ಹೆಚ್‍ಐವಿ/ಏಡ್ಸ್ – ವೈದ್ಯಕೀಯ ರಂಗಕ್ಕೆ ಸವಾಲಾದ ಹೆಮ್ಮಾರಿ !!

ಹೆಚ್‍ಐವಿ/ಏಡ್ಸ್ – ವೈದ್ಯಕೀಯ ರಂಗಕ್ಕೆ ಸವಾಲಾದ ಹೆಮ್ಮಾರಿ. ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.

Aidsಏಡ್ಸ್ ನ್ನು ಪರರ ರೋಗ ಎಂದೇ ಪರಿಗಣಿಸಲಾಗಿದೆ. ಮನಸೋ ಇಚ್ಚೆಯ ಜೀವನಶೈಲಿ ಮತ್ತು ಸ್ವೇಚ್ಚಾಚಾರದ ಮಂದಿಗೆ ಈ ಭಯಾನಕ ರೋಗ ಅಮರಿಕೊಳ್ಳುತ್ತದೆ.ಏಡ್ಸ್ನ್ನು ‘ಪಾಪದ ರೋಗ’ ಎಂದೂ ಸಹ ಪರಿಗಣಿಸಲಾಗಿದೆ. ಈ ರೋಗದ ಪ್ರಭಾವದಿಂದ ರೋಗಿಗಳು ತಾರತಮ್ಯ, ತಾತ್ಸಾರ ಮತ್ತು ನಿರಾಕರಣೆಗೆ ಒಳಗಾಗುತ್ತಾರೆ. AIDS ಅಂದರೆ Acquired Immuno Deficiency Syndrome (ಅಕ್ವೈರ್ಡ್ ಇಮ್ಯೂನೋ ಡಿಫಿಸಿಯೆನ್ಸಿ ಸಿಂಡೋಮ್). ಇದು HIV – Human Immunodeficiency Virus (ಹೆಚ್‍ಐವಿ-ಹ್ಯೂಮನ್ ಇಮ್ಯೂನೋ ಡಿಫಿಸಿಯೆನ್ಸಿ ವೈರಸ್) ಎಂಬ ಸೂಕ್ಷ್ಮಜೀವಿಯಿಂದ ಕಂಡುಬರುತ್ತದ.

ಈ ವೈರಾಣು ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಹಾನಿಗೊಳಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಒಮ್ಮೆ ಕುಂಠಿತಗೊಂಡರೆ, ಬ್ಯಾಕ್ಟೀರಿಯಾ, ಫಂಗೈ, ವೈರಸ್‍ನಚಿಥ ವಿವಿಧ ಸೂಕ್ಷ್ಮ ಜೀವಿಗಳು ಹಾಗೂ ಇತರ ಪರಾವಲಂಬಿಗಳು ದೇಹದ ಮೇಲೆ ದಾಳಿ ನಡೆಸಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ರೋಗ ಪ್ರತಿರೋಧಕ ಕುಂಠಿತಗೊಳ್ಳುವುದರಿಂದ ಹಾಗೂ ಬಹು ಸೋಂಕುಗಳು ತಗಲುವುದರಿಂದ ಕ್ಯಾನ್ಸರ್ ರೋಗ ಸಹ ಅಮರಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೆಚ್‍ಐವಿ/ಏಡ್ಸ್ ಅಂಕಿಅಂಶಗಳು

ವಿಶ್ವಾದ್ಯಂತ 66 ದಶಲಕ್ಷಕ್ಕೂ ಅಧಿಕ ಮಂದಿ ಹೆಚ್‍ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಮಾರಕ ರೋಗಕ್ಕೆ ಈಗಾಗಲೇ 26 ದಶಲಕ್ಷ ಜನರು ಬಲಿಯಾಗಿದ್ದಾರೆ. ಜಾಗತಿಕವಾಗಿ ಕಾಡುತ್ತಿರುವ ಈ ಮಹಾಮಾರಿ ಉಪಟಳದ ಬಗ್ಗೆ ವಿಶ್ವಸಂಸ್ಥೆಯ ವರದಿ ಅಂದಾಜು ಮಾಡಿರುವಂತೆ ಭಾರತವು 5.7 ದಶಲಕ್ಷ ಹೆಚ್‍ಐವಿ/ಏಡ್ಸ್ ಸೋಂಕಿತ ವ್ಯಕ್ತಿಗಳೊಂದಿಗೆ ದಕ್ಷಿಣ ಆಫ್ರಿಕಾವನ್ನೂ ಹಿಂದಿಕ್ಕಿದೆ. ದಕ್ಷಿಣ ಆಫ್ರಿಕಾದಲ್ಲಿ 5.5 ದಶಲಕ್ಷದಷ್ಟು ಹೆಚ್‍ಐವಿ/ಏಡ್ಸ್ ಸೋಂಕಿತ ಜನರಿದ್ದಾರೆ. ಈ ಮಾರಕ ರೋಗದಿಂದ ಪುರುಷರು ಮತ್ತು ಮಹಿಳೆಯರು ಸಮನಾಗಿ ಬಳಲುತ್ತಾರೆ. ಈ ಹೆಮ್ಮಾರಿ ಬಹುತೇಕ 15-49 ವರ್ಷದ ವಯೋಮಾನದವರನ್ನು ಕಾಡುತ್ತದೆ.

