ಮಳೆಗಾಲದಲ್ಲಿ ಕಾಡುವ ಸಾಮಾನ್ಯ ರೋಗಗಳು

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಬಹಳ ಸಾಮಾನ್ಯ. ಮಳೆಗಾಲದಲ್ಲಿ ತೇವಾಂಶದ ಕಾರಣದಿಂದ ಬಹುಬೇಗ ರೋಗಾಣುಗಳು ಉತ್ಪತ್ತಿಯಾಗುತ್ತದೆ. ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮಳೆಗಾಲದಲ್ಲಿ ಬಹಳ ಜಾಗರೂಕರಾಗಿರಬೇಕು.

ಮಳೆಗಾಲದಲ್ಲಿ ಕಾಡುವ ಸಾಮಾನ್ಯ ರೋಗಗಳುಮಲೇರಿಯಾ:

ಮಳೆಗಾಲದಲಿ ಹೆಚ್ಚಾಗಿ ಕಾಡುವ ರೋಗವೆಂದರೆ ಮಲೇರಿಯಾ. ಇದರ ಬಗ್ಗೆ ಸಕಾಲದಲ್ಲಿ ಗಮನಿಸದಿದ್ದರೆ ಮತ್ತು ಔಷಧಿಯ ಕೋರ್ಸ್‍ನನ್ನು ಪೂರ್ತಿಯಾಗಿ ಮುಗಿಸದಿದ್ದರೆ ಇದು ಅಪಾಯಕಾರಿಯಾಗಿ ಪರಿಣಮಿಸಬಹುದು. ಇದು ಜಮೆಗೊಂಡ ನೀರಿನಲ್ಲಿ ಬೆಳೆಯುವ ಸೊಳ್ಳೆಗಳಿಂದ ಹರಡುತ್ತದೆ.

1. ರೋಗ ಲಕ್ಷಣಗಳು: ಜ್ವರ ಬರುವುದಕ್ಕಿಂತ ಮುಂಚೆ ರೋಗಿ ಚಳಿಯಿಂದ ನಡುಗುತ್ತಾನೆ. ತೀವ್ರ ಜ್ವರ, ತಲೆನೋವು ಮತ್ತು ನಿಶ್ಯಕ್ತಿ ಉಂಟಾಗುತ್ತದೆ. ಹಾಗೊಂದು ವೇಳೆ ಮಲೇರಿಯಾ, ಫಾಲಸಿಫೋರಂ ರೋಗಾಣುವಿನಿಂದ ಉಂಟಾಗಿದ್ದರೆ, ಈ ಸ್ಥಿತಿ ಸಾಕಷ್ಟು ಗಂಭೀರವಾಗುತ್ತದೆ. ಏಕೆಂದರೆ ಈ ರೋಗಾಣು ಮೆದುಳಿನ ತನಕ ತಲುಪುತ್ತದೆ. ಮಲೇರಿಯಾ ಎಂದು ಖಾತ್ರಿಯಾದ ಬಳಿಕ ರಕ್ತಪರೀಕ್ಷೆ ಮಾಡುವುದು ಅವಶ್ಯಕ. ಮೊದಲ ಸಲದಲ್ಲಿ ಅದು ಪತ್ತೆಯಾಗದಿದ್ದರೆ ಎರಡನೇ ಸಲ ಪರೀಕ್ಷೆ ಮಾಡುವುದು ಅಗತ್ಯ.

2. ಮುನ್ನೆಚ್ಚರಿಕೆ ಕ್ರಮಗಳು: ಕೂಲರ್‍ನ ನೀರು ಬದಲಿಸುತ್ತಾ ಇರಿ. ಸೊಳ್ಳೆ ಪರದೆ ಬಳಸಬೇಕು. ಮನೆಯ ಒಳಗಡೆ ಹೂಕುಂಡಗಳು, ಪುಟ್ಟಗಿಡಗಳು ಇದ್ದರೆ ಅವುಗಳ ಮೇಲೆ ಆಗಾಗ ಕೀಟನಾಶಕ ಸಿಂಪಡಿಸಿ, ಏಕೆಂದರೆ ಅವುಗಳ ಮೇಲೆ ಸೊಳ್ಳೆಗಳು ಕೂತುಕೊಳ್ಳಬಾರದು. ಮನೆಯ ಆಸುಪಾಸಿನಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ.

