ಕಷ್ಟಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ?

ಕಷ್ಟಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ? ಬಹಳಷ್ಟು ಜನರಿಗೆ ಉದ್ಯೋಗದಾತರಾಗಿದ್ದ ಕಾಫೀ ಡೇ ಸಿದ್ಧಾರ್ಥ ಅವರಿಂದ ಹಿಡಿದು ವಿಶ್ವವನ್ನೇ ನಡುಗಿಸಿದ್ದ ಹಿಟ್ಲರ್‍ನಂತಹವನನ್ನೂ ಆಲಿಂಗಿಸಿಕೊಂಡಿದ್ದ ಆತ್ಮಹತ್ಯೆ ಎನ್ನುವ ಮಹಾಮಾರಿ ದುರ್ಬಲ ಎನ್ನುವ ಸೂಚನೆ ಸಿಕ್ಕ ಯಾರನ್ನೂ ಬಿಡೊಲ್ಲ ಎನ್ನುವುದು ಸ್ಪಷ್ಟ.

Suicide-Prevention-Dayನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಬಹಳಷ್ಟು ನಿಗೂಢವಾಗಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆದರೆ ಬಣ್ಣದ ಲೋಕದ, ಹಣ ಹೆಸರು ಮಾಡಿದ ಪ್ರೇಕ್ಷಾ ಮೆಹ್ತಾ, ಕುಶಾಲ್ ಪಂಜಾಬಿ, ನಿತೀನ್ ಕಪೂರ್, ಪ್ರತ್ಯುಶಾ ಬ್ಯಾನರ್ಜಿ, ಸಾಯಿ ಪ್ರಶಾಂತ್, ಶಿಖಾ ಜೋಷಿ, ಜಿಯಾಖಾನ್, ಸಿಲ್ಕ್ ಸ್ಮಿತಾ, ಕಲ್ಪನಾ ಹೀಗೆ ಬಹಳಷ್ಟು ಸೆಲಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎನ್ನುವುದನ್ನು ನೋಡ್ತಾ ಹೋದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.

ದುರ್ಬಲ ಎನ್ನುವ ಸೂಚನೆ ಸಿಕ್ಕ ಯಾರನ್ನೂ ಬಿಡೊಲ್ಲ

ರೈತರು ಆತ್ಮಹತ್ಯೆ ಮಾಡಿಕೊಂಡ್ರೆ ವಿಪರೀತ ಸಾಲ, ಬೆಳೆ ನಷ್ಟ ಅಂತನ್ನಬಹುದು. ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ್ರೆ ಅವರ ಸೋ ಕಾಲ್ಡ್ ಪ್ರೀತಿ, ಜೀವನ ಎದುರಿಸಲಾಗದ ಭಯ, ಅಭದ್ರತೆ ಅನ್ನಬಹುದು. ಬಹಳಷ್ಟು ಜನರಿಗೆ ಉದ್ಯೋಗದಾತರಾಗಿದ್ದ ಕಾಫೀ ಡೇ ಸಿದ್ಧಾರ್ಥ ಅವರಿಂದ ಹಿಡಿದು ವಿಶ್ವವನ್ನೇ ನಡುಗಿಸಿದ್ದ ಹಿಟ್ಲರ್‍ನಂತಹವನನ್ನೂ ಆಲಿಂಗಿಸಿಕೊಂಡಿದ್ದ ಆತ್ಮಹತ್ಯೆ ಎನ್ನುವ ಮಹಾಮಾರಿ ದುರ್ಬಲ ಎನ್ನುವ ಸೂಚನೆ ಸಿಕ್ಕ ಯಾರನ್ನೂ ಬಿಡೊಲ್ಲ ಎನ್ನುವುದು ಸ್ಪಷ್ಟ.

