ಆರೋಗ್ಯದ ಮೇಲೆ ನಿಗಾ ಇಡಿ

ಜೀವನವಿಡೀ ಸಂತೃಪ್ತ ಮತ್ತು ಸಂತೋಷವನ್ನು ಅನುಭವಿಸಬೇಕಾದರೆ ಆರೋಗ್ಯ ಉತ್ತಮ ವಾಗಿರಬೇಕು. ಹೀಗಾಗಿ ಜನರು ತಮ್ಮ ಜೀವನ ನಿಜಕ್ಕೂ ಎಷ್ಟು ಅಸಾಧಾರಣವಾದುದು ಎಂಬ ಬಗ್ಗೆ ಅರಿತುಕೊಳ್ಳಬೇಕು ಮತ್ತು ಹೇಗೆ ನೋಡಿಕೊಳ್ಳಬೇಕು ಹಾಗೂ ಅದಕ್ಕೆ ಉಂಟಾಗುವ ಹಾನಿಕಾರಕ ಗಂಡಾಂತರವನ್ನು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಪುಟ್ಟ ಪರಿವರ್ತನೆಗಳೇ ದೀರ್ಘ ಕಾಲ ನಿಮ್ಮ ಜೀವ ಮತ್ತು ಜೀವನಕ್ಕೆ ಸುರಕ್ಷತೆ ನೀಡುತ್ತದೆ.

  • ನಿಯತ ವ್ಯಾಯಾಮ ಮಾಡಿ: (ಹೌದು, ಇದು ಕಷ್ಟವಾದುದು ಎಂಬುದು ನಮಗೆಲ್ಲಾ ಗೊತ್ತು). ಪ್ರತಿ ದಿನ 30 ನಿಮಿಷಗಳ (4-6 ಕಿಮೀ.) ಬಿರು ನಡಿಗೆ ಬದುಕಿಗಾಗಿ ಆರೋಗ್ಯಕರ ಹೃದಯ ಹೊಂದಲು ನೆರವಾಗುತ್ತದೆ. ತಾಜಾ ಮತ್ತು ಶುದ್ಧ ಗಾಳಿಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ವಿಷ ಮತ್ತು ತ್ಯಾಜ್ಯ ಹೊರ ಹೋಗುತ್ತದೆ. ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡಿ ಹಾಗೂ ಸೈಕಲ್ ಸವಾರಿ ಅಥವಾ ವಾಯುವಿಹಾರ, ಸ್ವಲ್ಪ ದೂರದಲ್ಲಿರುವ ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ನಡೆದುಕೊಂಡು ಹೋಗುವಿಕೆ, ಓಡುವಿಕೆ ಇತ್ಯಾದಿಯಂಥ ವ್ಯಾಯಾಮದ ರೂಪವು ದೇಹದಲ್ಲಿ ಸಾಮಥ್ರ್ಯ ಮತ್ತು ಸ್ವಾಸ್ಥವನ್ನು ಸ್ವಾಭಾವಿಕವಾಗಿ ಸಂಚಯಗೊಳಿಸುತ್ತದೆ. ಹೃದಯ ಮತ್ತು ಮಾಂಸಖಂಡ ಮೂಳೆಗಳ ಸ್ಥಿರತೆಗಾಗಿ ವಾರದಲ್ಲಿ 5 ದಿನಗಳಲ್ಲಿ 15 ನಿಮಿಷಗಳ ಕಾಲ ಬಿರುಸಾದ ನಡಿಗೆಯು ಸೂಕ್ತವಾಗಿರುತ್ತದೆ. ದೈಹಿಕ ಸ್ಥಿತಿಗಳು ಸುಧಾರಿಸುತ್ತಿದ್ದಂತೆ ನಡಿಗೆಯ ವೇಗ ಮತ್ತು ಸಮಯವನ್ನು ಹೆಚ್ಚಿಸಬಹುದು.
