ರಾಷ್ಟ್ರೀಯ ಆಯುರ್ವೇದ ದಿನ – ಶ್ವಾಸಕೋಶದ(ಪುಪ್ಪುಸ) ಆರೋಗ್ಯದ ಕಾಳಜಿ ನಿಮಗಿರಲಿ

ರಾಷ್ಟ್ರೀಯ ಆಯುರ್ವೇದ ದಿನ ನವೆಂಬರ್ 13. ಈ ವರ್ಷ ಆಯುರ್ವೇದ ದಿನವನ್ನು “ಆಯುರ್ವೇದ ಫಾರ್ ಕೊವಿಡ್-19 ಪೆಂಡೆಮಿಕ್” ಮುಖ್ಯ ವಿಷಯದೊಂದಿಗೆ ಆಚರಿಸಲಾಗುತ್ತದೆ. ಕೊವಿಡ್-19 ಯುಗದಲ್ಲಿ ಪುಪ್ಪುಸ (ಶ್ವಾಸಕೋಶ) ಸಂರಕ್ಷಣೆ ಮತ್ತು ಅದರ ಆರೋಗ್ಯದ ಅರಿವು ಮತ್ತು ಕಾಳಜಿ ನಿಮಗಿರಲಿ.

national-ayurveda-day

ಇತ್ತಿಚಿಗೆ ಕಾಣಿಸಿಕೊಂಡ ಹೊಸ ರೋಗ ಅದುವೆ ಕೊವಿಡ್-19. ಇದು ಕರೋನಾ ವೈರಸ್ಸಿನಿಂದ ಬರುವ ರೋಗವಾಗಿದೆ. ಈ ಭಯಾನಕ ಖಾಯಿಲೆಯಿಂದ ವಿಶ್ವದಾದ್ಯಂತ ಜನರು ಆತಂಕಗೊಂಡಿದ್ದಾರೆ. ಈ ವೈರಸ್ ಉಸಿರಾಟದ ಮೇಲೆ ಪರಿಣಾಮ ಬೀರುವದಾಗಿದ್ದು ಕೆಮ್ಮು, ಸೀನುವದು, ಜ್ವರ, ನೆಗಡಿ, ಗಂಟಲುಕೆರೆತ ಮತ್ತು ತಲೆನೋವಿನಂತಹ ಲಕ್ಷಣಗಳು ಕಾಣಿಸಿಕೊಳ್ಳುವವು. ಸಾಮಾನ್ಯವಾಗಿ ಅಹಿತಕರ ಆಹಾರ, ವಾಯು ಮಾಲಿನ್ಯ, ನಿಸರ್ಗದಲ್ಲಾದಂತ ಬದಲಾವಣೆಯಿಂದ, ಮೋಡದ ವಾತಾವರಣ, ಹೆಚ್ಚಿನ ಮಳೆ ಮತ್ತು ಗಾಳಿ, ಅತಿಯಾದ ಕೆಲಸ, ತಂಪಾದ ಹವೆಯ ಸೇವನೆ ಮತ್ತು ಮಳೆಯಲ್ಲಿ ನೆನೆಯುವದರಿಂದ ಶರೀರದಲ್ಲಿ ಕಫದೋಷವು ಅಧಿಕವಾಗಿ ಕಫ ಸಂಬಂಧಿ ರೋಗಗಳಾದ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಗಂಟಲಿನಲ್ಲಿ ಕೆರೆತ ಇತ್ಯಾದಿ ತೊಂದರೆಯ ಲಕ್ಷಣಗಳು ಕಾಣಿಸಿಕೊಳ್ಳುವವು. ಈ ಎಲ್ಲ ಲಕ್ಷಣ ಮತ್ತು ರೋಗಗಳಲ್ಲಿ ಹಾನಿಗೊಳಗಾಗುವ ಬಹುಮುಖ್ಯವಾದ ಅವಯವ ಅದು ಪುಪ್ಪುಸ. ಇದರ ಸಂರಕ್ಷಣೆ ಮತ್ತು ಇದರ ಆರೋಗ್ಯವನ್ನು  ನಿರ್ಲಕ್ಷ್ಯ ತೋರಿದರೆ ಅನೇಕ ಪುಪ್ಪುಸ ಸಂಬಂಧಿ ತೊಂದರೆಗಳನ್ನು ಅನುಭವಿಸುವದು ಶತಸಿದ್ಧ.

