Health Vision

ಭಾರತೀಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

heart attackಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ.ಕೂತಲ್ಲೇ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ); ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ. ಆಧುನಿಕ ಜೀವನಶೈಲಿಯು ಯುವ ಜನತೆಯಲ್ಲಿ ಹೃದಯನಾಳ ತೊಂದರೆ, ಹೃದಯಾಘಾತ, ಪಾಶ್ರ್ವವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ. ಭಾರತದಲ್ಲಿ ಹೃದಯಾಘಾತ ಸಂಭವದ ವಯೋಮಿತಿಯು 40ರಿಂದ 30 ವರ್ಷಕ್ಕೆ ಇಳಿದಿದೆ. ಇದೊಂದು ಆತಂಕದ ವಿಷಯ.ಆದರೂ ಶೇ. 76ರಷ್ಟು ಜನರು ಸಮಸ್ಯೆ ಅಂತಿಮ ಹಂತಕ್ಕೆ ಹೋಗುವ ತನಕ ವೈದ್ಯರ ತಪಾಸಣೆಗೆ ಒಳಗಾಗುತ್ತಿಲ್ಲ. 20ರಿಂದ 65 ವಯೋಮಾನದ ಶೇ.60ರಷ್ಟು ಭಾರತೀಯರಿಗೆ ಈ ಕುರಿತು ಸೂಕ್ತ ತಿಳುವಳಿಕೆಯೇ ಇಲ್ಲ. 20ರಿಂದ 30ರ ಹರೆಯದ ಯುವ ಜನತೆ, ತಮಗೆ ಹೃದಯಸಂಬಂಧಿ ಸಮಸ್ಯೆ ಬರುವುದಿಲ್ಲ ಎಂಬ ದೃಢನಂಬಿಕೆಯಲ್ಲಿ ತಪಾಸಣೆಗೆ ಒಳಗಾಗುವುದಿಲ್ಲ. ಆದರೆ, ಶೇ. 20ರಷ್ಟು ಜನರಿಗೆ ಹೃದ್ರೋಗ ವಂಶವಾಹಿಯಾಗಿದೆ ಎಂದು ಇತ್ತೀಚೆಗೆ ಆರೋಗ್ಯ ಸಮೀಕ್ಷೆ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ 2) ಪ್ರಕಾರ, ಪ್ರಪಂಚದ ನಂಬರ್ ಒನ್ ಕಿಲ್ಲರ್ ಹೃದಯಾಘಾತ. ಒತ್ತಡದ ಜೀವನ, ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ, ಧೂಮಪಾನ, ಮದ್ಯಪಾನ, ದೈಹಿಕ ಶ್ರಮ ರಹಿತ ಜೀವನ ಹೃದಯಾಘಾತ ಕೊಡುಗೆ ನೀಡುತ್ತಿದ್ದು ಬೋರಲಾಗಿ ಮಲಗುವವರಲ್ಲೂ ಇದರ ಸಂಭವ ಹೆಚ್ಚಿದೆ.  ನಿಯಮಿತವಾಗಿ ದೇಹ ತೂಕದ ತಪಾಸಣೆ, ಕೊಬ್ಬು ರಹಿತ ಪದಾರ್ಥಗಳ ಸೇವನೆ ಹಾಗೂ ಪ್ರತಿದಿನಿತ್ಯ 45 ನಿಮಿಷಗಳ ಕಾಲ ವೇಗದ ನಡಿಗೆ ಮಾಡುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸಬಹುದು.

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು:

ಹೃದಯಾಘಾತದ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಭಿನ್ನವಾಗಿರುತ್ತದೆ. ಮಹಿಳೆಯರಲ್ಲಿ ಮುಟ್ಟು ಕೊನೆಗೊಳ್ಳುವುದಕ್ಕೂ ಮುನ್ನ ಹೃದಯಾಘಾತ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ, ಈ ವರ್ಗದವರು ಧೂಮಪಾನ ಮಾಡುತ್ತಿದ್ದರೆ, ಸಕ್ಕರೆ ಕಾಯಿಲೆ ಹೊಂದಿದ್ದರೆ, ಸುದೀರ್ಘ ಕಾಲ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಅಂತಹವರಿಗೆ ಹೃದಯಾಘಾತ ಉಂಟಾಗುತ್ತದೆ.

