ಹೋಮಿಯೋಪಥಿಯಲ್ಲಿ ಕೊರೊನ ವೈರಸ್ ಸೋಂಕಿಗೆ ಚಿಕಿತ್ಸೆಯುಂಟೇ ?

ಹೋಮಿಯೋಪಥಿಯಲ್ಲಿ ಕೊರೊನ ವೈರಸ್ ಸೋಂಕಿಗೆ ಚಿಕಿತ್ಸೆಯುಂಟೇ? ಈಗಿನ ವಿಷಮ  ಪರಿಸ್ಥಿತಿಯಲ್ಲಿ ಹೋಮಿಯೋಪಥಿ ಚಿಕಿತ್ಸೆಯನ್ನು ಈಗಾಗಲೇ ಚಾಲ್ತಿಯಲ್ಲಿರುವ ಅಲೋಪಥಿ ಚಿಕಿತ್ಸೆಯ ಜೊತೆಗೆ ಸಂಯೋಜಿತ ಚಿಕಿತ್ಸೆಯನ್ನು ನೀಡುವುದರ ಮೂಲಕ ಈ ಕರೋನ ವೈರಸ್ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

Homoeopathy medicine for corona virusಇಡೀ ಜಗತ್ತೇ  ಕೋವಿಡ್ 19 ಅಥವಾ  ಕೊರೊನ ವೈರಸ್ ಸೋಂಕಿನಿಂದ ನಲುಗುತ್ತಿದೆ. ಚೀನಾ ದೇಶದಲ್ಲಾದ ಮಾರಣಹೋಮದ ನಂತರ ಈಗ ಇರಾನ್, ಇಟಲಿ, ಸ್ಪೇನ್ ಮತ್ತು ಅಮೇರಿಕ ದೇಶಗಳಲ್ಲಿ ರುದ್ರತಾಂಡವ ಆಡುತ್ತಿದೆ. ನಮ್ಮ ದೇಶದಲ್ಲೂ ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜಗತ್ತಿನ ಮಹಾ ಮಹಾ ವಿಜ್ಞಾನಿಗಳು, ವೈದ್ಯರು ಈ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗದೇ, ಲಸಿಕೆ  (Vaccine) ಸಿದ್ಧಪಡಿಸಲಾಗದೇ ಅಸಹಾಯಕರಾಗಿ ಕೈಚಲ್ಲಿದ್ದಾರೆ.   ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ  ನಮ್ಮ  ದೇಶದ ಆಯುಷ್ (Ayurveda, Unani, Siddha & Homeopathy) ಸಚಿವಾಲಯ  ಆಯುರ್ವೇದ, ಯುನಾನಿ, ಹೋಮಿಯೋಪಥಿ ಮತ್ತಿತರ ಆಯುಷ್ ವೈದ್ಯ ಪದ್ಧತಿಯ ಸಂಶೋಧನಾ ಮಂಡಳಿಗಳ ಜೊತೆ ಚರ್ಚಿಸಿ, ಅವರ ಸಲಹೆಯ ಮೇರೆಗೆ ಕೆಲವು  ಔಷಧಿಗಳನ್ನು ಕೊರೊನ ವೈರಸ್ (ಕೋವಿಡ್ 19) ತೊಂದರೆಯನ್ನು ತಡೆಗಟ್ಟಲು ಮತ್ತು ಚಿಕಿತ್ಸೆಗೆ  ಬಳಸುವಂತೆ ಸಲಹೆಯನ್ನು ಕೊಟ್ಟಿತು. ಇದರ ಸಂಬಂಧವಾಗಿಯೇ ಜನವರಿ 29 ರಂದು ಒಂದು ಅರೋಗ್ಯ ಸಲಹಾ ಸೂಚಕವನ್ನು(Health Advisory) ಹೊರಡಿಸಿತು.ಸಂಪೂರ್ಣ ಮಾಹಿತಿಗಾಗಿ  (https://pib.gov.in/PressReleasePage.aspx?PRID=1600895) ವೆಬ್ ಪೇಜ್ ನೋಡಿರಿ.

ಮದ್ದೇ ಇಲ್ಲ ಎಂದು ತೀರ್ಮಾನಿಸುವುದು ಎಷ್ಟು ಸರಿ?

ಈ ಸಲಹಾ ಸೂಚಕದ ಪ್ರಕಾರ ಹೋಮಿಯೋಪಥಿಯಲ್ಲಿ ಆರ್ಸೆನಿಕ್ ಆಲ್ಬಮ್ ಎಂಬ  ಔಷಧಿಯನ್ನು30ರ ಸತ್ವದಲ್ಲಿ ಉಪಯೋಗಿಸಲು ಹೇಳಿತು. ಈ ಔಷಧಿಯನ್ನುಆಯಾ ಆಯುಷ್ ವೈದ್ಯರ ಸಂದರ್ಶನ ಮಾಡಿ, ಅವರ ಸಲಹೆಯ ಮೇರೆಗೆ ಸೇವಿಸಲು ಹೇಳಲಾಯಿತು. ಇವೆಲ್ಲದಕ್ಕಿಂತ ಮುಖ್ಯವಾಗಿ ವೈಯಕ್ತಿತ ನೈರ್ಮಲ್ಯಕ್ಕೆ ಸಂಬಂಧಿಸಿದ (Personal Hygiene) ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಯಾರಿಗಾದರೂ ಕೊರೊನ ಸೋಂಕಿನ ಗುಣಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಬೇಕೆಂದೂ ಸೂಚನೆ ನೀಡಲಾಯಿತು. ಕೆಲವು ಸಾಮಾಜಿಕ ತಾಣಗಳಲ್ಲಿ ಹೋಮಿಯೋಪಥಿಯ ಅರ್ಸೆನಿಕಮ್ ಆಲ್ಬಮ್ ಔಷದಿಯ ಚಿತ್ರ ಹರಿದಾಡಿತು. ಲಕ್ಷ ಗಟ್ಟಲೆ ಜನರು ಮುಗಿಬಿದ್ದು ಇದನ್ನು ಖರೀದಿಸಿ ಸೇವಿಸಿದರು.

ಕೆಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಅನೇಕ ವಿರೋಧಗಳು ವ್ಯಕ್ತವಾದವು, ಅನೇಕರು ಕರೋನ ಸೋಂಕಿಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಅಲ್ಲಗೆಳೆದರು.ತಮ್ಮಿಂದ ಕೊರೊನ ವೈರಸ್ ಸೋಂಕನ್ನು ತಡೆಯಲು ಆಗದೇಯಿದ್ದರೆ, ಯಾರಕೈಲೂ ಆಗದು ಎಂಬ ಅಭಿಪ್ರಾಯ ಅವರದ್ದಿರಬಹುದು. ಕರೋನ ಸೋಂಕಿಗೆ ಮಾಡ್ರನ್ ಮೆಡಿಸಿನ್ ಪದ್ದತಿಯಲ್ಲಿ ನಿಖರವಾದ ಮದ್ದೇ ಇಲ್ಲವೆಂದಾಗ, ಲಸಿಕೆ ಲಭ್ಯವಿಲ್ಲದಾಗ, ಸೋಂಕು ಹರಡುವುದು ನಿಯಂತ್ರಣಕ್ಕೆ ಬರದಾಗ, ರೋಗಿಗಳಿಗೆ ಹೋಮಿಯೋ ಚಿಕಿತ್ಸೆ ನೀಡಲು ಅವಕಾಶಕೊಡಬಹುದಲ್ಲವೇ ಎಂಬ ಸದಾಲೋಚನೆ ತರ್ಕಬದ್ಧ ಚಿಂತನೆ ಇವರಲ್ಲಿ ಮೂಡಬೇಕಾಗಿತ್ತು. 

 ಕೊರೊನ ವೈರಸ್ ಸೋಂಕನ್ನು ನಿಯಂತ್ರಿಸಲು ಅಲೋಪಥಿ ವೈಫಲ್ಯವಾದರೆ ಅದಕ್ಕೆ ಮದ್ದೇ ಇಲ್ಲ ಎಂದು ತೀರ್ಮಾನಿಸುವುದು ಎಷ್ಟು ಸರಿ? ಕೊರೊನ ವೈರಸ್ ಸೋಂಕಿತ ವ್ಯಕ್ತಿ ನನಗೆ ಅಲೋಪಥಿ ಚಿಕಿತ್ಸೆಯೇ ಬೇಕು ಅಥವಾ ಹೋಮಿಯೋಪಥಿ ಯಾ ಆಯುರ್ವೇದ ಯಾ ಯುನಾನಿ ಚಿಕಿತ್ಸೆಯೇ ಬೇಕೆನ್ನುವುದಿಲ್ಲ. ಅವನು ಬಯಸುವುದು ನೋವು, ಬಳಲವಿಕೆ ಮತ್ತು ರೋಗದಿಂದ ಮುಕ್ತಿ. ಅವನನ್ನು ಸಂರಕ್ಷಿಸುವುದು, ಜೀವವುಳಿಸುವುದೇ ಯಾವುದೇ ವೈದ್ಯನ, ವೈದ್ಯ ಪದ್ದತಿಯ ಅಥವಾ ವೈದ್ಯಕೀಯ ಶಿಕ್ಷಣದ ಕರ್ತವ್ಯ. ಹೇಗೆ ದೇಶ ಕಾಯುವ ಸೈನಿಕನಿಗೆ ಜಾತಿ, ಪಂಗಡ ಎಂಬುದಿರುವುದಿಲ್ಲವೋ ಹಾಗೆಯೇ ಜೀವವನ್ನುಳಿಸುವ,  ಅರೋಗ್ಯ ಸಂರಕ್ಷಿಸುವ ವೈದ್ಯನು ಯಾರಾದರೂ ಆಗಿರಬಹುದಲ್ಲವೇ ? ಅವನು ಹೋಮಿಯೋಪಥಿ ವೈದ್ಯನಾಗಿರಬಹುದು, ಅಥವಾ ಇನ್ನಾವುದೋ ಆಯುಷ್ ವೈದ್ಯನೂ ಇರಬಹುದು. ವೈದ್ಯಕೀಯ ಯಾರಪ್ಪನ ಸ್ವತ್ತೂ ಅಲ್ಲವಲ್ಲ !

ಕೊರೊನ ಸೋಂಕಿನ ಲಕ್ಷಣಗಳೇನು ?