ರೋಗ ಲಕ್ಷಣಗಳು ಮತ್ತು ಚಿಹ್ನೆಗಳು

ಹೆಚ್‍ಐವಿ ಮತ್ತು ಏಡ್ಸ್ ರೋಗ ಲಕ್ಷಣಗಳು ಸೋಂಕಿನ ತೀವ್ರತೆ ಆಧಾರದ ಮೇಲೆ ಭಿನ್ನ ವಿಭಿನ್ನವಾಗಿರುತ್ತದೆ. ಆರಂಭಿಕ ಹಂತದಲ್ಲಿ ವ್ಯಕ್ತಿಯಲ್ಲಿ ಇದರ ಯಾವುದೇ ಲಕ್ಷಣ ಮತ್ತು ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಫ್ಲೂನಂಥ ರೋಗದ ಸೋಂಕಿನ ಹಲವಾರು ವಾರಗಳ ಬಳಿಕ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಜ್ವರ, ತೂಕ ಇಳಿಕೆ, ತಲೆನೋವು, ಗಂಟಲು ಹಣ್ಣು, ಲಂಫ್ ಗಂತಿಯ ಊತ (ಇದು ಹೆಚ್‍ಐವಿ ಸೋಂಕಿನ ಮೊದಲ ಲಕ್ಷಣಗಳಲ್ಲಿ ಒ0ದು) ಈ ರೀತಿಯ ಗುಣ ಲಕ್ಷಣಗಳ ಚಿಹ್ನೆಗಳು ಗೋಚರಿಸುತ್ತವೆ. ಅತಿಸಾರ ಮತ್ತು ದದ್ದು ಸಹ ಇತರೆ ಸಾಮಾನ್ಯ ರೋಗಗಳ0ತೆ ಕಂಡುಬರುತ್ತವೆ. ಹೆಚ್‍ಐವಿಯ ಕೊನೆ ಹಂತದಲ್ಲಿ ಈ ಕೆಳಕಂಡ ಗಂಭೀರ ಸ್ವರೂಪದ ಚಿಹ್ನೆ ಮತ್ತು ಲಕ್ಷ್ಷಣಗಳು ಗೋಚರಿಸುತ್ತವೆ. ಅವುಗಳೆಂದರೆ :

  • ನ್ಯೂಮೋನಿಯಾ
  • ಮುಂದುವರೆದ, ವಿವರಿಸಲಾಗದ ಖಿನ್ನತೆ
  • ರಾತ್ರಿ ವೇಳೆ ಧಾರಾಕಾರ ಬೆವರು
  • ಹಲವು ವಾರಗಳ ಕಾಲ ಚಳಿ ಜ್ವರ ಅಥವಾ 100 ಡಿಗ್ರಿ ಫ್ಯಾರೆನ್‍ಹೀಟ್‍ಗಿಂತ ಅಧಿಕ ತಾಪಮಾನದ ಜ್ವರ
  • ದೀರ್ಘಕಾಲ ಅತಿಸಾರ
  • ನಿರಂತರ ತಲೆನೋವು

ಹೆಚ್‍ಐವಿ ಪಾಸಿಟಿವ್ ಇರುವ ಮಕ್ಕಳಲ್ಲಿ ತೂಕ ವೃದ್ಧಿ ವಿಫಲವಾಗಿರುತ್ತದೆ ಮತ್ತು ಸಾಮಾನ್ಯ ಬೆಳವಣಿಗೆ ಕುಂಠಿತವಾಗಿರುತ್ತದೆ. ರೋಗ ಮುಂದುವರೆದಂತೆ ನಡೆದಾಡಲು ಕಷ್ಟವಾಗುತ್ತದೆ. ಮಾನಸಿಕ ಬೆಳವಣಿಕೆ ವಿಳಂವಾಗುತ್ತದೆ. ಕಿವಿ ಸೋಂಕು, ನ್ಯೂಮೋನಿಯಾ ಮತ್ತು ದಢಾರ ಇತ್ಯಾದಿಯಂಥ ಬಾಲ್ಯದ ರೋಗಗಳು ಕಾಣಿಸಿಕೊಳ್ಳುತ್ತವೆ.