 • ಧೂಮಪಾನ ಭಾರೀ ಗಂಡಾಂತರಕಾರಿಯಾಗುತ್ತದೆ.
 • ವಾಕರಿಕೆ ಮತ್ತು ವಾಂತಿ ನಿಲ್ಲದಿರುವಿಕೆ
 • ಕಷ್ಟದಿಂದ ಉಸಿರಾಡುವಿಕೆ ಅಥವಾ ವಿಶೇಷವಾಗಿ ರಾತ್ರಿ ನಿದ್ದೆಯಿಂದ ಎಚ್ಚರವಾಗುವಿಕೆ
 • ಸ್ತನದ ಹಿಂದಿನ ಮೂಳೆಯಲ್ಲಿ ಕಾಣಿಸಿಕೊಳ್ಳುವ ಎದೆ ನೋವು, ಹೆಗಲು ಅಥವಾ ತೋಳು, ಕುತ್ತಿಗೆ ಅಥವಾ ಕೆಳದವಡೆಗೆ ಹಬ್ಬುವಿಕೆ
 • ಕೆಲದವಡೆಯಲ್ಲಿ ನೋವು ಕಾಣಿಸಿಕೊಂಡು ಯಾತನೆ ಮುಂದುವರೆಯುವಿಕೆ
 • ಬೆನ್ನಿನಲ್ಲಿ ನೋವು ಕಾಣಿಸಿಕೊಂಡು ಅದು ಮುಂದುವರೆಯುವಿಕೆ
 • ಊಟದ ನಂತರ ಸಾಮಾನ್ಯ ಕೆಲಸಗಳನ್ನು ಮಾಡುವಾಗ ಎದೆ ಅಥವಾ ಬೆನ್ನಿನಲ್ಲಿ ನೋವು ಉಂಟಾಗುವಿಕೆ.
 • ದಿಢೀರ್ ಅಸ್ವಸ್ಥತೆ, ಸುಸ್ತು, ನಿತ್ರಾಣ, ಆಯಾಸ ಕಂಡು ಬರವಿಕೆ
 • ವೇಗದ ನಾಡಿಮಿಡಿತದೊಂದಿಗೆ ದಿಢೀರ್ ಹೃದಯ ಕಂಪನ
 • ಇದ್ದಕ್ಕಿದ್ದಂತೆ ಪ್ರಜ್ಞಾ ಶೂನ್ಯತೆ
 • ಮನೆ ಕೆಲಸ-ಕಾರ್ಯಗಳನ್ನು ಮಾಡಲು ದೈಹಿಕ ಅಸಾಮಥ್ರ್ಯ.
 • ಇಂಥ ಲಕ್ಷಣಗಳೊಂದಿಗೆ ಯಾರು ಗಂಡಾಂತರಕ್ಕೆ ಸಿಲುಕುತ್ತಾರೆ? ಹೃದಯಾಘಾತದ ಗಂಡಾಂತರಕ್ಕೆ ಒಳಾಗಾಗುವವರು ಎಂದರೆ:
 • ಮುಟ್ಟು ಕೊನೆಗೊಂಡಿರುವವರು
 • ಧೂಮಪಾನ ಮಾಡುವವರು
 • 60 ವರ್ಷಕ್ಕೂ ಮುನ್ನವೇ ಹೃದ್ರೋಗ ಹೊಂದಿರುವ ಕೌಟುಂಬಿಕ ಹಿನ್ನಲೆ ಹೊಂದಿವವರು
 • ಅಧಿಕ ರಕ್ತದೊತ್ತಡವಿರುವವರು (ಚಿಕಿತ್ಸೆ ನೀಡಿಯೂ)
 • ಸಕ್ಕರೆ ಕಾಯಿಲೆ ಇರುವವರು (ಚಕಿತ್ಸೆ ನೀಡಿಯೂ)
 • ಸ್ಥೂಲಕಾಯದವರು, ಬೊಜ್ಜು ಶರೀರದವರು
 • ಅಧಿಕ ಕೊಲೆಸ್ಟರಾಲ್ ಹೊಂದಿರುವವರು (ಚಿಕಿತ್ಸೆ ನೀಡಿಯೂ)
 • ಮಕ್ಕಳಲ್ಲಿ ಹೃದ್ರೋಗ ತಡೆಗಟ್ಟುವಿಕೆ

