ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು

ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು.ಅಮೆರಿಕ ದೇಶದ ಹೃದ್ರೋಗ ತಜ್ಞರಾದ ಡಾ. ಸ್ಟೀವನ್ ನಿಸೆನ್ “ನಾವು ಜಗತ್ತಿಗೆ ಕೊಬ್ಬು ತಿನ್ನುವುದರಿಂದ ಹೃದ್ರೋಗ ಬರುತ್ತದೆ ಎಂದು 1970 ರಿಂದ ತಪ್ಪು ಮಾಹಿತಿಯನ್ನು ಕೊಟ್ಟಿದ್ದೇವೆ, ಈಗ ಸಮಯ ಬಂದಿದೆ, ನಮ್ಮ ತಪ್ಪನ್ನು ಸರಿಪಡಿಸಬೇಕು” ಎಂದು ಹೇಳಿದ್ದಾರೆ.

ghee ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು50 ವರ್ಷಗಳ ನಂತರ ಅಮೆರಿಕ ದೇಶವು ಒಂದು ಒಳ್ಳೆಯ ವೈದ್ಯಕೀಯ ಸುದ್ದಿಯನ್ನು ಕೊಟ್ಟಿದೆ. 1970 ರಿಂದ ಇವತ್ತಿನವರೆಗೆ ಜನರು ಬೆಣ್ಣೆ, ತುಪ್ಪ, ಹಾಲು, ಮೊಸರು ತಿಂದರೆ, ನಿಮ್ಮ ದೇಹದಲ್ಲಿ ಕೊಬ್ಬು Cholesterol ಹೆಚ್ಚು ಆಗಿ ರಕ್ತನಾಳಗಳಲ್ಲಿ ಸಂಗ್ರಹವಾಗಿ ರಕ್ತ ಸಂಚಾರ ಸ್ಥಗಿತಗೊಂಡು ಹೃದಯ ರೋಗ- ಹೃದಯಾಘಾತವಾಗುತ್ತದೆ ಎಂದು ಬಿಂಬಿಸಿದ್ದರು, ಭಯ ಹುಟ್ಟಿಸಿದ್ದರು. ಬಹಳಷ್ಟು ಜನ ಬೆಣ್ಣೆ ತುಪ್ಪ, ಹಾಲು ಮತ್ತು ಮೊಸರುಗಳನ್ನು ತಿನ್ನುವುದು ಕಡಿಮೆ ಮಾಡಿದ್ದರು.

ಅಮೆರಿಕ ದೇಶದ ಕೃಷಿ ಇಲಾಖೆಯು ಪ್ರತಿ 5 ವರ್ಷಗಳಿಗೊಮ್ಮೆ ಆಹಾರವಸ್ತುಗಳ ಸುರಕ್ಷತೆಯ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಬೆಣ್ಣೆ, ತುಪ್ಪ, ಹಾಲು ಮತ್ತು ಮೊಸರು ಸುರಕ್ಷಿತವಾದ ಆಹಾರ. ಆದ್ದರಿಂದ ನೀವು ಸಂತೋಷವಾಗಿ ಹಾಲು ಮತ್ತು ಮೊಸರನ್ನು ತಿನ್ನಿರಿ ಎಂದು ಹೇಳಿತು. ಅಮೆರಿಕ ದೇಶದ ಹೃದ್ರೋಗ ತಜ್ಞರಾದ ಡಾ. ಸ್ಟೀವನ್ ನಿಸೆನ್ “ನಾವು ಜಗತ್ತಿಗೆ ಕೊಬ್ಬು ತಿನ್ನುವುದರಿಂದ ಹೃದ್ರೋಗ ಬರುತ್ತದೆ ಎಂದು 1970 ರಿಂದ ತಪ್ಪು ಮಾಹಿತಿಯನ್ನು ಕೊಟ್ಟಿದ್ದೇವೆ, ಈಗ ಸಮಯ ಬಂದಿದೆ, ನಮ್ಮ ತಪ್ಪನ್ನು ಸರಿಪಡಿಸಬೇಕು” ಎಂದು ಹೇಳಿದ್ದಾರೆ.

