ರೇಕಿಗಿದೆ ಅದ್ಭುತ ಉಪಶಮನ ಶಕ್ತಿ:ತರಬೇತಿ / ಕಲಿಕೆ ಹೇಗೆ?

ರೇಕಿ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ ಚಿಕಿತ್ಸಾ ಪದ್ಧತಿ. ರೇಕಿ ಜಪಾನಿ ಭಾಷೆಯಲ್ಲಿ ರೇ ಮತ್ತು ಕಿ ಎಂಬ ದ್ವಿಪದಗಳ ಸಂಯೋಜನೆಯಾಗಿದೆ. ರೇ-ಅಂದರೆ ಬ್ರಹ್ಮಾಂಡ ಹಾಗೂ ಕಿ ಎಂದರೆ ಜೀವ ಶಕ್ತಿ. ಆದ್ದರಿಂದ ಇದನ್ನು ಬ್ರಹ್ಮಾಂಡ ಜೀವಶಕ್ತಿ ಎಂದೂ ಕರೆಯುತ್ತಾರೆ. ಮಾನವನ ಶರೀರ ಮತ್ತು ಮನಸ್ಸಿಗೆ ರೇಕಿ ಈ ಬ್ರಹ್ಮಾಂಡ ಪ್ರಾಣಶಕ್ತಿಯೊಂದಿಗೆ ಸಂಪರ್ಕ ಕಲ್ಪಿಸುವುದು ರೇಕಿಯ ಪ್ರಮುಖ ಧ್ಯೇಯ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಬಹುತೇಕ ಎಲ್ಲ ರೋಗಗಳ ನಿವಾರಣೆಗೂ ಚಿಕಿತ್ಸೆ ಇದೆ.
ಹಿಂದು ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ ಪ್ರಾಚೀನ ಭಾರತದಿಂದ ಬೆಳೆದು ಬಂದದ್ದು ಎಂಬುದು ಪುರಾಣ-ಪುಣ್ಯಕಥೆಗಳಿಂದ ತಿಳಿದು ಬರುತ್ತವೆ. ಜಪಾನ್ ಮತ್ತು ಭಾರತದ ಪ್ರಾಚೀನ ಗ್ರಂಥಗಳು ಈ ವಿದ್ಯೆ ಬಗ್ಗೆ ಮಾಹಿತಿ ಒದಗಿಸುತ್ತವೆ. ರೇಕಿಯ ಪ್ರಥಮ ಉಲ್ಲೇಖವು ಭಾರತೀಯ ಅಥರ್ವಣ ವೇದದಲ್ಲಿ ಕಂಡುಬರುತ್ತದೆ. ಅಂದರೆ ಚತುರ್ವಿಧ ಪುರುಷಾರ್ಥ ಸಾಧನಗಳಾದ ಧರ್ಮ, ಕಾಮ, ಅರ್ಥ ಮೋಕ್ಷಗಳೆಲ್ಲಕ್ಕೂ ಆರೋಗ್ಯವೇ ಮೂಲ ಕಾರಣವೆಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಟಿಬೆಟಿನ ಬೌದ್ಧ ಸನ್ಯಾಸಿಗಳು ಈ ವಿದ್ಯೆ ಬಗ್ಗೆ ಹೆಚ್ಚು ಉತ್ಸುಕರಾಗಿ ಅಭ್ಯಾಸಮಾಡಿ ಪ್ರವರ್ಧಮಾನಕ್ಕೆ ತಂದರು. ತಮ್ಮ ಶಿಷ್ಯರಿಗೆ ಮಾತ್ರ ಈ ವಿದ್ಯೆಯನ್ನು ಧಾರೆ ಎರೆಯುತ್ತಿದ್ದರೆ ಹೊರತು ಸಾರ್ವಜನಿಕರಿಗೆ ಹೇಳಿಕೊಡುತ್ತಿರಲಿಲ್ಲ.
ಆರೋಗ್ಯಯುಕ್ತವಾದ ಶರೀರವೆಂದರೆ, ತನು-ಮನಗಳೆರಡರಲ್ಲೂ ಸ್ವಾಸ್ಥ್ಯವಿರುವ ಸಮತೋಲನ ಶರೀರವೆಂಬ ಅರ್ಥ. ವಿಷಮತೆಯೇ ರೋಗವೆಂದು ಅರ್ಥ. ಪುರುಷಾರ್ಥ ಸಾಧನೆಗೆ ಸದೃಢ, ಸಬಲ ಶರೀರದಿಂದ ಮಾತ್ರ ಸಾಧ್ಯ, ಶರೀರವನ್ನು ರೋಗಗಳು ಬಾಧಿಸುತ್ತವೆ. ಇಂತಹ ರೋಗ ಚಿಕಿತ್ಸಾ ಕ್ರಮಕ್ಕೆ ಪ್ರಾಚೀನರು ರೇಕಿ ಎಂದು ಕರೆದರು. ಆ ಎಲ್ಲಾ ರೋಗಗಳ ಮೂಲ ಸ್ವರೂಪವು ಒಂದೇ ರೀತಿಯದಾಗಿರುತ್ತದೆ. ಅದ್ದರಿಂದ ಅವುಗಳ ಚಿಕಿತ್ಸೆಯೂ ಕೂಡ ಮೂಲ ಸ್ವರೂಪವನ್ನೇ ಹೊಂದಿರುತ್ತವೆ ಎಂದು ಹೇಳಿದ್ದಾರೆ.

