ನವೆಂಬರ್‌ ತಿಂಗಳ ಆರೋಗ್ಯ ದಿನಗಳು

ನವೆಂಬರ್ 5:ರಾಷ್ಟ್ರೀಯ ಆಯುರ್ವೇದ ದಿನ
ನಮ್ಮ ದೇಶದಲ್ಲಿ ಆಯುಷ್ ಸಚಿವಾಲಯ, ದೇವವೈದ್ಯ ಧನ್ವಂತರಿ ಜಯಂತಿ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ನವೆಂಬರ್ 5ರಂದು ಆಚರಿಸಲಾಗುತ್ತಿದೆ. ಅಥರ್ವ ವೇದದಲ್ಲಿ ಹೇಳಿರುವಂತೆ, ಆಯುರ್ವೇದ, ಸಾಂಪ್ರದಾಯಿಕ ಹಿಂದೂ ವೈದ್ಯಕೀಯ ವ್ಯವಸ್ಥೆಯಾಗಿದ್ದು, ದೇಹದ ವ್ಯವಸ್ಥೆಗಳ ಸಮತೋಲನ, ಪಥ್ಯ, ಗಿಡಮೂಲಿಕೆಗಳ ಉಪಚಾರ, ಯೋಗಿಕ ಉಸಿರಾಟ ಇವುಗಳನ್ನು ಅಧರಿಸಿದೆ. ಇದಕ್ಕೆ ಹೊಂದಿಕೊಂಡಂತೆ ನವೆಂಬರ್ 9ರಂದು ನಾವೆಲ್ಲ ಆಚರಿಸುವ ತುಳಸಿ ವಿವಾಹ ಭಾರತ ದೇಶದಲ್ಲಿ ಒಂದು ಮಹತ್ವದ ಹಬ್ಬವಾಗಿದೆ. ಎಲ್ಲ ಹಿಂದೂ ಧರ್ಮದ ಮನೆಗಳ ಮುಂದೆ ತುಳಸೀಕಟ್ಟೆ, ಇದ್ದು, ತುಳಸಿ ಗಿಡಕ್ಕೆ ಪ್ರತಿ ದಿನ ಮನೆಯ ಮಹಿಳೆಯರು ನೀರು ಹಾಕಿ, ರಕ್ಷಿಸಿ, ಮನೆಯವರಿಗಾಗಿ ಆರೋಗ್ಯ, ದೀರ್ಘಾಯುಷ್ಯ ಪ್ರಾರ್ಥಿಸುತ್ತಾರೆ. ಭಾರತೀಯ ಪುರಾಣಗಳಂತೆ, ಆರ್ಯುವೇದ ಆರೋಗ್ಯ ರಕ್ಷಣೆಯಂತೆ, ತುಳಸಿ ಸಸಿ ಅತ್ಯಂತ ಪವಿತ್ರ. ಇದು ಸೋಂಕು ನಿವಾರಕ, ಗಾಳಿ ಶುದ್ಧೀಕರಿಸುವ ಇದು ಮನೆವೈದ್ಯದಲ್ಲಿ ಕೆಮ್ಮು ನೆಗಡಿ ಜ್ವರಗಳಿಗೆ ರಾಮಬಾಣ.
ನವೆಂಬರ್ 6 ರಂದು ರಾಷ್ಟ್ರೀಯ ಒತ್ತಡ ಅರಿವು ದಿನ:
ನಾವು ಕೆಲಸ ಮಾಡುವ ಸ್ಥಳ ಹಾಗೂ ಪ್ರತಿದಿನದ ಜೀವನದಲ್ಲಿ ಪ್ರತಿ ಜೀವಿಯ ಪ್ರತಿಕ್ರಿಯೆಯೇ ಒತ್ತಡ. ಆಧುನಿಕ ಒತ್ತಡ ರೋಗದ ಕಾರಣಗಳು ಹಾಗೂ ಪರಿಹಾರದ ಬಗ್ಗೆ ಅರಿವು ನೀಡಲು, ಆರೋಗ್ಯ ಉತ್ತೇಜಿಸುವ ಹಾಗೂ ಕಾಳಜಿ ಕೊಡುವ ವೃತ್ತಿಪರರು ಪ್ರತಿ ವರ್ಷ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಮನುಷ್ಯರ ಸಂತೋಷದ ಕೊಲೆಗಾರ ಈ ಒತ್ತಡ. ಮಾನವ ಜೀವ ವಿಜ್ಞಾನದಲ್ಲಿ ಒತ್ತಡ, ಆತ್ಮವಿಶ್ವಾಸ ಹಾಗೂ ಕೆಲಸದ ವೇಗ ಹೆಚ್ಚಿಸುತ್ತದೆ. ಆದರೆ ಆಧುನಿಕ ಶೈಲಿಯಲ್ಲಿ ನಮ್ಮನ್ನ ಇದು ಕಾಡುತ್ತಿದೆ. ಒತ್ತಡದ ಕಾಲದಲ್ಲಿ ನಾವು ಮಾಡಬಹುದಾದ ಉತ್ತಮ ಕೆಲಸವೆಂದರೆ ಕಿವಿಗಳು ಹಾಗೂ ಹೃದಯದಿಂದ ಪರಸ್ಪರ ಚೆನ್ನಾಗಿ ಆಲಿಸಿ. ನಮ್ಮ ಪ್ರಶ್ನೆಗಳಷ್ಟೇ ನಮ್ಮ ಉತ್ತರಗಳೂ ಮಹತ್ವದ್ದು ಎಂದು ತಿಳಿಯಿರಿ. ಈ ದಿನ ಜೀವನದ ಒತ್ತಡ ದೂರ ಮಾಡಲು ಒಂದು ಅವಕಾಶ ಎಂದು ತಿಳಿಯಿರಿ. ಒತ್ತಡ ನಿರ್ವಹಣೆ ಉತ್ತೇಜಿಸುವ ಸಂಸ್ಕøತಿ ಸೃಷ್ಟಿಸಿ. ನನಗೆ ಒತ್ತಡವೇ ಇಲ್ಲ ಎಂದು ಮೈಂಡ್‍ಸೆಟ್ ಮಾಡಿಕೊಳ್ಳಿ.
ನವೆಂಬರ್ 7ರಂದು ಶಿಶು ರಕ್ಷಣಾ ದಿನ ಹಾಗೂ ವಿಶ್ವ ಕ್ಯಾನ್ಸರ್ ಜಾಗೃತಿ ದಿನ:-
ನಮ್ಮ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಮೂಲಕ ಗರ್ಭಿಣಿಯರು, ಬಾಣಂತಿಯರು, ಶಿಶುಗಳು ಇವರ ಕಾಳಜಿಗಾಗಿ ಅನೇಕ ಕಾರ್ಯಕ್ರಮಗಳಿವೆ. ಗರ್ಭ ಧರಿಸಿದಾಗಿನಿಂದ ಶಿಶು 3 ವರ್ಷದ ಮಗುವಾಗಿ ಬೆಳೆಯುವವರೆಗೆ ನಿಗದಿತ ಅವಧಿಯಲ್ಲಿ ಲಸಿಕೆಗಳನ್ನು ತಾಯಿ ಹಾಗೂ ಮಗುವಿಗೆ ಕೊಡುವುದರಿಂದ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಮರಣ ದರ ಕಡಿಮೆಯಾಗುತ್ತಿದೆ.
ನಮ್ಮ ದೈನಂದಿಕ ಜೀವನ ಶೈಲಿ, ಸಿಗರೇಟು, ಬೀಡಿಗಳ ಧೂಮ್ರಪಾನ, ವಿವಿಧ ರೂಪಗಳಲ್ಲಿ ತಂಬಾಕು ತಿನ್ನುವುದರಿಂದ ಹಾಗೂ ಮದ್ಯಪಾನದಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಿದರೂ ಇನ್ನೂ ಎಷ್ಟೋ ಜನ – ತಮ್ಮ ದುಡ್ಡು ಹಾಗೂ ತಮ್ಮ ಮೋಜು ತಮ್ಮದು ಎನ್ನುವ ಭಾವನೆ ಹೊಂದಿದ್ದಾರೆ. ಇದರಲ್ಲಿರುವ ಒಂದು ಭಾರೀ ಅಪಾಯವೆಂದರೆ ಪ್ಯಾಸಿವ್ ಸ್ಮೋಕೀಂಗ್. ಅಂದರೆ ಧೂಮ್ರಪಾನ ಮಾಡುವವರÀ ಸುತ್ತಲಿರುವ ಸೇದದ ನಿರಪರಾಧಿ ಜನರಿಗೂ ಈ ಧೂಮ್ರ ಆವರಿಸಿ ಅವರಿಗೂ ಭೀಕರ ಕಾಹಿಲೆ ತರುತ್ತದೆ. ಹೀಗಾಗಿ ನಗರಗಳಲ್ಲಿ, ವಿದೇಶಗಳಲ್ಲಿ ಸ್ಮೋಕಿಂಗ್ ಹಾಗೂ ನಾನು ಸ್ಮೋಕಿಂಗ್‍ವಲಯಗಳನ್ನು ಗುರುತಿಸಲಾಗಿದೆ. ಅಂತಿಮವಾಗಿ ನಮ್ಮ ನಮ್ಮ ಆರೋಗ್ಯ ರಕ್ಷಣೆ ಹಾಗೂ ಇತರರ ಆರೋಗ್ಯ ರಕ್ಷಣೆಗಾಗಿ ನಾವು ಖಂಡಿತ ಧೂಮ್ರಪಾನ ತ್ಯಜಿಸಬಹುದು.
