ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಇದು ಮಹಿಳೆಯರಿಗೆ ಪ್ರಕೃತಿ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಈ ಅವಧಿಯಲ್ಲಿ ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ ಕೆಲವು ಮುಖ್ಯ ಸಾಮಾನ್ಯ ಸಂಗತಿಗಳನ್ನು ಪಾಲಿಸುವುದು ಅಗತ್ಯ. ನೀವು ಮಾಡಬೇಕಾದುದು ಮತ್ತು ಮಾಡಬಾರದುದನ್ನು ಇಲ್ಲಿ ತಿಳಿಸಲಾಗಿದೆ.
ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಇದು ಮಹಿಳೆಯರಿಗೆ ಪ್ರಕೃತಿ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಈ ಅವಧಿಯಲ್ಲಿ ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ ಮುಖ್ಯ ಸಂಗತಿಗಳಲ್ಲಿ ಸೂಕ್ತ ಪೌಷ್ಟಿಕಾಂಶವೂ ಒಂದು. ನೀವು ಮಾಡಬೇಕಾದ ಮತ್ತು ಮಾಡಬಾರದುದನ್ನು ಇಲ್ಲಿ ತಿಳಿಸಲಾಗಿದೆ.
ಗರ್ಭಾವಸ್ಥೆ ಸಮಯದಲ್ಲಿ ಆರೋಗ್ಯದಲ್ಲಿ ಕೆಲವೊಂದು ಏರುಪೇರುಗಳಾಗುವುದು ಸಹಜವಾದ ಸಂಗತಿಯಾಗಿದ್ದು, ಈ ಕೆಳಕಂಡ ಕೆಲವು ಸಮಸ್ಯೆಗಳು ಕಂಡುಬರುತ್ತವೆ
- ಬೆಳಗಿನ ಅಸ್ವಸ್ಥತೆ (ಮಾನಿಂಗ್ ಸಿಕ್‍ನೆಸ್-ಬೆಳಿಗ್ಗೆಯೇ ವಾಂತಿಯಾಗುವ ಸಂವೇದನೆ)
- ಮೂತ್ರ ವಿಸರ್ಜನೆಗೆ ಅವಸರ
- ಹುಳಿತೇಗು, ಅಸಿಡಿಟಿಯಿಂದ ಎದೆ ಉರಿ
- ಮಲಬದ್ದತೆ, ಮೂಲವ್ಯಾಧಿ
- ಆಯಾಸ, ಸುಸ್ತು
- ಕೆಳ ಬೆನ್ನು ನೋವು
- ಚರ್ಮ, ಕಲೆಗಳು, ಹುಣ್ಣುಗಳು ಇತ್ಯಾದಿ ಕಪ್ಪಾಗುವಿಕೆ
- ಸ್ಟ್ರೆಚ್ ಮಾರ್ಕ್ ಅಥವಾ ವಿಸ್ತರಣೆ ಕಲೆ (ಚರ್ಮದ ವಿಕಸನದಿಂದಾಗಿ ಹೊಟ್ಟೆ ಮತ್ತು ತೊಡೆಯಲ್ಲಿ ಉದ್ದ ಗೆರೆಗಳು)
- ನಿರ್ದಿಷ್ಟ ಆಹಾರ ವಸ್ತುಗಳ ಬಯಕೆ
- ನಿದ್ರಾಹೀನತೆ
ಸಾಮಾನ್ಯ ಸಂಗತಿಗಳೇನು ?
- ಯೋನಿನಿಂದ ರಕ್ತಸ್ರಾವ
- ತೀವ್ರ ಹೊಟ್ಟೆ ನೋವು
- ಯೋನಿಯಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಯುವಿಕೆ
- ದೃಷ್ಟಿ ಮಬ್ಬಾಗುವಿಕೆ
- ತೀವ್ರ ತಲೆನೋವು
- ಕೈ-ಕಾಲುಗಳು ಮತ್ತು ಮುಖದ ಊತ
- ಭ್ರೂಣದ ಚಲನೆ ಇಲ್ಲದಿರುವುದು
- ಪದೇ ಪದೇ ಹಾಗೂ ನೋವಿನಿಂದ ಕೂಡಿದ ಮೂತ್ರ ವಿಸರ್ಜನೆ
- ವಿಪರೀತ ವಾಂತಿ
ನೀವು ಮಾಡಬೇಕಾದುದು
- ರಾತ್ರಿ ವೇಳೆಯಲ್ಲಿ ಕನಿಷ್ಠ8 ಗಂಟೆಗಳ ಕಾಲ ಹಾಗೂ ಮಧ್ಯಾಹ್ನದ ನಂತರ 2 ಗಂಟೆಗಳ ಕಾಲ ನಿದ್ರೆ ಮಾಡಿ.
