ಹದಿ ಹರೆಯ ಮತ್ತು ಅರೋಗ್ಯ – ಹುಚ್ಚು ಕೊಡಿ ವಯಸು ಅದು ಹದಿನಾರರ ವಯಸು

ಹದಿ ಹರೆಯ ಮತ್ತು ಅರೋಗ್ಯ ಸಾಮಾಜಿಕ ಹಾಗು ಮಾನಸಿಕ ದೃಷ್ಟಿಯಿಂದ ಬೇರೆ ಯಾಗಿರುತ್ತದೆ.ಯುವಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಅತಿ ಅವಶ್ಯಕ. ಹದಿಹರೆಯದವರು ತಮ್ಮ ಅರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದಿನ ದಿನದ ಬಹು ಮುಖ್ಯವಾದ ಅವಶ್ಯಕತೆಯಾಗಿದೆ.

youth-day-ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಯುವ ಜನರ ದಿನವನ್ನಾಗಿ ಆಚರಿಸಲಾಗುತ್ತದೆ. ಇದರಿಂದ ಯುವಜನರ ಮಾತು, ಕೃತಿ ಕಾರ್ಯಗಳಿಗೆ ಹೆಚ್ಚಿನ ಮನ್ನಣೆ ದೊರೆತು ಅವರ ಸಮಾಜದ ಮೇಲ್ಮುಖಕ್ಕೆ ಬರಲು ಸಹಾ ಯಕವಾಗುತ್ತದೆ. ಈ ವರ್ಷದ ವಿಷಯ ” ಜಾಗತಿಕ ಬದಲಾವಣೆಗಾಗಿ ಯುವಜನರ ಪಾಲ್ಗೊಳ್ಳುವಿಕೆ”. ಇಂದಿನ ಪರಿಸ್ಥಿತಿಯಲ್ಲಿ ಯುವಜನರು ತಮ್ಮ ಕಾರ್ಯಗಳಿಂದ ಜಗತ್ತನ್ನು ಒಳ್ಳೆಯ ಪರಿಸ್ಥಿತಿಯ ಕಡೆ ಕೊಂಡೊಯ್ಯಲು ಬಹಳ ಅವಕಾಶಗಳಿವೆ.

ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ 10 ರಿಂದ 19 ವಯಸ್ಸಿನವರನ್ನು ಹದಿಹರೆಯ ಎಂದು ಗುರುತಿಸಲಾಗುತ್ತದೆ. ಈ ವಯಸ್ಸಿನಲ್ಲಿ ದೈಹಿಕ, ಬೌದ್ದಿಕ, ಸಾಮಾಜಿಕ, ಮಾನಸಿಕ ಹಾಗು ಜನನೆನ್ದ್ರಿಯಗಳ ಬೆಳವಣಿಗೆ ದೊಡ್ಡ ಮಟ್ಟದಲ್ಲಿ ಆಗುತ್ತದೆ. ಹದಿಹರೆಯ ಒಂದು ಬೇರೆಯದೇ ಗುಂಪಾಗಿದ್ದು ಅವರ ಅವಶ್ಯಕತೆಗಳು, ಬೇಡಿಕೆಗಳು ಆರೋಗ್ಯದ, ಸಾಮಾಜಿಕ ಹಾಗು ಮಾನಸಿಕ ದೃಷ್ಟಿಯಿಂದ ಬೇರೆ ಯಾಗಿರುತ್ತದೆ. ನಮ್ಮ ದೇಶದಲ್ಲಿ ಇವರ ಜನಸಂಖ್ಯೆ 21 ಪ್ರತಿಶತ ಇದೆ. ಈ ಕಾರಣಗಳಿಂದಾಗಿ ಅವರನ್ನು ಬೇರೆಯ ಗುಂಪಾಗಿ ಪರಿಗಣಿಸಿ ಅವರಿಗೆ ಅವಶ್ಯಕವಿರುವ ಸೌಲಭ್ಯಗಳನ್ನು ನೀಡುವುದು ಬಹಳ ಅವಶ್ಯಕವಾಗಿದೆ

ಹದಿ ಹರೆಯದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳು:

1. ಪೌಷ್ಟಿಕಾಂಶದ ಸಮಸ್ಯೆಗಳು: ಹದಿಹರೆಯರು ಹಲವಾರು ಕಾರಣಗಳಿಂದಾಗಿ ಪೌಷ್ಟಿಕಾಂಶದ ಸಮಸ್ಯೆಗಳಿಗೆ ಈಡಾಗುತ್ತಾರೆ. ಪೌಷ್ಟಿಕಾಂಶ ಕಡಿಮೆಯಾದರೆ , ಅಪೌಷ್ಟಿಕತೆ ಮತ್ತು ರಕ್ತ ಹೀನತೆಗೆ ಈಡಾಗುತ್ತಾರೆ. ಪೌಷ್ಟಿಕಾಂಶ ಜಾಸ್ತಿಯಾದರೆ , ಬೊಜ್ಜು ಮತ್ತು ಸ್ತೂಲಕಾಯ ಅವರನ್ನು ಕಾಡುತ್ತದೆ.

