ಮಾವು ಬಹುಪಯೋಗಿ – ಧಾತುಗಳಿಗೆ ಪುಷ್ಠಿ ವೀರ್ಯವೃದ್ಧಿಗೆ ಸಹಕಾರಿ.

ಮಾವು ಎಂದರೆ ನಮಗೆ ನೆನಪಾಗುವುದು ಮಾವಿನಹಣ್ಣು ಮಾತ್ರ. ಆದರೆ ಮಾವಿನ ಮರದ ಎಲ್ಲಾ ಭಾಗಗಳೂ ಔಷಧೀಯ ಗುಣವನ್ನು ಹೊಂದಿದ್ದು ಬೇರಿನಿಂದ ಹಿಡಿದು ಬೀಜದವರೆಗೆ ಬಹುಪಯೋಗಿಯಾಗಿವೆ. ಮೊದಲು ಮಾವಿನಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ.

Mango-health-benefits./ಮಾವು ಬಹುಪಯೋಗಿ - ಧಾತುಗಳಿಗೆ ಪುಷ್ಠಿ ವೀರ್ಯವೃದ್ಧಿಗೆ  ಸಹಕಾರಿ.

ಮಾವು ಅತ್ಯಂತ ರುಚಿಪ್ರದವಾದ್ದರಿಂದ ಮತ್ತು ಬಹುತೇಕ ಎಲ್ಲರಿಗೂ ಇಷ್ಟವಾಗುವ ಹಣ್ಣಾಗಿರುವ ಕಾರಣ ಇದನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಆದರೆ ಕೇವಲ ಇಷ್ಟಕ್ಕೆ ಅಲ್ಲದೇ ಔಷಧಿ ಗುಣಗಳು ಕೂಡ ಇದಕ್ಕೆ ಈ ರೀತಿ ಕರೆಯಲು ಕಾರಣವಾಗಿರಬಹುದು.

1. ಚೆನ್ನಾಗಿ ಬಲಿತ ಮತ್ತು ಸಿಹಿಯಾಗಿರುವ ಮಾವಿನ ಹಣ್ಣು ವಾತ ದೋಷವನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದ ಇದನ್ನು ನರರೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅಂದರೆ ಅರ್ಧಾಂಗವಾಯು, ಪಾದಗಳಲ್ಲಿ ಉರಿ, ಪಾರ್ಕಿನ್ಸನ್ ರೋಗ ಮುಂತಾದ ಸಮಸ್ಯೆಗಳಲ್ಲಿ ಬಳಸಬಹುದು.

2. ಬಹಳಷ್ಟು  ಜನರಿಗೆ ಇದು ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ.

3. ಇದು ದೇಹದ ಧಾತುಗಳಿಗೆ ಪುಷ್ಠಿ ನೀಡಿ ಶಕ್ತಿಯನ್ನು ಹೆಚ್ಚಿಸುತ್ತದೆ. ಧನ್ವಂತರಿ ನಿಘಂಟು ಎಂಬ ಗ್ರಂಥದಲ್ಲಿ ಇದರ ಗುಣಗಳನ್ನು ವಿವರಿಸುವಾಗ ಬಲ್ಯ, ತರ್ಪಣ ಮತ್ತು ಶುಕ್ರವಿವರ್ಧನ ಎಂಬ ವಿವರಗಳನ್ನು ನೀಡುತ್ತಾರೆ. ಅಂದರೆ ಇದು ದೇಹಕ್ಕೆ ಪೋಷಣೆ ನೀಡಿ ಬಲವನ್ನು ಹೆಚ್ಚಿಸಿ ವೀರ್ಯವೃದ್ಧಿ ಮಾಡುತ್ತದೆ ಎಂದರ್ಥ.

4. ಮಾವಿನ ಹಣ್ಣನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಆಗುವ ಸುಸ್ತು, ಬಾಯಾರಿಕೆ ಗಳನ್ನು ನೀಗಿಸಿಕೊಂಡು ದೇಹದ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಆದರೆ ಹುಳಿಯಿರುವ ಮಾವಿನಕಾಯಿಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ವಾತ, ಪಿತ್ತ ಮತ್ತು ರಕ್ತ ದುಷ್ಟಿ ಆಗುತ್ತದೆ. ತುಸು ಹುಳಿಯಾಗುವ ಮಾವಿನಹಣ್ಣುಗಳನ್ನು ಸ್ವಲ್ಪಮಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಅನುಕೂಲವೂ ಆಗುತ್ತದೆ.

