ಆರ್ಯುರ್ವೇದ ಶಾಸ್ತ್ರದಲ್ಲಿ “ಪೈನ್ ಮ್ಯಾನೇಜ್ಮೆಂಟ್”

(ನೋವು ನಿವಾರಣೋಪಕ್ರಮಗಳು)

ಇತ್ತಿಚಿನ ದಿನಮಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ಒಂದೇ ವಿಧಾನವಾದ ಜೀವನ ಶೈಲಿಯಿಂದಾಗಿ, ವ್ಯಾಯಾಮದ ಕೊರತೆಯಿಂದಾಗಿ, ಅತಿಯಾದ ಚಿಂತೆ, ಭಯ, ಮಾನಸಿಕ ಉದ್ವೇಗ ಮತ್ತು ಖಿನ್ನತೆ ಈ ಎಲ್ಲ ಕಾರಣಗಳಿಂದ ಶರೀರದಲ್ಲಿ ವಾತಾದಿ ತ್ರಿದೋಷಗಳು, ರಸರಕ್ತಾದಿ ಸಪ್ತಧಾತುಗಳು ಮತ್ತು ಮನಸ್ಸಿನ ಗುಣಗಳಾದ ಸತ್ವ, ರಜ ತಮೊ ಗುಣಗಳಲ್ಲಿ ಏರು ಪೇರಾಗಿ ವಿವಿಧ ಬಗೆಯ ರೋಗಗಳನ್ನು ಶರೀರದಲ್ಲಿ ಉತ್ಪನ್ನ ಮಾಡುವವು.
ನೋವು ಅಥವಾ ಪೈನ್ ಎಂದರೆನು? :
ಯಾವುದು ಶರೀರಕ್ಕೆ ತೊಂದರೆಯನ್ನುಂಟು ಮಾಡುವುದು, ಭಾದೆಯನ್ನುಂಟು ಮಾಡುವದು ಅದನ್ನು ನೋವು ಎಂದು ಹೇಳಲಾಗುತ್ತದೆ. ಈ ಶರೀರದಲ್ಲಿ ನೋವು ಉಂಟಾಗಬೇಕೆಂದರೆ ವಾತದೋಷವು ಪ್ರಧಾನವಾಗಿರುವುದು.
ಬೇರೆ-ಬೇರೆ ಹೆಸರುಗಳಿಂದ ಸಂದರ್ಭಕ್ಕನುಗುಣವಾಗಿ ನೋವು ನಮಗೆ ನೋಡಲು ಸಿಗುತ್ತವೆ.

  • ರುಜಾ
  • ವೇದನಾ
  • ಪೀಡಾ
  • ಶೂಲ
  • ರುಕ್
  • ಪೆನ್ ಇತ್ಯಾದಿ.

ಹಾಗೆಯೇ, ಶರೀರದ ಯಾವುದೇ ಭಾಗದಲ್ಲಿ ಈ ನೋವು ಅಥವಾ ಶೂಲ ಕಾಣಿಸಿಕೊಳ್ಳಬಹುದು. ಯಾವ ಅಂಗಾವಯವಗಳಲ್ಲಿ ಶೂಲ ಕಾಣಿಸಿಕೊಂಡಾಗ ಈ ಹೆಸರಿನ ಸಂಜ್ಞೆಯಿಂದ ಕರೆಯಲಾಗುವುದು ಉದಾದರಣೆಗೆ-

  • ಶಿರಸ್ಸು ಅಥವಾ ತಲೆಯಲ್ಲಿ ನೋವು ಕಾಣಿಸಿಕೊಂಡರೆ – ಶಿರಶೂಲ
  • ಕಿವಿಯಲ್ಲಿ ನೋವು ಕಾಣಿಸಿಕೊಂಡರೆ – ಕರ್ಣಶೂಲವೆಂದು
  • ಉದರದಲ್ಲಿ ನೋವು ಕಾಣಿಸಿಕೊಂಡರೆ – ಉದರಶೂಲವೆಂದು
  • ಹೃದಯ, ಪಾಶ್ರ್ವಪೃಷ್ಠದಲ್ಲಿ ಶೂಲ ಉಂಟಾದಾಗ ಅದನ್ನು -ವಾತಕಫಜ
  • ಕುಕ್ಷಿ, ಹೃದಯ, ನಾಭಿಮಧ್ಯ ಶೂಲ-ಕಫಪಿತ್ತಜ ಶೂಲ
  • ಬಸ್ಥಿಪ್ರದೇಶ, ನಾಭಿಪ್ರದೇಶದಲ್ಲಿ ದಾಹ ಮತ್ತು ಜ್ವರಯುಕ್ತ ಭಯಂಕರ ಶೂಲ-ವಾತಪಿತ್ತಜ ಶೂಲವೆಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಶೂಲ ಆಶ್ರಯ ಸ್ಥಾನಗಳು :