ಮಾಡಬೇಕಾದುದು:

 • ಮಗುವಿಗೆ ಆರೋಗ್ಯಕರ ಆಹಾರ ಕಡ್ಡಾಯ (ತರಕಾರಿ ಮತ್ತು ಧಾನ್ಯಗಳು)
 • ಶೇ.60ರಷ್ಟು ಸಂಕೀರ್ಣ ಕಾರ್ಬೋಹೈಡ್ರೇಟ್‍ಗಳು
 • ಶೇ.20ರಿಂದ 30ರಷ್ಟು ಪ್ರೊಟೀನ್ ಮತ್ತು ಕೊಬ್ಬು
 • ಓಟ, ಈಜು, ಆಟದಿಂದ ದೈಹಿಕ ಚಟುವಟಿಕೆ
 • ಒಳಾಂಗಣ ಕ್ರೀಡೆಗಳು
 • ಆಹಾರದಲ್ಲಿ ತರಕಾರಿ, ಸಲಾಡ್‍ಗಳ ಸೇರ್ಪಡೆ
 • ಸಕ್ಕರೆ ರಹಿತ ಪಾನೀಯ ಅಥವ ಸ್ಕಿಮ್ ಮಿಲ್ಕ್
 • ತಂಪು ಪಾನೀಯಗಳ ಬದಲಿಗೆ ಸುವಾಸಿತ ಮಿನರಲ್ ವಾಟರ್

ಮಾಡಬಾರದುದು:

 • ಗರ್ಭಧರಿಸಿದಾಗ ಆಲ್ಕೋಹಾಲ್ ಸೇವನೆ
 • 35 ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಾನದಲ್ಲಿ ಗರ್ಭಧಾರಣೆ
 • ಗರ್ಭಿಣೀಯಾಗಿದ್ದಾಗ ವೈದ್ಯರ ಸಲಹೆ ಇಲ್ಲದೆ ಔಷಧಿಗಳ ಸೇವನೆ
 • ಧೂಮಪಾನ
 • ವಿಕಿರಣಕ್ಕೆ ಮೈಯೊಡ್ಡುವಿಕೆ
 • ಅಸಮರ್ಪಕ ಆಹಾರ
 • ಜೀವನ ಶೈಲಿ ಬದಲಾವಣೆ
 • ಟಿವಿ ಮುಂದೆ ಹೆಚ್ಚು ಕಾಲ ಕಳೆಯುವಿಕೆ
 • ಪದೇ ಪದೇ ಆಹಾರ ಅಥವ ತಿಂಡಿ ತಿನ್ನುವಿಕೆ
 • ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸುವಿಕೆ

ಸ್ಥೂಲಕಾಯ ಮತ್ತು ಹೃದ್ರೋಗ:

