ಮಧುಮೇಹ ನಿವಾರಕ ಗಣಪ : ಭಕ್ತಿ ಭಾವ- ಸಂಪ್ರದಾಯ

ಮಧುಮೇಹ ನಿವಾರಕ ಗಣಪ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರುಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ.

ಮಧುಮೇಹ ನಿವಾರಕ ಗಣಪ : ಭಕ್ತಿ ಭಾವ- ಸಂಪ್ರದಾಯಗಣಪತಿ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರು, ಯಾವುದೇ ಶುಭಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು ಸ್ತುತಿಸಿ ಪೂಜಿಸಲಾಗುವುದು. ಸಿದ್ದಿ, ಬುದ್ದಿಯ ಪ್ರತೀಕವಾದ ಗಣಪತಿಯು ಗಣಗಳ ನಾಯಕನೂ ಹೌದು. ತನ್ನ ವಿಭಿನ್ನ ಹಾಗೂ ಆಕರ್ಷಕ ರೂಪದಿಂದಲೇ ಆಬಾಲ ವೃದ್ದರಿಂದ ಪ್ರಿಯನಾದ ಗಣಪತಿ, ಆನೆಯ ಮುಖದಿಂದ ಗಜಾನನ, ದೊಡ್ಡ ಹೊಟ್ಟೆಯಿಂದ ಲಂಬೋಧರ, ಗಜದ ಕಿವಿಯಿಂದ ಗಜಕರ್ಣ, ಮುರಿದ ದಂತದಿಂದ ವಕ್ರತುಂಡ, ಮೋದಕ ಪಿಡಿದುದರಿಂದ ಮೋದಕಪ್ರಿಯ ಎಂದೆಲ್ಲಾ ನಾಮಗಳಿವೆ.

ಮೋದಕ ಹಾಗೂ ನೈವೇದ್ಯ ಬೊಜ್ಜು ಹಾಗೂ ಮಧುಮೇಹ ರೋಗಕ್ಕೆ ಉತ್ತಮ ಚಿಕಿತ್ಸೆ:

ಸಿದ್ದಿ, ಸಮೃದ್ದಿ, ಬುದ್ದಿ ಶಕ್ತಿಯ ಹಾಗೂ ವಿಘ್ನನಿವಾರಣೆ ಮಾಡುವ ವಿನಾಯಕನಲ್ಲಿ ಮಧುಮೇಹ, ಬೊಜ್ಜಿನಂತಹ ರೋಗಕ್ಕೆ ಇರುವ ಕಾರಣ, ಲಕ್ಷಣ ಹಾಗೂ ಚಿಕಿತ್ಸೆಯು ಸೂಕ್ಷ್ಮವಾಗಿ ಅಡಕವಾಗಿದೆ.ಗಣಪತಿಗೆ ಪ್ರಿಯವಾದ ಮೋದಕ ಹಾಗೂ ನೈವೇದ್ಯಕ್ಕೆ ಅರ್ಪಿಸುವ ಕಪಿತ್ತ, ಜಂಬೂ ಫಲ ಮತ್ತು ಅತ್ಯಂತ ಪ್ರಿಯವಾದ ಗರಿಕೆಯೂ ಬೊಜ್ಜು ಹಾಗೂ ಮಧುಮೇಹ ರೋಗಕ್ಕೆ ಉತ್ತಮ ಚಿಕಿತ್ಸೆ. ಮಧುಮೇಹ ಬರಲು ಮುಖ್ಯವಾದ ಕಾರಣವನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಯಾರು ಸದಾಕಾಲ ಕುಳಿತು, ಕಡಿಮೆ ವ್ಯಾಯಾಮ ಮಾಡುವರೋ, ಸದಾ ವಿಶ್ರಾಂತಿ ಪಡೆಯುತ್ತಾ ಅತಿಯಾಗಿ ಆಹಾರವನ್ನು ಸೇವಿಸುವರೋ, ಮುಖ್ಯವಾಗಿ ಸಿಹಿ ಹಾಗೂ ಜಿಡ್ದಿನ ಪದಾರ್ಥಗಳನ್ನು ಸೇವಿಸುವರೋ, ಅವರಲ್ಲಿ ಬೊಜ್ಜಿನಾಂಶವು ಕ್ರಮೇಣ ಹೆಚ್ಚಾಗಿ, ದೇಹದಲ್ಲಿ ಶೇಖರಣೆಗೊಂಡು, ದೇಹಕ ತೂಕ ಹೆಚ್ಚಿಸುತ್ತದೆ. ದೊಡ್ಡ ಹೊಟ್ಟೆಯನ್ನು ಹೊಂದುತ್ತಾರೆ ಮತ್ತು ಮಧುಮೇಹಕ್ಕೆ ತುತ್ತಾಗುತ್ತಾರೆ. ಅಂತೆಯೇ ಸಾಂಕೇತಿಕವಾಗಿ ಮೋದಕಪ್ರಿಯ ಗಣಪತಿಗೆ ಲಡ್ಡು, ಮೋದಕ, ಕಡುಬು, ಕಬ್ಬು, ಚಣಕ, ಬಹುಪ್ರಿಯವಾದ ತಿನಿಸು. ಸತತವಾಗಿ ಮೋದಕ ಇತ್ಯಾದಿ ಆಹಾರಪದಾರ್ಥವನ್ನು ಆಸ್ವಾದಿಸುವುದರಿಂದ ದೊಡ್ಡಹೊಟ್ಟೆ, ಸ್ಥೂಲ ಕಾಯವನ್ನು ಹೊಂದುತ್ತಾನೆ.

