ನವೆಂಬರ್‌ನ ಆರೋಗ್ಯ ಪಥ

ಪ್ರಿಯ ಓದುಗ ಮಿತ್ರರೇ, ನವೆಂಬರ್ ತಿಂಗಳಲ್ಲಿ ನಮ್ಮ ಮನೆ, ದೇಶ, ವಿಶ್ವದಾದ್ಯಂತ ಆಚರಿಸಲಾಗುವ ಹಬ್ಬಗಳು, ವಿವಿಧ ದಿನಾಚರಣೆಗಳಿಗೂ, ಅವುಗಳಿಗೆ ಸಂಬಂಧಿಸಿದಂತೆ ಆರೋಗ್ಯದ ಬಗ್ಗೆ ನಮಗೆ ಲಭ್ಯವಾಗಿರುವ ಮಾಹಿತಿ ಹಾಗೂ ನನ್ನ ಅನಿಸಿಕೆಯ ಪ್ರಕಾರ, ಈಗ ವಿಶ್ವದಲ್ಲಿ ಒಂದು ಆರೋಗ್ಯ ಸುತ್ತು ಹೋಗಿ ಬರೋಣವೇ?!

         ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ. ಎಲ್ಲ ಕನ್ನಡಿಗರಿಗೂ ಆರೋಗ್ಯ ಶುಭ ಹಾರೈಕೆಗಳು. ನವೆಂಬರ್ 1ರಂದು ನಾವೆಲ್ಲ ಆಚರಿಸುವ ತುಳಸಿ ವಿವಾಹ ಭಾರತ ದೇಶದಲ್ಲಿ ಒಂದು ಮಹತ್ವದ ಹಬ್ಬವಾಗಿದೆ. ಎಲ್ಲ ಹಿಂದೂ ಧರ್ಮದ ಮನೆಗಳ ಮುಂದೆ ತುಳಸೀಕಟ್ಟೆ, ಇದ್ದು, ತುಳಸಿ ಗಿಡಕ್ಕೆ ಪ್ರತಿ ದಿನ ಮನೆಯ ಮಹಿಳೆಯರು ನೀರು ಹಾಕಿ, ರಕ್ಷಿಸಿ, ಮನೆಯವರಿಗಾಗಿ ಆರೋಗ್ಯ, ದೀರ್ಘಾಯುಷ್ಯ ಪ್ರಾರ್ಥಿಸುತ್ತಾರೆ. ಭಾರತೀಯ ಪುರಾಣಗಳಂತೆ, ಆರ್ಯುವೇದ ಆರೋಗ್ಯ ರಕ್ಷಣೆಯಂತೆ, ತುಳಸಿ ಸಸಿ ಅತ್ಯಂತ ಪವಿತ್ರ. ಇದು ಸೋಂಕು ನಿವಾರಕ, ಗಾಳಿ ಶುದ್ಧೀಕರಿಸುವ ಇದು ಮನೆವೈದ್ಯದಲ್ಲಿ ಕೆಮ್ಮು ನೆಗಡಿ ಜ್ವರಗಳಿಗೆ ರಾಮಬಾಣ. ಗಂಗಾ ಮಹೋತ್ಸವ ನವೆಂಬರ್ 1ರಿಂದ 3ರವರೆಗೆ ವಾರಣಾಸಿಯಲ್ಲಿ ನಡೆಯಲಿದ್ದು, ಧಾರ್ಮಿಕ, ಸಾಂಸ್ಕøತಿಕ, ಪರಂಪರಾನುಗತ ಕಾರ್ಯಕ್ರಮಗಳೊಂದಿಗೆ, ಕೇಂದ್ರ ಸರಕಾರದ ನಮಾಮಿ ಗಂಗಾ ಎಂಬ ಸ್ವಚ್ಛತಾ ಕಾರ್ಯಕ್ರಮದಡಿ, ಗಂಗಾ ಸ್ವಚ್ಛತೆಯ ರಾಷ್ಟ್ರೀಯ ಅಭಿÀಯಾನದಲ್ಲಿ ಒಳಚರಂಡಿ ಯೋಜನೆ, ನದಿಯ ಮೇಲ್ಮೈ ಸ್ವಚ್ಛತೆ, ಅರಣ್ಯೀಕಿರಣ, ಕೈಗಾರಿಕೆಗಳ ಕಲ್ಮಶದ ಬಗ್ಗೆ ಗಮನ ನದಿಯ ಮುಂಭಾಗ ಅಭಿವೃದ್ಧಿ, ಜೈವಿಕ ವೈವಿಧ್ಯತೆ, ಸಾರ್ವಜನಿಕ ಜಾಗೃತಿ, ಈ ಎಲ್ಲ ಕಾರ್ಯಕ್ರಮಗಳ ಅನುಷ್ಠಾನವಾಗುತ್ತಲಿದೆ. ಈಶ ಸದ್ಗುರು ಅವರ ನದಿ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
