ಸಂಗಾತಿಯೇ ನನ್ನನ್ನು ಕೆಡಿಸಬೇಡ. ಅತ್ಯಾಚಾರ ಮಹಿಳೆಯ ಗೌರವ ಘನತೆ ಎರಡಕ್ಕೂ ಭಂಗ ತರುವ ಅಪರಾಧ. ಒಬ್ಬ ಕೊಲೆಗಾರ ಬಲಿಪಶುವಿನ ಶಾರೀರಿಕ ಚೌಕಟ್ಟು ಮಾತ್ರ ಹಾಳು ಮಾಡಿದರೆ, ಒಬ್ಬ ಅತ್ಯಾಚಾರಿ ಅಸಹಾಯಕ ಮಹಿಳೆಯನ್ನು ಅಪವಿತ್ರಗೊಳಿಸಿ ಕೆಳ ಮಟ್ಟಕ್ಕೆ ತರುತ್ತಾನೆ.
ಅನೇಕ ವರ್ಷಗಳ ಹಿಂದೆ ನಡೆದಿರುವ ದಿಲ್ಲಿಯ ನಿರ್ಭಯಾ, ಆಂಧ್ರ ಪ್ರದೇಶದ ಪಶುವೈದ್ಯೆ, ಉತ್ತರ ಪ್ರದೇಶದಲ್ಲಿ ನಡೆದ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ, ಅನೇಕ ರಾಜ್ಯಗಳು-ಊರುಗಳಲ್ಲಿ ನಡೆದಿರುವ, ನಡೆಯುತ್ತಿರುವ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿರುವ, ಬೆಳಕಿಗೆ ಬಾರದೇ ಗುಪ್ತವಾಗಿ ಉಳಿದಿರುವ ಅನೇಕ ಅತ್ಯಾಚಾರಗಳ ಹಿನ್ನೆಲೆಯಲ್ಲಿ, ಅತ್ಯಾಚಾರ ತಡೆಯಲು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಕೂಗು ಎಲ್ಲೆಡೆ ಎದ್ದಿದೆ. 2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ವಾದ ಮಂಡಿಸಿದ್ದ ವಕೀಲೆ ಸೀಮಾಕುಶ್ವಾಹ ಈಗ ಉತ್ತರ ಪ್ರದೇಶದ ಹಾಥರಸ್‍ನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದ ಪರ ವಾದ ಮಂಡಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ನ್ಯಾಯಾಲಯಗಳು 2019ರಲ್ಲಿ ನೀಡಿದ ಕೆಲವು ಆದೇಶಗಳನ್ನು ಈಗ ಗಮನಿಸೋಣ.
ಅತ್ಯಾಚಾರದ ಬಗ್ಗೆ ಕೆಲವು ಪ್ರಕರಣಗಳು:
19 ವರ್ಷದ ಹುಡುಗಿಗೆ, ಮದುವೆಯಾಗುವ ಭರವಸೆ ಕೊಟ್ಟು ನಡೆಸಿದ ಲೈಂಗಿಕ ಸಂಬಂಧ ಬಲಾತ್ಕಾರವಲ್ಲ ಎಂದು, ಓರಿಸ್ಸಾ ಹೈಕೋರ್ಟ್ ಜಿ.ಅಚ್ಯುತ್‍ಕುಮಾರ್ v/s ಓಡಿಸ್ಸಾ ಸರಕಾರ ಕೇಸ್‍ನಲ್ಲಿ 21-5-2020ರಂದು ನಿರ್ಣಯ ಕೊಟ್ಟಿದೆ. 11-12-2019ರಂದು ಈತನಿಗೆ ಕೆಳ ಕೋರ್ಟಿನಲ್ಲಿ ನಿರಾಕರಿಸಲ್ಪಟ್ಟಿದ್ದ ಜಾಮೀನು ಈಗ ಸಿಕ್ಕಿತು. ರಾಜ್ಯ ಸರಕಾರದ ವಾದದಂತೆ, ಹುಡುಗಿಯ ಮುಗ್ಧತೆಯ ಲಾಭ ಪಡೆದು ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿ, 2 ಬಾರಿ ಆಕೆ ಗರ್ಬಿಣಿಯಾದಾಗ ಆಕೆಗೆ ಗರ್ಭಪಾತ ಮಾಡಿಸಿದ್ದನು ಈತ. ಆದರೆ ವಿಚಾರಣೆಯ ಸಂದರ್ಭದಲ್ಲಿ, ವೈದ್ಯಕೀಯ ತಪಾಸಣೆಯಿಂದ, ಲೈಂಗಿಕ ಸಂಭೋಗದ ಸಮಯದಲ್ಲಿ ಬಲವಂತದ ನಿದರ್ಶನ ಸಿಕ್ಕಿಲ್ಲ. ಈ ಪ್ರಕರಣದ ಬಲಿಪಶುವಾದ ಹುಡುಗಿ ಒಬ್ಬ ವಯಸ್ಕಳು–ಆಕೆ ದೃಢ ಮನಸ್ಸು ಹೊಂದಿದ್ದಾಳೆ. ಆಕೆಗೆ ಯಾರಾದರೂ ವಿವಾಹದ ಆಶ್ವಾಸನೆಯೊಂದಿಗೆ ಶಾರೀರಿಕ ಸಂಬಂಧಕ್ಕೆ ಪ್ರೇರಣೆ ಕೊಡಲು ಅಸಾಧ್ಯ.
