ಫಾರ್ಮಾ ಹಾಗೂ ಮೆಡಿಕಲ್‌ ಡಿವೈಸ್‌ ಪಾರ್ಕ್‌ ಅಭಿವೃದ್ಧಿಗಾಗಿ 13600 ಕೋಟಿ ರೂ. ಹೂಡಿಕೆ – ಸಚಿವ ಸದಾನಂದ ಗೌಡ

ಫಾರ್ಮಾ ಹಾಗೂ  ಮೆಡಿಕಲ್‌ ಡಿವೈಸ್‌ ಪಾರ್ಕ್‌ ಅಭಿವೃದ್ಧಿಗಾಗಿ 13600 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. 

Janoushadho-pharmacy-of-india-webinar- ಫಾರ್ಮಾ ಹಾಗೂ ಮೆಡಿಕಲ್‌ ಡಿವೈಸ್‌ ಪಾರ್ಕ್‌ ಅಭಿವೃದ್ಧಿಗಾಗಿ 13600 ಕೋಟಿ ರೂ. ಹೂಡಿಕೆ – ಸಚಿವ ಸದಾನಂದ ಗೌಡಬೆಂಗಳೂರು, ಆಗಷ್ಟ್‌ 8 : ದೇಶದಲ್ಲಿ ನಾಲ್ಕು ಮೆಡಿಕಲ್‌ ಡಿವೈಸ್‌ ಪಾರ್ಕ್‌ಗಳು ಹಾಗೂ ಮೂರು ಫಾರ್ಮಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಒಟ್ಟು 13600 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

ಬೆಂಗಳೂರಿನ ಆರ್‌ ಆರ್‌ ಫಾರ್ಮಸಿ ಕಾಲೇಜ್‌ ಹಾಗೂ ರಾಜ್ಯ ನೋಂದಾಯಿತ ಔಷಧ ವ್ಯಾಪಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ “ಭಾರತದ ಔಷಧಿ – ಜನೌಷಧಿ” ಎಂಬ ವಿಷಯದ ಮೇಲೆ ನಡೆದ ವೆಬ್ಬಿನಾರ್‌ನಲ್ಲಿ ಮುಖ್ಯ ಭಾಷಣ ಮಾಡಿದ ಸಚಿವರು “ಭಾರತವು ಸದ್ಯ ಏಪಿಐ ಮತ್ತು ಕೆಎಸ್‌ಎಂಇ ಮೂಲ ರಾಸಾಯನಿಕಗಳಿಗಾಗಿ ಚೀನಾ ಮುಂತಾದ ವೀದೇಶಗಳ ಮೇಲೆ ಅವಲಂಬಿತವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮಗೆ ಈ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಕೊಟ್ಟಿದ್ದಾರೆ. ಈ ಹೊಸ ಪಾರ್ಕುಗಳ ಅಭಿವೃದ್ಧಿಯಿಂದ ಭಾರತವು ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಔಷಧ ಹಾಗೂ ವೈದ್ಯಕೀಯ ಉಪಕರಣ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ” ಎಂದರು.

ಹೊಸದಾಗಿ 50 ಜನೌಷಧಿ ಕೇಂದ್ರ:

ಕೋವಿಡ್‌ ಸಮಯದಲ್ಲಿಯೂ ಹೊಸದಾಗಿ 50 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯ ದೇಶದ 732 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯಡಿ (ಪಿಎಂಬಿಜೆಪಿ) 6500 ಜನೌಷಧಿ ಕೇಂದ್ರಗಳು ಕಾರ್ಯವಹಿಸುತ್ತಿವೆ. ಇನ್ನುಳಿದ ಎರಡು ಜಿಲ್ಲೆಗಳಲ್ಲಿಯೂ ಈ ತಿಂಗಳ ಒಳಗಾಗಿ ಜನೌಷಧಿ ಕೇಂದ್ರಗಳನ್ನು ತೆರೆಯುತ್ತೇವೆ. ಅಲ್ಲಿಗೆ ಭಾರತ ದೇಶದ ಎಲ್ಲ ಜಿಲ್ಲೆಗಳಿಗೂ ಜನೌಷಧಿ ಸೌಲಭ್ಯವನ್ನು ಒದಗಿಸಿದಂತಾಗುತ್ತದೆ ಎಂದರು.

