ಜಿಇಆರ್‌ಡಿ (ಜಠರದ ಉರಿ) !!!

 ಗ್ಯಾಸ್ಟ್ರೈಟಿಸ್‍ನನ್ನು ವೈದ್ಯಕೀಯ ಪರಿಭಾಷೆಯಲ್ಲಿ ಜಠರದ ಉರಿತ ಎಂದು ಕರೆಯುತ್ತಾರೆ. ಜಠರದ ಮೇಲು ಪದರದ ಉರಿಯೂತವಾದ ಇದು ಜನರ ಆಡು ಭಾಷೆಯಲ್ಲಿ ‘ಗ್ಯಾಸ್ಟ್ರಿಕ್’ ಸಮಸ್ಯೆ. ಇದನ್ನು ಜಿಇಆರ್‍ಡಿ (ಗ್ಯಾಸ್ಟ್ರೋಎಸ್‍ಫಾಜಿಯಲ್ ರಿಫ್ಲಕ್ಸ್ ಡಿಸೀಸ್) ಎಂಬ ಸಂಕೇತಾಕ್ಷರಗಳಿಂದಲೂ ಗುರುತಿಸಲಾಗಿದೆ. ಇದೊಂದು ಸಾಮಾನ್ಯ ರೋಗವಾಗಿದ್ದು. ಉಬ್ಬಸ, ತೇಗುವಿಕೆ, ತಲೆ ಸುತ್ತುವಿಕೆ ಹಾಗೂ ಎದೆ ಉರಿತದೊಂದಿಗೆ ಉದರದ ಮೇಲ್ಭಾಗದಲ್ಲಿ ಕಂಡಬರುವ ದೀರ್ಘಕಾಲ ಅಥವಾ ಮತ್ತೆ ಮತ್ತೆ ಮರುಕಳಿಸುವ ನೋವಿನಿಂದ ಕೂಡಿರುತ್ತದೆ. ಇಂದಿನ ದಿನಗಳಲ್ಲಂತೂ ಈ ರೋಗ ಸರ್ವಸಾಮಾನ್ಯವಾಗಿದೆ.

“ಶಾಲೆಗೆ ಹೋಗುವ ಒಂದು ಮಗು ಬೆಳಿಗ್ಗೆ ಉಪಾಹಾರ ಸೇವಿಸುತ್ತದೆ. ಬಾಲಕ ಅಥವಾ ಬಾಲಕಿಯು ಸಮಯದ ಅಭಾವದಿಂದಾಗಿ ಒಲ್ಲದ ಮನಸ್ಸಿನಿಂದ ಅದನ್ನು ತಿನ್ನುತ್ತಾರೆ. ದೀರ್ಘ ಅಂತರದ ನಂತರ ಬೆಳಗಿನ ತಿಂಡಿ ಸೇವಿಸುವ ಸಮಯ. ಆದರೆ ಶಾಲಾ ಬಾಲಕ ಮತ್ತು ಬಾಲಕಿಯರು ಲಂಚ್ ಬಾಕ್ಸ್‍ನ ಆಹಾರವನ್ನು ತಿನ್ನುವುದು ಕಡಿಮೆ. ಬದಲಿಗೆ ಅವರು ಕ್ಯಾಂಟೀನ್ ಆಹಾರವನ್ನು ಬಹುವಾಗಿ ಇಷ್ಟಪಡುತ್ತಾರೆ.