  • ಉತ್ತಮ ಆಹಾರ ಸೇವಿಸಿ: ಆಹಾರ ಸೇವಿಸುವುದು ಜೀವನದ ಸಂತೋಷಗಳಲ್ಲಿ ಒಂದು. ಆದರೆ ಆಹಾರ ಕ್ರಮದ ಮೇಲೆ ನಿಗಾ ಇಡಬೇಕು ಹಾಗೂ ಕೊಲೆಸ್ಟರಾಲ್ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಹೃದಯಕ್ಕೆ ರಕ್ಷಣೆ ನೀಡುವ ಆಂಟಿಆಕ್ಸಿಡಂಟ್‍ಗಳನ್ನು ಒಳಗೊಂಡ ಸಾಕಷ್ಟು ಸಿಟ್ರಸ್ ಆಹಾರ ಸೇವಿಸಿ. ಅಧಿಕ ಕೊಲೆಸ್ಟರಾಲ್ ರಕ್ತ ವಾಹಿನಿಗಳ ಗೋಡೆಗಳಲ್ಲಿ ಶೇಖರಣೆಯಾಗಿ ಬ್ಲಾಕ್‍ಗಳಿಗೆ ಕಾರಣವಾಗಿ ಹೃದಯಾಘಾತಕ್ಕೆ ಎಡೆ ಮಾಡಿಕೊಡುತ್ತದೆ. ಸೇವಿಸುವ ಆಹಾರದ ಪ್ರಮಾಣ ಮತ್ತು ಮೊತ್ತವು ದೇಹಕ್ಕೆ ಇಂಧನವನ್ನು ಪೂರೈಸುತ್ತದೆ. ಸಮರ್ಪಕ ಪೋಷಕಾಂಶಕ್ಕಾಗಿ ಕೆಲವು ಆಹಾರಗಳನ್ನು ಸಂಸ್ಕರಣೆಗೆ ಒಳಪಡದ ಸ್ಥಿತಿಯಲ್ಲಿ ಸೇವಿಸುವುದು ಒಳ್ಳೆಯದು.ಕನಿಷ್ಠ ಪ್ರತಿ ದಿನ ಐದು ಬಾರಿ ತರಕಾರಿಗಳು ಮತ್ತು / ಅಥವಾ ಹಣ್ಣುಗಳನ್ನು ನಿಮ್ಮ ಅಹಾರದಲ್ಲಿ ಸೇರಿಸಿ.ಎಣ್ಣೆಯಲ್ಲಿ ಕರಿದ ಆಹಾರಗಳು, ಸಿಹಿ ಹೆಚ್ಚಾಗಿರುವ ಪದಾರ್ಥಗಳು ಮತ್ತು ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ. ಪ್ರತಿದಿನ 6 ರಿಂದ 8 ಲೋಟಗಳಷ್ಟು ಶುದ್ಧ ನೀರನ್ನು ಸೇವಿಸಿ.
  • ತೂಕದ ಮೇಲೆ ನಿಗಾ ಇರಲಿ: ಸರಿಯಾದ ದೇಹ ತೂಕವನ್ನು ಹೊಂದಿದಾಗ ಹೆಚ್ಚು ಅರಾಮ ಮತ್ತು ಅನುಕೂಲಕರವಾಗಿ ಇರುತ್ತೀರಿ .ತೂಕ ತುಂಬಾ ಹೆಚ್ಚಾದಾಗ ಆಯಾಸದ ಮೇಲೆ ಇನ್ನಷ್ಟು ಆಯಾಸವಾಗುತ್ತದೆ. ‘ಸೊಂಟದ ಬೊಜ್ಜು’ ಅಥವಾ ಪರಿವರ್ತನೆಯಾದ ಪೃಷ್ಠ ಸೋಂಟದೊಂದಿಗೆ ಹೊಟ್ಟೆಯ ಸುತ್ತಳತೆ ಹೆಚ್ಚಳ ಅನುಪಾತವು ಹೃದಯಾಘಾತ ಪ್ರಕರಣವನ್ನು ಹೆಚ್ಚಿಸುತ್ತದೆ.
  • ಧೂಮಪಾನದ ಬಗ್ಗೆ ಎಚ್ಚರ : ಧೂಮಪಾನವು ಶ್ವಾಸಕೋಶ ಕ್ಯಾನ್ಸರ್, ಪಾಶ್ರ್ವವಾಯು ಮತ್ತಿತರ ಗಂಭೀರ ರೋಗಗಳಿಗೂ ಕಾರಣವಾಗುತ್ತದೆ.ಹೃದಯ, ಮೆದುಳು ಮತ್ತು ಶ್ವಾಸಕೋಶಗಳನ್ನು ರಕ್ಷಿಸಲು ಎಂದೆಂದಿಗೂ ತಂಬಾಕಿಗೆ ಗುಡ್‍ಬೈ ಹೇಳಿ.ನಕರಾತ್ಮಕ ಆರೋಗ್ಯ ನಡವಳಿಕೆಯನ್ನು ಅಂದರೆ ದುಶ್ಚಟಗಳಿಂದ ದೂರವಿರಿ. ನಿಕೋಟಿನ್, ಧೂಮಪಾನ, ಮದ್ಯಪಾನ, ಕೆಫೇನ್ ಹಾಗೂ ಇತರ ಮಾದಕ ವಸ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಇಂಥ ದುರಾಭ್ಯಾಸಗಳು ರೋಗ ಪ್ರತಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.
