ಗುದನಾಳದ ಕ್ಯಾನ್ಸರ್‌- 83 ವಯಸ್ಸಿನ ವ್ಯಕ್ತಿಯನ್ನು ಗುಣಪಡಿಸಿದ ಎಚ್.ಸಿ.ಜಿ

ಗುದನಾಳದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ವೃದ್ಧರಲ್ಲಿ ಹೆಚ್ಚು. ಗುದನಾಳದ ಕ್ಯಾನ್ಸರ್‌ನಿಂದ ಬಳಲುತಿದ್ದ 83 ವಯಸ್ಸಿನ ವ್ಯಕ್ತಿಯನ್ನು ಬೆಂಗಳೂರಿನ ಎಚ್.ಸಿ.ಜಿ. ಆಸ್ಪತ್ರೆ ಗುಣಪಡಿಸಿದೆ. ವಯಸ್ಸು 83 ಆದರೂ ವ್ಯಕ್ತಿ ಎದೆಗುಂದದೆ ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖಗೊಂಡಿದ್ದಾರೆ ಎನ್ನುವುದೆ ಸಂತಸದ ಸಂಗತಿ. 

Rectal cancer/ ಗುದನಾಳದ ಕ್ಯಾನ್ಸರ್‌- 83 ವಯಸ್ಸಿನ ವ್ಯಕ್ತಿಯನ್ನು ಗುಣಪಡಿಸಿದ ಎಚ್.ಸಿ.ಜಿ

ಬೆಂಗಳೂರು : ಜೀವನದ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯು ಆಶ್ಚರ್ಯ ಮತ್ತು ಕೌತುಕತೆಯಿಂದ ಕುಡಿರತ್ತದೆ.  ತನ್ನ ಜೀವನದ ಜೊತೆ ತನ್ನ ಪಾಡಿಗೆ ತಾನು ಜೀವನ ಮಾಡಿಕೊಂಡಿದ್ದ ಮುನಿರಾಜು (ರೋಗಿಯ ಹಿತಸಕ್ತಿಯಿಂದ ಹೆಸರು ಬದಲಾಯಿಸಲಾಗಿದೆ) 83 ವರ್ಷದ ವೃದ್ಧನ ಬಾಳಲ್ಲಿ ಬಂದ ಸಂಗತಿ ಆತನಿಗೆ ಗುದನಾಳದ ಕ್ಯಾನ್ಸರ್ ಇದೆಯೆಂದು ತಿಳಿದದ್ದು. ವಯಸ್ಸು 83 ಆದರೂ ವ್ಯಕ್ತಿ ಎದೆಗುಂದದೆ ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖಗೊಂಡಿದ್ದಾರೆ ಎನ್ನುವುದೆ ಸಂತಸದ ಸಂಗತಿ. ವಯಸ್ಸಿನ ಹುಡುಗರೆ ನೆಗಡಿ, ಕೆಮ್ಮು, ಜ್ವರಕ್ಕೆ, ಎದೆಗುಂದಿ ಹಾಸಿಗೆ ಹಿಡಿಯುವ ಸಂದರ್ಭದಲ್ಲಿ ಮುನಿರಾಜು ಕ್ಯಾನ್ಸರ್ ಸೋಲಿಸಿಯೆ ತಿರುತ್ತೇನೆ  ಎಂದು ಪಣತೊಟ್ಟರು.

ಅಸಲಿಗೆ ಏನಿದು ಗುದನಾಳದ ಕ್ಯಾನ್ಸರ್?

