ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಗೆ ಇಲ್ಲಿದೆ ಸಿದ್ದ ಸೂತ್ರಗಳು

ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ. ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ ಕೆಲಸದ ಪ್ರಾರಂಭದ ಮೊದಲು ಗಣಪತಿಯ ಸ್ತುತಿ ಹಾಗೂ ಆರಾಧನೆ ಪ್ರಥಮವಾಗುತ್ತದೆ.

Parisara-snehi-ganesha-habbaಗಣೇಶ ಚತುರ್ಥಿ ಗಣೇಶನ ಹುಟ್ಟಿದ ದಿನ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲ್ಪಡುವ ಈ ಹಬ್ಬವು ಹತ್ತು ದಿನಗಳ ಕಾಲ ಆಚರಿಸಲಾಗುವುದು. ಇದರ ಪ್ರಯುಕ್ತ ವಿವಿಧ ಪ್ರಕಾರದ, ಆಕಾರದ ಹಾಗೂ ಆಕರ್ಷಕ ಗಣೇಶನ ಮೂರ್ತಿಗಳನ್ನು ಪೂಜಿಸಲು ತಯಾರಿಸಿ ಮಾರಲಾಗುವುದು. ಕೆರೆಯ ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಎಲೆ, ಹೂವು, ಬಾಳೆ ಕಂಬದಿಂದ ಅಲಂಕೃತವಾದ ಮಂಟಪದಲ್ಲಿ ಇರಿಸಿ, ಮೋದಕ, ಕಡುಬು ಮುಂತಾದ ಭಕ್ಷ್ಯ ಭೋಜ್ಯಗಳನ್ನು ಅರ್ಪಿಸಿ ಭಕ್ತಿಭಾವದಿಂದ ಪೂಜಿಸುವುದು ಇದರ ಪರಂಪರೆ.

 ಹೇಗೆ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವುದು?

ಕಲೆ, ಸಂಸಕೃತಿಯನ್ನು ಪ್ರಸ್ತುತಿಪಡಿಸಲು ಈ ಹತ್ತು ದಿನಗಳು ಒಳ್ಳೆಯ ವೇದಿಕೆಯೂ ಹೌದು. ಕೊನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ಹಾಡು, ನೃತ್ಯ ಹಾಗೂ ಭಜನೆಗಳೊಂದಿಗೆ ಭವ್ಯ ಮೆರವಣಿಗೆಗಳಲ್ಲಿ ಸಾಗಿ ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುವುದು. ಮನೆಗಳಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಈ ಹಬ್ಬವನ್ನು ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಸಂಗ್ರಾಮಕ್ಕಾಗಿ, ಜನರನ್ನು ಒಟ್ಟುಗೂಡಿಸಿ ರಾಷ್ಟ್ರೀಯತೆಯ ಕಿಚ್ಚನ್ನು ಹಚ್ಚಲು ಸಾರ್ವಜನಿಕವಾಗಿ ಈ ಹಬ್ಬವನ್ನು ಆಚರಿಸುವ ಪ್ರತೀತಿಯನ್ನು ಹುಟ್ಟುಹಾಕಿದ್ದು ಈಗ ಇತಿಹಾಸ.

ಹೀಗೆ ಭಕ್ತಿಭಾವದೊಂದಿಗೆ, ರಾಷ್ಟ್ರೀಯತೆಯನ್ನು, ಏಕತೆಯನ್ನು ಪಸರಿಸಿದ ನಮ್ಮ ಗಣಪತಿ ಹಬ್ಬ, ಇತ್ತೀಚಿನ ದಿನಗಳಲ್ಲಿ ತನ್ನ ನಿಜ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಹಬ್ಬವು ಈಗ ಆಡಂಬರ, ಮಾಲಿನ್ಯ, ಪರಿಸರ ಹಾನಿಗೆ ಕಾರಣ ಎಂಬಂತೆ ಆಗುತ್ತಿದೆ. ಇದರ ಪ್ರತಿಯಾಗಿ, ಪರಿಹಾರವಾಗಿ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಯ ಹೊಸ ಪರಂಪರೆ ಈ ನಡುವೆ ಪ್ರಾರಂಭವಾಗಿದೆ. ಗಣಪತಿಯನ್ನು ಬಣ್ಣಗಳಿಂದ ಚಂದ ಅಲಂಕರಿಸಿ, ಉತ್ಸಾಹದಿಂದ ಆಚರಿಸಲು ಇಚ್ಚಿಸುತ್ತಾರೆ, ಆದರೆ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಪರಿಸರದ ಮೇಲೆ ಆಗುವ ಪರಿಣಾಮವನ್ನು ನೋಡಬೇಕಿದೆ.