19-8-2020ರಂದು ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿ ಎಮ್.ಜಿ.ಸೇವಿಕರ್.ಜೆ ಇಂಥ ಒಂದು ಕೇಸಿನಲ್ಲಿ ಅಪರಾಧಿಗೆ ಜಾಮೀನು ನಿರಾಕರಿಸಿದರು. 20 ವರ್ಷದ, ಕೋಳಿ ಫಾರಂಗೆ ಕೆಲಸಕ್ಕೆ ಹೋಗುತ್ತಿದ್ದ ಹುಡುಗಿಯನ್ನು, ಅಲ್ಲಿ ಒಬ್ಬ ವ್ಯಕ್ತಿ ವಿವಾಹವಾಗುವುದಾಗಿ ಆಶ್ವಾಸನೆ ಕೊಟ್ಟು, 2 ಬಾರಿ ಸಂಭೋಗ ಮಾಡಿದ. 3ನೇ ಬಾರಿ ಆಕೆಯನ್ನು ಲೈಂಗಿಕ ಸಂಬಂಧಕ್ಕಾಗಿ ಬಲವಂತ ಪಡಿಸಿದಾಗ, ಆಕೆ ನಿರಾಕರಿಸಿದಾಗ, ಆತ ಆಕೆಯನ್ನು ಹೊಡೆದು, ತನಗಾಗಾಲೇ ಮದುವೆ ಆಗಿರುವುದಾಗಿ ತಿಳಿಸಿದ. ಆದರೆ ಪ್ರಕರಣ ಕೋರ್ಟಿಗೆ ಹೋದಾಗ ಆತನಿಗೆ ಜಾಮೀನ್ ಸಿಗಲಿಲ್ಲ.
13-4-2019ರಂದು ಸುಪ್ರೀಂ ಕೋರ್ಟು ತನ್ನ ಒಂದು ನಿರ್ಣಯದಲ್ಲಿ ಬಲಾತ್ಕಾರ ಮಹಿಳೆಯ ಗೌರವ ಘನತೆಗಳಿಗೆ ಭಂಗತರುವ ಅಪರಾಧ ಎಂದಿದೆ. ಬಲಿಪಶು ಹಾಗೂ ಬಲಾತ್ಕಾರ ಮಾಡಿದವರು ಬೇರೆಯವರನ್ನು ವಿವಾಹವಾದರೂ ಅಪರಾಧ ಅಳಿಸಿ ಹೋಗುವುದಿಲ್ಲ. 2013ರಲ್ಲಿ ಛತ್ತಿಸ್‍ಗಡದ ಒಬ್ಬ ಸರಕಾರಿ ವೈದ್ಯ, ಒಬ್ಬ ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿ ಸಂಭೋಗ ಮಾಡಿದ್ದ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಶಾ ಗಮನಿಸಿದಂತೆ ಸಾಕ್ಷಿಗಳ ಆಧಾರದ ಮೇಲೆ ಅಪರಾಧಿಯ ಉದ್ದೇಶ ಬಲಿಪಶುವನ್ನು ಮೋಸ ಮಾಡಿಸುವುದಾಗಿದೆ. ಆತ ವಿವಾಹದ ಪ್ರಮಾಣ ಮಾಡದಿದ್ದರೆ, ಆಕೆ ಲೈಂಗಿಕ ಕೃತ್ಯಕ್ಕೆ ಸಮ್ಮತಿಸುತ್ತಿರಲಿಲ್ಲ.
