ಸುಟ್ಟಗಾಯಗಳು – ಪ್ರಥಮ ಚಿಕಿತ್ಸೆ ಏನ್ ಮಾಡೋದು?

ಸುಟ್ಟಗಾಯಗಳು ವಿನಾಶಕಾರಿಯಾಗಿದ್ದು, ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಂಭವಿಸುತ್ತದೆ. ಸುಟ್ಟಗಾಯಗಳಿಗೆ ಒಳಗಾದ ರೋಗಿಗಳ ಮೇಲೆ ಮಾನಸಿಕವಾಗಿಯೂ ಸಹ ಪರಿಣಾಮ ಉಂಟಾಗಿ ಹತಾಶೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ.

ಸುಟ್ಟಗಾಯಗಳು - ಪ್ರಥಮ ಚಿಕಿತ್ಸೆ ಏನ್ ಮಾಡೋದು?ಸುಟ್ಟಗಾಯಗಳು ವಿನಾಶಕಾರಿ ಹಾಗೂ ಅಂದಾಜು 2,65,000 ಸಾವುಗಳಿಗೆ ಸುಟ್ಟಗಾಯಗಳು ಕಾರಣವಾಗಿವೆ ಎಂದು ಅಂದಾಜು ಮಾಡಲಾಗಿದ್ದು, ಇವುಗಳಲ್ಲಿ ಬಹುತೇಕ ಪ್ರಕರಣಗಳು ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಸಂಭವಿಸುತ್ತವೆ. ನಮ್ಮ ದೇಶದಲ್ಲಿ ಅಂದಾಜು 10,00,000 ಸಾಧಾರಣ ಮತ್ತು ತೀವ್ರ ಸುಟ್ಟಗಾಯ ಪ್ರಕರಣಗಳಿವೆ. ಸುಟ್ಟಗಾಯಗಳು ಅಧಿಕ ಪ್ರಮಾಣದ ಸಾವು ಮತ್ತು ಅನಾರೋಗ್ಯದೊಂದಿಗೆ ಅಪ್ರಾಪ್ತರಿಂದ ಪ್ರೌಢರವರೆಗೆ ಸಂಭವಿಸುತ್ತದೆ. ಸುಟ್ಟಗಾಯಗಳಿಗೆ ಒಳಗಾದ ರೋಗಿಗಳ ಮೇಲೆ ಮಾನಸಿಕವಾಗಿಯೂ ಸಹ ಪರಿಣಾಮ ಉಂಟಾಗಿ ಹತಾಶೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಇಂಥ ರೋಗಿಗಳನ್ನು ಪುನ:ಶ್ಚೇತನಗೊಳಿಸುವುದು ವೈದ್ಯಕೀಯ ಸಿಬ್ಬಂದಿಗೆ ಒಂದು ಸವಾಲಾಗಿ ಪರಿಣಮಿಸುತ್ತದೆ.

ಸುಟ್ಟಗಾಯಕ್ಕೆ ಒಳಗಾದ ರೋಗಿಗಳ ಚಿಕಿತ್ಸೆಯು ಆರಂಭಿಕ ಆರೈಕೆಯಿಂದ ಪುನರ್ವಸತಿ ಕಲ್ಪಿಸುವ ತನಕ ಬಹು ವಿಶೇಷತೆಯ ವಿಧಾನವನ್ನು ಒಳಗೊಂಡಿರುತ್ತದೆ. ಸುಟ್ಟಗಾಯಗಳು ಒಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ವಿಕಲತೆಗೆ ಹೊಂದಿಕೊಂಡ-ಬದುಕು ನಷ್ಟಕ್ಕೆ ಕಾರಣವಾಗುತ್ತದೆ. ಈ ಲೇಖನವು ಸುಟ್ಟಗಾಯಗಳನ್ನು ತಡೆಗಟ್ಟುವ ಮುಂಜಾಗ್ರತೆ ಕ್ರಮಗಳು ಹಾಗೂ ಸುಟ್ಟಗಾಯಗಳ ರೋಗಿಗಳಿಗೆ ಪ್ರಥಮ ಚಿಕಿತ್ಸೆಯ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರಸ್ತಾವನೆ

