ಮಾಗಿಯ ಮಾಸ ಬಂದಿತೆ, ಎಲ್ಲೆಲ್ಲಾ ಚಳಿ ಚಳಿ, ಮೈ ನಡಗುವಂತಹ ಚಳಿ ಚಳಿ ಹೊಸ್ತಿಲ ಹುಣ್ಣಿಮೆ ಮುಂದ ಹೊಸಲಿ ಸಹೀತÀ ನಡಗುತ್ತಂತ ಎಂದು ಹಿರಿಯರು ಹೇಳಿದ್ದು ಸಂಪೂರ್ಣ ಸತ್ಯ. ಡಿಸೆಂಬರ್, ಜನೇವರಿಯಲ್ಲಿ ಮೈ ಕೊರೆಯುವ ಚಳಿ ಈ ಚಳಿಗೆ ಬೆಚ್ಚನೆಯ ಉಡುಪುಗಳು ಅಪ್ಯಾಯಮಾನ, ಚಳಿಗಾದಲ್ಲಿ ಹಲವಾರು ಕಿರಿಕಿರಿ. ಅಡಿಯಿಂದ ಮುಡಿಯವರೆಗೆ ಏನಾದರೂ ತೊಂದರೆ ಇದ್ದದ್ದೆ.
ಆಹಾ…. ಏನ ಚಳಿರೀ ಈ ಸಲ! ಇಂಥ ಚಳಿ ನನ್ನ ಜೀವನದಾಗ ನೋಡಿಲ್ಲಾ….!! ಅಂತ ಜನ ಅಡ ಅಡ ನಡುಗುತ್ತಲೇ ಗಂಟೆ ಎಂಟಾದರೂ ಹಾಸಿಗೆಯಿಂದ ಏಳುವ ಮನಸ್ಸು ಮಾಡದೇ ಮತ್ತೆ ರಗ್ಗನ್ನು ಮೈ ಮೇಲೆ ಎಳೆದುಕೊಂಡು ಮುದುಡಿ ಮಲಗುವುದನ್ನು ನಮ್ಮ ಸುತ್ತ ಮುತ್ತ ಈ ಚಳಿಗಾಲದಲ್ಲಿ ನೋಡಿದ್ದೇವೆ ಚಳಿಗಾಲದ ಇನ್ನೊಂದು ವಿಶೇಷತೆ ಎಂದರೆ ಮಂಜು ಸುರಿಯುವುದು ಮಳೆ ಮೋಡಗಳು ಬಹಳ ಮಳೆ ಸುರಿಸಿ ಸುಸ್ತಾಗಿದೆಯೋ ಎಂಬಂತೆ ಮಂಜು, ಇಬ್ಬನಿ ಸುರಿಸಿ ಮಾಯವಾಗುವ ಆಟ ಪ್ರಾರಂಭವಾಗಿರುತ್ತದೆ. ಇದೆ ಚಳಿಗಾಲ ರೋಗಗಳಿಗೆ ನೀಡುವುದು ಆಮಂತ್ರಣ! ಸೋಂಕಿನಿಂದ ಬರುವ ಕಾಯಿಲೆಗಳು ಚಳಿಗಾಲದಲ್ಲಿ ಕರೆಯದೇ ಬರುವ ಅಥಿsತಿಗಳು!! ಅನೇಕ ಅಲರ್ಜಿಗಳೂ ಆಥ್ರ್ರಟಿಸ್ ಕಾಯಿಲೆಗಳು ಈ ಕಾಲದಲ್ಲಿ ಉಲ್ಬಣಿಸುತ್ತವೆ. ವಯಸ್ಸಾದವರ ಈಗಾಗಲೇ ಬಳಲುತ್ತಿರುವ ಕಾಯಿಲೆಗಳು ಹೆಚ್ಚು ಕ್ರೀಯಾಶೀಲವಾಗಿ ಆ ಹಿರಿಯ ಜೀವಿಗಳು ತುಂಬಾ ನೋವನ್ನನುಭವಿಸುತ್ತಾರೆ.
ಚಳಿಗಾಲದಲ್ಲಿ ಹಸಿವು ಸಾಮಾನ್ಯವಾಗಿ ಹೆಚ್ಚಾಗುತ್ತದೆ ಜನ ಹೆಚ್ಚು ಹೆಚ್ಚು ತಿನ್ನುತ್ತಾರೆ. ಅದರಲ್ಲೂ ಕುರುಕಲು ತಿಂಡಿ, ಖಾರದ ಮಿರ್ಚಿ, ಹಪ್ಪಳ ಸೆಂಡಿಗೆ ತಿನ್ನಲು ಇಷ್ಟ ಪಡುತ್ತಾರೆ. ವೈರಸಗಳೂ ಈ ಕಾಲದಲ್ಲಿಯೇ ಹೆಚ್ಚು ಚುರುಕಾಗುತ್ತವೆ. ದಾಳಿ ಇಡಲು ಹತ್ತೊರೆಯುತ್ತವೆ ಜನರು ಮನೆಯೊಳಗೆ ಬೆಚ್ಚಗಿರಲು ಇಚ್ಚಿಸುತ್ತಾರೆ ದೈಹಿಕ ಕಸರತ್ತು ಕಡಿಮೆಯಾಗುತ್ತದೆ. ಕಷ್ಟ ಪಡೆದ ರೋಗಾಣುಗಳು ವೃದ್ಧಿಯಾಗುತ್ತವೆ.
