2. ಇನ್‍ಪ್ಲೂಯೆಂಜಾ ಸೋಂಕಿನಲ್ಲಿ ಸಾಮಾನ್ಯವಾಗಿ ವಿಪರೀತ ತಲೆ ನೋವು ಮತ್ತು ತಲೆ ಭಾರ ಇರುತ್ತದೆ. ಆದರೆ ಕೋವಿಡ್-19 ನಲ್ಲಿ ಕೆಲವೊಮ್ಮೆ ಮಾತ್ರ ಸಾಮಾನ್ಯ ತಲೆನೋವು ಇರುತ್ತದೆ.
3.ಪ್ಲೂ ಅಥವಾ ಇನ್‍ಪ್ಲೂಯೆಂಜಾ ದಲ್ಲಿ ವಿಪರೀತ ಸುಸ್ತು ಆಯಾಸ, ದಣಿವು ಇರುತ್ತದೆ ಮತ್ತು 2 ರಿಂದ 3 ವಾರಗಳ ಕಾಲ ಮುಂದುವರಿಯಬಹುದು. ಆದರೆ ಕೋವಿಡ್-19ನಲ್ಲಿ ಸ್ವಲ್ಪಮಟ್ಟಿನ ಸುಸ್ತು ದಣಿವು ಇರುತ್ತದೆ.
4. ಇನ್‍ಪ್ಲೂಯೆಂಜಾದಲ್ಲಿ ಅತಿಯಾದ ಮೈಕೈ ನೋವು, ಸ್ನಾಯು ಸೆಳೆತ ಇರುತ್ತವೆ. ಕೋವಿಡ್-19ನಲ್ಲಿ ಸ್ವಲ್ಪಮಟ್ಟಿನ ಮೈಕೈ ನೋವು ಇರುತ್ತದೆ.
5. ಇನ್‍ಪ್ಲೂಯೆಂಜಾ ಮತ್ತು ಕೋವಿಡ್-19 ಎರಡರಲ್ಲೂ ಶೀತ, ಮೂಗು ಕೆರೆತ, ಅಕ್ಷಿ (ಸೀನುವಿಕೆ) ಕಂಡುಬರುತ್ತದೆ.
6. ಗಂಟಲು ಕೆರೆತ, ಇನ್‍ಪ್ಲೂಯೆಂಜಾ ಮತ್ತು ಕೋವಿಡ್-19 ಎರಡೂ ರೋಗಗಳಲ್ಲಿ ಕಂಡು ಬರುತ್ತದೆ.
7. ಇನ್‍ಪ್ಲೂಯೆಂಜಾ ಮತ್ತು ಕೋವಿಡ್-19 ಎರಡರಲ್ಲೂ ಕೆಮ್ಮು ಮತ್ತು ಒಣ ಕೆಮ್ಮು ಇರುವ ಸಾಧ್ಯತೆ ಇರುತ್ತದೆ.
8. ಇನ್‍ಪ್ಲೂಯೆಂಜಾ ರೋಗದಲ್ಲಿ ಉಸಿರಾಟದ ತೊಂದರೆ ಕಂಡು ಬರುವುದು ಬಹಳ ವಿರಳ. ಆದರೆ ಕೋವಿಡ್-19 ರೋಗದಲ್ಲಿ ಮುಂದುವರಿದ ಹಂತದಲ್ಲಿ ಉಸಿರಾಟದ ತೊಂದರೆ ಕಂಡುಬರುತ್ತದೆ.
9. ರುಚಿ ಕಂಡು ಹಿಡಿಯಲು ಕಷ್ಟವಾಗುವುದು ಮತ್ತು ವಾಸನೆ ಇಲ್ಲದಿರುವುದು ಕೋವಿಡ್-19 ರೋಗದಲ್ಲಿ ಕೆಲವೊಮ್ಮೆ ಕಂಡು ಬಂದಿರುತ್ತದೆ. ಆದರೆ ಇನ್‍ಪ್ಲೂಯೆಂಜಾ ರೋಗದಲ್ಲಿ ಇದು ಅತ್ಯಂತ ವಿರಳವಾಗಿರುತ್ತದೆ.
10. ಬೇಧಿ ಮತ್ತು ಅತಿಸಾರ ಕೋವಿಡ್-19 ರೋಗದಲ್ಲಿ ಕಂಡು ಬಂದಿದೆ. ಆದರೆ ಇನ್‍ಪ್ಲೂಯೆಂಜಾ ರೋಗದಲ್ಲಿ ವಿರಳವಾಗಿರುತ್ತದೆ.
11. ಪ್ಲೂ ಮತ್ತು ಕೋವಿಡ್-19 ಎರಡರಿಂದಲೂ ನ್ಯೂಮೋನಿಯಾ ಸೋಂಕು ಉಂಟಾಗಬಹುದು. ಆದರೆ ಕೋವಿಡ್-19 ನಲ್ಲಿ ಈ ಸಾಧ್ಯತೆ ಹೆಚ್ಚಾಗಿರುತ್ತದೆ.
12. ಮರಣದ ಪ್ರಮಾಣ ಪ್ಲೂ ರೋಗದಲ್ಲಿ 01 ಶೇಕಡಾ ಇರುತ್ತದೆ ಮತ್ತು ಕೋವಿಡ್-19 ರೋಗದಲ್ಲಿ 3.5% ಇರುತ್ತದೆ.
13. ಎರಡೂ ರೋಗಗಳು ಒಂದೇ ರೀತಿಯಲ್ಲಿ ಹರಡುತ್ತದೆ. ಸೀನಿದಾಗ, ಕೆಮ್ಮಿದಾಗ ಕಿರುಕಣಗಳ ಮುಖಾಂತರ ಹರಡುತ್ತದೆ ಎರಡೂ ರೋಗಗಳು ಸೋಂಕಿತ ವ್ಯಕ್ತಿಗಳಿಂದ ರೋಗ ಲಕ್ಷಣ ಕಾಣಿಸಿಕೊಳ್ಳುವ ಮೊದಲೇ ಹರಡುವ ಸಾಧ್ಯತೆ ಇರುತ್ತದೆ. ಕಿಟಕಿ ಅವಧಿ ಅಥವಾ ವಿಂಡೋ ಪೀರಿಯಡ್ ಪ್ಲೂ ರೋಗಕ್ಕೆ 3 ದಿನ ಇರುತ್ತದೆ ಮತ್ತು ಕೋವಿಡ್-19 ರೋಗಕ್ಕೆ 6 ರಿಂದ 9 ದಿನ ಇರುತ್ತದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com