ಸಾಯಬೇಕು ಎಂದು ನಿರ್ಧಾರ ಮಾಡಿ ಕಾರ್ಯಪ್ರವೃತ್ತರಾಗುವ ಕ್ಷಣದಲ್ಲಿ ಬರುವ ಆ ಧೈರ್ಯ ಬದುಕ್ತೀನಿ ಎಂದು ಬದುಕಿಸಿಕೊಳ್ಳದೆ ಹೋಗುತ್ತಲ್ಲ, ಅದು ನಿಜವಾಗಿಯೂ ದುರಂತ! ಆತ್ಮಹತ್ಯೆಯ ಘಟನೆಗಳಿಗೆ ಹಲವಾರು ಮುಖಗಳಿರಬಹುದು. ವಿಭಿನ್ನ ಕಾರಣಗಳಿರಬಹುದು. ಜಿಗುಪ್ಸೆಯ ನಾನಾ ವಿಧಗಳಿರಬಹುದು. ಕಷ್ಟಗಳಿರಬಹುದು, ತೊಂದ್ರೆಯಾಗಿರಬಹುದು. ಆದ್ರೆ ಸತ್ತು ಸುಖ ಕೊಡಕ್ಕಾಗ್ತದಾ?

ಪ್ರತಿಯೊಬ್ಬರ ಜೀವನದಲ್ಲಿಯೂ ಅವರನ್ನು ಇಷ್ಟಪಡುವವರು ಇದ್ದೇ ಇರುತ್ತಾರೆ, ನಂಬಿಕೊಂಡ ಜನರಿರ್ತಾರೆ. ಅವರೂ ಏನೇನೋ ಕನಸು ಕಂಡಿರ್ತಾರೆ. ಆದ್ರೆ ನಾವು ಜೀವನ ಎದುರಿಸಲಾರದೆ ಸತ್ರೆ.. ಪಾಪ ಉಳಿದವರ ಗತಿ ಏನು? ಅಂತ ಸಾಯುವವರು ಯಾಕೆ ಯೋಚಿಸುವುದಿಲ್ಲವೋ ಗೊತ್ತಿಲ್ಲ. ಇಷ್ಟು ದಿನ ಹೇಗಿದ್ರಿ, ಅನ್ನೋದು ಬಿಟ್ಟು ಇನ್ಮುಂದೆ ಪ್ಯಾಶನೇಟ್ ಆಗಿದ್ರೆ ಚೀವನ ಸುಂದರ.ಲೈಫಲ್ಲಿ ಒಂದು ಧಮ್ ಇದ್ದು, ಮಾತಲ್ಲಿ ರಿಧಂ ಇದ್ರೆ ಸಾಯೋ ಯೋಚನೆ ಯಾಕಾದ್ರೂ ಬರುತ್ತೆ ಅಲ್ವಾ? ಕಷ್ಟಗಳು ಯಾರಿಗೆ ತಾನೆ ಇಲ್ಲ. ಅವಮಾನಗಳು ಯಾರನ್ನ ತಾನೇ ಬಿಟ್ಟಿದೆ?

ಗರುಡ ಪಕ್ಷಿ ಅದರ ಕಥೆ – ಹಳೇ ನೆನಪುಗಳು ಮರೆಯಲೇ ಬೇಕಾಗತ್ತೆ.

Suicideಆ ವಿಷ್ಯ ಎಲ್ಲಾ ಹಾಗಿರ್ಲಿ. ಒಂದು ಕಥೆ ಹೇಳ್ತೀನಿ ಕೇಳಿ. ನಾನು ಎಲ್ಲೋ ಓದಿದ್ದು! ಇದು ಈಗಲ್ ಅಂತೀವಲ್ಲ ಗರುಡ ಪಕ್ಷಿ ಅದರ ಕಥೆ. ಪಕ್ಷಿಗಳ ಜೀವನ ಚಕ್ರದಲ್ಲಿ ಗರುಡದ್ದೇ ಜಾಸ್ತಿ ಆಯಸ್ಸು. ಸುಮಾರು 70 ವರ್ಷದವರೆಗೂ ಇದೆ ಇದರ ಜೀವಿತಾವಧಿ. ಆದ್ರೆ ಅದಕ್ಕೆ ಕಷ್ಟದ ಜೀವನ ತಲುಪುತ್ತಿದ್ದಂತೆ ಒಂದು ಗಟ್ಟಿಯ ನಿರ್ಧಾರಕ್ಕೆ ಬರತ್ತೆ. ಅದು ನಮ್ಮ ನಿಮ್ಮಂತೆ ಸೂಸೈಡ್ ಮಾಡ್ಕೊಳಲ್ಲ. ಅದ್ಕೆ 40 ವರ್ಷ ವಯಸ್ಸಾದಾಗ, ರೆಕ್ಕೆಗಳು ಮುದಿಯಾಗಿರ್ತವೆ. ಕೊಕ್ಕು ಕೂಡಾ ಮೊಂಡಾಗಿರ್ತದೆ. ರೆಕ್ಕೆಗಳೆಲ್ಲಾ ಬಲಿತು ಹಾರೋಕೆ ಆಗದಷ್ಟು ಕಷ್ಟ ಕೊಡ್ತವೆ. ಇನ್ನೇನು ಹೀಗೇ ಇದ್ರೆ ಸತ್ತೇ ಹೋಗತ್ತೆ ಅನ್ನೋ ಟೈಮಲ್ಲಿ ಈಗಲ್‍ಗೆ ಎರಡೇ ಆಯ್ಕೆ ಇರತ್ತೆ. ಒಂದು ಸಾಯೋದು ಅಥವಾ ಹೋರಾಟ ಮಾಡೋದು.

