ಹೆಚ್ಚಾಗುತ್ತಿರುವ ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬಹುದು?

ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

  •  ಉತ್ತಮ ಕೆಲಸಗಳಿಗೆ ಬೆಂಬಲ ನೀಡುವ,  ಅರ್ಥ ಮಾಡಿಕೊಳ್ಳುವ ಹಾಗೂ  ಪ್ರೋತ್ಸಾಹಿಸುವ ಮಿತ್ರರನ್ನು ಆಯ್ಕೆ ಮಾಡಿಕೊಳ್ಳಿ.
  • ಇಂದು ಮಾಡಬೇಕಾಗಿರುವ ಕೆಲಸ-ಕಾರ್ಯಗಳನ್ನು ನಾಳೆಗೆ ಮುಂದೂಡಬೇಡಿ. ಹಾಗೆ ಮುಂದೂಡಿದಾಗ ಮರುದಿನ ಕೆಲಸದ ಭಾರ ಜಾಸ್ತಿಯಾಗಿ ಮಾನಸಿಕ ಒತ್ತಡ ಉಂಟಾಗಬಹುದು. ಅಲ್ಲದೆ ಇನ್ನಾವುದೋ ಅನಿವಾರ್ಯ ಸಂದರ್ಭಗಳು ಎದುರಾಗಿ ಅಂದೂ ಕೆಲಸ-ಕಾರ್ಯಗಳು ಆಗದಿರಬಹುದು. ಆಗ  ಒತ್ತಡ ಇನ್ನೂ ಜಾಸ್ತಿಯಾಗುತ್ತದೆ.
  • ಹಿಂದೆ ನಡೆದಿದ್ದನ್ನೆಲ್ಲ ಮರೆತು ಮುಂದೆ ಆಗುವ ಹಾಗೂ ಆಗಬೇಕಾದವುಗಳ ಕುರಿತು ಯೋಚಿಸಿ.
  • ಮಾನಸಿಕ ಹಾಗೂ ದೈಹಿಕ ಕಾಳಜಿ ಸದಾ ಜಾಗೃತವಾಗಿರಲಿ.
  • ಕೈಗೆಡುಕದ ಕನಸುಗಳನ್ನು ಕಾಣಬೇಡಿ. ಅದು  ಮಾನಸಿಕ ಒತ್ತಡವನ್ನು ಜಾಸ್ತಿ ಮಾಡುತ್ತದೆ.
  • ಕುಟುಂಬ ಹಾಗೂ ಸಮಾಜದಲ್ಲಿ ನಿಮ್ಮ ಅಗತ್ಯತೆ, ಮೌಲ್ಯ, ನಿಮ್ಮ ಸಾಮಥ್ರ್ಯ ಹಾಗೂ ನಿಮ್ಮಲ್ಲಿನ ನ್ಯೂನತೆಗಳ ಕುರಿತು ತಿಳಿದಿರಿ.
  • ಯಾವುದೇ ಕೆಲಸ ನಿಮ್ಮಿಂದ ಆಗುವುದಿಲ್ಲ ಎನಿಸಿದಲ್ಲಿ ಅಂಥ ಕೆಲಸಗಳನ್ನು ಮಾಡಲು ಮುಂದಾಗಬೇಡಿ ಅಥವಾ ಒಪ್ಪಿಕೊಳ್ಳಬೇಡಿ.
  • ಒಂದು ಮಿತಿಯಲ್ಲಿ ಜಾಸ್ತಿ ಮಾತನಾಡಿ. ಅದಕ್ಕಾಗಿ ನಿಮಗೆ ಬೆಂಬಲ ನೀಡುವಂಥ, ನಿಮ್ಮದೇ ಆದ ಗುಂಪೆÇಂದನ್ನು ಹುಡುಕಿಕೊಳ್ಳಿ.
  • ಸಿಟ್ಟಿಗೊಳಗಾಗುವದನ್ನು ಆದಷ್ಟು ತ್ಯಜಿಸಿ. ಒಂದೊಮ್ಮೆ ಸಿಟ್ಟುಬಂದರೆ ಅದನ್ನೂ ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳಬೇಡಿ.
  • ಒತ್ತಡಕ್ಕೊಳಗಾಗುವಂಥ ವಾತಾವರಣದಿಂದ ಆದಷ್ಟು ದೂರವಿರಲು ಪ್ರಯತ್ನಿಸಿ.
  • ಯಾವಾಗಲೂ ಹಸನ್ಮುಖಿಗಳಾಗಿರಲು ಪ್ರಯತ್ನಿಸಿ. ನಗುವಾಗ ಮನಃತುಂಬಿ ನಗಿ.
