ಜೆಸ್ಟೆಷನಲ್ ಡಯಾಬಿಟಿಸ್ – ಗರ್ಭಧಾರಣೆ ಮತ್ತು ಹೆರಿಗೆ ನಡುವೆ ಕಾಡುವ ಮಧುಮೇಹ

ಜೆಸ್ಟೆಷನಲ್ ಡಯಾಬಿಟಿಸ್ ಗರ್ಭಿಣಿಯಾಗಿದ್ದಾಗ ಮೊದಲ ಬಾರಿಗೆ ಕಂಡುಬರುವ ಡಯಾಬಿಟಿಸ್‍. ಆರಂಭದಲ್ಲೇ ಪತ್ತೆಯಾದರೆ, ಇದನ್ನು ನಿಯಂತ್ರಿಸಬಹುದು ಹಾಗೂ ನಿಮ್ಮ ಮತ್ತು ನಿಮ್ಮ ಮಗುವಿಗೆ ಸಂಭವಿಸಬಹುದಾದ ತೊಡಕುಗಳನ್ನು ಹತೋಟಿಯಲ್ಲಿಡಬಹುದು. ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳುವುದು ಈ ನಿಟ್ಟಿನಲ್ಲಿ ಮುಖ್ಯ.

ಜೆಸ್ಟೆಷನಲ್ ಡಯಾಬಿಟಿಸ್ - ಗರ್ಭಧಾರಣೆ ಮತ್ತು ಹೆರಿಗೆ ನಡುವೆ ಕಾಡುವ ಮಧುಮೇಹ

ನೀವು ಜೆಸ್ಟೆಷನಲ್ ಡಯಾಬಿಟಿಸ್ ಅಥವಾ ಗರ್ಭಧಾರಣೆ ವೇಳೆ ಮಧುಮೇಹ ಹೊಂದಿದ್ದರೆ, ನಿಮ್ಮ ಶಿಶು ಜನನದ ನಂತರ ಸಾಮಾನ್ಯವಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಸಹಜ ಸ್ಥಿತಿಗೆ ಹಿಂದಿರುಗುತ್ತದೆ. ಹೆರಿಗ ನಂತರ ಹಾಗೂ ಹೆರಿಗೆಯಾದ 6 ವಾರಗಳ ನಂತರ ನಿಮ್ಮ ವೈದ್ಯರು ನಿಮ್ಮ ಬ್ಲಡ್ ಷುಗರ್ ಸಾಮಾನ್ಯ ಸ್ಥಿತಿಗೆ ಬಂದಿದೆಯೇ ಎಂಬುದನ್ನು ತಿಳಿಯಲು ನಿಮ್ಮ ಬ್ಲಡ್ ಷುಗರ್‍ನನ್ನು ಪರೀಕ್ಷಿಸುತ್ತಾರೆ. ಆದರೆ, ನಿಮಗೆ ವಯಸ್ಸಾಗುತ್ತಿದ್ದಂತೆ ನಂತರದ ದಿನಗಳಲ್ಲಿ ಡಯಾಬಿಟಿಸ್ ವೃದ್ದಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಡಯಾಬಿಟಿಸ್ ಇದೆಯೇ ಎಂಬುದನ್ನು ತಿಳಿಯಲು ಪ್ರತಿ ವರ್ಷ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಿ. ಗರ್ಭಧಾರಣೆಗೆ ಮುನ್ನ ಡಯಾಬಿಟಿಸ್ ಹೊಂದಿರುವ ಮಹಿಳೆಯರಲ್ಲಿ ಹೆರಿಗೆ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಹಜ ಸ್ಥಿತಿಗೆ ಹಿಂದಿರುಗುವುದಿಲ್ಲ.

