ಮುನಿಯಾಲು ಆಯುರ್ವೇದ ಸಂಸ್ಥೆ : ರೋಗನಿರೋಧಕ ಶಕ್ತಿಯ ವೃದ್ಧಿಗೆ ಔಷಧ

ಮುನಿಯಾಲು ಆಯುರ್ವೇದ ಸಂಸ್ಥೆ ಕೋವಿಡ್‍ನ ಈ ಸಂಕಷ್ಟ ಸಮಯದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಅನೇಕ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು  ಪ್ರಸ್ತುತಪಡಿಸುತ್ತಿದೆ.

ಇಂದು ನಮ್ಮನ್ನು ನಾನಾ ರೀತಿಯಲ್ಲಿ ಕಾಡುತ್ತಿರುವ ತೀರಾ ಹೊಸ ಕಾಯಿಲೆಯಾದ ಕೋವಿಡ್ -19 ನಂತೆ ಪ್ರತಿಯೊಂದು ಕಾಯಿಲೆಯೂ ಮನುಷ್ಯ ಜಾತಿಯನ್ನು ಆರಂಭದಿಂದಲೂ ಕಾಡುತ್ತಾ ಬಂದಿದೆ. ಇವುಗಳಿಗೆ ಸೂಕ್ತವಾದ ಚಿಕಿತ್ಸೆ ಇಲ್ಲವೇ ಲಸಿಕೆಗಳು ಲಭ್ಯವಾಗುವವರೆಗೂ ರೋಗಿಗಳು ನರಳಿದ್ದಾರೆ, ಪ್ರಾಣ ತ್ಯಜಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅನುಶಾಸಿತ ಆರೋಗ್ಯ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಂತವರು ಇಂತಹ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಆಯುರ್ವೇದವು ಒಂದು ಜೀವನ ಶಾಸ್ತ್ರವೂ ಹೌದು. ಇದರಲ್ಲಿ ಅನೇಕ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು ವಿವರಿಸಿದ್ದಾರೆ. ಇವುಗಳಲ್ಲಿ ಆಯ್ದ ಕೆಲವು ಅತ್ಯುತ್ತಮ ಔಷಧಿಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕಾಯಕದಲ್ಲಿ ಕಳೆದ ಸುಮಾರು 80 ವರ್ಷಗಳಿಂದ ತೊಡಗಿಸಿಕೊಂಡಿರುವ ಮುನಿಯಾಲು ಆಯುರ್ವೇದ ಸಂಸ್ಥೆಯು ಕೋವಿಡ್‍ನ ಈ ಸಂಕಷ್ಟ ಸಮಯದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಉತ್ಪನ್ನಗಳು ಪ್ರಸ್ತುತಪಡಿಸುತ್ತಿದೆ.

Immune-Boosting-Products-from-Muniyal-Ayurveda /ಮುನಿಯಾಲು ಆಯುರ್ವೇದ ಸಂಸ್ಥೆ : ರೋಗನಿರೋಧಕ ಶಕ್ತಿಯ ವೃದ್ಧಿಗೆ ಔಷಧ

