ಅಘಾತವನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ನರ್ವಸ್ ಶಾಕ್ (ನರ ಅಘಾತ) ಮತ್ತು ಟ್ರೂ ಶಾಕ್ (ನಿಜವಾದ ಆಘಾತ)
ನರ್ವಸ್ ಶಾಕ್ : ಬಲವಾದ ಭಾವೋದ್ವೇಗದಿಂದಾಗಿ ಇದು ಉಂಟಾಗುತ್ತದೆ. ಉದಾಹರಣೆಗೆ ಭಯ, ನೋವು ಅಥವಾ ಕೆಟ್ಟ ಸುದ್ದಿಗಳು ಹಾಗೂ ಗಂಭೀರ ಗಾಯದಿಂದಾಗಿ ಉಂಟಾಗುವುದಲ್ಲ (ಚಿಕಿತ್ಸೆಯ ಅಗತ್ಯವಿರುವುದಿಲ್ಲ)
ಟ್ರೂ ಶಾಕ್ : ತೀವ್ರ ರಕ್ತ ಸ್ರಾವ, ತೀವ್ರ ಸುಟ್ಟ ಗಾಯ, ಹೃದಯಾಘಾತಗಳು, ಉದರ ತುರ್ತು ಸಮಸ್ಯೆ, ಕ್ರಷ್ ಇಂಜುರಿಗಳು, ದೇಹದ ದ್ರವದ ನಷ್ಟ ಮತ್ತು ಬ್ಯಾಕ್ಟೀರಿಯಾ ಸೋಂಕು.
ಲಕ್ಷಣಗಳು ಮತ್ತು ಚಿಹ್ನೆಗಳು :
- ಪ್ರಜ್ಞೆ ತಪ್ಪುವ ಅಥವಾ ಮಂಪರು ಅನುಭವ
- ದೃಷ್ಟಿ ಮಬ್ಬಾಗುವಿಕೆ
- ಜಿಗುಟಾದ ಚರ್ಮದೊಂದಿಗೆ ತಣ್ಣನೆಯ ಅನುಭವ
- ಮುಖ ಮತ್ತು ತುಟಿಗಳು ನಿಸ್ತೇಜವಾಗುವಿಕೆ.
- ನಾಡಿ ಮಿಡಿತ ಆರಂಭದಲ್ಲಿ ನಿಧಾನವಾಗಿ, ನಂತರ ಜೋರಾಗಿರುತ್ತದೆ.
- ವಾಂತಿ (ಬಹುತೇಕ ಪ್ರಕರಣಗಳಲ್ಲಿ)
- ಆಘಾತದ ನಂತರದ ಹಂತಗಳಲ್ಲಿ ಪ್ರಜ್ಞಾಶೂನ್ಯತೆ ಕಾರಣವಾಗುತ್ತದೆ.
ನಿರ್ವಹಣೆ :
- ಆಘಾತಕ್ಕೆ ಒಳಗಾದವರಿಗೆ ಸಾಂತ್ವನ, ಧೈರ್ಯದ ಭರವಸೆ ನೀಡಿ (ಪ್ರಜ್ಞೆಯಲ್ಲಿದ್ದಾಗ).
- ಆಘಾತಕ್ಕೆ ಒಳಗಾದವರನ್ನು ಬೆನ್ನಿನ ಮೇಲೆ ಆರಾಮವಾಗಿ ಇರಿಸಿ. ತಲೆ, ಎದೆ ಅಥವಾ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿರದ ಪ್ರಕರಣಗಳನ್ನು ಹೊರತುಪಡಿಸಿ ತಲೆಯನ್ನು ಸ್ವಲ್ಪ ಕೆಳಗಿರಿಸಿ ಒಂದು ಪಕ್ಕಕ್ಕೆ ವ್ಯಕ್ತಿಯನ್ನು ತಿರುಗಿಸಬೇಕು. ವಾಂತಿಯಾಗುತ್ತಿದ್ದರೆ ಥ್ರೀ ಕ್ವಾರ್ಟಟ್ ಬ್ಯಾಕ್ ಅಪ್ ಸ್ಥಾನದಲ್ಲಿರಿಸಿ.
- ಬಿಗಿಯಾದ ಉಡುಪುಗಳನ್ನು ಸಡಿಲಗೊಳಿಸಿ. ಆದರೆ ಬಟ್ಟೆಗಳನ್ನು ಬಿಚ್ಚಬಾರದು.
