ಭಾರತೀಯ ವಿಜ್ಞಾನಿ ಡಾ. ವಿಜಯ್ ಕುನೂರು ಮಹತ್ವದ ಅನ್ವೇಷಣೆ: ವಿಶ್ವದ ಪ್ರಪ್ರಥಮ ಅರಿಶಿಣ ಜ್ಯೂಸ್

ಬೆಂಗಳೂರು ಮೂಲದ ನವೋದ್ಯಮ ಸಂಸ್ಥೆಯ ಸಂಸ್ಥಾಪಕ ಡಾ. ವಿಜಯ್ ಕನೂರು  ಜೈವಿಕ ತಂತ್ರಜ್ಞಾನ ಆಧಾರಿತ ವಿಧಾನ ಸೂತ್ರ ಬಳಸಿಕೊಳ್ಳುವ ಮೂಲಕ ವಿಭಿನ್ನ ಅರಿಶಿಣ ರಸವನ್ನು ಅಭಿವೃದ್ದಿಗೊಳಿಸಿದ್ದಾರೆ.

ಬಹುತೇಕ ಭಾರತೀಯರಿಗೆ ಅರಿಶಿಣ ಚಿರಪರಿಚಿತ. ನಮಗೆ ಚಿಕ್ಕ ವಯಸ್ಸಿನಲ್ಲಿ ಗಾಯಗಳಿಗೆ ಅಜ್ಜಿಯಂದಿರು ಅರಿಶಿಣ ಲೇಪಿಸಿ ಗುಣಪಡಿಸುತ್ತಿದ್ದ ಹಾಗೂ ಶೀತವಾದಾಗ ಅರಿಶಿಣ ಬೆರೆಸಿದ ಹಾಲು ಕುಡಿಸುತ್ತಿದ್ದರು. ನಾವೆಲ್ಲರೂ ಅರಿಶಿಣ ಬಳಕೆಯೊಂದಿಗೆ ಬೆಳೆದವರು. ಇದು ನಮ್ಮ ಬದುಕಿನ ಭಾಗವೂ ಹೌದು. ಪೂಜೆ ಮಾಡುವುದಕ್ಕೆ ಮುನ್ನ ನಮ್ಮ ಅಜ್ಜಿಯಂದಿರು ದೇವರ ಸಾಮಗ್ರಿಗಳನ್ನು ಅರಿಶಿಣ ನೀರಿನಲ್ಲಿ ಸ್ಭಚ್ಚಗೊಳಿಸುತ್ತಿದ್ದರು. ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ನ್ಯಾನೋ ತಂತ್ರಜ್ಞಾನ ವಿಜ್ಞಾನಿ ಡಾ. ವಿಜಯ್ ಕುನೂರು ಅವರು ದೇಹದ ಪ್ರತಿದಿನ ಆಂತರಿಕ ಶುದ್ಧೀಕರಣಕ್ಕಾಗಿ ವಿಶ್ವದ ಪ್ರಪ್ರಥಮ ಅರಿಶಿಣ ರಸವನ್ನು ಅಭಿವೃದ್ಧಿಗೊಳಿಸಿದ್ದಾರೆ. ನಾವು ಪ್ರತಿದಿನ ಹಲ್ಲುಗಳನ್ನು ಸ್ವಚ್ಚಗೊಳಿಸುವ ಮತ್ತು ನಮ್ಮ ಚರ್ಮಕ್ಕೆ ಸ್ನಾನ ಮಾಡಿಸುವ ರೀತಿಯಲ್ಲೇ ಶರೀರ ಶುದ್ಧೀಕರಣಕ್ಕಾಗಿ ಅವರು ಟರ್‍ಮರಿಕ್ ಜ್ಯೂಸ್ ಅನ್ವೇಷಣೆ ಮಾಡಿದ್ದಾರೆ.

