ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವುದು ಹೇಗೆ?

ಕೊರೊನಾ ವೈರಸ್ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವುದು ಹೇಗೆ? ದೇಶವ್ಯಾಪಿ ಜನರಲ್ಲಿ ಪ್ರಸ್ತುತ ಆತಂಕಕ್ಕೆ ಒಳಪಡಿಸಿರುವಂತರ ರೋಗವೆಂದರೆ ಅದು “ಕೊರೊನಾ ವೈರಸ್”. ಎಲ್ಲೆಡೆ ಇದರ ಬಗ್ಗೆ ಮಾಹಿತಿಯ ಮಹಾಪೂರವೇ ಹರಿಯುತ್ತಿದೆ.
ಕೊರೊನಾ ವೈರಸ್ ಎಂದರೇನು?
ಕೊರೊನಾ ವೈರಸ್ ಒಂದು ವೈರಸ್ ನ ಸಮೂಹ. ಇದರ ಮೇಲಿನ ಆಕಾರ ‌ಕ್ರೌನ್ ಅಥವಾ ಕಿರೀಟದ ಆಕೃತಿಯಿಂದಾಗಿ ಕೊರೊನಾ ವೈರಸ್ ಎಂಬ ಹೆಸರಿದೆ. ಇದು ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಸೋಂಕನ್ನು ಉತ್ಪತ್ತಿಮಾಡುತ್ತದೆ. ಸಾಮಾನ್ಯ ತೊಂದರೆಗಳಾದ ಶೀತ, ನೆಗಡಿ, ಕೆಮ್ಮು, ಗಂಟಲು ನೋವಿನಿಂದ ಹಿಡಿದು ನಿಮೋನಿಯದಂತಹ ಲಕ್ಷಣಗಳನ್ನು ಕೊರೊನ ವೈರಸ್ ಉತ್ಪತ್ತಿಮಾಡಬಹುದು.

ಸೋಂಕಿನ ಪ್ರಾರಂಭ

ಪ್ರಾಣಿಗಳಿಗೆ ಸೋಂಕು ತಗುಲಿ ಅದರಿಂದ ಮನುಷ್ಯರಿಗೆ ಹರಡುತ್ತಿದೆ ಎನ್ನಲಾಗಿದೆ. ಚೀನಾದ ವುಹಾನ್ ನಗರದ ಸೀ ಫುಡ್ ಮಾರುಕಟ್ಟೆಯಲ್ಲಿ ವ್ಯಾಪಾರವಾಗುವ ಸಜೀವ ಪ್ರಾಣಿಗಳಿಗೆ ಸೋಂಕು ತಗುಲಿ ಮನುಷ್ಯರಿಗೆ ಆ ಮೂಲಕ ಈ ರೋಗ ಬಂದಿರುವುದಾಗಿ ಹೇಳಲಾಗುತ್ತಿದೆ.
ಸೋಂಕು ಹರಡುವ ವಿಧಾನ?
ಸೋಂಕಿಗೆ ಒಳಗಾದ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ವೈರಾಣು ಗಾಳಿಯಲ್ಲಿ ಸೇರಿ ಮತ್ತೆ ಆ ಗಾಳಿಯನ್ನು ಉಸಿರಿನ ಮುಂಖಾತರ ಇನ್ನೊಬ್ಬರ ದೇಹ ಸೇರುತ್ತದೆ.
• ವೈರಾಣುವಿನಿಂದ ಕಲುಷಿತಗೊಂಡ ವಸ್ತುಗಳನ್ನು ಮುಟ್ಟುವುದರಿಂದ
• ರೋಗಿಯ ಸಮೀಪ ಅಥವಾ ಆತ್ಮೀಯವಾಗಿ ಇರುವುದರಿಂದ.

ರೋಗದ ಲಕ್ಷಣಗಳು

• ರೋಗದ ಪ್ರಾರಂಭದಲ್ಲಿ ಸಾಮಾನ್ಯ ಲಕ್ಷಣಗಳಾದ್ ಶೀತ, ನೆಗಡಿ, ಕೆಮ್ಮು, ತಲೆನೋವು, ಗಂಟಲು ಕೆರೆತ, ಜ್ವರ, ಮೈಕೈನೋವು ಪ್ರಾರಂಭವಾಗುತ್ತದೆ.
• ಜ್ವರವು ಕೆಲವೊಮ್ಮೆ 104 ಡಿಗ್ರಿಯವರೆಗೂ ತಾಪಮಾನವಿರುತ್ತದೆ.
• ಕೆಲವೊಮ್ಮೆ ಬೇಧಿ, ಮೂತ್ರಪಿಂಡ ವೈಫಲ್ಯ
ಯಾರಿಗೆ ರೋಗದ ಈ ಸೋಂಕು ಬರಬಹುದು?
• ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ವ್ಯಕ್ತಿಗಳಾದ, ಸಣ್ಣಮಕ್ಕಳು, ವಯಸ್ಸಾದವರಿಗೆ, ದೇಹದ ಬಲ ಕಡಿಮೆ ಇದ್ದವರಿಗೆ, ನಿಮೋನಿಯ, ಬ್ರಾಂಕೈಟಿಸ್ ರೋಗದಿಂದ ಬಳಲುತ್ತಿರುವವರಿಗೆ, ಮಧುಮೇಹಿಗಳಿಗೆ ಈ ಸೋಂಕು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸೋಂಕನ್ನು ತಡೆಗಟ್ಟುವುದು ಹೇಗೆ?