  • ಎರಡು ಪಾಶ್ರ್ವಗಳು
  • ಹೃದಯ ಪ್ರದೇಶ
  • ನಾಭಿಪ್ರದೇಶ ಮತ್ತು ಬಸ್ತಿಪ್ರದೇಶ

ಶೂಲಕ್ಕೆ ಸಾಮಾನ್ಯ ಕಾರಣಗಳೇನು?

  • ಮೂತ್ರ ಮತ್ತು ಮಲವನ್ನು ಅಧಿಕ ಸಮಯದವರೆಗೆ ಶರೀರದಲ್ಲಿ ತಡೆಹಿಡಿಯುವುದು.
  • ಅತಿಯಾದ ಆಹಾರ ಸೇವಿಸುವುದು.
  • ಶರೀರಕ್ಕೆ ಒಗ್ಗದ ಸಂಕೀರ್ಣವಾದಂತಹ, ವಿರುದ್ಧ ಆಹಾರ ಅಂದರೆ ಹಾಲು, ಮೀನು ಸೇರಿಸಿ ಸೇವಿಸುವುದು ಇತ್ಯಾದಿ.
  • ಪೂರ್ವದಲ್ಲಿ ಸೇವಿಸಿದ ಆಹಾರವು ಜೀರ್ಣಗೊಂಡಿರುವದಿಲ್ಲ ಪುನಃ ಆಹಾರ ಸೇವಿಸುವದರಿಂದ ಅಜೀರ್ಣ ಉಂಟಾಗಿ.
  • ಅತ್ಯಧಿಕ ನಿರಂತರ ಕೆಲಸ ಮತ್ತು ಪರಿಶ್ರಮದಿಂದ
  • ಅತಿಯಾದ ಪಿಷ್ಟಶರ್ಕರ ಕೊಬ್ಬುವುಳ್ಳ ಆಹಾರ, ಮಾಂಸಾಹಾರ ಸೇವನೆ.

ಇಲ್ಲಿ ತಿಳಿಸಿರುವ ಆಹಾರ ವಿಹಾರಗಳ ಕಾರಣದಿಂದ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನಗೊಂಡು ಉದರ ಅಂದರೆ ಕೋಷ್ಠದಲ್ಲಿಯೇ ಸಂಚಿತವಾಗಿ ಶೂಲ ವನ್ನುಂಟು ಮಾಡುವುದು ಈ ಅವಸ್ಥೆಯಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದಲ್ಲಿ ಉದರದಲ್ಲಿ ಹುಣ್ಣು ಅಥವಾ ವೃಣವಾಗಿ ರೋಗವು ಮುಂದಿನ ಹಂತವನ್ನು ತಲುಪುತ್ತದೆ.

ಸಾಮಾನ್ಯ ಲಕ್ಷಣಗಳೇನು ?

  • ನಾಲಿಗೆಗೆ ಆಹಾರ ರುಚಿ ಬಾರದಿರುವುದು.
  • ಶರೀರದಲ್ಲಿ ಉರಿ ಅನಿಸುವುದು.
  • ಶರೀರದಲ್ಲಿ ಭಾರ ಅಥವಾ ಜಡತ್ವವೆನಿಸುವುದು.
  • ಕೆಮ್ಮುವುದು, ಉಸಿರಾಟಕ್ಕಾಗಿ ತೊಂದರೆಯಾಗುವುದು (ದಮ್ಮು)
  • ಅತಿಯಾದ ಬಿಕ್ಕಳಿಕೆ
  • ನಿರುತ್ಸಾಹ
  • ಮಲ-ಮೂತ್ರಗಳು ಪ್ರವೃತ್ತಿಯಾಗದಿರುವದು.

ವಾತದಿಂದ ಉತ್ಪನ್ನವಾದ ಶೂಲ ಕಾರಣಳೇನು ?