“ಈ ಜಗತ್ತಿನಲ್ಲಿರುವ ಪ್ರತಿಯೊಂದು ಅಸ್ತಿತ್ವವು ಉಪಶಮನ ಶಕ್ತಿಯನ್ನು ಹೊಂದಿರುತ್ತದೆ. ಗಿಡಗಳು, ಮರಗಳು, ಪ್ರಾಣಿ ಪಕ್ಷಿಗಳು, ಜಲಚರಗಳು, ಕೀಟಗಳು ಉಪಶಮನ ಶಕ್ತಿಯನ್ನು ದೈವದತ್ತವಾಗಿ ಪಡೆದಿರುತ್ತವೆ. ಅದರಲ್ಲೂ ವಿಶೇಷವಾಗಿ ಸೃಷ್ಟಿಕರ್ತ ಬ್ರಹ್ಮನ ಸೃಷ್ಟಿಯಾದ ಮಾನವನು ಅದ್ಭುತವಾದ ಉಪಶಮನ ಶಕ್ತಿಯನ್ನು ಹೊಂದಿರುತ್ತಾನೆ” ಎಂದು ರೇಕಿಯ ಸೃಷ್ಟಿಕರ್ತ ಡಾ. ಮಿಕಾವೋಮಿ ಉಸುಯಿ ಅವರು ವ್ಯಾಖ್ಯಾನಿಸಿದ್ದಾರೆ.

ರೇಕಿ ಎಂದರೇನು ?