“ತಾಯಂದಿರು ತಮ್ಮ ಮಕ್ಕಳ ಹಸಿವನ್ನು ತಣಿಸಲು ಹೆಚ್ಚು ಹೆಚ್ಚು ಆಹಾರವನ್ನು ತುಂಬಲು ಯತ್ನಿಸುತ್ತಾರೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅಥವಾ ಒಂದು ಪ್ಯಾಕೆಟ್ ಚಿಪ್ಸ್ ಅಥವಾ ಬೇಕರಿ ತಿನಿಸುಗಳಂಥ ಆಹಾರಗಳು ಇದರಲ್ಲಿರುತ್ತವೆ. ದಿನದ ಅಂತ್ಯಕ್ಕೆ ನೀವು ಅಧಿಕ ಫೈಬರ್‍ಯುಕ್ತ ಆಹಾರದಿಂದ ಅಧಿಕ ಕ್ಯಾಲೋರಿಯ ಆಹಾರಕ್ಕೆ ಪರಿವರ್ತಿತರಾಗುತ್ತೀರಿ. ಈ ಕಾರಣದಿಂದ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಆಸಿಡಿಟಿ ; ಅಸಮರ್ಪಕ ಆಹಾರ/ಕಡಿಮೆ ಪೌಷ್ಠಿಕಾಂಶದ ಆಹಾರದಿಂದ ಮಕ್ಕಳಲ್ಲಿ ಮಲಬದ್ಧತೆ ತೀರಾ ಸಾಧಾರಣವಾಗಿ ಕಂಡುಬರುತ್ತಿದೆ.
ಇದು ವೃತ್ತಿಪರ ಉದ್ಯೋಗಿಗಳಲ್ಲಿ ಯಥಾಸ್ಥಿತಿಯ ಕಥೆ. ಊಟ-ಉಪಹಾರಗಳ ನಡುವೆ ದೀರ್ಘ ಅಂತರಗಳು, ಜಂಕ್ ಫುಡ್‍ಗಳು, ದೈಹಿಕ ವ್ಯಾಯಾಮದ ಕೊರತೆ ಹಾಗೂ ಹೆಚ್ಚುವರಿ ಕೆಲಸದ ವೇಳೆ-ಈ ಎಲ್ಲ ಕಾರಣಗಳಿಂದ ಜಿಇಆರ್‍ಡಿ (ಗ್ಯಾಸ್ಟ್ರೋಎಸ್‍ಫಾಜಿಯಲ್ ರಿಫ್ಲಕ್ಸ್ ಡಿಸೀಸ್) ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಹೊಟ್ಟೆಗೆ ಸಕಾಲಕ್ಕೆ ಬೇಕಾದ ಆರೋಗ್ಯಕರ ಅಹಾರಗಳು ಸೇರದಿರುವುದಿಂದ ಜರಠದುರಿತ ಉಂಟಾಗುತ್ತದೆ.
ಇನ್ನು ಕಾಫಿ-ಟೀ ಸೇವನೆ ಮತ್ತು ಧೂಮಪಾನವು ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತದೆ. ಜರಠದ ಕಾರ್ಯವನ್ನು ನಿರ್ವಹಿಸುವ ವೇಗಸ್ (ಹೃದಯ, ಶ್ವಾಸಕೋಶಗಳಿಗೆ ಹೋಗುವ ಕಪಾಲನರ ಜೋಡಿಯಲ್ಲಿ ಒಂದು) ನರವನ್ನು ಈ ಪೇಯ ಮತ್ತು ಧೂಮಪಾನ ಉದ್ದೀಪನಗೊಳಿಸಿ ಜಠರ ರಸಗಳ ಮತ್ತು ಆಮ್ಲ ಸ್ರಾವವನ್ನು ಹೆಚ್ಚಿಸಿ ಹೈಪರ್‍ಆಸಿಡಿಟಿಗೆ (ಅಧಿಕ ಆಮ್ಲೀಯತೆ) ಕಾರಣವಾಗುತ್ತದೆ.
ಇದರ ಜೊತೆಗೆ ಆಧುನಿಕ ಜೀವನಶೈಲಿ ಮತ್ತು ಒತ್ತಡವು ಆಸಿಡಿಟಿಗೆ ಕಾರಣವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕಾರ್ಯ ಕ್ಷಮತೆ ಕಡಿಮೆ ಫಲಿತಾಂಶವೂ ಕುಂಠಿತವಾಗುತ್ತದೆ.
ನಿಮಗೆ ಗೊತ್ತೆ ? ಗ್ಯಾಸ್ಟ್ರೈಟಿಸ್ ನಮ್ಮ ಹೊಟ್ಟೆಯಲ್ಲಿ ಮಾತ್ರ ಕೇಂದ್ರೀಕೃತವಾಗಿರುವುದಿಲ್ಲ. ಆದರೆ, ನಿಮ್ಮ ಮಗುವಿಗೆ ಅಗಾಗ ಗಂಟಲು ಸೋಂಕು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಜಠರದ ಉರಿತ. ಉಬ್ಬಸ ಮತ್ತು ಉರಿಯಿಂದ ಅದು ಗಲಗ್ರಂಥಿ ತನಕ ತಲುಪುತ್ತದೆ.