ನಿಮಗೀಗಾಲೇ ಗೊತ್ತಿರುವ ಹಾಗೆ   ಕೋವಿಡ್ -19 ಅಥವಾ ಕೊರೊನ ವೈರಸ್ ಸೋಂಕಿನ ಲಕ್ಷಣಗಳು ಹೀಗಿವೆ:

  • ಜ್ವರ, ಸುಸ್ತು ಮತ್ತು ಒಣ ಕೆಮ್ಮು – ಸಾಮಾನ್ಯ ಲಕ್ಷಣಗಳು
  • ತಲೆ ನೋವು, ಗಂಟಲು ನೋವು
  • ಶೀತ, ಮೂಗು ಸೋರುವುದು
  • ಬೇಧಿ (Diarrhea)
  • ಅನಾರೋಗ್ಯದ ಅನುಭವ ಇತ್ಯಾದಿ

ಸೋಂಕು ತಗುಲಿದವರಲ್ಲಿ ಸುಮಾರು 80% ಜನರು ಹೆಚ್ಚು ತೊಂದರೆಯಿಲ್ಲದೆ ಗುಣಮುಖರಾಗುವರು. ಕೆಲವರಲ್ಲಿ ಉಸಿರಾಟದ ತೊಂದರೆಯುಂಟಾಗಿ  ಗಂಭೀರವಾದ ಪರಿಣಾಮಗಳು ಉಂಟಾಗುವವು.  ವಯಸ್ಸಾದವರು  ಮತ್ತು ಈಗಾಗಲೇ  ಡಯಾಬೆಟೆಸ್, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳಿಂದ ಬಳಲುವರಲ್ಲಿ ಕೋವಿಡ್-19 ತೀವ್ರ ಪರಿಣಾಮಗಳನ್ನುಂಟುಮಾಡುವ ಸಾಧ್ಯತೆ ಹೆಚ್ಚು. ಇತ್ತೀಚೆಗೆ ಜ್ವರ, ಒಣ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುವವರೆಲ್ಲರೂ ಕಡ್ಡಾಯವಾಗಿ ವೈದ್ಯರನ್ನು ಸಂದರ್ಶಿಸುವುದು ಒಳಿತು.

ಕೊರೊನ ವೈರಸ್ ಸೋಂಕು ಹೇಗೆ ಹರಡುತ್ತದೆ ?

  • ಇದು ಮನುಷ್ಯರಿಂದ ಮನುಷ್ಯರಿಗೆ ಹಬ್ಬುತ್ತದೆ. ಸಾಂಕ್ರಾಮಿಕ ರೋಗಗಳು ಹರಡಲು ಒಂದು ಮಾಧ್ಯಮ ಬೇಕು. ಕೊರೊನ  ಸೋಂಕಿತರು ಕೆಮ್ಮಿದಾಗ, ಸೀನಿದಾಗ ಹೊರಹೊಮ್ಮುವ ಸೋಂಕಿತ ಹನಿಗಳಿಂದ   (DROPLET SPREAD) ಹರಡುತ್ತದೆ. ಈ ಸೋಂಕಿತ ಹನಿಗಳಲ್ಲಿಯ ವೈರಸ್ ಸುತ್ತಮುತ್ತಲಿನ ವಸ್ತುಗಳ ಮೇಲೂ ಬಿದ್ದಿರುತ್ತದೆ. ಆದ್ದರಿಂದ ಅಂತಹವರ ಸಂಪರ್ಕಕ್ಕೆ ಬರುವವವರು, ಅಂತಹ ಸೋಂಕಿತ ವಸ್ತುಗಳನ್ನು ಮುಟ್ಟುವದರಿಂದ ಇತರರು ಸೋಂಕಿತರಾಗುತ್ತಾರೆ.
  • ತುಂಬಾ ಹತ್ತಿರದ  ದೈಹಿಕ ಸಂಪರ್ಕದಿಂದ. ಉದಾಹರಣೆಗೆ ಸ್ಪರ್ಶ ಮತ್ತು ಹಸ್ತಲಾಘವ.
  • ಸೋಂಕಿತರು ಸ್ಪರ್ಶಮಾಡಿದ ವಸ್ತುವನ್ನು (ಡೋರ್ ಹ್ಯಾಂಡಲ್, ಲಿಫ್ಟ್ ಬಟನ್, ಇತ್ಯಾದಿ) ಮುಟ್ಟುವುದು, ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನ ಕೈ ತೊಳೆಯದೆ ಮುಟ್ಟಿದರೆ.

ಕೊರೊನ ಸೋಂಕು ಬರದಂತೆ ನಮ್ಮನ್ನು ರಕ್ಷಿಸಿಕೊಳ್ಳುವ ಉಪಾಯಗಳು: 

