ನೋನಿ ಹಣ್ಣು ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೋನಿಯಲ್ಲಿ ಖನಿಜಾಂಶಗಳು, ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟ್‍ಗಳು, ಆಲ್ಕಲೈಡ್, ಫ್ಲೇವನಾಯ್ಡ್, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್, ಸ್ಕೋಪೋಲಿಟಿನ್, ಬೀಟಾಸಿಸ್ಟಲ್ ಇತ್ಯಾದಿ ಪೋಷಕಾಂಶಗಳು ಧಾರಾಳವಾಗಿವೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ ಎಂದು ನೋನಿ ಸೇವನೆ ಸಂಬಂಧ ಡಾ|| ನೀಲ್ ಸಾಲೋಮನ್ ಕೈಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ.
ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ, ನೋವು-ಬಾವುಗಳನ್ನು ಕಡಿಮೆ ಮಾಡಬಲ್ಲ ಹತ್ತು ಹಲವಾರು ಸಸ್ಯರಸಾಯನ ಘಟಕಗಳ ಭಂಡಾರವನ್ನೇ ನೋನಿ ಹೊಂದಿದೆ. ನಮ್ಮ ಕಾಡುಗಳಲ್ಲಿ, ವಿಶೇಷವಾಗಿ ಕಡಲ ತೀರದಲ್ಲಿ ಸಹಜವಾಗಿ ಬೆಳೆಯುವ ನೋನಿ ಗಿಡ ರೂಬೇಶಿಯಾ ಸಸ್ಯ ಕುಟುಂಬಕ್ಕೆ ಸೇರಿದ್ದು, ಕಾಫಿ, ಬಿಕ್ಕಿಗಿಡ, ಮುಗ್ಗಾರೆ, ಸಿಂಕೋನ ಮೊದಲಾದವು ಈ ಕುಟುಂಬದ ಇತರ ಕೆಲ ಸದಸ್ಯರು. ಈ ಎಲ್ಲ ಗಿಡಗಳ ಸ್ವರೂಪವೂ ಒಂದೇ ರೀತಿ. 10-12 ಅಡಿ ಎತ್ತರದವರೆಗೆ ಬೆಳೆಯಬಲ್ಲವು.
ನೋನಿ ವರ್ಷದ ಎಲ್ಲ ಕಾಲದಲ್ಲೂ ಹಣ್ಣುಗಳನ್ನು ಬಿಡುತ್ತದೆ. ಥಟ್ಟನೆ ನೋಡಿದರೆ ಸೀತಾಫಲದಂತೆ ಕಾಣುವ ನೋನಿ ಕಾಯಿಗಳು 3 ರಿಂದ 5 ಇಂಚಿನಷ್ಟು ಉದ್ದವಾಗಿರುತ್ತವೆ. ಕಾಯಿಗಳ ಮೇಲೆ ಹೂವರಳುವುದು ಇದರ ವಿಶೇಷ. ಹಣ್ಣು ಸೀತಾಫಲದಂತೆ ತಿರುಳುಯುಕ್ತ. ಈ ತಿರುಳೇ ಜೀವೌಷಧ. ಇದನ್ನು ಸಂಗ್ರಹಿಸಿಯೇ ಪೂರಕ ಆಹಾರವಾಗಿ, ಜ್ಯೂಸ್ ಆಗಿ ಮಾರ್ಪಡಿಸಿ ಬಳಸಬಹುದು.
ಇನ್ನೂ ಒಂದು ವಿಶೇಷ ಎಂದರೆ ಈ ನೋನಿ ಹಣ್ಣನ್ನು ಇತರೆ ಹಣ್ಣುಗಳಂತೆ ನೇರವಾಗಿ ತಿನ್ನಲು ಸಾಧ್ಯವೇ ಇಲ್ಲ. ಕಾರಣ ಇದರ ದುರ್ವಾಸನೆ. ಇದರಿಂದಾಗಿ ಮನುಷ್ಯ ಇರಲಿ, ಬೇರೆ ಪ್ರಾಣಿ ಪಕ್ಷಿಗಳು ಕೂಡ ನೋನಿ ಕಾಯಿ, ಹಣ್ಣುಗಳನ್ನು ತಿನ್ನುವುದಿಲ್ಲ. ಕೋಗಿಲೆ ಮಾತ್ರ ಈ ಹಣ್ಣನ್ನು ತಿನ್ನುತ್ತದಂತೆ!
ಒಂದು ಹಣ್ಣು ಇಷ್ಟೆಲ್ಲ ಮಾಡಬಲ್ಲದೇ?!
ನೋನಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಂಧಿವಾತ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆ, ಮೈಗ್ರೇನ್, ಮಾಂಸಖಂಡಗಳ ಸಮಸ್ಯೆ, ಚರ್ಮರೋಗ, ಏಡ್ಸ್, ಗ್ಯಾಸ್ಟ್ರಿಕ್, ಅಲ್ಸರ್, ಖಿನ್ನತೆ, ಜೀರ್ಣಾಂಗದ ಸಮಸ್ಯೆಗಳು, ರಕ್ತನಾಳ ಹಾಗೂ ನರ ಸಂಬಂಧಿ ಸಮಸ್ಯೆಗಳು, ಅಥೆರೋಸ್ಕ್ಲೀರೋಸಿಸ್, ಕುಡಿತ ವ್ಯಸನ, ಗಂಟಲು ಮತ್ತು ವಸಡಿನ ಸಮಸ್ಯೆಗಳು, ಥೈರಾಯ್ಡ್, ಲೂಕೋರಿಯ… ಹೀಗೆ ಹತ್ತು ಹಲವಾರು ರೋಗಗಳನ್ನು ವಾಸಿ ಮಾಡಿದ ದೊಡ್ಡ ಪಟ್ಟಿಯೇ ಇದೆ. ಇದೆಲ್ಲ ಸುಮ್ಮನೆ ರೋಗಗಳ ಪಟ್ಟಿ ಮಾಡಿದ್ದಲ್ಲ. ಈ ರೋಗಗಳು ವಾಸಿಯಾದದ್ದಕ್ಕೆ ಜೀವಂತ ಸಾಕ್ಷಿಗಳಿವೆ.