ಕಪಿತ್ತ ಮತ್ತು ನೇರಳೆ ಮಧುಮೇಹರೋಗಕ್ಕೆ ರಾಮಬಾಣ:

ಹಲವು ರೋಗಗಳನ್ನು ಉತ್ಪತ್ತಿಮಾಡಬಹುದಾದರಿಂದ ಬುದ್ದಿಯ ಪ್ರತೀಕವಾದ ವಿನಾಯಕನು ಒಂದು ಉತ್ತಮ ಔಷಧಿಯನ್ನು ತನ್ನ ಪ್ರಿಯವಾದ ನೈವೇದ್ಯದ ರೂಪವಾಗಿ ಪಡೆಯುತ್ತಾನೆ. ಕಪಿತ್ತ ಮತ್ತು ನೇರಳೆಹಣ್ಣನ್ನು ಇದರ ಪರಿಹಾರವಾಗಿ ಗಣಪತಿ ಸೇವಿಸುತ್ತಾನೆ ಎಂದೂ ಶ್ಲೋಕದಲ್ಲಿ ಉಲ್ಲೇಖಿಸಲಾಗಿದೆ. ಆಯುರ್ವೇದ ಪ್ರಕಾರ ಕಪಿತ್ತ ಮತ್ತು ನೇರಳೆ ಮಧುಮೇಹರೋಗಕ್ಕೆ ರಾಮಬಾಣ. ಕಪಿತ್ತ ಅಥವಾ ಬೇಲದ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್ ಬಿ ಹಾಗೂ ವಿಟಮಿನ್ ಸಿ ಹೇರಳವಾಗಿದೆ. ಇದು ರಕ್ತದಲ್ಲಿನ ಸಕ್ಕ್ರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿನ ವಿಷದಂತಹ ಅಂಶವನ್ನು ತೆಗೆದುಹಾಕುತ್ತದೆ. ಇದರಲ್ಲಿ ವಿಶೇಷವಾಗಿ ಗ್ರಾಹಿ, ಅಂದರೆ ಸಾರಾಂಶವನ್ನು ತಡೆದು ಸಂಗ್ರಹಿಸುವ ವಿಶೇಷ ಗುಣದಿಂದ ಮಧುಮೇಹಿಗಳ ಮೂತ್ರದಲ್ಲಿ ಹೊರಹೋಗುವ ಪೋಷಕಾಂಶ ಅಥವಾ ಸಕ್ಕರೆಯ ಅಂಶವನ್ನು ತಡೆಹಿಡಿಯುತ್ತದೆ.

Madhumeha-Nivaraka-Ganapaನೇರಳೇಹಣ್ಣಿನ ಬೀಜ ಮಧುಮೇಹಕ್ಕೆ ರಾಮಬಾಣ. ದೇಹದಲ್ಲಿನ ಸಕ್ಕರೆಯಂಶವನ್ನು ಶಕ್ತಿಯಾಗಿ ಪರಿವರ್ತಿಸಿ, ರಕ್ತದಲ್ಲಿ ಸಕ್ಕರೆಯಂಶ ಉಳಿಯುವುದನ್ನು ತಡೆಯುತ್ತದೆ. ಮುಖ್ಯವಾಗಿ ಪದೇ ಪದೇ ಆಗುವ ಮೂತ್ರ ಪ್ರವೃತ್ತಿ, ಬಾಯಾರಿಕೆ ಹಾಗು ಅತಿಯಾಗಿ ಆಗುವ ಬೆವರನ್ನು ನಿವಾರಿಸುತ್ತದೆ.ಇದೆರೆಡರ ರಸ ಅಥವಾ ಕಷಾಯವು ದೇಹದಲ್ಲಿನ ಕೊಬ್ಬಿನಾಂಶವನ್ನು ಕರಗಿಸಿ, ಸಕ್ಕರೆಯ ಅಂಶವನ್ನು ದೇಹವು ಉತ್ತಮ ರೀತಿಯಲ್ಲಿ ಹೀರಿಕೊಳ್ಳಲು ನೆರವಾಗುತ್ತದೆ.