  • ಶರೀರದ ಶಕ್ತಿಗಿಂತ ಅಧಿಕವಾಗಿ ವ್ಯಾಯಾಮ ಮಾಡುವುದು.
  • ಅಧಿಕ ಮೈಥುನ ಮತ್ತು ಅತಿಯಾಗಿ ತಿರುಗಾಡುವದು.
  • ರಾತ್ರಿ ಜಾಗರಣೆ, ಹೆಚ್ಚಾಗಿ ಮಾತನಾಡುವುದು.
  • ಶೀತ ಆಹಾರ, ಶೀತಲ ಜಲ ಸೇವಿಸುವುದು.
  • ಹೆಸರು, ವಠಾಣಿ, ಮೊಳಕೆ ಒಡೆದಂತಹ ಧಾನ್ಯಗಳ ಅತಿಯಾದ ಸೇವನೆ.
  • ದೀರ್ಘಕಾಲ ಅಥವಾ ಬಹುದಿನಗಳವರೆಗೆ ಉಪವಾಸಮಾಡುವುದು.

ಈ ಮೇಲೆ ತಿಳಿಸಿದ ಎಲ್ಲ ಕಾರಣಗಳಿಂದ ವಾತದೋಷವು ಶರೀರದಲ್ಲಿ ಪ್ರಕೋಪಗೋಂಡು ಹೃದಯ, ಪಾಶ್ರ್ವ, ಪೃಷ್ಠ, ತ್ರಿಕಪ್ರದೇಶ ಮತ್ತು ಬಸ್ತಿ ಪ್ರದೇಶದಲ್ಲಿ ಶೂಲ ಉತ್ಪನ್ನಗೊಳಿಸುವುದು.
ಈ ಶೂಲವು ಸಾಯಂಕಾಲ ಸಮಯದಲ್ಲಿ, ವರ್ಷಋತುವಿನಲ್ಲಿ ಶೀತಕಾಲದಲ್ಲಿ ಶೂಲವು ಹೆಚ್ಚಾಗುವದು. ಈ ಸಂದರ್ಭದಲ್ಲಿ ನೋವು ಹೆಚ್ಚು ಕಡಿಮೆಯಾದಂತೆ ಅನಿಸುವುದು, ಮಲ ಮೂತ್ರ ಮತ್ತು ಅಪಾನವಾತ ಅವರೋಧವಾಗುವುದು ಮತ್ತು ಶರೀರದಲ್ಲಿ ಸೂಜಿ ಚುಚ್ಚಿದಂತೆ ನೋವಾಗುತ್ತದೆ.
ಅಭ್ಯಂಜನ, ಬೆಚ್ಚನೆಯ ಶಾಖ ಮೈ ಹಿಚ್ಚುಕುವುದು, ಸ್ನಿಗ್ದ ಮತ್ತು ಬಿಸಿಯಾದ ಆಹಾರಗಳ ಸೇವೆನೆ ನೋವನ್ನು ಕಡಿಮೆ ಮಾಡಬಹುದು.
ಪಿತ್ತಜಶೂಲ: ಕಾರಣಗಳೇನು? :
ಅತಿಯಾದ ಬಿಸಿ, ತೀಕ್ಷ್ಣಮತ್ತು ಕ್ಷಾರದಂತಹ ಆಹಾರ ಸೇವನೆ, ಅತಿಯಾದ ಹುರಳಿ, ಹುಳಿಕಾಂಜೀ, ಮದ್ಯಪಾನ ಆಧಿಕ ಬಿಸಿಲುಸೇವನೆ ಅಧಿಕ ಪರಿಶ್ರಮ
ಈ ವಿಧಾವಾದ ಸೇವಿಸಿದ ಆಹಾರವು ಕೋಷ್ಠದಲ್ಲಿ ವಿಷರೂಪವನ್ನು ಹೊಂದಿದ ನಂತರ ಪಿತ್ತವನ್ನು ದೂಷಣೆಗೊಳಿಸಿ ಪಿತ್ತ ಪ್ರಕೋಪಗೊಂಡು. ನಾಭಿ ಪ್ರದೇಶದಲ್ಲಿ ನೋವನ್ನುಂಟು ಮಾಡುವುದು.
ಈ ಸಂದರ್ಭದಲ್ಲಿ ಅಧಿಕವಾಗಿ ನೀರಡಿಕೆಯಾಗುವುದು, ಅಧಿಕವಾಗಿ ಬೆವರುವದು, ಮೂರ್ಛೆಯಾಗುವುದು, ತಲೆಸುತ್ತುವುದು. ಮಧ್ಯಾಹ್ನ, ಅರ್ಧರಾತ್ರಿ, ಬೋಜನ ಪಚನದ ಸಮಯದಲ್ಲಿ ಶರದ್ ಋತುವಿನಲ್ಲಿ ನೋವು ಹೆಚ್ಚಾಗುತ್ತದೆ.
ಶೀತಕಾಲ, ಶೀತ ಪದಾರ್ಥಗಳ ಸೇವನೆ, ಮಧುರ ಸಂಯುಕ್ತ ಆಹಾರ ಸೇವಿಸುವರಿಂದ ಶೂಲ ಶಮನವಾಗುವದು.