ಶೀತವಾಯುವಿನಿಂದ ದೇಹದ ಎಣ್ಣೆ ಅಂಶವು ಕಡಿಮೆಯಾಗುತ್ತಾ ಚರ್ಮವು ಒರಟು ಒರಟಾಗುವುದು. ಮುಖದ ಚರ್ಮವು ಒಣಗುವುದು, ಬಿಗಿದಂತಾಗುವುದು ತುಟಿ ಬಿರಿಯುವುದು, ಇಡಿ ದೇಹದ ಚರ್ಮವು ಒಣಗಿ ಬಿರಸಾಗುವುದು, ಪಾದಗಳು ಒಡೆಯುವುದು, ತಲೆಯಲ್ಲಿ ಹೊಟ್ಟು ಹೆಚ್ಚಾಗುವುದು. ಮಳೆಗಾಲದಲ್ಲಿ ನೆಗಡಿ ಶೀತಗಳದೆ ಸಾಮ್ರಾಜ್ಯವಾದರೆ ಚಳಿಗಾದಲ್ಲಿ ಅಸ್ತಮಾದ ಅಬ್ಬರ, ಗಂಟಲು ನೋವಿನ ಗುಡಗು ಹೆಚ್ಚಾಗುತ್ತದೆ. ಇವೆಲ್ಲವೂ ಸರ್ವೇ ಸಾಮಾನ್ಯವಾಗಿ ನಾವು ಚಳಿಗಾಲದಲ್ಲಿ ಅನುಭವಿಸುವ ತೊಂದರೆಗಳು ಇನ್ನು ಚರ್ಮದ ಖಾಯಿಲೆ ಇದ್ದವರಿಗಂತೂ ಚಳಿಗಾಲ ಬಂದರೆ ವ್ಯಾಧಿಯು ಉಲ್ಬಣಗೊಳುತ್ತದೆ.
ಚಳಿಯಲ್ಲಿ ಚರ್ಮದ ಪಾಡು
ಚಳಿಗಾಲದ ಗಾಳಿಯಲ್ಲಿ ತೇವಾಂಶವಿರುವದಿಲ್ಲ. ಇದರ ನೇರ ಪರಿಣಾಮ ಆಗುವುದು ಗಾಳಿಗೆ ಒಡ್ಡಿಕೊಂಡ ದೇಹದ ಭಾಗಗಳ ಮೇಲೆ ಅಂದರೆ ಚರ್ಮದ ಮೇಲೆ ಚಳಿಗಾಲದ ಗಾಳಿಯಿಂದ ಮೈ ಮೃದುತ್ವ ಕಳೆದುಕೊಳ್ಳುವುದು, ಒಡೆಯುವುದು ಸುಕ್ಕಾಗುವುದು, ಉರಿಯುವುದು, ಥಂಡಿಯುಂಟು ಮಾಡುವುದು, ಕೆರೆದುಕೊಳ್ಳಲು ಹಚ್ಚುವುದು ಹಾಗೆ ಮಾಡುವಾಗ ಹಿತವೆನಿಸಿದರೂ ನಂತರ ಬಗಬಗ ಉರಿಯುವುದು. ಬಿಸಿ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಈ ಸಮಸ್ಯಗಳಿಗೆ ವಿದಾಯ ಹೇಳಬಹುದೆಂದು ಜನ ಭಾವಿಸಿದರೂ ಹಾಗೆ ಮಾಡುವುದರಿಂದ, ಸೋಪು ಬಳಸುವುದರಿಂದ ಸಮಸ್ಯಗಳ ಹೆಚ್ಚಳಕ್ಕೆ ಹಾದಿ ಮಾಡಿದಂತಾಗುವುದು.
ಮೈಕೈ ಚರ್ಮ ಹೆಚ್ಚು ಹೊಲಸಾಗದೆ ಇದ್ದಾಗ ತಣ್ಣೀರಿನಲ್ಲಿ ತೊಳೆಯುವುದೆ ವಾಸಿ. ಪದೆ ಪದೆ ಸೋಪು ಹಚ್ಚುವುದರಿಂದ ಚರ್ಮ ಬಿಗಿದಂತಾಗಿ, ಬಿರುಸಾಗಿ ಬೆಳ್ಳ ಬೆಳ್ಳಗೆ ಬುರುಸು ಬಂದಂತಾಗುವುದು. ಚರ್ಮದಲ್ಲಿ ಎಣ್ಣೆಯ ಅಂಶವನ್ನು ಸಾಬೂನು ಹೋಗಲಾಡಿಸುವುದರಿಂದ ಮತ್ತಷ್ಟು ಅಪಾಯ ಅಪ್ಪಿಕೊಳ್ಳುವುದು ತಪ್ಪುವುದಿಲ್ಲ.
ಮಾಯಶ್ಚರಿಜೆಂಮಗೆ ಕ್ರೀಮನ್ನು ಚಳಿಗಾಲದಲ್ಲಿ ಬಳಸುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಈ ವರ್ಷ ಮಾಯದಂತ ಮಳೆಯಾಗಿರುವುದರಿಂದ ಅಷ್ಟೇ ಭೀಕರವಾದ ಚಳಿಯನ್ನು ನಿರೀಕ್ಷಿಸಬಹುದು ಎಂದು ಹವಾಮಾನ ತಜ್ಞರು ಊಹಿಸಿರುವುದರಲ್ಲಿ ತಪ್ಪೇನಿಲ್ಲ ಪ್ರತಿ ಸಲ ಸಾಬೂನಿನಿಂದ ಕೈತೊಳೆದಾಗ ಮಾಯಶ್ಚರಿಜೆಂಮಗೆ ಕ್ರೀಮ ಹಚ್ಚಿ ಕೊಳ್ಳುವುದರಿಂದ ಮೈಕೈ ಒಡೆಯುವುದುನ್ನು ತಡೆಯಬಹುದು ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಮಾಯಶ್ಚಿರಿಜೆಂಮಗೆ ಕ್ರೀಮ ಎಲ್ಲರ ಕೈಗೆ ಎಟುಕದಿರಬಹುದು, ಒಳ್ಳೆಯ ಕೊಬ್ಬರಿ ಎಣ್ಣೆಯನ್ನಾಗಲಿ ಪೇಟ್ರೋಲಿಯಂ ಜಲ್ಲಿಯನ್ನಾಗಲಿ ಹಚ್ಚಿಕೊಳ್ಳುವುದರಿಂದಲೂ ಈ ತೊಂದರೆಗಳಿಂದ ಮುಕ್ತಿ ಪಡೆಯಬಹುದು.
