Health Vision

ಕೋವಿಡ್-19  ಹೆಚ್ಚಿಸುತ್ತಿದೆ- ಹೈಪರ್ಟೆನ್ಶನ್

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಇಡೀ ಪ್ರಪಂಚವೇ ಇಂದು ಹೋರಾಡುತ್ತಿದೆ. ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.

ಕೋವಿಡ್-19  ಹೆಚ್ಚಿಸುತ್ತಿದೆ- ಹೈಪರ್ಟೆನ್ಶನ್ಇದೀಗ ಎಲ್ಲೆಡೆ ಕೋವಿಡ್ದೇ ಸುದ್ಧಿ. ದಿನದಿಂದ ದಿನಕ್ಕೆ ಏರುತ್ತಿರುವ ಸೋಂಕಿತರ ಸಂಖ್ಯೆಯು ದೇಶ-ವಿದೇಶದ ಎಲ್ಲೆಡೆ ಸರಕಾರಕ್ಕೆ ತಲೆಬಿಸಿ ತಂದಿಟ್ಟಿದೆ. ಇಡೀ ವಿಶ್ವವೇ ಹೋರಾಡುತ್ತಿದೆ ಈ ಸೋಂಕಿನ ವಿರುದ್ಧ. ಇವುಗಳ ಮಧ್ಯೆ ಈ ವೈರಾಣು ಮತ್ತಷ್ಟು ಅಪಾಯಕಾರಿಯಾಗಿ ವರ್ತಿಸುತ್ತಿರುವುದು ಹೃಪರ್ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ, ಮಧುಮೇಹಿಗಳಿಗೆ ಹಾಗೂ ಹೃದ್ರೋಗಿಗಳಿಗೆ..! ಹಾಗಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ನಿಜಕ್ಕೂ ಈ ಸಮಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿರಬೇಕು.

ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು:

ಇತ್ತೀಚಿನ ದಿನಗಳಲ್ಲಿ ತೀವ್ರವಾದ ಹೃದಯಾಘಾತದಿಂದ ಆಸ್ಪತ್ರೆಯ ತುರ್ತು ಘಟಕಗಳಿಗೆ ದಾಖಲಾಗುವ ರೋಗಿಗಳು ಕಡಿಮೆಯಾಗಿದ್ದರೆ, ಮನೆಯಲ್ಲಿ ಹೃದಯ ಸ್ತಂಭನದಿಂದ ಸಾವುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದು ಬಹುಶಃ ಮುಂದೂಡುವುದು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ವಿಳಂಬದಿಂದಾಗಿರಬಹುದು. ಆದ್ದರಿಂದ, ಹೃದಯ ರೋಗಿಗಳು ಯಾವುದೇ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು / ಅಥವಾ ವೈದ್ಯಕೀಯ ಆರೈಕೆಯನ್ನು ವಿಳಂಬಗೊಳಿಸಬಾರದು.

ಕೋವಿಡ್ 19 ಕಾಯಿಲೆಯು ಹೃದ್ರೋಗಿಗಳ ದೇಹದಲ್ಲಿ ಹೆಚ್ಚಿನ ತೊಡಕನ್ನುಂಟುಮಾಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ನಿಯಮಿತವಾದ ಮೇಲ್ವಿಚಾರಣೆ, ಸಮತೋಲಿತ ಆಹಾರ ಸೇವನೆ, ವೈದ್ಯರೊಂದಿಗಿನ ನಿರಂತರ ಸಂಪರ್ಕ ಹೊಂದಿರುವುದು ಬಹಳ ಮುಖ್ಯ. ಅದರಲ್ಲೂ ಕೋವಿಡ್ 19 ಉಸಿರಾಟದ ಮೇಲೆ ಪರಿಣಾಮ ಬೀರುವ ಕಾಯಿಲೆಯಾದ್ದರಿಂದ ಎಲ್ಲಾ ಅಂಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡಲು ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಮುಖ್ಯ.

