ಪ್ರಾಸ್ಟೇಟ್ ಹಿಗ್ಗುವಿಕೆಗೆ ಮನೆಮದ್ದು

ಪ್ರಾಸ್ಟೇಟ್ ಹಿಗ್ಗುವಿಕೆಗೆ ಮನೆಮದ್ದು ಬಹಳ ಉಪಯುಕ್ತ.

1.  ಕುದಿಯುತ್ತಿರುವ 1 ಗ್ಲಾಸ್ ನೀರಿಗೆ 1/2 ಚಮಚ ಅಶ್ವಗಂಧದ ಪೌಡರ, 1/2 ಚಮಚ ಪುನರ್ನವದ ಪೌಡರ (ಕೊಮ್ಮೆ ಬೇರು),1/2 ಚಮಚದಷ್ಟು ಹರಿತಕಿ ಪೌಡರ (ಅಣಲೇಕಾಯಿ ಪೌಡರ) ಹಾಕಿ ಒಂದು ಸಲ ಕುದಿಸಿ ಕಷಾಯ ತಯಾರಿಸಿಕೊಳ್ಳಬೇಕು. ಇದನ್ನು ದಿನಕ್ಕೆ 2ಬಾರಿ ಕುಡಿಯಬೇಕು. ಹಾಗೆ ಮಾಡುವುದರಿಂದ ಪ್ರಾಸ್ಟೇಟ್ (Prostate) ಗ್ರಂಥಿಯ ಸಮಸ್ಯೆ ಕಡಿಮೆ ಆಗುತ್ತದೆ. ಮಧುಮೇಹ ಇಲ್ಲದವರು ಚೂರು ಬೆಲ್ಲ ಬಳಸಬಹುದು.

prostatitis

2. ಕುಂಬಳಕಾಯಿಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ/ಕುಂಬಳಕಾಯಿ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮೂತ್ರ ವಿಸರ್ಜನೆ ಸುಲಭವಾಗಿ ಆಗುವುದು. ಕೆಂಪುಕಡಲೆ, ಹೆಸರುಕಾಳು, ಅಲಸಂದಿಕಾಳು ಇಂತವುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು, ಸೊಯಾವನ್ನು ಸಹ ಬಳಸಬಹುದು.

3. ಟೊಮ್ಯಾಟೊ ಜ್ಯೂಸ್‍ನ್ನು ಪ್ರತಿನಿತ್ಯ ತಾಜಾವಾಗಿ ಮಾಡಿಕೊಂಡು ಕುಡಿಯುತ್ತ ಬಂದರೆ ಪ್ರಾಸ್ಟೇಟ್ ತೊಂದರೆ ಕಡಿಮೆಯಾಗುತ್ತದೆ.

4. ನೆಲ್ಲಿಕಾಯಿಯನ್ನು ಜಜ್ಜಿ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಶುದ್ಧ ಅರಿಶೀಣವನ್ನು ಹಾಕಿ ಮಿಶ್ರಣಮಾಡಿಕೋಂಡು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ 3 ತಿಂಗಳು ಸತತವಾಗಿ ಮಾಡಿಕೊಂಡು ಸೇವಿಸಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ. ಅಗಸೆ ಬೀಜ, ಕಲ್ಲಂಗಡಿ ಬೀಜ ಇವುಗಳನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ದೇಹಕ್ಕೆ ಅಗತ್ಯವಾದ ಒಮೆಗಾ-3 (Omega-3) ಮೇದಾಮ್ಲವು ದೊರೆಯುತ್ತದೆ ಮತ್ತು ಆರೋಗ್ಯ ವೃದ್ಧಿಗೆ ಪೂರಕವಾಗುತ್ತದೆ.

5.  1 ಲೋಟ ನೀರಿಗೆ, 1 ಚಮಚ ಜಜ್ಜಿದ ನೆಲ್ಲಿಕಾಯಿ ಪುಡಿಯನ್ನು ಹಾಕಬೇಕು, ಸ್ವಲ್ಪ ಮೃದುವಾದ ಕೂಡಲೆ ಬಾಳೆಯ ಹೂವು, ಬಸವನಪಾದ (ಕಾಂಚನಾರ) ಎಲೆಗಳನ್ನು ಹಾಕಬೇಕು. ಇಳಿಸುವ ಹಂತದಲ್ಲಿ ಸ್ವಲ್ಪ ಬೇಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಶೋಧಿಸಿ ಕುಡಿಯಬೇಕು. ಇದು ಪ್ರಾಸ್ಟೇಟ್ ತೊಂದರೆಯನ್ನು ಕಡಿಮೆಮಾಡುತ್ತದೆ.

6. ಬೆಳ್ಳುಳ್ಳಿ, ಲಕ್ಷ್ಮಣಫಲ, ಪ್ಲವರ ಹಣ್ಣು, ದಾಳಿಂಬೆ ಹಣ್ಣು, ಬಾಳೆ ಹಣ್ಣು, ಕಡಲೇಕಾಯಿ ಬೀಜ  ಇವುಗಳನ್ನು ಹೆಚ್ಚು ಬಳಸುವುದು ಈ ಪ್ರಾಸ್ಟೇಟ್ ಸಮಸ್ಯೆ ಕಡಿಮೆ ಮಾಡುವುದರಲ್ಲಿ ಉಪಯುಕ್ತವಾಗಿದೆ.

dr-shridhar

ಡಾ. ಶ್ರೀಧರ ಬ. ವಡ್ಡರ
ಸಹಾಯಕ ಉಪನ್ಯಾಸಕರು 
ಶಲ್ಯತಂತ್ರ ವಿಭಾಗ , ಎಸ್.ಡಿ.ಎಮ್. ಟ್ರಸ್ಟ್,
ಎ.ಎಮ್.ಸಿ. ತೇರದಾಳ, ಮೊ: 98453 54220

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!