ಯಾವಾಗ ನಾವು ಕೊಬ್ಬು ಹೆಚ್ಚು ಇರುವ ಪದಾರ್ಥಗಳಾದ ಬೆಣ್ಣೆ, ತುಪ್ಪ, ಹಾಲು, ಮೊಸರು, ತತ್ತಿ ಮತ್ತು ಮಾಂಸಗಳನ್ನು ಹೆಚ್ಚು ತಿನ್ನುತ್ತೇವೆ ಆ ದಿವಸಗಳಲ್ಲಿ ನಮ್ಮ ಯಕೃತ್(Liver) ಕಡಿಮೆ ಕೊಬ್ಬನ್ನು ಉತ್ಪಾದಿಸುತ್ತದೆ. ನಾವು ಕೊಬ್ಬನ್ನು ಕಡಿಮೆ ತಿಂದ ದಿವಸಗಳಲ್ಲಿ ನಮ್ಮ ಯಕೃತ್ ಹೆಚ್ಚು ಉತ್ಪಾದಿಸುತ್ತದೆ. ಡಾ. ಜಾರ್ಜ್ ಮಾನ್ – ಪ್ರಾಮಿಂಗ್‍ಹ್ಯಾಮ್ ಹೃದ್ರೋಗ ಸಂಸ್ಥೆಯ ನಿರ್ದೇಶಕರು – “ಒಳ್ಳೆಯ ಕೊಬ್ಬು ಮತ್ತು ಕೆಟ್ಟ ಕೊಬ್ಬು (Good Cholesterol and Bad Cholesterol) ಅಂತ ಇರುವುದಿಲ್ಲ” ಎಂದು ಘೋಷಿಸಿದ್ದಾರೆ. ಇವರ ಪ್ರಕಾರ ಬಹಳಷ್ಟು ಹೃದ್ರೋಗಿಗಳಲ್ಲಿ ರಕ್ತದಲ್ಲಿ ಕೊಬ್ಬು ಸರಿಯಾದ ಪ್ರಮಾಣದಲ್ಲಿರುತ್ತದೆ ಎಂದು ತಿಳಿಸಿರುವರು. ನಮ್ಮ ದೇಹದಲ್ಲಿ ಕೊಬ್ಬಿನಾಂಶವು ರಕ್ತದಲ್ಲಿ ಸರಾಸರಿ 150 ರಿಂದ 250 ಎಂಜಿ/ಡಿಎಲ್ ಇರುತ್ತದೆ.ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು

ನಮ್ಮ ದೇಹವು ಕೊಬ್ಬನ್ನು ತಾನೇ ತಯಾರಿಸುತ್ತದೆ:

60 ರಿಂದ 75 ಕೆಜಿ ಇರುವ ಮನುಷ್ಯನು ಪ್ರತಿದಿವಸ ನಮ್ಮ ದೇಹಕ್ಕೆ ಬೇಕಾದ 50% ಕೊಬ್ಬನ್ನು ತಾನೇ ತಯಾರಿಸಿಕೊಳ್ಳುತ್ತಾನೆ. ಪ್ರತಿದಿವಸ 1 ಗ್ರಾಂ ಕೊಬ್ಬನ್ನು ತಾನೇ ತಯಾರಿಸುತ್ತಾನೆ. ಇನ್ನುಳಿದ 1 ಗ್ರಾಂ ಕೊಬ್ಬು ಆಹಾರದಿಂದ ಬರುತ್ತದೆ. ದೇಹದಲ್ಲಿ ಯಾವಾಗಲೂ 35 ಗ್ರಾಂ ಕೊಬ್ಬು ಸಂಗ್ರಹವಾಗಿರುತ್ತದೆ. ನಮ್ಮ ಯಕೃತ್ 10% ಕೊಬ್ಬನ್ನು, ಕರುಳು 15 % ಮತ್ತು 75% ಕೊಬ್ಬನ್ನು ಇನ್ನುಳಿದ ಅವಯವಗಳಾದ ಅಡ್ರಿನಲ್ ಗ್ರಂಥಿ, ವೃಷಣ, ಅಂಡಾಶಯ, ಚರ್ಮ, ಮಿದುಳು ಮತ್ತು ಪ್ರತಿಯೊಂದು ಜೀವಕೋಶಗಳು ಕೊಬ್ಬನ್ನು ತಯಾರಿಸುತ್ತವೆ.