ಕೊರೊನಾ ವೈರಸ್ ಹರಡುವಿಕೆಯ ಮಧ್ಯೆ ಹೃದಯ ಸಮಸ್ಯೆ ಇರುವ ಜನರು ಹೆಚ್ಚಿನ ಜಾಗರೂಕರಾಗಿರಬೇಕು. ಔಷಧಿಗಳ ವೇಳಾಪಟ್ಟಿಯನ್ನು ಆಗಾಗ ಪಾಲಿಸುತ್ತಿರಬೇಕು. ಅಧಿಕ ರಕ್ತದೊತ್ತಡ ಹಾಗೂ ಹೃದಯ ವೈಫಲ್ಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಕೆಲವು ಸಾಮಾನ್ಯ ಔಷಧಿಗಳನ್ನು ವೈದ್ಯರೊಂದಿಗೆ ಸಮಾಲೋಚಿಸದ ಹೊರತು ನಿಲ್ಲಿಸಬಾರದು. ಮನೆಯಲ್ಲಿ ಇದ್ದಾಗಲೂ ಸಹಾ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಹಾಗೂ ಲಘು ದೈಹಿಕ ಚಟುವಟಿಕೆಗಳನ್ನೂ ನಡೆಸುತ್ತಿರಬೇಕು. ಜ್ವರದಂತಹ ಲಕ್ಷಣಗಳನ್ನು ಹೊಂದಿರುವವರಿಂದ ಅಂತರವನ್ನು ಕಾಯ್ದುಕೊಳ್ಳಿರಿ ಮತ್ತು ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿರಿ

ಬದಲಾದ ಜೀವನಶೈಲಿಯು ಭಾರತೀಯರ ಆರೋಗ್ಯದ ಮೇಲೆ ದೊಡ್ಡಮಟ್ಟದ ಪರಿಣಾಮಬೀರಿದೆ. ಹಿಂದೆಲ್ಲಾ ವಯಸ್ಕರಿಗಷ್ಟೇ ಬರುವುದು ಎನ್ನಲಾಗುತ್ತಿದ್ದ Hypertension ಅಥವಾ ಅಧಿಕ ರಕ್ತದೊತ್ತಡ ಕಿರಿಯ ವಯಸ್ಸಿನವರಿಗೂ ಬಾಧಿಸುತ್ತಿದೆ.ಭಾರತದ 5 ಯುವಕರಲ್ಲಿ ಒಬ್ಬರಿಗೆ ಹಾಗೂ 3 ವಯಸ್ಕರಲ್ಲಿ ಒಬ್ಬರಿಗೆ ಎನ್ನುವಂತೆ ಈ ಕಾಯಿಲೆ ವ್ಯಾಪಕವಾಗುತ್ತಿದೆ. ಆ ಮೂಲಕ ವೇಗವಾಗಿ Hypertension ಗೆ ತುತ್ತಾಗುತ್ತಿರುವ ದೇಶ ಭಾರತ ಎನ್ನುವ ಕಳವಳಕಾರಿ ಮಾಹಿತಿಯನ್ನು ಈ ಅಂಕಿ ಅಂಶ ಹೇಳುತ್ತಿದೆ.ಈಗಾಗಲೇಮಧುಮೇಹಿಗಳ ತವರುಎನ್ನುವ ಕುಖ್ಯಾತಿ ಭಾರತದ್ದಾಗಿದ್ದು, ಪ್ರತಿ 3 ಮಧುಮೇಹಿಗಳಲ್ಲಿ ಇಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗುತ್ತಾರಂತೆ. ಬಹುತೇಕರಿಗೆ ಹೆಚ್ಚಿನ ಬಿಪಿ ಗಮನಕ್ಕೇ ಬಾರದೇಹೋಗುತ್ತಿದ್ದು; ಅದರ ಪರಿಣಾಮವೇ ಪಾರ್ಶವಾಯು, ಹೃದಯವೈಫಲ್ಯ ಅಥವಾ ಮೂತ್ರಪಿಂಡದ ಕಾಯಿಲೆಗಳಂತವುಗಳಾಗಿವೆ. ಈ ಭೀಕರ ಕಾಯಿಲೆಯು ಇಂದು silentkiller ರ್ರೀತಿ ಹೊಂಚುಹಾಕಿ ಬಹಳಷ್ಟು ಜನರ ಪ್ರಾಣವನ್ನೇ ತೆಗೆದಿದೆ.