ಸುಟ್ಟಗಾಯಗಳು ವಿನಾಶಕಾರಿಯಾಗಿದ್ದು, ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಂಭವಿಸುತ್ತದೆ. ಅಭಿವೃದ್ಧಿಯಾಗದ ಸ್ವರೂಪಗಳು ಮತ್ತು ಮೂಲಸೌಕರ್ಯ ಕೊರತೆಗಳು ಹಾಗೂ ಕೆಳ ಸಾಮಾಜಿಕ-ಆರ್ಥಿಕ ಕಾರಣಗಳನ್ನು ಇದಕ್ಕೆ ಮುಖ್ಯ ಕಾರಣದ ಅಂಶಗಳಾಗಿ ಪರಿಗಣಿಸಲಾಗಿದೆ. ಬಡತನ, ಅಗಾಗ ವಿದ್ಯುತ್ ಅಘಾತಗಳು, ಕಳಪೆ ಮನೆ ಸೌಕರ್ಯಗಳು, ಮತ್ತು ಅಸುರಕ್ಷಿತ ತೆರೆದ ವಾತಾವರಣದ ಅಡುಗೆ ಪದ್ಧತಿಗಳು, ಸಾಂಪ್ರದಾಯಿಕ ಮತ್ತು ಧಾರ್ಮಿಕ ಸಮಾರಂಭಗಳು-ಇವುಗಳನ್ನು ಈ ಅಂಶಗಳು ಒಳಗೊಂಡಿರುತ್ತವೆ. ಸುಟ್ಟಗಾಯಗಳು ಮನೆಗಳು, ಸಾರ್ವಜನಿಕ ಸ್ಥಳಗಳು, ಕಾರ್ಖಾನೆಗಳು ಮತ್ತು ಸಾಂದರ್ಭಿಕವಾಗಿ ದುರಂತಗಳ ರೂಪದಲ್ಲಿ ಸಂಭವಿಸುತ್ತದೆ. ಸುಟ್ಟಗಾಯಗಳ ಪ್ರಕರಣಗಳು ಜಾಗತಿಕವಾಗಿ ಹೆಚ್ಚಾಗುತ್ತಿದೆ.

ಕುದಿಯುವಿಕೆ, ರಾಸಾಯನಿಕ ಮತ್ತು ವಿದ್ಯುತ್ ಗಾಯಗಳು ಸುಟ್ಟಗಾಯಗಳಿಗೆ ಸಾಮಾನ್ಯ ಕಾರಣಗಳಾಗಿವೆ. ಪ್ರಥಮ ಚಿಕಿತ್ಸೆಯೊಂದಿಗೆ ಸುಟ್ಟಗಾಯಗಳಿಗೆ ಪರಿಣಾಮಕಾರಿ ನಿರ್ವಹಣೆ ಆರಂಭವಾಗುತ್ತದೆ. ಇದನ್ನು ಶೀಘ್ರವಾಗಿ ಹಾಗೂ ಅವಘಡದ ಸ್ಥಳಕ್ಕೆ ಹತ್ತಿರದಲ್ಲೇ ಸಾಮಾನ್ಯವಾಗಿ ಕೈಗೊಳ್ಳಬೇಕು. ಸೂಕ್ತ ಪ್ರಥಮ ಚಿಕಿತ್ಸೆ ನೀಡಿದರೆ ಅದು ಗಾಯದ ಹಾಗೂ ಜೀವಕೋಶದ ಹಾನಿಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಪ್ರಥಮ ಚಿಕಿತ್ಸಾ ಕ್ರಮಗಳು ಕಲಿಯಲು ಸರಳ, ಚಿಕಿತ್ಸೆ ನೀಡಲು ಸುಲಭವಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ನೋವಳಿಕೆ ಒದಗಿಸಲಿದ್ದು, ವಿಧಾನಕ್ಕಾಗಿ ಅಗತ್ಯಗಳು ಸಿದ್ಧವಾಗಿ ಲಭ್ಯವಿರಬೇಕಾಗುತ್ತದೆ. ಪ್ರಥಮ ಚಿಕಿತ್ಸಾ ವಿಧಾನವು ನಂತರದ ವಿಶೇಷ ಮೌಲ್ಯಮಾಪನ ಮತ್ತು ಚಿಕಿತ್ಸೆ ಮೇಲೆ ನಕರಾತ್ಮಕ ಪರಿಣಾಮ ಬೀರಬಾರದು.

ಸುಟ್ಟಗಾಯಗಳಿಗೆ ಕಾರಣಗಳು

  • ಸ್ಥಳೀಯವಾಗಿ ಸುಟ್ಟಗಾಯಗಳಿಗೆ ಸಾಮಾನ್ಯ ಕಾರಣಗಳು
  • ಕುದಿಯುವ ನೀರು, ಎಣ್ಣೆ ಇತ್ಯಾದಿಯಿಂದ ಸುಟ್ಟಗಾಯಗಳು
  • ಉಷ್ಣ ಸುಟ್ಟಗಾಯಗಳು
  • ವಿದ್ಯುತ್ ಗಾಯಗಳು
  • ರಾಸಾಯನಿಕ ಸುಟ್ಟಗಾಯಗಳು