ಹೃದ್ರೋಗ ಮತ್ತು ಸ್ಥೂಲಕಾಯಕ್ಕೂ ಪರಸ್ಪರ ಬಲವಾದ ನಿಕಟ ಸಂಬಂಧವಿದೆ. ವ್ಯಕ್ತಿ ತುಂಬಾ ಅಧಿಕ ತೂಕವಿದ್ದಷ್ಟೂ ಆತ ಅಥವಾ ಆಕೆಗೆ ಹೃದ್ರೋಗ ವೃದ್ಧಿಯಾಗುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ನಿಮಗೆ ಇತರ ಯಾವುದೇ ಹೃದ್ರೋಗ ಆತಂಕಕಾರಿ ಅಂಶಗಳು ಇಲ್ಲದಿದ್ದರೂ, ನೀವು ತುಂಬಾ ಬೊಜ್ಜು ಶರೀರದವರಾಗಿದ್ದರೆ, ಹೃದಯಾಘಾತ, ರಕ್ತ ಹೆಪ್ಪುಗಟ್ಟಿದ ಹೃದಯ ವೈಫಲ್ಯ, ಹಠಾತ್ ಹೃದಯ ಸ್ತಂಭನ ಸಾವು, ಆಂಜಿನಾ (ಎದೆನೋವು) ಮತ್ತು ಅಸಾಧಾರಣ ಹೃದಯ ಬಡಿತದಂತಹ ಹೃದ್ರೋಗ ಸಂಭವಿಸಬಹುದು.
ಅತಿಯಾದ ತೂಕವಿರುವ ಅಥವಾ ಸ್ಥೂಲಕಾಯ-ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವ ಮಂದಿ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಅಧಿಕ ಮಟ್ಟದ ಟ್ರೈಗ್ಲಿಸೆರೈಡ್ಸ್ (ರಕ್ತ ಕೊಬ್ಬು) ಹಾಗೂ ಹೆಚ್ಚಿನ ಪ್ರಮಾಣದ ಕಡಿಮೆ ಸಾಂದ್ರತೆಯ ಲಿಪೋಪ್ರೋಟಿನ್ (ಎಲ್‍ಡಿಎಲ್-ಲೋ ಡೆನ್ಸಿಟಿ ಲಿಪೋಪ್ರೋಟೀನ್. ಇದು ಕೊಬ್ಬು ರೀತಿಯ ವಸ್ತುವಾಗಿದ್ದು, ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ) ಮತ್ತು ಕಡಿಮೆ ಪ್ರಮಾಣದ ಅಧಿಕ ಸಾಂದ್ರತೆಯ ಲಿಪೋಪ್ರೊಟೀನ್ ಕೊಲೆಸ್ಟ್ರಾಲ್ (ಎಚ್‍ಡಿಎಲ್-ಹೈಡೆನ್ಸಿಟಿ ಲಿಪೊಪ್ರೋಟೀನ್. ಇದು ಒಳ್ಳೆಯ ಕೊಲೆಸ್ಟ್ರಾಲ್) ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬೊಜ್ಜು ರೋಗದವರು ಅಥವ ವಿಪರೀತ ಸ್ಥೂಲಕಾಯದ ಮಂದಿ ಈ ಎಲ್ಲ ಸಮಸ್ಯೆಗಳೊಂದಿಗೆ ಹೃದ್ರೋಗ ಮತ್ತು ಪಾಶ್ರ್ವವಾಯುವಿಗೆ ತುತ್ತಾಗುವ ಗಂಡಾಂತರ ಇರುತ್ತದೆ. ಇದರ ಜತೆ, ಅಧಿಕ ರಕ್ತ ಮಟ್ಟಗಳನ್ನು ಹೊಂದಿರುತ್ತಾರೆ. ರಕ್ತನಾಳಗಳು ಮತ್ತು ಇಡೀ ಶರೀರದಲ್ಲಿ ಉಂಟಾಗುವ ಕೆರಳುವಿಕೆಯಿಂದ ಹೃದಯಾಘಾತದ ಗಂಡಾಂತರ ಇನ್ನಷ್ಟು ಹೆಚ್ಚಾಗಬಹುದು.
