ನೋನಿ ಪೋಷಕಾಂಶಗಳ ಆಗರ ಆಗಿದ್ದು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯ ನಿರಂತರ ಸೇವನೆಯಿಂದ ಆತಂಕ, ಜಿಗುಪ್ಸೆ, ಖಿನ್ನತೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಹಸಿವು, ಲೈಂಗಿಕ ಆರೋಗ್ಯ, ಸುಖ ನಿದ್ರೆಗಳಿಗೂ ಈ ಸ್ಕೊಪೋಟಿಲಿನ್ ಕಾರಣವಾಗುತ್ತದೆ.
ಜಗತ್ತಿನಲ್ಲಿ ನೋನಿ ಬಗ್ಗೆ ನಡೆದ ಅಸಂಖ್ಯ ಸಂಶೋಧನೆಗಳ ನಂತರ ಯಾವ ಯಾವ ರೋಗಗಳ ನಿವಾರಣೆಯಲ್ಲಿ ನೋನಿ ಎಷ್ಟರ ಮಟ್ಟಿಗೆ ಫಲಿತಾಂಶ ತೋರಿದೆ ಎಂಬುದಾಗಿ ಒಂದು ಸಂಯೋಜಿತ ಪಟ್ಟಿಯನ್ನು ತಯಾರಿಸಲಾಯ್ತು. ಆ ಪಟ್ಟಿ ಹೇಳುವ ಫಲಿತಾಂಶ ಎಂಥ ಹತಾಶ ಮನುಷ್ಯನಲ್ಲೂ ಜೀವನೋತ್ಸಾಹವನ್ನು ಉಕ್ಕಿಸುವಂಥದು.
ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ವಿಜ್ಞಾನಿ, ಸಂಶೋಧಕ ಡಾ. ಅಬ್ದುಲ್ ಕಲಾಂ ಕೂಡಾ ನೋನಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ನೋನಿ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ ಎಂಬುದವರ ನಿಶ್ಚಿತಾಭಿಪ್ರಾಯವಾಗಿತ್ತು.
ನೋನಿಯಲ್ಲಿರುವ ಝೆರೋನಿನ್ ತಾನು ಪ್ರೊಟೀನ್‍ನೊಂದಿಗೆ ಮಿಲನ ಹೊಂದಿ ದೇಹದ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮೆದುಳಿನ ಜೀವಕೋಶಗಳಿಗೆ ಆಮ್ಲಜನಕ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಮೆದುಳಿನ ಹಾರ್ಮೋನ್ ಉತ್ಪಾದನೆಗೆ ಇದು ಇಂಬು ಕೊಡುತ್ತದೆ.
ನೋನಿಯಲ್ಲಿರುವ ಡೆಮ್ನೋಕಂಥಾಲ್ ಅಂಶವು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಕ್ಯಾನ್ಸರ್‍ಕಾರಕ ಜೀವಕೋಶಗಳನ್ನು ಡೆಮ್ನೋಕಂಥಾಲ್ ನಾಶಪಡಿಸುತ್ತದೆ.
ಸ್ಕೊಪೋಲಿಟಿನ್ ಎಂಬುದು ಮಾನಸಿಕ ಸಮತೋಲನವನ್ನು ಕಾಪಾಡುವ ಅಂಶ. ಇದು ನೋನಿಯಲ್ಲಿದೆ. ಹೀಗಾಗಿಯೇ ನೋನಿಯ ನಿರಂತರ ಸೇವನೆಯಿಂದ ಆತಂಕ, ಜಿಗುಪ್ಸೆ, ಖಿನ್ನತೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಹಸಿವು, ಲೈಂಗಿಕ ಆರೋಗ್ಯ, ಸುಖ ನಿದ್ರೆಗಳಿಗೂ ಈ ಸ್ಕೊಪೋಟಿಲಿನ್ ಕಾರಣವಾಗುತ್ತದೆ. `ನಾನು ಆರೋಗ್ಯವಾಗಿದ್ದೇನೆ ಎಂಬ ಧನಾತ್ಮಕ ಭಾವನೆ ಮನುಷ್ಯನಿಗೆ ಇದ್ದರೆ ಸಾಕು, ಅದೇ ಎಷ್ಟೋ ರೋಗಗಳನ್ನು ದೂರ ಮಾಡುತ್ತದೆ. ಅಂಥ ಧನಾತ್ಮಕ ಭಾವನೆಯನ್ನು ಹುಟ್ಟು ಹಾಕುವಲ್ಲಿ ಸ್ಕೊಪೋಲಿಟಿನ್ ಮುಖ್ಯ ಪಾತ್ರ ವಹಿಸುತ್ತದೆ.