Watch our video: ಆರೋಗ್ಯ ಸಮಸ್ಯೆಗಳಿಗೆ ನೇರಳೆ ಹಣ್ಣಿನ ಪರಿಹಾರ..! INDIAN BLACKBERRIES AYURVEDIC HEALTH BENEFITS

ಇದು ಅತಿಯಾದ ಆಹಾರ ಸೇವನೆ, ಅತಿಯಾದ ಬೊಜ್ಜಿನಿಂದ ಉತ್ಪತ್ತಿಯಾಗುವ ಒಂದು ಪ್ರಕಾರದ ಮಧುಮೇಹದ ಚಿಕಿತ್ಸೆಯಾಗಿದೆ. ಬಹಳ ಕ್ರಿಶರಾದ, ಹಲವು ವರ್ಷಗಳಿಂದ ಮಧುಮೇಹಕ್ಕೆ ತುತ್ತಾಗಿ, ದೇಹದ ತೂಕ ಕಳೆದು ಕೊಂಡು, ನಿಶಕ್ತಿಯಿಂದ ಬಳಲುವ ಮತ್ತೊಂದು ಬಗೆಯ ಮಧುಮೇಹ ಅಥವಾ ಟೈಪ್ ವನ್ ಡಯಾಬಿಟಿಸಿಗೂ ಚಿಕಿತ್ಸೆಯನ್ನು ಗಣಪತಿಯ ನೈವೇದ್ಯದಲ್ಲಿ ಪಡೆಯಬಹುದು. ಕೃಶ ಅಥವಾ ದೇಹ ಬಳಷ್ಟು ಕ್ಷಯವಾಗಿರುವ, ದೇಹದಲ್ಲಿನ ಸಾರಾಂಶ ಕಡಿಮೆಯಾಗಿರುವ ಮಧುಮೇಹಿಗಳಲ್ಲಿ ಪೋಷಕಾಂಶವುಳ್ಳ ಆಹಾರವನ್ನು ನೀಡಬೇಕೆಂದು ವಿವರಿಸಲಾಗಿದೆ. ಅಂತೆಯೇ ಕೊಬ್ಬರಿ, ಬೆಲ್ಲ, ಅಕ್ಕಿಯಿಂದ ತಯಾರಿಸಿದ ಮೋದಕ ಅಥವಾ ಕಡುಬು ಈ ಪ್ರಕಾರದ ಮಧುಮೇಹಿಗಳಿಗೆ ಚಿಕಿತ್ಸೆಯಾಗುತ್ತದೆ.

Also watch our video: ಮಧುಮೇಹಕ್ಕೆ ಗಣಪತಿ ಹೇಳಿದ ಚಿಕಿತ್ಸೆ..!

Ganeshaಇನ್ನು ಅಲ್ಪ ಪ್ರಮಾಣದ ಲಕ್ಷಣವುಳ್ಳ, ಕಾಲು, ಕೈ ಉರಿ, ನ್ಯೂರೋಪತಿಯಂತಹ ರೋಗದ ಅವಸ್ಠೆಯಲ್ಲಿ ಗಣಪತಿಗೆ ಅತ್ಯಂತ ಪ್ರಿಯವಾದ ಗರಿಕೆ ದಿವ್ಯೌಷಧಿಯಾಗಿದೆ. ಗರಿಕೆಯು ಮೂತ್ರಪಿಂಡದ ಮೇಲೆ ವಿಶೇಷವಾಗಿ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡವನ್ನು ಶುದ್ದಗೊಳಿಸಿ ಅತಿಯಾದ ಮೂತ್ರ ಪ್ರವೃತ್ತಿಯನ್ನು ನಿಯಂತ್ರಿಸುತ್ತದೆ. ಶೀತ ಗುಣದಿಂದಾಗಿ ದೇಹದಲ್ಲಿನ ಉಷ್ಣಾಂಶವನ್ನು, ಕಾಲು ಕೈಗಳಲ್ಲಿ ಆಗುವ ಉರಿಯನ್ನು ವಿಶೇಷವಾಗಿ ನಿವಾರಿಸುತ್ತದೆ. ಅಲ್ಲದೆ ಮಧುಮೇಹಿಗಳಲ್ಲಿ ಆಗುವ ಗಾಯ, ಚರ್ಮರೋಗಗಳನ್ನು ಬೇಗ ಗುಣಮಾಡುತ್ತದೆ ಮತ್ತು ರಕ್ತವನ್ನು ಶುದ್ದಿಗೊಳಿಸುತ್ತದೆ.

ಹೀಗೆ ಗಣಪತಿಯಲ್ಲಿ, ಅವನ ಪ್ರಿಯವಾದ ವಸ್ತುಗಳಲ್ಲಿ, ತಿನಿಸುಗಳಲ್ಲಿ ಮಧುಮೇಹ ಮತ್ತು ಬೊಜ್ಜುರೋಗವು ಉತ್ಪತ್ತಿಯಾಗುವ ಕಾರಣ, ರೋಗಿಯ ಲಕ್ಷಣ ಮತ್ತು ರೋಗದ ವಿವಿಧ ಅವಸ್ಥೆಯಲ್ಲಿ ಗಣಪತಿಗೆ ಅರ್ಪಿಸುವ ಕಪಿತ್ತ, ನೇರಳೆ ಹಾಗೂ ಗರಿಕೆ ಚಿಕಿತ್ಸೆಯಾಗುತ್ತದೆ ಎಂದು ಕಾಣಬಹುದು. ಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ.

Also Read: ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಇಲ್ಲಿದೆ ಸಿದ್ದ ಸೂತ್ರಗಳು

ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654

Gowri-Ganesha

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!