ಟೈಪ್ 2 ಡಯಾಬಿಟಿಸ್ ತಾಂತ್ರಿಕವಾಗಿ ಕಾರ್ಡಿಯೋ ವ್ಯಾಸ್ಕುಲರ್ ಕಾಯಿಲೆ (ಹೃದ್ರೋಗವಲ್ಲ) ತಜ್ಞರು ಹೇಳುವಂತೆ ಇದು ಹೃದಯದ ಮೇಲೆ ಅನಿರ್ಬಂಧಿತ ಬ್ಲಡ್ ಶುಗರ್ ನಶಿಸುವ ದುಷ್ಪರಿಣಾಮ ಉಂಟುಮಾಡುತ್ತದೆ. ಅಮೆರಿಕ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಮಧುಮೇಹ ರೋಗಗಳಲ್ಲಿ ಕನಿಷ್ಟ ಶೇ.65 ಜನ ಕೆಲ ರೀತಿಯ ಹೃದ್ರೋಗ ಅಥವ ಪಾಶ್ರ್ವವಾಯುವಿನಿಂದ ಸಾವಿಗೀಡಾಗುತ್ತಾರೆ.
ಎದೆನೋವು ಅಥವಾ ಎದೆ ಅಸ್ವಸ್ಥತೆ:
ಕೆಲವು ಲಕ್ಷಣಗಳು ಎದೆನೋವಿಗಿಂತ ಹೆಚ್ಚು ಎಚ್ಚರಿಕೆಯಾಗಿರುತ್ತದೆ. ಎದೆನೋವು ಹೃದಯ ನೋವಿಗೆ ಸಮ ಎಂಬ ಭಾವನೆ ಅನೇಕ ಜನರಲ್ಲಿದೆ. ಎದೆ ನೋವಿಗೆ ಅನೇಕ ಇತರ ಪರಿಸ್ಥಿತಿಗಳು ಕಾರಣವಾದರೆ, ಹೃದ್ರೋಗ ಸಾಮಾನ್ಯವಾದುದು ಮತ್ತು ಅμÉ್ಟೀ ಅಪಾಯಕಾರಿಯಾದುದು. ಎದೆನೋವಿನ ಲಕ್ಷಣಗಳನ್ನು ಎಂದೂ ನಿರ್ಲಕ್ಷಿಸಬಾರದು. ಇದನ್ನು ಕಡೆಗಣಿಸಿದರೆ ಜೀವಕ್ಕೆ ಸಂಚಕಾರ ಉಂಟಾಗಬಹುದು.
ಎದೆ ನೋವು ಎಂಬುದು ಅನಿಶ್ಚಿತ ಪದ. ಎದೆ, ಕತ್ತು ಅಥವಾ ಮೇಲು ಭಾಗದ ಹೊಟ್ಟೆಯಲ್ಲಿ ಕಂಡುಬರುವ ಯಾವುದೇ ನೋವು, ಒತ್ತಡ, ಹಿಂಡುವಿಕೆ, ಊತ ಅಥವ ಇನ್ಯಾವುದೇ ಅಸ್ವಸ್ಥತೆಯನ್ನು ಎದೆನೋವೆಂದು ಬಳಸಲಾಗುತ್ತದೆ. ಎದೆನೋವಿನೊಂದಿಗೆ ದವಡೆ, ತಲೆ ಅಥವ ಕೈಗಳಲ್ಲಿ ನೋವು ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತದೆ. ಎದೆನೋವು ಕೆಲ ಸೆಕೆಂಡ್‍ನಿಂದ ಹಿಡಿದು ದಿನಗಳು ಅಥವ ವಾರಗಟ್ಟಲೆ ಕಾಣಿಸಿಕೊಳ್ಳಬಹುದು. ಇದು ಆಗಾಗ ಅಥವ ಅಪರೂಪಕ್ಕೆ ಹಾಗು ವಿರಳವಾಗಿ ಇಲ್ಲವೇ ಊಹಿಸಿದಂತೆ ಗೋಚರಿಸಬಹುದು. ಎದೆನೋವಿನ ವಿವರಣೆಯು ಸ್ಪಷ್ಟತೆಯಿಂದ ಕೂಡಿರುವುದಿಲ್ಲ. ಹೃದ್ರೋಗ ಹೊರತುಪಡಿಸಿ ಅನೇಕ ವೈದ್ಯಕೀಯ ಸಮಸ್ಯೆಗಳು ಇದೇ ರೀತಿಯ ಲಕ್ಷಣಗಳನ್ನು ವ್ಯಕ್ತಪಡಿಸುತ್ತವೆ.