ಗುರುನಾನಕ್ ಜಯಂತಿ ನವೆಂಬರ್ 4ರಂದು. ಸಿಖ್ಖರ ಈ ಧರ್ಮಗುರುವಿನ ಜೀವನದಲ್ಲಿ ನಡೆದ ಒಂದು ಘಟನೆ. 16ನೇ ಶತಮಾನದಲ್ಲಿ ಗಂಗಾ ನದಿ ತೀರದಲ್ಲಿ, ಪುಜಾರಿಗಳು ಹಾಗೂ ಯಾತ್ರಿಗಳು, ಗಂಗೆಯ ನೀರನ್ನು, ಉದಯಿಸುತ್ತಿರುವ ಸೂರ್ಯನ ದಿಕ್ಕಿಗೆ ಅರ್ಪಿಸುತ್ತಿದ್ದರು. ಅದು ಎಂದೋ ತೀರಿ ಹೋದ ಅವರ ಪಿತೃಗಳ ಬಾಯಾರಿಕೆ ನಿವಾರಿಸಲು. ನಾನಕ್ ಪಶ್ಚಿಮಕ್ಕೆ ನೀರು ಅರ್ಪಿಸಿದ. ಜನ ಕಾರಣ ಕೇಳಿದಾಗ, “ನನ್ನ ಊರು ಸೂರ್ಯನಿಗಿಂತ ಹತ್ತಿರ ಹಾಗೂ ನಮ್ಮ ಬೆಳೆಗಳಿಗೆ ನೀರು ಬೇಕಾಗಿದೆ.” ಸಿಖ್ ಧರ್ಮದ ನಂಬಿಕೆಯಲ್ಲಿ, ಜೀವನದಲ್ಲಿ ನಗು ಹಾಗೂ ಸಂತಸದಿಂದ ಇರುವುದೇ ಮುಖ್ಯ. ಅವರ ಸರ್ವಶಕ್ತನ ಪ್ರಾರ್ಥನೆ -‘ಮನಸ್ಸಿನ ಸಂತೋಷದ ಚೌಕಟ್ಟಿನಲ್ಲಿ ನಮ್ಮನ್ನು ಸದಾ ಇಡು, ಇಡೀ ಮಾನವತೆಗೆ ಶಾಂತಿ ಹಾಗೂ ಒಳ್ಳೆಯತನ ನೀಡು’ ಎಂದೇ ಬೇಡುತ್ತದೆ. ಅಂದು ಗುರುದ್ವಾರದಲ್ಲಿ ನಡೆಯುವ ಲಂಗರ್ ಅಂದರೆ ವಿಶೇಷ ಸಮುದಾಯ ಭೋಜನದಲ್ಲಿ, ಜಾತಿ- ವರ್ಗ- ನಂಬಿಕೆಗಳ ವ್ಯತ್ಯಾಸವಿಲ್ಲದೇ, ಎಲ್ಲರೂ ಸೇವಾ ಹಾಗೂ ಭಕ್ತಿಯಿಂದ, ಶುದ್ಧ, ಆರೋಗ್ಯಯುತ ಪೌಷ್ಠಿಕ ಆಹಾರವನ್ನು ಸಾಮೂಹಿಕವಾಗಿ ಸೇವಿಸುವುದು, ಎಲ್ಲರ ಗಮನ ಸೆಳೆಯುತ್ತದೆ.
ನವೆಂಬರ್ 1ರಂದೇ ರಾಷ್ಟ್ರೀಯ ಒತ್ತಡ ಅರಿವು ದಿನ. ನಾವು ಕೆಲಸ ಮಾಡುವ ಸ್ಥಳ ಹಾಗೂ ಪ್ರತಿದಿನದ ಜೀವನದಲ್ಲಿ ಪ್ರತಿ ಜೀವಿಯ ಪ್ರತಿಕ್ರಿಯೆಯೇ ಒತ್ತಡ. ಆಧುನಿಕ ಒತ್ತಡ ರೋಗದ ಕಾರಣಗಳು ಹಾಗೂ ಪರಿಹಾರದ ಬಗ್ಗೆ ಅರಿವು ನೀಡಲು, ಆರೋಗ್ಯ ಉತ್ತೇಜಿಸುವ ಹಾಗೂ ಕಾಳಜಿ ಕೊಡುವ ವೃತ್ತಿಪರರು ಪ್ರತಿ ವರ್ಷ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಮನುಷ್ಯರ ಸಂತೊಷದ ಕೊಲೆಗಾರ ಈ ಒತ್ತಡ. ಮಾನವ ಜೀವ ವಿಜ್ಞಾನದಲ್ಲಿ ಒತ್ತಡ, ಆತ್ಮವಿಶ್ವಾಸ ಹಾಗೂ ಕೆಲಸದ ವೇಗ ಹೆಚ್ಚಿಸುತ್ತದೆ. ಆದರೆ ಆಧುನಿಕ ಶೈಲಿಯಲ್ಲಿ ನಮ್ಮನ್ನ ಇದು ಕಾಡುತ್ತಿದೆ. ನಿಮ್ಮ ಕೆಲಸದಲ್ಲಿ ಅಪಾರ ಒತ್ತಡ ಎದುರಿಸುತ್ತಿದ್ದೀರಾ? ಅಥವಾ ಸಂಬಂಧಗಳ ಬಗ್ಗೆ ಒತ್ತಡವಿದೆಯೇ?. ಒತ್ತಡದ ಕಾಲದಲ್ಲಿ ನಾವು ಮಾಡಬಹುದಾದ ಉತ್ತಮ ಕೆಲಸವೆಂದರೆ ಕಿವಿಗಳು ಹಾಗೂ ಹೃದಯದಿಂದ ಪರಸ್ಪರ ಚೆನ್ನಾಗಿ ಆಲಿಸಿ. ನಮ್ಮ ಪ್ರಶ್ನೆಗಳಷ್ಟೇ ನಮ್ಮ ಉತ್ತರಗಳೂ ಮಹತ್ವದ್ದು ಎಂದು ತಿಳಿಯಿರಿ. ಈ ದಿನ ನಿಮ್ಮ ಜೀವನದ ಒತ್ತಡ ದೂರ ಮಾಡಲು ಒಂದು ಅವಕಾಶ ಎಂದು ತಿಳಿಯಿರಿ. ಒತ್ತಡ ನಿರ್ವಹಣೆ ಉತ್ತೇಜಿಸುವ ಸಂಸ್ಕøತಿ ಸೃಷ್ಟಿಸಿ. ನನಗೆ ಒತ್ತಡವೇ ಇಲ್ಲ ಎಂದು ಮೈಂಡ್‍ಸೆಟ್ ಮಾಡಿಕೊಳ್ಳಿ. ನವೆಂಬರ್ 1ರಿಂದ ರಾಷ್ಟ್ರೀಯ ನಿದ್ರಾ ಮಾಸ:- ನಿದ್ರೆ ಹಾಗೂ ನಿದ್ರೆಯ ಅವ್ಯವಸ್ಥೆ ಬಗ್ಗೆ, ಅಮೇರಿಕಾದ ರಾಷ್ಟ್ರೀಯ ನಿದ್ರೆ ಫೌಂಡೇಶನ್, ಸಾರ್ವಜನಿಕ ಅರ್ಥಮಾಡಿಕೊಳ್ಳುವಿಕೆ ಉತ್ತೇಜಿಸುತ್ತದೆ. ನಿಮ್ಮ ನಿದ್ರಾ ಅಭ್ಯಾಸಗಳನ್ನು ಸುಧಾರಿಸಲು ಗಮನಿಸಿ. ಪ್ರತಿದಿನ ನಿದ್ರಾ ವ್ಯವಸ್ಥೆ ರೂಢಿ ಮಾಡಿಕೊಳ್ಳಿ. ಪುಸ್ತಕ ಓದಿದ ನಂತರ, ದೀರ್ಘ ಉಸಿರಾಟದ ಅಭ್ಯಾಸಗಳ ನಂತರ, ನಿಮ್ಮ ವಿಚಾರಗಳನ್ನು ಬರೆದಿಟ್ಟ ನಂತರ, ಮಲಗುವ ಮೊದಲು ಬಿಸಿ ನೀರ ಸ್ನಾನ ಮಾಡಿದರೆ, ಒಳ್ಳೆಯ ನಿದ್ರೆ ಬರುತ್ತದೆ. ನಿಮ್ಮ ನಿದ್ರೆಯ ಮಧ್ಯೆ ಅಡಚಣೆಯಾಗುವುದೇ? ಮನೆಗೆ ಬಂದಾಗ ದಣಿವಾಗಿದೆಯೇ? ನಿದ್ರೆಗೆ ಪ್ರಯತ್ನಿಸಲು ಎಡೆಬಿಡದೇ ಚಲಿಸುವಿರಾ? ನಿಮ್ಮೊಂುದಿಗೆ ಮಕ್ಕಳು ಮಲಗುವರೇ? ನಿಮ್ಮ ನಿದ್ರಾ ಕೊಟಡಿಯ ಹವೆ ಸ್ಚಚ್ಛ ಹಾಗೂ ಹಿತಕರವಾಗಿದೆಯೆ?ಗಾಳಿ ರಹಿತ ಗಾಳಿ ಸ್ಚಚ್ಛ ಮಾಡುವ ಯಂತ್ರದಿಂದ, ನಿಮ್ಮ ನಿದ್ರಾ ಕೋಣೆಯ ಸೂಕ್ಷಾಣು ಜೀವಿಗಳು, ಶೀಲಿಂಧ್ರಗಳು, ಅಚ್ಚುಗಳು, ಧೂಳಿನ ತೀರ ಚಿಕ್ಕ ಜೇಡಗಳು, ಸಾಕು ಪ್ರಾಣಿಗಳ ಅಲರ್ಜಿಕಾರಕ ವಾಸನೆ, ಪರಾಗಗಳು, ತಂಬಾಕು ವಾಸನೆ, ಇವುಗಳನ್ನು ನಿವಾರಿಸಿ.