ಮದುವೆಯ ಸುಳ್ಳು ಪ್ರಮಾಣ ಮಾಡಿ ಎಸಗುವ ಅತ್ಯಾಚಾರ
ಕೋರ್ಟು ಹೇಳಿದಂತೆ ಆಧುನಿಕ ಸಮಾಜದಲ್ಲಿ ಇಂಥ ಘಟನೆಗಳು ಹೆಚ್ಚುತ್ತಿವೆ. “ಬಲಾತ್ಕಾರವು ಸಮಾಜದಲ್ಲಿ ಅತ್ಯಂತ ನೈತಿಕ ಹಾಗೂ ಶಾರೀರಿಕವಾಗಿ ಖಂಡನೀಯ ಅಪರಾಧ”. ಇದು ಬಲಿಪಶುವಿನ ದೇಹ, ಮನಸ್ಸು ಹಾಗೂ ಖಾಸಗೀತನದ ಮೇಲಿನ ಆಕ್ತಮಣ. ಒಬ್ಬ ಕೊಲೆಗಾರ ಬಲಿಪಶುವಿನ ಶಾರೀರಿಕ ಚೌಕಟ್ಟು ಮಾತ್ರ ಹಾಳು ಮಾಡಿದರೆ, ಒಬ್ಬ ಅತ್ಯಾಚಾರಿ ಅಸಹಾಯಕ ಮಹಿಳೆಯನ್ನು ಅಪವಿತ್ರಗೊಳಿಸಿ ಕೆಳ ಮಟ್ಟಕ್ಕೆ ತರುತ್ತಾನೆ. ಅತ್ಯಾಚಾರ ಒಬ್ಬ ಮಹಿಳೆಯನ್ನು ಒಂದು ಪ್ರಾಣಿಯನ್ನಾಗಿಸಿ ಆಕೆಯ ಜೀವನದ ಅತಿಮುಖ್ಯ ತಿರಳನ್ನೇ ಅಲ್ಲಾಡಿಸುತ್ತದೆ.
ಕೋರ್ಟು ಹೇಳಿದಂತೆ ಅತ್ಯಾಚಾರ ಅತ್ಯಂತ ತಿರಸ್ಕರಿಸುವ ಅಪರಾಧ. ಇದು ಮಹಿಳೆಯ ಅತ್ಯುನ್ನತ ಗೌರವಕ್ಕೆ ಕೊಟ್ಟ ಒಂದು ಗಂಭೀರವಾದ ಹೊಡೆತಕ್ಕೆ ಸಮಾನವಾಗಿರುತ್ತದೆ ಹಾಗೂ ಆಕೆಯ ಗೌರವ ಘನತೆ ಎರಡಕ್ಕೂ ಭಂಗ ತರುವ ಅಪರಾಧ ಇದಾಗಿದೆ. ಅತ್ಯಾಚಾರಿ ಅಪರಾಧದ ಪರಿಣಾಮಗಳನ್ನು ಎದುರಿಸಲೇಬೇಕು ಎನ್ನುತ್ತಾ ಆ ಅಪರಾಧಿಗೆ 7 ವರ್ಷಗಳ ಜೈಲುವಾಸ ನಿಗಧಿಪಡಿಸಿತು. ಮದುವೆಯ ಸುಳ್ಳು ಪ್ರಮಾಣ ಮಾಡಿ ಎಸಗುವ ಅತ್ಯಾಚಾರಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಿದೆ. ಈ ವರ್ಷದ ಮಾರ್ಚ್ 5ರಂದು ಪ್ರಕಟಿಸಲಾದ ವರದಿಯಂತೆ 2020ರ ಜನವರಿ-ಫೆಬ್ರವರಿ ತಿಂಗಳಲ್ಲಿ ಇಂತಹ 14 ಪ್ರಕರಣಗಳು ದಾಖಲಾಗಿವೆ.