ಚಳಿಗಾಲದಲ್ಲಿ ನೇರಳಾತೀತ ಕಿರಣಗಳು ಹೆಚ್ಚು ಪ್ರಬಲವಾಗಿರುತ್ತವೆ. ಬೀಳುವ ಮಂಜಿನ ಮೇಲೆ ಹೆಚ್ಚು ಪ್ರತಿ ಫÀಲನಕ್ಕೆ ಒಳಗಾಗುವುದರಿಂದ ಚರ್ಮಕ್ಕೆ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಕೇವಲ ಮುಖ ಕೈ ಕಾಲಿನ ಚರ್ಮದ ಮೇಲೆ ಮಾತ್ರ ನಿಗಾವಹಿಸಿ ಸುಮ್ಮನಾಗದಿರಿ. ಚಳಿಗಾಲದಲ್ಲಿ ತುಟಿಯ ಚರ್ಮ ಹೆಚ್ಚು ಗಡಸಾಗುತ್ತದೆ. ಬಿರುಸಾಗಿ ಕೆಲವು ಸಲ ತುಟಿ ಒಡೆಯಲು ಪ್ರಾರಂಭವಾಗುತ್ತದೆ. ನಿವಾರಣೆಗೆ ತುಟಿ ಕಚ್ಚುವುದನ್ನು ನಿಲ್ಲಿಸಬೇಕು. ರಾತ್ರಿ ಮಲಗುವಾಗ ವ್ಯಾಸಲಿನ ಹಚ್ಚಿಕೊಳ್ಳುವುದು ಸೂಕ್ತ.
ಚಳಿಗಾಲದಲ್ಲಿ ಒಣ ಚರ್ಮ ಹೊಂದಿದವರು ಸೋಪು ಬಳಸಿದರೆ ಚರ್ಮ ಬಿಗಿದು ಕೊಳ್ಳುತ್ತದೆ. ಈ ಕಾಲದಲ್ಲಿ ಸ್ನಾನ ಮಾಡುವಾಗ ಮೈಗೆ ಸೋಪು ಹಚ್ಚಿ ಬ್ರಶ್‍ನಿಂದ ಗಟ್ಟಿಯಾಗಿ ಉಜ್ಜಿಕೊಳ್ಳುವುದಾಗಲಿ, ಸ್ನಾನ ಮಾಡಿದ ನಂತರ ಟವಲನಿಂದ ಮೈಯನ್ನು ಒರಟೊರಟಾಗಿ ಒರೆಸಿಕೊಳ್ಳಬಾರದು. ಮುಖಕ್ಕೆ ಅತಿ ಹೆಚ್ಚಾಗಿ ಮೇಕಪ್ ಮಾಡಿಕೊಳ್ಳಬಾರದು. ಕ್ರೀಮ್ ಬಳಕೆಯನ್ನು ನಿಲ್ಲಿಸಬೇಕು. ತೈಲ ಕೊರತೆಯಿರುವ ಚರ್ಮಗಳಲ್ಲಿ ಈ ಕ್ರೀಮಗಳು ಸ್ಚೇದರಂದ್ರಗಳನ್ನು ಮುಚ್ಚಿಹಾಕಿ, ಇರುವ ಅಲ್ಪ ಸ್ವಲ್ಪ ಎಣ್ಣೆ ಅಂಶವೂ ಹೊರಬರಲೂ ಅಡ್ಡಿಯಾಗಿ, ಚರ್ಮ ಮತ್ತಷ್ಟು ಒಣಗಿ ಹೋಗುವ ಹಾಗೆ ಮಾಡುತ್ತವೆ. ಉತ್ತಮ ಗುಣಮಟ್ಟದ ಮಾಯಿಶ್ಚರೈಜರ್ ಅನ್ನು ಊಪಯೋಗಿಸಬೇಕು.
ಚರ್ಮ ಸೌಂದರ್ಯಕ್ಕೆ ಆಹಾರ ಕೂಡಾ ಸಹಕಾರಿಯಾಗುತ್ತದೆ. ಚರ್ಮ ಸೌಂದರ್ಯದ ಸಮಸ್ಯೆ ಇರುವವರು ಸಿಹಿ ಪದಾರ್ಥಗಳನ್ನು, ಹಿರಿದ ಪಲ್ಲೇಗಳು ಹಾಗೂ ಕರಿದ ಪದಾರ್ಥಗಳನ್ನು ಸೇವಿಸಬಾರದು. ಹಸಿ ತರಕಾರಿ ಹಾಗೂ ಹಣ್ಣು ಹಂಪಲಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ಚರ್ಮ ತೇವದಿಂದ ಕೂಡಿರುತ್ತದೆ, ಮೃದುತ್ವ ಉಳಿಯುತ್ತದೆ.
