕಾಲ ಪ್ರಸವ, ಗರ್ಭಪಾತ, ರಕ್ತಸ್ರಾವ ಇತ್ಯಾದಿಗೆ ಕಾರಣವಾಗಬಹುದು. ಇದು ಶಿಶುವಿನ ಆಮ್ಲಜನಕ ಸ್ವೀಕಾರ ಪ್ರಮಾಣವನ್ನು ತಗ್ಗಿಸುತ್ತದೆ. ಗರ್ಭಿಣಿಯರು ಧೂಮಪಾನ ಮಾಡುವುದರಿಂದ ಅವರ ಈಸ್ಟ್ರೋಜೆನ್ ಹಾರ್ಮೋನು ಮಟ್ಟಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೂ ಅಂಡಾಣು ಉತ್ಪತ್ತಿಯನ್ನು ತಗ್ಗಿಸುತ್ತದೆ. ಗರ್ಭಕೊರಳಿನ ಶ್ಲೇಷ್ಮದಲ್ಲಿ ನಿಕೋಟಿನ್ ವಿಷಕಾರಿಯಾಗಿ ಪರಿಣಮಿಸುತ್ತದೆ. ಯಾವುದೇ ಕಾರಣಕ್ಕೂ ನೀವು ಧೂಮಪಾನ ಮಾಡಬೇಡಿ ಅಥವಾ ಪರ್ಯಾಯ ಧೂಮಪಾನದ ಪರಿಣಾಮಕ್ಕೆ ಒಳಗಾಗಬೇಡಿ.

ಕಾಫಿ ಕುಡಿಯಬೇಡಿ :

ಕಾಫಿಯಲ್ಲಿರುವ ಕೆಫೇನ್ ಭ್ರೂಣದ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿದೆ. ಕೆಫೇನ್ ಹೆರಿಗೆ ನಂತರ ಸ್ಟ್ರೆಚ್ ಮಾರ್ಕ್‍ಗಳನ್ನು ಹೆಚ್ಚಿಸುತ್ತದೆ. ನೀವು ಕಾಫಿಯನ್ನು ತಕ್ಷಣ ಬಿಡಲು ಸಾಧ್ಯವಿಲ್ಲದಿದ್ದರೂ ಹಂತಹಂತವಾಗಿ ಬಿಡಲು ಪ್ರಯತ್ನಿಸಿ.
ವೈದ್ಯರು ಶಿಫಾರಸು ಮಾಡದ ಔಷಧಗಳು

 ಗಿಡಮೂಲಿಕೆಗಳನ್ನು ಸೇವಿಸಬೇಡಿ :

ಯಾವುದೇ ಕಾರಣಕ್ಕೂ ವೈದ್ಯರು ಶಿಫಾರಸು ಮಾಡದ ಔಷಧಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸಬೇಡಿ. ಇದು ಜನಿಸದ ಶಿಶುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಬಹು ಲೈಂಗಿಕ ಸಂಗಾತಿಗಳನ್ನು ಹೊಂದಬೇಡಿ :

ಬಹು ಸಂಗಾತಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಬೇಡಿ. ಇದು ಜನನ ಮತ್ತು ಗರ್ಭಧಾರಣೆ ತೊಡಕುಗಳಿಗೆ ಎಡೆ ಮಾಡಿಕೊಡಬಹುದು.

 

 

 

 

 

 

 

 

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!