ನಿಂಬೆ ಚಹಾ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಚಹಾ ಸಹಾಯಕ. ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ, ನಿಂಬೆ ಚಹಾವನ್ನು ಕುಡಿಯುವುದರಿಂದ ಅದರ ಆರೋಗ್ಯ ಪ್ರಯೋಜನಗಳ ಜೊತೆಗೆ ನಮ್ಮ ಮನಸ್ಸನ್ನು ಸಹ ಉಲ್ಲಾಸಗೊಳಿಸಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಚಹಾ ಸಹಾಯಕ

ಲಿಂಬೆಹಣ್ಣಿನ ಬಗ್ಗೆ ನಮ್ಮಲ್ಲಿ ಅಪಾರ ನಂಬಿಕೆ..ದೇಹಕ್ಕೆ ಸಿ. ಸತ್ವವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವ ಈ ನಿಂಬೆ ಮಾಟಮಂತ್ರದಲ್ಲೂ ಬಳಸಲ್ಪಡುವುದು ವಿಶೇಷ… ಇನ್ನು ಈ ಲಿಂಬೆಯನ್ನು ಹೆಣ್ಣಿಗೆ ಹೋಲಿಸುವ ಪರಿಪಾಠವೂ ಇದೆ. ಹಾಗಾಗಿಯೇ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೇಮಲೋಕ ಚಿತ್ರದಲ್ಲಿ ಈ ಲಿಂಬೆಹಣ್ಣಿನಂತ ಹುಡುಗಿ ಬಂದು ನೋಡು.. ಎಂದು ಒಂದಿಡೀ ಹಾಡನ್ನು. ಪಡ್ಡೆಗಳಿಗೆ ಮೀಸಲಿಟ್ಟಿದ್ದರು. ಆದರೆ ನೈಸರ್ಗಿಕವಾಗಿ ಸಾಕಷ್ಟು ಗುಣಗಳನ್ನು ಹೊಂದಿರುವ ಈ ನಿಂಬೆ ಆರೋಗ್ಯಕ್ಕೆ, ತ್ವಚೆಗೆ ಬಹಳಷ್ಟು ಉಪಯುಕ್ತ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಚಹಾ:

ನಿಂಬೆಯಲ್ಲಿರುವ ಉತ್ಕರ್ಷಕ ನಿರೋಧಕಗಳು ತ್ವಚೆಯ ಮೇಲಿನ ಕಲೆಗಳನ್ನು ಸಹಜವಾಗಿ ತೆಗೆದುಹಾಕಲು ಸಹಕರಿಸುತ್ತವೆ. ಜೊತೆಗೆ ಬಿಸಿಲಿನಲ್ಲಿ ಒಣಗಿದ ಚರ್ಮಕ್ಕೆ ಮರುಕಾಂತಿ ತುಂಬಲು ನಿಂಬೆ ಸಹಕಾರಿ. ಲಿಂಬೆಯನ್ನು ಫೇಸ್‍ಮಾಸ್ಕ್ ಆಗಿಯೂ ಬಳಸಬಹುದು. ಇದರಲ್ಲಿನ ‘ಸಿ ಸತ್ವ ದೇಹಕೆ ಅನೇಕ ಪೂರಕ ಅಂಶಗಳನ್ನು ನೀಡಬಲ್ಲದು. ಹಾಗಾಗಿಯೇ ನಮ್ಮ ಉಪ್ಪಿ..ಚಿತ್ರಾನ್ನಾ..ಚಿತ್ರಾನಾ..ಹಾಡಿದ್ದು ಅಂದರೆ ಈವತ್ತಿಗೂ ಲಿಂಬೂ ಚಿತ್ರಾನ್ನ ಕೇವಲ ಬಡವರ ಬಾದಾಮಿ ಅಲ್ಲ,ಬದುಕಿಗೂ ಬೆಲೆ ಕೊಡುತ್ತದೆ.

ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಂಬೆ ಚಹಾ ಬಹಳ ಸಹಾಯಕವಾಗಿದೆ. ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ, ನಿಂಬೆ ಚಹಾವನ್ನು ಕುಡಿಯುವುದರಿಂದ ಅದರ ಆರೋಗ್ಯ ಪ್ರಯೋಜನಗಳ ಜೊತೆಗೆ ನಮ್ಮ ಮನಸ್ಸನ್ನು ಸಹ ಉಲ್ಲಾಸಗೊಳಿಸಬಹುದು. ನಸ್ಸಿನ ತಾಜಾತನ ಮತ್ತು ಆರೋಗ್ಯವಂತ ಶರೀರಕ್ಕೆ ಲಿಂಬೆಯನ್ನು ಹೇರಳವಾಗಿ ಬಳಸಬಹುದು. ಇದಕ್ಕೆ ಯಾವುದೇ ಸೈಡ್‍ಎಫೆಕ್ಟ್ ಭಯ ಇಲ್ಲದ ಕಾರಣ ಬಳಕೆಗೆ ತೊಂರೆಯಿಲ್ಲ. ಲಿಂಬೆ ಚಹಾ ಹೊಟ್ಟೆಯನ್ನು ಸ್ವಚ್ಚಗೊಳಿಸಲು ಸಹಕಾರಿ. ಜೊತೆಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಂಬೆಯಲ್ಲಿನ ಶಕ್ತಿ ತಂಪುಪಾನೀಯವಾಗಿಯೂ ಬಳಕೆಯಾಗುತ್ತದೆ.ಶೀತ, ಕೆಮ್ಮು, ಆಯಾಸ, ಜ್ವರ ಬಂದ ಸಂದರ್ಭವೂ ಲಿಂಬೆಚಹಾ ಬಳಸಬಹುದು. ಇದು ದೇಹಕ್ಕೆ ಚೈತನ್ಯ ತುಂಬುತ್ತದೆ.

ಲಿಂಬೆರಸ ದೇಹದ ಕೊಬ್ಬನ್ನು ಕರಗಿಸಲು ಮತ್ತು ತೂಕವನ್ನು ಇಳಿಸಲು ಉಪಯುಕ್ತ. ಮುಂಜಾನೆ ಖಾಲಿಹೊಟ್ಟೆಗೆ ನಿಂಬೆರಸವನ್ನು ಜೇನಿಗೆ ಬೆರೆಸಿ ಬಿಸಿನೀರಿನಲ್ಲಿ ಕುಡಿದರೆ ತಿಂಗಳಲ್ಲಿ ನಿಮ್ಮ ದೇಹದ ತೂಕ ಗಣನೀಯವಾಗಿ ಇಳಿಕೆಯಾಗಬಲ್ಲದು. ಲಿಂಬೆಹಣ್ಣು ಅಥವಾ ನಿಂಬೆಕಾಯಿಯ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುತ್ತದೆ. ಇದರ ತಯಾರಿಯೇ ವಿಶೇಷ. ಮಿಶ್ರಣವಾಗಿಯೂ ಬಳಸಬಹುದು. ಇನ್ನೂ ಮಾಟಮಂತ್ರಗಳಲ್ಲಿಯೂ ನಿಂಬೂ ಬಳಕೆ ಹೆಚ್ಚು. ದೇವಿ ಪೂಜೆಗಳಲ್ಲಿಯೂ ಲಿಂಬೆಹಣ್ಣಿನ್ನು ಹರಕೆ ಒಪ್ಪಿಸಲಾಗುತ್ತದೆ.

ಪರ್ಫೆಕ್ಟ್ ಲಿಂಬೂ ಚಹಾ ಮಾಡಬೇಕೇ?

ಬೇಕಾಗುವ ಪದಾರ್ಥಗಳು: ಒಂದು ಟೀ ಸ್ಪೂನ್‍ನಷ್ಟು ಟೀ ಎಲೆಗಳು,ಒಂದು ಲಿಂಬೆಹಣ್ಣು,ಒಂದೆರಡು ಏಲಕ್ಕಿ, ಕಾಳುಜೇನು, ಸ್ವಲ್ಪಲಿಂಬೆ ಹೋಳು ಅಲಂಕಾರಕ್ಕೆ.

ತಯಾರಿ ವಿಧಾನ: 

1.ಪಾತ್ರೆಯಲ್ಲಿ ನೀರನ್ನು ಕುದಿಸಿ

2.ಟೀ ಎಲೆ ಅಥವಾ ಟೀ ಪುಡಿ ಬ್ಯಾಗ್ ಅದರಲ್ಲಿ ಅದ್ದಿ

3.ಲಿಂಬೆರಸ, ಏಲಕ್ಕಿ, ಜೇನನ್ನು ಅದರಲ್ಲಿ ಹಾಕಿ ಒಂದೈದು ನಿಮಿಷ ಕುದಿಸಿ

4..ಚೆನ್ನಾಗಿ ಕುದ್ದ ನಂತದ ಸೋಸಿದರೆ ಕುಡಿಯಲು ಲಿಂಬೆಚಹಾ ಸಿದ್ದ

ನಿಂಬೆ ಆರೋಗ್ಯಕ್ಕೆ, ತ್ವಚೆಗೆ ಬಹಳಷ್ಟು ಉಪಯುಕ್ತ:

lemons-tree

1. ಲಿಂಬೆ ಜೊತೆ ಜೇನುತುಪ್ಪ, ಕೋಳಿಮೊಟ್ಟೆ, ಮತ್ತು ಮೊಸರನ್ನು ಸೇರಿಸಿ ತ್ವಚೆಗೆ ಲೇಪಿಸಿದಲ್ಲಿ ಯಾವುದೇ ಬ್ಯೂಟಿಪಾರ್ಲರ್‍ಗೆ ಹೋಗುವ ಅಗತ್ಯವಿಲ್ಲ.