ಪುಪ್ಪುಸ (ಶ್ವಾಸಕೋಶ):

ಫುಪ್ಪುಸವನ್ನು ಶ್ವಾಸಕೋಶಗಳೆಂದು ಕರೆಯಲಾಗುವದು. ದೇಹದ ಬಲ ಮತ್ತು ಎಡಭಾಗದಲ್ಲಿ ಸೇರಿ ಎರಡು ಪುಪ್ಪುಸ ಇದ್ದು ಇವು ಉರ: ಸ್ಥಾನದಲ್ಲಿ (ಎದೆ ಗೂಡಿನಲ್ಲಿರುವ ಎರಡು ಪುಪ್ಪುಸ) ಇರುವ ಅವಯವವಾಗಿದೆ.  ರಕ್ತದ ನೊರೆಯಿಂದ ಪುಪ್ಪುಸದ ಉತ್ಪತ್ತಿಯಾಗಿದೆ. ಇದು ಗರ್ಭಾವಸ್ಥೆಯಲ್ಲಿ ಏಳನೆಯ ತಿಂಗಳಲ್ಲಿ ರೂಪಗೊಳ್ಳುವದು ಮತ್ತು ಉರ:ಸ್ಸು ಕಫದ ಸ್ಥಾನವಾಗಿದೆ. ದೇಹದಲ್ಲಿ ಉಸಿರಾಟದ ಕ್ರಿಯೆಗೆ ಪುಪ್ಪುಸವು ಪ್ರಮುಖ ಅವಯುವವಾಗಿದೆ. ಮನುಷ್ಯ ಪ್ರತಿ ನಿಮಿಷಕ್ಕೆ ಸುಮಾರು ಹದಿನಾರರಿಂದ ಇಪ್ಪತ್ತು ಭಾರಿ ಉಸಿರನ್ನು ತೆಗೆದುಕೊಂಡು ಹೊರ ಬಿಡುತ್ತಾನೆ. ಆರೋಗ್ಯವಂತನ ಪುಪ್ಪುಸವು ತೂಕದಲಿ ಸುಮಾರು 1300 ಗ್ರಾಂ ನಷ್ಟು ಇರುವದು.

Covid-19-and-hrudrogagalu

ಪ್ರಾಣವಾಯು, ಉದಾನವಾಯು ಮತ್ತು ವ್ಯಾನವಾಯುವಿನ ಕಾರ್ಯಗಳು ಇಲ್ಲಿ ನಡೆಯುತ್ತವೆ. ಶರೀರವು ಪ್ರಾಣವಾಯುವನ್ನು ತೆಗೆದುಕೊಳ್ಳುವದು, ಮಲರೂಪಿ ವಾಯುವನ್ನು ಹೊರಗೆ ಹಾಕುವದು. ಉದಾನವಾತದ ಕಾರ್ಯವು ಮತ್ತು ಉರಸ್ಸಿನ ಸಂಕೋಚನ ಮತ್ತು ವಿಕಸನ ಕಾರ್ಯವು ವ್ಯಾನವಾತದಿಂದ ನಡೆಯುತ್ತದೆ. ಶ್ವಾಸಕ್ರಿಯೆಯಲ್ಲಿ ಉಸಿರಾಟದ ಮೂಲಕ ಗಾಳಿಯಲ್ಲಿ ಆಮ್ಲಜನಕವನ್ನು ತೆಗೆದುಕೊಂಡನಂತರ ರಕ್ತನಾಳಗಳನ್ನು ಸೇರುತ್ತದೆ. ನಂತರ ರಕ್ತನಾಳಗಳಲ್ಲಿರುವ ಇಂಗಾಲದಾಮ್ಲವನ್ನು ಹೊರಹಾಕುತ್ತದೆ.

ಮನುಷ್ಯ ಬದುಕಿರುವತನಕ ಬಿಡುವಿಲ್ಲದೆ ಯಂತ್ರದಂತೆ ನಿರಂತರ ಕೆಲಸ ಮಾಡುತ್ತದೆ. ಇದರ ಆರೋಗ್ಯವನ್ನು ಮತ್ತು ಪುಪ್ಪುಸವು ಸುಸ್ಥಿತಿಯಲ್ಲಿರುವ ಹಾಗೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದಾಮ್ಲವನ್ನು ಹೊರಬಿಡುತ್ತಾನೆ. ಆದರೆ ಗಿಡ ಮರ ಬಳ್ಳಿಗಳು ಇಂಗಾಲದಾಮ್ಲವನ್ನು ತೆಗೆದುಕೊಂಡು ಆಮ್ಲಜನಕವನ್ನು ಬಿಡುತ್ತವೆ. ಆದ್ದರಿಂದ ನಮ್ಮ ಮನೆಯಲ್ಲಿ ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಗಿಡಮರ ಬೆಳೆಸುವದು ನಮ್ಮೆಲ್ಲರ ಕರ್ತವ್ಯವಾಗಬೇಕು.