ಎಣ್ಣೆ ಹಚ್ಚಿ ಸ್ನಾನ ಮಾಡುವಾಗ, ಸಾಬೂನು ಬಳಕೆ ಖಂಡಿತ ಬಿಡಿ, ಸಾಬೂನು ತ್ವಚೆಯ ಜಿಡ್ಡಿನಾಂಶವನ್ನು ಕಡಿಮೆ ಮಾಡುವುದರಿಂದ, ಅದರ ಬದಲು ಕಡಲೆ ಹಿಟ್ಟು, ಸ್ವಲ್ಪ ಕಸ್ತೂರಿ, ಅರಿಷಿಣಪುಡಿ ಹಾಗೂ ಹಾಲಿನ ಕೆನೆಯಿಂದ ಮೈಯನ್ನು ಉಜ್ಜುವುದರಿಂದ ಚರ್ಮವು ಸ್ವಚ್ಚವಾಗುವುದು ಮಾತ್ರವಲ್ಲ ಮೈಕಾಂತಿಯು ಹೆಚ್ಚುವುದು.
ಶ್ವಾಸಕೋಶದ ಶತ್ರು
ಚಳಿಗಾಲದಲ್ಲಿ ಅಸ್ತಮಾ ಕೆರಳುತ್ತದೆ. ಅಸ್ತಮಾ ಒಂದು ರೋಗವಲ್ಲ ಅದು ಉಸಿರಾಟದ ಏರುಪೇರು, ಹವಮಾನವನ್ನು ಅವಲಂಬಿಸಿದ ಸಮಸ್ಯೆ. ಶ್ವಾಸಕೋಶಗಳು ಉದ್ದೀಪನಕಾರಿಗಳಿಗೆ ಅತಿಯಾಗಿ ಸ್ಪಂದಿಸಿ ಅಲರ್ಜಿ ಉಂಟಾಗುತ್ತದೆ. ಅಸ್ತಮಾವನ್ನು ಪ್ರಚೋದಿಸುವ ವಸ್ತುಗಳ ಪೈಕಿ ಧೂಳು, ಪರಾಗ, ಸಾಕುಪ್ರಾಣಿಗಳ ಕೂದಲು ವಾಸನಾದ್ರವ್ಯ, ಕೀಟನಾಶಕ, ಗೋಡೆಗಳಿಗೆ ಬಳಿದ ಬಣ್ಣ, ವಾರ್ನಿಸ್, ಒಗ್ಗರಣೆಯ ಘಾಟುವಾಸನೆ…. ಒಂದೇ ಮಾತಿನಲ್ಲಿ ಹೇಳುವುದಾದರೆ `Any thing & everything under the sun including the sun can cause allergy` ಎಂಬ ವೈದ್ಯ ವಿಜ್ಞಾನಿಗಳ ಮಾತು ಸರ್ವಕಾಲಿಕ ಸತ್ಯ.
ಮೂಗಿನಲ್ಲಿ ಗುಳು ಗುಳು ಆದಂತಾಗಿ, ಸೀನುಗಳು ಸುರಿಮಳೆಯಾಗುವುದು ಮೂಗಿನಲ್ಲಿ ನೀರು ದಳದಳ ಇಳಿಯುವುದು, ಕಣ್ಣು, ಮುಖದಲ್ಲಿ ನವೆಯ ನರ್ತನ ಶ್ವಾಸಕೋಶದಲ್ಲಿ ಪಿಯಾನೂ ನಾದ, ಗಂಟಲದಲ್ಲಿ ಕೆರೆತ, ಬಿಟ್ಟೂ ಬಿಡದ ಕೆಮ್ಮು, ದಮ್ಮು ಎದೆಯಲ್ಲಿ ಬಿಗಿತ ಹೆದರಿಕೆ ಎದೆ ಬಡಿತ ಹೆಚ್ಚಾಗಿ ಆತಂಕ ಅಪ್ಪಿಕೊಳ್ಳುವುದು, ಬೆವರು ಬಸಿಯುವುದು ನಿತ್ರಾಣದ ಅನುಭವವಾಗುವುದು ರಾತ್ರಿ ಮತ್ತು ನಸುಕಿನಲ್ಲಿ ಇದರ ಉಪಟಳ ಜಾಸ್ತಿ.
ಇದರಿಂದ ಮುಕ್ತಿ ಪಡೆಯಲು ಔಷದ ಚಿಕಿತ್ಸೆಯೊಂದೇ ಮಾಯಾದಂಡ ಖಂಡಿತವಾಗಿಯೂ ಅಲ್ಲ. ವೈದ್ಯರ ಪರೀಕ್ಷೆಯಿಂದ ಖಚಿತಗೊಂಡ ಒಗ್ಗದಿರುವಿಕೆ ವಸ್ತುಗಳಿಂದ ದೂರವಾಗಿರುವುದು ಉತ್ತಮ ಮಾರ್ಗ. ಇದರ ಜೊತೆಗೆ ತಜ್ಞ ವೈದ್ಯರ ಸಲಹೆಯಂತೆ ನಡೆಯುವುದು ಸೂಕ್ತ. ಯೋಗಾಸನ ದೀರ್ಘ ಉಸಿರಾಟದೊಂದಿಗೆ ವೇಗದ ನಡಿಗೆ ಉಸಿರಾಟದ ವ್ಯಾಯಾಮುಗಳನ್ನು ಕ್ರಮಬದ್ದವಾಗಿ ಮಾಡುವುದರಿಂದ ಅಸ್ತಮಾಕ್ಕೆ ಅಂಕಿತ ಹಾಕಬಹುದಾಗಿದೆ.