ನೋನಿಯಲ್ಲಿನ ಗ್ಲೈಕೊಸೈಡ್ ಎಂಬ ಸಂಯುಕ್ತ ವಸ್ತುವು ಹೃದಯದ ಮಾಂಸಖಂಡಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಹೀಗಗಿ ರಕ್ತದೊತ್ತಡ ಸಮತೋಲನದಲ್ಲಿ ಉಳಿಯುತ್ತದೆ.
ಟರ್ಪಿನ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಜೀವಸತ್ವ. ಟರ್ಪಿನ್ಸ್ ನಂಜು ನಿರೋಧಕವಾಗಿದ್ದು, ದೇಹದಲ್ಲಿ ಇದು ಸೈನಿಕ ಪಡೆಯಂತೆ ಕಾರ್ಯನಿರ್ವಹಿಸುತ್ತದೆ.
ನೋನಿಯಲ್ಲಿರುವ ಆಂಥ್ರಾಕ್ವಿನೋನ್ಸ್ ಎಂಬ ಸಂಯುಕ್ತ ವಸ್ತು ಶೀತ ಮತ್ತು ಅಲರ್ಜಿಯನ್ನು ತಡೆಗಟ್ಟುತ್ತದೆ.
ಸ್ಟರಾಲ್‍ನ ಮುಖ್ಯ ಕಾರ್ಯ ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವುದು. ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಇಲ್ಲವಾಗಿ, ರಕ್ತಪರಿಚಲನೆ ಸುಗಮವಾಗಿರುತ್ತದೆ.
ಪ್ರೋಟೀನ್‍ಗಳು, ಅಲ್ವಿನೋ ಆಮ್ಲಗಳು, ಜಿಡ್ಡು ಆಮ್ಲಗಳು, ಕರಗುವ ಮತ್ತು ಕರಗದಿರುವ ನಾರುಗಳು, ಸೋಡಿಯಂ, ಪೊಟಾಷಿಯಂ, ಕ್ಯಾಲ್ಸಿಯಂ, ರಂಜಕ, ಮೆಗ್ನಿಷಿಯಂ, ಜಿಂಕ್, ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ12, ವಿಟಮಿನ್ ಸಿ ಹೀಗೆ ಇನ್ನೂ ಅನೇಕಾನೇಕ ಜೀವಸತ್ವಗಳು, ಪೋಷಕಾಂಶಗಳು ನೋನಿಯಲ್ಲಿ ಧಾರಾಳವಾಗಿವೆ.
ಇದನ್ನೆಲ್ಲ ಹೆಚ್ಚು ಹೇಳುತ್ತ ಹೋದರೆ, ಮನುಷ್ಯನ ಆರೋಗ್ಯಕ್ಕೆ ಬೇಕಾದ ವಿಟಮಿನ್, ಜೀವಸತ್ವ, ಪೋಷಕಾಂಶಗಳನ್ನೆಲ್ಲ ಸುಮ್ಮನೆ ಪಟ್ಟಿ ಮಾಡಿ ಇಟ್ಟಿದ್ದಾರೇನೋ ಎಂಬ ಅನುಮಾನ ಬರುತ್ತದೆ! ಅಷ್ಟು ಸಮೃದ್ಧವಾಗಿದೆ, ನೋನಿಯಲ್ಲಿರುವ ಜೈವಿಕಾಂಶಗಳ ಸಂಗ್ರಹಗಾರ!