‘ರೇ’ ಎಂದರೆ ವಿಶ್ವ ಮತ್ತು ‘ಕಿ’ ಎಂದರೆ ಜೀವ ಶಕ್ತಿ ಎಂದರ್ಥ. ಹೀಗಾಗಿ ರೇಕಿ ಒಂದು ಶಕ್ತಿಯು ಮತ್ತು ನಿಖರ ಉಪಶಮನ ವಿಧಾನವಾಗಿದೆ. ಇದು ವಿಶ್ವ ಜೀವ ಶಕ್ತಿಯನ್ನು ಹೊಂದಲು ಅನುವು ಮಾಡಿಕೊಡುತ್ತದೆ ಹಾಗೂ ಅದನ್ನು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಉಪಶಮನಗೊಳಿಸಲು ಬಳಸಲ್ಪಡುತ್ತದೆ.ರೇಕಿಯನ್ನು ಉಪಶಮನಕ್ಕೆ ಅಗತ್ಯವಾದ ಬಹುತೇಕ ಯಾವುದನ್ನಾರೂ ಮತ್ತು ಪ್ರತಿಯೊಂದನ್ನು ಉಪಶಮನಗೊಳಿಸಲು ಬಳಸಲಾಗುತ್ತದೆ. ಇದು ದೈಹಿಕ, ಮಾನಸಿಕ, ಭಾವಾತ್ಮಕ, ಆಧ್ಯಾತ್ಮಿಕ, ಭೂತ, ವರ್ತಮಾನ ಮತ್ತು ಭವಿಷ್ಯ-ಹೀಗೆ ಎಲ್ಲ ಮಟ್ಟಗಳಲ್ಲೂ ಉಪಶಮನಕ್ಕಾಗಿ ಉಪಯೋಗಿಸಬಹುದಾಗಿದೆ. ಒತ್ತಡವನ್ನು ನಿವಾರಿಸಲು, ದುರಭ್ಯಾಸಗಳನ್ನು ದೂರಮಾಡಲು, ಆಪೇಕ್ಷಿತ ಗುರಿಗಳನ್ನು ಮುಟ್ಟಲು ಹಾಗೂ ಹಾನಿಗಳಿಂದ ರಕ್ಷಣೆ ಪಡೆಯಲು ರೇಕಿಯನ್ನು ಸಹ ಬಳಸಬಹುದಾಗಿದೆ. ಪಶುಪಕ್ಷಿಗಳು ಮತ್ತು ಗಿಡಮರಗಳು ಒಳಗೊಂಡಂತೆ ಸಕಲ ಜೀವಸಂಕುಲಗಳು ರೇಕಿ ಚಿಕಿತ್ಸೆಗೆ ಸ್ಪಂದಿಸುತ್ತವೆ.
ರೋಗಿಯನ್ನು ಸ್ಪರ್ಶಿಸುವ ಹಾಗೂ ಆತ/ಆಕೆ ದೇಹದಲ್ಲಿನ ಸ್ವಾಭಾವಿಕ ಉಪಶಮಕ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ಮೂಲಕ ಚಿಕಿತ್ಸಕರು ಶಕ್ತಿ ವಾಹಿನಿಯನ್ನು ಸಂಚಯಿಸುವ ತತ್ತ್ವದ ಆಧಾರದ ಮೇಲೆ ದೈಹಿಕ ಮತ್ತು ಭಾವನಾತ್ಮಕ ಸೌಖ್ಯತೆಯನ್ನು ಮರುಸ್ಥಾಪಿಸುವ ಉಪಶಮನ ಕೌಶಲ್ಯ ಇದಾಗಿದೆ.