ಉಸಿರಾಟ ತೊಂದರೆ
ಹೃದಯ ಅಥವ ಪಲ್ಮನರಿ(ಶ್ವಾಸಕೋಶ) ಸಮಸ್ಯೆಗಳಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ ಉಸಿರಾಟದ ತೊಂದರೆ. ಹೃದಯ ವೈಫಲ್ಯ ಮತ್ತು ಕರೋನರಿ ಆರ್ಟರಿ ಸಮಸ್ಯೆ(ಹೃದಯ ನಾಳಗಳು ಮುಚ್ಚಲ್ಪಡುವಿಕೆ) ಇದ್ದಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹೃದಯ ವೈಫಲ್ಯ (ಹೃದಯ ಪಂಪ್ ಮಾಡುವ ಸಾಮಥ್ರ್ಯ ಕಳೆದುಕೊಳ್ಳುವಿಕೆ) ಹೊಂದಿರುವ ರೋಗಿಗಳಲ್ಲಿ ಉಸಿರಾಟಕ್ಕೆ ಪ್ರಯತ್ನಿಸುತ್ತಿರುವ ಅನುಭವವಾಗುತ್ತದೆ. ಬೆನ್ನ ಮೇಲೆ ಮಲಗಿದ್ದಾಗ ಉಸಿರಾಡಲು ಕಷ್ಟವಾಗತ್ತದೆ. ರಾತ್ರಿ ವೇಳೆ ಉಸಿರುಗಟ್ಟಿದ ಅನುಭವವಾಗಿ ದಿಢೀರನೆ ಎದ್ದುಬಿಡುತ್ತಾರೆ. ಮೇಲುಸಿರು ಬಿಡುವ ಅಥವ ಉಸಿರೆಳೆದುಕೊಳ್ಳುವ ಈ ಸ್ಥಿತಿಯನ್ನು ವೈದ್ಯಕೀಯ ಪರಿಭಾμÉಯಲ್ಲಿ Pಚಿಡಿoxಥಿsmಚಿಟ ಟಿoಛಿಣuಡಿಟಿಚಿಟ ಜಥಿsಠಿಟಿeಚಿ ಎನ್ನುತ್ತಾರೆ.
ವಾಲ್ವುಲರ್ ಹಾರ್ಟ್ ಡಿಸೀಸ್ ಅಥವ ಪೆರಿಕಾರ್ಡಿಯಲ್ ಡಿಸೀಸ್‍ನಂಥ ಇತರ ಹೃದ್ರೋಗ ಸಮಸ್ಯೆಗಳಲ್ಲೂ ಇಂಥ ಲಕ್ಷಣಗಳು ಕಂಡುಬರುತ್ತವೆ. ಕಾರ್ಡಿಯಕ್ ಅರ್ರಿಥ್‍ಮಿಯಾಸ್ (ಹೃದಯದ ವಿದ್ಯುತ್ ಅಡಚಣೆ) ಉಸಿರಾಟದ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಅತ್ಯಂತ ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆಯ ಲಕ್ಷಣವಾಗಿದ್ದು ತಕ್ಷಣ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ಕೊಡಿಸಬೇಕಾಗುತ್ತದೆ.
ಆಯಾಸ, ನಿರುತ್ಸಾಹ ಮತ್ತು ಹಗಲು ನಿದ್ರಿಸುವಿಕೆ