ಐದು ವರ್ಷಗಳ ಸತತ ಅಧ್ಯಯನ ಮತ್ತು ಸಂಶೋಧನೆ ನಂತರ, ಡಾ. ವಿಜಯ್ ಕನೂರು ಅವರು ಅರಿಶಿಣದಲ್ಲಿನ ಕರ್ಕುಮಿನ್ ಸಾರವನ್ನು ಹರಸ್ ಅಥವಾ ಹರಿದ್ರಾ ರಸ ರೂಪದಲ್ಲಿ ತೆಗೆದು ಅರಿಶಿಣ ರಸವನ್ನು ಅಭಿವೃದ್ದಿಗೊಳಿಸಿದ್ದಾರೆ. ಇದು ದೇಹದಲ್ಲಿ ದೈನಂದಿನ ಕಷ್ಮಲಗಳನ್ನು ಹೊರಹಾಕಲು ಸಹಕಾರಿ. ನಾವು ನಮ್ಮ ಪ್ರಾತವಿಧಿಗಳ ರೀತಿಯಲ್ಲೇ ಶರೀರದ ಆಂತರಿಕ ಪರಿಶುದ್ಧಿಯನ್ನು ಈ ಉತ್ಪನ್ನ ನೆರವೇರಿಸುತ್ತದೆ. ಇದು ಸ್ಥಳೀಯ ಗಿಡಮೂಲಿಕೆ ರಸಗಳಿಗಿಂತ ತೀರಾ ಭಿನ್ನ. ಹಿತಕರವಲ್ಲದ ರುಚಿ-ವಾಸನ, ಸೀಮಿತ ಪ್ರಯೋಜನ, ಮತ್ತು ವಿಳಂಬ ಫಲಿತಾಂಶದ ದೇಶೀಯ ಗಿಡಮೂಲಿಕ ರಸಗಳಂತಲ್ಲದೇ, ಹರಿದ್ರಾ ಅರಿಶಿಣ ರಸವು ಹಿತಕರ ರುಚಿ-ವಾಸನೆ, ವ್ಯಾಪಕ ಪ್ರಯೋಜನ-ಅನುಕೂಲ ಹಾಗೂ ಕ್ಷಿಪ್ರ ಫಲಿತಾಂಶದ ಗುಣಗಳನ್ನು ಹೊಂದಿದೆ. ಇದು ನೀರಿನಲ್ಲಿ ಪರಿಣಾಮಕಾರಿಯಾಗಿ ಕರಗುತ್ತದೆ, ಉತ್ತಮ ಸ್ವಾದ ಹೊಂದಿರುತ್ತದೆ ಹಾಗೂ ತುಂಬಾ ಕಡಿಮೆ ಬೆಲೆಯೂ ಅಗಿದ್ದು, ಎಲ್ಲ ವಯೋಮಾನದವರಿಗೂ ಸೂಕ್ತವಾಗಿದೆ.

2012ರಲ್ಲಿ ಹರಸ್ ಬ್ರೆವರೇಜಸ್ ಪ್ರೈವೇಟ್ ಲಿಮಿಟೆಡ್‍ನನ್ನು ಡಾ. ವಿಜಯ್ ಕುನೂರು ಸ್ಥಾಪಿಸಿದರು. 2018 ಇದು ಪರಿಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. ಈ ವರ್ಷದ ಆರಂಭದಲ್ಲಿ ಅರಿಶಿಣ ರಸದ ಹೊಸ ಪರಿಕಲ್ಪನೆಯ ಅನ್ವೇಷಣಾತ್ಮಕ ಉತ್ಪನ್ನವನ್ನು ಪರಿಚಯಿಸಿತು. ಈ ರಸ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಯ್ಕೆ ಮಾಡದ ವಿತರಕರು ಮಾರುಕಟ್ಟೆಗೆ ಇದನ್ನು ವಿತರಿಸುತ್ತಿದ್ದಾರೆ. ಈವರೆಗೆ ಈ ಹೊಸ ಉತ್ಪನ್ನಕ್ಕೆ ಗ್ರಾಹಕರು ಮತ್ತು ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಅರಿಶಿಣದ ದೈನಂದಿನ ಬಳಕೆ ಪ್ರಮಾಣ:ನೀವು ಪಡೆಯಬೇಕಾದುದನ್ನು ನೀವು ತಿನ್ನುವುದರಿಂದ ಲಭಿಸುವುದಿಲ್ಲ..!

