ಶಾಪಿಂಗ್ ಕ್ರೇಜ್ ಒಂದು ರೋಗವೇ?

ಇದು ಜೆಟ್ ಯುಗ. ಎಲ್ಲವೂ ಕ್ಷಣಾರ್ಧದಲ್ಲೇ. ನಿಮಗಿಷ್ಟ ಬಂದ ವಸ್ತವನ್ನು ಎಲ್ಲೆಂದರಲ್ಲಿ ಖರೀದಿಸಿಬಹುದು. ಕ್ರೆಡಿಟ್ ಕಾರ್ಡ್‍ಗಳು, ಸುಲಭ ಸಾಲಗಳು, ಇಎಂಐ ಮತ್ತು ಹಣದುಬ್ಬರ ಏರುತ್ತಿರುವ ಈ ವಿಶ್ವದಲ್ಲಿ ಜನರು ಸಾಲದ ಸುಳಿಯಲ್ಲಿ ಸಿಲುಕುವುದು ಸರ್ವ ಸಾಮಾನ್ಯ. ನಮ್ಮ ಈ ಜನಸಂಖ್ಯೆಯಲ್ಲಿ ಒಂದು ಗುಂಪಿನ ಜನರು ಒತ್ತಡದ ಖರೀದಿದಾರರಾಗುತ್ತಿರುವುದನ್ನು ನಾವು ಗಮನಿಸಬಹುದು. ಇದನ್ನು ‘ಕಂಪಲ್ಸೀವ್ ಶಾಪರ್ ಅಥವಾ ಒನಿಯೊಮಾನಿಯಾಸ್ಕ್’ ಎಂದು ಕರೆಯತ್ತಾರೆ.

ಒನಿಯೋಮೇನಿಯಾ ಸಾಮಾನ್ಯವಾದ ವಿಚಾರವಲ್ಲ. ಸಾಮಾನ್ಯ ಜನಸಂಖ್ಯೆಯ ಶೇಕಡ 16ರಲ್ಲಿ ಶೇಕಡ 2ರಷ್ಟು ಮಂದಿ ಒನಿಯೋಮೇನಿಯಾದ ವಿವಿಧ ತೀವ್ರತೆಗಳಿಂದ ಬಳಲುತ್ತಿದ್ದರು. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಧಾರಣವಾಗಿರುತ್ತದೆ. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಗೂ ಮುನ್ನ ಇರದ ಖರೀದಿಯ ಹಪಾಹಪಿತನ ಯೌವ್ವನಾವಸ್ಥೆಯಲ್ಲಿ ಹೆಚ್ಚಾಗುತ್ತದೆ. ಯೌವ್ವನಾವಸ್ಥೆಯಲ್ಲಿ ಸುಲಭವಾಗಿ ಹಣ ಲಭಿಸುವುದರಿಂದ (ವಾಸ್ತವ ಮತ್ತು ಗಳಿಕೆ ಮೂಲಕ) ಹಾಗೂ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅವಕಾಶ ಇರುವುದರಿಂದ ಈ ವಯಸ್ಸಿನಲ್ಲಿ ಖರೀದಿ ಜೋರಾಗಿರುತ್ತದೆ.

ಸಾಮಾನ್ಯ ನಡವಳಿಕೆ ಇವೆ ಎಂದು ಮಾನಸಿಕ ಆರೋಗ್ಯ ತಜ್ಞರಿಂದಲೂ ದೃಢಪಟ್ಟವರ ಜನರು ಕೂಡ ಈ ದೋಷ ಹೊಂದಿರುತ್ತಾರೆ. ಇದನ್ನು ಕೇವಲ ನಡವಳಿಕೆ ಎನ್ನುವುದಕ್ಕಿಂತಲೂ ಒನಿಯೊಮೇನಿಯಾವನ್ನು ಒಂದು ರೋಗವೆಂದು ಪರಿಗಣಿಸಲು ಸಾಕಷ್ಟು ಕಾರಣಗಳಿವೆ. ಕೆಲವು ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ:

1. ವ್ಯಕ್ತಿಯ ನಡವಳಿಕೆಯ ಅಹಂಭಾವ ಸ್ವರೂಪ (ಅಂದರೆ ಶಾಪಿಂಗ್ ಉಮೇದನ್ನು ವಿಚಾರಹೀನವೆಂದು ಭಾವಿಸುವ ಆತ ಅಥವಾ ಆಕೆ).