1. ಮುನಿಬಯೋಟಿಕ್ ಪ್ಲಸ್ ಮಾತ್ರೆಗಳು ಜ್ವರ, ಪ್ರತಿಶ್ಯಾಯ, ಶೋಥಶೂಲ ಹಾಗೂ ರಕ್ತಪಿತ್ತ ಕಾಯಿಲೆಗಳಲ್ಲಿ ಬಳಸುವ ಪರಿಣಾಮಕಾರಿ ಔಷಧಗಳ ಸಂಯೋಗ. ಇದು ಫ್ಲೂ, ಡೆಂಗ್ಯೂ ಹಾಗೂ ಚಿಕುನ್‍ಗುನ್ಯಾದಂತಹ ವೈರಾಣುಗಳನ್ನು ಸಮರ್ಪಕವಾಗಿ ನಿವಾರಿಸುತ್ತದೆ ಹಾಗೂ ಖಾಯಿಲೆಯ ಲಕ್ಷಣ ಹಾಗೂ ಉಪದ್ರವಗಳನ್ನು ಹೋಗಲಾಡಿಸುತ್ತದೆ. ಇದಕ್ಕೆ ಅಮೇರಿಕ ಪೇಟೆಂಟ್ ಸಹ ಲಭ್ಯವಾಗಿದೆ. ದಿನಕ್ಕೆ 2 ಮಾತ್ರೆ 2 ಸಾರಿ ಬಳಸುವುದರಿಂದ ಜ್ವರ, ವೈರಾಣು ಹಾಗೂ ಬ್ಯಾಕ್ಟೀರಿಯ ಸೋಂಕಿನಿಂದ ಬರುವ ಕೆಮ್ಮು, ನೆಗಡಿ, ಗಂಟಲು ನೋವು ಉರಿಯೂತ ಹಾಗೂ ಶ್ವಾಸ ಸಂಬಂಧಿ ಕಾಯಿಲೆಗಳಲ್ಲಿ ಉತ್ತಮ ಉಪಶಮನ ಕಂಡು ಕೊಳ್ಳಬಹುದು.

2. ಹಿರಣ್ಯಪ್ರಾಶ ಬಿಂದುಗಳು ಹುಟ್ಟಿದಾರಭ್ಯ ಮುಪ್ಪಿನವರೆಗೂ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಶುದ್ಧ ಚಿನ್ನದ ನಾನೋ ಕಣಗಳಿಂದ ಕೂಡಿದ ಈ ಔಷಧ ಕ್ಯಾನ್ಸರ್‍ನಂತಹ ಪ್ರಾಣಘಾತಕ ಮಹಾರೋಗಗಳಲ್ಲಿಯೂ ಖಾಯಿಲೆಯೊಡನೆ ಹೋರಾಡುವ ಶಕ್ತಿಯನ್ನು ವರ್ಧಿಸುತ್ತದೆ. ಇದು ಒಂದು ಉತ್ತಮ ಆಂಟಿ ಓಕ್ಸಿಡೆಂಟ್ ಆಗಿಯೂ ದೀರ್ಘಕಾಲೀನ ಹಾಗೂ ಮುಪ್ಪಿನ ಖಾಯಿಲೆಗಳಲ್ಲಿಯೂ ಉಪಯೋಗಿಯಾಗಿದೆ.

3. ಮುನಿಯಾಲು ಸ್ವಾಸ್ಥ್ಯ ಚೂರ್ಣ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ , ವಿಶೇಷವಾಗಿ ಶ್ವಾಸಕೋಶದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಸ್ಥಿರ ಉತ್ತಮ ಪಚನ ಕ್ರಿಯೆಯನ್ನು ನೀಡುತ್ತದೆ.ಮಕ್ಕಳಲ್ಲಿ ಬೆಳವಣಿಗೆಗೆ ಪೂರಕವಾಗಿ, ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. (ಸೇವಿಸುವ ಪ್ರಮಾಣ – 1 ಚಮಚ ದಿನಕ್ಕೆರಡು ಬಾರಿ ಆಹಾರಸೇವನೆಯ ನಂತರ, ಅನುಪಾನ – ಬಿಸಿಹಾಲು).