ಗರ್ಭಿಣಿಯಾಗಿದ್ದಾಗ ಮೊದಲ ಬಾರಿಗೆ ಕಂಡುಬರುವ ಡಯಾಬಿಟಿಸ್‍ನನ್ನು ಜೆಸ್ಟೆಷನಲ್ ಡಯಾಬಿಟಿಸ್ ಅಥವಾ ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ಎಂದು ಕರೆಯಲಾಗುತ್ತದೆ. ಜೆಸ್ಟೆಷನಲ್ ಎಂಬ ಪದವು ‘ಗರ್ಭಧಾರಣೆ ಮತ್ತು ಜನನ ಅಂದರೆ ಗರ್ಭಾವಸ್ಥೆ ವೇಳೆ ನಡುವಣ ಸಮಯದ ಅವಧಿ’ಯ ಅರ್ಥವನ್ನು ನೀಡುತ್ತದೆ. ನೀವು ಗರ್ಭಿಣಿಯಾಗಿದ್ದಾಗ ನಿಮ್ಮ ಬ್ಲಡ್ ಷುಗರ್ (ಗ್ಲುಕೋಸ್) ಪ್ರಮಾಣ ಹೆಚ್ಚಾಗಿದ್ದರೆ, ಆದರೆ ನಿಮಗೆ ಈ ಹಿಂದೆ ಅಧಿಕ ಬ್ಲಡ್ ಷುಗರ್ ಇಲ್ಲದಿದ್ದರೆ, ಆಗ ನೀವು ಜೆಸ್ಟೆಷನಲ್ ಡಯಾಬಿಟಿಸ್ ಹೊಂದಿರುತ್ತೀರಿ ಎಂದರ್ಥ.

ಸಂಭವಾಂಶಗಳು

ಜೆಸ್ಟೆಷನಲ್ ಡಯಾಬಿಟಿಸ್ ವೃದ್ದಿಯಾಗುವ ಅಧಿಕ ಸಾಧ್ಯತೆಗಳೆಂದರೆ :

  • ನಿಮಗೆ 25 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದರೆ
  • ನೀವು ಅತಿಯಾದ ತೂಕ ಅಥವಾ ಸ್ಥೂಲಕಾಯ ಹೊಂದಿದ್ದರೆ
  • ಡಯಾಬಿಟಿಸ್ ಪ್ರಬಲ ಕೌಟುಂಬಿಕ ಹಿನ್ನೆಲೆ ಹೊಂದಿದ್ದರೆ
  • ಈ ಹಿಂದಿನ ಗರ್ಭಾವಸ್ಥೆಯಲ್ಲಿ ಜೆಸ್ಟೆಷನಲ್ ಡಯಾಬಿಟಿಸ್ ಹೊಂದಿದ್ದರೆ
  • ಈ ಹಿಂದಿನ ಗರ್ಭಧಾರಣೆಯಲ್ಲಿ ಇನ್ನು ಜನಿಸದ ಅಥವಾ ದೊಡ್ಡ ಗಾತ್ರದ ಶಿಶುವನ್ನು ಹೊಂದಿದ್ದರೆ
  • ಪೂರ್ವ ಡಯಾಬಿಟಿಸ್ ರೋಗ ನಿರ್ಧರಿಸಲ್ಪಟ್ಟಿದ್ದರೆ
  • ನಿಮಗೆ ಅಧಿಕ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟರಾಲ್ ಇದ್ದರೆ ಜೆಸ್ಟೆಷನಲ್ ಡಯಾಬಿಟಿಸ್‍ನನ್ನು ನಿಯಂತ್ರಿಸಬಹುದು

ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿಯಂತ್ರಣದಲ್ಲಿ ಇಡುವ ಮೂಲಕ ಗರ್ಭಧಾರಣೆ ವೇಳೆ ಡಯಾಬಿಟಿಸ್ ಹೊಂದಿರುವ ಬಹುತೇಕ ಮಹಿಳೆಯರು ಆರೋಗ್ಯಕರ ಗರ್ಭಾವಸ್ಥೆ, ಸುಗಮ ಹೆರಿಗೆ ಮತ್ತು ಆರೋಗ್ಯಕರ ಶಿಶುಗಳನ್ನು ಹೊಂದಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ಹತೋಟಿಯಲ್ಲಿ ಇಡದಿದ್ದರೆ, ಇದು ನಿಮ್ಮ ಮತ್ತು ಜನಿಸಲಿರುವ ನಿಮ್ಮ ಶಿಶುವಿನ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರಬಹುದು.