  • ಆದಷ್ಟು ಮನೆಯಲ್ಲಿಯೇ ಇರುವುದು.
  • ಪದೇ ಪದೇ ಮೂಗು ಮುಖ ಸ್ಪರ್ಶಿಸುವುದನ್ನು ಬಿಡಿ.
  •  ಆಗಾಗ ನಿಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆಯುತ್ತಿರಿ ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ನಿಂದ ಸ್ವಚ್ಛಮಾಡಿಕೊಳ್ಳಿ.
  • ಕೆಮ್ಮುವ ಮತ್ತು ಸೀನುವ ವ್ಯಕ್ತಿಗಳಿಂದ ಕನಿಷ್ಠ ಪಕ್ಷ 3-4 ಅಡಿ ಅಂತರವಿರಲಿ.
  • ಸೀನುವಾಗ, ಕೆಮ್ಮುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ.
  • ಧೂಮ್ರಪಾನ (Smoking)ದಿಂದ ದೂರವಿರಿ, ಇದು ಶ್ವಾಸಕೋಶಗಳ ಇಮ್ಮ್ಯೂನಿಟಿ ದುರ್ಬಲಗೊಳಿಸುತ್ತದೆ.
  • ಅನಾವಶ್ಯಕವಾಗಿ ಹೊರಗಡೆ ತಿರುಗಾಡುವುದನ್ನು ತಪ್ಪಿಸಿ, ಒಂದೆರಡು ವಾರಕ್ಕಾಗುವ ಮನೆ ಬಳಕೆ ವಸ್ತುಗಳನ್ನು ಒಮ್ಮೆಲೇ ಖರೀದಿಸಿ.
  • ಗುಂಪುಗೂಡದಂತೆ ನೋಡಿಕೊಳ್ಳುವುದು, ದೇವರು ಎಲ್ಲೆಲ್ಲೂ ಇದ್ದಾನೆ ಹಾಗಾಗಿ ನಿಮ್ಮ ನಿಮ್ಮ ಮನೆಗಳಲ್ಲೇ ಕುಳಿತು ಪೂಜೆ ಮಾಡಿ, ಧ್ಯಾನಿಸಿ, ಮಂದಿರ, ಮಸೀದಿ, ಚರ್ಚು ಇನ್ನಿತರ ಧಾರ್ಮಿಕ ಸ್ಥಳಗಳಿಗೆ ಹೋಗುವುದು ಅವಶ್ಯಕತೆಯಿಲ್ಲ.
  • ಅವಶ್ಯಕ ವಸ್ತುಗಳ ಖರೀದಿಗೆ ಹೊರಗೆ ಹೋಗಬೇಕಾದ ಪರಿಸ್ಥಿತಿ ಬಂದರೆ, ಮೂಗು ಮತ್ತು ಬಾಯಿಯನ್ನು ಮುಚ್ಚುವಂತಹ ಮಾಸ್ಕ (ಶುದ್ಧವಾದ ಕರ್ಚಿಫ್ ಕೂಡ ಆದೀತು) ಧರಿಸುವುದು.
  •  ಮತ್ತು ಅಂಗಡಿಗಳಲ್ಲಿ ಖರೀದಿಮಾಡುವಾಗ ಸಾಲಿನಲ್ಲಿ ನಿಂತು ಅಂತರವನ್ನು ಕಾಯ್ದು ಕೊಳ್ಳುವುದು
  • ಕೈ ಜೋಡಿಸಿ ನಮಸ್ತೆ ಮಾಡಿ, ಹ್ಯಾಂಡ್ ಶೇಕ್ ಬೇಡ (ನಮ್ಮ ಭಾರತೀಯ ಸಂಸ್ಕೃತಿಯ ಆಚಾರಗಳು ಎಷ್ಟು ವೈಜ್ಞಾನಿಕ ಎಂದು ಈಗ ಎಲ್ಲರಿಗೂ ಅರ್ಥವಾಗಿರಬೇಕಲ್ಲವೇ ? )
  • ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಯೋಗ ಮತ್ತು ಧ್ಯಾನ ಮಾಡಿ, ವೃಥಾ ಕಾಲಹರಣ ಮಾಡದೆ, ಬರೀ ಟಿವಿ, ಮೊಬೈಲ್ ದಾಸರಾಗದೆ, ಒಳ್ಳೆಯ ಪುಸ್ತಕಗಳನ್ನು ಓದಿ, ಮಕ್ಕಳ ಜೊತೆ ಆಟವಾಡಿರಿ, ಕೇರಂ, ಚೆಸ್, ಸುಡುಕು, ಪದಬಂಧ ಇತರ ಚಟುವಟಿಕೆಗಳನ್ನು ಮಾಡಿ.
  • ಆತಂಕ ಪಡಬೇಡಿ, ಆತಂಕ ಮತ್ತು ಗಾಬರಿಯಿಂದ ಅನೇಕ ಸಮಸ್ಯೆಗಳು ಬಂದೊದಗುತ್ತವೆ ಅಥವಾ ಇರುವ ಸಮಸ್ಯೆಗಳು ಹೆಚ್ಚಾಗುತ್ತವೆ. ಮುಖ್ಯವಾಗಿ ಹೃದಯದ ಖಾಯಿಲೆ, ರಕ್ತದೊತ್ತಡ, ಡಯಾಬಿಟಿಸ್ ನಂತಹ ಸಮಸ್ಯೆಗಳಿರುವವರು, ಹಿರಿಯರು  ಆತಂಕಗೊಳಗಾಗದೆ ಇರುವುದು  ಅತ್ಯವಶ್ಯಕ.