ಶ್ವಾಸಕೋಶ ಸಂಬಂಧಿ ರೋಗಗಳು:

• ಎಲ್ಲರಿಗೂ ಸಾಮಾನ್ಯವಾಗಿ ಬರುವಂತಹ ನೆಗಡಿ
• ಧ್ವನಿಯಲ್ಲಿ ಬದಲಾವಣೆ (ಸ್ವರಬೇಧ)
• ಕೆಮ್ಮು
• ದಮ್ಮು (ಉಬ್ಬಸ)
• ಬಿಕ್ಕಳಿಕೆ
• ಕ್ಷಯರೋಗ
• ಪುಪ್ಪುಸದ ಕ್ಯಾನ್ಸರ್ ಇತ್ಯಾದಿ
ಈ ರೋಗಗಳು ಸರ್ವೆಸಾಮಾನ್ಯ .ಎಲ್ಲ ವಯಸ್ಸಿನವರಲ್ಲಿ ಮತ್ತು ಸ್ತ್ರೀ ಪುರುಷರಲ್ಲಿ ಕಾಣಿಸಿಕೊಳ್ಳುವವು.

ಶ್ವಾಸಕೋಶ ಸಂಬಂಧಿ ರೋಗಗಳಿಗೆ ಸಾಮಾನ್ಯ ಕಾರಣಗಳು:

• ಅತಿ ತಂಪಾದ ಆಹಾರವನ್ನು ಸೇವಿಸುವದರಿಂದ.
• ಅತಿಯಾದ ಸಿಹಿಪದಾರ್ಥ, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ.
• ಕಫವನ್ನು ಹೆಚ್ಚಿಸುವಂತಹ ಆಹಾರಗಳಾದ ಹಾಲು, ಮೊಸರು ಇತ್ಯಾದಿ ಹಾಲಿನ ಉತ್ಪನ್ನಗಳನ್ನು ಬಳಸುವದರಿಂದ.
• ಬಾಳೆ ಹಣ್ಣು, ಉಪ್ಪಿನಕ್ಕಾಯಿ, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳು.
• ಅತಿಯಾದ ಧೂಳು, ಹೊಗೆ ಮತ್ತು  ಶೀತಗಾಳಿ ಸೇವನೆಯಿಂದ.
• ಮಧ್ಯಪಾನ ಮತ್ತು ಧೂಮ್ರಪಾನ.
• ಪರಾಗ, ರಾಸಾಯನಿಕ ಪದಾರ್ಥಗಳು, ಗಿಡ, ಹೂವು, ಹುಲ್ಲಿನಲ್ಲಿರುವಂತಹ ಧೂಳು ಮತ್ತು ಕಲ್ಮಶಗಳಿಂದ.
• ಶ್ವಾಸಕೋಶ ಸಂಬಧಿ ಸೋಂಕಿನಿಂದ.
• ಹವಾಮಾನ ವೈಪರಿತ್ಯದಿಂದ.
• ಅತಿಯಾದ ವ್ಯಾಯಾಮ, ಮಾನಸಿಕ ಒತ್ತಡ.

ಇಲ್ಲಿ ತಿಳಿಸಿದ ಬೇರೆ ಬೇರೆ ಕಾರಣಗಳಿಂದ ಶರೀರದಲ್ಲಿ ವಾತದೋಷವು ದೂಷಿತಗೊಂಡು ಶ್ವಾಸ ಮಾರ್ಗವನ್ನು ದೂಷಿಸಿ, ಕಫವನ್ನು ವಿಷಮತೆಗೊಳಿಸಿ, ಪುಪ್ಪುಸದ ಮಾರ್ಗವನ್ನು ತಡೆದು ಶ್ವಾಸನಾಳದಲ್ಲಿ ಉಸಿರಾಟಕ್ಕೆ ಅಡಚನೆಯನ್ನುಂಟು ಮಾಡಿ ದಮ್ಮು/ಉಬ್ಬಸ ರೋಗವನ್ನುಂಟು ಮಾಡುವದು.