ಅಧಿಕ ರಕ್ತದೊತ್ತಡ ಇದೆ ಎಂದು ಪತ್ತೆಹಚ್ಚುವುದು ಹೇಗೆ?

ಕೋವಿಡ್-19  ಹೆಚ್ಚಿಸುತ್ತಿದೆ- ಹೈಪರ್ಟೆನ್ಶನ್ಆರಂಭದಲ್ಲೇ ಅಧಿಕ ರಕ್ತದೊತ್ತಡವನ್ನು ಗುರುತಿಸುವುದು ಅತಿಮುಖ್ಯವಾಗಿದೆ.ಏಕೆಂದರೆ ಈ ಹಂತದಲ್ಲಿ ಅದನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.ಇದರಿಂದ ಮುಂದೆ ಸಂಭವಿಸಬಹುದಾದ ಹೆಚ್ಚಿನ ಹಾನಿಯನ್ನು ತಡೆಯಬಹುದು.ಹೆಚ್ಚಿನ ಬಿಪಿ ಯಾವುದೇ ಲಕ್ಷಣ ತೋರಿಸದಿದ್ದರೂ ಕೂಡ ಆಗಾಗ ಕಾಣಿಸಿಕೊಳ್ಳುವ ತಲೆನೋವು (ವಿಶೇಷವಾಗಿತಲೆಯಹಿಂಭಾಗದಲ್ಲಿ), ದೃಷ್ಟಿ ಮಂದವಾಗುವುದು, ವಾಕರಿಕೆ, ಹೃದಯ ಬಡಿತದ ಏರಿಳಿತ, ಉಸಿರಾಟಕ್ಕೆ ತೊಂದರೆ, ಮೂಗು ಸೋರುವುದು ಇತ್ಯಾದಿ ಕೆಲವು ರೋಗಲಕ್ಷಣಗಳು ವ್ಯಕ್ತಿಯು ಬಿಪಿ ಹೊಂದಿರಬಹುದೆನ್ನಲು ಆಧಾರ ಒದಗಿಸುತ್ತವೆ.ಕುಟುಂಬದಲ್ಲಿ ಯಾರಿಗಾದರೂ ಅಧಿಕ ರಕ್ತದೊತ್ತಡದ ಸಮಸ್ಯೆಯಿದ್ದರೆ ಅಥವಾ ಮೇಲೆ ಹೇಳಿರುವ ರೋಗ ಲಕ್ಷಣಗಳನ್ನು ಅನುಭವಿಸಿದರೆ ಕೂಡಲೇ ವೈದ್ಯರ ಸಲಹೆಯನ್ನು ಪಡೆಯುವುದು ಬಹಳಮುಖ್ಯ.ಸಾಮಾನ್ಯವಾಗಿ ಬೇರೆಯಾವುದೋ ಚಿಕಿತ್ಸೆಗೆಂದು ತಪಾಸಣೆ ಮಾಡುವಾಗಲೇ ಬಹುತೇಕರಿಗೆ ಬಿಪಿ ಇರುವುದು  ಗೊತ್ತಾಗುತ್ತಿದೆ. ಹಾಗಾಗಿ 25 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಬಿಪಿ ಪರೀಕ್ಷಿಸಿಕೊಳ್ಳುವುದು ಉತ್ತಮ.