ಕೊರೊನ ವೈರಸ್ ಸೋಂಕಿಗೆ ಹೋಮಿಯೋಪಥಿ ಚಿಕಿತ್ಸೆ: 

ಕೆಳಗಿನ 3 ಗುಂಪುಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಕೊಡಬಹುದು

  1. ಕೊರೊನ ಸೋಂಕು ಬರದಂತೆ ತಡೆಗಟ್ಟಲು
  2. ಕೊರೊನ  ಶಂಕಿತರ ಚಿಕಿತ್ಸೆ
  3. ಕೊರೊನ ಸೋಂಕಿತರ ಚಿಕಿತ್ಸೆ

ಜೀನಸ್ ಎಪಿಡೆಮಿಕಸ್– ಕೊರೊನ ಸೋಂಕು ತಡೆಗಟ್ಟುವ ಚಿಕಿತ್ಸೆ:   

ಇದೊಂದು ಹೋಮಿಯೋಪತಿ ವೈದ್ಯ ಪದ್ದತಿಯ ವಿಶಿಷ್ಟ  ಚಿಕಿತ್ಸಾ ಕ್ರಮ. ಇತಿಹಾಸದ ಕಾಲಘಟ್ಟದಲ್ಲಿ ಅನೇಕ ಸಲ ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು  ಹೋಮಿಯೋಪಥಿ ಚಿಕಿತ್ಸೆ ನೀಡಲಾಗಿದೆ.

ಉದಾಹರಣೆಗೆ:

1850-60 ರಲ್ಲಿ ಲಂಡನ್ನಿನಲ್ಲಿ ತಲೆದೋರಿದ ಕಾಲರಾ ಸಾಂಕ್ರಾಮಿಕವನ್ನು ನಿಯಂತ್ರಿಸಲು ಹೋಮಿಯೋಪಥಿ ಚಿಕಿತ್ಸೆಯು ಮಹತ್ತರ ಪಾತ್ರವಹಿಸಿತ್ತು, ಸಾಂಪ್ರದಾಯಿಕ ಚಿಕಿತ್ಸೆ (Conventional Medicine-Allopathy) ಪಡೆದ ಜನರಿಗೆ ಹೋಲಿಸಿದರೆ ಹೋಮಿಯೋಪಥಿ ಚಿಕಿತ್ಸೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆಯಿದ್ದು, ಅನೇಕರು ಗುಣಮುಖ ರಾಗಿದ್ದರು.

1918 ರಲ್ಲಿ ಉಂಟಾದ ಸ್ಪ್ಯಾನಿಷ್ ಫ್ಲೂ (Spanish flu pandemic) ಸಂದರ್ಭದಲ್ಲಿ ಕೂಡ ಹೆಚ್ಚು ಜನರಿಗೆ ಹೋಮಿಯೋಪಥಿ ಔಷಧಿಗಳನ್ನು ಕೊಡಲಾಗಿತ್ತು.

1999-2003 ರಲ್ಲಿ ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಉಂಟಾದ ಜಪಾನೀಸ್ ಎನ್ಸೆಫಾಲಿಟಿಸ್ (Japanese Encephalitis) ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಆಗಿನ ಸರ್ಕಾರವೇ ಬೆಲ್ಲಾಡೋಣ -ಕಲ್ಕೇರಿಯ-ಟ್ಯುಬೆರ್ಕ್ಯುಲಿನಮ್ (BCT) ಔಷಧಿಗಳನ್ನು ಈ ರೋಗವನ್ನು ತಡೆಗಟ್ಟಲು ಎಲ್ಲೆಡೆ ಹಂಚಿತು.ಪರಿಣಾಮವಾಗಿ ಈ ರೋಗ ನಿಯಂತ್ರಣಕ್ಕೆ ಬಂದಿತು.

2007 ರಲ್ಲಿ ಕ್ಯೂಬಾ ದೇಶದಲ್ಲುಂಟಾದ ಲೆಪೆಟೊ ಸ್ಪೈರೋಸಿಸ್ (Leptospirosis)  ಎಂಬ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು 2.3 ಮಿಲಿಯನ್ ಜನರಿಗೆ ಹೋಮಿಯೋಪಥಿ ಔಷಧಿಗಳನ್ನು ಕೊಟ್ಟಿದ್ದರಿಂದ ಆ ರೋಗವನ್ನು ಅದನ್ನು ನಿಯಂತ್ರಿಸಲು  ಸಹಕಾರಿಯಾಯಿತು.  ಹೆಚ್ಚಿನ ಮಾಹಿತಿಗೆ ನೋಡಿ  https://www.ncbi.nlm.nih.gov/pubmed/20674839

ಹೋಮಿಯೋಪಥಿಯಲ್ಲಿ ಜೀನಸ್ ಎಪಿಡೆಮಿಕಸ್ ಹೇಗೆ ಆರಿಸುತ್ತಾರೆ?

ಒಂದು ಸಾಂಕ್ರಾಮಿಕ ರೋಗ ಉಂಟಾದಾಗ, ಅದರಿಂದ ಬಳಲುವ ಹಲವು ವ್ಯಕ್ತಿಗಳ ರೋಗ ಲಕ್ಷಣಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಅದಕ್ಕೆ ಸರಿಹೊಂದುವ ಹೋಮಿಯೋಪಥಿ ಔಷಧಿಯನ್ನು ಆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಜನರಿಗೆ ಸೇವಿಸಲು ಕೊಡುವುದು. ಕೊರೊನ ವೈರಸ್ ಸೋಂಕನ್ನು ತಡೆಗಟ್ಟಲು ಮೇಲಿನ ವಿಧಾನದಂತೆ ಆರಿಸಿದ ಜೀನಸ್ ಎಪಿಡೆಮಿಕಸ್  ಔಷಧಿಯೇ  ಅರ್ಸೆನಿಕಮ್ ಆಲ್ಬಮ್.