ಇಂಥ ಗಾಯಗಳಿಗೆ ಮಕ್ಕಳು ಹೆಚ್ಚಾಗಿ ಒಳಗಾಗುತ್ತಾರೆ. ತಂದೆ ತಾಯಿಗಳು ಮತ್ತು ಪೋಷಕರ ಕಡೆಯಿಂದ ಸ್ವಲ್ಪ ಹೆಚ್ಚಿನ ಜಾಗರೂಕತೆ ವಹಿಸಿದರೆ ಇಂಥ ಸುಟ್ಟಗಾಯಗಳನ್ನು ತಡೆಗಟ್ಟಬಹುದಾಗಿರುತ್ತದೆ. ಇವು ಮಕ್ಕಳನ್ನು ಸುಟ್ಟಗಾಯಗಳ ದೂಷಣೆ ಮತ್ತು ಸಂಬಂಧಪಟ್ಟ ತೊಡಕುಗಳಿಂದ ಉಳಿಸುತ್ತದೆ. ಮಕ್ಕಳು ಪೋಷಕರ ಆರೈಕೆಯಲ್ಲಿದ್ದಾಗ ವಿಶೇಷವಾಗಿ ಮಕ್ಕಳ ಮೇಲಿನ ದೌರ್ಜನ್ಯವನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.

1. ಮಕ್ಕಳ ಮೇಲಿನ ದೌರ್ಜನ್ಯದ ಎಲ್ಲ ಪ್ರಕರಣಗಳಲ್ಲಿ ಶೇಕಡ 10ರಷ್ಟು ಸುಟ್ಟಗಾಯಗಳಿಗೆ ಕಾರಣವಾಗುತ್ತವೆ.

2. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬಹುತೇಕ ಶೋಷಣೆಗೆ ಒಳಗಾಗುತ್ತಾರೆ.

3. ಕುದಿಯುವ ನೀರಿನಿಂದ ಆಗುವ ಸುಟ್ಟಗಾಯಗಳು ತೀರಾ ಸಾಮಾನ್ಯ ಕಾರಣವಾಗಿರುತ್ತದೆ.

ಸುಟ್ಟಗಾಯಗಳು – ಶಂಕಿತ ದೌರ್ಜನ್ಯ:

burnಈ ಕೆಳಕಂಡ ಸನ್ನಿವೇಶಗಳಲ್ಲಿ ಶಂಕಿತ ದೌರ್ಜನ್ಯ ನಡೆದಿರುತ್ತದೆ.

  • ತೊಡೆ ಸಂದಿ
  • ಮೊಣಕೈಗಳು-ಮೊಣಕಾಲುಗಳು-ಹಸ್ತಗಳು-ಪಾದ ತಳಗಳು
  • ಸ್ಪಷ್ಟ ಗುರುತಿನೊಂದಿಗೆ ಸುಟ್ಟಗಾಯಗಳು
  • ಹಳೆಯ ಗಾಯಗಳ ಇರುವಿಕೆ
  • ‘ಅವಘಡ’ದ ವ್ಯತಿರಿಕ್ತ ಹೇಳಿಕೆ
  • ಚಿಕಿತ್ಸೆ ಪಡೆಯುವಲ್ಲಿ ವಿಳಂಬ
  • ಲಿಂಗ ಸಂಬಂಧಿ ಹಿಂಸಾಚಾರ
  • ಆಸಿಡ್ ಎರಚುವಿಕೆ
  • ಆಸಿಡ್ ದಾಳಿಗೆ ಒಳಗಾದವರಲ್ಲಿ ಬಹುತೇಕರು ಮಹಿಳೆಯರು
  • ಅನೇಕರು 18 ವರ್ಷಗಳ ಕೆಳಗಿನವರಾಗಿರುತ್ತಾರೆ
  • ಪ್ರತಿ ವಾರ ಬಾಂಗ್ಲಾದೇಶದಲ್ಲಿ 10ಕ್ಕಿಂತ ಹೆಚ್ಚು ಮಹಿಳೆಯರು ಆಸಿಡ್ ದಾಳಿಗಳಿಗೆ ಒಳಗಾಗುತ್ತಾರೆ
  • ಭಾರತದಲ್ಲಿ ಪ್ರತಿ ದಿನ 4-5 ಮಹಿಳೆಯರು ವಧು ದಹನ ಅಥವಾ ‘ಅಡುಗೆಮನೆ-ಬೆಂಕಿ’ ಇವುಗಳಿಂದ ಸಾವಿಗೀಡಾಗುತ್ತಿದ್ದಾರೆ.