ಹಲವು ಸಮಸ್ಯೆಗಳು
ಗ್ಯಾಸ್ಟ್ರೈಟಿಸ್‍ನಿಂದ ನರಳುವವರು ಕಡಿಮೆ ಆಹಾರ ಸೇವಿಸುತ್ತಾರೆ. ಇದು ತಲೆನೋವು, ಮಂಪರು, ರಕ್ತಹೀನತೆ, ಕಡಿಮೆ ರಕ್ತದೊತ್ತಡ, ಅಲ್ಸರ್, ಕೀಲು ನೋವು, ಮೂಳೆ ನೋವು, ಅಸಮರ್ಪಕ ಬೆಳವಣಿಗೆ (ಎತ್ತರ ಮತ್ತು ತೂಕ), ರೋಗಪ್ರತಿರೋಧಕ ಶಕ್ತಿ ಕುಂಠಿತ. ಇದರಿಂದ ಎಲ್ಲ ರೀತಿಯ ಅಲರ್ಜಿಗಳು, ಏಕಾಗ್ರತೆ ಕ್ಷೀಣಿಸುವಿಕೆ, ಮಾನಸಿಕ ಕ್ಷೋಭೆ, ಸ್ಮರಣಶಕ್ತಿ ಕುಂಠಿತ, ಮಲಬದ್ಧತೆಯಿಂಧ ಮೂಲವ್ಯಾಧಿ, ಮೂಲವ್ರಣ, ಅಸಮರ್ಪಕ ಆಹಾರ ಸೇವನೆ ವೇಳೆಯಿಂದ ಕಿರಿಕಿರಿ ಎನಿಸುವ ಮಲವಿಸರ್ಜನೆ, ಬೇಧಿ/ಮಲಬದ್ಧತೆ, ಪದೇ ಪದೆ ಎದೆ ಉರಿ, ಹೃದಯಾಘಾತ, ನಿದ್ರಾಭಂಗ, ಭಾವೋದ್ವೇತ, ಕಿರಿಕಿರಿ, ಖಿನ್ನತೆ-ಹತಾಶೆ ಇವುಗಳಿಗೆಲ್ಲ ಕಾರಣವಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಹೇಳಿರುವಂತೆ ಆಗಾಗ ಅಮ್ಲ ಸ್ರಾವವು ಕ್ಯಾನ್ಸರ್‍ಕಾರಕವಾಗಿರುತ್ತದೆ. ಅಂದರೆ, ಈ ದೋಷವನ್ನು ಸಕಾಲದಲ್ಲಿ ಸರಿಪಡಿಸಲಾಗದಿದ್ದರೆ, ಪದೇ ಪದೇ ಕಾಣಿಸಿಕೊಳ್ಳುವ ಆಸಿಡಿಟಿ ಎಸೋಫಾಗಿಯಲ್ ಪೈಪ್ (ಅನ್ನನಾಳ ಕೊಳವೆ) ಕ್ಯಾನ್ಸರ್‍ಗೆ ಎಡೆ ಮಾಡಿಕೊಡಬಹುದು.
ಅನೇಕ ವೇಳೆ ನಾವು ವೈದ್ಯರ ಸೂಕ್ತ ಪ್ರಿಸ್‍ಕ್ರಿಪ್ಷನ್ ಅಥವಾ ಮಾರ್ಗದರ್ಶನ ಇಲ್ಲದೇ ತಮಗೇ ತಾವೇ ಪ್ರತಿಔಷಧಿಗಳನ್ನು ಸೇವಿಸುವುದನ್ನು (ಒಟಿಸ್) ನೋಡಿದ್ದೇವೆ. ಇದರಿಂದ ದೀರ್ಘ ಕಾಲದ ಸಮಸ್ಯೆಗೆ ನಾಂದಿಯಾಗುತ್ತದೆ. ಕೊನೆಗೊಂದು ದಿನ ಒಂದು ಸರಳ ಅನಿಲವು ಉದರದುಬ್ಬರಕ್ಕೆ ಕಾರಣವಾಗಿ ಜಿಇಆರ್‍ಡಿಎ ಅಮರಿಕೊಳ್ಳಲು ಕೊಡುಗೆ ನೀಡುತ್ತದೆ.