ಚಿಣ್ಣರಿಗೆ ಕಿರಿಕಿರಿ ಕೊಡುಗೆ (ಉಡುಗುರೆ):
ನ್ಯೂಮೋನಿಯಾ ಚಳಿಗಾಲದ ಆಪ್ತಮಿತ್ರ. ಎಲ್ಲ ಆಸ್ಪತ್ರೆಗಳಲ್ಲಿ ಚಳಿಗಾಲವನ್ನು ಶಪಿಸುತ್ತ ಪಾಲಕರು ಚಿಕ್ಕ ಚಿಕ್ಕ ಮಕ್ಕಳನ್ನು ತೋರಿಸಲು ಸಾಲಾಗಿ ಕೂತ ದೃಶ್ಯ ಸಾಮಾನ್ಯ. ವೈರಸ್ ಉಂಟುಮಾಡುವ ಶೀತ, ಸೀನು, ಕೆಮ್ಮು, ಜ್ವರ, ಮೈ-ಕೈ ನೋವು ಎಲ್ಲ ವಯೋಮಾನದವರನ್ನು ಕಾಡುತ್ತವಾದರೂ, ಈ ಕಾಲದಲ್ಲಿ ಮಕ್ಕಳನ್ನು ತುಂಬಾ ಭಾದಿಸುತ್ತವೆ. ಇವು ಮೃಣಾಂತಿಕವಲ್ಲವಾದರೂ, ಕಿರಿಕಿರಿ ಹೆಚ್ಚು! ಗಂಟಲಿನ ಸೋಂಕು ಇನ್ನೊಂದು ಸಾಮಾನ್ಯಕಾಯಿಲೆ. ಇದು ಸಾಂಕ್ರಾಮಿಕ ಚಳಿಗಾಲದಲ್ಲಿ ಎಲ್ಲರೂ ಮನೆಯಲ್ಲಿಯೇ ಬೆಚ್ಚಗೆ ಇರಲು ಬಯಸುತ್ತಾರರಾದ್ದರಿಂದ, ಮನೆಯಲ್ಲಿ ಒಬ್ಬರಿಗೆ ಬಂದಿರಬಹುದಾದ ಶೀತ, ಕೆಮ್ಮು ಮನೆಯ ಇತರ ಸದಸ್ಯರಿಗೂ ಹರಡುತ್ತವೆ. ಈ ತೊಂದರೆಗಳೆಲ್ಲ ಸಾಮಾನ್ಯವಾಗಿ ಆ್ಯಂಟಿನಯು ಜಿಕ್‍ಗಳಿಗೆ ಬಗ್ಗುವುದಿಲ್ಲ.
ಅಬ್ಬರಿಸುವ ಅತಿಸಾರ
ಅತಿಸಾರ ಚಳಿಗಾಲದಲ್ಲಿ ಸಾಮಾನ್ಯವಾಗಿ ಈ ಕಾಲದಲ್ಲಿ ತರಕಾರಿ ವಿಫಲವಾಗಿ ದೊರೆಯುತ್ತವೆ. ಮಳೆಯ ನೀರು ಸೂರ್ಯನ ಶಾಖಕ್ಕೆ ಆವಿಯಾಗುತ್ತದೆ ನಿಂತು ಮಲೆತಿರುತ್ತದೆ ಆ ನೀರಿನಲ್ಲಿಯೇ ತರಕಾರಿ ಮಾರುವವರು ಅವನ್ನು ತೊಳೆಯುತ್ತಾರೆ. ಪರಿಣಾಮ ಸೊಪ್ಪು ಸಜೆಗಳು ಸ್ವಚ್ಚವಾಗುವದಿರಲಿ ಆ ಮಲೆತ ನೀರಿನಲ್ಲಿಯ ರೋಗಾಣುಗಳು ಸೊಪ್ಪಿಗೆ ಮೆತ್ತಿಕೊಳ್ಳುತ್ತವೆ. ಹೆಚ್ಚಿನವರು ಚಳಿಯಸಲುವಾಗಿ ಅವುಗಳನ್ನು ಚನ್ನಾಗಿ ತೊಳೆಯದೇ ಉಪಯೋಗಿಸುತ್ತಾರೆ. ಪರಿಣಾಮವಾಗಿ ಅತಿಸಾರ, ವಾಂತಿ, ಉದರಶೂಲೆ ಬಂದು ಅಪ್ಪಿಕೊಳ್ಳುತ್ತವೆ.
ವಿಂಟರ ಡಿಪ್ರೆಷನ್:
ಚಳಿಗಾಲದ ಇನ್ನೊಂದು ಪ್ರಮುಖ ಕಾಯಿಲೆ ಎಂದರೆ ವಿಂಟರ ಡಿಪ್ರೆಷನ್ ಇದೊಂದು ಚಳಿಯ ಒತ್ತಡದ ಕಾಯಿಲೆ. ಇದು ಹೆಣ್ಣು ಮಕ್ಕಳಲ್ಲಿ ಹೆಚ್ಚು. ಇದರ ಮುಖ್ಯ ಲಕ್ಷಣಗಳೆಂದರೆ, ತೀವ್ರ ಬೆಳಕಿನ ಕಿರಿಕಿರಿ, ಮೂಡ್ ಇಲ್ಲದ್ದಿರುವುದು, ನಿಶ್ಶಕ್ತಿ, ಸ್ಟ್ರಸ್, ಹೆಚ್ಚಿದ ನಿದ್ದೆ, ಬೆಳಿಗ್ಗೆ ಬೇಗ ಏಳುವ ಮನಸಿಲ್ಲದಿರುವುದು ಮುಂತಾದವುಗಳು. ಇದು ಉಳಿದ ಬೇರೆ ತರಹದ ಡಿಪ್ರಶನ್ಗಳಿಗಿಂತ ಭಿನ್ನ. ಈ ಲಕ್ಷಣಗಳು ಋತು ಬದಲಾಗುತ್ತಿದ್ದಂತೆಯೆ ಹೆಚ್ಚಿನವರಲ್ಲಿ ಕಡಿಮೆ ಆಗುತ್ತದೆ. ಕೆಲವೊಬ್ಬರಲ್ಲಿ ಈ ಕಾಯಿಲೆ ತೀವ್ರಗೊಂಡಾಗ ಅವರಿಗೆ ಆ್ಯಂಟಿ ಡಿಪ್ರೆಸ್ಸೆಂಟ್ ಮೆಡಿಕೇಶನ್ ಬೇಕಾಗುತ್ತದೆ.