3. ಚಿಕಿತ್ಸೆ: ಮಲೇರಿಯಾ ರೋಗ ತಗುಲಿದವರು ವಿಶ್ರಾಂತಿ ಪಡೆಯುವುದು ಅಗತ್ಯ. ಏಕೆಂದರೆ ಮಲೇರಿಯಾ ಎಂದಾಗ ಆಕಸ್ಮಿಕವಾಗಿ ರಕ್ತದ ಕೊರತೆ ಬಾಧಿಸುತ್ತದೆ. ವೈದ್ಯರ ಸಲಹೆ ಮೇರೆಗೆ ಔಷಧಿ ಸೇವಿಸಿ, ಖಾಲಿ ಹೊಟ್ಟೆಯಲ್ಲಿ ಔಷಧಿ ಸೇವಿಸಬೇಡಿ. ಹಾಲನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.

ಡೆಂಗ್ಯೂ:

ಡೆಂಗ್ಯೂ ಮಳೆಗಾಲದಲ್ಲಿ ಜನರನ್ನು ಕಾಡುವ ರೋಗಗಳಲ್ಲಿ ಒಂದು. ಇದು ವೈರಾಣುವಿನಿಂದ ಉಂಟಾಗುವ ಸೋಂಕು ಆಗಿದ್ದು, ತೀವ್ರವಾಗಿ ಹರಡುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರುವುದು ಅವಶ್ಯಕ.

1. ರೋಗ ಲಕ್ಷಣಗಳು: ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ ಮತ್ತು ಮೈಮೇಲೆ ಕಾಳಿನಂತಹ ಗುಳ್ಳೆಗಳು ಗೋಚರಿಸುತ್ತವೆ. ಇಡೀ ಶರೀರ ಮತ್ತು ತಲೆಯಲ್ಲಿ ನೋವಿರುತ್ತದೆ.

2. ಚಿಕಿತ್ಸೆ: ಇದಕ್ಕೆ ಯಾವುದೇ ಒಂದು ನಿಶ್ಚಿತ ಔಷಧಿಯಿಲ್ಲ ಹೀಗಾಗಿ ಮೊದಲು ಜ್ವರ ಕಡಿಮೆ ಮಾಡುವ ಔಷಧಿ ನೀಡಲಾಗುತ್ತದೆ. ರಕ್ತಪರೀಕ್ಷೆ ಕೈಗೊಳ್ಳಲಾಗುತ್ತದೆ. ಏಕೆಂದರೆ ರಕ್ತಕಣಗಳ ಸಂಖ್ಯೆಯನ್ನು ತಿಳಿದುಕೊಳ್ಳಲಾಗುತ್ತದೆ. ಹಾಗೊಂದು ವೇಳೆ ಈ ಸಂಖ್ಯೆ ಕಡಿಮೆ ಇದ್ದರೆ ಪರಿಸ್ಥಿತಿ ಚಿಂತಾಜನಕವಾಗಬಹುದು.

3. ಮುನ್ನೆಚ್ಚರಿಕೆ: ರೋಗಿಗೆ ಕುದಿಸಿದ ನೀರನ್ನು ಕುಡಿಯಲು ನೀಡಬೇಕು. ಆಹಾರದಲ್ಲಿ ಮುಖ್ಯವಾಗಿ ಬೇಳೆ, ಕಾಳುಗಳು ಹಸಿರುಸೊಪ್ಪುಗಳು ಮತ್ತು ಆಯಾ ಋತುಮಾನದ ಹಣ್ಣು ತರಕಾರಿಗಳನ್ನು ಕೊಡಬೇಕು. ಆಹಾರ ಆದಷ್ಟು ಹೊಟ್ಟೆಗೆ ಭಾರ ಉಂಟು ಮಾಡದಂತಿರಲಿ. ಅಂದರೆ ಹಗುರವಾಗಿರಲಿ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿ.