ಹೃದಯ ಕಾಯಿಲೆಇದ್ದವರು, ಹೃದಯಾಘಾತವಾದವರು, ಹೃದಯ ವೈಫಲ್ಯದ ರೋಗಿಗಳ ಮೇಲೆ ಕೋವಿಡ್ ಸೋಂಕು ಅಪಾಯ ಉಂಟು ಮಾಡುವುದು ಹೆಚ್ಚು. ಕಡಿಮೆ ಅಪಾಯದ ಕೊರೊನಾ ಸೋಂಕು ಸಹಾ ಹೃದಯ ಕಾಯಿಲೆಯ ಉಲ್ಭಣಕ್ಕೆ ಕಾರಣವಾಗಬಹುದು.ಇದಕ್ಕೆ ತುರ್ತು ವೈದ್ಯಕೀಯ ಆರೈಕೆ ಅತಿಮುಖ್ಯ. ಆದ್ದರಿಂದ ಹೃದಯರೋಗಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲೇಬೇಕು.ಹಾಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಭಯಪಡಬಾರದು. ವಿಳಂಬ ಮಾಡುವುದು ತೊಂದರೆಗೆ ಕಾರಣವಾಗುತ್ತದೆ. ಎದೆನೋವು, ಉಸಿರಾಟ ತೊಂದರೆ, ಅತಿಯಾಗಿ ಬೆವರುವುದು ಹಾಗೂ ಪ್ರಜ್ಞೆ ಕಳೆದುಕೊಳ್ಳುವಂತಹ ರೋಗಲಕ್ಷಣಗಳ ಬಗ್ಗೆ ಎಚ್ಚರವಿರಲಿ. ಇವುಗಳಲ್ಲಿ ಯಾವುದಾದರೂ ಬಾಧಿಸಿದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಬಿಪಿ ಅಥವಾ ಅಧಿಕ ರಕ್ತದೊತ್ತಡಕ್ಕೆ ಪರಿಹಾರಕ್ರಮಗಳು:

ಈಗಾಗಲೇ ಹೇಳಿರುವಂತೆ ಅಧಿಕ ರಕ್ತದೊತ್ತಡ ಹೆಚ್ಚುತ್ತಿರುವುದಕ್ಕೆ ಬದಲಾದ ಜೀವನಶೈಲಿಯೇ ಮುಖ್ಯಕಾರಣ. ಜೊತೆಗೆ ಅನಾರೋಗ್ಯಕರ ಆಹಾರಪದ್ಧತಿಯ ಹೆಚ್ಚಳ, ದೈಹಿಕನಿಷ್ಕ್ರೀಯತೆ, ಹೆಚ್ಚಿನ ಮಟ್ಟದ ಒತ್ತಡ, ಹೆಚ್ಚಾದ ತಂಬಾಕು ಮತ್ತು ಮದ್ಯಪಾನದ ಬಳಕೆ ಇವೆಲ್ಲವೂ ಕೂಡಾ ಸಾಥ್ನೀಡಿವೆ, ನೀಡುತ್ತಿವೆ. ಇವೆಲ್ಲವೂ ಕೂಡಾ ಸರಿಪಡಿಸಿಕೊಳ್ಳುವುದು ನಮ್ಮಕೈಯಲ್ಲೇ ಇದೆ. ಈ ಸಮಯದಲ್ಲಿ ಖಂಡಿತವಾಗಿಯೂ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲೇಬೇಕು .ಇಲ್ಲದಿದ್ದರೆ ಅಪಾಯ ಖಚಿತ. ಅದಕ್ಕಾಗಿ ಈ ಕೆಳಗೆ ಕೆಲವು ಕ್ರಮಗಳನ್ನು ಕೊಡಲಾಗಿದೆ.ದಯವಿಟ್ಟು ಗಮನಿಸಿ.