ವನಿತಾ ಸಹಾಯವಾಣಿಯ ರಾಣಿ ಶೆಟ್ಟಿ ಪ್ರಕಾರ “ಬಹಳಷ್ಟು ಪ್ರಕರಣಗಳಲ್ಲಿ ಸಂಬಂಧವು ಒಮ್ಮತದ್ದಾಗಿರುತ್ತದೆ. ಹೀಗಾಗಿ ಕಾನೂನಿನಡಿ ಅವಕಾಶವಿದ್ದರೂ, ಇದು ಅತ್ಯಾಚಾರ ಎಂದು ನಂಬುವುದು ಕಷ್ಟ”. ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ, ಅವನು ಒಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ, ವಿವಾಹವಾಗುವ ಪ್ರತಿ ಪ್ರಮಾಣದ ಉಲ್ಲಂಘನೆಯೂ ಸುಳ್ಳು ಪ್ರಮಾಣವೆಂದು ತಿಳಿದು, ಪುರುಷನನ್ನು ಅತ್ಯಾಚಾರಿ ಎಂದು ಅಪರಾಧ ಹೊರಿಸಲಾಗುವುದಿಲ್ಲ. ಕಾನೂನು ಪ್ರಕಾರ ಮದುವೆಯ ಸುಳ್ಳು ಆಶ್ವಾಸನೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಸಂಭೋಗ ಮಾಡಿದ್ದು ಸಾಬೀತಾಗಬೇಕು.
ಇತ್ತೀಚೆಗೆ ವಿವಾಹವಾದ ಮಹಿಳೆಯೊಬ್ಬಳು ವಿಟನೊಬ್ಬ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಬಲಾತ್ಕಾರ ಮಾಡಿದನೆಂದು ದೂರು ನೀಡಿದಳು. ಆಗ ಆ ಪುರುಷ ಹಾಗೂ ಆತನ ಪಾಲಕರಿಗೆ ಜೈಲಾಯಿತು. ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಬಾಣಸವಾಡಿ ಪೊಲೀಸರು ಒಬ್ಬ ನೃತ್ಯ ಶಿಕ್ಷಕನನ್ನು ಬಂಧಿಸಿದರು. ಆತ ವಿವಾಹವಾಗುವುದಾಗಿ ಹೇಳಿ 23 ವರ್ಷದ ಶಿಷ್ಯೆಯನ್ನು ಬಲತ್ಕಾರ ಮಾಡಿದ್ದ. ಅತ್ಯಾಚಾರವು ಲೈಂಗಿಕ ದಾಳಿ. ಇಲ್ಲಿ ವ್ಯಕ್ತಿಯ ಅನುಮತಿ ಇಲ್ಲದೇ ನಡೆಸುವ ಲೈಂಗಿಕ ಸಂಭೋಗ ಅಥವಾ ವಿವಿಧ ರೀತಿಯ ಲೈಂಗಿಕ ತೂರಿಸುವಿಕೆ. ಇದು ಶಾರೀರಿಕ ಶಕ್ತಿ, ದಬ್ಬಾಳಿಕೆ, ಅಧಿಕಾರದ ದುರುಪಯೋಗ ಅಥವಾ ಮಹಿಳೆ ಒಪ್ಪಿಗೆ ಕೊಡಲಾಗದ ಸ್ಥಿತಿ ಇವುಗಳಿಂದ ಈ ಕಾರ್ಯ ಆಗಿರಬಹುದು. ಆ ಸ್ಥಿತಿಗಳು ಮೂರ್ಛಿತಳಾಗಿರುವುದು, ಅಶಕ್ತಳಾಗಿರುವುದು, ಬೌದ್ಧಿಕ ಅಂಗಹೀನತೆ, ಕಾನೂನಿನ ಬೇಡಿಕೆಯ ವಯಸ್ಸಿಗಿಂತ ಕಡಿಮೆ ವಯಸ್ಸಿನವಳಾಗಿರುವುದು ಆಗಿರಬಹುದು.