ಪ್ರಥಮ ಚಿಕಿತ್ಸೆಯಾಗಿ ನೀರಿನೊಂದಿಗೆ ತಣ್ಣಗೆ ಮಾಡಿ

ಸೂಕ್ತ ರೀತಿಯಲ್ಲಿ ಹಾಗೂ ಗಾಯಕ್ಕೆ ಉಪಶಮನ ನೀಡಲು ಸುಟ್ಟಗಾಯವಾದ ಸ್ಥಳವನ್ನು ನೀರಿನಿಂದ ತಣ್ಣಗೆ ಮಾಡುವ ಮೂಲಕ ಗಾಯವು ತೀವ್ರಗೊಳ್ಳದಂತೆ ತಡೆಯುವುದು ಪ್ರಥಮ ಚಿಕಿತ್ಸೆಯ ಗುರಿಯಾಗಿರುತ್ತದೆ. ಸುಟ್ಟಗಾಯಗಳಾದ ನಂತರ ಸೂಕ್ತ ಉಷ್ಣಾಂಶದಲ್ಲಿ ಹರಿಯುವ ತಣ್ಣನೆ ನೀರನ್ನು ಬಳಸುವ ಮೂಲಕ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. 2-15 ಡಿಗ್ರಿ ಸೆಲ್ಷಿಯಸ್ ನಡುವಣ ಉಷ್ಣಾಂಶದೊಳಗೆ ಜಲ ಮಾರ್ಜನ ಅಥವಾ ನೀರಿನಿಂದ ತೊಳೆಯುವಿಕೆಯು ಸುಟ್ಟಗಾಯಗಳಿಗೆ ಅಗತ್ಯವಾದ ಮಾದರಿ ಪ್ರಥಮ ಚಿಕಿತ್ಸೆಯಾಗುತ್ತದೆ. 10 ರಿಂದ 30 ನಿಮಿಷಗಳ ನಡುವಣ ಜಲ ಮಾರ್ಜನವನ್ನು ಮಾಡಬೇಕಾಗುತ್ತದೆ.

ಸುಟ್ಟಗಾಯವನ್ನು ನೀರಿನಿಂದ ತೊಳೆಯುವುದರಿಂದ ಜೀವಕೋಶಗಳು ಮತ್ತು ಅಂಗಾಂಶವನ್ನು ತಣ್ಣಗೆ ಮಾಡುವುದಲ್ಲದೇ, ಆಮ್ಲಗಳು ಮತ್ತು ಕ್ಷಾರಗಳಂಥ ಹಾನಿಕಾರಕ ಏಜೆಂಟ್‍ಗಳನ್ನು ನಿರ್ಮೂಲನೆಗೊಳಿಸಲು ಅಥವಾ ತೆಳ್ಳಗೆ ಮಾಡಲು ನೆರವಾಗುತ್ತದೆ. ಜಲ ಮಾರ್ಜನದಿಂದ ಇವುಗಳ ಪ್ರಭಾವ ಫಲಕಾರಿಯಾಗುವುದಿಲ್ಲ, ಉರಿಯ ಪ್ರತಿಕ್ರಿಯೆಗಳು ಕಡಿಮೆಯಾಗುತ್ತದೆ. ಊತ ಇಳಿಮುಖವಾಗುತ್ತದೆ ಹಾಗೂ ನಂತರ ಗಾಯವು ಗುಣಮುಖವಾಗಿ ಸುಟ್ಟಗಾಯದ ಸಿಪ್ಪೆಯು ಹೊರಬರಲು ಸಹಾಯವಾಗುತ್ತದೆ.

ಸುಟ್ಟಗಾಯಗಳಾದಾಗ ಐಸ್ ಬ್ಲಾಕ್‍ಗಳು, ಮಂಜುಗಡ್ಡೆಗಳು ಹಾಗೂ ವಿಪರೀತ ತಣ್ಣನೆ ನೀರಿನ ಬಳಕೆಯನ್ನು ನಿಯಂತ್ರಿಸಬೇಕಾಗುತ್ತದೆ. ಏಕೆಂದರೆ ಇದು ವ್ಯಾಸೋಕಾನ್‍ಸ್ಟ್ರಿಕ್ಷನ್‍ಗೆ (ರಕ್ತನಾಳಗಳ ಸಂಕೋಚನ ಅಥವಾ ಕುಗ್ಗುವಿಕೆ) ಕಾರಣವಾಗಲಿದ್ದು, ಇದು ಸುಟ್ಟಗಾಯದ ಸ್ಥಳದ ಹೆಪ್ಪುಗಟ್ಟುವಿಕೆ ವಲಯದ ತನಕ ವಿಸ್ತರಿಸಲಿದ್ದು, ಗಾಯದ ತೀವ್ರತೆಯನ್ನು ಹೆಚ್ಚಿಸುತ್ತದೆ. ಸುಟ್ಟಗಾಯ ಆದ ಮೂರು ಗಂಟೆಗಳವರೆಗೆ ಸುಟ್ಟಗಾಯಗಳಿಗೆ ಪ್ರಥಮ ಚಿಕಿತ್ಸೆಯನ್ನು ಅನ್ವಯಿಸಬಹುದಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸುಟ್ಟಗಾಯಗಳಿಗೆ ಸಂಬಂಧಪಟ್ಟ ಪ್ರಥಮ ಚಿಕಿತ್ಸೆಯ ಜ್ಞಾನದ ಮಟ್ಟವು ಕಡಿಮೆ ಇರುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ಸುಟ್ಟಗಾಯಗಳಾದ ಶೇಕಡ 39ರಷ್ಟು ವಯಸ್ಕರರು ಮಾತ್ರ ಸೂಕ್ತ ರೀತಿಯ ಪ್ರಥಮ ಚಿಕಿತ್ಸೆ ಪಡೆಯುತ್ತಾರೆ ಎಂಬುದು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಸುಟ್ಟಗಾಯಗಳ ಪ್ರಥಮ ಚಿಕಿತ್ಸೆ ವಿಧಾನ ಕುರಿತ ಸಮೀಕ್ಷೆಯಿಂದ ತಿಳಿದುಬಂದಿದೆ. ತೀವ್ರ ಸುಟ್ಟಗಾಯಗಳೊಂದಿಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಪಾಲ್ಗೊಂಡಿದ್ದ 459 ಮಕ್ಕಳ ರೋಗಿಗಳ ಬಗ್ಗೆ ಕಟಲ್ ಮತ್ತು ಸಹ ಉದ್ಯೋಗಿಗಳು ನಡೆಸಿದ ಒಂದು ಅಧ್ಯಯನದಲ್ಲಿ ಕೇವಲ ಶೇಕಡ 12.1ರಷ್ಟು ಮಾತ್ರ ಗರಿಷ್ಠ ಪ್ರಥಮ ಚಿಕಿತ್ಸೆಯನ್ನು ಪಡೆದಿರುವುದು ಕಂಡುಬಂದಿತು.