  • ನಿಮ್ಮ ಬಗ್ಗೆ ಯಾವಾಗಲೂ ಹುಶಾರಾಗಿರಿ,  ಎಲ್ಲದರಲ್ಲಿಯೂ ಇತರರಿಗಿಂತ ಉತ್ತಮರು ಎನ್ನುವ ನಂಬಿಕೆ ನಿಮ್ಮದಾಗಿರಲಿ.
  • ಪರಿಸ್ಥಿತಿಗೆ ಹೋದಿಕೊಳ್ಳುವ ಮನೊಭಾವನೆ ಬೆಳೆಸಿಕೊಳ್ಳಿ. ಕಾಲಕ್ಕೆ ತಕ್ಕಂತೆ ಬದಲಾಗಿ.
  • ಉತ್ತಮ ಸಂಪರ್ಕಗಳನ್ನು ಜಾಸ್ತಿ ಬೆಳೆಸಿಕೊಳ್ಳಿ. ಇರುವ ಸಂಪರ್ಕವನ್ನು ಎಂದೂ ಕಳೆದುಕೊಳ್ಳಬೇಡಿ.
  • ಮನೆ, ಕಚೇರಿ ಅಥವಾ ಸಮಾಜ ಹೀಗೆ ಎಲ್ಲೆಡೆಗಳಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಿ.
  • ಯೋಗ, ಧ್ಯಾನಗಳನ್ನು ಮಾಡಿ, ನಿಯಮಿತವಾಗಿ ಮಸಾಜ್ ಮಾಡಿಸಿಕೊಳ್ಳಿ. ಈ ಮೂಲಕ ರಿಲ್ಯಾಕ್ಸ್ ಮಾಡಿಕೊಳ್ಳಿ.
  • ನೆಲದಮೇಲಿಂದ ಒಮ್ಮೆಲೇ ಮುಗಿಲಿಗೆ ಹಾರುವ ಪ್ರಯತ್ನ ಮಾಡಬೇಡಿ. ನಿಧಾನವಾಗಿ ಒಂದೊಂದೇ ಮೆಟ್ಟಿಲೇರುತ್ತ ಜೀವನದಲ್ಲಿ ಮೇಲಕ್ಕೇರಲು ಪ್ರಯತ್ನಿಸಿ.
  • ಆಧ್ಯಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ. ಪ್ರತಿನಿತ್ಯ ನಿಗದಿತ ವೇಳೆಗೆ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ. ಪ್ರಾರ್ಥನೆಯು ಮನಸ್ಸಿನ ಭಾರವನ್ನು ತಗ್ಗಿಸುತ್ತದೆ.
  • ಸಮಯಕ್ಕೆ ಮಹತ್ವ ನೀಡುವುದನ್ನು ರೂಢಿಸಿಕೊಳ್ಳಿ. ಒಮ್ಮೆ ಕಳೆದುಹೋದ ಸªುಯ ಮತ್ತೆ ಬಾರದು ಎನ್ನುವುದು ಯಾವಾಗಲೂ ನೆನಪಿನಲ್ಲಿರಲಿ.
  • ಬೇರೆಯವರ ಕೆಲಸ ಅಥವಾ ಜೀವನದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಹಾಗೊಂದುವೇಳೆ ತಲೆಕೆಡಿಸಿಕೊಂಡರೆ ಅದರಿಂದ ಅವರಿಗಾಗುವ ಗಪಕಾರಕ್ಕಿಂತ ನಿಮಗಾಗುವ ಹಾನಿಯೇ ಜಾಸ್ತಿ ಎನ್ನುವುದು ನೆನಪಿರಲಿ.
  • ಎಲ್ಲಕ್ಕೂ ಹೆಚ್ಚಾಗಿ, ಯಾವುದಕ್ಕೂ ಜಾಸ್ತಿ ತಲೆಕೆಡಿಸಿಕೊಳ್ಲಬೇಡಿ. ಏನೇ ಬಂದರೂ ಸಮರ್ಥವಾಗಿ ಎದುರಿಸುತ್ತೇನೇ ಎಂಬ ಧೈರ್ಯ ನಿಮ್ಮಲಿರಲಿ.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,

82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!