ಆಗ ಪ್ರತಿಯೊಂದು ಗರುಡ ಪಕ್ಷಿಯೂ ಮಾಡೋದು ಹೋರಾಟ. ಯಾವ್ದೂ ಆತ್ಮಹತ್ಯೆ ಯೋಚನೆ ಮಾಡಲ್ಲ. ಗೂಡು ಬಿಟ್ಟು ಎತ್ತರದ ಬೆಟ್ಟದ ತುದಿಗೆ ಹೋಗಿ ಕೂರತ್ತೆ. ಹಳೇ ಕೊಕ್ಕು ಕಿತ್ತೋಗವರೆಗೂ ಪರಪರ ಅಂತ ಗುಡ್ಡದ ಕಲ್ಲಿಗೆ ಕೆರಿಯತ್ತೆ. ಇದೇ ರೀತಿ ತನ್ನ ಕಾಲಿನ ಉಗುರುಗಳಿಗೂ ಹಾಗೂ ಹಳೆಯ ರೆಕ್ಕೆಯ ಗರಿಗಳಿಗೂ ಮಾಡಿ ಉದುರಿಸಿಕೊಳ್ತವಂತೆ! ಐದು ತಿಂಗಳ ನಂತ್ರ ಮತ್ತೆ ಅವೆಲ್ಲವೂ ಹೊಸತಾಗಿ ಬೆಳೆದು ಹೊಸ ಜನ್ಮಕ್ಕೆ ಮರಳಿದ ಹಾಗೆ ಮತ್ತೂ 30 ವರ್ಷ ಖುಷಿಯಿಂದ ಇರುತ್ತೆ.

ಹಾಗಾದ್ರೆ ಈ ಬದಲಾವಣೆ ಯಾಕೆ ಬೇಕಿತ್ತು ಅದಕ್ಕೆ? ಬಹಳಷ್ಟು ಬಾರಿ ನಮಗೆ ಬದಲಾವಣೆ ಅತೀ ಜರೂರು ಜೀವನದಲ್ಲಿ. ಹಳೇ ನೆನಪುಗಳು ಮರೆಯಲೇ ಬೇಕಾಗತ್ತೆ. ಹಳೇ ಹೊರೆಗಳಿಂದ ಫ್ರೀ ಆದ್ರೆ ಮಾತ್ರ ವರ್ತಮಾನದ ಪ್ರಯೋಜನ ಪಡೀಬಹುದು. ಇನ್ಮೇಲೆ ಎಷ್ಟೇ ಕಷ್ಟ ಬಂದ್ರೂ ಸಾಯಬೇಕು ಅನ್ನುವ ಆ ನಿಮ್ಮಯೋಚನೆಯನ್ನು ಸಾಯಿಸಿ. ನೀವ್ ಬದುಕ್ರಿ. ಯಾಕಂದ್ರೆ ಕಷ್ಟಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವಲ್ಲ!

(ವಿಶ್ವ ಆತ್ಮಹತ್ಯಾ ತಡೆ ದಿನದ ಪ್ರಯುಕ್ತ ಈ ಲೇಖನ)

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!