ಶ್ವಾಸಕೋಶ ಸಂಬಂಧಿ ಸಮಾನ್ಯ ಲಕ್ಷಣಗಳು:

• ಮೂಗಿನಲ್ಲಿ ಸದಾ ನೀರು ಸೊರುವದು, ಉರಿಯುವದು, ಮೂಗು ಕಟ್ಟಿಕೊಳ್ಳುವದು ಮತ್ತು ಮೂಗಿನಲ್ಲಿ ಕೆರೆತ/ತಿಂಡಿಬಿಡುವದು
• ಕಫಯುಕ್ತ ಕೆಮ್ಮು ಅಥವಾ ಒಣ ಕೆಮ್ಮು
• ಉಸಿರಾಟಕ್ಕೆ ತೊಂದರೆಯಾಗುವದು ಅಥವಾ ಕಷ್ಟದಿಂದ ಉಸಿರಾಡಿಸುವದು
• ಗಂಟಲಿನಲ್ಲಿ ಗುರ್ ಗುರ್ ಅನಿಸುವದು
• ಮೆಲಿಂದ ಮೆಲೆ ಸೀನುಬರುವದು
• ನಿದ್ರೆಬಾರದಿರುವದು
• ಆಯಾಸವಾಗುವದು
• ಅತಿಯಾದ ನೀರಡಿಕೆ- ಈ ಎಲ್ಲ ಲಕ್ಷಣಗಳು ರಾತ್ರಿ ಸಮಯದಲ್ಲಿ ಹೆಚ್ಚಾಗುವವು.

ಪ್ರಯೋಗಶಾಲಾ ಪರೀಕ್ಷೆಗಳು:

• ಕಫದ ಪರೀಕ್ಷೆ
• ರಕ್ತ ಪರೀಕ್ಷೆ
• ಎಕ್ಸ್ ರೇ

ಈ ಎಲ್ಲ ಅವಶ್ಯಕ ಪರೀಕ್ಷಗಳ ಮೂಲಕ ನಿಖರವಾದ ರೋಗದ ನಿರ್ಣಯ ಮಾಡಲಾಗುವದು.

ಉಪಯುಕ್ತ ಎಕಮೂಲಿಕೆಗಳ ಚಿಕಿತ್ಸೆ:

ಶುಂಠಿ, ಹಿಪ್ಪಲಿ, ಮೆಣಸು, ಆಡುಸೋಗೆ, ಪುಷ್ಕರಮೂಲ, ತುಳಸಿ, ಬೆಳ್ಳುಳ್ಳಿ ಇವುಗಳ ಚೂರ್ಣಗಳನ್ನು ತಯಾರಿಸಿ ಜೇನುತುಪ್ಪದೊಂದಿಗೆ ಸೇವಿಸುವದು. ಈ ದ್ರವ್ಯಗಳಿಂದ ಕಷಾಯಗಳನ್ನು ತಯಾರಿಸಿ ಕುಡಿಯಬೇಕು.

ಹಣ್ಣುಗಳು:

ದಾಳಿಂಬೆ ಹಣ್ಣು, ನೆಲ್ಲಿಕಾಯಿ, ಖರ್ಜುರ ಮತ್ತು ಒಣದ್ರಾಕ್ಷೀ ಬಿಸಿನೀರು, ಜೇನುತುಪ್ಪ, ಶುಂಠಿಯುಕ್ತ ಅಥವಾ ತುಳಸಿ ಪತ್ರಯುಕ್ತ ಚಹಾಪಾನ ಅಥವಾ ಶುಂಠಿ ಕಷಾಯ ಇವುಗಳು ಶ್ವಾಸಕೋಶ ಸಂಬಂಧಿ ರೋಗಗಳಿಗೆ ಅತಿ ಪರಿಣಾಮಾಕಾರಿಯಾದವುಗಳು.

ಶ್ವಾಸಕೋಶ ಸಂಬಂಧಿ ತೊಂದರೆಗಳಿಗೆ ಮನೆಮದ್ದು (ಅಡುಗೆ ಮನೆಯಲ್ಲಿ ಉಪಚಾರ):