ತನ್ನ ನವೀನ ಸಂಶೋಧನೆಯ ಹಿಂದಿನ ಆಲೋಚನೆ ಬಗ್ಗೆ ವಿವರಿಸಿದ ಹರಸ್ ಬ್ರೆವರೇಜಸ್ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಡಾ. ವಿಜಯ್ ಕುನೂರು, “ಅರಿಶಿಣ, ಕರ್ಕುಮಿನ್ ಎಂಬ ಸೂಪರ್‍ಫುಡ್ ಒಳಗೊಂಡಿರುತ್ತದೆ. ದೇಹದ ಕಷ್ಮಲಗಳಿಂದ ಉಂಟಾಗುವ ಉರಿ ಮತ್ತು ನಂಜು ದುಷ್ಪರಿಣಾಮಗಳನ್ನು ಇದು ನಿಯಂತ್ರಿಸುತ್ತದೆ. ಇದು ನಗರದ ಜನತೆಯ ಆರೋಗ್ಯ ಮತ್ತು ಸೌಖ್ಯತೆ ವರ್ಧನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.  ಅರಿಶಿಣವನ್ನು ನೇರವಾಗಿ ಸೇವಿಸಿದಾಗ ಅದರ ವೈದ್ಯಕೀಯ ಪ್ರಯೋಜನಗಳು ಮತ್ತು ಅನುಕೂಲಗಳು ಸಿದ್ಧರೂಪದಲ್ಲಿ ನಮಗೆ ತಕ್ಷಣ ಲಭ್ಯವಾಗುವುದಿಲ್ಲ. ನಮ್ಮ ದೇಹವು ಘನ ರೂಪದ ಆಹಾರವನ್ನು ಕ್ಷಿಪ್ರವಾಗಿ ಹೀರಿಕೊಳ್ಳುವುದಿಲ್ಲ. ಶರೀರದಲ್ಲಿನ ಹೀರಿಕೊಳ್ಳುವ ದುರ್ಬಲ ಸಾಮಥ್ರ್ಯವೂ ಇದಕ್ಕೆ ಕಾರಣ. ನಮ್ಮ ದೇಹದಲ್ಲಿನ ತ್ಯಾಜ್ಯಗಳನ್ನು ಹೊರ ಹಾಕಲು ಮತ್ತು ವಿಷಯುಕ್ತ ವಸ್ತುಗಳನ್ನು ನಿಯಂತ್ರಿಸಲು ಸಾಕಷ್ಟು ಕರ್ಕುಮಿನ್ ಅಗತ್ಯ. ಇದನ್ನು ಪಡೆಯಲು ಪ್ರತಿಯೊಬ್ಬರು ದಿನಕ್ಕೆ ಒಂದು ಕಿಲೋಗ್ರಾಂ ಅರಿಶಿಣ ಪುಡಿ ಸೇವಿಸಬೇಕು ಎಂದು ಅಧ್ಯಯನ ಮತ್ತು ಸಂಶೋಧನೆಗಳು ಹೇಳಿವೆ. ಆದರೆ ಪ್ರತಿದಿನ ಒಂದು ಕೆಜಿ ಅರಿಶಿಣ ಸೇವಿಸಲು ಸಾಧ್ಯವಿಲ್ಲ. ನೀರಿನಲ್ಲಿ ಕರಗಿಸಿದ ರೂಪದಲ್ಲಿ ಅಂದರೆ ಅಂದರೆ ರಸದ ಮೂಲಕ ಇದನ್ನು ಸೇವಿಸಿದ ಅರಿಶಿಣದ ಗರಿಷ್ಠ ಪ್ರಯೋಜನಗಳು ದೇಹಕ್ಕೆ ಲಭಿಸುತ್ತದೆ” ಎಂದರು.

ವಿಶ್ವ ಆರ್ಥಿಕ ವೇದಿಕೆ (ವಲ್ಡ್ ಎಕೊನೊಮಿಕ್ ಫೋರಂ-ಡಬ್ಲ್ಯುಇಎಫ್) ಪ್ರಕಾರ, ಮಲೀನಗೊಂಡ ನಗರ ಮತ್ತು ಪಟ್ಟಣಗಳಲ್ಲಿ ಉಸಿರಾಡುವುದು ಒಂದು ದಿನಕ್ಕೆ 20 ರಿಂದ 30 ಸಿಗರೇಟ್ ಸೇದುವುದಕ್ಕೆ ಸಮ. ಈ ವಿಷಮ ಮಾಲಿನ್ಯಕ್ಕೆ ಶಾಲಾ ಮಕ್ಕಳು, ಶ್ರಮಿಕ ವರ್ಗ, ಕಾರ್ಮಿಕು ಮತ್ತು ಹಿರಿಯ ನಾಗರಿಕರು ತೀವ್ರ ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ. ವಿಶ್ವದ 10 ಬಹು ಮಾಲಿನ್ಯ ನಗರಗಳಲ್ಲಿ ಒಂಭತ್ತು ನಮ್ಮ ಭಾರತದಲ್ಲಿದೆ ಎಂಬುದು ತೀವ್ರ ಆತಂಕಕಾರಿ ಸಂಗತಿ. ಚಳಿಗಾಲದಲ್ಲಂತೂ ದೇಶದ ಬಹುತೇಕ ನಗರಗಳು ಮತ್ತು ಪಟ್ಟಣಗಳು ಎಚ್ಚರಿಕೆ ಮಟ್ಟದ ವಾಯು ಮಾಲಿನ್ಯ ಹೊಂದಿರುತ್ತವೆ. ಇದು ರಾಜಧಾನಿ ದೆಹಲಿಯಂಥ ನಗರಗಳ ಶೇಕಡ 90ರಷ್ಟು ಜನರನ್ನು ಅನಾರೋಗ್ಯ ಪೀಡಿತರನ್ನಾಗಿಸುತ್ತದೆ.

ಕಣ್ಣಿಗೆ ಗೋಚರಿಸದ ಪಿಎಂ 2.5 ಆಲ್ಟ್ರಾಟೈನ್ ಕಪ್ಪು ಕಣಗಳು ವಾಯು ಮಾಲಿನ್ಯದಲ್ಲಿರುತ್ತವೆ. ಅವು ನಾವು ಉಸಿರಾಡುವಾಗ ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸಿ ಕ್ರಮೇಣ ರಕ್ತವನ್ನು ಸೇರುತ್ತದೆ. ಇದು ಉರಿಯೂತಕ್ಕೆ ಕಾರಣವಾಗುತ್ತದೆ. ಇದು ನಂತರ ಹೃದಯದ ರಕ್ತನಾಳಗಳು, ಲಿವರ್ ಮತ್ತು ಇತರ ಪ್ರಮುಖ ಅಂಗಗಳ ಮೇಲೆ ದುಷ್ಪರಿಣಾಮ ಬೀರಿ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತವೆ. ಅಲ್ಲದೇ ದೇಹದ ಸ್ವಾಭಾವಿಕ ಚಯಾಪಚಯಾ ಕ್ರಿಯೆಗೂ ತೊಂದರೆ ನೀಡುತ್ತವೆ. ಒತ್ತಡ, ಖಿನ್ನತೆ, ಡಯಾಟಿಸ್, ಸ್ಥೂಲಕಾಯ, ಹೃದ್ರೋಗ, ಹೃದಯಾಘಾತ, ಶ್ವಾಸಕೋಶ, ಲಿವರ್ ಹಾನಿ, ವಯಸ್ಸಿಗೆ ಮುನ್ನ ಮುದಿತನ, ಲೈಂಗಿಕ ಅಸಮರ್ಥತೆ ಮತ್ತು ಕ್ಯಾನ್ಸರ್ ರೋಗಗಳಿಗೆ ಮಾಲಿನ್ಯ ಮೂಲ ಕಾರಣ.