5. ಮಾವಿನ ಮರದ ತೊಗಟೆ ತುಂಬಾ ಒಗರು ರುಚಿಯಿದೆ. ಈ ಕಾರಣದಿಂದಾಗಿ ಇದು ಐಬಿಎಸ್, ಭೇದಿ ಮುಂತಾದ ಸಮಸ್ಯೆಗಳಲ್ಲಿ ತುಂಬಾ ಲಾಭದಾಯಕ. ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ಭೇದಿ, ಆಮಶಂಕೆಯಂತಹ ಸಮಸ್ಯೆಗಳಲ್ಲಿ ಮಾವಿನ ಮರದ ತೊಗಟೆಯನ್ನು ಮಜ್ಜಿಗೆಯಲ್ಲಿ ತೇಯ್ದು ತಿನ್ನಿಸುವುದು ಪ್ರಾಥಮಿಕ ಚಿಕಿತ್ಸೆಯಾಗಿದೆ ಮತ್ತು ಇದರಿಂದ ಔಷಧಗಳ ಸೇವನೆಯನ್ನು ಬಹಳಷ್ಟು ಬಾರಿ ತಪ್ಪಿಸಲು ಸಾಧ್ಯವಿದೆ.

6. ಮಾವಿನ ಮರದ ಎಳೆ ಚಿಗುರುಗಳಿಗೂ ಕೂಡ ಇದೇ ರೀತಿಯ ಗುಣವಿರುವ ಕಾರಣ ಪದೇ ಪದೇ ಭೇದಿ ಆಗುವಂತಹ ಐಬಿಎಸ್ ಸಮಸ್ಯೆ ಅನುಭವಿಸುತ್ತಿರುವವರು ಪ್ರತಿನಿತ್ಯ ಐದಾರು ಚಿಗುರೆಲೆಗಳನ್ನು ಜಗಿದು ಸೇವಿಸಬಹುದು. ಇದರಿಂದ ಬಾಯಿ ರುಚಿ ಹೆಚ್ಚುವುದರ ಜೊತೆಗೆ ಸರಿಯಾಗಿ ಹಸಿವೆಯೂ ಆಗುತ್ತದೆ.

Dr.-Venkatramana-Hegde

7. ಮಾವಿನ ಹಣ್ಣನ್ನು ತಿಂದ ನಂತರ ಸಿಗುವ ಒರಟೆಯನ್ನು ಒಡೆದರೆ ಸಿಗುವ ಮೆತ್ತನೆಯ ಬೀಜ ಕೂಡ ತುಂಬಾ ಒಳ್ಳೆಯ ಔಷಧವಾಗಿದೆ. ಇದರ ಒಗರು ರುಚಿಯ ಕಾರಣದಿಂದ ಇದನ್ನು ಅತಿಯಾದ ರಕ್ತಸ್ರಾವ, ಭೇದಿ, ಆಮಶಂಕೆ, ಬಿಳಿ ಮುಟ್ಟಿನ ತೊಂದರೆಗಳಲ್ಲಿ ಉಪಯೋಗಿಸಬಹುದು. ಬೀಜದ ಒಳಗಿನ ತಿರುಳುಗಳನ್ನು ಒಣಗಿಸಿ ಇಟ್ಟುಕೊಂಡರೆ ಅವಶ್ಯಕತೆ ಇರುವಾಗ ಬಳಸಬಹುದು. ಬಿಳಿಮುಟ್ಟಿನ ಸಮಸ್ಯೆ ಇರುವಾಗ ಕಾಲು ಚಮಚದಷ್ಟು ಈ ಪುಡಿಯನ್ನು ಅಕ್ಕಿ ನೆನೆಸಿದ ನೀರಿನಲ್ಲಿ ಹಾಕಿ ಸೇವಿಸಿದರೆ ಬಹಳ ಬೇಗ ನಿಯಂತ್ರಣಕ್ಕೆ ಬರುತ್ತದೆ.

8. ಮಾವಿನ ಎಲೆಗಳಿಂದ ಹಲ್ಲುಜ್ಜುವುದರಿಂದ ಹಲ್ಲಿನ ಆರೋಗ್ಯ ತುಂಬಾ ಚೆನ್ನಾಗಿ ಹೆಚ್ಚುತ್ತದೆ ಎಂಬುದು ಸಾಬೀತಾಗಿದೆ.

Also Read: Mango fruit – Eat and Treat 

ಬೇರಿನಿಂದ ಹಿಡಿದು ಬೀಜದವರೆಗೆ ಇದರಿಂದ ಆಗುವ ಪ್ರಯೋಜನಗಳನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಅತ್ಯಂತ ಪುಷ್ಟಿದಾಯಕವಾದ ಮತ್ತು ತಂಪು ಗುಣವನ್ನು ಹೊಂದಿರುವ ಸಿಹಿ ಮಾವಿನಹಣ್ಣುಗಳನ್ನು ಖುಷಿಯಿಂದ ಸವಿಯಬಹುದು. ಆದರೆ ಇತ್ತೀಚೆಗೆ ರಾಸಾಯನಿಕಗಳ ಬಳಕೆ ಅತಿಯಾಗಿರುವುದರಿಂದ ಕಾಯಿಗಳನ್ನು ಖರೀದಿಸಿ ಮನೆಯಲ್ಲಿಯೇ ಹಣ್ಣು ಮಾಡಿಕೊಂಡು ಸೇವಿಸುವುದು ಉತ್ತಮ.

Dr-Venkatramana-Hegde-nisargamane

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!