ಇನ್ನೊಂದು ವಿಚಿತ್ರ ಎಂದರೆ ನೋನಿ ಗಿಡಕ್ಕೆ ಯಾವುದೇ ರೋಗ ಬಾಧೆಗಳು ಬರುವುದಿಲ್ಲ! ಬೆಳೆಯುವ ನೆಲ, ವಾತಾವರಣಗಳ ಮೇಲೆ ಅವಲಂಬಿತಗೊಂಡು ಪೋಷಕಾಂಶಗಳ ರಸ-ಪೂರಣದಲ್ಲಿ ಅಷ್ಟಿಷ್ಟು ವ್ಯತ್ಯಾಸ ಆಗಬಹುದೇ ವಿನಃ ಗಿಡವಂತೂ ರೋಗಗ್ರಸ್ತವಾಗಿ ಮಲಗುವುದಿಲ್ಲ.
ಹೌದು, ಬೆಳೆದರೂ ಲಾಭ!
ಅಷ್ಟಿಷ್ಟು ಜಾಗ ಇರುವವರು ಅಥವಾ ರೈತರು ನೋನಿ ಬೆಳೆಯುವ ಬಗ್ಗೆ ಧಾರಾಳವಾಗಿ ಆಲೋಚಿಸಬಹುದು. ಬೆಳೆದ ಒಂದು ಮರದಿಂದ ವರ್ಷಕ್ಕೆ ಕನಿಷ್ಟ ಒಂದು ಕ್ವಿಂಟಾಲ್‍ನಷ್ಟು ನೋನಿ ಹಣ್ಣು ದೊರೆಯುತ್ತದೆ. ಒಂದು ಎಕರೆಯಿಂದ 6 ಲಕ್ಷ ರೂಪಾಯಿ ಆದಾಯ. ಖರ್ಚು ಎಂದು 1 ಲಕ್ಷವನ್ನು ಕಳೆದರೂ, 5 ಲಕ್ಷ ರೂಪಾಯಿಯಂತೂ ದೊರೆಯುತ್ತದೆ. ಮೇಲಾಗಿ ನೋನಿಯನ್ನು ಅಂತರ್ ಬೆಳೆಯಾಗಿ ಕೂಡ ಬೆಳೆಯಬಹುದು.
ಆದರೆ ಈ ಅಮೃತ ಪೇಯ ನೋನಿಯ ಬಗ್ಗೆ ಎಲ್ಲರಿಗೂ ಅರಿವು ಮೂಡಿ ಬಳಕೆ ಹೆಚ್ಚಾದಾಗ ಮಾತ್ರ ತಯಾರಿಕ ಘಟಕಗಳು ಹೆಚ್ಚು ಹೆಚ್ಚು ಪ್ರಾರಂಭಗೊಳ್ಳುತ್ತವೆ. ರೈತರಿಗೆ ನಿಶ್ಚಿತ ಮಾರುಕಟ್ಟೆ ದೊರೆತಾಗ ಮಾತ್ರ ಇದೊಂದು ಲಾಭದಾಯಕ ಬೆಳೆ ಆಗುತ್ತದೆ.
ಹ್ಞಾ, ಅಂದ ಹಾಗೆ ಇಂಥ ಕಾಮಧೇನು, ಕಲ್ಪವೃಕ್ಷವನ್ನು ನಾವೇ ಬೆಳೆದು, ನಾವೇ ತಿಂದು ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಂಚಿಕೆ ಹಾಕಬೇಡಿ! ಏಕೆಂದರೆ ಮೊದಲೇ ಹೇಳಿದಂತೆ ನೋನಿ ಹಣ್ಣು ಅತ್ಯಂತ ದುರ್ವಾಸನೆಯಿಂದ ಕೂಡಿದ್ದು, ಸಂಸ್ಕರಿಸದ ಹೊರತು ಅದನ್ನು ಸೇವಿಸುವುದು ಅಸಾಧ್ಯ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಓಂ ಶ್ರೀ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಪ್ರೈ. ಲಿ
ಬೆಂಗಳೂರು – 560079
ದೂರವಾಣಿ: 9513613368
ಇಮೇಲ್: info@amrithnoni.com
www.amrithnoni.com