ನೇತ್ರದಾನ ಬಹಳ ಪವಿತ್ರವಾದ ಮಹಾದಾನ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ.
ನೇತ್ರದಾನ ಬಹಳ ಪವಿತ್ರವಾದ ದಾನ. ನಾವು ಸತ್ತ ಬಳಿಕವೂ ಜಗತ್ತನ್ನು ಆನಂದಿಸಬೇಕಿದ್ದಲ್ಲಿ ನಮ್ಮ ಕಣ್ಣುಗಳನ್ನು ಇನ್ನೊಬ್ಬರಿಗೆ ನಮ್ಮ ಮರಣಾನಂತರ ದಾನ ಮಾಡಬೇಕು. ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು 3ರಿಂದ 4 ಮಿಲಿಯನ್ ಮಂದಿ ಕಾರ್ನಿಯಾದ ಅಂಧತ್ವದಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇಕಡಾ 60 ಮಂದಿ 12ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ.
ಯಾವ ದಾನ ಮಾಡಬಹುದು?
ಒಂದು ವಯಸ್ಸಿನ ಮಗುವಿನಿಂದ ಹಿಡಿದು ಎಂಭತ್ತರ ಮುದುಕರೂ ನೇತ್ರದಾನ ಮಾಡಬಹುದು. ಯಾವುದೇ ರೀತಿಯ ವಯಸ್ಸು, ಜಾತಿ, ಮತ ಬೇಧಗಳ ನಿರ್ಭಂಧ ನೇತ್ರದಾನಕ್ಕೆ ಇಲ್ಲ. ತಮ್ಮ ಕುಟುಂಬದ ಅನುಮತಿ ಮಾತ್ರ ಅತೀ ಅಗತ್ಯ. ಕನ್ನಡಕ ಬಳಸುವವರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವವರೂ ಕೂಡಾ ನೇತ್ರದಾನ ಮಾಡಬಹುದು. ವ್ಯಕ್ತಿಯ ಮರಣಾನಂತರ ಮಾತ್ರ ನೇತ್ರದಾನ ಮಾಡಬಹುದಾಗಿದೆ. ನೇತ್ರದಾನ ಮಾಡಿದಾಗ ಮುಖಕ್ಕೆ ಯಾವುದೇ ರೀತಿಯ ವಿಕಲತೆ ಬರುವುದಿಲ್ಲ.
ನೇತ್ರದಾನಕ್ಕಿಂತ ಮೊದಲು ರಕ್ತ ಪರೀಕ್ಷೆ ಮಾಡಿ ಸಾಂಕ್ರಮಿಕ ರೋಗಗಳಿಲ್ಲ ಎಂದು ಪರಾಮರ್ಶಿಸಿದ ಬಳಿಕವೇ ಕಾರ್ನಿಯಾವನ್ನು ತೆಗೆಯಲಾಗುತ್ತದೆ. ಕಣ್ಣಿನ ತೆಳುವಾದ ಸಾರದರ್ಶಕ ಪದರವಾದ ಕಾರ್ನಿಯಾವನ್ನು ಮಾತ್ರ ತೆಗೆಯಲಾಗುವುದು. ಒಂದು ವೇಳೆ ನೇತ್ರದಾನಿಯಿಂದ ಪಡೆದ ಕಣ್ಣಿನಿಂದ ಕಾರ್ನಿಯಾ ಕಸಿ ಮಾಡಲು ಉಪಯೋಗವಾಗದಿದ್ದಲ್ಲಿ (ವೈದ್ಯಕೀಯ ಕಾರಣಗಳಿಂದಾಗಿ) ಅಂತಹ ಕಣ್ಣುಗಳನ್ನು ಸಂಶೋಧನೆಗಳಿಗೆ ಮತ್ತು ವಿದ್ಯಾರ್ಜನೆಗೆ ಉಪಯೋಗಿಸಲಾಗುವುದು ನೆನಪಿರಲಿ. ಒಂದು ಜೊತೆ ಕಣ್ಣುಗಳಿಂದ ಎರಡು ಕಾರ್ನಿಯ ಅಂಧತ್ವವಿರುವ ವ್ಯಕ್ತಿಯ ಬಾಳಿಗೆ ಬೆಳಕು ನೀಡಬಹುದು.
ಪಾರದರ್ಶಕತೆಯನ್ನು ಕಳೆದು ಕೊಂಡ ಕಾರ್ನಿಯಾವನ್ನು ತೆಗೆದು ದಾನಿಗಳಿಂದ ಪಡೆದ ಪಾರದರ್ಶಕ ಕಾರ್ನಿಯಾ ಜೋಡಿಸಿದಾಗ ದೃಷ್ಟಿ ಬರುತ್ತದೆ. ಜೀವಂತ ವ್ಯಕ್ತಿಯು ನೇತ್ರದಾನ ಮಾಡಲು ಕಾನೂನಿನಲ್ಲಿ ಸಮ್ಮತಿ ಇಲ್ಲ. ಆದರೆ ಮರಣಾನಂತರ ನೀಡಬಹುದು. ಅದೇ ರೀತಿ ರೆಟಿನಾ ತೊಂದರೆಯಿಂದಾಗಿ ಅಥವಾ ಕಣ್ಣಿನ ನರದ ತೊಂದರೆ (ಒಪ್ಟಿಕ್ ನರ) ಯಿಂದಾಗಿ ಅಂಧತ್ವವಿದ್ದ ವ್ಯಕ್ತಿಗಳು ಕೂಡಾ ನೇತ್ರದಾನ ಮಾಡಬಹುದು. ಅಂತಹ ವ್ಯಕ್ತಿಗಳ ಕಾರ್ನಿಯಾ ಪರದರ್ಶಕವಾಗಿದ್ದಲ್ಲಿ ಖಂಡಿತವಾಗಿಯೂ ಬೇರೆ ಅಂಧತ್ವ ಇರುವ ವ್ಯಕ್ತಿಗಳಿಗೆ ಬೆಳಕು ನೀಡಬಲ್ಲದು.