ಕಫದೋಷದಿಂದ ಉತ್ಪನ್ನದ ಶೂಲ ಕಾರಣಗಳೇನು? :

  • ಹಾಲು, ಕಬ್ಬಿನರಸ, ಪಿಷ್ಟದಿಂದ ತಯಾರಿಸಿದ ಆಹಾರಗಳ ಸೇವನೆ
  • ಉದ್ದು, ಎಳ್ಳು ಇವುಗಳಿಂದ ತಯಾರಿಸಿದ ಆಹಾರಗಳ ಸೇವನೆ.
  • ಅಧಿಕ ಬಾಯಲ್ಲಿ ನೀರೂರುವುದು, ಮೈಕೈಗಳಲ್ಲಿ ನೋವು ಕೆಮ್ಮು, ಊಟದಲ್ಲಿ ರುಚಿಬಾರದಿರುವುದು, ತಲೆಭಾರವಾಗುವುದು, ಕೋಷ್ಠದಲ್ಲಿ ಅವರೋಧವೆನಿಸುವುದು.
  • ಈ ವಿಧವಾಗಿ ಶೂಲವು ಭೋಜನ ಪಚನವಾದ ಕೂಡಲೇ, ಪ್ರಾತಃಕಾಲ ಶಿಶಿರ ಮತ್ತು ವಸಂತ ಋತುವಿನಲ್ಲಿ ವಿಶೇಷವಾಗಿರುವುದು.