ನವೆಂಬರ್ 8 ರಂದು ವಿಶ್ವ ವಿಕಿರಣ ಶಾಸ್ತ್ರ ದಿನಾಚರಣೆ:
ಕ್ರಿ.ಶ. 1895ರಲ್ಲಿ ಇದೇ ದಿನ, ವಿಲ್‍ಹೆಲ್ಮ್ ಕಾನ್ರಾಡ್ ರಾಂಟ್‍ಜೆನ್, ಕ್ಷಕಿರಣ ಕಂಡು ಹಿಡಿದ ದಿನ. ಗ್ರಂಥಿ ವಿಜ್ಞಾನ ಹಾಗೂ ಕ್ಯಾನ್ಸರ್‍ನ ವೈದ್ಯಕೀಯ ಆಕೃತಿಗೆ ವಿಕಿರಣ ಪರೀಕ್ಷೆ ಮಹತ್ವದ್ದು. ಜನರು ತಮ್ಮ ಕಾಲ ಕಾಲದ ಆರೋಗ್ಯ ತಪಾಸಣೆಗೆ, ಕ್ಷಕಿರಣ ತಜ್ಞರ ಸೇವೆ ಬಳಸಿಕೊಳ್ಳಬೇಕಾಗಿದೆ.
ನವೆಂಬರ್ 14 ವಿಶ್ವ ಗುಣಮಟ್ಟದ ದಿನ
ಸಾಧನೆಗಳನ್ನು ಸಂಭ್ರಮಿಸಿ, ಹೇಗೆ ಗುಣಮಟ್ಟ, ವ್ಯವಸ್ಥೆಗಳು ಹಾಗೂ ಸಂಸ್ಕರಣಾ ಮಾರ್ಗ ಮಾನವ ಜೀವನದ ಮೇಲೆ ಉದ್ಭವಿಸುವ ಪರಿಣಾಮ ಮಾಡಬಲ್ಲದು ಎಂಬುದರ ಬಗ್ಗೆ ಅರಿವು ಮೂಡಿಸುವುದೇ, ವಿಶ್ವ ಗುಣಮಟ್ಟ ದಿನಾಚರಣೆಯ ಉದ್ದೇಶ. ಗುಣಮಟ್ಟ ಎಂದರೆ ಹೊಸ ಶೋಧ ಹಾಗೂ ಕಾಳಜಿ. ಯಾವ ಶೋಧದಿಂದ ಸಮಾಜಕ್ಕೆ, ಪರಿಸರಕ್ಕೆ, ಸುರಕ್ಷತೆ ಹಾಗೂ ನಿರಂತರತೆ, ಸಿಗುವುದೋ, ಎಲ್ಲರಿಗೂ ಉತ್ತಮ ಜೀವನ ಸಿಗುವುದೋ ಅದೇ ಗುಣಮಟ್ಟ. ಈ ನಿಟ್ಟಿನಲ್ಲಿ ಈ ದಿನ ನಾವೆಲ್ಲ ಏನು ಮಾಡಬಹುದು? ಮುಂದಿನ ತಲೆಮಾರಿಗೆ ನೀರಿನ ಪ್ರತಿ ಹನಿ ಉಳಿಸುವೆ, ಮಕ್ಕಳು ಹಾಗೂ ವೃದ್ಧರಿಗೆ ನೆರವು ನೀಡುವೆ, ಹಸಿರು ಸಸಿ ನೆಡುವೆ, ನನ್ನ ಎಲ್ಲ ಸೇವೆಗಳಲ್ಲಿ ಮುಗುಳ್ನಗೆ ಇಡುವೆ, ನನ್ನ ಆಹಂಕಾರ ಇಂದು ನುಂಗುವೆ, ಸೌಹಾರ್ದತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ, ಆಹಾರವನ್ನು ತ್ಯಾಜ್ಯ ಮಾಡೋಲ್ಲ, ಅದನ್ನ ನೈರ್ಮಲ್ಯದ ರೀತಿ ವಿಲೇವಾರಿ ಮಾಡುವೆ, ವಿದ್ಯುಚ್ಛಕ್ತಿ ಉಳಿಸುವೆ, ಕಳ್ಳತನ ಮಾಡೋಲ್ಲ, ಸಾÀರ್ವಜನಿಕ ಸ್ಥಳದಲ್ಲಿ ಉಗುಳೋಲ್ಲ, ಸ್ವಾಭಾವಿಕ ಸೌಂದರ್ಯ ಹಾಳು ಮಾಡೋಲ್ಲ, ಗಲೀಜು ಮಾಡೋಲ್ಲ, ಕಾರ್ಬನ್ ಮೊನಾಕ್ಸೈಡ್ ಹೊರಬೀಳುವಂತೆ ಮಾಡೋಲ್ಲ. ಇದೀಗ ಹೇಳಿದ ಚಟುವಟಿಕೆಗಳನ್ನು ಮಾಡುವುದರಿಂದ, ನಾಳಿನ ಭವಿಷ್ಯ ಉತ್ತಮವಾಗಬಲ್ಲದು.
ನವೆಂಬರ್ 9 ವಿಶ್ವ ಉಪಯುಕ್ತತೆ ದಿನಾಚರಣೆ
ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಕಾಳಜಿ, ಸರಕಾರಿ ಸಂವಹನ, ಮನರಂಜನೆ, ಕೆಲಸಗಳಿಗಾಗಿ ಬಳಸಲು ಪ್ರಯತ್ನಿಸಬೇಕಾಗಿದೆ. ತಂತ್ರಜ್ಞಾನ, ನಮ್ಮ ಜೀವನ ಸುಧಾರಿಸಬೇಕಲ್ಲದೇ, ಅದರಿಂದ ಒತ್ತಡ, ಅಪಾಯ ಸಂಭವಿಸಬಾರದು. ವೈದ್ಯಕೀಯ ತಂತ್ರಜ್ಞಾನ, ಆರೊಗ್ಯ ಸುಧಾರಿಸಬಲ್ಲದು. ಆದರೆ ಅದರ ಬಳಕೆ ಸುಲಭವಾಗಬೇಕು. ಪೂರ್ಣ ಮನುಷ್ಯನನ್ನು ಮನಸ್ಸಿನಲ್ಲಿಟ್ಟುಕೊಂಡ ಸಂಶೋಧನೆ, ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯಪೂರ್ಣ ಆಹಾರ ಪೂರೈಸಬೇಕು.
ನವೆಂಬರ್ 12 ರಂದು ವಿಶ್ವ ನಿಮೋನಿಯಾ ದಿನಾಚರಣೆ
ಎರಡು ಅತ್ಯಂತ ಸಾಮಾನ್ಯ ಆದರೆ ಭಯಂಕರ ನಿಮೋನಿಯಾದ ಅಣುಜೀವಿ ಕಾರಣಗಳಿಗೆ ಪರಿಣಾಮಕಾರಿ ಲಸಿಕೆಗಳಿವೆ. ಹೆಮೋಫಿಲಸ್ ಇನ್‍ಪ್ಲುಯೆಂಝಾ ಬಿ.ತರಹದ್ದು ಹಾಗೂ ಸ್ಟ್ರೆಪ್ಟೋಕೋಕ್ಕುಸ್ ನಿಮೋನಿಯಾ ಹಾಗೂ ಅತಿ ಸಾಮಾನ್ಯ ಸೂಕ್ಷ್ಮಾಣುಜೀವಿಯ ಕಾರಣದ ನಿಮೋನಿಯಾ, ತಡೆಯಬಹುದಾದ, ಚಿಕಿತ್ಸೆಗೊಳಪಡಿಸಬಹುದಾದ ಕಾಹಿಲೆ. ಪ್ರತೀ ವರ್ಷ 5 ವರ್ಷದ ಕೆಳಗಿನ 155 ದಶಲಕ್ಷ ಮಕ್ಕಳನ್ನು ರೋಗಗ್ರಸ್ಥ ಮಾಡಿ, 1.6 ದಶಲಕ್ಷ ಮಕ್ಕಳನ್ನು ಕೊಲ್ಲುತ್ತದೆ. ಏಡ್ಸ್, ಚಳಿಜ್ವರ ಹಾಗೂ ದಢಾರಕ್ಕಿಂತ ಹೆಚ್ಚು ಮಕ್ಕಳನ್ನು ಇದು ಆಹುತಿ ತೆಗೆದುಕೊಳ್ಳುತ್ತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನೆಸ್ಕೋದ ವಿಶ್ವ ಕ್ರಿಯಾ ಯೋಜನೆಯಂತೆÉ, ನಿಮೋನಿಯಾ ತಡೆಯುವಿಕೆ ಹಾಗೂ ಚಿಕಿತ್ಸೆಗಳಿಂದ, 1 ದಶಲಕ್ಷ ಮಕ್ಕಳ ಪ್ರಾಣ ಉಳಿಸಬಹುದು. ನಮ್ಮ ದೇಶದಲ್ಲಿ 6 ದಶಲಕ್ಷ ಮಕ್ಕಳು ಭೀಕರ ಅಪೌಷ್ಠಿಕತೆಯಿಂದ ನರಳುತ್ತಿದ್ದು, 5 ವರ್ಷವಾಗುವ ಮೊದಲೇ, ಆರೋಗ್ಯವಂತ ಮಕ್ಕಳಿಗಿಂತ ಸಾಯುವ ಸಾಧ್ಯತೆಯ ಅಪಾಯ 9 ಪಟ್ಟು ಇದೆ. ಮಕ್ಕಳ ಬಗ್ಗೆ ಯೋಚಿಸಿದಾಗ, ನ್ಯೂಮೋನಿಯಾ 5 ವರ್ಷದ ಒಳಗಿನ ಸುಮಾರು 1.8 ದಶಲಕ್ಷ ಮಕ್ಕಳನ್ನು, ಪ್ರತೀವರ್ಷ ಬಲಿ ತೆಗೆದುಕೊಳ್ಳುತ್ತಿದೆ. ಅತಿ ಭೇದಿ ಹಾಗೂ ನ್ಯೂಮೋನಿಯಾಗಳಿಗೆ ಒಟ್ಟಾಗಿ ಪ್ರತೀವರ್ಷ 3.5 ದಶಲಕ್ಷ ಮಕ್ಕಳು ಬಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಸೋಪಿನಿಂದ ಕೈ ತೊಳೆಯುವುದರಿಂದ ಶೇಕಡಾ 30ರಷ್ಟು ಅತಿಭೇಧಿ ಹಾಗೂ ಶೇಕಡಾ 21ರಷ್ಟು ಉಸಿರಾಟದ ಸೋಂಕುಗಳನ್ನು ಕಡಿಮೆ ಮಾಡಬಹುದು.. ಆಹಾರ ಸೇವಿಸುವ ಮೊದಲು, ಹಾಗೂ ಶೌಚದ ನಂತರ, ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಂಡರೆ, ಯಾವುದೇ ಲಸಿಕೆಗಿಂತ ಹೆಚ್ಚು ಪ್ರಾಣಗಳು ಉಳಿಯುತ್ತವೆ.