ವೈರಾಣು ಸೋಂಕು (ವೈರಲ್ ಇನ್‍ಫೆಕ್ಷನ್):

ಇದು ರೋಗಾಣು ಸೋಂಕಾಗಿದೆ. ರೋಗಾಣುಗಳು ಗಾಳಿಯಿಂದ ಪಸರಿಸುತ್ತದೆ. ಸೋಂಕಿಗೆ ಒಳಗಾದ ಒಬ್ಬ ವ್ಯಕ್ತಿಯಿಂದ ಇದು ಇನ್ನೊಬ್ಬರಿಗೆ ಸುಲಭವಾಗಿ ತಗಲುತ್ತದೆ.
1. ರೋಗ ಲಕ್ಷಣಗಳು: ಜ್ವರದ ಜೊತೆಗೆ ಮೈ ಕೈ ನೋವು, ತಲೆನೋವು, ಮೂಗಿನಿಂದ ನೀರು ಸೋರುವುದು, ನೀರಡಿಕೆಯ ಅನುಭವ ಉಂಟಾಗುತ್ತದೆ.

2. ಚಿಕಿತ್ಸೆ: ವೈರಾಣು ಸೋಂಕು ಇದ್ದಾಗ ಎಲ್ಲಕ್ಕಿಂತ ಉತ್ತಮ ಉಪಾಯವೆಂದರೆ ವಿಶ್ರಾಂತಿ ಪಡೆಯುವುದು. 3-9 ದಿನಗಳಲ್ಲಿ ಇದು ಸರಿ ಹೋಗುತ್ತದೆ. ಸಾಕಷ್ಟು ನೀರು ಕುಡಿಯಬೇಕು ಮತ್ತು ಸಾಧಾರಣ ಊಟ ಮಾಡಬೇಕು. ನೀವೇ ಸ್ವತಃ ನಿರ್ಧಾರ ಮಾಡಿ ಯಾವುದೇ ಔಷಧಿ ತೆಗೆದುಕೊಳ್ಳಬಾರದು. ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ಗಂಭೀರವಾಗಬಹುದು.

ಉದರಬಾಧೆ, ಹೊಟ್ಟೆ ನೋವು, ಅಪಚನ

ಇದು ದೂಷಿತ, ಕಲುಷಿತ ಆಹಾರದಿಂದ ಉಂಟಾಗುತ್ತದೆ. ರೋಗಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ, ಪರಿಸ್ಥಿತಿ ಗಂಭೀರವಾಗುತ್ತದೆ. ನೀರಿನ ಕೊರತೆಯಿಂದ ದೇಹದ ತ್ವಚೆ ಒಣಗಿದಂತಾಗುತ್ತದೆ.
1. ರೋಗಲಕ್ಷಣಗಳು: ನಿರಂತರ ವಾಂತಿ ಮತ್ತು ಬೇಧಿ. ಅಷ್ಟಿಷ್ಟು ಜ್ವರ ಮತ್ತು ಹೆಚ್ಚು ನಿಶ್ಶಕ್ತಿ, ಆಯಾಸ-ದಣಿವು ಉಂಟಾಗುತ್ತದೆ.

2. ಮುನ್ನೆಚ್ಚರಿಕೆ: ಎಷ್ಟೇ ಸಲ ಇದು ಅಪಚನ ಅಥವಾ ಅಜೀರ್ಣದ ಸಮಸ್ಯೆಯಾಗಿರದೆ ಹೊಟ್ಟೆ ಕೆಟ್ಟಿದ್ದರ ಸೂಚನೆಯಾಗಿರಬಹುದು. ಹೀಗಾಗಿ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ಔಷಧಿಯ ಕೋರ್ಸನ್ನು ಪೂರ್ತಿಗೊಳಿಸಿ, ಹೊಟ್ಟೆ ಭಾರವಾಗದಂತೆ ಊಟ ಮಾಡಿ. ರಾತ್ರಿ ಊಟವನ್ನು ಮಲಗುವ ಎರಡು ಗಂಟೆ ಮೊದಲು ಮಾಡಿ ಮುಗಿಸಿ.

3. ಚಿಕಿತ್ಸೆ: ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಅಂಗಡಿಗಳ ಜ್ಯೂಸ್ ಮತ್ತು ತಂಗಳು ಆಹಾರದಿಂದ ದೂರವಿರಿ. ಓ ಆರ್‍ಎಸ್‍ನ ದ್ರಾವಣದ ಮಿಶ್ರಣವನ್ನು ಕುಡಿಯಿರಿ. ವೈದ್ಯರನ್ನು ತಕ್ಷಣವೇ ಭೇಟಿಯಾಗಿ ಮತ್ತು ಅವರು ನೀಡುವ ಔಷಧಿ-ಮಾತ್ರೆಗಳನ್ನು ಸೇವಿಸಿ.