ವೈರಸ್ ಹರಡುವಿಕೆ

ಒಮ್ಮೆ ಹೆಚ್‍ಐವಿ ವೈರಸ್ ದೇಹವನ್ನು ಹೊಕ್ಕರೆ ಅದರ ಮುಖ್ಯ ಗುರಿ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ. ನಾರು ಗಂತಿಯಲ್ಲಿ ವೈರಾಣುಗಳು ದ್ವಿಗುಣಗೊಳ್ಳುತ್ತಾ ಸಿಡಿ4 ಲಿಂಫೋಸೈಟ್ಸ್ ರೋಗ ಪ್ರತಿರೋಧಕ ವ್ಯವಸ್ಥೆಯಾದ ಹೆಲ್ಫರ್ ಟಿ ಕೋಶಗಳನ್ನು ನಾಶಗೊಳಿಸುತ್ತದೆ. ಹೆಚ್‍ಐವಿ ಸೋಂಕು ಹಲವಾರು ಮಾರ್ಗಗಳ ಮೂಲಕ ಹರಡುತ್ತವೆ, ಅವುಗಳೆಂದರೆ:

1. ಲೈಂಗಿಕವಾಗಿ ಹರಡುವಿಕೆ: ಸೋಂಕು ಇರುವ ಸಂಗಾತಿ ಜೊತೆ ಯೋನಿ, ಗುದ ಮತ್ತು ಮೌಖಿಕ ಲೈಂಗಿಕ ಕ್ರಿಯೆ ನಡೆಸುವ ಮಂದಿಯಲ್ಲಿ ಇದು ಹರಡುತ್ತದೆ. ಈಗಾಗಲೇ ಯಾವುದೇ ವ್ಯಕ್ತಿ ಬೇರೆ ಲೈಂಗಿಕವಾಗಿ ಹರಡುವ ರೋಗವನ್ನು ಹೊಂದಿದ್ದರೆ, ಆತ/ಆಕೆಗೆ ಹೆಚ್‍ಐವಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

2. ಸೋಂಕು ರಕ್ತದ ಮೂಲಕ ಹರಡುವಿಕೆ: ಕೆಲವು ಪ್ರಕರಣಗಳಲ್ಲಿ ರಕ್ತದ ಮೂಲಕ ವೈರಾಣುಗಳು ಹರಡುತ್ತವೆ. ರಕ್ತ ಪರಿಚಲನೆಯಲ್ಲಿ ಇಡೀ ರಕ್ತ, ಪ್ಯಾಕ್ ಮಾಡಿದ ರಕ್ತ ಕೋಶಗಳು, ತಾಜಾ ಶೈಥೀಕರಿಸಿದ ಪ್ಲಾಸ್ಮಾ ಹಾಗೂ ರಕ್ತ ಕಣಗಳು ಸೇರಿದಂತೆ ರಕ್ತ ಉತ್ಪನ್ನಗಳಿಂದ ಸೋಂಕು ಹಬ್ಬುತ್ತವೆ.

3. ಬಳಸಿದ ಸೂಜಿ ಮೂಲಕ ಹರಡುವಿಕೆ: ಸೋಂಕು ರಕ್ತದೊಂದಿಗೆ ಕಲುಷಿತಗೊಂಡ ಶುಚಿತ್ವವಿಲ್ಲದ ಸೂಜಿಗಳು, ದಂತ ಮತ್ತು ಶಸ್ತ್ರಕ್ರಿಯೆ ಉಪಕರಣಗಳ ಮೂಲಕ ಹೆಚ್‍ಐವಿ ಸುಲಭವಾಗಿ ಹರಡುತ್ತದೆ.

