ಋತುಸ್ರಾವದ ಉದ್ವೇಗ ನಿವಾರಿಸಿಕೊಳ್ಳುವುದು ಹೇಗೆ?

ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು  ಕಂಡುಬರುವುದು. ಹಾರ್ಮೋನ್‍ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ ಏರಿಳಿತವನ್ನು ಕಡಿಮೆಗೊಳಿಸಬಹುದು. 
ಋತುಸ್ರಾವದ ಉದ್ವೇಗ ನಿವಾರಿಸಿಕೊಳ್ಳುವುದು ಹೇಗೆ?

ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು, ಅಂದರೆ ಮೂರರಿಂದ ಏಳು ದಿನಗಳ ಮೊದಲು ಕೆಲವು ವಿಶಿಷ್ಟ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಪ್ರತಿ ತಿಂಗಳು ಸುಮಾರು 20 ರಿಂದ 45 ವರ್ಷದ ಹೆಂಗಸರಲ್ಲಿ ಕಾಣಿಸಿಕೊಳ್ಳಬಹುದು. ಮಹಿಳೆಯರ ‘ಮೂಡ್’ನಲ್ಲಿ ಬದಲಾವಣೆಯಾಗುವುದು ಇದರ ಪ್ರಧಾನ ಲಕ್ಷಣ. ಇದು ಪಾಶ್ಚಾತ್ಯ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವುದು. ಭಾರತೀಯ ಮಹಿಳೆಯರಲ್ಲೂ ಈ ತೊಂದರೆ ಕಾಣಿಸಿಕೊಳ್ಳುವುದು, ಆದರೆ ಅನೇಕರು ತಮ್ಮ ನಿತ್ಯ ಜೀವನದ ಕೆಲಸದಲ್ಲಿ ಮುಳುಗಿ ಬಿಡುವುದರಿಂದ ಈ ನೋವನ್ನು ನುಂಗಿಕೊಳ್ಳುತ್ತಾರೆ.

ಕಾರಣಗಳು:

ಈ ತೊಂದರೆಗೆ ಹಾರ್ಮೋನ್‍ಗಳು ಕಾರಣವೆಂದು ತಿಳಿಸಲಾಗಿದೆ. ಅವುಗಳಲ್ಲಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್‍ಗಳಲ್ಲಿ ಆಗುವ ಏರಿಳಿತ ಈ ತೊಂದರೆಗಳಿಗೆ ಪ್ರಮುಖ ಕಾರಣ. ಜೊತೆಗೆ ಅಗತ್ಯವಾದ ಫ್ಯಾಟಿ ಆ್ಯಸಿಡ್‍ಗಳ ಕೊರತೆಯೂ ಸಹ ಈ ತೊಂದರೆಯನ್ನು ಹೆಚ್ಚಿಸಬಹುದು ಎಂದು ನಂಬಲಾಗಿದೆ. ಅಂಡವು ಅಂಡಾಶಯದಿಂದ ಬಿಡುಗಡೆಯಾದ ನಂತರ ಇತರ ರಸದೂತಗಳಾದ ಫೊಲಿಕ್ಯುಲರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್, ಲ್ಯುಟಿನೈಜಿಂಗ್ ಹಾರ್ಮೋನ್ ಗಳ ಏರಿಳಿತದಿಂದಲೂ ಆಗಬಹುದು.

ಲಕ್ಷಣಗಳು :

1. ಮುಟ್ಟಿಗೆ ಮುನ್ನ ಅನೇಕ ಮಹಿಳೆಯರಲ್ಲಿ ಕೆಲವು ಕೆ.ಜಿ. ತೂಕ ಹೆಚ್ಚುವುದು.

2. ತಲೆ ನೋವಿರುತ್ತದೆ. ಮಾನಸಿಕ ಸ್ಥಿರತೆ ಇರುವುದಿಲ್ಲ.

3. ಸೊಂಟ ಹಾಗೂ ಕೆಳ ಹೊಟ್ಟೆಯಲ್ಲಿ ನೋವಿರಬಹುದು.

4. ಸ್ನಾಯು ಹಾಗೂ ಕೀಲುಗಳಲ್ಲಿ ನೋವು

5. ವಿಸ್ತಾರಗೊಂಡ ಸ್ತನಗಳಲ್ಲಿ ನೋವಿರಬಹುದು.