ಇದು ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಗ್ಯಾಸ್ಟ್ರೈಟಿಸ್‍ನಿಂದ ಮಾಸಿಕ ಋತುಚಕ್ರ ಅಸಮರ್ಪಕವಾಗಿ ಅದು ಯುವತಿಯಲ್ಲಿ ಪಿಸಿಒಡಿ (ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್) ಎಂಬ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ಅದು ಇನ್ಸುಲಿನ್ ಪ್ರತಿರೋಧ ತೊಂದರೆಗೂ ಆಸ್ಪದ ನೀಡುತ್ತದೆ. ಕೆಲವು ಮಹಿಳೆಯರಲ್ಲಿ ಹಿರ್‍ಸುಟಿಸಂ ಎಂಬ ದೋಷವೊಂದು ಕಂಡುಬರುತ್ತದೆ. ಅವರಲ್ಲಿ ಪುರುಷ ಹಾರ್ಮೋನುಗಳ ಪ್ರಮಾಣ ಹೆಚ್ಚಾಗಿ ಮುಖ ಹಾಗೂ ಎದೆಗಳಲ್ಲಿ ಅನಗ್ಯತ ಕೂದಲು ಬೆಳೆಯುತ್ತದೆ. ಪಿಸಿಒಡಿ ಸಮಸ್ಯೆ ಇದ್ದ ಮಹಿಳೆಯರು ಗರ್ಭಧರಿಸಲು ಕಷ್ಟವಾಗುತ್ತದೆ. ಒಂದು ಸರಳ ಗ್ಯಾಸ್ಟ್ರಿಟಿಸ್ ಪ್ರಕರಣವು ಹೈಪೋಥೈರಾಯ್ಡ್ ನಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.
ಮೈಗ್ರೇನ್ ಖಿನ್ನತೆಗೆ ರಹದಾರಿ
ಅನೇಕ ಸಂದರ್ಭಗಳಲ್ಲಿ ಸರಳ ಗ್ಯಾಸ್ಟ್ರೈಟಿಸ್ ದೀರ್ಘಕಾಲದ ತಲೆನೋವಿಗೆ ಕಾರಣವಾಗಿ ಮೈಗ್ರೇನ್ ತನಕ ತಲುಪುತ್ತದೆ. ಶಿರೋಭ್ರಮಣೆ ಮತ್ತು ವಾಂತಿಯೊಂದಿಗೆ ಒಂದು ಕಡೆ ಯಾತನಾಮಯ ತಲೆನೋವು ಕಾಣಿಸಿಕೊಂಡು ನಿಮ್ಮ ಅಧ್ಯಯನ ಮತ್ತು ಉದ್ಯೋಗದಲ್ಲಿ ಸಾಧನೆ ಕುಂಠಿತಗೊಳ್ಳುವಂತೆ ಮಾಡುತ್ತದೆ. ಈ ಖಿನ್ನತೆಯು ಮಾನಸಿಕ ಒತ್ತಡಕ್ಕೆ ಸಂಬಂಧಪಟ್ಟ ರೋಗಗಳಿಗೆ ರಹದಾರಿ ನೀಡುತ್ತದೆ.
ನಿಮ್ಮ ಜೀವನಶೈಲಿ, ಆಹಾರಾಭ್ಯಾಸಗಳು ಮತ್ತು ಒತ್ತಡದಲ್ಲಿನ ಒಂದು ಸಣ್ಣ ಬದಲಾವಣೆಯೂ ಹೇಗೆ ಪ್ರಮುಖ ಆರೋಗ್ಯ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂಬುದು ನಿಮಗೆ ಮನವರಿಕೆಯಾಗಿರಬಹುದು.