4. ತಾಯಿಯಿಂದ ಮಗುವಿಗೆ: ಪ್ರತಿ ವರ್ಷ ಸುಮಾರು 7,00,000 ಶಿಶುಗಳು ತಾಯಿಯ ಗರ್ಭಧಾರಣೆ ಸಂದರ್ಭದಲ್ಲಿ ಅಥವಾ ಸ್ತನಪಾನದ ಮೂಲಕ ಹೆಚ್‍ಐವಿ ಸೋಂಕಿಗೆ ಒಳಗಾಗುತ್ತವೆ.

ಹೆಚ್‍ಐವಿ ಸೋಂಕು ಹರಡುವ ಬಗ್ಗೆ ಇರುವ ತಪ್ಪು ಕಲ್ಪನೆಗಳು

ಈ ಕೆಳಕಂಡ ಸಂಪರ್ಕಗಳ ಮೂಲಕ ಏಡ್ಸ್ ರೋಗಿಯಿ0ದ ಹೆಚ್‍ಐವಿ ಸೋಂಕು ಉಂಟಾಗದು :

1. ಆಲಿಂಗನ, ನೃತ್ಯ ಅಥವಾ ಹಸ್ತ ಲಾಘವ.

2. ಬೆವರು ಅಥವಾ ಕಣ್ಣೀರಿನೊಂದಿಗಿನ ಸಂಪರ್ಕ.

3. ಅಹಾರ, ಪಾತ್ರೆಗಳು, ಟವಲ್‍ಗಳು ಅಥವಾ ಹಾಸಿಗೆ, ಈಜುಕೋಳ, ಫೋನ್ ಅಥವಾ ಶೌಚಾಲಯ.

4. ತಿಗಣೆಗಳು ಅಥವಾ ಸೊಳ್ಳೆಗಳು ಕಚ್ಚುವುದರಿಂದ

5. ಏಡ್ಸ್ ರೋಗಿಗೆ ಚುಂಬಿಸುವುದರಿಂದ. ಆದಾಗ್ಯೂ ಹೆಚ್‍ಐವಿ ಕೆಲವೊಮ್ಮೆ ಎಂಜಲಿನಲ್ಲಿ ಕಂಡುಬಂದರೂ, ಇದರ ತೀವ್ರತೆ ತುಂಬಾ ಕಡಿಮೆ ಇರುತ್ತದೆ. ಇದರೊಂದಿಗೆ, ಎಂಜಲು ಅಥವಾ ಸಲೈವಾದಲ್ಲಿರುವ ನೈಸರ್ಗಿಕ ವಸ್ತುಗಳು ವೈರಾಣು ಹರಡುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಸಂಭವಾಂಶಗಳು

1. ಯಾರಿಗಾದರೂ, ಎಲ್ಲಿ ಬೇಕಾದರೂ, ಯಾವುದೇ ವರ್ಚಸ್ಸು,  ಜನಾಂಗ, ಲಿಂಗದವರಿಗೂ ಹೆಚ್‍ಐವಿ ಸೋಂಕು ತಗುಲಬಹುದು. ಆದರೆ, ಈ ಕೆಳಕಂಡ ಮಂದಿಯಲ್ಲಿ ಹೆಚ್‍ಐವಿ/ಏಡ್ಸ್ ಗಂಡಾಂತರ ಅಧಿಕವಾಗಿ ಕಂಡುಬರುತ್ತದೆ.

2. ಬಹು ಸಂಗಾತಿಗಳೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವ ಮಂದಿಯಲ್ಲಿ.

3. ಸಿಪಿಲಿಸ್, ಹರ್ಪಿಸ್, ಚ್ಲಾಮೈಡಿಯಾ, ಗೊನ್ರೆರಿಯಾ ಅಥವಾ ಬ್ಯಾಕ್ಟಿರಿಯಲ್ ವಾಗಿನೊಸಿಸ್‍ನಚಿಥ ಲೈಂಗಿಕವಾಗಿ ಹರಡುವ ರೋಗವನ್ನು ಹೊಂದಿದ್ದರೆ.