Tathagat hospital add1. ಉತ್ತಮವಾದ ಆಹಾರಗಳನ್ನುಸೇವಿಸಿರಿ: ಸಂಸ್ಕರಿಸಿದಆಹಾರಪದಾರ್ಥಗಳು, ಕಾರ್ಬೋಹೈಟ್ರೈಟುಗಳು, ಹೆಚ್ಚಿನ ಉಪ್ಪಿನಂಶವಿರುವ ಆಹಾರಗಳು ಹೈಪರ್ಟೆನ್ಶನ್ ಅನ್ನು ಹೆಚ್ಚಿಸುತ್ತದೆ. ಇವುಗಳ ಅಧಿಕ ಸೇವನೆಯಿಂದ ತೂಕ ಹೆಚ್ಚಾಗುತ್ತದೆ, ಮಧುಮೇಹ ಬಾಧಿಸುತ್ತದೆ.ಪರಿಣಾಮ ರಕ್ತದಒತ್ತಡವೂ ಹೆಚ್ಚುತ್ತದೆ.ನೈಸರ್ಗಿಕ ಆಹಾರಗಳು, ಹೇರಳ ಫೈಬರ್, ಪೊಟ್ಯಾಸಿಯಂ ಹಾಗೂ ಕ್ಯಾಲ್ಶಿಯಂ ಇರುವಂತಹ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ, ಹಾಲು, ಮಜ್ಜಿಗೆ, ತುಪ್ಪದಂತಹ ಡೈರಿ ಉತ್ಪನ್ನಗಳ ಬಳಕೆಯು ಅಧಿಕ ರಕ್ತದೊತ್ತಡ ತಡೆಯುವಿಕೆಗೆ ಸಹಾಯ ಮಾಡುತ್ತದೆ.

2. ಅಶಕ್ತತೆ ಅಥವಾ ನಿಷ್ಕ್ರೀಯತೆ ಬರುವುದನ್ನು ತಪ್ಪಿಸಿರಿ: ಪ್ರತಿದಿನವೂ ವ್ಯಾಯಾಮಮಾಡಿ. ಜಿಮ್, ವ್ಯಾಯಾಮಶಾಲೆ, ಇಲ್ಲವೆಂದು ಆಲಸ್ಯಕ್ಕೆ ದಾಸರಾಗದಿರಿ. ಆಗಾಗ ಚಟುವಟಿಕೆಯಿಂದಿರಿ, ನಿಮ್ಮ ಮನೆಯ ಮೆಟ್ಟಿಲುಗಳನ್ನಾದರೂ ಹತ್ತಿ ಇಳಿಯುತ್ತಿರಿ. ಆನ್ಲೈನ್ತರಗತಿಗಳನ್ನು ಉಪಯೋಗಿಸಿಕೊಂಡು, ಏರೋಬಿಕ್, ಜುಂಬಾಡ್ಯಾನ್ಸ್ಮಾಡುತ್ತಾ ಆರೋಗ್ಯವನ್ನುಕಾಪಾಡಿಕೊಳ್ಳಿರಿ.