ಸಮಸ್ಯೆಯ ಮೂಲವನ್ನು ಪತ್ತೆ ಮಾಡಿ ಅದನ್ನು ಸಾಮಾನ್ಯ ಸ್ಥಿತಿಗೆ ಮರುಸ್ಥಾಪನೆ ಮಾಡುವುದು ರೇಕಿ ಉಪಶಮನ ಚಿಕಿತ್ಸೆಯ ಮೂಲಮಂತ್ರವಾಗಿದೆ. ಸಮಸ್ಯೆಯನ್ನು ನಿವಾರಣೆ ಮಾಡುವುದೇ ಉಪಶಮನ. ತ್ವರಿತವಾಗಿ ಮತ್ತು ಹೆಚ್ಚು ಆರಾಮದಾಯಕವಾಗಿ ಚೇತರಿಸಿಕೊಳ್ಳಲು ಪೂರಕ ಪ್ರಕ್ರಿಯೆಯಾಗಿ ಹಾಗೂ ಈ ಪ್ರಕ್ರಿಯೆಯಲ್ಲಿರುವ ನೋವು / ಸಮಸ್ಯೆಗಳನ್ನು ಕಡಿಮೆ ಮಾಡುವುದಕ್ಕಾಗಿ ರೇಕಿ ಉಪಶಮನ ಚಿಕಿತ್ಸೆಯನ್ನು ಬಳಸಲಾಗುತ್ತದೆ.
ಉಪಶಮನದ ಅನುಭವ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ ಹಾಗೂ ಚಿಕಿತ್ಸೆಯ ಫಲಿತಾಂಶವೂ ಕೂಡ ಭಿನ್ನವಾಗಿರುತ್ತದೆ. ಆದರೆ ಯಾವುದೇ ಪ್ರಕರಣದಲ್ಲಿ ವಿಶ್ವ ಜೀವನ ಶಕ್ತಿಯನ್ನು ಉತ್ತಮ ಫಲಿತಾಂಶಗಳಿಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.ಈಗಾಗಲೇ ತಿಳಿಸಿರುವಂತೆ ಇದು ಸ್ಪರ್ಶಿಸುವ ಹಾಗೂ ಆತ / ಆಕೆ ದೇಹದಲ್ಲಿನ ಸ್ವಾಭಾವಿಕ ಉಪಶಮಕ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ಚಿಕಿತ್ಸೆಯಾಗಿರುತ್ತದೆ. ನೀವು ಶಾಂತಚಿತ್ತರಾಗಿ, ಆರಾಮವಾಗಿ ಕುಳಿತು ಅಥವಾ ಮಲಗಿದಾಗ ಉಪಶಮನ ಚಿಕಿತ್ಸೆ ನೀಡುವವರು. ಎಲ್ಲಿ ಉಪಶಮನದ ಅಗತ್ಯವಿರುತ್ತದೆಯೋ ಆ ಜಾಗದಲ್ಲಿ/ಜಾಗದ ಮೇಲೆ ಕೈಗಳನ್ನು ಇಡುತ್ತಾರೆ. ಈ ಚಿಕಿತ್ಸೆಯು ಸಮಸ್ಯೆ ಮತ್ತು ಚಿಕಿತ್ಸೆಯ ಅಗತ್ಯದ ಆಧಾರ ಮೇಲೆ ಕೆಲವು ನಿಮಿಷಗಳಿಂದ ಒಂದು ಗಂಟೆವರೆಗೆ ಅಥವಾ ದೀರ್ಘಕಾಲ ನಡೆಯುತ್ತದೆ. ರೋಗಿಯ ದೇಹದ ಮೇಲೆ ದೈಹಿಕ ಒತ್ತಡವನ್ನು ಹಾಕುವುದಿಲ್ಲ, ಇದರಿಂದ ಎಲ್ಲ ವಯೋಮಾನದವರು ಮತ್ತು ರೋಗಸ್ಥಿತಿಗಳ ಚಿಕಿತ್ಸೆಗೆ ಇದು ಮಾದರಿಯಾಗುತ್ತದೆ. ದೈಹಿಕರಹಿತ ಉಪಶಮನ ಪ್ರಕರಣಗಳಲ್ಲಿ ಕೈಗಳನ್ನು ಬಳಸದೆಯೇ ಉಪಶಮನ ಚಿಕಿತ್ಸೆಯನ್ನು ಮಾಡಬಹುದಾಗಿರುತ್ತದೆ.