ನೀವು ಊಹಿಸಿದ್ದಕ್ಕಿಂತಲೂ ಹೆಚ್ಚು ಪ್ರಯೋಜನಗಳನ್ನು ಅರಿಶಿಣ ರಸ ನೀಡುತ್ತದೆ. !

ಡಾ. ವಿಜಯ್ ಕನೂರ್ ಹೇಳುವಂತೆ, ಹರಸ್ ಅರಿಶಿಣ ರಸ (ಟರ್‍ಮರಿಕ್ ಜ್ಯೂಸ್) ದೇಹದ ಒಳಭಾಗಗಳ ಶುದ್ಧತೆಗಾಗಿ ಪ್ರತಿದಿನ ಬೆಳಗ್ಗೆ ಅಗತ್ಯ ದ್ರವ ರೂಪದ ಸಾರವಾಗಿದೆ(ಪ್ರತಿದಿನ ಬೆಳಗ್ಗೆ ಹಲ್ಲುಗಳಿಗೆ ಟೂಥ್ ಪೇಸ್ಟ್ ರೀತಿ). ಇದು ದೇಹದ ಮಲೀನ ಅಂಶಗಳು ಮತ್ತು ನಂಜುಕಾರಕ ವಸ್ತುಗಳನ್ನು ಹೊರಹಾಕುತ್ತದೆ. ಇದು ನಗರ ಮತ್ತು ಪಟ್ಟಣವಾಸಿಗಳ ಆರೋಗ್ಯ ಮತ್ತು ಸೌಖ್ಯತೆಗೆ ತುಂಬಾ ಮುಖ್ಯವಾದ ಉತ್ಪನ್ನ. ಇದು ನಮ್ಮನ್ನು ಕ್ರಿಯಾಶೀಲ, ಸಶಕ್ತ ಮತ್ತು ಉತ್ಪಾದಕತೆ ಮೂಲಕ ಜೀವನಶೈಲಿಯ ವಿವಿಧ ಪರಿಸ್ಥಿತಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ಒಂದು ಕೆಜಿ ಅರಿಶಿಣ ಪುಡಿಯ ಪ್ರಯೋಜನ ಮತ್ತು ಉಪಯೋಗಗಳು ಈಗ ಕೇವಲ ಒಂದು ಚಮಚ ಅರಿಶಿಣ ರಸದಿಂದ ಲಭಿಸುತ್ತದೆ. ಬೆಳಗ್ಗೆ ಇದನ್ನು ಸೇವಿಸಬೇಕು. ನಾವು ಪ್ರತಿ ದಿನ ನಮ್ಮ ಹಲ್ಲುಗಳಿಗೆ ಬ್ರಷ್ ಮಾಡುವ ಹಾಗೂ ನಮ್ಮ ಚರ್ಮಕ್ಕೆ ಸ್ನಾನ ಮಾಡಿಸುವ ರೀತಿಯಲ್ಲೇ ದಿನಂಪ್ರತಿ ಒಂದು ಚಮಚ ಅರಿಶಿಣ ರಸ ಸೇವಿಸುವುದು ಅಗತ್ಯ. ಇದು ಮಾಲಿನ್ಯದಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಹಾಗೂ ಆ ಮೂಲಕ ನಮ್ಮನ್ನು ಆರೋಗ್ಯವಾಗಿ ಮತ್ತು ಕ್ರಿಯಾಶೀಲವಾಗಿ ಇಡುತ್ತದೆ. ಎಂದು ಡಾ. ಕನ್ನೂರು ವಿವರಿಸುತ್ತಾರೆ.