- ಉತ್ತಮ ರೀತಿಯ ಸಂತುಲಿತ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ.
- ನಿಮ್ಮ ವೈದ್ಯರು ಕಾಲಕಾಲಕ್ಕೆ ಸೇವಿಸಲು ಸಲಹೆ ಮಾಡಿರುವ ಔಷಧಿ-ಮಾತ್ರೆಗಳನ್ನು ಸೇವಿಸಿ.
- ನೆಲದಿಂದ ಯಾವುದೇ ವಸ್ತುಗಳನ್ನು ಮೇಲಕ್ಕೆ ಎತ್ತಬೇಕಾದರೆ ಯಾವಾಗಲೂ ಕುಳಿತಕೊಂಡು ಅದನ್ನು ಎತ್ತಿಕೊಂಡು ನಿಲ್ಲಬೇಕು.
- ಉತ್ತಮ ವ್ಯಾಯಾಮ ಎಂದರೆ ಪ್ರತಿದಿನದ ವಾಕಿಂಗ್. ಆದರೆ ಆಯಾಸ ಕಂಡು ಬಂದಾಗ ನಿಲ್ಲಿಸಬೇಕು.
- ಉತ್ತಮ ನೈರ್ಮಲೀಕರಣಕ್ಕಾಗಿ ರಾತ್ರಿ ವೇಳೆ ಕಿಟಕಿಗಳನ್ನು ತೆರೆದಿಡಿ.
ನೀವು ಮಾಡಬಾರದುದು
- ನಿದ್ರಾವಸ್ಥೆಗೆ ಜಾರುವ ಸಮಸ್ಯೆ ಇದ್ದಲ್ಲಿ ಚಿಂತಿಸಬೇಡಿ. ನಿದ್ರೆಗಿಂತ ನಿಮಗೆ ವಿಶ್ರಾಂತಿ ಮುಖ್ಯ.
- ಮಲಗುವುದಕ್ಕೆ ಹೋಗುವ ಮುನ್ನ ಸಂಬಾರ ಪದಾರ್ಥಗಳು ಮತ್ತು ಅಧಿಕ ಪ್ರಮಾಣದ ಆಹಾರ ಸೇವಿಸಬೇಡಿ.
- ಧೂಮಪಾನ ಮತ್ತು ಮದ್ಯಪಾನ ಸೇವನೆ ಬೇಡ. ಪರ್ಯಾಯ ಧೂಮಪಾನವೂ ಒಳ್ಳೆಯದಲ್ಲ.
- ನಿಮ್ಮ ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ.
- ಭಾರವಾದ ಮತ್ತು ತೂಕವಾದ ವಸ್ತುಗಳನ್ನು ಎತ್ತಬೇಡಿ.
- ಎತ್ತರದ ಪ್ರದೇಶಗಳ ಅರೋಹಣ ಅಥವಾ ಕುದುರೆ ಸವಾರಿಯಂಥ ಯಾವುದೇ ಪ್ರಯತ್ನಕ್ಕೆ ಕೈ ಹಾಕಬೇಡಿ.
- ಸುದೀರ್ಘ ಕಾಲದ ಪ್ರಯಾಣ ಬೇಡ.
- ದೀರ್ಘ ಕಾಲದ ಪ್ರಯಾಣ ಅನಿವಾರ್ಯವಾಗಿದ್ದಲ್ಲಿ ಕಾರು ಅಥವಾ ಬಸ್ ಬದಲು ರೈಲು ಪ್ರಯಾಣ ಉತ್ತಮ.
- ನಿಮ್ಮ ಪಾದಗಳಿಗೆ ಉತ್ತಮವಾದ ಆಧಾರ ಅಗತ್ಯ. ಎತ್ತರದ ಹಿಮ್ಮಡಿಯ ಪಾದರಕ್ಷೆ ಬಳಸುವುದನ್ನು ಸಾಧ್ಯವಾದಷ್ಟೂ ನಿಯಂತ್ರಿಸಿ.
- ಅನಾನುಕೂಲಕರ ಭಂಗಿಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳ್ಳೆಯದು.
ಡಾ. ಬಿ. ರಮೇಶ್- ಆಲ್ಟಿಯಸ್ ಹಾಸ್ಪಿಟಲ್
ಶಾಖೆ: ರಾಜಾಜಿನಗರ: 6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
Ph: 99000 31842/ 080-2315 1873
ಶಾಖೆ:ರಾಜರಾಜೇಶ್ವರಿನಗರ : 915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098.
Ph:o80-2860 6789/96633 11128
E-mail : endoram2006@yahoo.co.in , altiushospital@yahoo.com