ನಮ್ಮ ಆಹಾರದಲ್ಲಿ ಕೊಬ್ಬು:

ಸಸ್ಯಹಾರಿಗಳಿಗೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮತ್ತು ಗಿಣ್ಣು (ಖೋವಾ), ಮಾಂಸಹಾರಿಗಳಿಗೆ – ತತ್ತಿ, ಮಾಂಸ ಮತ್ತು ಮೀನು. ಕೊಬ್ಬಿನಿಂದ ಆಗುವ ಪ್ರಯೋಜನಗಳು:

1. ಜೀರ್ಣಕ್ರಿಯೆ: ಕೊಬ್ಬಿನಿಂದ ಪಿತ್ತರಸವು ಯಕೃತ್‍ನಲ್ಲಿ ಉತ್ಪತ್ತಿಯಾಗಿ ನಾವು ಊಟಮಾಡುವ ಆಹಾರವು ಜೀರ್ಣವಾಗಲು ಸಹಕಾರಿಯಾಗುತ್ತದೆ. ಪಿತ್ತರಸದಲ್ಲಿ ಇರುವ ಗ್ಲೈಕೋಲಿಕ್ ಆ್ಯಸಿಡ್ ಮತ್ತು ಟಾರ್‍ಕೋಲಿಕ್ ಆ್ಯಸಿಡ್ ಆಹಾರದಲ್ಲಿನ ಜಿಡ್ಡು ಪದಾರ್ಥಗಳನ್ನು ಜೀರ್ಣಸಿಕೊಳ್ಳಲು ಸಹಕಾರಿ. ಈ ಎರಡು ಆ್ಯಸಿಡ್‍ಗಳು ಪಿತ್ತರಸದಲ್ಲಿರದಿದ್ದರೆ, ಅಜೀರ್ಣವಾಗುತ್ತದೆ.

2. ನಮ್ಮ ಮಿದುಳು : ನವಜಾತ ಶಿಶುವಿನ ವಿದುಳು ತಾನೇ ತನ್ನ ಕೊಬ್ಬನ್ನು ತಯಾರಿಸಿಕೊಂಡು ಚೆನ್ನಾಗಿ ಬೆಳೆಯುತ್ತದೆ. ನಮ್ಮ ಬುದ್ಧಿಶಕ್ತಿ ಹೆಚ್ಚು ಆಗುತ್ತದೆ. (ಆದ್ದರಿಂದ ಬುದ್ಧಿವಂತರಿಗೆ – ತುಪ್ಪತಿಂದ ತಲೆ; – ಮೀನು ತಿಂದ ತಲೆ ಎನ್ನುತ್ತಾರೆ).

3. ಪುಷ್ಠಿಕಾರಕ ಸತ್ವಗಳಾದ -Steroid Hormones ಅಡ್ರಿನಲ್ ಗ್ರಂಥಿ, ವೃಷಾಣು ಮತ್ತು ಅಂಡಾಶಯಗಳು ಕೊಬ್ಬನ್ನು ಉಪಯೋಗಿಸಿಕೊಂಡು – ಗ್ಲುಕೊಕಾರ್ಟಿಕೊಯ್ಡಿಸ್, ಮಿನರಲೋಕಾರ್ಟಿಕೊಯ್ಡಿಸ್, ಅಂಡ್ರೋಜನ್ ಮತ್ತು ಇಸ್ಟ್ರೋಜನ್ ಮತ್ತು ಪ್ರೊಜಿಸ್ಟ್ರರನ್‍ಗಳನ್ನು ಉತ್ಪಾದಿಸುತ್ತವೆ. ಈ ಪುಷ್ಠಿಕಾರಕ ಸತ್ವಗಳಿಂದ ಶಿಶು – ಯುವಕನಾಗುತ್ತಾನೆ ಮತ್ತು ಯುವಕರು – ಮುದುಕರಾಗುತ್ತಾರೆ. ಗಂಡಸು ಮತ್ತು ಹೆಂಗಸು ಆಗುವುದು ಕೂಡ ಈ ಪುಷ್ಠಿಕಾರಕ ಸತ್ವಗಳಿಂದಲೇ.