ಶೂಲ ಚಿಕಿತ್ಸೆ: ಮನೆಮದ್ದು

  • ಉದರಶೂಲ/ಹೋಟ್ಟೆನೊವು :
  • ಅಜವಾಯಿನ್ 5 ಗ್ರಾಂನಷ್ಟು ಪುಡಿಮಾಡಿ ಒಂದು ಚಿಟಕಿ ಸೈಂದವ ಉಪ್ಪು ಅದಕ್ಕೆ ಬೆರೇಯಿಸಿ ಊಟದ ಮೊದಲು ದಿನ 3 ಬಾರಿ ಸೇವಿಸಬೇಕು.
  • ಅಜಮೋದದ ಚೂರ್ಣ. ಒಣಶೂಂಠಿ ಚೂರ್ಣ, ಶೈಂಧವ ಲವಣ ಎಲ್ಲವನ್ನು ಸೋರಿಸಿ ಸೂಕ್ಷ ಚೂರ್ಣಮಾಡಿ ಪ್ರತಿದಿನ 5 ಗ್ರಾಂ ನಷ್ಟು 3 ಸಾರಿ ಸುಖೋಷ್ಣ ಜಲದಲ್ಲಿ ಭೋಜನ ಪೂರ್ವದಲ್ಲಿ ಸೇವಿಸಬೇಕು.
  • ಪಿತ್ತಾದಿಕತೆಯಿಂದ (ಆಮ್ಲಪಿತ್ತದಿಂದ) ಉಂಟಾದ ಶೂಲ:
  • ಒಂದು ಚಮಚೆ ಹಸಿಶುಂಠಿರಸ ಅದಕ್ಕೆ ಒಂದು ಚಮಚೆ ಜೇನುತುಪ್ಪ ಮತ್ತು ಸ್ವಲ್ಪ ಸೈಂದವ ಉಪನ್ನು ಬೇರೆಸಿ ಬೆಳಿಗ್ಗೆ ಖಾಲಿ ಹೋಟ್ಟೆಯಲ್ಲಿ ಸೇವಿಸಬೇಕು.
  • ಆರ್ಧಚಮಚೆ ಅಜವಾಯಿನ್ ಚೂರ್ಣ, ಅರ್ಧ ಚಮಚೆ ಜೀರಿಗೆ ಚೂರ್ಣ, ಒಂದು ಚಿಟಕಿ ಸೈಂಧವ ಉಪ್ಪು ಇವನ್ನು ಒಂದು ಗ್ಲಾಸ್ ಬೀಸಿನಿರಿಗೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
  • ಅಳತೆಕಾಯಿಚೂರ್ಣವನ್ನು 10 ಗ್ರಾಂನಷ್ಟು ಬಿಸಿನೀರು ಅಥವಾ ಬೀಸಿ ಹಾಲಿನಲ್ಲಿ ಸೇರಿಸಿ ಪ್ರತಿದಿನ ಬೇಳಿಗ್ಗೆ ರಾತ್ರಿ ಸೇವಿಸಬೇಕು.
  • ಅಜೀರ್ಣ, ಅರುಚಿ, ಅಗ್ನಿಮಾಂದ್ಯದಿಂದ ಉತ್ಪನ್ನ ಶೂಲ :
  • ಹಿಂಗನ್ನು ತುಪ್ಪದಲ್ಲಿ ಹುರಿದು ಒಂದರಿಂದ ಎರಡು ಚಿಟಿಕಿಯಷ್ಟು ಮಜ್ಜಿಗೆಯಲ್ಲಿ ಅಥವಾ ಬಿಸಿನಿರಿನಲ್ಲಿ ಸೇರಿಸಿ ಇದಕ್ಕೆ 2 ಗ್ರಾಂ. ಜೀರಿಗೆ ಚೂರ್ಣ ಸೇರಿಸಿ ಸೇವಿಸಬೆಕು.
  • ಜೀರಿಗೆ ಚೂರ್ಣ 5 ಗ್ರಾಂ ಒಂದು ಚಿಟಕಿ ಸೈಂದವಲವಣ, ಅರ್ಧ ಚಮಚೆ ಲಿಂಬೆರಸ ಇದಕ್ಕೆ ಮಜ್ಜಿಗೆ ಸೇರಿಸಬೇಕು.
    ಹೊಟ್ಟೆಯ ಹುಣ್ಣಿನ ಶೂಲೆ:
  • ಜೇನುತುಪ್ಪ ಮತ್ತು ಹಣ್ಣಿನ ರಸ (ದಾಡಿಂಬೆರಸ ) ಮತ್ತು ಬಣ ದ್ರಾಕ್ಷೀಯನ್ನು ಸೇವಿಸಬೇಕು. ಎಳನೀರು ಕುಡಿಯಬೇಕು.
  • ಪರಿಣಾಮ ಶೂಲ :
  • ವಿಷ್ಣುಕ್ರಾಂತಿಬೇರು (ಶಂಖ ಪುಸ್ಪಿ) ಚೆನ್ನಾಗಿ ಅಗಿದು 10 ಗ್ರಾಂ ಕಲ್ಲು ಸಕ್ಕರೆ ಇದಕ್ಕೆ 2 ಚಮಚೆ ಜೇನುತುಪ್ಪ ಸೇರಿಸಿ ಬೆಳಿಗ್ಗೆ ರಾತ್ರಿ ಸೇವಿಸಬೇಕು.
  • ಪಾಶ್ರ್ವಶೂಲ:
  • ತುಲಸಿ ಸ್ವರಸ ಇದಕ್ಕೆ ಹಸಿಶುಂಠಿರಸ ಮತ್ತು ಅಜವಾಯಿನ್ ಸಮಬಾಗ ಸೇರಿಸಿ ನುನ್ನಗೆ ಅರೆದು ಪಾಶ್ರ್ವಗಳಿಗೆ ಲೇಪನ ಹಾಕಬೇಕು.

ಎಲ್ಲ ವಿಧಧ ನೋವುಗಳಿಗೆ
ಬಿಲ್ವದಬೇರು, ಚಿತ್ರದ ಬೇರು, ಶುಂಠಿ, ಹಿಂಗು ಸಮಭಾಗ ತಗೆದುಕೊಂಡು ನೀರಿನಲ್ಲಿ ಅರೆದು ಬೆಚ್ಚಗೆ ಮಾಡಿ ನೋವಿನ ಮೇಲೆ ಲೇಪನಮಾಡಬೇಕು.

ಡಾ|| ಸಂತೋಷ ನೀಲಪ್ಪ, ಬೆಳವಡಿ
ಫ್ರಾದ್ಯಾಪಕರು, ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಗದಗ
ಮೊ.: 9886916367    ayursnb@yahoo.co.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!