ಆಯಾಸ, ದಣಿವು, ಸುಸ್ತು, ನಿರುತ್ಸಾಹ, ನಿದ್ರಾಲಾಸ್ಯ ಮತ್ತು ಹಗಲು ನಿದ್ರಿಸುವಿಕೆ – ಸಾಮಾನ್ಯ ಲಕ್ಷಣಗಳಾಗಿರುತ್ತದೆ. ದಣಿವು ಮತ್ತು ಜಡತ್ವ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಆ ವ್ಯಕ್ತಿ ತನ್ನ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳದಷ್ಟು ಅಸಮರ್ಥನಾಗುತ್ತಾನೆ. ಇದರೊಂದಿಗೆ ಹಗಲು ನಿದ್ರೆ ಮಾಡುವ ಗೀಳು ಹೆಚ್ಚಾಗಿ ಇದು ಕಾಲಕ್ರಮೇಣ ಬಿಗಡಾಯಿಸುತ್ತದೆ. ದಿಢೀರನೆ ನಿದ್ರೆಗೆ ಜಾರುವುದು, ತೂಕಡಿಸುವುದು ಹೆಚ್ಚಾಗುತ್ತದೆ. ಈ ಸ್ಥಿತಿಯನ್ನು ನ್ಯಾರ್ಕೊಲೆಪ್ಸಿ ಎನ್ನುತ್ತಾರೆ. ಹಗಲು ನಿದ್ರಿಸುವ ಈ ಗೀಳನ್ನು ಸೊಮ್ನೊಲೆನ್ಸ್ ಎಂದು ಕರೆಯಲಾಗುತ್ತದೆ.
ಆಯಾಸ ಮತ್ತು ನಿರುತ್ಸಾಹವು ಹೃದ್ರೋಗದ (ವಿಶೇಷವಾಗಿ ಹೃದಯ ವೈಫಲ್ಯ) ಲಕ್ಷಣವಾಗಿರಬಹುದು. ಇಂಥ ಸಾಮಾನ್ಯ ಮತ್ತು ನಿರ್ದಿಷ್ಟವಲ್ಲದ ಲಕ್ಷಣಗಳು ದೇಹದ ಯಾವುದೇ ಇತರ ಅಂಗದ ದೋಷವೂ ಆಗಿರಬಹುದು. ಅಯಾಸ, ದಣಿವು, ಸುಸ್ತು, ಜಡತ್ವ, ರೋಗ ಮಂಪರು ನಿರುತ್ಸಾಹದೊಂದಿಗೆ ತಲೆಸುತ್ತುವ ಅನುಭವವಾದರೆ ತಕ್ಷಣ ವೈದ್ಯಕೀಯ ತಪಾಸಣೆ ನಡೆಸಿ ನಿಖರವಾದ ಕಾರಣ ಕಂಡುಕೊಳ್ಳಬೇಕು.
ಮೂರ್ಛೆ ಹೋಗುವಿಕೆ / ಪ್ರಜ್ಞೆ ತಪ್ಪುವಿಕೆ:
ದಿಢೀರ್ ಮೂರ್ಛೆ ಹೋಗುವಿಕೆ ಅಥವ ಪ್ರಜ್ಞೆ ತಪ್ಪುವಿಕೆ ಸ್ಥಿತಿಯನ್ನು ಸಿನ್‍ಕೊಪ್ ಎನ್ನುತ್ತಾರೆ. ಇದು ತೀರಾ ಸಾಮಾನ್ಯವಾದ ಸಮಸ್ಯೆಯಾಗಿದ್ದು ಬಹುತೇಕ ಮಂದಿ ತಮ್ಮ ಜೀವಮಾನದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಸ್ಥಿತಿಗೆ ಒಳಪಡುತ್ತಾರೆ. ಇದು ಗಂಭೀರ ಅನಾರೋಗ್ಯ ಸಮಸ್ಯೆ ಎಂದು ತೋರ್ಪಡಿಸುವುದಿಲ್ಲ. ಅದಾಗ್ಯೂ ಕೆಲವೊಮ್ಮೆ ಇದು ಅಪಾಯಕಾರಿ ಅಥವ ಪ್ರಾಣಕ್ಕೆ ಸಂಚಕಾರ ತರುವ ಆತಂಕವಿರುತ್ತದೆ. ಮೂರ್ಛೆ ತಪ್ಪಿದ ಸಂದರ್ಭ ಎದುರಾದರೆ ಅದಕ್ಕೆ ಕಾರಣಗಳನ್ನು ತಿಳಿಯುವುದು ಮುಖ್ಯ.