ನವೆಂಬರ್ 14ರಂದು ವಿಶ್ವ ಪ್ರತಿ ಜೀವಕ ದಿನ
ನವೆಂಬರ್ 12 ರಿಂದ 18 ಇದೇ ವಿಷಯದ ಸಪ್ತಾಹವಿದೆ, ರೋಗ ನಿರೋಧಕ ಔಷಧಿಗಳು ಅಮೂಲ್ಯ ಸಂಪನ್ಮೂಲ. ಆದರೆ ವಿಶ್ಚದ ಒಂದು ಅತಿ ದೊಡ್ಡ ಹೆದರಿಕೆಯೆಂದರೆ ಇರುವ ರೋಗನಿರೋಧಕ ಪ್ರತಿಜೀವಕಗಳಿಗೆ ಪ್ರತಿರೋಧ ಹೆಚ್ಚುತ್ತಿದೆ. ಇವುಗಳ ಪರಿಣಾಮ ಹಾಗೂ ಆಧ್ಯತೆ ರಕ್ಷಿಸಬೇಕಾಗಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ, ಆಹಾರ ಮತ್ತು ಕೃಷಿ ಸಂಘದ ಸಹಕಾರದೊಂದಿಗೆ, ವಿಶ್ವ ಪ್ರಾಣಿ ಆರೋಗ್ಯ ಸಂಘದೊಂದಿಗೆ ಸೇರಿಕೊಂಡು ವಿಶ್ವ ಪ್ರತಿಜೀವಕ ಅರಿವು ಸಪ್ತಾಹ 2015 ರಿಂದ ಆಚರಿಸುತ್ತಲಿದೆ. ಈ ಪ್ರತಿಜೀವಕ ತೆಗೆದುಕೊಳ್ಳುವ ಮೊದಲು ತಜ್ಞ, ಆರೋಗ್ಯ ಕಾಳಜಿಂiÀ,ು ವೃತ್ತಿಪರ ವ್ಯಕ್ತಿಯ ಸಲಹೆ ಪಡೆದೇ, ಇವುಗಳನ್ನು ತೆಗೆದುಕೊಳ್ಳಬೇಕು. ಇದರಿಂದ ರೋಗಿಗಳಿಗೆ ಉತ್ತಮ ಉಪಚಾರ ಸಿಗುವುದಲ್ಲದೇ, ಪ್ರತಿಜೀವಕಗಳ ಜವಾಬ್ದಾರಿಯುತ ಬಳಕೆಯಿಂದ ಪ್ರತಿಜೀವಕಗಳಿಗೆ ಪ್ರತಿರೋಧದ ಹೆದರಿಕೆ ಕಡಿಮೆಯಾಗುತ್ತದೆ.
ನವೆಂಬರ್ 14ರಂದೇ ವಿಶ್ವ ಮಧುಮೇಹ ದಿನ
2015 ರಲ್ಲಿ 415 ದಶಲಕ್ಷ ವಯಸ್ಕರು ಮಧುಮೇಹಿಗಳಾಗಿದ್ದರೆ, ಈ ಸಂಖ್ಯೆ 2040ರ ಹೊತ್ತಿಗೆ 342 ದಶಲಕ್ಷಕ್ಕೆ ಏರಲಿದ್ದು, ಹತ್ತರಲ್ಲಿ ಒಬ್ಬರಿಗೆ ಮಧುಮೇಹ ಇರುತ್ತದೆ. ಬಹಳ ದೇಶಗಳಲ್ಲಿ ಅಪೌಷ್ಠಿಕತೆ ಹಾಗೂ ಶಾರೀರಿಕ ಚಟುವಟಿಕೆಗಳಿಲ್ಲದಿರುವಿಕೆಯಿಂದ, ಮಕ್ಕಳು ಬಾಲ್ಯದಲ್ಲೇ ಈ ಅಪಾಯಕ್ಕೆ ತುತ್ತಾಗುತ್ತಾರೆ. ನವೆಂಬರ್ 14ರ, ಈ ವರ್ಷದ ವಿಶ್ವ ಮಧುಮೇಹ ದಿನದ ಧ್ಯೇಯವಾಕ್ಯ, ಕುಟುಂಬ ಹಾಗೂ ಮಧುಮೇಹ. ನನ್ನ ಕುಟುಂಬದಲ್ಲಿ ತಂದೆ, ತಾಯಿ, ಹೆಂಡತಿ, ಆಕೆಯ ತಂಗಿ ಮತ್ತು ಅಣ್ಣ-ಅತ್ತಿಗೆ ಹಾಗೂ ಇನ್ನೂ ಅನೇಕ ಬಂಧುಗಳು-ಸ್ನೇಹಿತರು, ಮಧುಮೇಹಿಗಳಾಗಿರುವುದರಿಂದ, ನಾನು ನನ್ನ ತಂದೆ-ತಾಯಿ-ಹೆಂಡತಿಯರ ತಿಂಗಳ ತಪಾಸಣೆ, ವೈದ್ಯಕೀಯ ಉಪಚಾರ, ಇನ್ಸುಲಿನ್-ಮಾತ್ರೆಗಳು, ಆಹಾರ, ಪಥ್ಯ, ಇವುಗಳ ಬಗ್ಗೆ 1985ರಿಂದ, 34 ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿದ್ದೇನೆ. ಮಧುಮೇಹವೆಂದರೆ ಒಬ್ಬ ವ್ಯಕ್ತಿಯ ದೇಹದ ರಕ್ತದಲ್ಲಿಯ ಗ್ಲೂಕೋಸ್ ಪ್ರಮಾಣ ನಿಯಂತ್ರಿಸಲು, ಬೇಕಾದಷ್ಟು ಇನ್ಸುಲಿನ್ ಎಂಬ ಕಿಣ್ವವನ್ನು, ಆ ವ್ಯಕ್ತಿಯ ದೇಹ ಉತ್ಪಾದಿಸಲು ಅಥವಾ ಉತ್ಪಾದಿಸಲಾಗದ ಶಕ್ತಿ. ಮಧುಮೇಹ 1ನೇ ತರಹ ಎಂದರೆ ಪ್ರತಿದಿನ ಚುಚ್ಚುಮದ್ದಿನ ಮೂಲಕ ಕೊಡುವ ಕೃತಕ ಇನ್ಸುಲಿನ್ ಆಧರಿಸಿದ್ದು. ಮಧುಮೇಹ 2ನೇ ತರಹ ಎಂದರೆ ಆಹಾರ ನಿಯಂತ್ರಣ, ಮಾತ್ರೆಗಳು, ಇನ್ಸುಲಿನ್ ಇವುಗಳ ಒಟ್ಟೂ ಬಳಕೆ ಮಾಡಬೇಕಾದ ತರಹದ್ದು, ಮಧುಮೇಹಿಗಳು ತಮ್ಮ ಸ್ಥಿತಿಯ ಒಳ್ಳೆಯ ನಿಯಂತ್ರಣ ಮಾಡಿ, ನಿರ್ವಹಣೆ ಮಾಡಬೇಕು. ಇದರಿಂದ ದೀರ್ಘಕಾಲದ ಜಟಿಲತೆಗಳನ್ನು ತಡೆಯಲು, ಕಡಿಮೆ ಮಾಡಲು ಸಹಾಯವಾಗುತ್ತದೆ ಈ ಜನರೂ ಸಾಮಾನ್ಯ ಜೀವನ ನಡೆಸುವಂತೆ ಜನರನ್ನು ಉತ್ತೇಜಿಸಬೇಕಾಗಿದೆ. ಸದ್ಯ 425 ದಶಲಕ್ಷ ಜನ ಮಧುಮೇಹದೊಂದಿಗೆ ಬದುಕುತ್ತಿದ್ದು, ಇವರಲ್ಲಿ ಹೆಚ್ಚಿನವರು, ಮಧುಮೇಹ 2ನೇ ತರಹದ ಗುಂಪಿಗೆ ಸೇರಿದವರು. ಮಧುಮೇಹದ ನಿರ್ವಹಣೆ ಪ್ರತಿನಿತ್ಯದ್ದು. ಪ್ರತಿದಿನದ ಉಪಚಾರ, ಸತತ ಗಮನಿಸುವಿಕೆ, ಆರೋಗ್ಯಕರ ಆಹಾರ, ಜೀವನಶೈಲಿ, ಸತತ ಈ ಬಗ್ಗೆ ಶಿಕ್ಷಣ ಪಡೆಯುವಿಕೆ, ಇವುಗಳಿಂದ ಕುಟುಂಬದ ಮೇಲೆ ಹೆಚ್ಚಿನ ಖರ್ಚು, ಆ ಮೂಲಕ ಆರ್ತಿಕ ಒತ್ತಡ ಬೀಳುತ್ತದೆ. ಪ್ರತಿ ವ್ಯಕ್ತಿ ಹಾಗೂ ಕುಟುಂಬಕ್ಕೆ ಈ ಔಷಧಿ ಹಾಗೂ ಕಾಳಜಿ, ಕಡಿಮೆ ಖರ್ಚಿನಲ್ಲಿ ಸಿಗಬೇಕೆಂಬುದೇ ಧ್ಯೇಯವಾಗಿದೆ.