ಬಲಾತ್ಕಾರಕ್ಕಾಗಿ ವರದಿ, ಕಾನೂನು ಕ್ರಮ ಜರುಗಿಸುವುದು, ಶಿಕ್ಷೆ ಇವುಗಳು ವಿವಿಧ ನ್ಯಾಯ ವ್ಯಾಪ್ತಿಗಳಲ್ಲಿ ಭಿನ್ನವಾಗಿರುತ್ತದೆ. ವಿಶ್ವದಾದ್ಯಂತ ಅತ್ಯಾಚಾರ ಒಳಗೊಂಡಂತೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿ ಪುರುಷರಿಂದ ಆಗುತ್ತದೆ. ಅಪರಿಚಿತರಿಗಿಂತ ಬಲಿಪಶುವಿಗೆ ಬಲ್ಲವರಿಂದಲೇ ಆಗುವ ಅತ್ಯಾಚಾರ ಹೆಚ್ಚು. ಪುರುಷನಿಂದ-ಪುರುಷನ ಮೇಲೆ, ಮಹಿಳೆಯಿಂದ ಮಹಿಳೆಯ ಮೇಲೆ ಆಗುವ ಅತ್ಯಾಚಾರ ಸಾಮಾನ್ಯ. ಆದರೆ ಇವು ವರದಿಯಾಗುವುದಿಲ್ಲ. ಯುದ್ಧದ ಸಮಯದಲ್ಲಿ, ಅಂತರ್‍ರಾಷ್ಟ್ರೀಯ ಸಂಘರ್ಷದ ಸಂದರ್ಭದಲ್ಲಿ ನಡೆಯುವ ಲೈಂಗಿಕ ಗುಲಾಮಗಿರಿ, ವ್ಯವಸ್ಥಿತ ಬಲಾತ್ಕಾರಗಳು, ಸಾಮಾನ್ಯ ಜನರಿಗೆ ತಿಳಿದು ಬರುವುದಿಲ್ಲ.
ಬಲಾತ್ಕಾರಕ್ಕೆ ಒಳಗಾದವರು ಆಘಾತಕ್ಕೆ ಒಳಗಾಗಬಹುದು. ಆಘಾತದ ನಂತರ ಒತ್ತಡದ ಅವ್ಯವಸ್ಥೆಗೆ ತುತ್ತಾಗಬಹುದು. ಗಂಭೀರದ ಗಾಯಗಳೊಂದಿಗೆ ಗರ್ಭಧಾರಣೆ ಹಾಗೂ ಲೈಂಗಿಕ ರೋಗಗಳ ಸೋಂಕಿನ ಅಪಾಯ ಇಲ್ಲಿದೆ. ಬಲಿಪಶು ಅತ್ಯಾಚಾರಿಯ ಹಿಂದೆ, ಹೆದರಿಸುವಿಕೆಗಳಿಗೆ ತುತ್ತಾಗಬಹುದು. ಕೆಲವು ಸಂಸ್ಕøತಿಗಳಲ್ಲಿ ಬಲಿಪಶುವಿನ ಕುಟುಂಬ ಹಾಗೂ ಬಂಧುಗಳ ಕುಟುಂಬ ಹಾಗೂ ಬಂಧುಗಳ ಹಿಂಸೆ ಸಹ ಇರಬಹುದು.
ವಿಶ್ವ ಆರೋಗ್ಯ ಸಂಸ್ಥೆ ಲೈಂಗಿಕ ಆಕ್ರಮಣವನ್ನು ಅತ್ಯಾಚಾರ ಎಂದಿದೆ:
Rape ಎನ್ನುವ ಪದ ಲ್ಯಾಟಿನ್ ಭಾಷೆಯ ಪದದಿಂದ ಬಂದಿದೆ. ಇತ್ತೀಚಿನ ಅಮೇರಿಕಾದ ಕಾನೂನಿನ ಪ್ರಕಾರ ಬಲಿಪಶುವನ್ನು ಮಾದಕ ಪದಾರ್ಥಗಳು ಮದ್ಯಗಳಿಂದ ಅಸಮರ್ಥರನ್ನಾಗಿ ಮಾಡಿದಾಗ ಆಕೆ ಒಪ್ಪಿಗೆ ನೀಡಲು ಅನರ್ಹಳಾಗಿರುವ ಸ್ಥಿತಿಯನ್ನು ಗುರುತಿಸಿದೆ. ಅತ್ಯಾಚಾರದ ಘಟನೆಗಳನ್ನು ಬಲಿಪಶುವಿಗೂ ಅತ್ಯಾಚಾರಿಗೂ ಇರುವ ಸಂಬಂಧ ಹಾಗೂ ಲೈಂಗಿಕ ದಾಳಿಯ ಸನ್ನಿವೇಶದ ಮೇಲೆ ವರ್ಗೀಕರಣ ಮಾಡಲಾಗಿದೆ. ಡೇಟಿಂಗ್ ಮಾಡುತ್ತಿರುವಾಗ ನಡೆದ ಬಲಾತ್ಕಾರ, ಸಾಮೂಹಿಕ ಬಲಾತ್ಕಾರ, ವೈವಾಹಿಕ ಬಲಾತ್ಕಾರ, ನಿಶಿದ್ಧ ರಕ್ತ ಸಂಬಂಧಿಗಳೊಂದಿಗೆ (ಸಗೋತ್ರದವರೊಂದಿಗೆ ಬಲಾತ್ಕಾರ), ಮಗುವನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ಕಾರಾಗೃಹದಲ್ಲಿ ಬಲಾತ್ಕಾರ, ಪರಿಚಯದ ಅತ್ಯಾಚಾರ, ಯುದ್ಧದ ಸಮಯದ ಬಲಾತ್ಕಾರ, ವಿವಾಹದ ಸುಳ್ಳು ಭರವಸೆಯ ಮೇಲೆ ನಡೆಯುವುದು ಶಾಸನಬದ್ಧ ಬಲಾತ್ಕಾರ. ನಮ್ಮ ದೇಶದಲ್ಲಿ ಸಹಮತದ ಲೈಂಗಿಕತೆಯನ್ನೂ ‘ಅತ್ಯಾಚಾರ’ ಎನ್ನುತ್ತಾರೆ. ಅಂದರೆ ಲೈಂಗಿಕ ಚಟುವಟಿಕೆಗೆ ವಿರೋಧ ವ್ಯಕ್ತವಾದಾಗ ಬಲ ಹಾಗೂ ಹಿಂಸೆಯಿಂದ ಹೆದರಿಸಲ್ಪಡುವ ಸನ್ನಿವೇಶದಲ್ಲಿ ಬಲವಂತದಿಂದ ಮಾಡುವ ಅತ್ಯಾಚಾರವೂ ಸಹ ಅಲ್ಲಿದೆ.
ವಿವಾಹ ಜೀವನದಲ್ಲಿ ಸಂಗಾತಿ ಎಸಗುವ ಮನೆಯೊಳಗಿನ ಹಿಂಸೆ ಹಾಗೂ ಲೈಂಗಿಕ ದುರುಪಯೋಗವೂ ಒಂದು ರೀತಿ ಅತ್ಯಾಚಾರವೇ. ಲೈಂಗಿಕ ದಾಳಿಯು ಬಹಳ ಬಾರಿ ಗಂಡಸ್ತನ, ಕುಟುಂಬದ ಗೌರವ, ಲೈಂಗಿಕ ಪಾವಿತ್ರ್ಯತೆ ಮನೋಭಾವಗಳು ಹಾಗೂ ಲೈಂಗಿಕ ಹಿಂಸೆಯ ವಿರುದ್ಧ ಇರುವ ಕಾನೂನುಗಳು ಎಂಬ ಅಂಶಗಳನ್ನು ಆಧರಿಸಿದೆ. ಬಲಾತ್ಕಾರದ ಪ್ರೇರಣೆಯ ಕಾರಣಗಳು ಕೋಪ, ಅಧಿಕಾರ, ಶಕ್ತಿ, ಕ್ರೌರ್ಯರತಿ ಅಥವಾ ಹಿಂಸಾನಂದ, ಲೈಂಗಿಕ ತೃಪ್ತಿ, ಬೆಳವಣಿಗೆ ಅಥವಾ ಅರಳುವಿಕೆ ಪ್ರವೃತ್ತಿ ಅಥವಾ ಇಚ್ಛೆ.
ಅಮೇರಿಕಾದ ಮನೋವೈದ್ಯ ಚಿಕಿತ್ಸಕ ಡೇವಿಡ್ ಲಿಸಾರ್ ಹೇಳಿರುವಂತೆ ಪತ್ತೆ ಹಚ್ಚಲಾಗದ ಹಾಗೂ ಶಿಕ್ಷೆಗೊಳಗಾದ ಅತ್ಯಾಚಾರಿಗಳು ಮಹಿಳೆಯ ಮೇಲಿನ ಕೋಪ, ಆಕೆಯನ್ನು ಪ್ರಾಬಲ್ಯತೆಯಿಂದ ನಿಯಂತ್ರಿಸಲು ಹೆಚ್ಚು ದುಡುಕುತನದ ಪ್ರವೃತ್ತಿಯಿಂದ ಸಮಾಜ ವಿರೋಧಿ, ಅತಿ ಹೆಚ್ಚು ಶಕ್ತಿ, ದಾಳಿಕೋರತನ ಹಾಗೂ ಲೈಂಗಿಕ ಭಾವದ ಗಂಡಸ್ತನ ತೋರಿಸುವ ಸ್ವಭಾವ, ಇತರರ ಭಾವನೆ ಮತ್ತು ಅನುಭವಗಳನ್ನು ಗ್ರಹಿಸುವ ಕಡಿಮೆ ಶಕ್ತಿ ಹೊಂದಿ ಬಲಾತ್ಕಾರ ಮಾಡುತ್ತಾರೆ.
ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳು:
ಹದಿಹರೆಯದವರಿಗೆ ಕೆಲವೊಮ್ಮೆ ತಮಗಾದದ್ದು ಬಲಾತ್ಕಾರ ಎಂದು ಅರಿವಾಗುವುದೇ ಇಲ್ಲ. ಮಾನಸಿಕವಾಗಿ ಜರ್ಜರಿತ ಮಾಡಿ ಮಾಡಿದ ಬಲಾತ್ಕಾರದ ಬಗ್ಗೆ ಅವರಿಗೆ ಗೊಂದಲವಿದೆ. ತಮಗಾದ ಅತ್ಯಾಚಾರವನ್ನು ಅನೇಕ ಕಾರಣಗಳಿಂದ ಒಪ್ಪಿಕೊಳ್ಳುವುದಿಲ್ಲ. ಅವು ನಾಚಿಕೆ, ಮುಜುಗರ, ಕಿರಿಕಿರಿ ಹಾಗೂ ಪೇಚಾಟ. ಏಕರೂಪವಿಲ್ಲದ ಕಾನೂನಿನ ವ್ಯಾಖ್ಯಗಳು, ಸ್ನೇಹಿತ-ಸಂಗಾತಿಯನ್ನು ಅತ್ಯಾಚಾರಿ ಎಂದು ಒಪ್ಪಿಕೊಳ್ಳದಿರುವುದು, ತನ್ನನ್ನು ಅಪ್ರಾಮಾಣಿಕ ಮಹಿಳೆ ಎಂದು ಜನ ಅಂದುಬಿಡುತ್ತಾರೆ. ಲೈಂಗಿಕ ಆಕ್ರಮಣದ ಆಘಾತದ ಚಿಹ್ನೆಗಳು, ಅನೇಕ ವರ್ಷಗಳವರೆಗೆ ಗೊತ್ತಾಗದಿರಬಹುದು, ಒಪ್ಪಿಕೊಳ್ಳದಿರುವುದು ಸಾಮಾನ್ಯ.
ಸಾಮಾನ್ಯ ಭಾವನೆಗಳು:
-ಯಾತನೆ, ಆತಂಕ, ನಾಚಿಕೆ, ಹಿಮ್ಮೆಟ್ಟಿಸುವಿಕೆ, ಅಸಹಾಹಕತೆ ಹಾಗೂ ತಪ್ಪೆಂಬ ಅರಿವು. ಬಲಾತ್ಕಾರದ ನಂತರ ಬಹಳ ಜನ 3-4 ತಿಂಗಳಲ್ಲಿ ಚೇತರಿಸಿಕೊಳ್ಳುತ್ತಾರೆ.
ಲೈಂಗಿಕವಾಗಿ ವರ್ಗಾವಣೆಯಾಗುವ ಸೋಂಕುಗಳು:
ಸಾಮಾನ್ಯವಾಗಿ ಒಳಗೆ ತೂರಿಸುವ ಬಲಾತ್ಕಾರದಲ್ಲಿ ಕಾಂಡಮ್ ಬಳಕೆಯಾಗಿರುವುದಿಲ್ಲ, ಕಾಂಡಮ್ ಬಳಸಿದ್ದರೆ ಗರ್ಭಧಾರಣೆ, ಕಾಹಿಲೆ, ಸೋಂಕಿನ ವರ್ಗಾವಣೆ ಇರುವುದಿಲ್ಲ. ಬಲಾತ್ಕಾರದಲ್ಲಿ ಪುನರುತ್ಪಾದಕ ವ್ಯವಸ್ಥೆಯ ಸೋಂಕುಗಳು ಬರುವ ಸಾಧ್ಯತೆ ಹೆಚ್ಚು. 2017ರವರೆಗೆ 375ನೇ ವಿಭಾಗದ ಎರಡು ಉಪ ಕಲಮುಗಳಲ್ಲಿ ಭಿನ್ನತೆ ಇತ್ತು. ಒಂದೆಡೆ 15 ವರ್ಷದ ಕೆಳಗಿನ ತನ್ನ ಪತ್ನಿಯೊಂದಿಗೆ ಮಾಡುವ ಸಂಭೋಗ ಬಲಾತ್ಕಾರವಲ್ಲ ಎಂದಿತ್ತು. ಅಲ್ಲೇ ಇನ್ನೊಂದೆಡೆ ಆ ಪತಿ 18 ವರ್ಷದ ಕೆಳಗಿನ ಪತ್ನಿಯೊಂದಿಗೆ ಆಕೆಯ ಒಪ್ಪಿಗೆ ಅಥವಾ ಒಪ್ಪಿಗೆ ಇಲ್ಲದೇ ಮಾಡುವ ಲೈಂಗಿಕ ಸಂಬಂಧಕ್ಕೆ ಅತ್ಯಾಚಾರ ಎಂದಿತ್ತು. ಸರಕಾರೇತರ ಸಂಘವಾದ Independent Thought 2012ರಲ್ಲಿ ಒಂದು ಮನವಿ ಹಾಕಿತ್ತು.