ಮಧ್ಯಮ ಮತ್ತು ಕೆಳ ಆದಾಯದ ದೇಶಗಳ ಇಂಥ ಅಧ್ಯಯನದಿಂದ ತಿಳಿದುಬಂದ ಸಂಗತಿ ಏನೆಂದರೆ ಸುಟ್ಟಗಾಯಗಳ ಬಹುತೇಕ ಪ್ರಕರಣಗಳಲ್ಲಿ ಯಾವುದೇ ರೀತಿಯ ಪ್ರಥಮ ಚಿಕಿತ್ಸೆ ದೊರೆತಿರುವುದಿಲ್ಲ. ಸುಟ್ಟಗಾಯಗಳಿಗೆ ಅಸಮರ್ಪಕ ಪ್ರಥಮ ಚಿಕಿತ್ಸೆ ಸಮಸ್ಯೆಯ ಜಾಗತಿಕವಾಗಿದೆ. ಆದಾಗ್ಯೂ, ವಿವಿಧ ದೇಶಗಳಲ್ಲಿ ಸಾಮಾಜಿಕ ಆರ್ಥಿಕ ಸ್ಥಿತಿಗಳ ಮೇಲೆ ತೀವ್ರತೆಯ ವ್ಯತ್ಯಾಸಗಳು ಆಧರಿಸಿರುತ್ತವೆ. ಆಸ್ಪತ್ರೆಗೆ ತಲುಪುವುದಕ್ಕೂ ಮುನ್ನ ಸುಟ್ಟಗಾಯಗಳಿಗೆ ನೀರನ್ನು ಹಾಕುವುದರಿಂದ ಆಸ್ಪತ್ರೆಯಲ್ಲಿ ಇರಬೇಕಾದ ದೀರ್ಘಾವಧಿ, ತೊಡಕುಗಳು ಮತ್ತು ಸಾವಿನ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ.

ಜಲರಹಿತ ಪ್ರಥಮ ಚಿಕಿತ್ಸೆ ಸಾಮಗ್ರಿಗಳು

1. ಪ್ರಥಮ ಚಿಕಿತ್ಸೆಯ ಒಂದು ಕ್ರಮವಾಗಿ ಸುಟ್ಟಗಾಯಗಳಿಗೆ ಮೊಟ್ಟೆಗಳನ್ನು ಹಾಕಲಾಗುತ್ತದೆ. ಮೊಟ್ಟೆಗಳು ಪ್ರೊಟೀನ್ ಸಮೃದ್ಧ ಹಾಗೂ ಸೂಕ್ಷ್ಮ ಜೀವಾಣುಗಳ ಉತ್ತಮ ಮಾಧ್ಯಮವಾಗಿರುತ್ತದೆ. ಇದು ಗಾಯಗಳ ಮೇಲ್ಮೈನನ್ನು ಹೆಪ್ಪುಗಟ್ಟಿಸುತ್ತದೆ ಮತ್ತು ಅದು ಅಪಾರದರ್ಶಕವಾಗುವಂತೆ ಮಾಡುತ್ತದೆ. ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರಗಳಲ್ಲಿ ಗಾಯಗಳ ಮೌಲ್ಯಾಂಕನಕ್ಕೆ ಮುನ್ನ ಇದನ್ನು ತೆಗೆಯಬೇಕಾಗುತ್ತದೆ.

