ಕಾಮಾಲೆ ಸಮಸ್ಯೆಗೆ ಪರಿಹಾರೋಪಾಯಗಳು

ಕಾಮಾಲೆ ಸಮಸ್ಯೆಗೆ ಪರಿಹಾರೋಪಾಯಗಳು:  ಪಿತ್ತಕೋಶಕ್ಕೆ ಹೊರೆಯು ಹೆಚ್ಚಾದಾಗ ಕರುಳು, ಪಿತ್ತರಸ ಹಾಗೂ ವರ್ಣದ್ರವ್ಯವನ್ನು ಕೊಂಡೊಯ್ಯುವ ಪಿತ್ತರಸನಾಳಗಳ ಕಾರ್ಯಕ್ಕೆ ತೊಂದರೆಯುಂಟಾದಾಗ ಅದು ಪಿತ್ತರಸ ಮತ್ತು ವರ್ಣದ್ರವ್ಯವನ್ನು ರಕ್ತಕ್ಕೆ ಬಿಡುತ್ತದೆ. ಆಗ ಚರ್ಮದ ಬಣ್ಣವು ಹಳದಿಯಾಗುತ್ತದೆ. ಇದನ್ನೆ ಅರಿಶಿನ ಕಾಮಾಲೆ ಎನ್ನುತ್ತಾರೆ. ಇದರರ್ಥ ಪಿತ್ತ ಜನಕಾಂಗಕ್ಕೆ ತೊಂದರೆಯುಂಟಾಗಿದೆ ಎಂದರ್ಥ.

jaundice - kamaale

ಕಾಮಾಲೆ ಬರುವ ಸೂಚನೆಗಳು:

     ನಿದ್ದೆಬರದಿರುವುದು, ಮಲವು ಬಿಳಿ ಅಥವಾ ಬೂದುಬಣ್ಣವಾಗುವುದು, ಬಾಯಿ ಕಹಿ ಎನಿಸುವುದು, ಆಹಾರವನ್ನು ಕಂಡರೆ ವಾಕರಿಕೆ, ವಾಂತಿ ಬಂದಂತೆ ಅನಿಸುವುದು. ಸುಸ್ತಾಗುವುದು, ನಾಲಿಗೆಯ ಮೇಲೆ ಬಿಳಿಯ ಒತ್ತರ ಆಗುವುದು, ತಲೆನೋವು ಬರುವುದು. ಜ್ವರ ಬಂದಂತಾಗುವುದು. ಮಲಬದ್ಧತೆ ಉಂಟಾಗುವುದು. ಕಣ್ಣು, ಚರ್ಮ ಹಾಗೂ ಮೂತ್ರ ಹಳದಿಯ ಬಣ್ಣದಾಗುವುದು.

  • ಒಂದು ವಾರದ ತನಕ ಕೇವಲ ಹಣ್ಣಿನ ರಸವನ್ನು ಮಾತ್ರ ತೆಗೆದುಕೊಳ್ಳಿ.
  • ಕಿತ್ತಳೆ, ಎಳನೀರು, ಮೂಸಂಬಿ, ದಾಳಿಂಬೆ, ಇತ್ಯಾದಿ ಹುಳಿಹಣ್ಣುಗಳನ್ನು ಹಾಗೂ ಕಬ್ಬಿನಹಾಲು, ಬೆಣ್ಣೆ ತೆಗೆದ ಮಜ್ಜಿಗೆಯನ್ನು ಉಪಯೋಗಿಸಿ.
  • ಒಂದು ಲೋಟ ಬಿಸಿನೀರಿಗೆ ನಿಂಬೆಹಣ್ಣಿನ ರಸವನ್ನು ಹಿಂಡಿ 2 ಚಮಚ ಜೇನುತುಪ್ಪವನ್ನು ಹಾಕಿ ಬೆಳಿಗ್ಗೆಯ ಸಮಯ ತೆಗೆದುಕೊಳ್ಳಿ.
  • ಬೆಳಗ್ಗಿನ ಉಪಹಾರದ ಬದಲು 2-3 ವಿಧವಾದ ಹಣ್ಣುಗಳನ್ನು ತೆಗೆದುಕೊಳ್ಳಿ.
  • ಕಿತ್ತಳೆರಸ ಇಲ್ಲ ದ್ರಾಕ್ಷಿಯ ಹಣ್ಣಿನ ರಸವನ್ನು ತೆಗೆದುಕೊಳ್ಳಿ.
  • ಮಧ್ಯಾಹ್ನ ಊಟಕ್ಕೆ ಎರಡು ಚಪಾತಿ ಜೊತೆಗೆ ಬೇಯಿಸಿದ ತರಕಾರಿಗಳನ್ನು ಹಾಗೂ ಸೊಪ್ಪುಗಳನ್ನು ಸ್ವಲ್ಪ ನಿಂಬೆರಸದೊಂದಿಗೆ ತೆಗೆದುಕೊಳ್ಳಿ.
  • ರಾತ್ರಿ ಊಟದ ಬದಲು ಹಸಿ ತರಕಾರಿಗಳ ಸಲಾಡ್, ಮಜ್ಜಿಗೆ, ಒಣಹಣ್ಣುಗಳು, ತಾಜಾಹಣ್ಣುಗಳನ್ನು ಸೇವಿಸಿ.
  • ತೆಂಗಿನಕಾಯಿ, ಕಡ್ಲೆಕಾಯಿ, ಹಾಲು, ತುಪ್ಪ, ಬೆಣ್ಣೆ, ಎಣ್ಣೆ, ಬೇಳೆ ಇತ್ಯಾದಿಗಳನ್ನು ಒಂದೆರಡು ತಿಂಗಳುಗಳ ಕಾಲ ಸೇವಿಸಬೇಡಿ.
  • ಹೆಚ್ಚು ನೀರನ್ನು ಕುಡಿಯಿರಿ. ಬಿಸಿನೀರಿನ ಹಿಪ್ ಬಾತ್, ಹಬೆಸ್ನಾನ, ಸೂರ್ಯಸ್ನಾನ ಅವಶ್ಯ.
Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!