ಹೈಪೋಥೈರಾಯ್ಡ್, ಪಿಸಿಒಡಿ, ಹಿರ್‍ಸುಟಿಸಂ, ಮೈಗ್ರೇನ್ ತಲೆನೋವು, ಅಸಮರ್ಪಕ ಋತುಚಕ್ರ, ತೂಕ ಹೆಚ್ಚಳ ಇವುಗಳಿಗೆ ಒಂದು ಸಣ್ಣ ಗ್ಯಾಸ್ಟ್ರಿಟಿಸ್ ಕಾರಣವೆಂದರೆ ನಿಮಗೆ ಅಚ್ಚರಿಯಾಗಬಹುದು. ಹಾಗೆಯೇ ಇದರಿಂದ ಖಿನ್ನತೆ, ಹತಾಶೆ, ಭಯ, ಆತಂಕ ಹಾಗೂ ಇದರೆ ದೀರ್ಘಕಾಲೀನ ಮಾನಸಿಕ ನ್ಯೂನತೆಗಳಿಗೂ ಕಾರಣವಾಗುತ್ತದೆ.
ಸೌಂದರ್ಯ ಸಮಸ್ಯೆ
ಒಂದು ಸರಳ ಗಾಸ್ಟ್ರೈಟಿಸ್ ಸೌಂದರ್ಯ ಸಮಸ್ಯೆಯನ್ನೂ ತಂದೊಡ್ಡುತ್ತದೆ. ಮೊಡವೆಗಳು ಮತ್ತು ಕೂದಲು ಉದುರುವಿಕೆಗೂ ಇದು ಅವಕಾಶ ನೀಡುತ್ತದೆ. ಅನೇಕ ಮಂದಿ ಮೊಡವೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆಯೇ ಹೊರತು ಅದರ ಕಾರಣವನ್ನು ಹುಡುಕಲು ಹೋಗುವುದಿಲ್ಲ. ಕೂದಲು ಉದುರುವಿಕೆ, ಕೂದಲು ತೆಳುವಾಗುವಿಕೆ, ತಲೆ ಕೆರೆತ, ಹೊಟ್ಟುಗಳೂ ಈ ದೋಷದಿಂದ ಕಂಡುಬರುತ್ತವೆ.
ಆಸಿಡಿಟಿಯ ಬಹುತೇಕ ಪ್ರಕರಣಗಳು ಜೀವನಶೈಲಿಗೆ ಸಂಬಂಧಪಟ್ಟದ್ದಾಗಿರುತ್ತದೆ. ಇದನ್ನು ತಪ್ಪಿಸುವ ಅತ್ಯುತ್ತಮ ಮಾರ್ಗವೆಂದರೆ ಅಗಾಗ ಸಣ್ಣ ಪ್ರಮಾಣದಲ್ಲಿ ಅಹಾರ ಸೇವಿಸುವುದು, ನಿಯತ ವ್ಯಾಯಾಮ ಮಾಡುವುದು ಹಾಗೂ ಒಂದೇ ಬಾರಿಗೆ ವಿಪರೀತ ಆಹಾರ ಅಂದರೆ ಹುರಿದ ಆಹಾರ ಪದಾರ್ಥಗಳು, ಐಸ್‍ಕ್ರೀಮ್ ಮತ್ತು ಕ್ಯಾಂಡಿಗಳನ್ನು ಸೇವನೆಯನ್ನು ತಪ್ಪಿಸಬೇಕು. ಕೊನೆಯದಾಗಿ ನಿಮ್ಮ ಸಮಸ್ಯೆಗೆ ಕಾರಣವೇನು ಎಂಬುದನ್ನು ತಿಳಿಯಲು ಮತ್ತು ನಿಗಾ ವಹಿಸಲು ಪ್ರಯತ್ನಿ ಅದನ್ನು ತಪ್ಪಿಸಬಹುದು. ನಮ್ಮ ಕಳಕಳಿಯ ಮನವಿ ಎಂದರೆ ನಿಮಗೆ ನೀವೇ ಸ್ವಯಂ ಔಷಧಿ-ಮಾತ್ರೆಗಳನ್ನು ಸೇವಿಸಬೇಡಿ.


ಡಾ. ಚಲಪತಿ

ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!