ನಿದ್ರಾಹೀನತೆಯೇ?- ಈ ಉಪಾಯಗಳನ್ನು ಪಾಲಿಸಿ.

ನಿದ್ರಾಹೀನತೆಯೇ?- ಈ ಉಪಾಯಗಳನ್ನು ಪಾಲಿಸಿ.ಗಣನೀಯವಾಗಿ ಕಾಣಿಸಿಕೊಳ್ಳುತ್ತಿರುವ ಒತ್ತಡ, ಶ್ರಮರಹಿತ ಜೀವನ ಪದ್ಧತಿಗಳೇ ಅದಕ್ಕೆ ಕಾರಣ ಎನ್ನಬಹುದು.

ನಿದ್ರಾಹೀನತೆಯೇ?- ಈ ಉಪಾಯಗಳನ್ನು ಪಾಲಿಸಿ.ಆಧುನಿಕ ಪ್ರಪಂಚದಲ್ಲಿ ನಿದ್ರಾಹೀನತೆ ಒಂದು ದೊಡ್ಡ ಸಮಸ್ಯೆಯಾಗಿದೆ. ನಗರ ಪ್ರದೇಶದಲ್ಲಿನ ವೈದ್ಯರ ಬಳಿ ಬರುವ ರೋಗಿಗಳಲ್ಲಿ ಪ್ರತಿಶತ 15ರಷ್ಟು ರೋಗಿಗಳು ನಿದ್ರಾಹೀನತೆಯಿಂದ ಬಳಲುತ್ತಿರುವವರಾಗಿರುತ್ತಾರೆ. ಗಣನೀಯವಾಗಿ ಕಾಣಿಸಿಕೊಳ್ಳುತ್ತಿರುವ ಒತ್ತಡ, ಶ್ರಮರಹಿತ ಜೀವನ ಪದ್ಧತಿಗಳೇ ಅದಕ್ಕೆ ಕಾರಣ ಎನ್ನಬಹುದು. ಶ್ರಮವಹಿಸಿ ಕೆಲಸ ಮಾಡುವ ರೈತ ರಾತ್ರಿ 9 ರಿಂದ ಮುಂಜಾನೆಯವರೆಗೆ ಸುಖವಾದ ನಿದ್ರೆ ಮಾಡುತ್ತಾನೆ. ಆತನ ಆರೋಗ್ಯ ಸಹ ಚೆನ್ನಾಗಿರುತ್ತದೆ. ಅದೇ ಮಾನಸಿಕ ಒತ್ತಡದಿಂದ ಕೆಲಸ ಮಾಡುವ ರಾಜಕಾರಣಿ, ವ್ಯಾಪಾರಿ, ವಕೀಲ, ಕಂಪ್ಯೂಟರ್ ಇಂಜಿನೀಯರ್ ಮುಂತಾದವರು ರಾತ್ರಿ ನಿದ್ರೆ ಬಾರದೆ ನಿದ್ರೆಮಾತ್ರೆಗಳಿಗೆ ಶರಣಾಗುತ್ತಾರೆ. ಅನೇಕ ದೈಹಿಕ, ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಸುಖನಿದ್ರೆಗೋಸ್ಕರ ಕೆಲವು ಸರಳ ವಿಧಾನ:

ಸುಖನಿದ್ರೆಗೋಸ್ಕರ ಕೆಲವು ಸರಳ ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ. ಮಾತ್ರೆ ರಹಿತ ಸುಖ ನಿದ್ರೆಯನ್ನು ಹೊಂದಿ, ಆರೋಗ್ಯಯುಕ್ತ ಜೀವನವನ್ನು ಪಡೆಯಿರಿ.

1. ಪ್ರತಿನಿತ್ಯ ವ್ಯಾಯಾಮ ಮಾಡಿ. ಪ್ರತಿನಿತ್ಯ ಒಂದು ಗಂಟೆಯ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ. ಒತ್ತಡ ರಹಿತವಾಗಿರಿ.

2. ಕಚೇರಿ ವಿಷಯಗಳನ್ನು ಮನೆಯಲ್ಲಿ ಚಿಂತಿಸಬೇಡಿ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ತಿಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಿ. ನಿನ್ನೆಯ ಬಗೆಗೆ ಅಥವಾ ನಾಳೆಯ ಬಗೆಗೆ ಯಾವಾಗಲೂ ಚಿಂತೆ ಮಾಡುತ್ತಾ ಕುಳಿತುಕೊಳ್ಳಬೇಡಿ. ಪ್ರಸಕ್ತ ಸನ್ನಿವೇಶವನ್ನು ಎದುರಿಸಿ ಮುಂದುವರೆಯುತ್ತಾ ಇರಿ.

3. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ. ಕೇವಲ ಸಮಸ್ಯೆಯ ಆಳವನ್ನೇ ಯೋಚಿಸುವುದು ಬಿಟ್ಟು ಪರಿಹಾರ ಹುಡುಕಿ ಸಂತೃಪ್ತಿಯಿಂದಿರಿ. ನಮಗೆ ಜೀವನದಲ್ಲಿ ದೊರೆತ ಸೌಲಭ್ಯಗಳಲ್ಲೇ ಸಂತೃಪ್ತಿ ಹೊಂದುವುದನ್ನು ಅಭ್ಯಾಸ ಮಾಡಿಕೊಳ್ಳಿ.

4. ಅತಿ ಆಸೆ ದುಃಖಕ್ಕೆ ಕಾರಣವಾಗುತ್ತದೆ. ಕನಿಷ್ಠ ಸೌಲಭ್ಯವೂ ಇಲ್ಲದ ಬಡವರ ಬಗೆಗೆ ಕನಿಕರ ತೋರಿಸಿ, ನಮಗೆ ದೊರೆತದ್ದರ ಬಗೆಗೆ ಸಂತೃಪ್ತಿಯಿಂದಿರಿ.