2. ಮಾನಸಿಕ ಆರೋಗ್ಯದ ಸಮಸ್ಯೆಗಳು: ಹದಿಹರೆಯರಲ್ಲಿ ಶಾಲಾ ಹಾಜರಾತಿಯಲ್ಲಿ ಸಮಸ್ಯೆ, ಸ್ವತಂತ್ರವಾಗಿ ನಿರ್ದರ ಕೈಗೊಳ್ಳದೆ ಇರುವುದು, ಮದುವೆಗೆ ಮುಂಚೆ ಸಂಭೋಗ, ದೈಹಿಕ ಹಾಗು ಲೈಂಗಿಕ ಶೋಷಣೆ ಹಾಗು ಇನ್ನಿತರ ಮಾನಸಿಕ ಸಮಸ್ಯೆಗನ್ನು ಕಾಣಬಹುದು.

3. ಅಪಘಾತಗಳು ಮತ್ತು ಹಿಂಸೆ: ಶೇಕಡ 20% ಅಪಘಾತಗಳು 5 ರಿಂದ 25 ವಯಸ್ಸಿನವರಲ್ಲಿ ಆಗುತ್ತದೆ. 75% ಹದಿಹರೆಯರು ರಸ್ತೆ ನಿಯಮಗಳಿಗೆ ಬದ್ದ ರಾಗಿ ಗಾಡಿಗಳನ್ನು ಓಡಿಸುವುದಿಲ್ಲ. ಗಾಡಿ ಓಡಿಸುವಾಗ ಅಪಾಯವನ್ನು ಬರ ಮಾಡಿಕೊಂಡು ಅಪಘಾತಗನ್ನು ಮಾಡಿಕೊಳ್ಳುವ ಪ್ರವೃತ್ತಿ ಹದಿಹರೆಯದವರಲ್ಲಿ ತುಂಬಾ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಕಾರಣಗಳಿಂದಾಗಿ ಅವರಲ್ಲಿ ರಸ್ತೆ ಅಪಘಾತಗಳು ಬಹಲ್ಲ ಸಾಮಾನ್ಯವಾಗಿವೆ. ಹದಿಹರೆಯದವರಲ್ಲಿ ಲೈಂಗಿಕ ಶೋಷಣೆ ಬಹಳವಾಗಿ ಕಂಡುಬರುತ್ತದೆ. ಇದರಿಂದ ಅವರ ದೈಹಿಕ, ಸಾಮಾಜಿಕ ಹಾಗು ಮಾನಸಿಕ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮವುಂಟಾಗುತ್ತದೆ.

4. ಸಂತಾನೋತ್ಪತ್ತಿ ಹಾಗು ಲೈಂಗಿಕತೆ ಸಮಸ್ಯೆಗಳು: ಹದಿಹರೆಯರಲ್ಲಿ ಸಂತಾನೋತ್ಪತ್ತಿ ಹಾಗು ಲೈಂಗಿಕ ಆರೋಗ್ಯದ ಬಗ್ಗೆ ತಿಳಿವಳಿಕೆ ಕಮ್ಮಿ ಇದೆ. HIV ಮತ್ತು ಬೇರೆ ಲೈಂಗಿಕವಾಗಿ ಹರಡುವ ಸೋಂಕು ಹಾಗು ರೋಗಗಳ ಸಮಗ್ರ ಮಾಹಿತಿಯ ಕೊರತೆಯಿದೆ. ಇದರಿಂದ ಜನನೇಂದ್ರಿಯಗಳ ಸೋಂಕು/ರೋಗ, ಬಂಜೆತನ, ಕ್ಯಾನ್ಸರ್ / ಅರ್ಬುದ ರೋಗ ಬರುತ್ತವೆ.