- ಮೃದು, ಹಗುರವಾದ ಬೆಡ್ಶೀಟ್ ಅಥವಾ ಬ್ಲಾಂಕೆಟ್ ಸುತ್ತಿ.
- ಹಾಟ್ ವಾಟರ್ ಬಾಟಲ್ಗಳು ಅಥವಾ ಬೆಚ್ಚಗಿನ ರಗ್ಗಳನ್ನು ಬಳಸಬಾರದು. ಯಾವುದೇ ವಸ್ತುವಿನಿಂದ ದೇಹದ ಯಾವುದೇ ಭಾಗವನ್ನು ಉಜ್ಜಬಾರದು.
- ಎದೆ ಅಥವಾ ಹೊಟ್ಟೆಗೆ ಗಾಯವಾಗಿದ್ದಲ್ಲಿ ನಂತರ ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವುದರಿಂದ ಅಥವಾ ರಕ್ತ ನೀಡಬೇಕಾಗಿರುವುದರಿಂದ ಬಾಯಿಯ ಮೂಲಕ ವ್ಯಕ್ತಿಗೆ ಏನನ್ನೂ ನೀಡಬಾರದು.
- ಮೇಲೆ ತಿಳಿಸಿರುವ ಎಲ್ಲ ಸಂಗತಿಗಳನ್ನು ಕ್ಷಿಪ್ರವಾಗಿ ಗಮನಿಸಬೇಕು. ಏಕೆಂದರೆ ಒಂದು ನಿಮಿಷ ತಡ ಮಾಡಿದರೂ ಅದು ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಎದೆ ಅಥವಾ ಹೊಟ್ಟೆಗೆ ಗಾಯವಾಗಿರದಿದ್ದಲ್ಲಿ ಮತ್ತು ರೋಗಿಯು ಎಚ್ಚರವಾಗಿದ್ದಲ್ಲಿ ನೀರು, ಬಿಸಿ ಟೀ ಅಥವಾ ಕಾಫಿ ಅಥವಾ ಎಳನೀರನ್ನು ನೀಡಿ (ಆಲ್ಕೋಹಾಲ್ ಪಾನೀಯಗಳನ್ನು ನೀಡಬಾರದು.
- ತೀರಾ ಮುಖ್ಯವಾದ ಸಂಗತಿ : ರೋಗಿಯನ್ನು ಪ್ರಥಮಾದ್ಯತೆ ಮೇರೆ ಆಸ್ಪತ್ರೆಗೆ ಸ್ಥಳಾಂತರಿಸಿಬೇಕು.
ಚಿಕಿತ್ಸೆ :
- ಜನರನ್ನು ವ್ಯಕ್ತಿಯ ಸುತ್ತ ಗುಂಪುಗೂಡಿ ನಿಲ್ಲಲ್ಲು ಬಿಡಿಬೇಡಿ. ಏಕೆಂದರೆ ರೋಗಿಗೆ ತಾಜಾ ಗಾಳಿಯ ಅಗತ್ಯವಿರುತ್ತದೆ.
- ಸಾಧ್ಯವಾದರೆ ರಕ್ತಸ್ರಾವವನ್ನು ನಿಲ್ಲಿಸಿ.
- ರೋಗಿಗೆ ಸಾಂತ್ವನ, ಧೈರ್ಯದ ಭರವಸೆ ನೀಡಿ.
- ರೋಗಿಯನ್ನು ಸಾಧ್ಯವಾದಷ್ಟೂ ಬೆಚ್ಚಗಿಡಿ.
- ತುಟಿಗಳು ಒಣಗಿದ್ದರೆ ತೇವಾಂಶವಾಗಿಡಿ.
- ಅತಿಸಾರವಾಗಿದ್ದರೆ ಸಾಕಷ್ಟು ದ್ರವರೂಪದ ಆಹಾರ ನೀಡಿ.
- ತಲೆ ಅಥವಾ ಬೆನ್ನುಹುರಿಗೆ ಗಾಯವಾಗಿರದಿದ್ದಲ್ಲಿ ರೋಗಿಯನ್ನು ತಲೆ ಕೆಳಗಿರಿಸಿದ ಸ್ಥಾನದಲ್ಲಿಡಿ.
- ಸಾಧ್ಯವಾದಷ್ಟೂ ಶೀಘ್ರ ರೋಗಿಯನ್ನು ಹತ್ತಿರದ ವೈದ್ಯರು ಅಥವಾ ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು.
ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 ಮೊ.: 97422 74849