ಇದೇ ತಿಂಗಳು ಮಧುಮೇಹದಿಂದ ಬರುವ ಕಣ್ಣಿನ ಕಾಳಜಿ ಮಾಸವೂ ಆಗಿದೆ. ಇಬ್ಬರಲ್ಲಿ ಒಬ್ಬರಿಗೆ, ತಮಗಿರುವ ಮಧುಮೇಹದ ಬಗ್ಗೆ ಗೊತ್ತೇ ಇಲ್ಲ. ಮಧುಮೇಹಿಗಳೀಗೆ ಬರಬಹುದಾದ ಕಣ್ಣಿನ ರೆಟಿನಾ ಅಥವ ಅಕ್ಷಿಪಟ ಕಾಹಿಲೆ ಪ್ರಮುಖ. ಅವರ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಕಣ್ಣಿನ ರೆಟಿನಾ ಅಥವಾ ರಕ್ತನಾಳಗಳ ಮೇಲೆ ಇದರ ಪರಿಣಾಮಬಾಗುತ್ತದೆ. ಹೀಗಾಗಿ ಇವರು ಕಣ್ಣು ಕಳೆದುಕೊಳ್ಳುವ ಭಯವಿದೆ. ಅಧಿಕ ರಕ್ತದೊತ್ತಡದೊಂದಿಗೆ, ರಕ್ತನಾಳಗಳಲ್ಲಿ ರಕ್ತ ಸಂಚಾರವಾದರೆ, ಹೆಚ್ಚಿನ ಕಾಲ ರಕ್ತನಾಳಗಳು ಸಹಿಸಿಕೊಳ್ಳವು. ಅಧಿಕ ಕೊಲೆಸ್ಟರಾಲ್ ಇದ್ದರೆ, ಅಪಧಮನಿಗಳ ರಕ್ತನಾಳಗಳನ್ನು ಮುಚ್ಚುವುದು ಮತ್ರವಲ್ಲದೇ, ಕಣ್ಣು ಸಹಿತ ದೇಹದ ಇತರ ಭಾಗಗಳಲ್ಲಿಯ ರಕ್ತನಾಳಗಳನ್ನು ಕೂಡ ಮುಚ್ಚಬಹುದು.
ಡಯಾಬಿಟಿಕ್ ರೆಟಿನೋಪತಿ (ಮಧುಮೇಹದ ಅಕ್ಷಿಪಟ ಕಾಹಿಲೆ) :
ಈ ಕಾಹಿಲೆ ಒಂದು ಮಟ್ಟಕ್ಕೆ ಬಂದರೆ ಮಾತ್ರ ತಿಳಿಯುತ್ತೆ. ದೃಷ್ಟಿ ಮಂದವಾಗಿ, ದೃಷ್ಟಿಯ ಕ್ಷೇತ್ರದಲ್ಲಿ ಏರಿಳಿತವಾಗುತ್ತದೆ. ದೃಷ್ಟಿಯ ಕ್ಷೇತ್ರದಲ್ಲಿ ಕಡುಕಪ್ಪು ಬಣ್ಣದÀ ಕಲೆಗಳು ಕಾಣಿಸಿಕೊಳ್ಳುವುದು. ಕಣ್ಣಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಹೀಗಾಗುತ್ತದೆ. ಆಗ ಕಣ್ಣು ಕಾಣಿಸದೇ ಬಣ್ಣದ ದೃಷ್ಟಿದೋಷ, ದೃಷ್ಟಿದೋಷ ಉಂಟಾಗುತ್ತದೆ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ಮಧುಮೇಹ ವಿಧದವರಿಗೆ ಇದು ಬರುವ ಸಾಧ್ಯತೆ ಶೇಕಡಾ 80 ರಷ್ಟು. ಕಾಲಕಾಕಾಲಕ್ಕೆ ಕಣ್ಣಿನ ತಪಾಸಣೆ ಹಾಗೂ ಸರಿಯಾದ ಚಿಕಿತ್ಸೆಯಿಂದ, ಶೇಕಡಾ 90ರಷ್ಟು ಹೊಸ ರೋಗಿಗಳ ಸಂಖ್ಯೆ ಕಡಿಮೆಯಾಗಬಲ್ಲದು.ಮಧುಮೇಹ ಒಂದನೇ ತರಹವಿರುವ ಮಹಿಳೆಯರಿಗೆ ಗರ್ಭಪಾತ ಹಾಗೂ ಅಂಗವಿಕಲತೆಯ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚು.
ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡಲು ಚಾಚಾ ನೆಹರೂ ಕರೆ ನೀಡಿದ್ದಂತೆ, ನಮ್ಮ ದೇಶದಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆ. ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನ ಅವರ ಪ್ರತಿಭಾ ಪ್ರದರ್ಶನ ಇವುಗಳಿಂದ ಮಕ್ಕಳನ್ನು ಉತ್ತೇಜಿಸುವÀ ಚಟುವಟಿಕೆಗಳು ಅಂದು ನಮ್ಮ ದೇಶದಾದ್ಯಂತ ನಡೆಯುತ್ತವೆ. ಅಂದೇ ವಿಶ್ವ ಮಕ್ಕಳ ದಿನಾಚರಣೆ. ಮಕ್ಕಳ ಆವಶ್ಯಕತೆಗಳ ಬಗೆಗಿನ ಗುರಿಗಳನ್ನು ಸಾಧಿಸಲು, ಯುನೆಸ್ಕೋ ಸಂಕಲ್ಪ ಮಾಡಿದೆ. ಮಕ್ಕಳ ಉತ್ತಮ ಆರೋಗ್ಯ ರಕ್ಷಣೆ ಹಾಗೂ ಲಸಿಕೆಗಳನ್ನು ಪೂರೈಸಿ, ದುರ್ಬಳತೆ, ಶೋಷಣೆ, ವ್ಯತ್ಯಾಸಗಳೆಂಬ ಹಿಂಸೆಗೆ ಬಲಿಯಾದ ಮಕ್ಕಳ ಬಗ್ಗೆ, ವಿಶ್ವದಲ್ಲಿ ಅರಿವು ಮೂಡಿಸುವ ಉದ್ದೇಶ ಇಲ್ಲಿದೆ. ಮಕ್ಕಳ ಮೇಲಿನ ಹಿಂಸೆ ನಿಲ್ಲಿಸಬೇಕೆಂಬುದೇ ಇಲ್ಲಿಯ ಗುರಿ. 1999ರ ವಿಶ್ವ ಕಾರ್ಮಿಕ ಸಂಘ, ಬಾಲ ಕಾರ್ಮಿಕರು, ದಾಸ್ಯ, ಬಾಲ ವೇಶ್ಯೆಯರು, ಮಕ್ಕಳ ಲೈಂಗಿಕ ಚಿತ್ರ ತಯಾರಿಕೆ ಹಾಗೂ ವೀಕ್ಷಣೆ, ಇವುಗಳ ನಿವಾರಣೆ ಹಾಗೂ ತಡೆಯುವಿಕೆಯ ಮಂತ್ರ ಘೋಷಿಸಿದೆ.