ರಾಸಾಯನಿಕ ಬಣ್ಣ ಮತ್ತು ಇತರೆ ವಸ್ತುಗಳಿಂದ ತಯಾರಿಸಿದ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ನೀರಿನ ಮಾಲಿನ್ಯ್ ಪ್ರಮುಖವಾಗಿ ಉಂಟಾಗುತ್ತದೆ. ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್, ತರ್ಮಕೋಲ್ ಕರಗದೆ ಪರಿಸರದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಈ ವಸ್ತುಗಳಲ್ಲಿನ ವಿಷದ ಅಂಶವು ಸಸ್ಯ ಮತ್ತು ಜಲಚರಗಳ ಮೇಲೆ ಮಾರಕ ಪ್ರಭಾವ ಬೀರುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಹಬ್ಬವನ್ನು ಭಕ್ತಿಭಾವದಿಂದ, ಉಲ್ಲಾಸ ಹಾಗೂ ಸೌಹಾರ್ದ್ಯದೊಂದಿಗೆ, ಸಾಮಾಜಿಕ ಕಳವಳದೊಂದಿಗೆ ಆಚರಿಸಿ ಪರಿಸರವನ್ನು ಸಂರಕ್ಷಿಸುವುದು ಒಳಿತು.

ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಇಲ್ಲಿದೆ ಸಿದ್ದ ಸೂತ್ರಗಳು:

eco-ganesha1. ಪರಿಸರ ಸ್ನೇಹ ಮೂರ್ತಿಯನ್ನು ಉಪಯೋಗಿಸಿ: ರಾಸಾಯನಿಕ ವಸ್ತು ಅಥವಾ ಬಣ್ಣಗಳಿಂದ ಮಾಡಿದ, ಪಿ ಒ ಪಿ, ಪ್ಲಾಸ್ಟಿಕ್ ಮತ್ತು ತರ್ಮಕೋಲ್ ಗಳಿಂದ ತಯಾರಿಸಿದ ಮೂರ್ತಿಗಳನ್ನು ಬಳಸಬೇಡಿ. ಬದಲಿಗೆ ನೀರಿನಲ್ಲಿ ಸುಲಭವಾಗಿ ಕರಗುವ, ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು

2. ಗಣೇಶನ ಮೂರ್ತಿಯ ಸಂಖ್ಯೆ ಮತ್ತು ಗಾತ್ರವನ್ನು ಕಡಿಮೆ ಮಾಡಿ: ದೊಡ್ಡ ಗಾತ್ರದ ಮೂರ್ತಿಗಳು ಬಹುಪ್ರಮಾಣದ ಮಣ್ಣು ಮತ್ತಿತರೆ ವಸ್ತುಗಳನ್ನು ಹೊಂದುವುದರಿಂದ, ಬಹು ದೊಡ್ಡ ಜಾಗವನ್ನು ಪಡೆಯುವುದರಿಂದ ಮತ್ತು ಕರಗಳು ಬಹಳ ಹೊತ್ತು ತೆಗೆದುಕೊಳ್ಳುವುದರಿಂದ ಒಂದು ವರೆ ಅಥವಾ 5 ಅಡಿಯ ಗಣಪತಿ ಮೂರ್ತಿಯನ್ನು ಬಳಸುವುದು ಉತ್ತಮ. ಕೆಲವೊಮ್ಮೆ ಮೂರ್ತಿಗಳು ಸರಿಯಾಗಿ ಕರಗದೆ ಭಕ್ತರ ಮನಸ್ಸನ್ನು ಹಾನಿಗೊಳಿಸುತ್ತದೆ ಮತ್ತು ದೊಡ್ಡ ಮೂರ್ತಿಗಳನ್ನು ಸಾಗಿಸಲು ಕಷ್ಟವಾಗುತ್ತದೆ.