3. ಒತ್ತಡ ಹಾಗೂ ಆತಂಕವನ್ನು ನಿಭಾಯಿಸಿರಿ: ಪ್ರಸ್ತುತ ಸಾಂಕ್ರಾಮಿಕ ರೋಗ ತಂದೊಡ್ಡಿರುವ ಮಾನಸಿಕ ಹಾಗೂ ಆರ್ಥಿಕ ಹೊಡೆತದ ಪರಿಣಾಮ ಎಲ್ಲರಿಗೂತಟ್ಟಿದೆ. ಸಾಮಾಜಿಕ ಕಿರಿಕಿರಿಗಳು, ತಡೆಗಳು, ಜೊತೆಗೆ ಭಯವೂ ಆವರಿಸಿರುವುದು ಒಂದೆಡೆಯಾದರೆ ಹಲವರಿಗೆ ಕೆಲಸಕ್ಕೂಸಂಚಕಾರ ತಂದಿಟ್ಟಿದೆ. ದೈನಂದಿನ ಜೀವನ ನಡೆಸಲೂ ಆಗದ ಸ್ಥಿತಿಯಲ್ಲಿ ಬಹುತೇಕರಿದ್ದಾರೆ. ಉದ್ಯೋಗ ಕ್ಷೇತ್ರ ಪಾತಾಳಕ್ಕಿಳಿದರೆ, ವಿಶ್ವವೇ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದೆ.ಹಾಗಾಗಿ ಈ ಸಮಯದಲ್ಲಿ ಒತ್ತಡ ಜೊತೆಗೆ ಆತಂಕ ಸಹಜ. ಅದನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ ಇದೀಗ ನಮ್ಮಮುಂದಿದೆ. ಅದಕ್ಕಾಗಿ ಒತ್ತಡನಿಭಾಯಿಸಲು ಇರುವ ತಂತ್ರಗಳ ಬಗ್ಗೆ ಗಮನ ಕೊಡಿ.

4. ಧ್ಯಾನ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡಿ. ನಕಾರಾತ್ಮಕತೆಯತ್ತ ಹೆಚ್ಚು ಯೋಚಿಸದಿರಿ. ನಿಮ್ಮ ಮಾನಸಿಕ ಒತ್ತಡ ಕಾಯ್ದುಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನವರ ಖಿನ್ನತೆ ಕೂಡಾ ನಿಮ್ಮ ಗಮನಕ್ಕೆ ಬಂದರೆ ಅವರ ಸ್ಥಿತಿ ಸುಧಾರಿಸಲೂ ಸಹಾಯ ಮಾಡುವುದು ನಮ್ಮದೇ ಜವಾಬ್ದಾರಿಯಾಗಿದೆ.ಅತಿ ಹೆಚ್ಚುಸಮಯ ಸಾಮಾಜಿಕ ಜಾಲತಾಣ ಹಾಗೂ ಟಿವಿ ಸುದ್ಧಿಮಾಧ್ಯಮಕ್ಕೆ ನೀಡದಿರಿ.

5. ಅನಾರೋಗ್ಯಕರ ಅಭ್ಯಾಸ ತ್ಯಜಿಸಿಬಿಡಿ: ಲಾಕ್ಡೌನ್ ಒತ್ತಡವನ್ನೇನೊ ಹೆಚ್ಚುಮಾಡಿದ್ದುನಿಜ. ಲಾಕ್ಡೌನ್ನಲ್ಲಿ ಸಿಗದ ಮದ್ಯಪಾನ ಹಾಗೂ ತಂಬಾಕುಗಳ ಅಭಾವದಿಂದ ಸುಮ್ಮನಿದ್ದ ಜನರು ತೆರವಿನ ನಂತರ ಮತ್ತೆ ಆ ದುಷ್ಚಟಗಳಿಗೆ ದಾಸರಾದರು. ಇವೆಲ್ಲವೂ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಉತ್ತಮ ಆರೋಗ್ಯಕರ ಜೀವನಕ್ಕೆ ಅಡ್ಡಿಮಾಡುತ್ತವೆ. ಹಾಗಾಗಿ ಇವುಗಳನ್ನು ತ್ಯಜಿಸಿರಿ. Covid 19 ಕಾಲದಲ್ಲಿ ತಂಬಾಕು ಬಳಕೆಯು ತುಂಬಾ ಹಾನಿಕಾರಕವಾಗಿದೆ ಮತ್ತು ತಂಬಾಕನ್ನು ತ್ಯಜಿಸಲು ಇದು ಸೂಕ್ತ ಸಮಯ.ಧೂಮಪಾನ ಮಾಡದ ಜನರಿಗೆ ಹೋಲಿಸಿದರೆ ಧೂಮಪಾನ ಮಾಡುವವರಿಗೆ Covid-19 ಬರುವ ಅಪಾಯ ಹೆಚ್ಚು.