2. ಪ್ಯಾಪ್ (ಮೆಕ್ಕೆಜೋಳ ಗಂಜಿ) ಇದನ್ನು ಕೂಡ ಪ್ರಥಮ ಚಿಕಿತ್ಸೆಯಾಗಿ ಬಳಸಬಹುದಾಗಿದೆ. ಇದರಲ್ಲಿ ಕಾರ್ಬೊಹೈಡ್ರೇಡ್ ಸಮೃದ್ಧವಾಗಿದ್ದು, ಸೂಕ್ಷ್ಮ ಜೀವಾಣುಗಳ ಉತ್ತಮ ಮಾಧ್ಯಮವಾಗಿರುತ್ತದೆ. ಇದನ್ನು ಗಾಯಗಳಿಗೆ ಲೇಪಿಸಿದರೆ, ಇದು ಒಂದು ದಪ್ಪ ಪೇಸ್ಟ್ ಆಗಿ ರೂಪುಗೊಂಡು ಅಪಾರದರ್ಶಕವಾಗಿರುತ್ತದೆ ಹಾಗೂ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರಗಳಲ್ಲಿ ಗಾಯಗಳ ಮೌಲ್ಯಾಂಕನಕ್ಕೆ ಮುನ್ನ ಇದನ್ನು ತೆಗೆಯಬೇಕಾಗುತ್ತದೆ. ಇಂಥ ವಸ್ತುಗಳನ್ನು ಗಾಯಗಳ ಮೇಲೆ ಗಣನೀಯ ಅವಧಿಗಾಗಿ ಹಾಗೇ ಬಿಟ್ಟರೆ ಸೂಕ್ಷ್ಮ ಜೀವಾಣುಗಳಿಂದ ಕಲುಷಿತವಾಗುವುದು ಸಾಮಾನ್ಯವಾಗಿದ್ದು, ಗಾಯದ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

3. ಜೇನು, ಒಂದು ನೈಸರ್ಗಿಕ ಉತ್ಪನ್ನವಾಗಿದ್ದು, ಜೇನು ಮೇಣ, ಬೆರ್‍ಬೆರಿನ್, ಸಿಟೋಸ್ಟೆರಾಲ್ ಮತ್ತು ಇತರ ಫೈಟೋಕೆಮಿಕಲ್‍ಗಳನ್ನು ಹೊಂದಿರುತ್ತದೆ. ಇದನ್ನು ನೈಸರ್ಗಿಕ ರೀತಿಯಲ್ಲಿ ಅಥವಾ ಸಂಸ್ಕರಿತ ಉತ್ಪನ್ನಗಳಂತೆ ಗಾಯಗಳ ಡ್ರೆಸ್ಸಿಂಗ್ಗೆ ಬಳಸಬಹುದು. ಆದಾಗ್ಯೂ ಇದನ್ನು ಪ್ರಥಮ ಚಿಕಿತ್ಸೆಗೆ ಬಳಸುವುದು ವಿವಾದಾಸ್ಪದವಾಗಿದೆ. ಇದು ಪ್ರಥಮ ಚಿಕಿತ್ಸೆ ಆರೈಕೆಯ ಮುಖ್ಯ ಉದ್ದೇಶಗಳನ್ನು ತೃಪ್ತಿಪಡಿಸುವುದಿಲ್ಲ.

4. ಅನೇಕ ರೋಗಗಳ ಚಿಕಿತ್ಸೆಗಾಗಿ ಗಿಡಮೂಲಿಕೆಗಳ ಔಷಧಿಗಳ ಬಳಕೆಯನ್ನು ಬಹು ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗಿದೆ. ಕೆಲವು ಗಿಡಮೂಲಿಕೆ ಔಷಧಿಗಳು ಸುಟ್ಟಗಾಯಗಳಿಗೆ ಕಾರಣವಾಗುವುದನ್ನೂ ತೋರಿಸಿದೆ. ಕೆಲವು ಸ್ತ್ರೀರೋಗ ದೋಷಗಳ ಚಿಕಿತ್ಸೆಗಾಗಿ ಬಳಸಲಾಗುವ ಗಿಡಮೂಲಿಕೆ ಔಷಧಿಗಳು ರಾಸಾಯನಿಕ ಸುಟ್ಟಗಾಯಗಳಿಗೆ ಕಾರಣವಾಗಿದೆ. ಈ ಗಿಡಮೂಲಿಕೆಗಳಲ್ಲಿ ಪಿಎಚ್ ಆಮ್ಲ ಅಥವಾ ಕ್ಲಾರವನ್ನು ಹೊಂದಿರುವುದು ಕಂಡುಬಂದಿದೆ. ಇವುಗಳನ್ನು ಸುಟ್ಟಗಾಯಗಳ ಚಿಕಿತ್ಸೆಗೆ ಬಳಸಿದರೆ ರಾಸಾಯನಿಕ ಸುಟ್ಟಗಾಯಗಳಿಗೆ ಕಾರಣವಾಗಿ ಗಾಯ ಸೋಂಕುಗಳು, ಗುಣಮುಖ ವಿಳಂಬ ಮತ್ತು ದೀರ್ಥಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಆದಾಗ್ಯೂ ಈ ಗಿಡಮೂಲಿಕೆಗಳ ಬಳಕೆಯು ಸಾಂಪ್ರದಾಯಕ ಔಷಧಿಗಳಲ್ಲಿ ವಿಶ್ವಾಸವಿರುವ ಜನರ ನಂಬಿಕೆಯನ್ನು ಪ್ರತಿಬಿಂಇಸುತ್ತದೆ.