3. ವಿದ್ಯುತ್ ಉಳಿಸಿ: ಪೂಜೆ, ಆರತಿಯ ಸಂದರ್ಭದಲ್ಲಿ ಮಾತ್ರ ಅಲಂಕಾರಿಕ ದೀಪವನ್ನು ಬಳಸಬೇಕು. ಸಿ ಎಫ್ ಎಲ್ ಬಲ್ಬ್ ಗಳನ್ನು ಬಳಸಿ ಇಂದನವನ್ನು ಉಳಿಸಿ.

4. ಪ್ರಾಕೃತ ಬಣ್ಣದ ರಂಗೋಲಿ: ಪ್ರಾಕೃತ ಬಣ್ಣಗಳಿಂದ ರಂಗೋಲಿ ರಚಿಸಿ. ಅರಿಶಿನ, ಮದರಂಗಿ, ಮೆಹಂದಿ, ಅಕ್ಕಿಯ ಪುಡಿ, ಗುಲಾಬಿ ಪುಡಿ, ಮಣ್ಣನ್ನು ಬಳಸಿ

5. ಪ್ರಕೃತಿ ಸ್ನೇಹಿ ಅಲಂಕಾರ: ಪ್ಲಾಸ್ಟಿಕ್, ತರ್ಮೊಕೋಲ್, ಕರಗದ ಅಲಂಕಾರಿಕ ವಸ್ತುಗಳ ಬದಲಿಗೆ, ಪೇಪರ್ ಹಾಗೂ ಹೂವು ಎಲೆಗಳನ್ನು ಅಲಂಕಾರಕ್ಕೆ ಬಳಸಿ. ಬಟ್ಟೆ, ಕಾಗದ, ಮರದಿಂದ ತಯಾರಿಸಿದ ಅಲಂಕಾರಿಗ ವಸ್ತುಗಳನ್ನು ಉಪಯೋಗಿಸಿ

6. ಪ್ಲಾಸ್ಟಿಕ್ ನಿಷೇಧಿಸಿ: ನೈವೇದ್ಯ, ಪ್ರಸಾದ, ಹಣ್ಣು ಮತ್ತಿತರೆ ತಿನಿಸುಗಳನ್ನು ವಿನಿಯೋಗಿಸಲು ಬಾಳೆ ಎಲೆ, ಅಡಿಕೆಯ ಹಾಳೆ, ದೊನ್ನೆಗಳನ್ನು ಬಳಸಿ. ಕಸದ ಬುಟ್ಟಿಯಲ್ಲೆ ಕಸವನ್ನು ಹಾಕಿ ಪರಿಸರ ಶುಚಿತ್ವ ಕಾಯ್ದಿರಿಸಿ.

7. ಶಬ್ದ ಮಾಲಿನ್ಯ ಮಾಡದಿರಿ: ಅತೀಯಾದ ನಿರಂತರ ಕರ್ಕಶ ಶಬ್ದ ಜನರಿಗೆ ಕಿರಿಕಿರಿ ಹಾಗೂ ಆರೋಗ್ಯದ ತೊಂದರೆ ಉಂಟುಮಾಡುತ್ತದೆ. ಮನಸಿಗೆ ಮುದ ನೀಡುವ ಕೊಳಲು, ಮೃದಂಗ, ತಬಲದಂತಹ ಸಂಗೀತವನ್ನು ನಿಯಮಿತ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಸಾರ ಮಾಡುವುದು ಉತ್ತಮ. ಧ್ವನಿವರ್ದಕಗಳನ್ನು ಆಸ್ಪತ್ರೆ, ಶಾಲೆ-ಕಾಲೇಜು, ವೃದ್ದಾಶ್ರಮದ ವಠಾರದಲ್ಲಿ ಬಳಸಬೇಡಿ. ಪಠಾಕಿಯನ್ನು ಸುಡುವುದರಿಂದ ವಾಯುಮಾಲಿನ್ಯವಾಗುವುದರಿಂದ ಬಳಸದಿರುವುದು ಪರಿಸರ ಹಾಗೂ ಆರೋಗ್ಯಕ್ಕೆ ಹಿತಕರ.

