ಪಾದಾಭ್ಯಂಗ – ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ.

ಪಾದಾಭ್ಯಂಗ ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ.  ಪಾದಕ್ಕೆ ಮಾಡುವ ಅಭ್ಯಂಜನ ನರಗಳಿಗೆ ಶಕ್ತಿ ನೀಡುತ್ತದೆ. ರಕ್ತದೊತ್ತಡ, ನಿದ್ರಾಹೀನತೆ, ಚಿಂತೆ, ಮಾನಸಿಕ ಖಿನ್ನತೆ, ಅಪಸ್ಮಾರ, ಡಯಾಬಿಟಿಕ್ ನ್ಯೂರೋಪತಿ, ಆತಂಕ, ಪಾದಗಳ ಒಡಕು ರೋಗಗಳಿಗೆ ಉತ್ತಮ ಚಿಕಿತ್ಸೆ.

ಪಾದಾಭ್ಯಂಗ - ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ.

ಆಯುರ್ವೇದ ಒಂದು ಜೀವನ ಪದ್ದತಿ, ರೋಗಗಳನ್ನು ತಡೆಗಟ್ಟಲು, ಆರೋಗ್ಯ ಹಾಗೂ ಆಯುಷ್ಯವಂತರಾಗಲು ಹಲವಾರು ಚಿಕಿತ್ಸೆಗಳನ್ನು ಮತ್ತು ಅದಕ್ಕೂ ಮಿಗಿಲಾಗಿ ದಿನದಲ್ಲಿ ಮಾಡಬೇಕಾದ ಕೆಲವೊಂದು ಕ್ರಿಯೆಯನ್ನು ತಿಳಿಸುತ್ತದೆ. ಅಂತೆಯೇ ಪ್ರತಿ ದಿನ ನಾವು ಮಾಡಲೇಬೇಕಾದ ಒಂದು ಕ್ರಿಯೆ ಪಾದಗಳಿಗೆ ಅಭ್ಯಂಜನ.

ಯಾಕೆ ಪಾದಗಳಿಗೆ ಅಭ್ಯಂಜನ?

• ಪಾದಗಳು ದೇಹವನ್ನು ಭೂಮಿಗೆ ಸ್ಪರ್ಶಿಸುವ ಒಂದು ಭಾಗ
• ಪಾದಗಳು ದೇಹಕ್ಕೆ ಬೇರಿನ ಹಾಗೆ. ಪಾದಗಳಿಗೆ ಅಭ್ಯಂಜನ ಮಾಡುವುದರಿಂದ ದೇಹಕ್ಕೆ ಶಕ್ತಿ ಹಾಗೂ ಪೋಷಕಾಂಶಗಳು ಲಭ್ಯವಾಗುತ್ತದೆ
• ದೇಹದ ಹಲವು ಅಂಗಾಂಗಗಳಿಂದ ಉಗಮಿಸುವ ನರಗಳು ಪಾದಗಳಲ್ಲಿ ಕೊನೆಗೊಳ್ಳುವುದರಿಂದ, ಪಾದಕ್ಕೆ ಮಾಡುವ ಅಭ್ಯಂಜನ ನರಗಳಿಗೆ ಶಕ್ತಿ ನೀಡುತ್ತದೆ.
• ಹಲವಾರು ರೋಗಗಳನ್ನು ನಿವಾರಿಸುತ್ತದೆ.
• ದೇಹಕ್ಕೆ ಚಿಕಿತ್ಸೆ, ಶಕ್ತಿ ಮತ್ತು ಪೋಷಕಾಂಶನೀಡಲು ಇದುವೇ ಒಂದು ಮಾರ್ಗ.

ಹೇಗೆ ಅಭ್ಯಂಜನ ಮಾಡುವುದು?

• ದೇಹದ  ಪ್ರಕೃತಿಗೆ ಹೊಂದುವಂತಹ ಅಥವಾ ರೋಗವಿದ್ದರೆ ಅದಕ್ಕೆ ಸೂಕ್ತವಾಗುವ ಎಣ್ಣೆ ಅಥ್ವಾ ತುಪ್ಪದಿಂದ ಅಭ್ಯಂಜನ ಮಾಡಬೇಕು
• ಎಣ್ಣೆಯನ್ನು ಉಪಯೋಗಿಸುವ ಮೊದಲು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು
• ಕಾಲು, ಪಾದ ಮತು ಮೊಣಕಾಲುಗಳಿಗೆ ಸಾಧಾರಣ 30 ನಿಮಿಷ ಮಾಡಬೇಕು
• ಸ್ಪಲ್ಪ ಒತ್ತಡವನ್ನು ಪಾದಗಳಿಗೆ ಹಾಕುತ್ತಾ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು

ಪಾದಾಭ್ಯಂಗ - ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ.

ಪಾದಾಭ್ಯಂಜನದ ಲಾಭಗಳು?

• ಪಾದಗಳಲ್ಲಿನ ರೂಕ್ಷತೆ, ಒರಟುತನ, ಬಿರುಕುಗಳನ್ನು ನಿವಾರಣೆಮಾಡುತ್ತದೆ.
• ಪಾದದ ನೋವು ನಿವಾರಿಸಿ, ಪಾದಗು ಜೋಮು ಹಿಡಿಯುವುದನ್ನು, ಮರಗಟ್ಟುವುದನ್ನು ತಡೆಗಟ್ಟುತ್ತದೆ.
ಕಾಲಿನ, ನೋವಿನ ರೋಗಗಳಿಗೆ, ಸಯಾಟಿಕ ರೋಗಗಳಿಗೆ ಉತ್ತಮ ಚಿಕಿತ್ಸೆ.
• ಕಣ್ಣಿನ ದೃಷ್ಟಿ ಹಾಗೂ ಶ್ರವಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಯ್ದಿರಿಸುತ್ತದೆ.
• ಮಾನಸಿಕ ರೋಗಗಳಿಗೆ, ಆತಂಕ, ಒತ್ತಡವನ್ನು ನಿವಾರಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ.
• ಸರ್ವತೋಮುಖ ವ್ಯಾಧಿನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಯವ್ಯಾಯಾವ ರೋಗಗಳಿಗೆ ಉತ್ತಮ?
ರಕ್ತದೊತ್ತಡ, ನಿದ್ರಾಹೀನತೆ, ಚಿಂತೆ, ಮಾನಸಿಕ ಖಿನ್ನತೆ, ಅಪಸ್ಮಾರ, ಡಯಾಬಿಟಿಕ್ ನ್ಯೂರೋಪತಿ, ಆತಂಕ, ಪಾದಗಳ ಒಡಕು, ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ.

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Mob: 99640 22654

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!