ನೋನಿ ಒಂದು ಔಷಧವಲ್ಲ, ಒಂದು ಪೂರಕ ಆಹಾರ:
ಇಷ್ಟಾಗಿ ನೋನಿ ಒಂದು ಔಷಧವಲ್ಲ. ಒಂದು ಪೂರಕ ಆಹಾರ ಮಾತ್ರ. ದೇಹಕ್ಕೆ ಯಾವ ಜೀವಸತ್ವ ಅಥವಾ ಪೋಷಕಾಂಶ ಬೇಕೋ ಅದನ್ನು ಪೂರೈಸಬಲ್ಲ ಅದ್ಭುತ ಶಕ್ತಿ ನೋನಿಗೆ ಇರುವುದರಿಂದ ಇಷ್ಟೆಲ್ಲ ಪವಾಡಸದೃಶ ಫಲಿತಾಂಶ ಕಾಣಬರುತ್ತಿರುವುದು. ಜಗತ್ತಿನ ಯಾವುದೇ ದವಸ ಧಾನ್ಯ, ಹಣ್ಣು ತರಕಾರಿಗಳಲ್ಲಿ ಇಲ್ಲದಷ್ಟು ಪೋಷಕಾಂಶಗಳನ್ನು ಪ್ರಕೃತಿ ನೋನಿಯಲ್ಲಿ ತುಂಬಿಟ್ಟಿದೆ. ಇಂಥ ಅದ್ಭುತವಾದ ಹಣ್ಣಿನ ಬಗ್ಗೆ ಪ್ರಪಂಚದಲ್ಲಿ ನಡೆದಿರುವ ಸಂಶೋಧನೆಗಳಿಗೆ ಲೆಕ್ಕವೇ ಇಲ್ಲ. ನೋನಿ ಸೇವನೆಯಿಂದ ಒಂದೊಂದು ಆಶ್ಚರ್ಯಕರ ಫಲಿತಾಂಶ ಬಂದಾಗಲೂ ವಿಜ್ಞಾನಿಗಳು ಮತ್ತೆ ಮತ್ತೆ ನೋನಿಯನ್ನು ಸಂಶೋಧನೆಗೆ ಒಳಪಡಿಸಿದ್ದಾರೆ.
ಅಮೆರಿಕನ್ ಕೆಮಿಕಲ್ ಸೊಸೈಟಿ, ಜರ್ನಲ್ ಆಫ್ ಫುಡ್ ಸೈನ್ಸ್‍ನ ಅಂತರರಾಷ್ಟ್ರೀಯ ವೈದ್ಯ ಸಮಾವೇಶಗಳು, ಯುರೋಪಿನ ಇನ್ನಿತರ ವೈದ್ಯಕೀಯ ಸಮಾವೇಶಗಳಲ್ಲಿ ನೋನಿ ಬಗ್ಗೆ ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಟ್ಟಿವೆ. ಯುರೋಪಿಯನ್ ಫುಡ್ ಕಮಿಷನ್ 2001ರಲ್ಲಿ ನೋನಿಯನ್ನು `ನಾವೆಲ್ ಫುಡ್ ಎಂದು ಅಂಗೀಕರಿಸಿದೆ. ಜಗತ್ತಿನಲ್ಲಿ ನೋನಿ ಬಗ್ಗೆ ನಡೆದ ಅಸಂಖ್ಯ ಸಂಶೋಧನೆಗಳ ನಂತರ ಯಾವ ಯಾವ ರೋಗಗಳ ನಿವಾರಣೆಯಲ್ಲಿ ನೋನಿ ಎಷ್ಟರ ಮಟ್ಟಿಗೆ ಫಲಿತಾಂಶ ತೋರಿದೆ ಎಂಬುದಾಗಿ ಒಂದು ಸಂಯೋಜಿತ ಪಟ್ಟಿಯನ್ನು ತಯಾರಿಸಲಾಯ್ತು.
ಆ ಪಟ್ಟಿ ಹೇಳುವ ಫಲಿತಾಂಶ ಎಂಥ ಹತಾಶ ಮನುಷ್ಯನಲ್ಲೂ ಜೀವನೋತ್ಸಾಹವನ್ನು ಉಕ್ಕಿಸುವಂಥದು. ನಮ್ಮ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ವಿಜ್ಞಾನಿ, ಸಂಶೋಧಕ ಡಾ. ಅಬ್ದುಲ್ ಕಲಾಂ ಕೂಡಾ ನೋನಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ನೋನಿ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ ಎಂಬುದವರ ನಿಶ್ಚಿತಾಭಿಪ್ರಾಯವಾಗಿತ್ತು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಓಂ ಶ್ರೀ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಪ್ರೈ. ಲಿ
ಬೆಂಗಳೂರು – 560079
ದೂರವಾಣಿ: 9513613368
ಇಮೇಲ್: info@amrithnoni.com
www.amrithnoni.com