ರೇಕಿ ತರಬೇತಿ / ಕಲಿಕೆ

ರೇಕಿ ಕಲಿಕೆಯು ಶೈಕ್ಷಣಿಕ ಹಿನ್ನೆಲೆ, ಬುದ್ದಿವಂತಿಕೆ ಅಥವಾ ಇತರೆ ಯಾವುದೇ ಅನುಭವಗಳು ಅಥವಾ ಜ್ಞಾನವನ್ನು ಅವಲಂಬಿಸಿರುವುದಿಲ್ಲ. ಉಪಶಮನ ಚಿಕಿತ್ಸೆಯ ಅನುಭವದ ಅಭ್ಯಾಸಕ್ಕಾಗಿ  ದೀರ್ಘ ವರ್ಷಗಳು ಬೇಕಾಗುವುದಿಲ್ಲ. ಓರ್ವ ರೇಕಿ ಮಾಸ್ಟರ್‍ನಿಂದ ಒಮ್ಮೆ ನೀವು ಅನುಷ್ಠಾನಗೊಂಡರೆ ಕೆಲವು ದಿನಗಳಲ್ಲಿ  ಉಪಶಮನ ಚಿಕಿತ್ಸೆ ಆರಂಭಿಸಲು ಸಜ್ಜಾಗುವಿರಿ. ರೇಕಿ ಕಲಿಯಲು ನಿರ್ದಿಷ್ಟ ವಯೋಮಾನ ಮಿತಿ ಸಹ ಇರುವುದಿಲ್ಲ. ಆದಕಾರಣ ರೇಕಿಯನ್ನು ಯಾರೂ ಬೇಕಾದರೂ ಸುಲಭವಾಗಿ ಕಲಿಯಬಹುದು. ಇತರ ಉಪಶಮನ ಚಿಕಿತ್ಸೆಗಳಂತಲ್ಲದೇ, ರೇಕಿಯು ಅನುಷ್ಠಾನ ಪ್ರಕ್ರಿಯೆ ವೇಳೆ ರೇಕಿ ಮಾಸ್ಟರ್‍ನಿಂದ ವಿದ್ಯಾರ್ಥಿಗೆ ಬಳುವಳಿಯಾಗಿ ವರ್ಗಾವಣೆಯಾಗುತ್ತದೆ.
ರೇಕಿಯು ಒಂದು ಸುಂದರ ಆಧ್ಯಾತ್ಮಿಕ ಅನುಭವ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಮ್ಮೆ  ರೇಕಿಯ ಅನುಷ್ಠಾನ ಪಡೆದರೆ,ಜೀವನದುದ್ದಕ್ಕೂ ಉಪಶಮನ ಶಕ್ತಿಯು ನಿಮ್ಮೊಂದಿಗೆ ಉಳಿಯುತ್ತದೆ. ರೇಕಿಯಿಂದ ಸಾಕಷ್ಟು ಪ್ರಯೋಜಗಳಿದ್ದರೂ, ಇದರಲ್ಲಿ ಕಂಡುಬರುವ ತೀರಾ ಸಾಮಾನ್ಯ ಅನುಭವವೆಂದರೆ-ಅಧಿಕ ಶಕ್ತಿ ಮಟ್ಟಗಳು, ಹೆಚ್ಚು ಧನಾತ್ಮಕ ಬಾಹ್ಯನೋಟ, ನಿರ್ಧಾರ ಕೈಗೊಳ್ಳುವಲ್ಲಿ ಸುಲಭ ಮಾರ್ಗ, ಒತ್ತಡ ನಿವಾರಣೆ ಇತ್ಯಾದಿ.
ರೇಕಿಯನ್ನು ಕಲಿಯಲು ಮೂರು ಮುಖ್ಯ ಹಂತಗಳಿವೆ ಹಾಗೂ ಒದನ್ನು 1ನೇ ಹಂತದಿಂದ ಆರಂಭಿಸಬೇಕಾಗುತ್ತದೆ. ಪ್ರಾರಂಭದಿಂದ ಒಂದೊಂದೇ ಹಂತವನ್ನು ಕಲಿಯಬೇಕಾಗುತ್ತದೆ. ಒಂದನೇ ಹಂತವನ್ನು ಕಲಿತ ನಂತರ 2ನೇ ಮತ್ತು 3ನೇ ಹಂತವನ್ನು ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಯಬಹುದು. ಹಿಂದಿನ ಹಂತವನ್ನು ನೀವು ನಿಖರತೆ ಮತ್ತು ಭರವಸೆಯೊಂದಿಗೆ ಕಲಿತಾಗ ಮುಂದಿನ ಹಂತವನ್ನು ಸುಲಭವಾಗಿ ಕರಗತ ಮಾಡಿಕೊಳ್ಳಬಹುದು.

 

 

 

 

ಡಾ.ಪಾರ್ವತಿ ಭಟ್

 ಯೋಗ ಪ್ರವೀಣೆ ಮತ್ತು ರೇಖಿ ಚಿಕಿತ್ಸಕರು

ಸ್ವಾಮಿ ವಿವೇಕಾನಂದ ಯೋಗ ಕೇಂದ್ರ, 1172, ಬ್ಲೂ ಹುಂಡೈ ಕಾರ್ ಶೋರೂಂ ಎದುರು

ಡಾ. ರಾಜ್‍ಕುಮಾರ್ ರಸ್ತೆ 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು – 560 010 ಮೊ.: 9449445892

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!