ನವೆಂಬರ್ 17ರಂದು ವಿಶ್ವ ಅಕಾಲಿಕ ಜನನದ ದಿನ
ವಿಶ್ವದಾದ್ಯಂತ ಅವಧಿಪೂರ್ವ ಮಕ್ಕಳ ಜನನ ಹೆಚ್ಚುತ್ತಿದೆ. ವಿಶ್ವ ಸಂಸ್ಥೆ ಪ್ರಕಾರ ಪ್ರತಿವರ್ಷ ಅವಧಿಪೂರ್ವ, ಅಂದರೆ 3 ವಾರಗಳಿಗಿಂತ ಮೊದಲು 15 ದಶಲಕ್ಷ ಶಿಶುಗಳು ಜನಿಸುತ್ತವೆ. 5 ವರ್ಷದ ಕೆಳಗಿನ ಮಕ್ಕಳ ಸಾವಿನ ಕಾರಣಗಳಲ್ಲಿ ಇದೊಂದು ಮುಖ್ಯ ಕಾರಣವಾಗಿದೆ. ಇಂಥ ಮಕ್ಕಳನ್ನು ಪಡೆದ ಪಾಲಕರು ಹಾಗೂ ಕುಟುಂಬ ಎದುರಿಸುವ, ಭಾವನಾತ್ಮಕ ಹಾಗೂ ಹಣಕಾಸಿನ ಅನಿರೀಕ್ಷಿತ ಆಹ್ವಾನಗಳು, ಈ ಸಂದರ್ಭದಲ್ಲಿ ಬೇಕಾದ ತುರ್ತು ಹಾಗೂ ಮುಖ್ಯ ವೈದ್ಯಕೀಯ ಕಾಳಜಿ ಬಗ್ಗೆ ಈ ದಿನದ ಆಚರಣೆ ಒತ್ತಿ ಹೇಳುತ್ತವೆ. ಹೀಗೆ ಹುಟ್ಟಿದ ಮಕ್ಕಳು ಸಾಮಾನ್ಯವಾಗಿ ಜನಿಸಿದ ಮಕ್ಕಳಿಗಿಂತ, ಮೆದುಳು, ಪುಪ್ಪುಸ, ಶ್ರವಣಶಕ್ತಿ ಹಾಗೂ ದೃಷ್ಟಿ ಸಮಸ್ಯೆಗಳನ್ನು ಹೆಚ್ಚು ಎದುರಿಸುತ್ತವೆ. ಬಸಿರಿನಲ್ಲಿ 37 ವಾರಗಳಿಗಿಂತ ಮೊದಲು ಜನಿಸಿದ ಮಕ್ಕಳು, ಕಡಿಮೆ ತೂಕ ಹೊಂದಿದ್ದು, ಜೀವನಪರ್ಯಂತ ಅಶಕ್ತತೆ, ಅಂಗವಿಕಲತೆ, ಕಲಿಯುವ ವಿಕಲತೆಗಳಿಂದ ಒದ್ದಾಡುತ್ತವೆ. ಕಡಿಮೆ ತೂಕದ ಮಕ್ಕಳು ಹಾಗೂ ಅಕಾಲಿಕ ಜನನವಾದ ಮಕ್ಕಳ ಕಾಳಜಿಗೆ ಅವರಿಗೆ ಉಣಿಸುವುದು, ಕೋಣೆಯ ತಾಪಮಾನ ನಿರ್ವಹಣೆ, ಶುದ್ಧ ಹೊಕ್ಕಳು ಹಾಗೂ ಚರ್ಮ ಕಾಳಜಿ, ಸೋಂಕುಗಳು, ಉಸಿರಾಟದ ಅಪಾಯದ ಲಕ್ಷಣಗಳು ಹಾಗೂ ಜಟಿಲತೆಗಳ ಶೀಘ್ರ ಪತ್ತೆ ಹಾಗೂ ಚಿಕಿತ್ಸೆ, ಇವುಗಳನ್ನು ಪೂರೈಸಿದಾಗ, ಶಿಶುಗಳ ಮರಣದರ ಸಾಕಷ್ಟು ಕಡಿಮೆ ಆಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಕಾಂಗರೂ ತಾಯಿ ಕಾಳಜಿ ಎಂಬ ವಿಧಾನ ಪ್ರಚಾರ ಮಾಡ ಬಯಸಿದೆ. ಆಸ್ವತ್ರೆ ಅಧ್ಯಯನಗಳ ಪ್ರಕಾರ, 2 ಕಿಲೋಗ್ರ್ಯಾಂಗಳಿಗಿಂತ ಕಡಿಮೆ ತೂಕದ, ಅಕಾಲಿಕ ಜನನದ ಶಿಶುಗಳಿಗೆ, ಪದೇ ಪದೇ ತಾಯಿ ಮೊಲೆಹಾಲು ಕುಡಿಸುವುದು, ತಾಯಿಯೊಂದಿಗೆ ಚರ್ಮ-ಚರ್ಮದ ಸಂ¥, ತಾಯಿ-ಶಿಶುವಿನ ಜೋಡಿ, ಇವುಗಳಿಂದ ಶಿಶು ಮರಣ ಕಡಿಮೆಯಾಗುತ್ತದೆ. ಸೂಲಗಿತ್ತಿ ನೇತ್ರತ್ವದ ಸತತ ಕಾಳಜಿಯಿಂದ, ಗರ್ಭಿಣಿ-ನವಜಾತ ಶಿಶು-ಬಾಣಂತಿ, ಹೀಗೆ ಎಲ್ಲ ಹಂತಗಳಲ್ಲೂ ಮುಂದುವರೆದಾಗ, ಈ ಸಮಸ್ಯೆ ಕಡಿಮೆಯಾಗಲಿದೆ.
ಇದೇ 19ರಂದು ವಿಶ್ವ ಪುರುಷರ ದಿನ
ಲಿಂಗ ಸಮತೋಲನಕ್ಕೆ ಇದೊಂದು ಉತ್ತಮ ವಿಚಾರ. ಈ ಆಚರಣೆಯ ಮುಖ್ಯ ಉದ್ದೇಶ, ಗಂಡಸರು ಹಾಗೂ ಹುಡುಗರ ಆರೋಗ್ಯದ ಮೇಲೆ ಕೇಂದ್ರೀಕರಣ, ಲಿಂಗ ಸಂಬಂಧಗಳ ಸುಧಾರಣೆ, ಲಿಂಗ ಸಮಾನತೆಗೆ ಉತ್ತೇಜನ, ಪುರುಷ ಪಾತ್ರ ಮಾದರಿಗಳನ್ನು ಜನಪ್ರಿಯಗೊಳಿಸುವುದು. ಈ ತಿಂಗಳಲ್ಲಿ ಮೊವೆಂಬರ್ ಎಂಬ ವಾರ್ಷಿಕ ಆಚರಣೆಯಿದ್ದು, ಆಗ ಪುರುಷರ ಆರೋಗ್ಯ ವಿಷಯಗಳಾದ ಪ್ರಾಸ್ಟೇಟ್ ಕ್ಯಾನ್ಸರ್, ತರಡು ಬೀಜದ ಕ್ಯಾನ್ಸರ್, ಖಿನ್ನತೆ ಹಾಗೂ ಪುರುಷರ ಆತ್ಮಹತ್ಯೆ, ಕ್ಯಾನ್ಸರನ್ನು ಬೇಗ ಪತ್ತೆ ಹಚ್ಚಿ, ತಪಾಸಣೆ ಮಾಡಿ ಪರಿಣಾಮಕಾರಿ ಚಿಕಿತ್ಸೆ ನೀಡಿ, ತಡೆಯಬಹುದಾದ ಸಾವನ್ನು ತಡೆಯುವುದು ಈ ಆಚರೆಣೆಯ ಗುರಿ.ಇವುಗಳ ಬಗ್ಗೆ ಅರಿವು ಮೂಡಿಸಲು ಮೀಸೆ ಬೆಳೆಸುವ ಸಾಂಕೇತಿಕ ಕಾರ್ಯಕ್ರಮ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‍ಗಳಲ್ಲಿ ನಡೆಯುತ್ತದೆ.
19ರಂದೇ ರಸ್ತೆ ಸಂಚಾರದಲ್ಲಿ ಬಲಿಯಾದವರ ವಿಶ್ವ ಸ್ಮರಣಾ ದಿನ.
ನಾವು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ದಾಟುವಾಗ, ಸಂಚಾರಿ ನಿಯಮಗಳನ್ನು ಪಾಲಿಸಬೇಕು. ದಟ್ಟಣೆಯ ಅವಧಿಯಲ್ಲಿ, ಸಿಗ್ನಲ್‍ಗಳ ಬಳಿ, ಒಮ್ಮುಖ ಸಂಚಾರಿ ರಸ್ತೆಯಲ್ಲಿ ನಾವು ಅತ್ಯಂತ ಧಾಡಸಿತನದಿಂದ ವೇಗವಾಗಿ ಚಲಿಸಿದರೆ, 18 ವರ್ಷಕ್ಕಿಂತ ಕಡಿಮೆ ಮಕ್ಕಳು ಚಾಲನಾ ಪರವಾನಿಗೆಯಿಲ್ಲದೇ ವಾಹನ ನಡೆಸಿದರೆ, ಅಪಘಾತ ಖಂಡಿತ.
ವಿದೇಶಗಳಲಿ,್ಲ ಆಲ್‍ಝೈಮರ್ಸ್ ಕಾಹಿಲೆ, ರೋಗಿಯ ರಕ್ತ ನಿರ್ವಹಣೆ, ಮೂತ್ರಾಶಯ ಆರೋಗ್ಯ, ಹೊಟ್ಟೆ ಅರ್ಬುದ ರೋಗ, ಪುಪ್ಪಸದ ಶ್ವಾಸಕೋಶದ ತಡೆ, ಮಧುಮೇಹದಿಂದಾಗುವ ಕಣ್ಣಿನ ರೋಗದ ಅರಿವು, ಕುಟುಂಬ ಕಾಳಜಿ ಕೊಡುವವರು, ರಾಷ್ಟ್ರೀಯ ಆರೋಗ್ಯಕರ ಚರ್ಮ ಮಾಸ, ರಾಷ್ಟ್ರೀಯ ಮನೆ ಕಾಳಜಿ ಹಾಗೂ ವಿಶ್ವಾಂತಿ, ಪುಪ್ಪಸ ಕ್ಯಾನ್ಸರ್, ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್, ಲೈಂಗಿಕ ಆರೋಗ್ಯ ಇವೆಲ್ಲವುಗಳ ಕಾಳಜೆ ಹಾಗೂ ಅರಿವಿನ ಚಟುವಟಿಕೆಗಳ ಮಾಸವಾಗಿದೆ ಈ ನವೆಂಬರ್.