ಹೃದಯಾಘಾತ:
ಹೆಚ್ಚಿನ ಹೃದಯಾಘಾತಗಳು ಚಳಿಗಾಲದಲ್ಲಿ ಅದೂ ನಸುಕಿನಲ್ಲಿ ಆಗುವುದು ಚಳಿಗಾಲದ ದೊಡ್ಡ ತೊಂದರೆ.
ಚಳಿಗಾಲದಲ್ಲಿ ಮಧು ಮೇಹವೂ ಉಲ್ಬಣಗೊಳ್ಳುತ್ತದೆ. ಪೈಯಾರಿಯಾದಂತಹ ಹಲ್ಲು, ವಸಡುಗಳ ತೊಂದರೆಗಳೂ ಬಾಯಿ ಹಣ್ಣುಗಳೂ ಈ ಕಾಲದಲ್ಲಿ ಜಾಗೃತವಾಗುತ್ತವೆ. ಸಿಗರೇಟ ಸೇವನೆ ಈ ಕಾಲದಲ್ಲಿ ವಿಪರೀತವಾಗುತ್ತದೆ. ಇದು ಕೂಡಾ ಅಸ್ತಮಾ ಕಾಯಿಲೆಯನ್ನು ಉಲ್ಬಣಿಸುತ್ತದೆ. ದಿನಕ್ಕೆರಡು ಬಾರಿ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಈ ತೊಂದರೆಗಳನ್ನು ತಡೆಯಬಹುದು. ಅದಷ್ಟು ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಅಪೇಕ್ಷಣೀಯ. ಇದರಿಂದ ಡಿ ಅನ್ನಾಂಗ ದೊರೆತು ಈ ತೊಂದರೆಗಳು ಹತೋಟಿಗೆ ಬರುತ್ತವೆ.
ಚಿಟ್ಟು ಹಿಡಿಸುವ ತಲೆಹೊಟ್ಟು
ಚಳಿಗಾಲದಲ್ಲಿ ತಲೆಗೂದಲು ಒರಟು ಒರಟಾಗಿ ಸೀಳಿದಂತೆ ಕಾಣುತ್ತವೆ. ಹೊಳಪು ಮರೆಯಾಗುತ್ತದೆ ತಲೆಯಲ್ಲಿ ಹೊಟ್ಟು ಹೆಚ್ಚಾಗುತ್ತದೆ. ಬಾಚಿದಾಗಲೆಲ್ಲ ಬಿಳಿಹೊಟ್ಟು ತವಡಿನಂತೆ ಕೂದಲಿಗೆ ಮೆತ್ತಿಕೊಳ್ಳುವುದು ಸೌಂದರ್ಯಕ್ಕೆ ಭಂಗ ತರುವುದು ಕೂದಲು ಉದುರುªವು. ಆಗ ಚಿಂತೆ ಗಾಢವಾಗಿ ಅಪ್ಪಿಕೊಳ್ಳುವುದು ಚಳಿಗಾಲದಲ್ಲಿ ತಲೆಗೂದಲನ್ನು ರಕ್ಷಿಸುವುದು ಹಾಗೂ ಅದರ ಪೋಷಣೆ ಮಾಡುವುದು ಅತೀ ಮುಖ್ಯ.
ಈ ತೊಂದರೆಗಳಿಗೆ ವಿದಾಯ ಹೇಳಲು ವಾರಕ್ಕೆರಡು ಸಲ ಒಳ್ಳೆ ಎಣ್ಣೆಯನ್ನು ತಲೆ ಹಾಗೂ ಕೂದಲಿಗೆ ಹಚ್ಚಿ ಮಾಲಿಷ್ ಮಾಡಿಕೊಂಡು ಸ್ನಾನ ಮಾಡುವುದು ಒಳ್ಳೆಯದು ಜಾಹಿರಾತಿನ ಮೋಡಿಗೆ ಕಳಪೆ ದರ್ಜೆ ಶಾಂಪೂ ಹಚ್ಚಿಕೊಂಡು ನೆಮ್ಮದಿ ಕಳೆದುಕೊಳ್ಳಬೇಡಿ ಇವುಗಳಿಂದ ಮುಕ್ತರಾಗಿರಲು ಮನೆಯಲ್ಲಿಯೇ ಅನೇಕ ಮನೆ ಮದ್ದುಗಳನ್ನು ತಯಾರಿಸಿ ತಲೆಗೆ ಕೂದಲಿಗೆ ಬುಡಕ್ಕೆ ತಿಕ್ಕಿಅರ್ಧ ಗಂಟೆ ಬಿಟ್ಟು ಶೀಗೆಪುಡಿ ಅಥವಾ ಕಡಲೆ ಹಿಟ್ಟು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳದುಕೊಳ್ಳಬೇಕು ಅತಿ ಬಿಸಿ ನೀರಿನಿಂದ ತಲೆ ಸ್ನಾನ ಮಾಡಬಾರದು ಇದು ಕೂದಲು ಉದುರುವುದಲ್ಲಿ ಸಹಕರಿಸುವುದಲ್ಲದೆ ರಕ್ತದ ಏರೊತ್ತಡ ಇದ್ದವರಿಗೆ ಅಪಾಯಗಳಿಗೆ ಆಹ್ವಾನ ನೀಡುವುದು.