4. Vitamin D ಜೀವಸತ್ವವು ಕೊಬ್ಬಿನಿಂದಲೇ ತಯಾರು ಆಗುತ್ತದೆ. ಈ ಜೀವಸತ್ವವು ಮೂಳೆಗಳಿಗೆ ಶಕ್ತಿಯನ್ನು ಕೊಟ್ಟು ಸದೃಢವನ್ನಾಗಿ ಮಾಡುತ್ತದೆ. ದೇಹದಲ್ಲಿಯ ಪ್ರತಿಯೊಂದು ಕೋಶಪರದೆಗಳು ಈ ಕೊಬ್ಬಿನಿಂದಲೇ ಆಗಿವೆ. ಚರ್ಮದ ಮೃದುವಾದ ಲಕ್ಷಣವು, ಚರ್ಮದ ಕೋಶಗಳು ಕೊಬ್ಬನ್ನು ತಯಾರಿಸಿ ಚರ್ಮದ ಮೇಲೆ ಸ್ರವಿಸುವುದರಿಂದಲೇ ಆಗುತ್ತದೆ. ಬಿಳಿಯ ರಕ್ತಕಣಗಳು ನಮ್ಮ ದೇಹವನ್ನು ಕಾಪಾಡುವುದು ಕೂಡ ಈ ಕೊಬ್ಬನ್ನು ಉಪಯೋಗಿಸಿಕೊಂಡು ವಿಶೇಷ ರಾಸಾಯನಿಕಗಳನ್ನು ತಯಾರಿಸುವುದರಿಂದಲೇ. ದೇಹದ ಪ್ರತಿಯೊಂದು ಕೋಶದ ಪ್ರತಿಯೊಂದು ಪದರುಗಳ ಸದೃಢತೆ ಕೂಡ ಕೊಬ್ಬಿನಿಂದಲೇ ಆಗಿರುತ್ತದೆ.

ಗೀತೆಯಲ್ಲಿ ಕೊಬ್ಬಿನ ಮಹತ್ವ :

ಶ್ರೀ ಕೃಷ್ಣ ಪರಮಾತ್ಮನು ಗೀತೆಯ 17ನೇ ಅಧ್ಯಾಯದ 8ನೇ ಶ್ಲೋಕದಲ್ಲಿ ಹೀಗೆ ಹೇಳಿರುವನು
“ ಆಯುಸ್ಸತ್ತ್ವ ಬಲಾರೋಗ್ಯ
ಸುಖ ಪ್ರೀತಿವಿವರ್ಧನಾಃ |
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ
ಆಹಾರಾಸ್ಸಾತ್ತ್ವಿಕ ಪ್ರಿಯಾಃ ||
ಆಯಸ್ಸನ್ನೂ, ಉತ್ಸಾಹವನ್ನು, ಶಕ್ತಿಯನ್ನು, ಆರೋಗ್ಯವನ್ನು, ಸುಖವನ್ನು, ಪ್ರೀತಿಯನ್ನು ಹೆಚ್ಚಿಸುವದಾಗಿಯೂ, ರಸದಿಂದಲೂ, ಜಿಡ್ಡಿನಿಂದಲೂ ಕೂಡಿ ಕೆಲವು ಕಾಲ ಶರೀರದಲ್ಲಿ ಉಳಿಯುವಂಥದ್ದಾಗಿ ಮನೋಹರವಾದ ಆಹಾರಗಳು ಸಾತ್ತ್ವಿಕರಿಗೆ ಬೇಕೆನಿಸುವವು.

ಕೊನೆಯ ಮಾತು : ಸೂರ್ಯ ಚಂದ್ರರು ಆಕಾಶದಲ್ಲಿರುವವರೆಗೂ, ನದಿ, ಹಳ್ಳಗಳು ಭೂಮಿಯ ಮೇಲೆ ಹರಿಯುವವರೆಗೂ ಮತ್ತು ಗುಡ್ಡ ಬೆಟ್ಟಗಳು ಭೂಮಿಯ ಮೇಲೆ ನಿಂತಿರುವವರೆಗೂ ಮಹಾಭಾರತ ಸತ್ಯ. ಆದ್ದರಿಂದ ಮಹಾಭಾರತದಲ್ಲಿ ಹೇಳಿದ ಹಾಗೆ ನಾವು ಪ್ರತಿದಿನ ಹಿತವಾಗಿ, ಮಿತವಾಗಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪವನ್ನು ತಿನ್ನಬೇಕು.

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್

ಇಪಿಐಪಿ ಏರಿಯಾ, ವೈಟ್‍ಫೀಲ್ಡ್,  ಬೆಂಗಳೂರು-560066.
ಫೋನ್ : 080-49069000 Extn:1147/1366

Email: info@vims.ac.in         www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!