ಕೆಲವು ಸಂಧರ್ಭಗಳಲ್ಲಿ ವೈದ್ಯರನ್ನು ಕಾಣಲು ಆಗದೆ ಇದ್ದಾಗ ಅಂತಹ ಸಮಯದಲ್ಲಿ ನಮ್ಮ ಅಡುಗೆ ಮನೆಯಲ್ಲಿ ಇರುವ ಕೆಲವು ಆಹಾರ ಪಧಾರ್ಥಗಳನ್ನ ಔಷಧಿಗಳನ್ನಾಗಿ ಬಳಸಿ ತಾತ್ಕಾಲಿಕ ಉಪಶಮನ ಪಡೆಯಬಹುದು.
ತುಳಸಿ ರಸವನ್ನು ತೆಗೆದು ಪ್ರತಿದಿನ ಒಂದು ಚಮಚೆಯಷ್ಟು (5 ಮಿ.ಲೀ) ದಿನಕ್ಕೆ ಎರಡು ಬಾರಿ ಊಟದ ಮೊದಲು ಸೇವಿಸಬೇಕು.
• 100 ಗ್ರಾಂನಷ್ಟು ಚನ್ನಾಗಿರುವ ಅರಿಷಣ ಪುಡಿಯನ್ನ ಹದವಾಗಿ ತುಪ್ಪದಲ್ಲಿ ಕಂದು ಬಣ್ಣಕ್ಕೆ ಬರುವಂತೆ ಯಥಾವತ್ ಹುರಿದು ಒಂದು ಚಮಚೆಯಷ್ಟು (5 ಗ್ರಾಂ ನಸ್ಟು) ದಿನಕ್ಕೆ ಎರಡು ಬಾರಿ ಊಟದ ಮೊದಲು ಬೆಚ್ಚನೆಯ ನೀರಿನೊಂದಿಗೆ ಸೇವಿಸಬೇಕು.
• 5 ಗ್ರಾಂನಷ್ಟು ಒಣ ಶುಂಠಿ ಪೌಡರನ್ನು ಇದಕ್ಕೆ ಒಂದು ಚಮಚೆಯಷ್ಟು ಜೇನುತುಪ್ಪವನ್ನು ಸರಿಯಾಗಿ ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಊಟದ ಮೊದಲು (5 ಗ್ರಾಂ ನಸ್ಟು) ನೆಕ್ಕಬೇಕು.
• 100 ಗ್ರಾಂನಷ್ಟು ಕರಿ ಮೆಣಸು ಮತ್ತು 100 ಗ್ರಾಂನಷ್ಟು ಜೀರಿಗೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದು ಕೊಂಡು ತುಪ್ಪದಲ್ಲಿ ಹುರಿದುಕೊಂಡು ನಂತರ ಇದನ್ನ ಪುಡಿ ಮಾಡಿ ಗಾಜಿನ ಭರಣಿಯಲ್ಲಿ ಸಂಗ್ರಹಿಸಿ ಪ್ರತಿದಿನ ಒಂದು ಚಮಚೆಯಷ್ಟು ಜೇನುತುಪ್ಪವನ್ನು ಸರಿಯಾಗಿ ಸೇರಿಸಿ ದಿನಕ್ಕೆ ಎರಡ ರಿಂದ ಮೂರು ಬಾರಿ 5 ಗ್ರಾಂ ನಸ್ಟು ಸೇವಿಸಬೇಕು.
ಲವಂಗ, ಒಣ ಶುಂಠಿ ಮತ್ತು ಕರಿ ಮೆಣಸು ಪ್ರತಿಯೋಂದು 100 ಗ್ರಾಂನಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಇದನ್ನ ಪುಡಿ ಮಾಡಿಕೊಂಡು ಗಾಜಿನ ಭರಣಿಯಲ್ಲಿ ಸಂಗ್ರಹಿಸಿ ಒಂದು ಚಮಚೆ ಜೇನುತುಪ್ಪವನ್ನು ಸರಿಯಾಗಿ ಸೇರಿಸಿ ದಿನಕ್ಕೆ ಎರಡ ರಿಂದ ಮೂರು ಬಾರಿ 5 ಗ್ರಾಂ ನಸ್ಟು ಸೇವಿಸಬೇಕು.
• ಒಂದು ಚಮಚೆಯಷ್ಟು ಅತಿಮಧುರ (ಜೇಷ್ಠಮಧು) ಪೌಡರನ್ನು ಜೇನುತುಪ್ಪವನ್ನು ಸರಿಯಾಗಿ ಸೇರಿಸಿ ದಿನಕ್ಕೆ ಎರಡು ಬಾರಿ ಊಟದ ಮೊದಲು 5 ಗ್ರಾಂ ನಸ್ಟು ನೆಕ್ಕಬೇಕು.

ಶಾಸ್ತ್ರೋಕ್ತ ಔಷಧಿಗಳು:

ತಜ್ಞ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಸೇವಿಸಬೇಕು:
ಆಸವ ಮತ್ತು ಅರಿಷ್ಠಗಳು: ವಾಸಕಾಸವ, ಕನಕಾಸವ, ಕಂಕುಷ್ಠಾಸವ ಮತ್ತು ಪುಷ್ಕರ ಮೂಲಾಸವ.
ಮಾತ್ರಾ: 15 ಮಿ.ಲೀ ರಿಂದ 20 ಮಿ.ಲೀ ಸಮಮಾತ್ರ ಪ್ರಮಾಣದಲ್ಲಿ ನೀರನ್ನು ಸೇರಿಸಿ ಊಟದ ನಂತರ ಸೇವಿಸಬೇಕು.
ಚೂರ್ಣಗಳು: ಸಿತೋಪಲಾದಿಚೂರ್ಣ ಮತ್ತು ತಾಲೀಸಾದಿ ಚೂರ್ಣ
ಮಾತ್ರಾ: 5 ಗ್ರಾಂ ಅಥವಾ 1 ಚಮಚೆಯಷ್ಟು ಜೇನು ತುಪ್ಪದೊಂದಿಗೆ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಬೇಕು.
ರಸೌಷಧಗಳು: ಶ್ವಾಸನಂದಗುಟಿಕಾ, ಶ್ವಾಸಕುಠಾರರಸ, ಶ್ವಾಸಕಾಸಚಿಂತಾಮಣಿ ಮತ್ತು ಧನ್ವಂತರಿಗುಟಿಕಾ
ಮಾತ್ರಾ: 125 ಮಿ. ಗ್ರಾಂ ರಿಂದ 250 ಮಿ. ಗ್ರಾಂ ಊಟದ ನಂತರ ದಿನಕ್ಕೆ ಎರಡ ರಿಂದ ಮೂರು ಬಾರಿ ಜೇನುತುಪ್ಪ ಅಥವಾ ಬೆಚ್ಚನೆಯ ನೀರಿನೊಂದಿಗೆ ಸೇವಿಸಬೇಕು.

ರಸಾಯನ ಔಷಧಗಳು:

ಅಗಸ್ತ್ಯಹರೀತಕಿ ರಸಾಯನ, ಚವ್ಯನ್‍ಪ್ರಾಶ್ ರಸಾಯನ, ವ್ಯಾಘ್ರೀ ಹರೀತಕಿ ರಸಾಯನ ಮತ್ತು ಚಿತ್ರಕ ರಸಾಯನ.
ಮಾತ್ರಾ: 10 ಗ್ರಾಂ ಗಳಷ್ಟು ಬೆಳಿಗ್ಗೆ ಆಹಾರ ಸೇವಿಸುವ ಮೊದಲು ಒಂದು ಬಾರಿ ಸೇವಿಸಬೇಕು.
ಈ ಔಷಧಿಗಳು ಪಚನಶಕ್ತಿಯನ್ನ ಹೆಚ್ಚಿಸುತ್ತದೆ, ಮಲಬದ್ಧತೆನ್ನು ನಿವಾರಣೆ ಮಾಡುವದು. ಜೊತೆಗೆ ಕಫವನ್ನು ಕರಗಿಸಿ ಶ್ವಸನವಹ ನಳಿಕೆಯನ್ನು ಮತ್ತು ಅದರ ಮಾರ್ಗದ ಅವರೋಧವನ್ನ ಸರಾಗವಾಗಿ ಮಾಡುವದು ಮತ್ತು ಗಲ/ಕಂಠ ಮತ್ತು ಪುಪ್ಪುಸದ ಸಾಮರ್ಥ್ಯವನ್ನು ಹೆಚ್ಚಿಸುವದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವದು.

ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲುವವರು ಇವುಗಳನ್ನು ಉಪಯೋಗಿಸಬೇಕು:

ಆಹಾರ: ಜೋಳ, ರಾಗಿ, ಗೋಧಿ, ಹುರಳಿ, ಹೆಸರು ಇವುಗಳಿಂದ ಸಿದ್ಧಪಡಿಸಿದ ಬಿಸಿ ಮತ್ತು ಉಷ್ಣ ಆಹಾರಗಳನ್ನು ಉಪಯೋಗಿಸಬೇಕು.
ತರಕಾರಿಯಲ್ಲಿ: ನುಗ್ಗೆಕಾಯಿ, ತೊಂಡೆಕಾಯಿ, ಮೂಲಂಗಿ, ಉಳ್ಳಾಗಡ್ಡಿ ಮತ್ತು ಬೆಳ್ಳೂಳಿ ಇವುಗಳನ್ನು ಉಪಯೋಗಿಸಬೇಕು.
ಎದೆ ಮತ್ತು ಬೆನ್ನಿಗೆ ಬಿಸಿನೀರಿನ ಬ್ಯಾಗನಿಂದ ಅಥವಾ ಬಟ್ಟೆಯಿಂದ ಶಾಖ ಕೊಡುವದು, ಉಣ್ಣೇ ಅಥವಾ ಉಷ್ಣ ಬೆಚ್ಚನೆಯ ವಸ್ತ್ರಗಳನ್ನ ಧರಿಸುವದು, ಸರಿಯಾದ ನಿದ್ರೆ ಮತ್ತು ವಿಶ್ರಾಂತಿ.

ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲುವವರು ಇವುಗಳನ್ನು ಉಪಯೋಗಿಸಬಾರದು:

ಆಹಾರ: ಮೀನು, ಮಾಂಸ ಆಹಾರ, ಹಾಲು, ಮೊಸರು ಇತರೆ ಹಾಲಿನ ಉತ್ಪನ್ನಗಳು, ಎಣ್ಣೇಯಲ್ಲಿ ಕರಿದ ಪಧಾರ್ಥಗಳು, ತಂಪು ಪಾನೀಯಗಳು, ದೂಮಪಾನ, ಮಧ್ಯಪಾನ, ತಂಭಾಕು ಮತ್ತು ಅದರ ಉತ್ಪನ್ನಗಳನ್ನು ಉಪಯೋಗಿಸಬಾರದು.
ಧಾನ್ಯಗಳು: ಅಕ್ಕಿ, ಉದ್ದಿನಬೇಳೆ ಇವುಗಳಿಂದ ಸಿದ್ಧಪಡಿಸಿದ ಕಫವನ್ನು ಹೆಚ್ಚಿಸುವಂತ ಆಹಾರಗಳನ್ನು ಉಪಯೋಗಿಸಬಾರದು.
ತರಕಾರಿಗಳು: ಆಲೂಗಡ್ಡೆ, ಗೆಣಸು ಇತರೆ ಗಡ್ಡೆಯಂತಹ ತರಕಾರಿಗಳನ್ನು ತಿನ್ನಬಾರದು.
ಹಣ್ಣುಗಳು: ಬಾಳೇಹಣ್ಣು, ಕಲ್ಲಂಗಡಿ, ಹುಳಿರಸದ ಹಣ್ಣುಗಳು ತೆಗೆದುಕೊಳ್ಳಬಾರದು.
ಮಳೆಯಲ್ಲಿ ನೆನೆಯುವದು, ಅತಿಯಾದ ಶಕ್ತಿ ಮಿರಿ ವ್ಯಾಯಾಮ, ಅತಿಯಾದ ತಂಪುಹವೆ, ಧೂಳು ಮತ್ತು ಹೊಗೆಯಲ್ಲಿ ಅತಿಯಾಗಿ ಕೆಲಸ ಮಾಡಬಾರದು ಮತ್ತು ಯಾವದು ನಮ್ಮ ಶರೀರಕ್ಕೆ ಒಗ್ಗುವದಿಲ್ಲವೋ ಅದನ್ನು ಬಿಡಬೇಕು.

ಆರೋಗ್ಯವಂತರು ಮತ್ತು ರೋಗಿಗಳಿಗೆ ಮಾರ್ಗದರ್ಶನ ಅಥವಾ ಮುಂಜಾಗ್ರತೆಯ ಕ್ರಮಗಳು:

• ಪ್ರಥಮವಾಗಿ ಅನಾರೋಗ್ಯತರವಾದ ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕು.
ಶರೀರಕ್ಕೆ ಒಗ್ಗದ ಆಹಾರ ಪಧಾರ್ಥಗಳನ್ನು ಗುರುತಿಸಿ ತ್ಯಜೀಸಬೇಕು ಉದಾಹರಣೆಗೆ: ಮೊಸರು, ಬಾಳ್ಳೆಹಣ್ಣು, ಉಪ್ಪಿನಕಾಯಿ ಇತ್ಯಾದಿಗಳು.
• ತಂಪಾದ ನೀರಿನಿಂದ ದಿನನಿತ್ಯ ತಲೆಸ್ನಾನ, ಚಳಿ, ತಂಪುಗಾಳಿಯಲ್ಲಿ ಪ್ರಯಾಣ, ವಿಷಕ್ಕೆ ಸಮಾನವಾದ ತಂಪುಪಾನೀಯಗಳನ್ನು, ಅಧಿಕವಾದ ಬೇಕರಿ ಪದಾರ್ಥ, ಫಾಸ್ಟ್‌ಫುಡ್ಗಳನ್ನು ಸೇವಿಸಬಾರದು.
• ಅತಿಯಾದ ದೂಮಪಾನ, ಮಧ್ಯಪಾನ, ತಂಭಾಕು ಮತ್ತು ಗುಟಕಾ ವ್ಯಸನವನ್ನು ಬಿಡಬೇಕು.
• ಕೆಲವು ವಸ್ತುಗಳಿಗೆ ಅಲರ್ಜಿ ಯಾಗುವದನ್ನು ಕಂಡುಕೊಂಡು ಕೆಲಸಮಾಡುವ ಸಮಯದಲ್ಲಿ ಮೂಗಿಗೆ ಮಾಸ್ಕಧರಿಸಬೇಕು.
• ಪೂರ್ವದಲ್ಲಿ ಸೇವಿಸಿದ ಆಹಾರವು ಸರಿಯಾಗಿ ಪಚನಗೊಂಡ ನಂತರವೆ ಹಿತವಾದ, ಮಿತವಾದ ಋತುಗಳಿಗೆ ಅನುಸಾರ ಆಹಾರ ಸೇವಿಸಬೇಕು.
• ಅವರವರ ಶರೀರಕ್ಕೆ ಅನುಸಾರ, ವಯಸ್ಸು ಮತ್ತು ಶಕ್ತಿಗೆ ಅನುಸಾರ ಯೋಗ, ಪ್ರಾಣಯಾಮ ಮತ್ತು ಧ್ಯಾನ ಮಾಡುವದರಿಂದ ಆರೋಗ್ಯ ಹೆಚ್ಚುವದು.
• ಅಧಿಕ ವ್ಯಾಯಮ, ಮೈಥುನ ಮತ್ತು ಶ್ರಮ ಬೇಡ, ಆತಿಯಾಗಿ ಉಪಾವಾಸ ಮಾಡುವದು ಬೇಡ.
• ವಯಸ್ಸಿಗಣುಗುಣವಾಗಿ ಆಧಿಕ ರಕ್ತದ ಒತ್ತಡ, ಅಧಿಕ ಕೊಬ್ಬಿನಂಶ, ಸಕ್ಕರೆರೋಗ, ಅಧಿಕಬೊಜ್ಜು, ಹೃದಯ ಸಂಬಂಧಿ ರೋಗಿಗಳು ಸೂಕ್ತ ವೈದ್ಯರಿಂದ ಪರೀಕ್ಷಿಸಿಕೊಂಡು ಈ ರೋಗದಿಂದ ಬಳಲುತ್ತಿರುವವರು ಸರಿಯಾದ ಔಷಧ ಉಪಚಾರ ಪಡೆಯಬೇಕು. ವೈದ್ಯರು ಹೇಳಿದಂತ ಔಷಧಗಳನ್ನು ಸರಿಯಾಗಿ ತೆಗದುಕೊಳ್ಳಬೇಕು ಯಾವುದೇ ಕಾರಣಕ್ಕೂ ಔಷಧಗಳನ್ನು ಸ್ವಯಂ ನಿಲ್ಲಿಸಬಾರದು.
• ಪ್ರತಿದಿನ ವಯಕ್ತಿಕ ಶುಚಿತ್ವವನ್ನು ಮತ್ತು ನಾವು ವಾಸಿಸುವ ಮನೆ ಮತ್ತು ಕೊಠಡಿಗಳನ್ನು ಸ್ವಚ್ಚವಾಗಿರುವಂತೆ ನೋಡಿಕೊಳ್ಳುವದು.
• ರೋಗ ನಿರೋಧಶಕ್ತಿ ಹೆಚ್ಚಿಸುವಂತಹ ಆಹಾರ ಮತ್ತು ವಿಹಾರಗಳನ್ನು ಪಾಲಿಸುವದು.
• ದಮ್ಮು, ಕೆಮ್ಮು, ನೆಗಡಿ ಬಂದಾಗ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತಚಿಕಿತ್ಸೆ ಪಡೆಯಬೇಕು.
• ಎಲ್ಲ ಚಿಕಿತ್ಸೆಗಳು ಎಲ್ಲರಿಗೂ ಸರಿ ಹೊಂದುವದಿಲ್ಲಾ, ಆ ರೋಗಿಯ ವಯಸ್ಸು, ಶಕ್ತಿಗೆ ಅನುಗುಣವಾಗಿ ಬೇರೆ ಬೇರೆ ಚಿಕಿತ್ಸೆ ಮಾಡಲಾಗುವದು.

ಸ್ವಯಂ ಚಿಕಿತ್ಸೆ ಹಾನಿಕಾರಕ ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಅತಿ ಅವಶ್ಯಕ.
“ಸರ್ವೆ ಸಂತು ನಿರಾಮಯ”

dr-santosh-ayurveda-day

ಡಾ: ಸ0ತೋಷ ನೀಲಪ್ಪ. ಬೆಳವಡಿ ಎ0.ಡಿ. (ಆಯು), ಪಿ.ಎಚ್.ಡಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗ
ಡಿ.ಜಿ.ಎ0.ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಗದಗ.
Email: ayursnb@yahoo.co.in, Phone: 9886916367

ಡಾ: ಮಮತಾ. ಯ. ಖಟಾವಕರ್ ಎಮ್.ಎಸ್ (ಆಯು)
ಸಹಾಯಕ ಪ್ರಾಧ್ಯಾಪಕರು, ಶಾಲಾಕ್ಯತಂತ್ರ ವಿಭಾಗ
ಡಿ.ಜಿ.ಎ0.ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಗದಗ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!