ಮಾಲಿನ್ಯದಿಂದ ರಕ್ಷಣೆ ನೀಡಲು ಆರೋಗ್ಯಕರ ಕ್ರಮಗಳಿಗಾಗಿ ಹರಸ್ ಅರಿಶಿಣ ರಸದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆಯು ಅಭಿಯಾನಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ. ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅರಿಶಿಣ ರಸವನ್ನು ಅನ್ವೇಷಿಸಲಾಗಿದೆ. ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸುವುದೂ ಸೇರಿದಂತೆ ದೇಹದ ಆಂತರಿಕ ಶುದ್ದತೆಗಾಗಿ ಇದನ್ನು ಬಳಸುವುದು ಇಂದಿನ ಮಾಲಿನ್ಯಯುಕ್ತ ಪರಿಸರದಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಈ ಉತ್ಪನ್ನವು ಭಾರತ ಮತ್ತು ವಿದೇಶಗಳಲ್ಲೂ ಲೋಕಪ್ರಿಯವಾಗುವ ಆಶಾಭಾವನೆಯನ್ನು ಸಂಸ್ಥೆ ಹೊಂದಿದೆ.

ಹರಸ್ ಬ್ರೆವರೇಜ್ಸ್ ಪ್ರೈ.ಲಿ.ಕುರಿತು

ಹರಸ್ ಬ್ರೆವರೇಜ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೂಲದ ನವೋದ್ಯಮ ಸಂಸ್ಥೆಯಾಗಿದ್ದು, ದೇಹದ ದಿನನಿತ್ಯದ ಕಷ್ಮಲಗಳನ್ನು ಹೊರ ಹಾಕುವ ವಿಶ್ವದ ಪ್ರಪ್ರಥಮ ಅರಿಶಿಣ ರಸ. ಇದು ಅತ್ಯಂತ ಕಡಿಮೆ ಬೆಲೆಗೆ ಲಭಿಸುವ ಎಲ್ಲ ವಯೋಮಾನದವರಿಗೂ ಸೂಕ್ತವಾದ ಟರ್‍ಮರಿಕ್ ಜ್ಯೂಸ್.  2012ರಲ್ಲಿ ಹರಸ್ ಬ್ರೆವರೇಜಸ್ ಪ್ರೈವೇಟ್ ಲಿಮಿಟೆಡ್‍ನನ್ನು ಡಾ. ವಿಜಯ್ ಕುನೂರು ಸ್ಥಾಪಿಸಿದರು. 2018 ಇದು ಪರಿಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. ಈ ವರ್ಷದ ಆರಂಭದಲ್ಲಿ ಅರಿಶಿಣ ರಸದ ಹೊಸ ಪರಿಕಲ್ಪನೆಯ ಅನ್ವೇಷಣಾತ್ಮಕ ಉತ್ಪನ್ನವನ್ನು ಪರಿಚಯಿಸಿತು.  