ರೋಗ ನಿರ್ಧಾರ

ಹೆಚ್‍ಐವಿ ಸೋಂಕನ್ನು ಸಾಮಾನ್ಯವಾಗಿ ಎಂಜೈಮ್-ಲಿಂಠಿï್ಡ ಇಮ್ಯೂನೋ ಸೊರ್‍ಬೆಚಿಟ್ ಆಸ್ಸೆ (ಇಎಲ್‍ಐಎಸ್‍ಎ-ಎಲಿಸಾ) ಪರೀಕ್ಷೆ ಮೂಲಕ ನಿರ್ಧರಿಸಲಾಗುತ್ತದೆ. ವೈರಸ್ ಇರುವುದನ್ನು ತಿಳಿದುಕೊಳ್ಳಲು ವೆಸ್ಟರ್ನ್ ಬ್ಲಾಟ್ ಟೆಸ್ಟ್ ಎಂಬ ಪರೀಕ್ಷೆ ಮಾಡಲಾಗುತ್ತದೆ. ಈ ಟೆಸ್ಟ್ ಸ್ಯಾಂಪಲ್‍ಗಳಿಗಾಗಿ ರಕ್ತ, ಮೂತ್ರ, ಎಂಜಲು ಅಥವಾ ಬುಕಲ್ ಸ್ವಾಬ್ ಮಾದರಿಗಳನ್ನು ಪಡೆಯಲಾಗುತ್ತದೆ. ಈ ಸಿಡಿ 4 ಕೋಶವು ಕ್ಷಟಿಂಗ್ ಮಾಡುವುದರಿಂದ ಹೆಚ್‍ಐವಿ ಸೋಂಕು ದೃಢಪಡುತ್ತದೆ.

ಚಿಕಿತ್ಸೆ

ಯಾವುದೇ ಚಿಕಿತ್ಸೆಗೆ ರೋಗಿಯು ಪ್ರತಿಕ್ರಿಯಿಸುವುದನ್ನು ರಕ್ತದಲ್ಲಿನ ಹೆಚ್‍ಐವಿ (ವೈರಲ್ ಲೋಡ್) ಮಟ್ಟಗಳಿಂದ ಮಾಪನ ಮಾಡಲಾಗುತ್ತದೆ. ಜೀವನಚಕ್ರದ ವಿವಿಧ ಹಂತಗಳಲ್ಲಿ ಹೆಚ್‍ಐವಿ ಬೆಳವಣಿಗೆ ಮತ್ತು ಮರುಕಳುಹಿಸುವುದನ್ನು ತಡೆಗಟ್ಟಲು ಆಚಿಟಿ ರಿಟ್ರೋವೈರಲ್ ಔಷಧಿಗಳನ್ನು ನಿಡಲಾಗುತ್ತದೆ.

ತಡೆಗಟ್ಟುವಿಕೆ

HIV_Ghantiಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ರಕ್ತ, ವೀರ್ಯ ಅಥವಾ ಯೋನಿ ಸ್ರಾವ, ಎದೆ ಹಾಲು ಇತ್ಯಾದಿಗಳಿಂದ ಸೋಂಕುಗಳಿಗೆ ಒಳಗಾಗುವನ್ನು ತಪ್ಪಿಸುವ ಮೂಲಕ ಹಾಗೂ ಹೆಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಮೂಲಕ ಈ ಹೆಮ್ಮಾರಿಯನ್ನು ತಡೆಗಟ್ಟಬಹುದಾಗಿದೆ.