ಬ್ರಾಂಡೆಡ್‌ ಔಷಧಗಳಿಗಿಂತ ಶೇಕಡಾ 50ರಿಂದ ಶೇಕಡಾ 90ರಷ್ಟು ಕಡಿಮೆ ದರದಲ್ಲಿ ಜನರಿಗೆ ಗುಣಮಟ್ಟದ ಔಷಧಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಕೋಟ್ಯಂತರ ಜನರನ್ನು ಬಡತನ ರೇಖೆಯಿಂದ ಮೇಲೆತ್ತಲು ಸಹಾಯವಾಗುತ್ತಿದೆ. ಇದು ಪ್ರಧಾನಿ ಶ್ರೀ ಮೋದಿ ಅವರ ಕನಸೂ ಔದು. ಕಡಿಮೆ ದರ ಇದೆ ಎಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಅಂತಾರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

D.V.Sadananda gowda2019-20ರ ಸಾಲಿನಲ್ಲಿ ನಮ್ಮ ಜನೌಷಧ ಕೇಂದ್ರಗಳು 430 ಕೋಟಿ ರೂಪಾಯಿ ಔಷಧ ಮಾರಾಟ ಮಾಡಿವೆ. ಅಂದರೆ ಜನರಿಗೆ ಸುಮಾರು 2500 ಕೋಟಿರೂಪಾಯಿ ಉಳಿತಾಯ ಮಾಡಲಾಗಿದೆ. ಸುಮಾರು 750 ಮಾದರಿಯ ಔಷಧಗಳು ಹಾಗೂ 150 ಮಾದರಿಯ ವೈದ್ಯೋಪಕರಣಗಳು ನಮ್ಮಲ್ಲಿ ಲಭ್ಯವಿವೆ. ಕೊವಿಡ್‌ ಹಾಗೂ ಲಾಕ್ಡೌನ್‌ ಸಂದರ್ಭದಲ್ಲಿ ಕೂಡಾ ಜನೌಷಧ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಜನರಿಗೆ ಜನೌಷಧಗಳ ಮೂಲಕ ಸುಮಾರು 1260 ಕೋಟಿ ರೂಪಾಯಿ ಉಳಿತಾಯ ಮಾಡಲಾಗಿದೆ. ಒಂದು ಚಿಕ್ಕ ಉದಾಹರಣೆ ಹೇಳಬೇಕೆಂದರೆ – ಕೇವಲ ಒಂದು ರೂಪಾಯಿಗೆ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ ಒದಗಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬ್ರಾಂಡೆಡ್‌ ಸ್ಯಾನಿಟರಿ ಪ್ಯಾಡ್‌ಗಳ ದರ ನಾಲ್ಕೈದು ಪಟ್ಟು ಜಾಸ್ತಿ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಸದ್ಯ 690 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಜನೌಷಧಿ ಕೆಂದ್ರಗಳನ್ನು ತೆರೆದು ಜನಸಾಮಾನ್ಯರಿಗೆ ಉಪಯೋಗ ಮಾಡಿಕೋಡಬೇಕು ಎಂದು ರಾಜ್ಯ ಸರ್ಕಾರವನ್ನು ಕೇಳಿಕೊಂಡಿದ್ದೇವೆ ಎಂದರು. ಕೋವಿಡ್‌ ಸಂದರ್ಭದಲ್ಲಿ ಕರ್ನಾಟಕದ ಜನ ಹೆಚ್ಚಿನ ಪ್ರಮಾಣದಲ್ಲಿ ಜನೌಷಧಿಯ ಸದುಪಯೋಗ ಮಾಡಿಕೊಂಡಿದ್ದಾರೆ.  ಕಳೆದ ನಾಲ್ಕು ತಿಂಗಳಲ್ಲಿ 42.8 ಕೋಟಿ ಮೌಲ್ಯದ ಜನೌಷಧಿ ಮಾರಾಟವಾಗಿದೆ. ಬ್ರಾಂಡೆಡ್‌ ಔಷಧಗಳ ಧರಕ್ಕೆ ಹೋಲಿಸಿದರೆ ರಾಜ್ಯದ ಜನಕ್ಕೆ ಅಂದಾಜು 250 ಕೋಟಿ  ರೂಪಾಯಿವರೆಗೆ ಉಳಿತಾಯವಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!