ನವೆಂಬರ್ 2 ರಂದು ವಿಶ್ವ ನಿಮೋನಿಯಾ ದಿನಾಚರಣೆ. ಎರಡು ಅತ್ಯಂತ ಸಾಮಾನ್ಯ ಆದರೆ ಭಯಂಕರ ನಿಮೋನಿಯಾದ ಅಣುಜೀವಿ ಕಾರಣಗಳಿಗೆ ಪರಿಣಾಮಕಾರಿ ಲಸಿಕೆಗಳಿವೆ. ಹೆಮೋಫಿಲಸ್ ಇನ್‍ಪ್ಲುಯೆಂಝಾ ಬಿ. ತರಹದ್ದು ಹಾಗೂ ಸ್ಟ್ರೆಪ್ಟೋಕೋಕ್ಕುಸ್ ನಿಮೋನಿಯಾ ಹಾಗೂ ಅತಿ ಸಾಮಾನ್ಯ ಸೂಕ್ಷ್ಮಾಣುಜೀವಿಯ ಕಾರಣದ ನಿಮೋನಿಯಾ, ತಡೆಯಬಹುದಾದ, ಚಿಕಿತ್ಸೆಗೊಳಪಡಿಸಬಹುದಾದ ಕಾಯಿಲೆ. ಪ್ರತೀ ವರ್ಷ 5 ವರ್ಷದ ಕೆಳಗಿನ 155 ದಶಲಕ್ಷ ಮಕ್ಕಳನ್ನು ರೋಗಗ್ರಸ್ಥ ಮಾಡಿ, 1.6 ದಶಲಕ್ಷ ಮಕ್ಕಳನ್ನು ಕೊಲ್ಲುತ್ತದೆ. ಏಡ್ಸ್, ಚಳಿಜ್ವರ ಹಾಗೂ ದಢಾರಕ್ಕಿಂತ ಹೆಚ್ಚು ಮಕ್ಕಳನ್ನು ಇದು ಆಹುತಿ ತೆಗೆದುಕೊಳ್ಳುತ್ತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನೆಸ್ಕೋದ ವಿಶ್ವ ಕ್ರಿಯಾ ಯೋಜನೆಯಂತೆÉ, ನಿಮೋನಿಯಾ ತಡೆಯುವಿಕೆ ಹಾಗೂ ಚಿಕಿತ್ಸೆಗಳಿಂದ, 1 ದಶಲಕ್ಷ ಮಕ್ಕಳ ಪ್ರಾಣ ಉಳಿಸಬಹುದು.
ನವೆಂಬರ್ 6 ರಿಂದ 8ರವರೆಗೆ ವಿಶ್ವ ಓಟದ ದಿನ. ವಿಶ್ವದಲ್ಲಿ ಹೆಚ್ಚು ಓಟಗಾರರನ್ನು ಓಡಲು ಪ್ರೋತ್ಸಾಹಿಸಿ, ಓಟದಿಂದ ದೊರೆಯುವ ಆರೋಗ್ಯ ಲಾಭಗಳನ್ನು ವಿವರಿಸಿ, ಬೇಕಾದ ಸೌಕರ್ಯಗಳನ್ನು ದಾನ ಕೊಡಲು, ಆಟಗಾರರನ್ನು ವಿಶ್ವ ವಿನಂತಿಸುತ್ತಿದೆ.
ನವೆಂಬರ್ 8 ರಂದು ವಿಶ್ವ ವಿಕಿರಣ ಶಾಸ್ತ್ರ ದಿನಾಚರಣೆ:- ಕ್ರಿ.ಶ. 1895ರಲ್ಲಿ ಇದೇ ದಿನ, ವಿಲ್‍ಹೆಲ್ಮ್ ಕಾನ್ರಾಡ್ ರಾಂಟ್‍ಜೆನ್, ಕ್ಷಕಿರಣ ಕಂಡು ಹಿಡಿದ ದಿನ. ಗ್ರಂಥಿ ವಿಜ್ಞಾನ ಹಾಗೂ ಕ್ಯಾನ್ಸರ್‍ನ ವೈದ್ಯಕೀಯ ಆಕೃತಿಗೆ ವಿಕಿರಣ ಪರೀಕ್ಷೆ ಮಹತ್ವದ್ದು. ಜನರು ತಮ್ಮ ಕಾಲ ಕಾಲದ ಆರೋಗ್ಯ ತಪಾಸಣೆಗೆ, ಕ್ಷಕಿರಣ ತಜ್ಞರ ಸೇವೆ ಬಳಸಿಕೊಳ್ಳಬೇಕಾಗಿದೆ.