ನವೆಂಬರ್ 19ರಂದು ವಿಶ್ವ ಶೌಚಾಲಯ ದಿನ
ನಮ್ಮ ದೇಶದಲ್ಲಿ ಹಿಂದಿನಿಂದ ಹಳ್ಳಿಗಳಲ್ಲಿ ಹಾಗೂ ಹಿಂದಿನ ತಲೆಮಾರಿನವರಲ್ಲಿ ಇರುವ ಮೂಢನಂಬಿಕೆ ಹಾಗೂ ಆರೋಗ್ಯ ರಕ್ಷಣೆಯ ಅರಿವಿನ ಕೊರತೆಯಿಂದ, ಬಯಲು ಮಲ ವಿಸರ್ಜನೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ಅನೇಕ ವರ್ಷಗಳಿಂದ ಸರಕಾರ ಹಾಗೂ ಸ್ವಯಂ ಸೇವಾ ಸಂಘಗಳ ಮಟ್ಟದಲ್ಲಿ ಈ ಬಗ್ಗೆ ಅರಿವು ನೀಡುತ್ತಾ, ಶೌಚಾಲಯ ಕಟ್ಟಲು ಗ್ರಾಮಗಳಲ್ಲಿ ಜನರಿಗೆ ವಿಶೇಷ ಸೌಲಭ್ಯಗಳನ್ನೂ ಧನ ಸಹಾಯವನ್ನೂ ನೀಡಲಾಗುತ್ತಿದೆ. ವಿಶೇಷವಾಗಿ ಮನೆಯಲ್ಲಿ ಶೌಚಾಲಯವಿಲ್ಲದಿದ್ದರೆ ಬಯಲಿಗೆ ಹೋಗಲು ಮಹಿಳೆಯರು, ಬಸುರಿಯರು, ಬಾಣಂತಿಯರಿಗೆ ಅಪಾರ ನೋವು, ಸಂಕಟ ಉಂಟಾಗುತ್ತಿತ್ತು. ಕತ್ತಲಿರುವಾಗಲೇ ಬೆಳಗಿನ ಜಾವ ಅಥವಾ ರಾತ್ರಿ ಬಯಲಿಗೆ ಹೋಗುವಾಗ ಅನೇಕ ಮಹಿಳೆಯರಿಗೆ ಹಾವು, ಚೇಳು ಕಚ್ಚಿ ಅಥವ ಅವರು ಕತ್ತಲಿನಲ್ಲಿ ಎಡವಿ ಬಿದ್ದು ನೋವು, ಸಾವು ಅನುಭವಿಸುತ್ತಿದ್ದವರ ಅಸಂಖ್ಯಾತ ಅನುಭವಗಳನ್ನು ಕೇಳಿದ್ದೇವೆ. ಈಗ ಭಾರತ ದೇಶದಾದ್ಯಂತ ಸ್ವಚ್ಛತಾ ಅಭಿಯಾನದ ಪ್ರಕಾರ ಬಾಗಿಲು ಮುಚ್ಚು ಎಂಬ ಪ್ರೇರಣಾ ಚಟುವಟಿಕೆಯಿಂದ ಜನ ಜಾಗೃತರಾಗಿ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಂಡು ಅದರೊಳಗೆ ಶೌಚ ಕಾರ್ಯ ಮುಗಿಸಿ ಸ್ವಚ್ಛತೆಯ ರಾಯಭಾರಿಗಳಾಗುತ್ತಿದ್ದಾರೆ. ಬಯಲು ಮಲವಿಸರ್ಜನೆಯಿಂದ ಜಂತು ಹುಳುಗಳು, ಮಲ ಮೂತ್ರಗಳ ಸೋಂಕಿನಿಂದ ಹರಡುವ ಕಾಹಿಲೆಗಳು, ನೈರ್ಮಲ್ಯತೆಯ ಅನುಷ್ಠಾನವಾಗದಿದ್ದರೆ ಕುಡಿಯುವ ನೀರಿನೊಂದಿಗೆ ಒಳಚರಂಡಿ ನೀರು ಬೆರೆತು ನೂರಾರು ಜನರಿಗೆ ವಾಂತಿ, ಭೇಧಿ, ನೋವು, ಸಾವು ಉಂಟಾಗುತ್ತದೆ. ಈ ಬಗ್ಗೆ ಕಲಿತವರು, ಅನುಭವಸ್ಥರು ಇತರರಿಗೆ ಸ್ವಚ್ಛತೆಯ ಸಂದೇಶ ಸಾರಬೇಕಾಗಿದೆ.
ನವೆಂಬರ್ ತಿಂಗಳಿನಲ್ಲಿ ವಿವಿಧ ಕಾಹಿಲೆಗಳ ಬಗ್ಗೆ ಅರಿವು ನೀಡುವ ಮಾಸಾಚರಣೆ ವಿಶ್ವದಾದ್ಯಂತ ಜರುಗಲಿದೆ. ನವೆಂಬರ್ ಮೂತ್ರಕೋಶ ಅರಿವು ಮಾಸವೂ ಆಗಿದೆ: ಮೂತ್ರಕೋಶದ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ನೀಡುವ ಮಾಸವಿದು. ಮೂತ್ರಶಾಸ್ತ್ರ ಕಾಳಜಿ ಪ್ರತಿಷ್ಠಾನ ಈ ವಿವರಗಳನ್ನು ಜನರಿಗೆ ಪ್ರಸಾರ ಮಾಡಲಿದೆ. ಈ ಬಗ್ಗೆ ನೀವು ತಿಳಿಯಲೇಬೇಕಾದ್ದು. ಮೂತ್ರಕೋಶ ಟೊಳ್ಳಾದ, ಬಲೂನ್ ಆಕೃತಿಯ ಅಂಗವಾಗಿದ್ದು, ಮಾಂಸಖಂಡಗಳಿಂದ ಮಾಡಲ್ಪಟ್ಟಿದೆ. ಮೂತ್ರಕೋಶ ಖಾಲಿ ಇದ್ದಾಗ, ಗಾಳಿ ತೆಗೆದ ಬಲೂನಿನಂತಿದ್ದು, ತುಂಬಿದಾಗ ಆಕೃತಿ ಬದಲಾಗುತ್ತದೆ. ಸರಾಸರಿಯಾಗಿ ಮೂತ್ರಕೋಶ 2 ಕಪ್ ಮೂತ್ರ ಹಿಡಿದಿಡಬಲ್ಲದು. ಮೂತ್ರವು ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗಿ ಮೂತ್ರನಾಳಗಳ ಮೂಲಕ ಮೂತ್ರಕೋಶಕ್ಕೆ ಬರುತ್ತದೆ. ದಿನದಲ್ಲಿ 4 ರಿಂದ 8 ಬಾರಿ, ರಾತ್ರಿ 2 ಬಾರಿ ಮೂತ್ರ ವಿಸರ್ಜನೆ ಸಾಮಾನ್ಯ. ಮಹಿಳೆಯರ ಮೂತ್ರನಾಳಗಳು ಪುರುಷರಿಗಿಂತ ಚಿಕ್ಕವು. ಇವರಿಗೆ ಮೂತ್ರಕೋಶದ ಸೋಂಕು ಬರುವ ಸಂಭವ ಹೆಚ್ಚು. ದೇಹದ ಹೊರಗಿನ ಅಣುಜೀವಿಗಳು, ಮಹಿಳೆಯರ ಮೂತ್ರ ವಿಸರ್ಜನೆ ವ್ಯವಸ್ಥೆಯಲ್ಲಿ, ಸುಲಭವಾಗಿ ದೇಹದ ಒಳ ಹೊಕ್ಕುತ್ತವೆ. ಮೂತ್ರಕೋಶದ ಸ್ನಾಯುಗಳು ಮೂತ್ರ ಹೊರಹಾಕಲು ಹಿಂಡಿ ಮೂತ್ರ ವಿಸರ್ಜನೆಗೆ ನೆರವು ನೀಡುತ್ತವೆ.
ಇದರ ಆರೋಗ್ಯ ರಕ್ಷಣಾ ಸೂತ್ರಗಳು
ಸಾಕಷ್ಟು ನೀರು ಕುಡಿಯಿರಿ. ಪ್ರತಿದಿನ 6ರಿಂದ 8 ಲೋಟ ನೀರು ಕುಡಿಯಿರಿ.
ಕೆಫಿನ್ ಹಾಗೂ ಮದ್ಯಸಾರ ಪೇಯಗಳನ್ನು ತೀರ ಕಡಿಮೆ ಮಾಡಿ. ಕಾಫಿ-ಟೀ-ಕೋಲಾಗಳು ಮೂತ್ರಕೋಶದ ಚಟುವಟಿಕೆ ಹೆಚ್ಚು ಮಾಡಿದಾಗ, ಮೂತ್ರ ಸೋರಬಹುದು.
ಮಹಿಳೆಯರು ಕೆಳಗೆ ಕುಳಿತೇ ಮೂತ್ರ ವಿಸರ್ಜಿಸಬೇಕು. ಶೌಚಾಲಯದ ಆಸನದ ಮೇಲೆ ತೂಗಾಡಬೇಡಿ.
