ನಕ್ಕರೇ ಅದುವೇ ಸ್ವರ್ಗ – ನಾವು ಯಾಕಾಗಿ ನಗಬೇಕು ?

ನಕ್ಕರೇ ಅದುವೇ ಸ್ವರ್ಗ ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ. ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. 

ಈಗೀನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು ಕೂಡಾ ಒಂದು ಹಣ ಸಂಪಾದನೆಯ ಮಾರ್ಗ ಎಂಬ ಸತ್ಯ ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.  ಸುಂದರವಾದ ದಂತ ಪಂಕ್ತಿಗಳಿಂದ ಮನ ಬಿಚ್ಚಿ ನಿಷ್ಕಲ್ಮಶವಾಗಿ ಹೃದಯ ತುಂಬಿ ನಕ್ಕಲ್ಲಿ ಮನುಷ್ಯನಿಗೆ ಯಾವುದೇ ರೋಗ ಬರಲಿಕ್ಕಿಲ್ಲ ಎಂದು  ತಿಳಿದವರು ಹೇಳುತ್ತಾರೆ. ಜಗತ್ತಿನಲ್ಲಿ ಉಚಿತವಾಗಿ ನಿರಯಾತವಾಗಿ ಸಿಗುವ ಒಂದೇ ವಸ್ತು ಎಂದರೆ ನಗು. ನಗು ಎನ್ನುವುದು ಸಾಂಕ್ರಾಮಿಕ. ನಗುವಿನಿಂದ ಒಬ್ಬ ವ್ಯಕ್ತಿ ತನ್ನ ಜೊತೆಗಿರುವವರನ್ನು ತನ್ನ ಮೋಡಿಗೆ ಬೀಳಿಸುವ, ಪರಸ್ಪರ ಅನ್ಯೋನ್ಯತೆ ಬೆಳೆಸುವ, ವಿಶ್ವಾಸ ವರ್ಧಿಸುವ, ನವಚೈತನ್ಯ ಮೂಡಿಸುವ ಅದ್ಬುತ ಶಕ್ತಿ ನಗುವಿಗೆ ಇದೆ.

ನಕ್ಕರೇ ಅದುವೇ ಸ್ವರ್ಗ - ನಾವು ಯಾಕಾಗಿ ನಗಬೇಕು ?

ನಾವು ಯಾಕಾಗಿ ನಗಬೇಕು ?

1. ನಗು ನಮ್ಮ ಮನಸ್ಸಿಗೆ ಉಲ್ಲಾಸ, ಸಂತಸ ಮತ್ತು ಸಮಾಧಾನ ನೀಡುತ್ತದೆ.
2. ನಗುವಿನಿಂದ ನಮ್ಮ ಶ್ವಾಸಕೋಶದ ಪ್ರಕ್ರಿಯೆಯನ್ನು ಸುಗಮ ಗೊಳಿಸಬಹುದು.
3. ನಗುವಿನಿಂದ ಮಾನಸಿಕ ತಳಮಳ, ಭಯ, ಆತಂಕ ಮತ್ತು ಮನೋ ವ್ಯಾಕುಲತೆಯನ್ನು ಶಮನ ಮಾಡಬಹುದು.
4. ನಗು ನಮ್ಮ ಮನಸ್ಸಿಗೆ ಧೈರ್ಯ ಮತ್ತು ಸದೃಢತೆಯನ್ನು ನೀಡಿ, ಮನೋ ಸ್ಥಿತಿಯನ್ನು ಉಚ್ಚಾಯ ಸ್ಥಿತಿಯಲ್ಲಿ ಇಡುತ್ತದೆ.
5. ಧನಾತ್ಮಕ ಮತ್ತುಆಶಾದಾಯಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯಮಾಡುತ್ತದೆ.
6. ನಗು ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಮತ್ತು ಆಯಾಮವನ್ನು, ದಿಶೆಯನ್ನು ನೀಡುತ್ತದೆ.
7. ಯಾತನಾಮಯ ಮತ್ತು ನೋವಿನ ಸ್ಥಿತಿಗಳಲ್ಲಿ ಮಾನಸಿಕ ದೃಪತಿಯನ್ನುಧೈರ್ಯವನ್ನು ನೀಡಿ ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತದೆ.
8. ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಗಳಿಂದಲೂ ಆರೋಗ್ಯಕ್ಕೆ ಪೂರಕವಾದ ದ್ರವ್ಯಗಳೂ ಸ್ರವಿಸಲ್ಪಟ್ಟು ಜೀವಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ.
9. ನಮ್ಮ ಬದುಕಿಗೆ ನಗು ಹೊಸ ಆಯಾಮವನ್ನು ನೀಡಿ ಬಾಳಿಗೆ ಬೆಳಕು ನೀಡುತ್ತದೆ.
10. ನಮ್ಮ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಜೊತೆಗಿದ್ದವರನ್ನು ಮತ್ತಷ್ಟು ಉಲ್ಲ್ಲಾಸಿತರನ್ನಾಗಿ ಮಾಡಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ವಿವಾದಗಳನ್ನು ಅಂತ್ಯ ಮಾಡುತ್ತದೆ. ಒಟ್ಟಿನಲ್ಲಿ ನಗು ಎನ್ನುವುದು ಉಚಿತವಾಗಿ ದೊರಕುವ ಔಷಧಿ.

