ಕಲ್ಲಂಗಡಿ ಹಣ್ಣು  ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ.

ಕಲ್ಲಂಗಡಿ ಹಣ್ಣು  ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ. ಈ ಹಣ್ಣು ವರ್ಷವಿಡೀ ಮಾರುಕಟ್ಟೆಗಳಲ್ಲಿ ಲಭಿಸುತ್ತದೆಯಾದರೂ ಬೇಸಿಗೆಯಲ್ಲಿ ಕಲ್ಲಂಗಡಿಗಿಂತ ರುಚಿಕರವಾದ ಹಣ್ಣು ಇನ್ನೊಂದಿಲ್ಲ.

watermelon ಕಲ್ಲಂಗಡಿ ಹಣ್ಣು  ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ.ಕಲ್ಲಂಗಡಿ, ಉರಿ ಬೇಸಿಗೆಯಲ್ಲಿ ಬಾಯಿ ತಣಿಸುವ ಹಾಗೂ ನೀರಡಿಕೆ ಇಂಗಿಸುವ ಒಂದು ರುಚಿಕರ ಹಣ್ಣು ಮಾತ್ರವಲ್ಲದೇ, ಇದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳುಂಟು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕವಾಗಿದೆ. ಈ ಹಣ್ಣನ್ನು ಸೇವಿಸುವುದರಿಂದ ಬಿಸಿಲಿನ ಬೇಗೆಯಿಂದ ಉಂಟಾಗುವ ಆಯಾಸ ಪರಿಹಾರವಾಗುತ್ತದೆ. ಬಾಯಾರಿಕೆ ತಗ್ಗುತ್ತದೆ ಹಾಗೂ ದೇಹ ತಂಪಾಗುತ್ತದೆ. ಆಮಶಂಕೆ, ಅತಿಸಾರ, ವಾಂತಿ, ಕಾಲರಾ ಇತ್ಯಾದಿ ಸಂದರ್ಭಗಳಲ್ಲಿ ರೋಗಿಯ ದೇಹದಲ್ಲಿ ಜಲಾಂಶದ ಕೊರತೆ ಉಂಟಾಗುವುದನ್ನು ತಡೆಗಟ್ಟುತ್ತದೆ. ಅಲ್ಲದೇ ಆಸ್ತಮಾ, ಅತಿರೋಸ್‍ಸ್ಕೆಲೋರಿಸಿಸ್, ಡಯಾಬಿಟಿಸ್, ಕರುಳು ಕ್ಯಾನ್ಸರ್ ಮತ್ತು ಸಂಧಿವಾತದಂಥ ಸ್ಥಿತಿಗಳಿಗೆ ಎಡೆ ಮಾಡಿಕೊಡುವ ಉರಿಯನ್ನು ಉಪಶಮನಗೊಳಿಸಲು ನೆರವಾಗುತ್ತದೆ.
ರುಚಿಕರ ಮತ್ತು ರಸಭರಿತ ಕಲ್ಲಂಗಡಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ:

1.ಕಲ್ಲಂಗಡಿ ಹಣ್ಣಿನಲ್ಲಿ ಶಕ್ತಿಶಾಲಿ ಆಂಟಿಅಕ್ಸಡಂಟ್‍ಗಳಿವೆ: ಸಿಹಿ ಮತ್ತು ರಸಭರಿತ ಕಲ್ಲಂಗಡಿ ಹಣ್ಣಿನಲ್ಲಿ ಕೆಲವು ಮುಖ್ಯ ಆಂಟಿ ಆಕ್ಸಡಂಟ್‍ಗಳಿವೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿವೆ. ಅಲ್ಲದೇ ಇದರಲ್ಲಿ ಬೀಟಾ ಕ್ಯಾರೋಟಿನ್ ಸಹ ಹೇರಳವಾಗಿದೆ.