ಇಲ್ಲಿ ನಿಮಗೆ ಸಂಭವನೀಯ ತೊಡಕುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅವುಗಳೆಂದರೆ : ಪ್ರೀ-ಎಕ್ಲಾಮ್‍ಪಿಸಿಯಾ (ಅಧಿಕ ರಕ್ತದೊತ್ತಡ ಹಾಗೂ ಗರ್ಭಾವಸ್ಥೆಯ 2ನೇ ಮತ್ತು 3ನೇ ತ್ರೈಮಾಸಿಕ ಅವಧಿ ವೇಳೆ ಮೂತ್ರದಲ್ಲಿ ಪ್ರೋಟಿನ್ ಹೋಗುವಿಕೆ) ; ಯೂರಿನರಿ ಟ್ರಾಕ್ಟ್ ಸೋಂಕುಗಳ ಅಧಿಕ ಸಾಧ್ಯತೆ ; ಸೆಝೆರಿಯನ್ ಜನನದ ಸಾಧ್ಯತೆ ಹೆಚ್ಚಳ ; ಅವಧಿಗೆ ಮುನ್ನ ಶಿಶು ಜನನ

ನಿಮ್ಮ ಮಗುವಿಗೆ ಇರುವ ಸಂಭವನೀಯ ತೊಡಕುಗಳೆಂದರೆ : ದೊಡ್ಡ ಗಾತ್ರದ ಶಿಶು (ಮ್ಯಾಕ್ರೊಸೋಮಿಯಾ) – ದೊಡ್ಡ ಗಾತ್ರದ ಶಿಶುಗಳು (9 ಪೌಂಡ್‍ಗಳು ಅಥವಾ 4.1 ಕೆ.ಜಿ.ಗಿಂತ ಹೆಚ್ಚು ತೂಕದ ಮಕ್ಕಳು) ಜನನ ಆಘಾತದಿಂದ ನರಳುವ ಸಾಧ್ಯತೆ ಇರುತ್ತದೆ ; ಜನನದ ನಂತರ ನಿಮ್ಮ ಮಗು ಕಡಿಮೆ ಬ್ಲಡ್ ಷುಗರ್ (ಹೈಪೋಗ್ಲಿಸಿಮಿಯಾ) ಹೊಂದಬºಶÀುದು ; ಜನನದ ನಂತರ, ನಿಮ್ಮ ಶಿಶುವಿನ ಚರ್ಮವು ಹಳದಿ ಬಣ್ಣಕ್ಕೆ ತಿರುಗಬಹುದು ; ಕಣ್ಣುಗಳ ಬಿಳಿ ಭಾಗಗಳು ಹಳದಿ ಬಣ್ಣಕ್ಕೆ ಸಹ ತಿರುಗಬಹುದು (ಜ್ಯಾಂಡೀಸ್ ಅಥವಾ ಕಾಮಾಲೆ) ; ನಿಮ್ಮ ಮಗುವಿಗೆ ಉಸಿರಾಡಲು ಕಷ್ಟವಾಗಬಹುದು (ರೆಸ್‍ಪಿರಟೊರಿ ಡಿಸ್ಟ್ರೆಸ್ ಸಿಂಡ್ರೋಮ್) ಹಾಗೂ ಉಸಿರಾಡಲು ಆಮ್ಲಜನಕ ಅಥವಾ ಇತರೆ ಸಹಾಯ ಬೇಕಾಗಬಹುದು ; ನಿಮ್ಮ ಮಗುವಿನ ರಕ್ತದಲ್ಲಿ ಕಡಿಮೆ ಕ್ಯಾಲ್ಷಿಯಂ ಮಟ್ಟವು (ಹೈಪೋಕ್ಯಾಲ್ಸಿನಿಯಾ) ಕೈಗಳು ಮತ್ತು ಪಾದದಲ್ಲಿ ಸೆಳೆತಗಳಿಗೆ ಕಾರಣವಾಗಬಹುದು ಅಥವಾ ಮಾಂಸಖಂಡಗಳು ಕಿತ್ತು ಬಂದಂತೆ ನೋವು ಅಥವಾ ಸೆಳೆವು ಕಾಣಿಸಿಕೊಳ್ಳಬಹುದು.