5. ಜೆನ್‍ಷಿಯನ್ ವಯೋಲೆಟ್, ಸಿಲ್ವರ್ ಸಲ್ಫಾಡೈಜೈನ್ ಹಾಗೂ ಆಟೋಮೋಟಿವ್ ಬ್ರೇಕ್ ಆಯಿಲ್‍ಗಳು ಸುಟ್ಟಗಾಯಗಳ ಪ್ರಥಮ ಚಿಕಿತ್ಸೆಯ ಬಳಕೆಗೆ ಸೂಕ್ತವಲ್ಲ. ಇಂಗ್ಲೆಂಡ್‍ನಲ್ಲಿ ಸುಟ್ಟಗಾಯಗಳ ರೋಗಿಗಳಿಗೆ ಬೆಣ್ಣೆ ಲೇಪಿಸುವುದಕ್ಕೆ ಸಲಹೆ ಮಾಡಲಾಗುತ್ತದೆ. ಟೂಥ್‍ಪೇಸ್ಟ್, ಆಯಿಲ್, ಐಸ್ ಹಾಗೂ ಎಮೊಲಿಯಂಟ್‍ಗಳನ್ನು ಪ್ರಥಮ ಚಿಕಿತ್ಸಾ ವಸ್ತುಗಳಾಗಿ ಸಹ ಬಳಸಲಾಗುತ್ತದೆ.
ಪ್ರಥಮ ಚಿಕಿತ್ಸೆಗೆ ಬಳಸುವ ಇತರ ಜಲರಹಿತ ಸಾಮಗ್ರಿಗಳು ಅಥವಾ ಆಸ್ಪತ್ರೆ ಪೂರ್ವ ಚಿಕಿತ್ಸಾ ವಿಧಾನಗಳು ಇವುಗಳನ್ನು ಒಳಗೊಂಡಿರುತ್ತವೆ :

  • ಎ) ನೈಸರ್ಗಿಕ ಗಿಡ ಚಿಕಿತ್ಸೆಗಳು
    ಆಲೋವೆರಾ
  • ಚಹಾ ಗಿಡದ ಉತ್ಪನ್ನಗಳು
  • ಬಿ) ತೈಲಗಳು
    ಲ್ಯಾವೆಂಡರ್ ಅಯಿಲ್
    ಥೈಮೆ ಆಯಿಲ್

ಜನಪದ ಉಪಶಮನಗಳು

1886ರಲ್ಲಿ ಮಾರ್ಟಿನ್ ಹೇಳುವಂತೆ “ತೀವ್ರ ಸುಟ್ಟಗಾಯಗಳಾದಾಗ ಮೊದಲಲ್ಲಿ ಮಾಡಬೇಕಾದ ಉತ್ತಮ ಚಿಕಿತ್ಸೆ ಎಂದರೆ ನಿಮ್ಮ ಕೈಯಲ್ಲಿ ಎನಿದೆಯೋ ಅದನ್ನೇ ಬಳಸುವುದು, ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಸುಟ್ಟಗಾಯದಿಂದ ಗಾಳಿಯನ್ನು ಹೊರ ತೆಗೆಯುವುದು ಅಗತ್ಯವಾಗಿದೆ”. ಇಂದಿಗೂ ಕೂಡ ಅನೇಕ ಜನರು ಈ ಆಲೋಚನೆಯನ್ನೇ ಕಾರ್ಯಗತಗೊಳಿಸುತ್ತಿದ್ದಾರೆ. ಸುಟ್ಟಗಾಯಗಳು ಸಂಭವಿಸಿದಾಗ ಪ್ರಥಮ ಚಿಕಿತ್ಸೆಯಾಗಿ ಮನೆಯಲ್ಲಿ ತೀರಾ ಸಾಧಾರಣವಾಗಿ ಲಭ್ಯವಿರುವ ದ್ರವಗಳನ್ನು ಉಪಯೋಗಿಸುತ್ತಾರೆ. ಇಂಕ್, ಸೋಯಾ ಸಾಸ್ ಅಥವಾ ತೈಲ, ಟೂಥ್‍ಪೇಸ್ಟ್, ಜೇನು, ಮೊಟ್ಟೆ, ಬೆಣ್ಣೆಯೊಂದಿಗೆ ಚಿಕಿತ್ಸೆ ನೀಡಿರುವ ಅನೇಕ ನಿದರ್ಶನಗಳು ಕಂಡುಬರುತ್ತವೆ.