ವಿಶ್ವ ಉಪಯುಕ್ತತೆ ದಿನಾಚರಣೆ ನವೆಂಬರ್ 9ರಂದು. ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಕಾಳಜಿ, ಸರಕಾರಿ ಸಂವಹನ, ಮನರಂಜನೆ, ಕೆಲಸಗಳಿಗಾಗಿ ಬಳಸಲು ಪ್ರಯತ್ನಿಸಬೇಕಾಗಿದೆ. ತಂತ್ರಜ್ಞಾನ, ನಮ್ಮ ಜೀವನ ಸುಧಾರಿಸಬೇಕಲ್ಲದೇ, ಅದರಿಂದ ಒತ್ತಡ, ಅಪಾಯ ಸಂಭವಿಸಬಾರದು. ವೈದ್ಯಕೀಯ ತಂತ್ರಜ್ಞಾನ, ಆರೊಗ್ಯ ಸುಧಾರಿಸಬಲ್ಲದು. ಆದರೆ ಅದರ ಬಳಕೆ ಸುಲಭವಾಗಬೇಕು. ಪೂರ್ಣ ಮನುಷ್ಯನನ್ನು ಮನಸ್ಸಿನಲ್ಲಿಟ್ಟುಕೊಂಡ ಸಂಶೋಧನೆ, ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯಪೂರ್ಣ ಆಹಾರ ಪೂರೈಸಬೇಕು.
ವಿಶ್ವ ಗುಣಮಟ್ಟದ ದಿನ ನವೆಂಬರ್ 10ರಂದು. ಸಾಧನೆಗಳನ್ನು ಸಂಭ್ರಮಿಸಿ, ಹೇಗೆ ಗುಣಮಟ್ಟ, ವ್ಯವಸ್ಥೆಗಳು ಹಾಗೂ ಸಂಸ್ಕರಣಾ ಮಾರ್ಗ ಮಾನವ ಜೀವನದ ಮೇಲೆ ಉದ್ಭವಿಸುವ ಪರಿಣಾಮ ಮಾಡಬಲ್ಲದು ಎಂಬುದರ ಬಗ್ಗೆ ಅರಿವು ಮೂಡಿಸುವುದೇ, ವಿಶ್ವ ಗುಣಮಟ್ಟ ದಿನಾಚರಣೆಯ ಉದ್ದೇಶ. ಗುಣಮಟ್ಟ ಎಂದರೆ ಹೊಸ ಶೋಧ ಹಾಗೂ ಕಾಳಜಿ. ಯಾವ ಶೋಧದಿಂದ ನಿಮಗೆ ನಿಮ್ಮ ಸುತ್ತಲಿನವರಿಗೆ, ಸಮಾಜಕ್ಕೆ, ಪರಿಸರಕ್ಕೆ, ಸುರಕ್ಷತೆ ಹಾಗೂ ನಿರಂತರತೆ, ಸಿಗುವುದೋ, ಎಲ್ಲರಿಗೂ ಉತ್ತಮ ಜೀವನ ಸಿಗುವುದೋ ಅದೇ ಗುಣಮಟ್ಟ. ಈ ನಿಟ್ಟಿನಲ್ಲಿ ಈ ದಿನ ನಾವೆಲ್ಲ ಏನು ಮಾಡಬಹುದು? ಮುಂದಿನ ತಲೆಮಾರಿಗೆ ನೀರಿನ ಪ್ರತಿ ಹನಿ ಉಳಿಸುವೆ, ಮಕ್ಕಳು ಹಾಗೂ ವೃದ್ಧರಿಗೆ ನೆರವು ನೀಡುವೆ, ಹಸಿರುಸಸಿ ನೆಡುವೆ, ನನ್ನ ಎಲ್ಲ ಸೇವೆಗಳಲ್ಲಿ ಮುಗುಳ್ನಗೆ ಇಡುವೆ, ನನ್ನ ಆಹಂಕಾರ ಇಂದು ನುಂಗುವೆ, ಸೌಹಾರ್ದತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ, ಆಹಾರವನ್ನು ತ್ಯಾಜ್ಯ ಮಾಡೋಲ್ಲ, ಅದನ್ನ ನೈರ್ಮಲ್ಯದ ರೀತಿ ವಿಲೇವಾರಿ ಮಾಡುವೆ, ವಿದ್ಯುಚ್ಛಕ್ತಿ ಉಳಿಸುವೆ, ಕಳ್ಳತನ ಮಾಡೋಲ್ಲ, ಸಾÀರ್ವಜನಿಕ ಸ್ಥಳದಲ್ಲಿ ಉಗುಳೋಲ್ಲ, ಸ್ವಾಭಾವಿಕ ಸೌಂದರ್ಯ ಹಾಳು ಮಾಡೋಲ್ಲ, ಗಲೀಜು ಮಾಡೋಲ್ಲ, ಕಾರ್ಬನ್ ಮೊನಾಕ್ಸೈಡ್ ಹೊರಬೀಳುವಂತೆ ಮಾಡೋಲ್ಲ. ಇದೀಗ ಹೇಳಿದ ಚಟುವಟಿಕೆಗಳನ್ನು ಮಾಡುವುದರಿಂದ, ನಾಳಿನ ಭವಿಷ್ಯ ಉತ್ತಮವಾಗಬಲ್ಲದು.