5. ಮಾನಸಿಕ ಕ್ಷೋಭೆಗಳಿಂದ ಮುಕ್ತವಾಗಿರಲು ಭಕ್ತಿಯಿಂದ ದಿನಕ್ಕೆರಡು ಬಾರಿ ಪ್ರಾರ್ಥಿಸಿ, ಪ್ರತಿನಿತ್ಯದ ದೇವರ ಪೂಜೆಯನ್ನು ಕಾಟಾಚಾರಕ್ಕೊಸ್ಕರ ಮಾಡದೇ ಸಮರ್ಪಣಾ ಭಾವದಿಂದ ಮಾಡಿ.

6. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿ.

7. ರಾತ್ರಿಯ ಆಹಾರ ಮಿತವಾಗಿರಲಿ. ರಾತ್ರಿ ಭಾರೀ ಭೋಜನ ಒಳ್ಳೆಯದಲ್ಲ. ಲಘು ಆಹಾರ ಸಾಕು. ಹಣ್ಣು, ಹಸಿ ತರಕಾರಿ ಹೆಚ್ಚೆಚ್ಚು ಸೇವಿಸಿ.

8. ರಾತ್ರಿ ಊಟವನ್ನು ಸರಿಯಾದ ನಿರ್ದಿಷ್ಟ ವೇಳೆಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಊಟ ಹಾಗೂ ನಿದ್ರೆಯ ನಡುವೆ 2-3 ಗಂಟೆಗಳ ಅಂತರ ಇರಬೇಕು.

9. ಒಳ್ಳೆಯ ಪುಸ್ತಕ ಓದಿ. ಮಲಗುವ ಮುಂಚೆ ಭಯಾನಕ ಟಿ.ವಿ. ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡಬೇಡಿ.

10. ಭಯಾನಕ ಕಥಾ ಪುಸ್ತಕಗಳನ್ನು ಓದಬೇಡಿ. ದೇವರ ನಾಮವನ್ನು ಸ್ಮರಿಸಿ ನಿದ್ರಿಸಿ. ತಲೆ ಮತ್ತು ಪಾದಕ್ಕೆ ಸಾಸಿವೆ ಎಣ್ಣೆ ಹಚ್ಚಿ ಮಲಗಿ.

11. ಚಹಾ-ಕಾಫಿ ಬೇಡ.dr hegde add ಚಹಾ-ಕಾಫಿಗಳಲ್ಲಿ ಅನೇಕ ಉತ್ತೇಜಕ ಪದಾರ್ಥಗಳಿರುತ್ತವೆ. ಇವುಗಳನ್ನು ಪೂರ್ತಿಯಾಗಿ ಬಿಡಲು ಪ್ರಯತ್ನಿಸಿ, ಮದ್ಯಪಾನವನ್ನು ಪೂರ್ತಿಯಾಗಿ ತ್ಯಜಿಸಿ.

12. ಯಾವುದೂ ಅತಿಯಾಗಿದ್ದರೆ ಒಳ್ಳೆಯದಲ್ಲ. ಅತಿಯಾದ ಊಟ, ಅತಿಯಾದ ಕೆಲಸ, ಅತಿಯಾದ ಲೈಂಗಿಕಾಸಕ್ತಿ ಹತೋಟಿಯಲ್ಲಿಟ್ಟುಕೊಳ್ಳಿ.

13. ಹಗಲು ನಿದ್ರೆ ಬಿಡಿ. ಚಿಕ್ಕಮಕ್ಕಳು, ವಯಸ್ಸಾದವರು ಹಾಗೂ ರೋಗಿಗಳನ್ನು ಬಿಟ್ಟು ಉಳಿದವರು ಹಗಲಿನಲ್ಲಿ ನಿದ್ರೆ ಮಾಡಬೇಕಾಗಿಲ್ಲ.

14. ಕೊಠಡಿಯ ಕಿಟಕಿಗಳನ್ನು ತೆರೆದು ಮಲಗಿ. ಪ್ರಕೃತಿದತ್ತವಾದ ಪರಿಶುದ್ಧ ಗಾಳಿ ಸೇವಿಸಿ. ಅತ್ಯುತ್ತಮ ಶುದ್ಧವಾದ ಬೆಡ್‍ಶೀಟ್‍ಗಳನ್ನು ಬಳಸಿ.

15. ‘ಓಂ’ ಕಾರ ಹೇಳಿ. ಪ್ರತಿನಿತ್ಯ ಶವಾಸನದ ಅಭ್ಯಾಸ ಮಾಡಿ. ಅಂಗಾತ ಮಲಗಿ ಇಡೀ ದೇಹಕ್ಕೆ ಪ್ರಜ್ಞಾಪೂರ್ವಕವಾಗಿ ವಿಶ್ರಾಂತಿ ಕೊಡಿ. ಕೊನೆಯಲ್ಲಿ ‘ಓಂಕಾರ’ವನ್ನು ಮೂರು ಬಾರಿ ದೀರ್ಘವಾಗಿ ಉಚ್ಛರಿಸಿ ‘ಓಂಕಾರ’ದ ತರಂಗಗಳನ್ನು ಅನುಭವಿಸುತ್ತ ದೇಹಕ್ಕೆ ವಿಶ್ರಾಂತಿ ನೀಡಿ. ದೇಹದಲ್ಲಿ ಉಂಟಾಗುವಂತಹ ಆರಾಮವನ್ನು ಅನುಭವಕ್ಕೆ ತಂದುಕೊಳ್ಳಲು ಪ್ರಯತ್ನಿಸಿ.

Dr-Venkatramana-Hegde-nisargamane
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!