ನೇತ್ರದಾನ
1. ಕಣ್ಣು ದಾನವೆಂದರೆ ಮರಣದ ನಂತರ ವ್ಯಕ್ತಿಯ ಕಣ್ಣುಗಳನ್ನು ಕುಟುಂಬದ ಸಮ್ಮತಿಯೊಡನೆ ದಾನ ನೀಡುವುದು ಎಂದಾಗಿದೆ.
2. ಕಣ್ಣುಗಳನ್ನು ಮರಣದ ನಂತರ 4-6 ಗಂಟೆಗಳ ಒಳಗಾಗಿ ದಾನ ಮಾಡಬೇಕು.
3. ವಯಸ್ಸು, ಲಿಂಗ, ರಕ್ತ ಗುಂಪು, ಧರ್ಮದ, ಮತದ ಸಂಬಂಧವಿಲ್ಲದೆ ಯಾರು ಬೇಕಾದರೂ ದಾನ ಮಾಡಬಹುದು.
4. ಕಣ್ಣಿನ ಪೊರೆ ಇರುವ ಅಥವಾ ಕನ್ನಡಕ ಬಳಸುವ ಯಾರಾದರೂ ಕಣ್ಣುಗಳನ್ನು ದಾನ ಮಾಡಬಹುದು.
5. ಅಧಿಕ ರಕ್ತದೊತ್ತಡ, ಮಧುಮೇಹವಿರುವ ವ್ಯಕ್ತಿಗಳು ಸಹಾ ಕಣ್ಣುಗಳನ್ನು ದಾನ ನೀಡಬಹುದು.
6. ಎಲ್ಲಾ ಪ್ರಕ್ರಿಯೆಗೆ 15-20 ನಿಮಿಷಗಳಾಗುತ್ತದೆ. ದಾನ ಮಾಡಿದವರ ಮುಖವು ಅಂದಹೀನವಾಗುವುದಿಲ್ಲ.
7. ಕಣ್ಣುಗಳನ್ನು ಮೃತ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಔಪಚಾರಿಕವಾಗಿ ದಾನ ನೀಡುವುದಕ್ಕಾಗಿ ಪ್ರತಿಜ್ಞೆ ಮಾಡಿದ್ದರೂ ಸಹಾ ದಾನ ನೀಡಬಹುದು.
8. ನೇತ್ರ ಬ್ಯಾಂಕ್ ತಂಡವು ದಾನಿಯ ಮನೆಗೆ ಅಥವಾ ಮರಣದ ನಂತರ ಯಾವುದೇ ಸ್ಥಳಕ್ಕೆ ಧಾವಿಸುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಉಚಿತ ಸೇವೆಯಾಗಿರುತ್ತದೆ
9. ಕಣ್ಣುಗಳನ್ನು ದಾನ ನೀಡುವುದಾಗಿ ಪ್ರತಿಜ್ಞೆ ಮಾಡಿದ ನಂತರ ನಿಮ್ಮ ಕುಟುಂಬಕ್ಕೆ ಅದನ್ನು ಪೂರೈಸುವ ಸಲುವಾಗಿ ಕಣ್ಣುಗಳನ್ನು ದಾನ ನೀಡುವ ನಿಮ್ಮ ಇಚ್ಚೆಯನ್ನು ದಯವಿಟ್ಟು ತಿಳಿಸಿರಿ
10. ಕಣ್ಣುಗಳ ದಾನವನ್ನು ಕುಟುಂಬದ ಸಂಪ್ರದಾಯವಾಗಿಸಿ ಕೊಳ್ಳಿ.
ನೆನಪಿಡಿ
ಮರಣ ಹೊಂದಿದ ವ್ಯಕ್ತಿಯ ಕಣ್ಣೂಗಳನ್ನು ದಾನ ಮಾಡುವಾಗ :
1. ಎಲ್ಲಾ ಫ್ಯಾನ್‍ಗಳನ್ನು ಆಫ್ ಮಾಡಿರಿ ಮತ್ತು ಹವಾನಿಯಂತ್ರಣವನ್ನು ಅಥವಾ ಕೂಲರ್ ಅನ್ನು ಆನ್ ಮಾಡಿ.
2. ತಲೆಯನ್ನು ತಲೆದಿಂಬಿನ ಸಹಾಯದಿಂದ ಎತ್ತರಿಸಿ.
3. ಮುಚ್ಚಿರುವ ಕಣ್ಣುಗಳ ಮೇಲೆ ತೇವವಾದ ಹತ್ತಿಯನ್ನು ಇಡಿ.
4. ಸಾಧ್ಯವಾದರೆ ರೋಗನಿರೋಧಕ ದ್ರಾವಣಗಳನ್ನು ಕಣ್ಣುಗಳಿಗೆ ಸಿಂಪಡಿಸಿದಲ್ಲಿ ಬ್ಯಾಕ್ಟೀರಿಯಾ ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
5. ಮರಣ ಸಂಭವಿಸಿದ 3 ಗಂಟೆಗಳ ಒಳಗೆ ಈ ಕೆಳಗಿನ ಟೆಲಿಫೋನ್‍ಗೆ ಅಥವಾ ನಿಮ್ಮ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಕರೆ ಮಾಡಿ.
ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10
ದೂ: 080-23373311/66121300 Email : info@narayananethralaya.com ; info@nnmail.org
Website : www.narayananethralaya.org