ಮೇಲಿನ ಕ್ರಮಗಳ ಪಾಲನೆ ಏಕೆ ಅತಿ ಮುಖ್ಯ?

ದೀರ್ಘಕಾಲದ ಅಧಿಕ ರಕ್ತದ ಒತ್ತಡಗಳು ಹೃದಯದ ಅಪಧಮನಿ ಗೋಡೆಗಳನ್ನು ಕಿರಿದಾಗಿಸುತ್ತದೆ.ಇದರಿಂದ ರಕ್ತವು ಮುಕ್ತವಾಗಿ ಹರಿಯಲು ಕಷ್ಟವಾಗುತ್ತದೆ. ಇದರ ಪರಿಣಾಮ ಕೇವಲ ಹೃದಯ ಮಾತ್ರವಲ್ಲ ಮೆದುಳು, ಕಣ್ಣು ಮತ್ತು ಮೂತ್ರಪಿಂಡಗಳ ಮೇಲೂ ಆಗುತ್ತವೆ.ಹಾರ್ಟ್ಅಟ್ಯಾಕ್, ಹಾರ್ಟ್ಫೇಲ್, ಪಾರ್ಶ್ವವಾಯು, ಬ್ರೈನ್ಹ್ಯಾಮರೇಜ್, ಕಿಡ್ನೀಫೈಲ್ಯೂ ರ್ಇತ್ಯಾದಿಗಳೆಲ್ಲ ಸಂಭವಿಸುವುದು ಇದೇ ಕಾರಣಗಳಿಂದ.ಹಾಗಾಗಿ ರಕ್ತದೊತ್ತಡವನ್ನು ಸರಿಯಾಗಿರುವಂತೆ ನೋಡಿಕೊಳ್ಳಬೇಕಾಗಿರುವುದು ಅತಿಅವಶ್ಯಕಗಳಲ್ಲಿ ಒಂದು.

ಜೀವನಶೈಲಿಯನ್ನು ಒಳ್ಳೆಯ ರೀತಿಯಲ್ಲಿ ತರಲು ಪ್ರಯತ್ನಿಸುವುದು, ಬಿಪಿಯನ್ನು ನಿಯಮಿತವಾಗಿ ತಪಾಸಣೆಮಾಡಿಸಿಕೊಳ್ಳುವುದು ಹಾಗೂ ಕಟ್ಟುನಿಟ್ಟಾಗಿ ಔಷಧಿಯನ್ನು ಸೇವಿಸುವುದು ಮಾಡಿದರೆ ಹೈಪರ್ಟೆನ್ಶನ್ಸಮಸ್ಯೆಯನ್ನು ಸುಲಭವಾಗಿ ಸೋಲಿಸಬಹುದು.ಇವು ಗುಣಮಟ್ಟದ ಜೀವನ ನಡೆಸಲೂ ಸಹಕಾರಿ ಹಾಗೂ ಹಲವಾರು ಕಾಯಿಲೆಗಳಿಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಈ ಒಂದು ಸಮಯವನ್ನು ನಮ್ಮ ಜೀವನಶೈಲಿಯನ್ನು ಉತ್ತಮಮಟ್ಟದ ಬದಲಾವಣೆಗೆ ತೆರೆದುಕೊಂಡು ಸಕಾರಾತ್ಮಕ ಆಲೋಚನೆಗಳಿಂದ ಸೂಕ್ತವಾದ ಬದ್ಧತೆಯ ಜೀವನವನ್ನುಎಲ್ಲರೂ ನಡೆಸುವಂತಾಗಲಿ.

ಡಾ. ಮಹಂತೇಶ್ ಆರ್. ಚರಂತಿಮಠ್ ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್, ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-41410099, 9900356000
E-mail: mahanteshrc67@gmail.com      

http://tathagathearthospital.com/

Back To Top