  • ವಿರಮಿಸಿ : ಸಾಧ್ಯವಾದಾಗಲೆಲ್ಲ ಮುಗುಳ್ನಗೆ ಹೊರ ಸೂಸಿ. ಸಾಧ್ಯವಾದಷ್ಟು ರಿಲ್ಯಾಕ್ಸ್ ಆಗಿ. ಇದರಿಂದ ನಿಮಗಷ್ಟೇ ಸಂತೋಷವಾಗುವುದಿಲ್ಲ. ನಿಮ್ಮ ಹೃದಯವೂ ಆರೋಗ್ಯವಾಗಿರುತ್ತದೆ. ಪ್ರತಿಯೊಬ್ಬ ಮನುಷ್ಯರಿಗೂ ಪ್ರತಿದಿನ ಏಳರಿಂದ ಎಂಟು ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ. ಉತ್ತಮ ನಿದ್ರೆ ಮಾಡುವ ಮಂದಿ ಹೆಚ್ಚು ಆರೋಗ್ಯವಂತರಾಗಿಯೂ ಮತ್ತು ಕ್ರಿಯಾಶೀಲರಾಗಿಯೂ ಇರುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಕೆಲವು ಮಂದಿ ಅಗತ್ಯವಿರುವಷ್ಟು ಕಾಲ ನಿದ್ರೆ ಮಾಡುವುದಿಲ್ಲ. ಅಸಮರ್ಪಕ ನಿದ್ರೆಯಿಂದ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾಗಿ ದೇಹ ತೂಕ ಹೆಚ್ಚಳ ಮತ್ತು ಇತರ ಅನಾರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.
  • ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ : ಅಧಿಕ ರಕ್ತದೊತ್ತಡ ಇದೆಯೇ ಎಂಬುದನ್ನು ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ. ಆಹಾರದಲ್ಲಿ ಕಡಿಮೆ ಪ್ರಮಾಣದ ಉಪ್ಪು ಬಳಸಿ.ರೋಗ ಮುಕ್ತವಾಗಿರಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ವರ್ಷಕ್ಕೆ ಒಮ್ಮೆ ಮುಂಜಾಗ್ರತಾ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಆರೋಗ್ಯದಲ್ಲಿನ ಯಾವುದೇ ನಕರಾತ್ಮಕ ಪ್ರವೃತ್ತಿಗಳನ್ನು ಪತ್ತೆ ಮಾಡಲು ಮತ್ತು ರಕ್ಷಿಸಲು ನೆರವಾಗುತ್ತದೆ.
  • ಡಯಾಬಿಟಿಸ್ ನಿಯಂತ್ರಿಸಿ : ಮಧುಮೇಹ ರೋಗಿಯಾಗಿದ್ದರೆ ಮತ್ತು ಅದನ್ನು ಸಮರ್ಪಕವಾಗಿ ನಿಯಂತ್ರಿಸದಿದ್ದರೆ ಹೃದ್ರೋಗದ ಗಂಡಾಂತರ ಶೇಕಡ 30ರಷ್ಟು ಹೆಚ್ಚಾಗಿರುತ್ತದೆ.ಆದ್ದರಿಂದ ಔಷಧಿ, ಆಹಾರ ಕ್ರಮ ಮತ್ತು ಡಯಾಬಿಟಿಸ್ ತೊಡಕುಗಳ ಬಗ್ಗೆ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯಿರಿ.
    ಆರೋಗ್ಯವಾಗಿದ್ದರೂ, ತುಂಬಾ ನಿಧಾನವಾಗಿ ಯಾವುದೇ ಗಮನಾರ್ಹ ರೋಗಲಕ್ಷಣ ಮತ್ತು ಚಿಹ್ನೆಗಳು ತಿಳಿಯದ ಕಾರಣ ವರ್ಷಕ್ಕೊಮ್ಮೆ ವೈದ್ಯರನ್ನು ಭೇಟಿ ಮಾಡಿ.
  • ವ್ಯಾಯಾಮ-ಸ್ವಲ್ಪ ವ್ಯಾಯಾಮ ಮಾಡುವುದು ಏನು ಇಲ್ಲದುದಕ್ಕಿಂತ ಉತ್ತಮ.
  • ಉತ್ತಮ ಆಹಾರ ಕ್ರಮ-ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.
  • ಹೃದಯದ ಬಗ್ಗೆ ಗಮನವಿರಲಿ.
  • ಧೂಮಪಾನ ನಿಲ್ಲಿಸಿ.
  • ಒತ್ತಡವನ್ನು ತಪ್ಪಿಸಲು ಪ್ರಯತ್ನಿಸಿ ಮತ್ತು ವಿರಮಿಸಲು ಯತ್ನಿಸಿ.
  • ರಕ್ತದೊತ್ತಡವನ್ನು ತಪಾಸಣೆ ಮಾಡಿಸಿಕೊಳ್ಳಿ.
  • ಮಧುಮೇಹವನ್ನು ತಪಾಸಣೆ ಮಾಡಿಸಿ.
  • ಕೊಲೆಸ್ಟರಾಲ್‍ನನ್ನು ನಿಯಂತ್ರಿಸಿ.
  • ಸಮಗ್ರ ಆರೋಗ್ಯ ಪರಿಶೀಲಿಸಿ.
  • ಹೃದಯವನ್ನು ಆರೈಕೆ ಮಾಡಿ. ಇದು ಅಮೂಲ್ಯ ಸಂಪತ್ತು.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!