2.ಶಕ್ತಿ ಉತ್ಪಾದಕ ಕಲ್ಲಂಗಡಿ: ಈ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ ನೀಡುವ ಬಿ ವಿಟಮಿನ್‍ಗಳು ಸಮೃದ್ಧವಾಗಿವೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ16, ವಿಟಮಿನ್ ಬಿ1, ಮ್ಯಾಗ್ನಿಷಿಯಂ ಮತ್ತು ಪೋಟ್ಯಾಷಿಯಂ ಇದೆ. ಗುಲಾಬಿ ವರ್ಣದ ಕಲ್ಲಂಗಡಿಯಲ್ಲಿ ಅಧಿಕ ಪ್ರಮಾಣದ ಪೋಷಕಾಂಶ ಮತ್ತು ಜೀವಸತ್ವಗಳು ಇರುವುದರಿಂದ ಇದನ್ನು ಶ್ರೇಷ್ಠ ಹಣ್ಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಲ್ಲಿ ನೀರಿನ ಅಂಶ ಅಧಿಕವಾಗಿದ್ದು, ಕ್ಯಾಲೋರಿ ಅಂಶ ಕಡಿಮೆ ಇರುತ್ತದೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3.ನೇತ್ರ ರಕ್ಷಣೆಗೆ ಸಹಕಾರಿ: ನೇತ್ರ ರಕ್ಷಣೆಯಲ್ಲಿ ಇದು ಕ್ಯಾರೆಟ್‍ನಂತೆ ಸಹಕಾರಿ. ಕಲ್ಲಂಗಡಿ ಹಣ್ಣುಗಳನ್ನು ಅಗಾಗ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ಅಂಧತ್ವಕ್ಕೆ ಪ್ರಾಥಮಿಕ ಕಾರಣವಾಗಿರುವ ವಯೋಮಾನಕ್ಕೆ ಸಂಬಂಧಪಟ್ಟ ಮಾಕ್ಯುಲರ್ ಡಿಜೆನರೇಷನ್ (ಎಆರ್‍ಎಂಡಿ) ದೋಷವನ್ನು ತಗ್ಗಿಸುವಲ್ಲಿ ಇದು ನೆರವಾಗುತ್ತದೆ. ಮ್ಯಾಕುಲರ್ ಡಿಜೆನೆರೇಷನ್(ಎಅರ್‍ಎಂಡಿ) ವಯೋಮಾನಕ್ಕೆ ಸಂಬಂಧಿಸಿದ ನೇತ್ರ ದೋಷವಾಗಿದ್ದು, 50 ವರ್ಷ ಮೇಲ್ಪಟ್ಟವರಲ್ಲಿ ದೃಷ್ಟಿ ನಾಶ ತೀರಾ ಸಾಮಾನ್ಯವಾದ ಕಾರಣವಾಗಿದೆ. ವಯಸ್ಸಾದಂತೆ ಈ ದೋಷ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಕಣ್ಣಿನ ಹಿಂಭಾಗ ಇರುವ ಅಕ್ಷಿಪಟದ ಕೇಂದ್ರ ಮತ್ತು ಸೂಕ್ಷ್ಮ ಸಂವೇದಿ ಭಾಗವಾದ ಮಾಕ್ಯುಲ (ಕಣ್ಣಿನ ಕಲೆ) ದೋಷದಿಂದ ಇದು ಕಂಡುಬರುತ್ತದೆ. ಇದನ್ನು ತಡೆಗಟ್ಟುವಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ಕಲ್ಲಂಗಡಿಯ ಇತರೆ ಉಪಯೋಗಗಳು:

1. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕ. ಈ ಹಣ್ಣನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚಾಗುತ್ತದೆ. ಆದುದರಿಂದ ಸೂರ್ಯನ ತಾಪ ಅಧಿಕವಾಗಿರುವ ತಿಂಗಳುಗಳಲ್ಲಿ ಈ ಹಣ್ಣನ್ನು ಪ್ರತಿದಿನ ನಿರಾತಂಕವಾಗಿ ಬಳಸಬಹುದು.

2. ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಬಿಸಿಲಿನ ಬೇಗೆಯಿಂದ ಉಂಟಾಗುವ ಆಯಾಸ ಪರಿಹಾರವಾಗುವುದು, ಬಾಯಾರಿಕೆ ತಗ್ಗುವುದು, ದೇಹ ತಂಪಾಗುವುದು.

3. ಆಮಶಂಕೆ, ಅತಿಸಾರ, ವಾಂತಿಯಾಗುವಿಕೆ, ಕಾಲರಾ ಇತ್ಯಾದಿ ಸಂದರ್ಭಗಳಲ್ಲಿ ರೋಗಿಯ ದೇಹದಲ್ಲಿ ಜಲಾಂಶದ ಕೊರತೆ ಉಂಟಾಗುವುದು. ಈ ಕೊರತೆ ತುಂಬಲು ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆಹಣ್ಣು ಹಿಂಡಿ ಕುಡಿಯಲು ಕೊಡುವುದು ಒಳ್ಳೆಯದು.

4. ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಮಲ ಸಡಿಲವಾಗಿ, ಸುಲಭವಾಗಿ ವಿಸರ್ಜನೆಯಾಗುವುದು. ಆದುದರಿಂದ ಮಲಕಟ್ಟು ಆದಾಗ ಈ ಹಣ್ಣು ಸೇವಿಸುವುದು ಉತ್ತಮ.

5.ಮೂತ್ರ ವಿಸರ್ಜನೆಯ ಕಾಲದಲ್ಲಿ ಉರಿಯಾಗುತ್ತಿದ್ದರೆ ಕಲ್ಲಂಗಡಿ ಹಣ್ಣಿನ ರಸ ಮತ್ತು ಮಜ್ಜಿಗೆ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ, ಒಂದು ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಗುಣ ಕಂಡುಬರುವುದು. ಅರಿಶಿನ ಕಾಮಾಲೆಯಾದಾಗಲೂ ಇದೇ ಚಿಕಿತ್ಸೆ ಮಾಡಬಹುದು.

6.ಕಲ್ಲಂಗಡಿ ಹಣ್ಣಿನ ಮೃದುವಾದ ಕೆಂಪು ತಿರುಳನ್ನು ತಿಂದ ಬಳಿಕ ಸೌತೇಕಾಯಿಯಂತಿರುವ ಬಿಳಿ ಭಾಗ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

7.ಒಂದು ಟೀ ಚಮಚ ಗಸಗಸೆ, ಮೂರು ನಾಲ್ಕು ಬಾದಾಮಿ ಮತ್ತು ಒಂದು ಊಟದ ಚಮಚ ಕಲ್ಲಂಗಡಿ ಬೀಜ ಇವುಗಳನ್ನು ನುಣ್ಣಗೆ ಅರೆದಾಗ ಹಾಲಿನಂತೆ ಆಗುವುದು. ಈ ಹಾಲಿಗೆ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ದೇಹ ತಂಪಾಗುವುದು. ಹೃದಯದ ಕ್ರಿಯೆ ಸ್ವಾಭಾವಿಕ ಸ್ಥಿತಿಗೆ ಬರುವುದು ಮತ್ತು ನಿದ್ರೆ ಚೆನ್ನಾಗಿ ಆಗುತ್ತದೆ. ಪ್ರತಿದಿನ ರಾತ್ರಿ ಮಲಗುವುದಕ್ಕೆ ಮುಂಚೆ ಮೇಲೆ ತಿಳಿಸಿದ ಪದಾರ್ಥಗಳನ್ನು ಬಾಯಲ್ಲಿಟ್ಟುಕೊಂಡು ಚೆನ್ನಾಗಿ ಅಗೆದು ರಸ ಹೀರಿದರೂ ಅಷ್ಟೇ ಫಲ ದೊರೆಯುತ್ತದೆ.

8.ಕಲ್ಲಂಗಡಿ ಹಣ್ಣ ತಿಂದ ಬಳಿಕ ಉಳಿಯುವ ದಪ್ಪದ ಬಿಳಿ ಭಾಗದ ತಿರುಳನ್ನು (ಹೊರಗಿನ ಹಸಿರು ಸಿಪ್ಪೆ ತೆಗೆಯಿರಿ) ಪಲ್ಯ ಮಾಡಬಹುದು. ಸಾಂಬಾರಿಗೂ ಉಪಯುಕ್ತ. ಆರೋಗ್ಯಕ್ಕೂ ಇದು ಒಳ್ಳೆಯದು.

Dr-Manjushree ಡಾ|| ಮಂಜುಶ್ರೀ ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ 66, ಶಾನ್‌ಬಾನ್ ಟ್ರೇಡರ‍್ಸ ಎದುರು, ತಡಂಬೈಲು  ಸುರತ್ಕಲ್-575014 ದೂ:94822 49762

ಡಾ|| ಮಂಜುಶ್ರೀ
ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ 66,
ಶಾನ್‌ಬಾನ್ ಟ್ರೇಡರ‍್ಸ ಎದುರು, ತಡಂಬೈಲು

ಸುರತ್ಕಲ್-575014 ದೂ:94822 49762
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!