ಮಾನಸಿಕ ಒತ್ತಡವನ್ನು ಒದ್ದು ನಿಲ್ಲಿ. ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ನಿಮ್ಮಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
1. ನಿಮ್ಮ ಉತ್ತಮ ಕೆಲಸಗಳಿಗೆ ಬೆಂಬಲ ನೀಡುವ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಹಾಗೂ ಸಹಾಯ ನೀಡುವ ಮಿತ್ರರನ್ನು ಆಯ್ಕೆ ಮಾಡಿಕೊಳ್ಳಿ.
2. ಇಂದು ಮಾಡಬೇಕಾಗಿರುವ ಕೆಲಸ-ಕಾರ್ಯಗಳನ್ನು ನಾಳೆಗೆ ಮುಂದೂಡಬೇಡಿ. ಹಾಗೆ ಮುಂದೂಡಿದಾಗ ಮರುದಿನ ಕೆಲಸದ ಭಾರ ಜಾಸ್ತಿಯಾಗಿ ಮಾನಸಿಕ ಒತ್ತಡ ಉಂಟಾಗಬಹುದು. ಅಲ್ಲದೆ ಇನ್ನಾವುದೋ ಅನಿವಾರ್ಯ ಸಂದರ್ಭಗಳು ಎದುರಾಗಿ ಅಂದೂ ಕೆಲಸ-ಕಾರ್ಯಗಳು ಆಗದಿರಬಹುದು. ಆಗ ನಿಮ್ಮ ಒತ್ತಡ ಇನ್ನೂ ಜಾಸ್ತಿಯಾಗುತ್ತದೆ.
3. ಹಿಂದೆ ನಡೆದಿದ್ದನ್ನೆಲ್ಲ ಮರೆತು ಮುಂದೆ ಆಗುವ ಹಾಗೂ ಆಗಬೇಕಾದವುಗಳ ಕುರಿತು ಯೋಚಿಸಿ.
4. ನಿಮ್ಮಲ್ಲಿ ಮಾನಸಿಕ ಹಾಗೂ ದೈಹಿಕ ಕಾಳಜಿ ಸದಾ ಜಾಗೃತವಾಗಿರಲಿ.
5. ಕೈಗೆಡುಕದ ಕನಸುಗಳನ್ನು ಕಾಣಬೇಡಿ. ಅದು ನಿಮ್ಮ ಮಾನಸಿಕ ಒತ್ತಡವನ್ನು ಜಾಸ್ತಿ ಮಾಡುತ್ತದೆ.
6. ಕುಟುಂಬ ಹಾಗೂ ಸಮಾಜದಲ್ಲಿ ನಿಮ್ಮ ಅಗತ್ಯತೆ, ಮೌಲ್ಯ, ನಿಮ್ಮ ಸಾಮಥ್ರ್ಯ ಹಾಗೂ ನಿಮ್ಮಲ್ಲಿನ ನ್ಯೂನತೆಗಳ ಕುರಿತು ತಿಳಿದಿರಿ.
7. ಯಾವುದೇ ಕೆಲಸ ನಿಮ್ಮಿಂದ ಆಗುವುದಿಲ್ಲ ಎನಿಸಿದಲ್ಲಿ ಅಂಥ ಕೆಲಸಗಳನ್ನು ಮಾಡಲು ಮುಂದಾಗಬೇಡಿ ಅಥವಾ ಒಪ್ಪಿಕೊಳ್ಳಬೇಡಿ.
8. ಒಂದು ಮಿತಿಯಲ್ಲಿ ಮಾತನಾಡಿ. ಅದಕ್ಕಾಗಿ ನಿಮಗೆ ಬೆಂಬಲ ನೀಡುವಂಥ, ನಿಮ್ಮದೇ ಆದ ಗುಂಪೆÇಂದನ್ನು ಹುಡುಕಿಕೊಳ್ಳಿ.
9. ಸಿಟ್ಟಿಗೊಳಗಾಗುವದನ್ನು ಆದಷ್ಟು ತ್ಯಜಿಸಿ. ಒಂದೊಮ್ಮೆ ಸಿಟ್ಟುಬಂದರೆ ಅದನ್ನೂ ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳಬೇಡಿ.
10. ಒತ್ತಡಕ್ಕೊಳಗಾಗುವಂಥ ವಾತಾವರಣದಿಂದ ಆದಷ್ಟು ದೂರವಿರಲು ಪ್ರಯತ್ನಿಸಿ.