ಐದು ವರ್ಷಗಳ ಸತತ ಅಧ್ಯಯನ ಮತ್ತು ಸಂಶೋಧನೆ ನಂತರ, ಡಾ. ವಿಜಯ್ ಕನೂರು ಅವರು ಅರಿಶಿಣದಲ್ಲಿನ ಕರ್ಕುಮಿನ್ ಸಾರವನ್ನು ಹರಸ್ ಅಥವಾ ಹರಿದ್ರಾ ರಸ ರೂಪದಲ್ಲಿ ತೆಗೆದು ಅರಿಶಿಣ ರಸವನ್ನು ಅಭಿವೃದ್ದಿಗೊಳಿಸಿದ್ದಾರೆ. ಇದು ದೇಹದಲ್ಲಿ ದೈನಂದಿನ ಕಷ್ಮಲಗಳನ್ನು ಹೊರಹಾಕಲು ಸಹಕಾರಿ. ನಾವು ನಮ್ಮ ಪ್ರಾತವಿಧಿಗಳ ರೀತಿಯಲ್ಲೇ ಶರೀರದ ಆಂತರಿಕ ಪರಿಶುದ್ಧಿಯನ್ನು ಈ ಉತ್ಪನ್ನ ನೆರವೇರಿಸುತ್ತದೆ. ಇದು ಸ್ಥಳೀಯ ಗಿಡಮೂಲಿಕೆ ರಸಗಳಿಗಿಂತ ತೀರಾ ಭಿನ್ನ. ಹಿತಕರವಲ್ಲದ ರುಚಿ-ವಾಸನ, ಸೀಮಿತ ಪ್ರಯೋಜನ, ಮತ್ತು ವಿಳಂಬ ಫಲಿತಾಂಶದ ದೇಶೀಯ ಗಿಡಮೂಲಿಕ ರಸಗಳಂತಲ್ಲದೇ, ಹರಿದ್ರಾ ಅರಿಶಿಣ ರಸವು ಹಿತಕರ ರುಚಿ-ವಾಸನೆ, ವ್ಯಾಪಕ ಪ್ರಯೋಜನ-ಅನುಕೂಲ ಹಾಗೂ ಕ್ಷಿಪ್ರ ಫಲಿತಾಂಶದ ಗುಣಗಳನ್ನು ಹೊಂದಿದೆ. ಇದು ನೀರಿನಲ್ಲಿ ಪರಿಣಾಮಕಾರಿಯಾಗಿ ಕರಗುತ್ತದೆ, ಉತ್ತಮ ಸ್ವಾದ ಹೊಂದಿರುತ್ತದೆ ಹಾಗೂ ತುಂಬಾ ಕಡಿಮೆ ಬೆಲೆಯೂ ಅಗಿದ್ದು, ಎಲ್ಲ ವಯೋಮಾನದವರಿಗೂ ಸೂಕ್ತವಾಗಿದೆ. ಈಗಾಗಲೇ ಈ ಅರಿಶಿಣ ರಸದಿಂದ ದೆಹಲಿ, ಹೈದರಾಬಾದ್, ಬೆಂಗಳೂರು, ಪುಣೆ ಮತ್ತು ಮುಂಬೈನ ಅಸಂಖ್ಯಾತ ಗ್ರಾಹಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಹರಸ್ ಟರ್‍ಮರಿಕ್ ಜ್ಯೂಸ್‍ನನ್ನು ಭಾರತದ ಎಲ್ಲ ನಗರಗಳು ಮತ್ತು ಪಟ್ಟಣಗಳಿಗೂ ತಲುಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಪ್ರತಿಯೊಬ್ಬ ಭಾರತೀಯರಿಗೂ ವಾಯು ಮಾಲಿನ್ಯದ ದುಷ್ಪರಿಣಾಮಗಳಿಂದ ಮುಕ್ತಗೊಳಿಸುವುದು ಹರಸ್ ಅರಿಶಿಣ ರಸದ ಮುಖ್ಯ ಉದ್ದೇಶ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಹರಸ್ ಬ್ರೆವರೇಜ್ಸ್ ಪ್ರೈವೇಟ್ ಲಿಮಿಟೆಡ್
# 1, ಜೈ ಗಣೇಶ್ ಬಿಲ್ಡಿಂಗ್, 3ನೇ ಮಹಡಿ,
37ನೇ ‘ಬಿ’ ಅಡ್ಡರಸ್ತೆ, 5ನೇ ಬ್ಲಾಕ್,
ಜಯನಗರ, ಬೆಂಗಳೂರು-560041
ಫೋನ್ : +91 9632916743
Email: contact@haras.in
mk555@haras.in
www.haras.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!