6. ಟೆನ್ಶನ್ ಮತ್ತು ಉದ್ವೇಗ ಇರುತ್ತದೆ.

7. ಸಿಡುಕುತನ, ಕೆರಳಿಕೆ ಇರುತ್ತದೆ.

8. ಆಲಸ್ಯ, ನಿರುತ್ಸಾಹ.

ಈಸ್ಟ್ರೋಜೆನ್ ಹಾರ್ಮೋನುಗಳ ಪ್ರಭಾವದಿಂದಾಗಿ ದೇಹದಲ್ಲಿ ಹೆಚ್ಚು ನೀರು ಸೇರಿಕೊಳ್ಳುವುದರಿಂದ ದೈಹಿಕ ನೋವು ಕಾಣಿಸಿಕೊಳ್ಳುವುದು. ಈ ತೊಂದರೆಗಳು ಋತುಸ್ರಾವವಾದ ಎರಡು ದಿನಗಳಲ್ಲಿ ವಾಸಿಯಾಗುವುವು.

ನಿವಾರಿಸಿಕೊಳ್ಳುವುದು ಹೇಗೆ?

ಈ ತೊಂದರೆಗೆ ಹಲವಾರು ಚಿಕಿತ್ಸೆಗಳು ಬಂದಿವೆ. ಮೊದಲನೆಯದಾಗಿ ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ ಏರಿಳಿತವನ್ನು ಕಡಿಮೆಗೊಳಿಸಬಹುದು. ಮನಸ್ಸು ಮತ್ತು ದೇಹವನ್ನು ಸಮತೋಲನ ಸ್ಥಿತಿಗೆ ತರಲು ಯೋಗ ಸಹಕಾರಿ. ತಜ್ಞರ ಮಾರ್ಗದರ್ಶನದಲ್ಲಿ ಯೋಗ ಕಲಿತು ಮುಟ್ಟಿನ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

Dr.-Venkatramana-Hegde

ಆಹಾರ :

1. ದೇಹದಲ್ಲಿ ಹೆಚ್ಚು ನೀರು ಸೇರಿಕೊಳ್ಳುವದರಿಂದ ಮುಟ್ಟಿಗೆ ಮುನ್ನ 10 ದಿನವಾದರೂ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಬೇಕು.

2. ಹೆಚ್ಚು ಮೂತ್ರವರ್ಧಕ ಆಹಾರವನ್ನು ಸೇವಿಸಿ. ಉದಾ: ಬಾಳೆದಿಂಡಿನ ರಸ, ಬೂದುಗುಂಬಳ ರಸ, ಬಾರ್ಲಿನೀರು, ಕಲ್ಲಂಗಡಿ ಹಣ್ಣು, ಸೌತೆಕಾಯಿ ರಸ, ಕಿತ್ತಳೆ, ಎಳನೀರು ಮುಂತಾದವುಗಳನ್ನು ಸೇವಿಸಬಹುದು. ಟೀ. ಕಾಫಿಯನ್ನು ತ್ಯಜಿಸಿ.

3. ಪಿಷ್ಠ ಶರ್ಕರಗಳನ್ನೊಳಗೊಂಡ ಆಹಾರದ ಜೊತೆಗೆ ಹೆಚ್ಚು ತಾಜಾ ಹಣ್ಣು ಹಂಪಲುಗಳನ್ನು ಸೇವಿಸಿ.

4. ಬೇಕರಿ ಪದಾರ್ಥ, ಉಪ್ಪು ಮಿಶ್ರಿತ ಸಂಸ್ಕರಿತ ಆಹಾರ ತ್ಯಜಿಸಿ.

ವ್ಯಾಯಾಮ :

ಬೆವರು ಬರುವಂತೆ ಪ್ರತಿದಿನ 30 ನಿಮಿಷಗಳ ಲಘು ವ್ಯಾಯಾಮ ಅಥವಾ ಬ್ರೀಸ್ಕ್ ವಾಕಿಂಗ್ ಮಾಡಿ.

Also Read: ಪಿ.ಸಿ.ಒ.ಡಿ. ಸಮಸ್ಯೆ – ಈ ತೊಂದರೆ ನಿವಾರಿಸಿಕೊಳ್ಳುವುದು ಹೇಗೆ?

Venkatramana-Hegde

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!