ನವೆಂಬರ್ 13 ವಿಶ್ವ ಕರುಣೆಯ ದಿನ ಜನಾಂಗ, ಧರ್ಮ, ಜಾತಿ ಸೀಮೆಗಳನ್ನು ದಾಟಿ, ಎಲ್ಲ ಮಾನವರತ್ತ ಕರುಣೆ ಬೀರುವ ಉದ್ದೇಶ ಇಲ್ಲಿದೆ. ಏಕೀಕೃತ ಮೈಚಾರಿಕ ಅಲೆಗಳನ್ನು ಹಾಗೂ ಎಲ್ಲರ ಜೀವನಕ್ಕೆ ಕರುಣೆಯ ಕೆಲಸಗಳನ್ನು ಮೇಳೈಸುವ, ವಿಶ್ವ ಅಲೆಗಳನ್ನು ಉತ್ತೇಜಿಸುವ ಗುರಿ ಈ ದಿನದ್ದು.
ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ. 2015 ರಲ್ಲಿ 415 ದಶಲಕ್ಷ ವಯಸ್ಕರು ಮಧುಮೇಹಿಗಳಾಗಿದ್ದರೆ, ಈ ಸಂಖ್ಯೆ 2040ರ ಹೊತ್ತಿಗೆ 342 ದಶಲಕ್ಷಕ್ಕೆ ಏರಲಿದ್ದು, ಹತ್ತರಲ್ಲಿ ಒಬ್ಬರಿಗೆ ಮಧುಮೇಹ ಇರುತ್ತದೆ. ಬಹಳ ಜನಕ್ಕೆ ಎರಡನೆ ತರಹದ ಮಧುಮೇಹ ಬಹಳ ಕಾಲದಿಂದಿದ್ದರೂ, ಅವರಿಗೆ ಇದರ ಅರಿವಿಲ್ಲ. ತಿಳಿದು ಬರುವ ಸಮಯಕ್ಕೆ ಮಧುಮೇಹದ ಸಂಕೀರ್ಣತೆಗಳು ಹೆಚ್ಚಾಗಿರಬಹುದು.
ಬಹಳ ದೇಶಗಳಲ್ಲಿ ಅಪೌಷ್ಠಿಕತೆ ಹಾಗೂ ಶಾರೀರಿಕ ಚಟುವಟಿಕೆಗಳಿಲ್ಲದಿರುವಿಕೆಯಿಂದ, ಮಕ್ಕಳು ಬಾಲ್ಯದಲ್ಲೇ ಈ ಅಪಾಯಕ್ಕೆ ತುತ್ತಾಗುತ್ತಾರೆ. ಈ ವರ್ಷದ ಧ್ಯೇಯವಾಕ್ಯ ಮಹಿಳೆ ಮತ್ತು ಮಧುಮೇಹ – ಭವಿಷ್ಯದಲ್ಲಿ ಆರೋಗ್ಯಕ್ಕಾಗಿ ನಮ್ಮ ಹಕ್ಕು. ಮಧುಮೇಹದ ಅಪಾಯದಲ್ಲಿರುವ ಎಲ್ಲ ಮಹಿಳೆಯರಿಗೂ, ಅತ್ಯಾವಶ್ಯಕ ಔಷಧಿ ಹಾಗೂ ತಂತ್ರಜ್ಞಾನಗಳ ಲಭ್ಯತೆಯಿಂದ, ಸ್ವಂತ ನಿರ್ವಹಣಾ ಶಿಕ್ಷಣದಿಂದ, ಎರಡನೇ ತರಹದ ಮಧುಮೇಹ ತಡೆಯಲು ತಮ್ಮ ಶಕ್ತಿ ಬಲಪಡಿಸಿಕೊಳ್ಳಬೇಕಾಗಿದೆ. ಸದ್ಯ 199 ದಶಲಕ್ಷ ಮಹಿಳೆಯರು ಮಧುಮೇಹದಿಂದ ಬಳಲುತ್ತಿದ್ದು, ಈ ಸಂಖ್ಯೆ 2040ರ ವೇಳೆಗೆ, 313 ದಶಲಕ್ಷ ಮುಟ್ಟಲಿದೆ. ಪುನರುತ್ಪಾದಕ ಗುಂಪಿನಲ್ಲಿರುವ ಪ್ರತಿ ಐದು ಮಹಿಳೆಯರಲ್ಲಿ ಇಬ್ಬರಿಗೆ ಮಧುಮೇಹವಿದ್ದು, ಇಂಥವರು ವಿಶ್ವದಲ್ಲಿ 60 ದಶಲಕ್ಷ ಜನರಿದ್ದಾರೆ. ಪ್ರತೀವರ್ಷ 2.1 ದಶಲಕ್ಷ ಮಹಿಳೆಯರ ಮರಣ, ಈ ಮಧುಮೇಹದಿಂದ. ಮಧುಮೇಹ ಎರಡನೇ ತರಹವಿರುವ ಮಹಿಳೆಯರು ಹೃದಯ ರೋಗಕ್ಕೆ ತುತ್ತಾಗುವ ಸಾಧ್ಯತೆ 10 ಪಟ್ಟು ಹೆಚ್ಚು. ಮಧುಮೇಹ ಒಂದನೇ ತರಹವಿರುವ ಮಹಿಳೆಯರಿಗೆ ಗರ್ಭಪಾತ ಹಾಗೂ ಅಂಗವಿಕಲತೆಯ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚು.
ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡಲು ಚಾಚಾ ನೆಹರೂ ಕರೆ ನೀಡಿದ್ದಂತೆ, ನಮ್ಮ ದೇಶದಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆ. ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನ ಅವರ ಪ್ರತಿಭಾ ಪ್ರದರ್ಶನ ಇವುಗಳಿಂದ ಮಕ್ಕಳನ್ನು ಉತ್ತೇಜಿಸುವÀ ಚಟುವಟಿಕೆಗಳು ಅಂದು ನಮ್ಮ ದೇಶದಾದ್ಯಂತ ನಡೆಯುತ್ತವೆ. ನವೆಂಬರ್ 20ರಂದು ವಿಶ್ವ ಮಕ್ಕಳ ದಿನಾಚರಣೆ. ಮಕ್ಕಳ ಆವಶ್ಯಕತೆಗಳ ಬಗೆಗಿನ ಗುರಿಗಳನ್ನು ಸಾಧಿಸಲು, ಯುನೆಸ್ಕೋ ಸಂಕಲ್ಪ ಮಾಡಿದೆ. ಮಕ್ಕಳ ಉತ್ತಮ ಆರೋಗ್ಯ ರಕ್ಷಣೆ ಹಾಗೂ ಲಸಿಕೆಗಳನ್ನು ಪೂರೈಸಿ, ದುರ್ಬಳತೆ, ಶೋಷಣೆ, ವ್ಯತ್ಯಾಸಗಳೆಂಬ ಹಿಂಸೆಗೆ ಬಲಿಯಾದ ಮಕ್ಕಳ ಬಗ್ಗೆ, ವಿಶ್ವದಲ್ಲಿ ಅರಿವು ಮೂಡಿಸುವ ಉದ್ದೇಶ ಇಲ್ಲಿದೆ. ಮಕ್ಕಳ ಮೇಲಿನ ಹಿಂಸೆ ನಿಲ್ಲಿಸಬೇಕೆಂಬುದೇ ಇಲ್ಲಿಯ ಗುರಿ. 1999ರ ವಿಶ್ವ ಕಾರ್ಮಿಕ ಸಂಘ, ಬಾಲ ಕಾರ್ಮಿಕರು, ದಾಸ್ಯ, ಬಾಲ ವೇಶ್ಯೆಯರು, ಮಕ್ಕಳ ಲೈಂಗಿಕ ಚಿತ್ರ ತಯಾರಿಕೆ ಹಾಗೂ ವೀಕ್ಷಣೆ, ಇವುಗಳ ನಿವಾರಣೆ ಹಾಗೂ ತಡೆಯುವಿಕೆಯ ಮಂತ್ರ ಘೋಷಿಸಿದೆ.
ನವೆಂಬರ್ 17ರಂದು ವಿಶ್ವ ಅಕಾಲಿಕ ಜನನ ದಿನ. ಪ್ರತೀವರ್ಷ 15 ದಶಲಕ್ಷ ಶಿಶುಗಳು, ದಿನ ತುಂಬುವ ಮುಂಚೆಯೇ ಹುಟ್ಟುತ್ತವೆ. ಇದೊಂದು ಗಂಭೀರ ಆರೋಗ್ಯ ಸಮಸ್ಯೆ. ಇಲ್ಲಿ ಉಳಿದುಕೊಂಡ ಬಹಳಷ್ಟು ಮಕ್ಕಳಿಗೆ, ಜೀವನದಾದ್ಯಂತ ಆರೋಗ್ಯ ಸಮಸ್ಯೆಗಳಿರುತ್ತವೆ. ಉದಾ: ಮೆದುಳಿನ ತೊಂದರೆಯಾದ ಪಾಶ್ರ್ವವಾಯು, ಮೂರ್ಛೆ ರೋಗ, ದೃಷ್ಟಿ ಹಾಗೂ ಶ್ರವಣ ನಷ್ಟ , ಬೌದ್ದಿಕ ವಿಕಲಾಂಗತೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಆ ಶಿಶುಗಳಿಗೆ ವಿಶೇಷ ಕಾಳಜಿ ನೀಡುವುದೇ, ಈ ದಿನಾಚರಣೆ ಉದ್ದೇಶ. ನವೆಂಬರ್‍ನಲ್ಲಿ ಮೊವೆಂಬರ್ ಎಂಬ ವಾರ್ಷಿಕ ಆಚರಣೆಯಿದ್ದು, ಆಗ ಪುರುಷರ ಆರೋಗ್ಯ ವಿಷಯಗಳಾದ ಪ್ರಾಸ್ಟೇಟ್ ಕ್ಯಾನ್ಸರ್, ತರಡು ಬೀಜದ ಕ್ಯಾನ್ಸರ್, ಖಿನ್ನತೆ ಹಾಗೂ ಪುರುಷರ ಆತ್ಮಹತ್ಯೆ, ಕ್ಯಾನ್ಸರನ್ನು ಬೇಗ ಪತ್ತೆ ಹಚ್ಚಿ, ತಪಾಸಣೆ ಮಾಡಿ ಪರಿಣಾಮಕಾರಿ ಚಿಕಿತ್ಸೆ ನೀಡಿ, ತಡೆಯಬಹುದಾದ ಸಾವನ್ನು ತಡೆಯುವುದು ಈ ಆಚರೆಣೆಯ ಗುರಿ.ಇವುಗಳ ಬಗ್ಗೆ ಅರಿವು ಮೂಡಿಸಲು ಮೀಸೆ ಬೆಳೆಸುವ ಸಾಂಕೇತಿಕ ಕಾರ್ಯಕ್ರಮ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‍ಗಳಲ್ಲಿ ನಡೆಯುತ್ತದೆ.