4. ಜೆರಿಟೋನ್ ಲೇಹ – ರುಚಿಕರವಾದ, ಉತ್ತಮ ಆರೋಗ್ಯಲಾಭದ ಆಯುರ್ವೇದದ ಗಿಡಮೂಲಿಕೆ ಹಾಗೂ ಖನಿಜಗಳ ಶಕ್ತಿ ಮಿಶ್ರಣ, 100 ಶೇಕಡ ನೈಸರ್ಗಿಕ, ರಾಸಾಯನಿಕಗಳಿಲ್ಲದ ಪ್ರಾಕೃತಿಕ ವಿಟಮಿನ್, ಖನಿಜ ಹಾಗೂ ಆಂಟಿ ಓಕ್ಸಿಡೆಂಟಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶಾರೀರಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಶ್ವಾಸಕೋಶವನ್ನು ಬಲಪಡಿಸುತ್ತದೆ ಹಾಗೂ ಪಚನ ಕ್ರಿಯೆಯನ್ನು ಉತ್ತಮಪಡಿಸುತ್ತದೆ. ಸೇವಿಸುವ ಪ್ರಮಾಣ – 6-12 ಗ್ರಾಮ್ ಬಿಸಿ ಹಾಲು/ನೀರಿನೊಂದಿಗೆ ದಿನಕ್ಕೆ ಎರಡು ಬಾರಿ, ಆಹಾರದ ನಂತರ.

5. ಏಕಮೂಲಿಕಾ ಮಾತ್ರೆಗಳು ವೃಕ್ಷಾಯುರ್ವೇದದಲ್ಲಿ ವಿವರಿಸಿದ ವಿಧಾನಗಳಿಂದ ಬೆಳೆಸಿದಂತಹ ಗಿಡಮೂಲಿಕೆಗಳನ್ನು ವಿಶೇಷ ಸಂಸ್ಕಾರಕ್ಕೆ ಒಳಪಡಿಸಿ ಮಾತ್ರೆಗಳನ್ನು ತಯಾರಿಸಿರುವುದು ಇವುಗಳ ವೈಶಿಷ್ಠ್ಯ. ಬ್ರಾಹ್ಮಿ, ಆಮಲಕಿ(ನೆಲ್ಲಿಕಾಯಿ), ವಿಭೀತಕೀ(ಶಾಂತಿಕಾಯಿ), ಹರೀತಕೀ(ಅಣೆಲೆಕಾಯಿ), ಪುನರ್ನವ, ಶುಂಠಿ, ಅಮೃತಬಳ್ಳಿ, ಕಹಿಬೇವು, ಅಶ್ವಗಂಧ, ನೆಲನೆಲ್ಲಿ, ಮಂಜಿಷ್ಠ, ಶತಾವರೀ, ಜೇಷ್ಠಮಧು, ತ್ರಿಫಲಾ, ತ್ರಿಕಟು, ದಶಮೂಲ ಇವೇ ಮೊದಲಾದ ದ್ರವ್ಯಗಳ ಮಾತ್ರೆಗಳನ್ನು ವಿಶೇಷವಾಗಿ ಆರೋಗ್ಯವನ್ನು ವರ್ಧಿಸಲು ಹಾಗೂ ಖಾಯಿಲೆಗಳನ್ನು ಗುಣಪಡಿಸುವ ಸಲುವಾಗಿ ತಯಾರಿಸಲಾಗಿದೆ.

ನಾಗರೀಕರು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಯೆನಪೆಯ ಮಾಲ್‍ನಲ್ಲಿ ಹಾಗೂ ವಿ.ಟಿ ರಸ್ತೆಯ ರಾಮಕೃಷ್ಣ ಧರ್ಮ ವೈದ್ಯಾಶ್ರಮ ಶಾಖೆ ಹಾಗೂ ರಾಜ್ಯದಾದ್ಯಂತ ಇರುವ ಪ್ರತಿನಿಧಿ ವೈದ್ಯರ ಚಿಕಿತ್ಸಾಲಯಗಳಲ್ಲಿ ಈ ಔಷಧಿಗಳು ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಟೋಲ್ ಪ್ರೀ ಸಂಖ್ಯೆ 18004253178 ಮತ್ತು 2526998 ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Also read: ಮುನಿಯಾಲು ಆಯುರ್ವೇದ ಸಂಸ್ಥೆಯ ಕ್ಯಾನ್ಸರ್‌ ಔಷಧಿ ಹಾಗೂ ಚಿಕಿತ್ಸಾ ಕ್ರಮಕ್ಕೆ ಅಮೆರಿಕಾದ ಪೇಟೆಂಟ್

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!