ಪದರು ಪದರು ಸೀಳುವ ಪಾದ
ಚಳಿಗಾಲದಲ್ಲಿ ಪಾದ ಬಿರುಸಾಗಿ ಪದರು ಪದರು ಬಿಟ್ಟು ಕುಂಚಗಳು ಎದ್ದು ಒಡೆಯುವುದು, ಬಿರುಕು ಬಿಟ್ಟು ಉರುಪು ಹೆಚ್ಚಾಗಿ ಒಮ್ಮೊಮ್ಮೆ ರಕ್ತ ಒಸರುವುದುಂಟು. ಈ ತೊಂದರೆ ತಡೆಯುಲು ಅನೇಕ ಮಲಾಮುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಪೇಟ್ರೋಲಿಯಂ ಜೆಲ್ಲಿ, ವ್ಯಾಸಲಿಯನ್ ರಾತ್ರಿ ಹಚ್ಚಿ ಬೆಳ್ಳಿಗೆ ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಪಾದಗಳು ಅತಿಯಾಗಿ ಬಿರುಕು ಬಿಡುವವರು ಕ್ಯಾನವಾಸ ಶ್ಯೂ ಗಳನ್ನು ಬಳಸುವುದು ಸೂಕ್ತ
ಗೋಳಾಡಿಸುವ ಗಂಟಲು ಸೋವು
ಚಳಿಗಾಲಕ್ಕೂ ಗಂಟಲು ನೋವಿಗೂ ನಿಕಟ ಸಂಬಂಧ ಉಂಟು ಸಗಣಿಗೆ ಉಗುಳಿದರೆ ಗಂಟಲು ನೋವು ಬರುತ್ತದೆ. ಆ ಮೇಲೆ ಬೆಂಕಿಗೆ ಉಗುಳಿದರೆ ಅದು ವಾಸಿಯಾಗುತ್ತದೆ ಎಂಬ ಅವೈಜ್ಞಾನಿಕ ನಂಬಿಕೆ ಗ್ರಾಮೀಣ ಪ್ರದೇಶ ಬೇರು ಬಿಟ್ಟಿದೆ. ವೈರಸ್ ಮತ್ತು ಬ್ಯಾಕ್ಟಿರಿಯಾಗಳ ದಾಳಿಗಳ ಪರಿಣಾಮದಿಂದ ಟಾನ್ಸಿಸ್ ಉರಿತ ಉಂಟಾಗಿ ಗಂಟಲಲ್ಲಿ ವಿಪರೀತ ನೋವು ಮತ್ತು ಬ್ಯಾಕ್ಟೀರಿಯಾಗಳ ದಾಳಿಗಳಿಗೆ ತೊಂದರೆಯಾಗುವುದು. ಒಮ್ಮೊಮ್ಮೆ ರೋಗ ಉಲ್ಬಣಗೊಂಡಾಗ ಉಸಿರಾಟಕ್ಕೂ ಅಡ್ಡಿಯಾಗುವುದು. ಟಾನ್ಸಿಸ್ ವಿಪರೀತ ದೊಡ್ಡದಾದಾಗ ಈ ಸಮಸ್ಯೆ ಸರ್ವೇ ಸಾಮಾನ್ಯ. ಆಗ ಶಸ್ತ್ರ ಚಿಕಿತ್ಸೆ ಬೇಕೋ ಬೇಡವೋ ಎಂಬುದನ್ನು ವೈದ್ಯರಿಗೆ ಬಿಡುವುದು ವಾಸಿ.
ಬೂದಿ ಹಚ್ಚಿ ಗಂಟಲು ಹೊರಭಾಗ ತಿಕ್ಕಿಸುವುದು, ಕಟಗರೊಟ್ಟಿ, ಬೆಳ್ಳೊಳ್ಳಿ ಬ್ಯಾಳಿ ತಿನ್ನುವುದರಿಂದ ಟಾನ್ಸಿಸ್(ಗಂಟಲು ಚುಟಗಿ/ಮೆಟ್ರ) ನಿವಾರಿಸಬಹುದೆಂಬ ನಂಬಿಕೆ ಜನರಲ್ಲಿದೆ ಇಂತ ನಂಬಿಕೆಗಳ ಸುತ್ತ ಗಸ್ತು ಹೊಡೆದು ಅಪಾಯಗಳಿಗೆ ಆಹ್ವಾನ ನೀಡುವುದು ಸರಿಯಲ್ಲ. ಸ್ಟ್ರಪ್ಟ್ರೋಕಾಕಸ ಸೋಂಕಿನಿಂದ ಬರುವ ಗಂಟಲು ನೋವು ಅಪಾಯಕಾರಿ. ಇದನ್ನು ಅಲಕ್ಷಿಸಿದಲ್ಲಿ ಜೀವನ ಪರ್ಯಂತ ಗೋಳಾಟ ತಪ್ಪಿದ್ದಲ್ಲ. ಇದು ಕೀಲುಗಳನ್ನು ನೆಕ್ಕಿ ಹೃದಯವನ್ನು ಕಚ್ಚಿ ಹೃದ್ರೋಗಗಳಿಗೆ ಹಾದಿ ಮಾಡುವುದು. ಕಾರಣ ವೈದ್ಯರ ಸಲಹೆ ಮೇರೆಗೆ ಸಕಾಲದಲ್ಲಿ ಸಂಪೂರ್ಣ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು.