11-10-2017ರಂದು ಸುಪ್ರೀಂ ಕೋರ್ಟು ಒಪ್ಪಿಗೆಯ ವಯಸ್ಸನ್ನು 18 ಎಂದು ಎತ್ತಿ ಹಿಡಿಯಿತು. ಭಾರತೀಯ ದಂಡ ಸಂಹಿತೆಯಲ್ಲಿ 2006ರ ಬಾಲ ವಿವಾಹ ಪ್ರತಿಬಂಧಕ ಕಾಯ್ದೆ ಹಾಗೂ ಬಾಲ್ಯ ನ್ಯಾಯ ಕಾನೂನು, 18 ವರ್ಷದ ಕೆಳಗಿನವರನ್ನು ಮಗು ಎಂದೇ ಗುರುತಿಸಿದೆ. 2017 ಫೆಬ್ರವರಿಯಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಹದಿಹರೆಯ ಶಿಕ್ಷಣ ಯೋಜನೆಯ ಭಾಗವಾಗಿ, ಸಾಥಿಯಾವನ್ನು ರಾಷ್ಟ್ರ ಮಟ್ಟದಲ್ಲಿ ಸಂಪನ್ಮೂಲ ಸಾಹಿತ್ಯವಾಗಿ ಬಿಡುಗಡೆ ಮಾಡಿದೆ. ಬೇರೆ ವಿಷಯಗಳೊಂದಿಗೆ, ಇಲ್ಲಿ ಸಂಬಂಧಗಳು ಹಾಗೂ ಒಪ್ಪಿಗೆ ಬಗ್ಗೆ ಚರ್ಚೆಯಿದೆ. ಈ ಮಾಹಿತಿ ಹೇಳುವಂತೆ “ ಹದಿಹರೆಯದವರು ಆಗಾಗ ಪ್ರೇಮದಲ್ಲಿ ಬೀಳುತ್ತಾರೆ. ಅವರಿಗೆ ಗೆಳೆಯ ಅಥವಾ ತಮ್ಮ ಅಥವಾ ವಿರುದ್ಧ ಲಿಂಗದ ಯಾವುದೇ ವ್ಯಕ್ತಿಯ ಬಗ್ಗೆ ಆಕರ್ಷಣೆ ಬರಬಹುದು. ಇನ್ನೊಬ್ಬರ ಬಗ್ಗೆ ವಿಶೇಷ ಭಾವನೆ ಇರುವುದು ಸಹಜ. ಆದರೆ ಹದಿಹರೆಯದವರನ್ನು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ಇಂಥ ಸಂಬಂಧಗಳು ಪರಸ್ಪರ ಒಪ್ಪಿಗೆ, ವಿಶ್ವಾಸ, ಪಾರದರ್ಶಕತೆ ಹಾಗೂ ಗೌರವ ಆಧರಿಸಿರಬೇಕು. ಇಂಥ ಭಾವನೆಗಳ ಬಗ್ಗೆ ಅ ವ್ಯಕ್ತಿಯೊಂದಿಗೆ ಗೌರವದಿಂದ ಮಾತಾಡಿ. ಹುಡುಗರು ಅರ್ಥ ಮಾಡಿಕೊಳ್ಳಬೇಕಾದ್ದೆಂದರೆ, ಹುಡುಗಿ ಬೇಡ ಎಂದರೆ ಅದರರ್ಥ ಬೇಡ ಅಷ್ಟೇ.
ಎನ್.ವ್ಹಿ ರಮೇಶ್, ಮೈಸೂರು
ಮೊ: 98455 65238