Gowri-Ganesha.8.  ಕೃತಕ ವಿಸರ್ಜನೆಯ ಕೆರೆ ಬಳಸಿ: ಜನರು ಬಳಸುವ ನದಿ, ಸರೋವರ, ಕೆರೆಗಳಲ್ಲಿ ವಿಸರ್ಜಿಸುವ ಬದಲಿಗೆ ಕೃತಕವಾಗಿ ಕೆರೆಗಳನ್ನು ಇದಕ್ಕಾಗಿಯೆ ನಿರ್ಮಿಸಿ ವಿಸರ್ಜಿಸಿ. ನಂತರ ಈ ಮಣ್ಣನ್ನು ಬೇರೆ ಉಪಯುಕ್ತ ರೀತಿಯಲ್ಲಿ ಉಪಯೋಗಿಸಬಹುದು.

9. ಕಾಂಪೂಸ್ಟ್ ಪಿಟ್ ನಿರ್ಮಿಸಿ: ದೇವರಿಗೆ ಅರ್ಪಿಸಿದ ಹೂವು, ಹಣ್ಣು, ಹಾರಗಳು ಇನ್ನಿತರೆ ಕರಗುವ ನೈಸರ್ಗಿಕ ತ್ಯಾಜ್ಯಗಳನ್ನು ಬೇರೆಯದೆ ಹೊಂಡದಲ್ಲಿ ಹಾಕಿ ಗೊಬ್ಬರವಾಗಿ ಪರಿವರ್ತಿಸಿ, ಇದನ್ನು ಗಿಡಗಳಿಗೆ ಉಪಯೋಗಿಸಿ

10. ಸಾಂಕೇತಿಕ ವಿಸರ್ಜನೆ: ಮಣ್ಣಿನ ಮೂರ್ತಿಯನ್ನು ಕೆರೆಗಳಲ್ಲಿ ವಿಸರ್ಜಿಸುವ ಬದಲಿಗೆ ಕಂಚು, ಇತರೆ ಮೆಟಲ್ ನಿಂದ ತಯಾರಿಸಿದ ಮೂರ್ತಿಗಳನ್ನು ಪೂಜಿಸಿ ಸಾಂಕೇತಿಕವಾಗಿ ಮನೆಯಲ್ಲೆ ನೀರಿನಲ್ಲಿ ಮುಳುಗಿಸಿ ಮತ್ತೆ ಮರು ಬಳಕೆ ಮಾಡಬಹುದು.

ಹೀಗೆ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಯನ್ನು ಆಚರಿಸಲು ಜನರಿಗೆ ತಿಳಿಸಬೇಕು. ಮತ್ತು ಇದರ ಸಲುವಾಗಿ ಗುಂಪುಗಳಾಗಿ, ಸಂಘಗಳಾಗಿ ಮಾಡಿ ಯುವ ಪೀಳಿಗೆಗೆ ಇದರ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು ಮತ್ತು ಇಂತಹ ಆಚರಣೆಯ ಪ್ರಭಾವ ಹಾಗೂ ಲಾಭವನ್ನು ತಿಳಿಸಿ, ನಮ್ಮ ಆಚರಣೆಯ ಮಹತ್ವ ಹಾಗೂ ಸಂಪ್ರದಾಯವನ್ನು ಉಳಿಸಬೇಕು.

Also Read: ಭೂತಾಯಿಯ ಒಡಲನ್ನು ಬರಡಾಗಿಸುವ ಹಕ್ಕು ಯಾರಿಗೊಬ್ಬರಿಗೂ ಇಲ್ಲ

ಡಾ. ಮಹೇಶ್ ಶರ್ಮಾ ಎಂ. ಆಯುರ್ವೇದ ತಜ್ನರು ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು 9964022654

ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!