ಇದೇ 19ರಂದು ವಿಶ್ವ ಪುರುಷರ ದಿನ.:- ಯುನೆಸ್ಕೋದ ಮಹಿಳೆ ಹಾಗೂ ಸಾಂಸ್ಕøತಿಕ ಶಾಂತಿ ವಿಭಾಗದ ನಿರ್ದೇಶಕಿ ಇಂಗೆ ಬೋರ್ಗ್ ಬ್ರೈೀನ್ಸ್ ಹೇಳುವÀಂತೆ “ ಲಿಂಗ ಸಮತೋಲನಕ್ಕೆ ಇದೊಂದು ಉತ್ತಮ ವಿಚಾರ. ಈ ಆಚರಣೆಯ ಮುಖ್ಯ ಉದ್ದೇಶ, ಗಂಡಸರು ಹಾಗೂ ಹುಡುಗರ ಆರೋಗ್ಯದ ಮೇಲೆ ಕೇಂದ್ರೀಕರಣ, ಲಿಂಗ ಸಂಬಂಧಗಳ ಸುಧಾರಣೆ, ಲಿಂಗ ಸಮಾನತೆಗೆ ಉತ್ತೇಜನ, ಪುರುಷ ಪಾತ್ರ ಮಾದರಿಗಳನ್ನು ಜನಪ್ರಿಯಗೊಳಿಸುವುದು.” 20ರಂದೇ ರಸ್ತೆ ಸಂಚಾರದಲ್ಲಿ ಬಲಿಯಾದವರ ವಿಶ್ವ ಸ್ಮರಣಾ ದಿನ. ನಾವು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ದಾಟುವಾಗ, ಸಂಚಾರಿ ನಿಯಮಗಳನ್ನು ಪಾಲಿಸಬೇಕು. ದಟ್ಟಣೆಯ ಅವಧಿಯಲ್ಲಿ, ಸಿಗ್ನಲ್‍ಗಳ ಬಳಿ, ಒಮ್ಮುಖ ಸಂಚಾರಿ ರಸ್ತೆಯಲ್ಲಿ ನಾವು ಅತ್ಯಂತ ಧಾಡಸಿತನದಿಂದ ವೇಗವಾಗಿ ಚಲಿಸಿದರೆ, 18 ವರ್ಷಕ್ಕಿಂತ ಕಡಿಮೆ ಮಕ್ಕಳು ಚಾಲನಾ ಪರವಾನಿಗೆಯಿಲ್ಲದೇ ವಾಹನ ನಡೆಸಿದರೆ, ಅಪಘಾತ ಖಂಡಿತ. ವಿದೇಶಗಳಲಿ,್ಲ ಆಲ್‍ಝೈಮರ್ಸ್ ಕಾಯಿಲೆ, ರೋಗಿಯ ರಕ್ತ ನಿರ್ವಹಣೆ, ಮೂತ್ರಾಶಯ ಆರೋಗ್ಯ, ಹೊಟ್ಟೆ ಅರ್ಬುದ ರೋಗ, ಪುಪ್ಪಸದ ಶ್ವಾಸಕೋಶದ ತಡೆ, ಮಧುಮೇಹದಿಂದಾಗುವ ಕಣ್ಣಿನ ರೋಗದ ಅರಿವು, ಕುಟುಂಬ ಕಾಳಜಿ ಕೊಡುವವರು, ರಾಷ್ಟ್ರೀಯ ಆರೋಗ್ಯಕರ ಚರ್ಮ ಮಾಸ, ರಾಷ್ಟ್ರೀಯ ಮನೆ ಕಾಳಜಿ ಹಾಗೂ ವಿಶ್ವಾಂತಿ, ಪುಪ್ಪಸ ಕ್ಯಾನ್ಸರ್, ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್, ಲೈಂಗಿಕ ಆರೋಗ್ಯ ಇವೆಲ್ಲವುಗಳ ಕಾಳಜೆ ಹಾಗೂ ಅರಿವಿನ ಚಟುವಟಿಕೆಗಳ ಮಾಸವಾಗಿದೆ ಈ ನವೆಂಬರ್.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!