ಕೆಂಗಣ್ಣು ಸಮಸ್ಯೆ (ಕಂಜೆವೈಟಿಸ್)

ಬೆವರು ಮತ್ತು ತೇವಾಂಶದ ಕಾರಣಗಳಿಂದ ಕಣ್ಣುಗಳು ಕೆಂಪಾಗುತ್ತವೆ. ಧೂಳಿನ ಕಣಗಳು ಕಣ್ಣುಗಳಿಗೆ ಸೇರಿದಾಗ ಈ ಸಮಸ್ಯೆ ಉಂಟಾಗುತ್ತದೆ. ಧೂಳಿನ ಕಣಗಳು ಕಣ್ಣುಗಳಲ್ಲಿ ಹೊಕ್ಕಿ ತುರಿಕೆ ಮತ್ತು ಉರಿತವನ್ನು ಉಂಟು ಮಾಡುತ್ತವೆ.

1. ರೋಗಲಕ್ಷಣಗಳು: ಕಣ್ಣುಗಳು ಒಂದಕ್ಕೊಂದು ಅಂಟಿಕೊಳ್ಳುವುದು. ಕಣ್ಣು ರೆಪ್ಪೆಗಳ ಮುಚ್ಚಿಕೊಳ್ಳುವುದು. ಹಳದಿಯ ಪದಾರ್ಥ ಕಣ್ಣುಗಳ ಅಂಚುಗಳಲ್ಲಿ ಜಮೆಗೊಳ್ಳುವುದು, ಕಣ್ಣುಗಳು ಕೆಂಪಗಾಗುವುದು. ತುರಿಕೆ, ಉರಿತ ಮತ್ತು ನಿರಂತರ ಸೋರುವಿಕೆ.

2. ಚಿಕಿತ್ಸೆ: ಕಣ್ಣುಗಳಿಗೆ ತಣ್ಣೀರಿನ ಸಿಂಪರಣೆ ಮಾಡಿಕೊಳ್ಳಿ. ಕಣ್ಣುಗಳನ್ನು ಆಗಾಗ ಮುಟ್ಟಬೇಡಿ. ವೈದ್ಯರು ಸೂಚಿಸಿದ ಐ ಡ್ರಾಪ್ಸ್ ಹಾಕಿಕೊಳ್ಳಿ. ಕೊಳಕು ಕೈವಸ್ತ್ರ ಬಳಸಬೇಡಿ.

ಚರ್ಮರೋಗಗಳು:

ಮಳೆಯ ಕಾರಣದಿಂದ ಕೊಳಕು ನೀರು ಹಲವು ತ್ವಚೆಯ ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ಕೊಳಕು ನೀರಿನಲ್ಲಿ ಕಾಲು ನೆನೆಯುವುದರಿಂದ ಬೆರಳುಗಳ ನಡುವೆ ಸೋಂಕು ಉಂಟಾಗುತ್ತದೆ. ಅಥವಾ ಬೊಕ್ಕೆಗಳಂತ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
1. ರೋಗಲಕ್ಷಣಗಳು: ಕೈ ಅಥವಾ ಕಾಲುಗಳ ಮೇಲ ತುರಿಕೆ ಉಂಟು ಮಾಡುವ ಕೆಂಪು ಗುಳ್ಳೆಗಳು ಅಥವಾ ವರ್ತುಲಗಳು, ಕಾಲ್ಬೆರಳುಗಳ ನಡುವೆ ಬಹಳಷ್ಟು ತುರಿಕೆ ಮತ್ತು ಉರಿ ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ ತ್ವಚೆ ಹೊರಟು ಹೋಗಿ ಅಲ್ಲಿ ಗಾಯವೂ ಆಗುತ್ತದೆ.