ಮೂತ್ರ ವಿಸರ್ಜಿಸುವಾಗ ನಿಧಾನವಾಗಿ, ಮೂತ್ರಕೋಶ ಖಾಲಿಯಾಗುವವರೆಗೆ ವಿಸರ್ಜಿಸಿ. ಅವಸರ ಪಟ್ಟರೆ ಅದು ಖಾಲಿಯಾಗದೇ, ಹಾಗೇ ಮುಂದುವರೆಸಿದರೆ, ಕ್ರಮೇಣ ಮೂತ್ರಕೋಶದ ಸೋಂಕಾಗಬಹುದು.
ಮೂತ್ರಕೋಶದ ಮೇಲೆ ಪರಿಣಾಮ ಮಾಡುವ ಆಹಾರಗಳನ್ನು ತ್ಯಜಿಸಿ. ಕೆಫಿನ್ ಮೂಲವಾಗಿರುವ ಚಾಕಲೇಟ್, ಮಸಾಲೆ ಹಾಗೂ ಆಮ್ಲದ ಆಹಾರಗಳು, ಹೆಚ್ಚು ಟಮೋಟೋ ಹಾಗೂ ಹುಳಿ ಹಣ್ಣುಗಳನ್ನು ಬಿಡಿ.
ಸೊಂಟ ಅಥವಾ ಕಿಬ್ಬೊಟ್ಟೆಯ ತೊಟ್ಟಿಲ ಸ್ನಾಯುಗಳನ್ನು ತರಬೇತಿ ಮೂಲಕ ಬಲಪಡಿಸಿ.
ಧೂಮ್ರಪಾನ ನಿಲ್ಲಿಸಿ. ತಂಬಾಕು ಸೇವನೆ ಮೂತ್ರಕೋಶದ ಅರ್ಬುದ ರೋಗಕ್ಕೆ ಮೂಲ.
ಪ್ರತಿವರ್ಷ ನವೆಂಬರ್ ತಿಂಗಳ 3ನೆ ಗುರುವಾರದಂದು ಅಮೇರಿಕಾ ಕ್ಯಾನ್ಸರ್ ಸೊಸೈಟಿಯು ಜನರನ್ನು ಧೂಮಪಾನ ಮಾಡುವುದನ್ನು ಬಿಡಲು ಜನರಿಗೆ ಪ್ರೇರಣೆ ಹಾಗೂ ಆಹ್ವಾನ ಕೊಡುತ್ತಿದೆ. ಈ ವರ್ಷ ನವೆಂಬರ್ 21ರಂದು ಈ ವಾರ್ಷಿಕ ಕಾರ್ಯಕ್ರಮ ಜರುಗುತ್ತಿದೆ. ಇಂದು ಅಮೇರಿಕಾದಲ್ಲಿ ಸುಮಾರು 40 ದಶಲಕ್ಷ ಜನ ಧೂಮ್ರಪಾನ ಮಾಡುತ್ತಿದ್ದಾರೆ. ಆ ದೇಶದಲ್ಲಿ ಆಯಸ್ಸಿಗೆ ತೀರುವ ಮೊದಲೇ ಸಾಯಲು ಕಾರಣವಾಗಿರುವ ಮುಖ್ಯ ಕಾರಣ ತಂಬಾಕು ಆಗಿದೆ. ಇದನ್ನು ಪ್ರತಿಬಂಧಿಸಿದರೆ ಸಾವಿನ ಸಂಖ್ಯೆ ಖಂಡಿತ ಕಡಿಮೆಯಾಗುವುದು ಎಂಬ ನಂಬಿಕೆ ಈ ಸಂಸ್ಥೆಯದ್ದು. ನಮ್ಮ ದೇಶದಲ್ಲೂ ಆಕಸ್ಮಿಕ ಸಾವು, ನೋವು ದೇಹದ ಅಂಗಾಂಗಳ ವಿರೂಪತೆ ಇವುಗಳಿಗೆ ತಂಬಾಕೇ ಕಾರಣವಾಗಿದೆ. ನಾನು ನಮ್ಮ ಆಧುನಿಕ ಅಸುರರು ಎಂಬ ನಾಟಕದಲ್ಲಿ ತಂಬಾಕಿನ ಚಟದ ಆಕರ್ಷಣೆ, ಚಟದಿಂದ ಚಟ್ಟಕ್ಕೇರುವ ಪರಿಣಾಮಗಳ ಬಗ್ಗೆ, ವಿವರವಾಗಿ ನಿರೂಪಿಸಿದ್ದೇನೆ. ಇದರಲ್ಲಿ ತಂಬಾಕಾಸುರ, ಧೂಮ್ರಾಸುರ, ಗುಟ್ಕಾಸುರ ಜೊತೆಗೆ ಜನರಿಗೆ ಈ ಚಟಗಳಿಗೆ ಆಮೀಷ ನೀಡುವ ದೆವ್ವ ಹಾಗೂ ಪಿಶಾಚಿಗಳನ್ನು ಪಾತ್ರಗಳನ್ನಾಗಿಸಿದ್ದೇನೆ. ವಿಶೇಷವಾಗಿ ಯುವಜನತೆ ತಂಬಾಕಿನ ಹಿಡಿತದಿಂದ ದೂರವಾಗಬೇಕೆಂಬುದೇ ನಾಟಕಕಾರ, ನಟ ಹಾಗೂ ನಿರ್ದೇಶಕನಾದ ನನ್ನ ಕನಸು.
ನವೆಂಬರ್ 18ರಂದು ಬಾಯಿ ಕ್ಯಾನ್ಸರ್ ಅರಿವಿನ ದಿನ
ಇದೊಂದು ಅಂತರ್ ರಾಷ್ಟ್ರೀಯ ಸಮಸ್ಯೆಯಾಗಿದೆ. ಉದಾಹರಣೆಗೆ ಐರ್ ಲ್ಯಾಂಡ್ ನಲ್ಲಿ ಪ್ರತಿವರ್ಷ ಬಾಯಿ, ತಲೆ ಹಾಗೂ ಕುತ್ತಿಗೆಯ ಕ್ಯಾನ್ಸರ್‍ನ 700 ರೋಗಿಗಳು ಕಂಡು ಬರುತ್ತಾರೆ. ಇವರಲ್ಲಿ 400ಕ್ಕಿಂತ ಹೆಚ್ಚು ಜನರಲ್ಲಿ ಕ್ಯಾನ್ಸರ್, ಜನರ ಬಾಯಿ, ಗಂಟಲು ಹಾಗೂ ಧ್ವನಿಪೆಟ್ಟಿಗೆಗಳನ್ನು ಆವರಿಸಿ, ಆ ಜನರಿಗೆ ತಿನ್ನಲು ಕುಡಿಯಲು ಆಗದೇ, ಮಾತನಾಡಲೂ ಸಾಧ್ಯವಾಗದ ಪರಿಸ್ಥಿತಿ. ನಮ್ಮ ದೇಶದಲ್ಲೂ ಜನರ ಬೀಡಿ, ಸಿಗರೇಟು ಸೇದುವಿಕೆ, ಖೈನಿ, ತಂಬಾಕು ತಿನ್ನುವಿಕೆ ಬಾಯಿ, ಗಂಟಲು ಹಾಗೂ ಧ್ವನಿಪೆಟ್ಟಿಗೆಗಳನ್ನು ನಾಶಗೊಳಿಸುವ ದ್ಯೆತ್ಯನಾಗಿದೆ. ಈ ಚಟಕ್ಕೆ ತುತ್ತಾದ ಅನೇಕ ರೋಗಿಗಳು ಸಾಯುವ ಮೊದಲು ಪಶ್ಚಾತ್ತಾಪ ವ್ಯಕ್ತಪಡಿಸಿದರೂ, ಅವರ ಜೀವ ಉಳಿಯಲು ಕಾಲ ಮೀರಿರುತ್ತದೆ ಎಂಬುದು, ಅತ್ಯಂತ ದುಃಖಕರ ಸಂಗತಿ.