ಸರಳವಾದ ಶಬ್ದಗಳಲ್ಲಿ ಹೇಳಬೇಕೆಂದರೆ ಅರ್ಸೆನಿಕಮ್ ಆಲ್ಬಮ್ ಸೇವಿಸಿದಾಗ ಅದು ಒಂದು ಲಸಿಕೆ (Vaccine)  ರೀತಿಯಲ್ಲಿ ಅಥವಾ  ರೋಗ ಪ್ರತಿರೋಧಕದಂತೆ  (Immune Booster) ಕೆಲಸಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಕೊರೊನದಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದಾಗಿದೆ. ಇದರ ಜೊತೆಗೆ ನೈರ್ಮಲ್ಯ ಮತ್ತು ಸ್ವಚ್ಛತೆಗಳನ್ನೂ ಚಾಚೂ ತಪ್ಪದೆ ಪಾಲಿಸುವುದೂ ಅತೀ ಮುಖ್ಯ. ಸೋಂಕು ತಗಲಿದ ನಂತರ ಔಷಧಿಗೆ ಪರದಾಡುವ ಬದಲು, ಸೋಂಕು ಬರದಂತೆಯೇ ತಡೆಯುವುದು ಔಚಿತ್ಯವಲ್ಲವೇ? ಜೀನಸ್ ಎಪಿಡೆಮಿಕಸ್  ಮೂಲಕ ಹೋಮಿಯೋಪಥಿ ವೈದ್ಯ ಪದ್ದತಿಯಲ್ಲಿ ಇದನ್ನೇ ಮಾಡುವುದು.

ಕೊರೊನ ಶಂಕಿತ ಮತ್ತು ಸೋಂಕಿತರ ಚಿಕಿತ್ಸೆ:

ಕ್ವಾರಂಟೈನ್ ಮತ್ತು ಐಸೋಲೇಷನ್ ನಂತಹ ಮುಂಜಾಗ್ರತಾ ಕ್ರಮಗಳು ಇಂತಹವರಲ್ಲಿ ಅತ್ಯಗತ್ಯ. ಇವರ ರೋಗ ಲಕ್ಷಣಗಳನ್ನು ಆಧರಿಸಿ ಹೋಮಿಯೋ ಚಿಕಿತ್ಸೆ ನೀಡಬೇಕಾಗುತ್ತದೆ. ಕೊರೊನ ಸೋಂಕು ಬಹು ಬೇಗ ಗಂಭೀರ ಸಮಸ್ಯೆಗಳನ್ನು ಉಂಟುಮಾಡುವುದರಿಂದ ತ್ವರಿತವಾಗಿ ಕೆಲಸಮಾಡುವ ಹೋಮಿಯೋ ಔಷಧಿಗಳನ್ನು ನೀಡಬೇಕಾಗುತ್ತದೆ.

ಅರ್ಸೆನಿಕಮ್ ಆಲ್ಬಮ್- ಕೊರೊನ ಸೋಂಕಿಗೆ ಪರಿಹಾರವೇ ? 

  ಅರ್ಸೆನಿಕಮ್ ಆಲ್ಬಮ್ ಅಥವಾ ಬೇರೆಯಾವುದೇ ಹೋಮಿಯೋಪಥಿ ಔಷಧಿ  ಕೊರೊನ ವೈರಸ್ ಸೋಂಕನ್ನು ತಡೆಗಟ್ಟಲು ಅಥವಾ ಗುಣಪಡಿಸಲು ಸಾಧ್ಯವಿದೆಯೇ ಇಲ್ಲವೋ ಎನ್ನಲು ಯಾವ ಬಲವಾದ ಆಧಾರಗಳೂ, ವೈಜ್ಞಾನಿಕ ವರದಿಗಳೂ ಇಲ್ಲ. ಏಕೆಂದರೆ, ಯಾವುದೇ ಸಾಂಕ್ರಾಮಿಕ ರೋಗ ಉಂಟಾದಾಗ ಹೋಮಿಯೋಪಥಿ ಚಿಕಿತ್ಸೆಯನ್ನು ಕೊಡಲು ಆಸ್ಪದವೇ ಇರುವುದಿಲ್ಲ. ಸರ್ಕಾರವೂ ಕೂಡ ಅಲೋಪಥಿಯೊಂದೇ ಎಲ್ಲದಕ್ಕೋ ಪರಿಹಾರ ಎಂಬ ಧೋರಣೆ ಹೊಂದಿದೆ. ಆದರೆ ಈ ಮೇಲೆ ತಿಳಿಸಿದ ಹಾಗೆ  ಅನೇಕ ಸಲ  ಜಾಗತಿಕವಾಗಿ ಸಾಂಕ್ರಾಮಿಕ ರೋಗಗಳು ತಲೆದೋರಿದ ಸಂದರ್ಭಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಪ್ರಯೋಜನಕಾರಿಯೆಂದು ಸಾಬೀತಾಗಿದೆ.