ಚಳಿಗೆ ಚಿಗುರುವ ಇಸಬು
ಚಳಿಗಾಲದಲ್ಲಿ ಸಪ್ತವಾಗಿದ್ದ ಚರ್ಮರೋಗಗಳು ಚಿಗುರುವವು ಅವುಗಳಲ್ಲಿ ಇಸಬು (Eczema) ಪ್ರಮುಖವಾದದ್ದು ಇದರಲ್ಲಿ ಎರಡು ಪ್ರಕಾರಗಳಿವೆ ಒಣ ಇಸಬು (Dry Eczema)) ಜಿನಿ ಜಿನಿ ನೀರಾಡುವ ಇಸಬು (Wet Eczema) ವಿಪರೀತ ತಿಂಡಿ ಇದ್ದೇ ಇರುತ್ತದೆ ಹೀಗಾಗಿ ತೊಂದರೆ ಗೀಡಾದವರು ಹುಚ್ಚು ಹಿಡಿದವರಂತೆ ಪರ ಪರ ಕೆರೆಯುತ್ತಿರುತ್ತಾರೆ. ಆಗ ಹಿತವೆನಿಸಿದರೂ ನಂತರ ನೋವನ್ನು ಉರಿತದ ಉಡುಗೊರೆಯನ್ನು ನೀಡುವುದು ಹೀಗಾಗಿ ತೊಂದರೆಗೊಳಗಾದವರು ನೆಮ್ಮದಿಯಿಂದ ದೂರವಾಗುವವರು ಅಷ್ಟೇ ಅಲ್ಲ ಈ ಪ್ರಕ್ರಿಯೆ ರೋಗದ ತ್ವರಿತ ಹರಡುಕುವಿಕೆಗೆ ನೆರವಾಗುವುದು.
ಹುಣ್ಣಿಮೆ ಬಂದಾಗ ಜಿಗಿಯುವುದು ಅಮವಾಸಿ ಬಂದಾಗ ಅಡಗುವುದು ಎಂಬ ನಂಬಿಕೆ ನಮ್ಮ ಜನರಲ್ಲಿದೆ ಇದು ಶುದ್ದ ಸುಳ್ಳು ಆದರೆ ಚಳಿಗಾಲದಲ್ಲಿ ಮಾತ್ರ ಉಲ್ಭಣಗೊಂಡು ಹಿಂಸೆಯನ್ನು ನೀಡಿ ಕಸಿವಿಸಿ ಉಂಡುಮಾಡುವುದು ಸತ್ಯ ಕಡಲೆ ಹಿಟ್ಟಿನಿಂದ ಮೈ ತೊಳೆಯುವುದು ಒಗ್ಗದಿರುವಿಕೆ ಆಹಾರ ವರ್ಜಿಸುವುದು ವೈದ್ಯರ ಸಲಹೆ ಮೇರೆಗೆ ಉಪಚಾರ ಪಡೆಯುವುದು ಈ ರೋಗ ನಿವಾರಿಸಲು ಇರುವ ಅತ್ಯತ್ತಮ ಅಸ್ತ್ರಗಳು
ದೇಹದೊಳತಿಗೆ ಎಲ್ಲ ಕಾಲಗಳೂ, ಎಲ್ಲ ಋತುಗಳೂ ಅಷ್ಟೇ ಅವಶ್ಯಕ. ಮಾನವನು ಅವುಗಳ ತೀವ್ರತೆಯನ್ನು ತಡೆದುಕೊಳ್ಳುವುದಿಲ್ಲ ಆದ್ದರಿಂದ ಆಯಾ ಋತುಮಾನಕ್ಕೆ ತಕ್ಕ ಆಹಾರ, ವೇಷಭೂಷಣ, ಜೀವಕ್ರಮವನ್ನು ಅಳವಡಿಸಿಕೊಂಡರೆ, ಬರಬಹುದಾದ ರೋಗಗಳನ್ನು ನಿಯಂತ್ರಿಸಬಹುದಾದ ಅಥವಾ ಇರುವ ರೋಗಗಳನ್ನು ಉಲ್ಬಣವಾಗದಂತೆ ಜಾಗ್ರತೆ ವಹಿಸಬಹುದು. ಇಲ್ಲದಿದ್ದರೆ ತಪ್ಪಿದಲ್ಲ ಚಳಿಯ ನಡುಕದೊಂದಿಗೆ ಕಾಯಿಲೆಗಳ ಗಡುಗು!
ಚಳಿಗಾದಲ್ಲಿ ಚರ್ಮದಲ್ಲಿ ಎಣ್ಣೆ ಅಂಶ ಕಡಿಮೆಯಾಗುವುದೆಂದು ಅದನ್ನು ಬರಿಸಲು ಕರಿದ ಪಧಾರ್ಥಗಳನ್ನು ತಿನ್ನುವ ಎಣ್ಣೆ, ಬೆಣ್ಣೆ, ತುಪ್ಪ ಹೇರಳವಾಗಿ ಸೇವಿಸುವುದು ಸರಿಯಲ್ಲ ಇದು ಕೊಬ್ಬು ಶೇಖರಣೆಗೆ ಹಾದಿ ಮಾಡಿ ಮೈತೂಕ ಹೆಚ್ಚಳ, ರಕ್ತದ ಏರೊತ್ತಡಗಳನ್ನು ಅದರಿಂದ ಸ್ವಾಗತಿಸಬಹುದು ಕಾರಣ ತಪ್ಪು ಗೃಹಿಕೆಗಳಿಗೆ ವಿದಾಯ ಹೇಳಿ, ವೈಜ್ಞಾನಿಕ ತಿಳುವಳಿಕೆ ಬೆಳೆಸಿಕೊಂಡು, ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿ ಆಹಾರ ವಿಹಾರದಲ್ಲೂ ನಾವು ಸೂಕ್ತ ಬದಲಾವಣೆ ಮಾಡಿಕೊಂಡು ನಿಯಮಿತ ವ್ಯಾಯಾಮ ಮಾಡಿ ಸೂಕ್ತ ಸೌಂದರ್ಯ ವರ್ಧಕ ಬಳಸಿಕೊಂಡರೆ ಚಳಿಗಾಲದಲ್ಲೂ ಆರೋಗ್ಯವನ್ನು, ಮೈಕಾಂತಿಯನ್ನೂ ಕಾಪಾಡಿಕೊಳ್ಳಬಹುದು.