ಮೂರ್ಛೆ ಹೋಗುವಿಕೆ / ಪ್ರಜ್ಞೆ ಕಳೆದುಕೊಳ್ಳುವಿಕೆ ಎಂದು ಕರೆಯಲ್ಪಡುವ ಸಿನ್‍ಕೊಪ್ ಕಾರಣಗಳನ್ನು ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು. ನ್ಯೂರೊಲಾಜಿಕ್, ಮೆಟಬಾಲಿಕ್, ವ್ಯಾಸೊಮೋಟಾರ್ ಮತ್ತು ಕಾರ್ಡಿಯಕ್. ಈ ಪೈಕಿ ಕಾರ್ಡಿಯಕ್ ಸಿನ್‍ಕೊಪ್ ತುಂಬಾ ಮಾರಕವಾಗಿದ್ದು, ದಿಢೀರ್ ಸಾವಿಗೆ ಎಡೆ ಮಾಡಿಕೊಡುತ್ತದೆ.
ಹೃದಯ ಮತ್ತು ಹೃದಯ ಕಂಪನ:
ಹೃದಯ ಹೃದಯ ಕಂಪನವು, ಹೃದಯ ಬಡಿತದ ಅಸಾಮಾನ್ಯ ಜಾಗೃತಿಯಾಗಿದ್ದು ಇದು ತೀರಾ ಸಾಮಾನ್ಯ ಲಕ್ಷಣವಾಗಿರುತ್ತದೆ. ಅನೇಕ ಮಂದಿ ಕಂಪನವನ್ನು ಹೃದಯ ಬಡಿತದ ಜಿಗಿತಗಳು ಎಂದೋ (ವಿಶೇಷವಾಗಿ ಬಲವಾದ ಬಡಿತದ ನಂತರ ನಿಧಾನವಾಗುವ ಹೃದಯ ಮಿಡಿತ) ಇಲ್ಲವೇ, ಕ್ಷಿಪ್ರ ಅವಧಿಗಳ ಮತ್ತು / ಅಥವ ಅಸಮರ್ಪಕ ಹೃದಯ ಬಡಿತಗಳೆಂದೂ ಬಣ್ಣಿಸುತ್ತಾರೆ. ಅನೇಕ ಜನರಲ್ಲಿ ಕಂಪನವು ಅಸಾಧಾರಣ ಹೃದಯ ಬಡಿತ – ಕಾರ್ಡಿಯಕ್ ಅರ್ರಿಥ್‍ಮಿಯಾಸ್ (ಹೃದಯ ವಿದ್ಯುತ್ ಅಡಚಣೆ) ರೀತಿಯಲ್ಲಿರುತ್ತದೆ.
ಕಾರ್ಡಿಯಕ್ ಅರ್ರಿಥ್‍ಮಿಯಾಸ್ ಅಂದರೆ ಅಸಾಮಾನ್ಯ ಹೃದಯ ಬಡಿತದಲ್ಲಿ ಹಲವಾರು ವಿಧಗಳಿರುತ್ತವೆ. ಈ ಪೈಕಿ ಬಹುತೇಕ ಕಂಪನಕ್ಕೆ ಕಾರಣವಾಗುತ್ತದೆ. ಆದರೆ ಕಂಪನಕ್ಕೆ ತೀರಾ ಸಾಮಾನ್ಯವಾದ ಕಾರಣವೆಂದರೆ, ಪ್ರಿಮೆಚ್ಯುರ್ ಆರ್ಟಿಯಲ್ ಕಾಂಪ್ಲೆಕ್ಸ್(ಪಿಎಸಿ), ಪ್ರಿಮೇಚರ್ ವೆಂಟ್ರಿಕ್ಯುಲರ್ ಕಾಂಪ್ಲೆಕ್ಸ್(ಪಿವಿಸಿ), ಆರ್ಟಿಯಲ್ ಫಿಬ್ರಿಲ್ಯಾಷನ್ ಮತ್ತು ಸುಪ್ರವೆಂಟ್ರಿಕ್ಯುಲರ್ ಟ್ಯಾಚಿ ಕಾರ್ಡಿಯಾ (ಎಸ್‍ವಿಟಿ) ಸಮಸ್ಯೆಗಳು. ದುರಾದೃಷ್ಟವಶಾತ್, ಕೆಲವು ಸಂದರ್ಭಗಳಲ್ಲಿ ಕಂಪನಗಳು ತೀರಾ ಅಪಾಯಕಾರಿಯಾದ ಹಾರ್ಟ್ ಅರ್ರಿಥ್‍ಮಿಯಾಸ್ ಎಂಬ ಅಸಾಧಾರಣ ಹೃದಯ ಬಡಿತ (ವೆಂಟ್ರಿಕ್ಯುಲರ್ ಟ್ಯಾಚಿ ಕಾರ್ಡಿಯಾ ರೀತಿಯ) ಉಂಟು ಮಾಡುತ್ತದೆ. ಇದು ವ್ಯಕ್ತಿಯ ಪ್ರಾಣಕ್ಕೆ ಸಂಚಕಾರವಾಗುತ್ತದೆ.

 

 

 

 

 

 

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

 

Back To Top