ಮಾಡ್ರನ್ ಮೆಡಿಸಿನ್ (ಅಲೋಪಥಿ) ವೈದ್ಯಪದ್ದತಿಯಲ್ಲಿ   ಕೊರೊನದಂತಹ ಸೋಂಕುಗಳನ್ನು ನಿಯಂತ್ರಿಸಲು ಏಕೆಆಗುತ್ತಿಲ್ಲ ? 

  • ಅಲೋಪಥಿ ವೈದ್ಯರು ಈಗ ಮೊದಲಿಗಿಂತಾ ಹೆಚ್ಚು ಸವಾಲುಗಳನ್ನು ಎದುರಿಸ ಬೇಕಾಗಿದೆ
  • DRUG RESISTANCE, DRUG SIDE-EFFECTS ಗಳಂತಹ ದೊಡ್ಡ ಸಮಸ್ಯೆಗಳು  ಅಲೋಪಥಿಯಲ್ಲಿವೆ.
  • ಬ್ಯಾಕ್ಟೀರಿಯಾ, ವೈರಸ್, ಫಂಗಸ್ ನಂತಹ ಸೂಕ್ಶ್ಮಾಣು ಜೀವಿಗಳು DRUG-RESISTANCE (ಔಷಧ -ಪ್ರತಿರೋಧಕ) ಗುಣವನ್ನು ಬೆಳೆಸಿಕೊಂಡಿವೆ. ಹೀಗಾಗಿ ಮೊದಲಿದ್ದ ಜೀವ ನಿರೋಧಕಗಳು (Anti-biotics), ಸ್ಟೀರಾಯ್ಡ್ ಔಷಧಿಗಳು, ನೋವು ನಿವಾರಕಗಳು ಈಗ ಕೆಲಸಮಾಡುತ್ತಿಲ್ಲ. ಹೊಸ ಔಷಧಿಗಳು ಬೇಕಾಗುತ್ತದೆ, ಕೆಲವು ಕಾಲಾನಂತರ ಅವೂ ಕೆಲಸಮಾಡುವುದಿಲ್ಲ.
  • ಓವರ್ ದಿ ಕೌಂಟರ್ ಔಷಧಿಗಳು (OTC medicines)- ನಮ್ಮ ದೇಶದಲ್ಲಿ ವೈದ್ಯರ ಚೀಟಿಯಿಲ್ಲದೆಯೇ ಔಷಧಿಗಳು ಮೆಡಿಕಲ್ ಶಾಪುಗಳಲ್ಲಿ ಸುಲಭವಾಗಿ ಸಿಗುತ್ತವೆ. ಅನೇಕರು ತಾವೇ ಸ್ವತಃ ತಮ್ಮ ಸಮಸ್ಯೆಗಳಿಗೆ   ಜೀವ ನಿರೋಧಕಗಳು (Anti-biotics), ಸ್ಟೀರಾಯ್ಡ್ ಔಷಧಿಗಳು, ನೋವು ನಿವಾರಕಗಳಂತಹ (Analgesics or Pain Killers) ಔಷಧಿಗಳನ್ನು ಖರೀದಿಸಿ ಸೇವಿಸುವುದರಿಂದ ಮನುಷ್ಯನ ದೇಹದ ರೋಗ ನಿರೋಧಕತೆ (Immunity) ಕುಂದುತ್ತದೆ.

ಹಾಗಾದರೆ ಕೊರೊನ ಸೋಂಕಿಗೆ ಪರಿಹಾರವಿಲ್ಲವೇ ?

ಪ್ರತಿಯೊಂದು ಸಮಸ್ಯೆಗೂ ಪರಿಹಾರವೆನ್ನುವುದು ಇದ್ದೇ ಇರುತ್ತದೆ. ಹಾಗೆ ಕೊರೊನ ಸೋಂಕಿಗೆ ಕೂಡ ಪರಿಹಾರವಿದೆ. ಅದೆಂದರೆ  ಎಲ್ಲಾ ವೈದ್ಯರು ತಮ್ಮ ಸ್ವ ಪ್ರತಿಷ್ಠೆಗಳನ್ನು ಬದಿಗಿಟ್ಟು, ನಾ ಮೇಲು ನೀ ಕೀಳು ಎನ್ನದೇ ದಿನ ನಿತ್ಯವೂ ವೈದ್ಯ ವಿಜ್ಞಾನಕ್ಕೆ ಸವಾಲೊಡ್ಡುತ್ತಿರುವ ರೋಗಗಳನ್ನು, ಕೊರೊನ, H1N1, ಡೆಂಗ್ಯು, ಚಿಕೂನ್ ಗುನ್ಯಾ ದಂತಹ ಸೋಂಕುಗಳನ್ನು ಮಟ್ಟ ಹಾಕಲು, ಮಾನವ ಸಂಕುಲದ ಆರೋಗ್ಯ ಸಂರಕ್ಷಣೆಗಾಗಿ ಒಂದುಗೂಡಬೇಕು.  ಇದು ಬರೀ ನನ್ನ ಅನಿಸಿಕೆಯಲ್ಲ, ತರ್ಕಬದ್ಧವಾಗಿ ಯೋಚಿಸಿದರೆ ಅನಿವಾರ್ಯವೂ ಕೂಡ.