ಬಾಯಿ ಆರೋಗ್ಯವಾಗಿರಲು ಧೂಮ್ರಪಾನ ಹಾಗೂ ಮದ್ಯಪಾನಗಳ ಚಟ ಬಿಟ್ಟು ಬಿಡಬೇಕು. ಇದಕ್ಕಾಗಿ ಆಗಾಗ ದಂತ ವೈದ್ಯರನ್ನು ಕಾಣಬೇಕು. ಪ್ರತಿದಿನ ಹಲ್ಲುಜ್ಜುವಾಗ ಬಾಯಿ ಹಾಗೂ ಕತ್ತುಗಳಲ್ಲಿ ಏನಾದರೂ ಬದಲಾವಣೆ ಇದೆಯೇ ಎಂಬುದನ್ನು ಗಮನಿಸಬೇಕು. 3 ವಾರಗಳಲ್ಲಿ ವಾಸಿಯಾಗದ ಹುಣ್ಣುಗಳಿದ್ದರೆ, ಬಾಯಿಯಲ್ಲಿ ಕೆಂಪು ಹಾಗೂ ಬಿಳಿ ಗುರುತುಗಳಿದ್ದರೆ ತಕ್ಷಣ ತಜ್ಞ ವೈದ್ಯರ ಬಳಿ ಹೋಗಿ. ಸಾಕಷ್ಟು ಹಣ್ಣುಗಳನ್ನು, ತರಕಾರಿಗಳನ್ನು ತಿನ್ನಬೇಕು. ಸಮತೋಲನ ಆಹಾರದಲ್ಲಿ ಎ, ಸಿ ಹಾಗೂ ಇ ಜೀವಸತ್ವಗಳು, ನಮ್ಮ ದೇಹವನ್ನು ಅನೇಕ ತರಹದ ಕ್ಯಾನ್ಸರ್ ಬರಲಾರದಂತೆ ತಡೆಯುತ್ತವೆ. ಇದರೊಂದಿಗೆ ಬಾಯಿಯ ಲೈಂಗಿಕ ಸಂಬಂಧದಿಂದ ಎಚ್.ಪಿ.ವಿ ಮುಂತಾದ ವೈರಲ್ ಸೋಂಕುಗಳು ಬರುತ್ತವೆ
ಇದು ಉಇಖಆ ರೋಗದ ಅರಿವಿನ ಮಾಸ:-ಉಇಖಆ ಅಂದರೆ ಅನ್ನನಾಳಕ್ಕೆ ಸಂಬಂಧಿಸಿದ ವಾಯು ವಾಪಸ್ ಮೇಲೆ ಬರುವ ಕಾಹಿಲೆಯು ಅಮೇರಿಕಾದ ಪ್ರತಿಶತ 20 ರಷ್ಟು ಜನರನ್ನು ಗೋಳಾಡಿಸುತ್ತಿದೆ. ನಮ್ಮ ದೇಶದಲ್ಲೂ ಲಕ್ಷಾಂತರ ಜನ ಈ ಕಾಹಿಲೆಯಿಂದ ನರಳುತ್ತಿದ್ದಾರೆ. ಈ ಕಾಹಿಲೆ ತಡೆಯಲು ಮುಖ್ಯ ಪರಿಹಾರವೆಂದರೆ ಹೊಟ್ಟೆಯನ್ನು ಖಾಲಿ ಬಿಟ್ಟು ವಾಯು ತುಂಬಲು ಅವಕಾಶ ಮಾಡಿಕೊಡಲೇಬಾರದು. ಸರಿಯಾಗಿ ಎರಡುವರೆಯಿಂದ ಮೂರು ಗಂಟೆವರೆಗೆ ಏನಾದರೂ ತಿನ್ನುತ್ತಿರಬೇಕು. ಆದರೆ ವಾಯು ಉತ್ಪಾದಿಸುವ ಪದಾರ್ಥಗಳನ್ನು ತಿನ್ನಬಾರದು. ಬಾಳೆಹಣ್ಣು ಎಲ್ಲರಿಗೂ ಉತ್ತಮ ಆಹಾರವಾದರೆ ನನ್ನಂಥವನಿಗೆ ಅದು ತಿಂದರೆ ಅತಿ ಬೇಗ ಹೆಚ್ಚು ಗ್ಯಾಸ್ ಉತ್ಪತ್ತಿಯಾಗುತ್ತದೆ. ನೋವು ಬಂದ ಮೇಲೆ ಮಾತ್ರೆ ತೆಗೆದುಕೊಂಡು ಐದ್ಯಾರು ಗಂಟೆಗಳ ಕಾಲ ಬಿದ್ದು ಹೊರಳಾಡುವಷ್ಟು ನೋವು ಅನುಭವಿಸದೇ, ಸರಿಯಾದ ಕಾಲಕ್ಕೆ ಔಷಧಿ, ಮಾತ್ರೆ ತಿಂದು ಅದರ ಅಂಶ ಉಳಿದಿರುವ ಕಾಲದಲ್ಲೇ ಏನನ್ನಾದರೂ ತಿಂದು ಬಿಟ್ಟರೆ, ಈ ಆಹಾರದ ಒತ್ತಡದಿಂದ ಹೊಟ್ಟೆಯಲ್ಲಿ ಕೆಳಗಿನಿಂದ ಎದೆಯವರೆಗೆ ಮೇಲೇರಿ ಬಂದಿರುವ ಒತ್ತಡದ ವಾಯುವನ್ನು ಕೆಳಗೆ ತಳ್ಳಬಹುದು. ಇವರು ಆಹಾರದಲ್ಲಿಯ ಬದಲಾವಣೆಗಳಿಂದ ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಡಾ. ಜಾನ್ ಮ್ಯಾಕಿನ್ ಟಯರ್ ಎಂಬ ಸ್ಕಾಟ್‍ಲ್ಯಾಂಡ್‍ನ ವೈದ್ಯ ಅಭಿವೃದ್ಧಿ ಪಡಿಸಿದ ಎಂಡೋಸ್ಕೋಪ್ ಇಂದು ಈ ಕಾಹಿಲೆ ಪತ್ತೆ ಹಚ್ಚಲು ಅನುಕೂಲ ಮಾಡಿಕೊಟ್ಟಿದೆ. ಯಾರಿಗೆ ಪುಪ್ಪುಸ ಕ್ಯಾನ್ಸರಿನ ಚಿಹ್ನೆಗಳು ಇರುತ್ತವೋ, ಅಂದರೆ ಸತತ ಕೆಮ್ಮು, ಉಸಿರಾಟದ ತೊಂದರೆ, ಹಾಗೂ ವಿವರಣೆ ಕೊಡಲಾಗದ ತೂಕದಲ್ಲಿಯ ಇಳಿತ ಇರುತ್ತದೆಯೋ ಅವರು ತಮ್ಮ ತಪಾಸಣೆ ಮಾಡಿಸಿಕೊಳ್ಳಬೇಕು.
ಎಲ್ಲ ವಯಸ್ಸಿನ, ಹಾಗೂ ಎಲ್ಲ ರಾಷ್ತ್ರಗಳ ಜನರಿಗೂ ಶ್ವಾಸಕೋಶದ ಅಧಿಕ ರಕ್ತದೊತ್ತಡದ ಕಾಹಿಲೆ ಬರಬಹುದು ಆದರಿಂದ ನವೆಂಬರ್ ತಿಂಗಳಲ್ಲಿ ಈ ಬಗ್ಗೆ ಅರಿವು ನೀಡುವ ಕಾರ್ಯಕ್ರಮ ಇಡೀ ಜಗತ್ತಿನಾದ್ಯಂತ ನಡೆಯುತ್ತದೆ ಈ ಕಾಹಿಲೆ ಇರುವ ಜನ ಕಡಿಮೆಯಾಗುವ ಉಸಿರು, ತಲೆ ಸುತ್ತುವಿಕೆ, ಜಡತೆ, ಎದೆಯ ನೋವು, ಬೆವರುವಿಕೆ ಅನುಭವಿಸುತ್ತಾರೆ. 100 ರಲ್ಲಿ 86 ಜನರಿಗೆ ಉಸಿರಾಟ ಚಿಕ್ಕದಾಗುತ್ತದೆ; 27 ಜನ ಜಡತೆ ಅನುಭವಿಸಿದರೆ, 22 ಜನ ಎದೆನೋವು ಅನುಭವಿಸುತ್ತಾರೆ. ಅಸ್ಥಮಾ ಹಾಗೂ ಶ್ವಾಸಕೋಶದ ತಡೆ ಇದ್ದ ರೋಗಿಗಳಿಗೆ ಈ ಸಮಸ್ಯೆ ಹೆಚ್ಚಾಗಬಹುದು. ಈ ರೋಗ ಸಂಪೂರ್ಣ ಗುಣ ಮಾಡಲಾಗದಿದ್ದರೂ, ಇದರ ಉತ್ತಮ ನಿರ್ವಹಣೆಯಿಂದ ರೋಗಿಗಳು ಸುಧಾರಿಸಿಕೊಳ್ಳಲು ಸಾಧ್ಯ.
ಈ ತಿಂಗಳು ದೀರ್ಘಕಾಲದ ಶ್ವಾಸಕೋಶದ ಉಸಿರಾಟ ತಡೆ ಕಾಹಿಲೆ ಅರಿವು ಮಾಸವೂ ಆಗಿದೆ :
ಇದು ಪುಪ್ಪುಸದ ಕಾಹಿಲೆ. ಇದರಲ್ಲಿ ದೀರ್ಘಕಾಲದ ಉಸಿರಾಟದ ತೊಂದರೆ ಹಾಗೂ ಕಡಿಮೆ ಗಾಳಿ ಹರಿವು ಇರುತ್ತದೆ. ಈ ಸ್ಥಿತಿ ಮುಂದುವರೆದಂತೆ, ಪುಪ್ಪುಸಗಳ ಕೋಶಗಳು ನಿಧಾನವಾಗಿ ಹಾಳಾಗುತ್ತವೆ. ಮೊದಲು ಈ ಸಮಸ್ಯೆಯ ಗಂಭೀರತೆ ಅರಿವಿರಲಿಲ್ಲ. ಇತ್ತೀಚೆಗೆ ಈ ಅರಿವು ಬಂದ ಮೇಲೆ, 40 ವರ್ಷ ದಾಟಿದ 10 ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಇರಬಹುದು. ಇದರ ಪರಿಹಾರಕ್ಕಾಗಿ, ಹೊಸ ಔಷಧಿಗಳ ಅಭಿವೃದ್ಧಿ, ಆರಂಭದ ಹಂತಗಳಲ್ಲಿ ಈ ಕಾಹಿಲೆಯವರಿಗೆ ನೀಡುವ ಚಿಕಿತ್ಸೆ, ಸಾವಿರಾರು ರೋಗಿಗಳ ಕಾಹಿಲೆ ಮುಂದುವರಿಕೆ ತಡೆಯುತ್ತದೆ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!