2. ಲಿಂಬೆಹಣ್ಣಿನ ರಸವನ್ನು ತೆಗೆದು ಒಂದರ್ದ ಬಟ್ಟಲು ಗಟ್ಟಿ ಮೊಸರಿಗೆ ಸೇರಿಸಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಬೇಕು. 10-15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದರೆ ತ್ವಚೆಯ ತೇವಾಂಶ ಕಾಪಾಡುವುದರ ಜೊತೆಗೆ ನುಣುಪಾದ ಚರ್ಮ ಮತ್ತು ಮುಖದ ಸೌಂದರ್ಯ ಹೊಂದಬಹುದು.

3. ಒಂದು ಚಮಚ ಲಿಂಬೆರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಫೇಸ್‍ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದಲ್ಲಿನ ಮೊಡವೆಗಳನ್ನು ಶಾಶ್ವತವಾಗಿ ಹೋಗಲಾಡಿಸಬಹುದು

4. ಸೌತೆಕಾಯಿ ರಸ ಮತ್ತು ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಅದನ್ನು ಹತ್ತಿಯಲ್ಲಿ ಅದ್ದಿ ಮುಖಕ್ಕೆ ನಿರಂತರವಾಗಿ ಕನಿಷ್ಟ 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಹೀಗೆ ಮುರ್ನಾಲ್ಕು ಬಾರಿ ಮಾಡಿ ಬಳಿಕ ತಣ್ಣೀರಿನಲ್ಲಿ ಮುಖವನ್ನು ತೊಳೆದರೆ ಜಿಡ್ಡುಯುಕ್ತ ಮುಖದಿಂದ ಮುಕ್ತಿ ಹೊಂದಬಹುದು

5.ಮುಲ್ತಾನಿ ಮಣ್ಣು ಅಥವಾ ಎರೆಮಣ್ಣು ಇದಕ್ಕೆ ಒಂದು ಲಿಂಬೆಹಣ್ಣಿನ ರಸವನ್ನು ಬೆರಸಿ ಪೇಸ್ಟ್ ತಯಯಾರಿಸಿ. ಇದರಿಂದಲೂ ಪೇಸ್‍ಪ್ಯಾಕ್ ಮಾಡಿಕೊಳ್ಳಬಹುದು. ಇದು ಉತ್ತಮ ಪ್ಯಾಕ್‍ಗಳಲ್ಲಿ ಒಂದು. ಮುಖದ ಕಲೆ ತೆಗೆಯುವುದರೊಂದಿಗೆ ತಾಜಾ ತ್ವಚೆ ಹೊಂದಲು ಸಹಕರಿಸುತ್ತದೆ.

6.ಆರೋಗ್ಯವಂತ ಮತ್ತು ಸೌಂದರ್ಯ ಇಮ್ಮಡಿಸುವ ತ್ವಚೆಗೆ ಐದಾರು ಚಮಚದಷ್ಟು ಟೊಮೆಟೊ ರಸ ಮತ್ತು ಲಿಂಬೆರಸವನ್ನು ತಯಾರಿಸಿಕೊಂಡು ಮುಖಕ್ಕೆ ಅಪ್ಲೈ ಮಾಡಬೇಕು. ಇದು ತ್ವಚೆ ಸಂಬಂಧಿತ ಅಲರ್ಜಿಯಿಂದ ದೂರ ಮಾಡುತ್ತದೆ. ಅಷ್ಟೇ ಅಲ್ಲ ಮೊಡವೆಗಳನ್ನು ಹತ್ತಿರಕ್ಕು ಸುಳಿಯಗೊಡದು

ಲತಾಪರಮೇಶ್
ಸ್ನೇಹ ಬ್ಯೂಟಿಪಾರ್ಲರ್, ನಂ. 656, 8ನೇ ಅಡ್ಡರಸ್ತೆ,
1ನೇ ಮುಖ್ಯರಸ್ತೆ, ಭುವನೇಶ್ವರಿ ನಗರ,
ಆರ್.ಟಿ. ನಗರ, ಬೆಂಗಳೂರು-32
ಮೊಬೈಲ್ : 91640 89890

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!