ವೈಜ್ಞಾನಿಕವಾಗಿ ನಗುವಿನ ಪರಿಣಾಮ

ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಮನಸ್ಸು ಒಮ್ಮೆ ಹಾಯಾಗಿ ನಕ್ಕಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ನಾಯುಗಳು ಸಡಿಲಗೊಂಡು ರಕ್ತ ಸಂಚಾರ ಸುಗಮವಾಗಿ ಆ ಮೂಲಕ ಹೃದಯದ ಕೆಲಸ ಕಾರ್ಯಗಳು ಯಶಸ್ವಿಯಾಗುವಂತೆ ಪರೋಕ್ಷವಾಗಿ ಕಾರಣವಾಗುತ್ತದೆ. ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅದಕ್ಕಾಗಿಯೇ ನಗುವಿನಲ್ಲಿದೆ ಸ್ವರ್ಗ, ನಗಬಾರದೇಕೆ? ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ

ನಗು ಎನ್ನುವುದು ಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡುಕೊಳ್ಳುತ್ತಾರೆ. ಅಂತಹಾ ವ್ಯಕ್ತಿಗಳ ಜೊತೆ ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಿ ಬಂದು ಮಾನಸಿಕ ಒತ್ತಡ ಕಡಿಮೆಯಾಗಿ ನಾವು ಕೂಡ ಹೆಚ್ಚು ಹೆಚ್ಚು ನಗು ನಗುತ್ತಾ ನೂರು ಕಾಲ ಬದುಕಬಹುದು. ನಾವು ಬದುಕುತ್ತಿರುವ ಈಗೀನ ಲೆಕ್ಕಾಚಾರದ ಜಗತ್ತಿನಲ್ಲಿ ನಗಲೂ ಕೂಡಾ ವ್ಯಾಪಾರಿ ಮನೋಭಾವ ತಾಳುವಂತಹ ಪರಿಸ್ಥಿತಿ ಬಂದೊದಗಿದೆ. ಜೀವನ ಎನ್ನುವುದು ಬಹುದೊಡ್ಡ ಪ್ರಯಾಣ. ಈ ಪ್ರಯಾಣದಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಬರುವುದು ಸಹಜ.

ನಮ್ಮ ಜೀವನವೇ ನಮಗೆ ಸವಾಲಾದಾಗ, ಜಟಿಲವಾದಾಗ, ಸಮಸ್ಯೆಯಾಗಿ, ಕಂಟಕವಾಗಿ ನಾವು ತುಂಬಾ ಗಂಭೀರವಾಗಿ ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತೇವೆ. ಎದುರಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮುಕ್ತ ಮನಸ್ಸಿನಿಂದ ನಿರ್ಮಲವಾಗಿ, ಸಮಾಧಾನದಿಂದ ಎದುರಿಸುವುದನ್ನು ಕಲಿತಾಗ ಸಮಸ್ಯೆಗಳೇ ಹೊಸತನ್ನು ಮಾಡಲು, ಕಲಿಯಲು ಪ್ರೇರೇಪಿಸುತ್ತದೆ. ನಗು ನಗುತ್ತಾ ಇದ್ದರೆ ಜೀವನದಲ್ಲಿ ಬರುವಂತಹಾ ಎಂತಹುದೇ ಕಷ್ಟಗಳನ್ನು ನೀರಾಜಾಲವಾಗಿ ಎದುರಿಸಬಹುದು. ಬದುಕಿನ ಮಹತ್ತರವಾದ ಗಳಿಗೆಯಲ್ಲಿ, ಕಷ್ಟಕಾಲದಲ್ಲಿ ಆಶಾಕಿರಣವನ್ನು ಬದುಕಿನ ಹೊಸ ಚೈತನ್ಯವನ್ನು, ದಾರಿಯನ್ನುತೋರುವ ಶಕ್ತಿ ನಗುವಿಗೆ ಖಂಡಿತಾ ಇದೆ.ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ. ನಕ್ಕರೆ ಅದೇ ಸ್ವರ್ಗ, ನಗಬಾರದೇಕೆ ?

dr-muralee-mohan

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!