2. ಮುನ್ನೆಚ್ಚರಿಕೆ: ಸ್ನಾನ ಮಾಡಿದ ನಂತರ ಚೆನ್ನಾಗಿ ಮೈ ಒರೆಸಿಕೊಂಡ ನಂತರವೇ ಸ್ವಚ್ಛವಾದ ಬಟ್ಟೆ ಧರಿಸಿ. ಬಟ್ಟೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಏಕೆಂದರೆ ಅದರಲ್ಲಿ ತೇವಾಂಶ ಉಳಿಯದಿರಲಿ. ಕಾಲು ಬೆರಳುಗಳ ಮುಂಭಾಗದಲ್ಲಿ ಬಾಚಿಕೊಂಡಿರುವ ಚಪ್ಪಲಿ ಅಥವಾ ಸ್ಯಾಂಡಲ್ ಧರಿಸಿ. ಏಕೆಂದರೆ, ಕಾಲು ಇಡೀ ದಿನ ತೇವಾಂಶದಲ್ಲಿ ಬಂಧಿಯಾಗದಿರಲಿ, ಡಿಯೊಡರೆಂಟ್ ಅಥವಾ ಪೌಡರ್‍ನ ಬಳಕೆ ಮಾಡಿ.

3. ಚಿಕಿತ್ಸೆ: ಹತ್ತಿ ಬಟ್ಟೆಗಳನ್ನೇ ಉಪಯೋಗಿಸಿ, ಒಳ ಉಡುಪುಗಳು ಹತ್ತಿಯಿಂದ ತಯಾರಿಸಿದ್ದಾಗಿರಲಿ. ಮಳೆಯಲ್ಲಿ ನೆನೆದಿದ್ದರೆ ಸ್ವಚ ನೀರಿನಿಂದ ಸ್ನಾನ ಮಾಡಿ, ಕಾಲುಗಳ ಬೆರಳುಗಳ ನಡುವೆ ಇರುವ ಜಾಗವನ್ನು ಸ್ವಚ್ಚವಾಗಿ ಒರೆಸಿ, ಅಲ್ಲಿ ತೇವಾಂಶ ಉಂಟಾಗದಂತೆ ಎಚ್ಚರಿಕೆ ವಹಿಸಿ. ಕಲ್ಬೆರಳುಗಳ ನಡುವೆ ಟ್ಯಾಲ್ಕಂ ಪೌಡರ್ ಸಿಂಪಡಿಸಿ.

ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳು:

ಮಳೆಗಾಲದಲ್ಲಿ ಕಾಡುವ ಸಾಮಾನ್ಯ ರೋಗಗಳುಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಬಹಳ ಸಾಮಾನ್ಯ. ಮಳೆಗಾಲದಲ್ಲಿ ತೇವಾಂಶದ ಕಾರಣದಿಂದ ಬಹುಬೇಗ ರೋಗಾಣುಗಳು ಉತ್ಪತ್ತಿಯಾಗುತ್ತದೆ. ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮಳೆಗಾಲದಲ್ಲಿ ಬಹಳ ಜಾಗರೂಕರಾಗಿರಬೇಕು.

1.  ಹೀಗಾಗಿ ಪ್ರತಿಯೊಂದು ವಸ್ತುಗಳಿಗೂ ಆಗಾಗ ಬಿಸಿಲಿನ ಸ್ಪರ್ಶ ಆಗಲಿ.

2. ಸ್ವಚ್ಚತೆಯ ಬಗ್ಗೆ ಗಮನಕೊಡಿ.

3. ಶೌಚಾಲಯಕ್ಕೆ ಫಿನೈಲ್ ಹಾಕುತ್ತಾ ಇರಿ.

4. ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿ ಬಳಸದಿರಿ.

5. ಹೊರಗಿನಿಂದ ಬಂದ ಬಳಿಕ ಕೈಕಾಲುಗಳನ್ನು ಚೆನ್ನಾಗಿ ಸೋಪ್‍ನಿಂದ ಸ್ವಚ್ಚಗೊಳಿಸಿ.

6. ಉಗುರುಗಳು ಹೆಚ್ಚಾಗಿ ಬೆಳೆಯದಿರಲಿ.

7. ಹೆಚ್ಚಿನ ಕಾಯಿಲೆಗಳು ಅಸ್ವಚ್ಚತೆಯ ಕಾರಣದಿಂದ ಉಂಟಾಗುತ್ತದೆ ಎನ್ನುವುದು ನೆನಪಿರಲಿ.

ಡಾ.ವಸುಂಧರಾ ಭೂಪತಿ ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!