11. ಯಾವಾಗಲೂ ಹಸನ್ಮುಖಿಗಳಾಗಿರಲು ಪ್ರಯತ್ನಿಸಿ. ನಗುವಾಗ ಮನಃತುಂಬಿ ನಗಿ.
12. ನೀವು ನಿಮ್ಮ ಬಗ್ಗೆ ಯಾವಾಗಲೂ ಹುಶಾರಾಗಿರಿ, ನೀವು ಎಲ್ಲದರಲ್ಲಿಯೂ ಇತರರಿಗಿಂತ ಉತ್ತಮರು ಎನ್ನುವ ನಂಬಿಕೆ ನಿಮ್ಮದಾಗಿರಲಿ.
13. ಪರಿಸ್ಥಿತಿಗೆ ಹೋದಿಕೊಳ್ಳುವ ಮನೊಭಾವನೆ ಬೆಳೆಸಿಕೊಳ್ಳಿ. ಕಾಲಕ್ಕೆ ತಕ್ಕಂತೆ ಬದಲಾಗಿ.
14. ಉತ್ತಮ ಸಂಪರ್ಕಗಳನ್ನು ಜಾಸ್ತಿ ಬೆಳೆಸಿಕೊಳ್ಳಿ. ಇರುವ ಸಂಪರ್ಕವನ್ನು ಎಂದೂ ಕಳೆದುಕೊಳ್ಳಬೇಡಿ.
15. ಮನೆ, ಕಚೇರಿ ಅಥವಾ ಸಮಾಜ ಹೀಗೆ ಎಲ್ಲೆಡೆಗಳಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಿ.
16. ಯೋಗ, ಧ್ಯಾನಗಳನ್ನು ಮಾಡಿ, ನಿಯಮಿತವಾಗಿ ಮಸಾಜ್ ಮಾಡಿಸಿಕೊಳ್ಳಿ. ಈ ಮೂಲಕ ರಿಲ್ಯಾಕ್ಸ್ ಮಾಡಿಕೊಳ್ಳಿ.
17. ನೆಲದಮೇಲಿಂದ ಒಮ್ಮೆಲೇ ಮುಗಿಲಿಗೆ ಹಾರುವ ಪ್ರಯತ್ನ ಮಾಡಬೇಡಿ. ನಿಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತ ಜೀವನದಲ್ಲಿ ಮೇಲಕ್ಕೇರಲು ಪ್ರಯತ್ನಿಸಿ.
18. ಆಧ್ಯಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ. ಪ್ರತಿನಿತ್ಯ ನಿಗದಿತ ವೇಳೆಗೆ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ. ಪ್ರಾರ್ಥನೆಯು ಮನಸ್ಸಿನ ಭಾರವನ್ನು ತಗ್ಗಿಸುತ್ತದೆ.
19. ಸಮಯಕ್ಕೆ ಮಹತ್ವ ನೀಡುವುದನ್ನು ರೂಢಿಸಿಕೊಳ್ಳಿ. ಒಮ್ಮೆ ಕಳೆದುಹೋದ ಸಮಯ ಮತ್ತೆ ಬಾರದು ಎನ್ನುವುದು ಯಾವಾಗಲೂ ನೆನಪಿನಲ್ಲಿರಲಿ.
20.ಬೇರೆಯವರ ಕೆಲಸ ಅಥವಾ ಜೀವನದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಹಾಗೊಂದುವೇಳೆ ತಲೆಕೆಡಿಸಿಕೊಂಡರೆ ಅದರಿಂದ ಅವರಿಗಾಗುವ ಉಪಕಾರಕ್ಕಿಂತ ನಿಮಗಾಗುವ ಹಾನಿಯೇ ಜಾಸ್ತಿ ಎನ್ನುವುದು ನೆನಪಿರಲಿ.
21. ಎಲ್ಲಕ್ಕೂ ಹೆಚ್ಚಾಗಿ, ಯಾವುದಕ್ಕೂ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಏನೇ ಬಂದರೂ ಸಮರ್ಥವಾಗಿ ಎದುರಿಸುತ್ತೇನೇ ಎಂಬ ಧೈರ್ಯ ನಿಮ್ಮಲ್ಲಿರಲಿ.
ಡಾ.ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
#82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066 ಫೋನ್ : 080-49069000 Extn: 1147/1366
www.vims.ac.in