ವಿಶ್ವ ಏಡ್ಸ್ ದಿನವನ್ನು ಮೊದಲು 1987ರಲ್ಲಿ ಆಚರಣೆಗಾಗಿ ಜಾರಿಗೆ ತರಲಾಯಿತು. ಸ್ವಿಟ್ಜರ್‍ಲೆಂಡ್‍ನ ಜಿನಿವಾದ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಏಡ್ಸ್ ಕುರಿತ ಜಾಗತಿಕ ಕಾರ್ಯಕ್ರಮಕ್ಕಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ನೇಮಕಗೊಂಡಿದ್ದ ಜೇಮ್ಸ್ ಡಬ್ಲ್ಯು. ಬನ್ ಮತ್ತು ಥಾಮಸ್ ನೆಟ್ಟರ್ ಅವರು ಏಡ್ಸ್ ದಿನವನ್ನು ಆಚರಣೆಗೆ ತಂದರು.ಅದರ ಪ್ರಕಾರವಾಗಿ 1ನೇ ಡಿಸೆಂಬರ್ 1988ರಿಂದ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಉದ್ದೇಶವೆಂದರೆ ಎಚ್‍ಐವಿ/ಏಡ್ಸ್ ಬಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವುದು. ಮಾಹಿತಿ, ಶಿಕ್ಷಣ ಮತ್ತು ಆಪ್ತ ಸಮಾಲೋಚನೆ ಚಟುವಟಿಕೆಗಳೊಂದಿಗೆ ವಿಶ್ವ ಏಡ್ಸ್ ದಿನದಂದು ವೈದ್ಯರುಗಳು, ಎನ್‍ಜಿಓಗಳು ಮತ್ತು ಸಾಮಾಜಿಕ ಕಾರ್ಯಕರ್ತರ ನೆರವಿನ ಮೂಲಕ ಶಾಲಾ ಮಕ್ಕಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು, ರೋಡ್ ಶೋಗಳು, ವಿಚಾರಸಂಕಿರಣ/ವಿಚಾರಗೋಷ್ಠಿಗಳು, ಸಭೆ-ಸಮಾರಂಭಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಮಾರಕ ರೋಗದ ಬಗ್ಗೆ ಅರಿವು-ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇಂಥ ಚಟುವಟಿಕೆಗಳು ಜನರಲ್ಲಿರುವ ಆತಂಕವನ್ನು ದೂರ ಮಾಡಲು ಸಹಕಾರಿ. ಇವು ರೋಗಪೀಡಿತರು ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡಲು ಸಾಧ್ಯವಾಗುವುದಲ್ಲದೇ, ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಇದೇ ರೀತಿಯ ಪ್ರಕ್ರಿಯೆಗೆ ಮುಂದೆ ಬರಲು ಉತ್ತೇಜನ ನೀಡುತ್ತದೆ. ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್‍ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ರಕ್ತ, ವೀರ್ಯ ಅಥವಾ ಯೋನಿ ಸ್ರಾವ, ಎದೆ ಹಾಲು ಇತ್ಯಾದಿಗಳಿಂದ ಸೋಂಕುಗಳಿಗೆ ಒಳಗಾಗುವನ್ನು ತಪ್ಪಿಸುವ ಮೂಲಕ ಹಾಗೂ ಹೆಚ್‍ಐವಿ/ಏಡ್ಸ್ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಮೂಲಕ ಈ ಹೆಮ್ಮಾರಿಯನ್ನು ತಡೆಗಟ್ಟಬಹುದಾಗಿದೆ.

ರೋಗ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

  • ನೀವು ಮತ್ತು ಇತರರು ಸುಶಿಕ್ಷಿತರಾಗುವಿಕೆ
  • ಯಾವುದೇ ಲೈಂಗಿಕ ಸಂಗಾತಿಯ ಹೆಚ್‍ಐವಿ ಸ್ಥಿತಿ ಬಗ್ಗೆ ತಿಳಿದುಕೊಳ್ಳುವಿಕೆ
  • ಕಾಂಡೋಮ್ ಬಳಕೆ.
  • ಸ್ವಚ್ಚ ಸ್ಟಿರಿಲೈಸ್ ಆದ ಸೂಜಿಗಳ ಬಳಕೆ.
  • ಆಗಾಗ ತಪಾಸಣೆಗೆ ಒಳಗಾಗುವಿಕೆ.

ಹೆಚ್‍ಐವಿ/ಏಡ್ಸ್ ಹೆಮ್ಮಾರಿಯನ್ನು ಮಟ್ಟ ಹಾಕಲು ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳದ್ದಿದ್ದರೆ, ದೊಡ್ಡ ಮಟ್ಟದ ದುರಂತವಾಗುತ್ತದೆ. ಹೆಚ್‍ಐವಿ/ಏಡ್ಸ್ ದೇಶಕ್ಕೆ ರಾಜಕೀಯ, ಆರ್ಥಿಕ, ಸಾರ್ವಜನಿಕ ಆರೋಗ್ಯ, ಸಾಮಾಜಿಕ ಮತ್ತು ವ್ಶೆಜ್ಞಾನಿಕ ಸವಾಲುಗಳನ್ನು ತಂದೊಡ್ಡಿದೆ. ಕೇವಲ ಸೋಂಕಿನಿಂದ ರಕ್ಷಿಸುವುದು ಮಾತ್ರವಲ್ಲದೇ ಹೆಚ್‍ಐವಿ/ಏಡ್ಸ್ ಬೆಳವಣಿಗೆಯನ್ನು ಹತ್ತಿಕ್ಕಲು ಗರಿಷ್ಠ ಮಟ್ಟದಲ್ಲಿ ಸಾಧ್ಯವಾದಷ್ಟೂ ಅತ್ಯುತ್ತಮ ವೈದ್ಯಕೀಯ ಆರೈಕೆ ದೊರೆಯುವಂತೆ ಮಾಡಬೇಕಿದೆ.

ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!