• ಕೈ ಗಳನ್ನು ಊಟ ಮಾಡುವ ಮೊದಲು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು,
• ಕೈಗಳನ್ನು ತೊಳೆಯದೆ ಕೈ, ಬಾಯಿ, ಮೂಗು, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು.
• ಸೋಂಕಿನಿಂದ ಬಳಲುತ್ತಿರುವ ರೋಗಿಯ ಸಂಪರ್ಕದಲ್ಲಿರಬಾರದು.
• ಬಹಳ ಕಾಲ ಶೀತ ನೆಗಡಿ ಜ್ವರ ಇದ್ದರೆ ಔಷಧಿಗಳನ್ನು ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ್.
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಠಿಕ ಆಹಾರವನ್ನು, ಔಷಧಿಯನ್ನು ಸೇವಿಸಬೇಕು.

ಚಿಕಿತ್ಸೆ:

• ಕೊರೊನಾ ವೈರಸ್ಸಿಗೆ ಯಾವುದೇ ಲಸಿಕೆ ಅಥವಾ ಚುಚ್ಚುಮದ್ದು ಲಭ್ಯವಿಲ್ಲ
• ರೋಗದ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು.
• ರೋಗದ ಲಕ್ಷಣಗಳು ಬಂದ ಕೂಡಲೆ ವೈದ್ಯರನ್ನು ಕಾಣಬೇಕು.

ಆಯುರ್ವೇದ ಚಿಕಿತ್ಸೆ

• ವೈರಾಣುಗಳಿಂದ ಬರುವ ಹಲವು ಸಾಂಕ್ರಾಮಿಕ ಜ್ವರಗಳಿಗೆ ಆಯುರ್ವೇದದಲ್ಲಿ ವಿಷಮ ಜ್ವರ ಎನ್ನಲಾಗುವುದು ಮತ್ತು ಇದಕ್ಕೆ ವಿಸ್ತಾರವಾಗಿ ವಿಶೇಷ ಚಿಕಿತ್ಸೆಯನ್ನು ವಿವರಿಸಲಾಗಿದೆ.
• ರೋಗವನ್ನು ತಡೆಗಟ್ಟಲು, ವ್ಯಾಧಿನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಠಿಕ ಆಹಾರದ ಸೇವನೆ ಅತೀ ಅವಶ್ಯ.
• ತುಳಸಿ, ಅಮೃತಬಳ್ಳಿ, ಕಾಳುಮೆಣಸು, ಬೇವಿನ ಸೊಪ್ಪು ಉಪಯುಕ್ತ.
• ಬಿಸಿನೀರು, ಅಕ್ಕಿ ಮತ್ತು ಮೆಂತ್ಯೆ ಗಂಜಿ, ಅರಿಶಿಣ ಜೀರಿಗೆ ಮತ್ತು ಹಾಲು ಮಿಶ್ರಿತ ಕಷಾಯ ಸೇವಿಸಬೇಕು.

ಕೊರೊನ ಸೋಂಕು ತಡೆಗಟ್ಟಲು ಮನೆಮದ್ದು

• 1-2 ಚಮಚ ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದು
• ಬಿಸಿನೀರಿಗೆ ಶುದ್ದವಾದ ತುಳಸಿ ಎಲೆಯನ್ನು ಹಾಕಿ, ಒಂದು ಗಂಟೆಯನಂತರ ಸೇವಿಸುವುದು
• ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 3-4 ಬೇವಿನ ಎಲೆಯನ್ನು ಜಗಿದು ತಿನ್ನುವುದು.
• ಅಮೃತಬಳ್ಳಿಯ ಬಳ್ಳಿಗೆ 4 ಪಟ್ಟು ನೀರು ಹಾಕಿ, ಸ್ವಲ್ಪ ಜೀರಿಗೆ ಕಾಳುಮೆಣಸು ಹಾಕಿ ಚೆನ್ನಗಿ ಕುದಿಸಿ ಒಂದು ನಾಲ್ಕಾಂಶಕ್ಕೆ ತರಿಸಿ ತಯಾರಿಸಿದ ಕಷಾಯವನ್ನು ಬೆಳಿಗ್ಗೆ ಸೇವಿಸುವುದು.
• ನೆಲ್ಲಿಕಾಯಿ, ಕೆಂಪಕ್ಕಿ, ಶುಂಠಿ, ಅರಿಶಿಣವನ್ನು ಅಡುಗೆ ಬಳಸುವುದು.
ಸೋಂಕು ತಾಗಿದ ಕೂಡಲೆ ಸಾಯುವುದಿಲ್ಲ. ಆದ್ದರಿಂದ ಹೆದರಿಕೊಳ್ಳುವ ಬದಲು, ಲಕ್ಷಣಗಳು ಕಂಡುಬಂದ ಕೂಡಲೆ ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಒಳಿತು.

ಡಾ. ಮಹೇಶ್ ಶರ್ಮಾ ಎಂ. , ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ

– ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ಞರು, ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
ಮೊ.: 9964022654   email : drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!