ಈ ರೋಗ ಕರುಳಿನ ಭಾಗದಲ್ಲಿ ಕಾಣಿಸಿಕೊಳ್ಳತ್ತದೆ. ಆಡು ಭಾಷೆಯಲ್ಲಿ ಹೊಟ್ಟೆಯ ಭಾಗವೆಂದು ಕರೆಯಬಹುದು. ಈ ರೋಗ ಬಂದರೆ ಮಲಬದ್ಧತೆ, ತೂಕದಲ್ಲಿ ವ್ಯತ್ಯಾಸ, ಅಜೀರ್ಣ, ಬದಲಾದ ಹೃದಯ ಬಡಿತ, ದೇಹದಲ್ಲಿ ಕಬ್ಬಿಣ ಅಂಶ ಕೊರತೆ ಮತ್ತು ಗುದದ್ವಾರದಿಂದ ರಕ್ತಸ್ರಾವ, ಕರುಳಿನ ಆಡೆತಡೆಗಳು ಉಂಟಾಗುತ್ತವೆ. ಗುದನಾಳದ ಕಾಯಿಲೆಯಿಂದ ಬಳಲುತ್ತಿದ್ದ ಮುನಿರಾಜುನನ್ನು ಎಚ್.ಸಿ.ಜಿ ಆಸ್ಪತ್ರೆ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಕೊಡಲು ಮುಂದಾದರು.

Also Read: Battle against cancer – Early detection and lifestyle changes are crucial.

ಡಾ: ಜಗನ್ನಾಥ್ ದೀಕ್ಷಿತ್, ಸಲಹೆಗಾರರು – ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆ, ಸರ್ಜಿಕಲ್ ಅಂಕೊಲಾಜಿಸ್ಟ್, ಇವರ ಮಾರ್ಗದರ್ಶನದ ಅನುಸಾರ ಮುನಿರಾಜುವನ್ನು ವಿವಿಧ ವೈದ್ಯಕೀಯ ಪರೀಕ್ಷಿಗೆ ಒಳಪಡಿಸಲಾಯಿತು. ನಂತರ ರೋಗಿಯ ಕ್ಯಾನ್ಸರ್‌ನ ಹಂತ ತಿಳಿದು ಆದಕ್ಕೆ ತಕ್ಕ ಚಿಕಿತ್ಸೆ ಕೊಡಬೆಕೆಂದು ವೈದ್ಯರು ಸಲಹೆ ಮಾಡಿದರು. ಇದರ ಅನುಸಾರ ಮುನಿರಾಜುವಿನ ಕರುಳಿನಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಕ್ಯಾನ್ಸರ್ ಪದರವನ್ನು ವಿನೂತನ ರಸಾಯನಶಾಸ್ತ್ರದ ಮೂಲಕ ತೆಗೆದು ಗುಣಮುಖಗೊಳಿಸಿದರು.

ರೋಬೊಟಿಕ್ ಚಿಕಿತ್ಸೆ ಬಳಸಿದ್ದು ರೋಗಿಯ ಆರೋಗ್ಯ ಹಿತಸಕ್ತಿಯಿಂದ ಉತ್ತಮ ಎನ್ನಬಹುದು. ಕಾರಣ ಲಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಹೋಲಿಸಿದರೆ ಇದು ಹೆಚ್ಚು ಪರಿಣಾಮಕಾರಿ ಮತ್ತು ಬೇಗ ಗುಣವಾಗುವಲ್ಲಿ ಸಹಾಯ ಮಾಡುತ್ತದೆ. ಈ ಬಗ್ಗೆ ಮಾತನಾಡಿದ ಡಾ: ಜಗನ್ನಾಥ್ ದೀಕ್ಷಿತ್, ಹೇಳಿದರು “ಗುದನಾಳದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ವೃದ್ಧರಲ್ಲಿ ಹೆಚ್ಚು ಅನ್ನಬಹುದು, ಮುನಿರಾಜುವಿನ ಪ್ರಕರಣ ಹೊಸದಲ್ಲದಿದ್ದರು ಸವಾಲಾಗಿತ್ತು. ಆದರೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಯಶಸ್ವಿಯಾಗಿ ಸರ್ಜರಿ ಮುಗಿಸಿದ್ದು ಕಾಲಕಳೆದಂತೆ ರೋಗಿ ಚೇತರಿಸಿಕೊಂಡು ಮೊದಲಿನಂತಾಗುತ್ತರೆ”.

Also Read: ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7 : ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆಯಲ್ಲ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!