ಸಂಯೋಜಿತ ವೈದ್ಯ ಚಿಕಿತ್ಸೆ (Integrative medicine) ಈಗಿನ ಅವಶ್ಯಕತೆ ಮತ್ತು ಅನಿವಾರ್ಯತೆ:

ಕೊರೊನದಂತಹ ಸೋಂಕುಗಳನನ್ನು ಮತ್ತು ಮನು ಕುಲವನ್ನು ಭಾದಿಸುವ ಅನೇಕ ರೋಗಗಳನ್ನು ಸಮರ್ಥವಾಗಿ ಎದುರಿಸಲು ಸಂಯೋಜಿತ ಚಿಕಿತ್ಸೆ ಅತ್ಯಗತ್ಯ. ಸಂಯೋಜಿತ ಚಿಕಿತ್ಸೆಯೆಂದರೆ ಆಯುಷ್ ಚಿಕಿತ್ಸಾ ಪದ್ದತಿಗಳನ್ನು ಸಾಂಪ್ರದಾಯಿಕ ವೈದ್ಯ ಪದ್ಧತಿಯೆಂದೆನಿಸಿದ (Conventional Medicine) ಅಲೋಪಥಿಯ ಜೊತೆ ಸಂಯೋಜಿಸಿ ಚಿಕಿತ್ಸೆ ಕೊಡುವುದು. ಈಗಿನ ವಿಷಮ  ಪರಿಸ್ಥಿತಿಯಲ್ಲಿ, ಹೋಮಿಯೋಪಥಿ ಚಿಕಿತ್ಸೆಯನ್ನು ಈಗಾಗಲೇ ಚಾಲ್ತಿಯಲ್ಲಿರುವ ಅಲೋಪಥಿ ಚಿಕಿತ್ಸೆಯ ಜೊತೆಗೆ ಸಂಯೋಜಿತ ಚಿಕಿತ್ಸೆಯನ್ನು ನೀಡುವುದರ ಮೂಲಕ ಈ ಕರೋನ ವೈರಸ್ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರ ಸಹಕಾರಬೇಕು. ನಮ್ಮ ಘನವೆತ್ತ ಸರ್ಕಾರವು ಇದರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಎಲ್ಲರ ಆರೋಗ್ಯವನ್ನು ಸಂರಕ್ಷಿಸಬೇಕಾಗಿದೆ.

ಚೀನಾದ ನಂತರ ಜಗತ್ತಿನಲ್ಲೇ ಹೆಚ್ಚು ಜನ ಸಂಖ್ಯೆಯುಳ್ಳ ನಮ್ಮದೇಶ, ಅಮೆರಿಕಾ, ಇಟಲಿ, ಬ್ರಿಟನ್, ಸ್ಪೇನ್  ಮತ್ತಿತರ ಕರೋನ ಪೀಡಿತ ದೇಶಗಳಿಗೆ ಹೋಲಿಸಿದರೆ ಅನೇಕ ಅಂಶಗಳಲ್ಲಿ (ಆರ್ಥಿಕ, ಶೈಕ್ಷಣಿಕ, ಅರೋಗ್ಯ ಸೌಲಭ್ಯ ಇತ್ಯಾದಿ) ಹಿಂದುಳಿದಿದೆ. ಹೀಗಿದ್ದರೂ ಆ ದೇಶಗಳಿಗೆ ಹೋಲಿಸಿದರೆ ಕರೋನ ಸೋಂಕು ನಮ್ಮಲ್ಲಿ ಹೆಚ್ಚಿಲ್ಲ, ನನ್ನ ಅನಿಸಿಕೆಯ ಪ್ರಕಾರ ಕರ್ಫ್ಯೂ, ಲಾಕ್ ಡೌನ್, ನೈರ್ಮಲ್ಯೀಕರಣ ಮತ್ತಿತರ ಭಾರತ ಸರ್ಕಾರದ ಪ್ರಯತ್ನಗಳ ಜೊತೆ ಲಕ್ಷಾಂತರ ಜನ ಈಗಾಗಲೇ ಸೇವಿಸಿದ ಹೋಮಿಯೋಪತಿ ಔಷಧಿ ಅರ್ಸೆನಿಕಮ್ ಆಲ್ಬಮ್ ಕೂಡ ಕರೋನವನ್ನು ನಿಯಂತ್ರಿಸಲು ಸಹಕಾರಿಯಾಗಿರಬಹುದಲ್ಲವೇ ? ಇದು ನಿಮ್ಮ ತರ್ಕಕ್ಕೆ ಬಿಟ್ಟದ್ದು.

ಡಾ. ತೇಜಸ್ವಿ ಕೆ.ಪಿ. ಸುರಭಿ ಹೋಮಿಯೋ ಕ್ಲಿನಿಕ್

ಡಾ. ತೇಜಸ್ವಿ ಕೆ.ಪಿ.
ಸುರಭಿ ಹೋಮಿಯೋ ಕ್ಲಿನಿಕ್,
ಶಾಪ್ ನಂ.2, #823, 6ನೇ ಮುಖ್ಯರಸ್ತೆ
7ನೇ ಅಡ್ಡರಸ್ತೆ, 4ನೇ ಬ್ಲಾಕ್,
ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
ಲ್ಯಾಂಡ್ಮಾರ್ಕ್ – ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ
ಮೊ: 97311 33819

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!