ಸರಿಯಾದ ಆಹಾರ ಆಯ್ಕೆ : ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಒಳಗೊಂಡ ಆಹಾರವನ್ನು ಸೇವಿಸಿ ಹಾಗೂ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಿಹಿ ಪದಾರ್ಥಗಳನ್ನು ಒಳಗೊಂಡ ಸಂಸ್ಕರಿತ ಕಾರ್ಬೋಹೈಡ್ರೇಟ್‍ಗಳ ಆಹಾರ ಸಾಧ್ಯವಾದಷ್ಟು ತೀರಾ ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಇದು ನಿಮ್ಮ ಬ್ಲಡ್ ಷುಗರ್ ಮಟ್ಟವನ್ನು ಆರೋಗ್ಯಕರ ಗುರಿ ಶ್ರೇಣಿಯಲ್ಲಿ ಇಡಲು ಸಹಕಾರಿ. ನಿಮಗೆ ಸೂಕ್ತವಾದ ಊಟೋಪಚಾರ ಯೋಜನೆ ರೂಪಿಸಿಕೊಳ್ಳಲು ನೀವು ಆಹಾರ ತಜ್ಞರು, ಡಯಾಟಿಷಿಯನ್ ಅಥವಾ ಪೌಷ್ಟಿಕಾಂಶ ಪರಿಣಿತರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಬಹುದು.

ನಿಯಮತ ವ್ಯಾಯಾಮ : ನಿಯಮಿತ, ಸಾಧಾರಣ ದೈಹಿಕ ಚಟುವಟಿಕೆ (ವಾಕಿಂಗ್, ಏರೋಬಿಕ್ಸ್, ಮತ್ತು ಸ್ವಿಮ್ಮಿಂಗ್) ಈ ನಿಯಮಿತ ವ್ಯಾಯಾಮಗಳನ್ನು ವಾರದ ಬಹುತೇಕ ದಿನಗಳಲ್ಲಿ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ವ್ಯಾಯಾಮವನ್ನು ಆರಂಭಿಸುವುದಕ್ಕೂ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆಯಿರಿ.

ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ :

  • ನಿಮ್ಮ ಬ್ಲಡ್ ಷುಗರ್ ಮೇಲೆ ನಿಗಾ ವಹಿಸಿ : ನಿಮ್ಮ ಬ್ಲಡ್ ಷುಗರ್‍ನನ್ನು ಮನೆಯಲ್ಲಿ ತಪಾಸಣೆ ಮಾಡಿ.

ನೆನಪಡಿನಲ್ಲಿಡಿ !

  • ಗರ್ಭಧರಿಸಿದ್ದಾಗ ಮತ್ತು ಹೆರಿಗೆ ನಂತರ ನಿಮ್ಮ ವೈದ್ಯರನ್ನು ನಿಯತವಾಗಿ ಭೇಟಿ ಮಾಡಿ
  • ಸೂಚನೆಯಂತೆ ನಿಮ್ಮ ಬ್ಲಡ್ ಷುಗರ್ ಬಗ್ಗೆ ನಿಗಾ ವಹಿಸಿ
  • ಆರೋಗ್ಯಕರ ಆಹಾರ ಸೇವಿಸಿ
  • ವ್ಯಾಯಾಮ ಮಾಡಿ ಕ್ರಿಯಾಶೀಲರಾಗಿರಿ.
  • ನಿಮ್ಮ ವೈದ್ಯರು ಸೂಚಿಸಿದ ಔಷಧಿ ಮಾತ್ರೆಗಳನ್ನು ತಪ್ಪದೇ ಸೇವಿಸಿ.

Dr._B_Ramesh-Director-Altius_Hospital_Pvt._Ltd.

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!