youth-problems-in-india-5. ವ್ಯಸನಗಳು: ಹದಿಹರೆಯದಲ್ಲಿ ಕಂಡು ಬರುವ ಇನ್ನೊಂದು ಸಾಮಾನ್ಯ ತೊಂದರೆ ಎಂದರೆ ಬೀಡಿ , ಸಿಗರೇಟ್, ಮದ್ಯ ಹಾಗು ಬೇರೆ ಮಾದಕ ವಸ್ತುಗಳ ವ್ಯಸನಗಳು. ಈ ವಯಸ್ಸಿನಲ್ಲಿ ವ್ಯಕ್ತಿತ್ವ ಅಪಕ್ವವಾಗಿದ್ದು ಪಕ್ವಗೊಳ್ಳುವ ನಿಟ್ಟಿನಲ್ಲಿರುತ್ತದೆ. ಎದರು ಮಾತನಾಡುವ ಪ್ರವೃತ್ತಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಹದಿಹರೆಯದವರು ಇದ್ದಲ್ಲಿ ಈ ಮೇಲೆ ಉಲ್ಲೇಖಿಸಿರುವ ಎಲ್ಲ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರೊಂದಿಗೆ ವ್ಯವಹರಿಸುವುದು ಉಚಿತ.

ಹದಿಹರೆಯದರಿಗೆ ಇರುವ ಸೌಲಭ್ಯಗಳು:

1. ಮೇಲೆ ಕಂಡ ಹಾಗೆ ಹದಿಹರೆಯದವರಿಗೆ ದೈಹಿಕವಲ್ಲದೆ, ಮಾನಸಿಕ ಸಮಸ್ಯೆಗೆಳೂ ಸಾಮಾನ್ಯ ವಾಗಿ ಕಾಡುವುದರಿಂದ, ಅವರಿಗೆ ಸಮಗ್ರವಾದ ಅರೋಗ್ಯ ಸೌಲಭ್ಯಗಳ ಅವಶ್ಯಕತೆ ಇರುತ್ತದೆ. ಪ್ರತಿಯೊಬ್ಬ ಅರೋಗ್ಯ ಪರಿಚಾಲಕರು ಇದನ್ನು ಮನಗೊಂಡು, ಹದಿಹರೆಯದವರಿಗೆ ಅರೋಗ್ಯ ಸೌಲಭ್ಯಗಳನ್ನು ನೀಡುವುದು ಒಳಿತು.

2. ಅವರಿಗೆ ಇರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಅತಿ ಅವಶ್ಯಕ.

3. ಆಹಾರ ಹಾಗು ಆರೋಗ್ಯದ ಬಗ್ಗೆ ಸರಿಯಾದ ಮಾರ್ಗದರ್ಶನ , ತಿಳಿವಳಿಕೆ ನೀಡುವುದು ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಆಗಬೇಕು.

4. ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಮಧ್ಯಾಹ್ನ ಸ್ನೇಹ ಎಂಬ ಹೆಸರಿನಲ್ಲಿ ಹದಿಹರೆಯದರಿಗೆ ಅವಶ್ಯವಿರುವ ದೈಹಿಕ, ಸಾಮಾಜಿಕ ಹಾಗು ಮಾನಸಿಕ ಆರೋಗ್ಯವನ್ನು ಒಳಗೊಂಡ ಸಮಗ್ರ ಅರೋಗ್ಯ ಸೇವೆಯನ್ನು ನೀಡಲಾಗುತ್ತದೆ.

5. ಇದರ ಸೌಲಭ್ಯ ಪಡೆದು , ಹದಿಹರೆಯದವರು ತಮ್ಮ ಅರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದಿನ ದಿನದ ಬಹು ಮುಖ್ಯವಾದ ಅವಶ್ಯಕತೆಯಾಗಿದೆ.

Dharaneesha-prasad ಡಾ. ಧರಣೀಶ್ ಪ್ರಸಾದ್ ಅಸೋಸಿಯೇಟ್‌ ಪ್ರೊಫೆಸರ್‌ ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್ ಶ್ರಿ ಸಿದ್ದಾರ್ಥ ಇನ್ಸ್ಟಿಟ್ಯೂಟೆಡ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ ಸೆಂಟರ್ ಟಿ ಬೇಗೂರು, ನೆಲಮಂಗಲ, ಬೆಂಗಳೂರು-562123 ಮೊ:9481604483

ಡಾ. ಧರಣೀಶ್ ಪ್ರಸಾದ್
ಅಸೋಸಿಯೇಟ್‌ ಪ್ರೊಫೆಸರ್‌
ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್
ಶ್ರಿ ಸಿದ್ದಾರ್ಥ ಇನ್ಸ್ಟಿಟ್ಯೂಟೆಡ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ ಸೆಂಟರ್
ಟಿ ಬೇಗೂರು, ನೆಲಮಂಗಲ, ಬೆಂಗಳೂರು-562123
ಮೊ:9481604483

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!