2. ಇಡಿ ಶಾಪಿಂಗ್‍ನ ಹಠಾತ್ ಪ್ರವೃತ್ತಿಯ ಭಾಗ.

3. ಹಪಾಹಪಿತನ, ಬಯಕೆ ಮತ್ತು ತೃಪ್ತಿ ಹೊಂದಿದ ಭಾವನೆ (ನಡವಳಿಕೆ ವ್ಯಸನ).

4. ಇತರ ಮಾನಸಿಕ ರೋಗಗಳ ಸಹಯೋಗ (ಹತಾಶೆ, ಜುಲುಮೆ ನಡವಳಿಕೆ, ದೋಷ, ಮಾದಕ ಪದಾರ್ಥ ಬಳಕೆ, ವ್ಯಕ್ತಿತ್ವ ದೋಷಗಳು).

5. ಮಾನಸಿಕ ಸಮಸ್ಯೆಗಳ ಕೌಟುಂಬಿಕ ಇತಿಹಾಸ (ಅದೇ ರೀತಿಯ ಅನಾರೋಗ್ಯ, ಭಾವನೆ ದೋಷಗಳು, ವಸ್ತುಗಳ ದೋಷ ಇತ್ಯಾದಿ)

6. ಶಾಪಿಂಗ್ ಉಮೇದಿಯ ವಿಷ ವರ್ತುಲ ಹಾಗೂ ಸಂಬಂಧಪಟ್ಟ ದೋಷ, ಇದನ್ನು ಅನೇಕ ಸಲ ಅವರ ನಿಯಂತ್ರಣದಿಂದ ಹೊರಗೆ ಕಾಣಲ್ಪಡುತ್ತದೆ.

ಈ ದೋಷವನ್ನು ರೋಗ ನಿರ್ಧಾರ ಮಾಡಿ ಚಿಕಿತ್ಸೆ ನೀಡುವುದು ಸಾಮಾನ್ಯ ಶಾಪಿಂಗ್ ಉಮೇದಿಗಿಂತಲೂ ದೊಡ್ಡ ಸವಾಲಾಗಿದ್ದು, ಹೈಪೋಮೇನಿಯಾ ಅಥವಾ ಮೇನಿಯಾದಂಥ ರೋಗದ ಒಂದು ಭಾಗವಾಗಿ ಅಥವಾ ಶಾಪಿಂಗ್ ಕ್ರೇಜ್ ಇದ್ದರೂ ಅದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬೇಕು. ಒಮ್ಮೆ ರೋಗವನ್ನು ನಿರ್ಧರಿಸಿದ ನಂತರ ಉತ್ತಮ ಚಿಕಿತ್ಸಾ ಫಲಿತಾಂಶಕ್ಕಾಗಿ ವೈಯಕ್ತಿಕ ಧೋರಣೆ ತುಂಬಾ ಮುಖ್ಯವಾಗುತ್ತದೆ. ಎರಡನೆಯದಾಗಿ ಔಷಧಿ ಚಿಕಿತ್ಸಾ ನಿರ್ವಹಣೆ, ಕೌಟುಂಬಿಕ ಬೆಂಬಲ ಮತ್ತು ಆಪ್ತ ಸಮಾಲೋಚನೆ, ವೈಯಕ್ತಿಕ ಕಾರ್ಯ, ಅರಿವು ನಡವಳಿಕೆ ಚಿಕಿತ್ಸೆ, ಆರ್ಥಿಕ ಸಲಹಾ ನೀಡಿಕೆಯ ಸಂಯೋಜಿತ ಆಲೋಚನೆಯ ಸಮಗ್ರತಾ ದೃಷ್ಟಿಯ ವಿಧಾನವನ್ನು ಸಹ ತುಂಬಾ ಮುಖ್ಯವೆಂದು ಪರಿಗಣಿಸಲಾಗಿದೆ. ಒನಿಯೋಮೇನಿಯಾದಿಂದ ಯಾರಾದರೂ ನರಳುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ಅವರು ಮಾನಸಿಕ ಆರೋಗ್ಯ ವೃತ್ತಿ ಪರಿಣಿತರ ನೆರವು ಕೋರುವಂತೆ ಸಲಹೆ ಮಾಡಿ.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, 82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!