ಸಾಂಪ್ರದಾಯಿಕ ಆಫ್ರಿಕನ್ ಗಾಯ ಚಿಕಿತ್ಸೆಗಳನ್ನೂ (ಮಣ್ಣು, ಸುಟ್ಟ ಬಸವನಹುಳು ಚಿಪ್ಪು, ಒಡೆದ ಮೊಟ್ಟೆಗಳು, ಎಲೆಗಳು, ಮೂತ್ರ ಮತ್ತು ಮಣ್ಣಿನ ಮಿಶ್ರಣ ಹಾಗೂ ಹಸು ಸಗಣಿ) ಸಹ ಬಳಸಲಾಗುತ್ತದೆ. ಸುಟ್ಟಗಾಯಗಳಿಗೆ ಸೂಕ್ತ ಮತ್ತು ಸಮರ್ಪಕ ರೀತಿಯಲ್ಲಿ ಚಿಕಿತ್ಸೆ ನೀಡಲು ಅವರ ಶೈಕ್ಷಣಿಕ ಮತ್ತು ವೃತ್ತಿಪರ ಮಟ್ಟಗಳು ಏನೇ ಇರಲಿ ಆರೋಗ್ಯ ಆರೈಕೆ ರಕ್ಷಕರು, ಪ್ರೌಢರು ಮತ್ತು ಮಕ್ಕಳಿಗೆ ಪ್ರಥಮ ಚಿಕಿತ್ಸೆ ಅಭ್ಯಾಸಗಳ ಕುರಿತು ನಿಯತ ಕೋರ್ಸ್‍ಗಳನ್ನು ಆಯೋಜಿಸಲು ಪ್ರಯತ್ನಗಳು ನಡೆಯುತ್ತಿವೆ.

ಸುಟ್ಟಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ
ಇದು ಈ ಕೆಳಕಂಡ ಸಂಗತಿಗಳ ದೃಷ್ಟಿಯಿಂದ ತುಂಬಾ ಮುಖ್ಯವಾಗಿರುತ್ತದೆ-  ವಿವಿಧ ರೀತಿಯ ಸುಟ್ಟಗಾಯಗಳನ್ನು ಗುರುತಿಸುವಿಕೆ, ಸುಟ್ಟಗಾಯಗಳಿಗೆ ಯಾವಾಗ ವೈದ್ಯಕೀಯ ಗಮನ ಅಗತ್ಯವಾಗಿರುತ್ತದೆ ಎಂಬುದನ್ನು ತಿಳಿಯುವಿಕೆ,  ಸುಟ್ಟಗಾಯಗಳಿಗೆ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿಯುವಿಕೆ.

1. ಯಾರಾದರು ಸುಟ್ಟಗಾಯಗಳಿಗೆ ಒಳಗಾದಾದ ತಕ್ಷಣ ಮತ್ತು ಸೂಕ್ತ ಪ್ರತಿಕ್ರಿಯೆ ಅಗತ್ಯ.
ಕೆಲಸ ಮಾಡುವ ಸ್ಥಳದಲ್ಲಿ ಸಂಭವಿಸುವ ಸುಟ್ಟಗಾಯಗಳು ಬೆಂಕಿ, ಬೆಂಕಿ ಕಿಡಿಗಳು, ಹಬೆ, ಬಿಸಿ ದ್ರಾವಣ, ಬಿಸಿ ಯಂತ್ರಗಳ ಅಥವಾ ಸಾಧನ-ಉಪಕರಣಗಳು, ಕೆಲವು ರಾಸಾಯನಿಕಗಳು ಹಾಗೂ ವಿದ್ಯುತ್‍ನಿಂದ ಆಗುತ್ತವೆ.

2. ಸುಟ್ಟಗಾಯದ ಗಂಭೀರತೆಯನ್ನು ಹಂತ, ಆಳ ಮತ್ತು ಸುಟ್ಟಗಾಯಗಳ ವಿಸ್ತರಣೆಯಿಂದ ನಿರ್ಧರಿಸಲಾಗುತ್ತದೆ
a.ಮೊದಲ ಹಂತ ಸುಟ್ಟಗಾಯಗಳು ಕನಿಷ್ಠ ಗಂಭೀರತೆಯನ್ನು ಹೊಂದಿದ್ದು, ಇದು ಸ್ವಲ್ಪ ನೋವು ಮತ್ತು ಉರಿಯನ್ನು ಒಳಗೊಂಡಿದ್ದು ಧರ್ಮ ಕೆಂಪಾಗಿರುತ್ತದೆ (ಉದಾ : ಸೂರ್ಯನಿಂದಾಗುವ ಬಹುತೇಕ ಸುಟ್ಟಗಾಯಗಳು).
b. ಎರಡನೇ ಹಂತದ ಸುಟ್ಟಗಾಯಗಳು ಚರ್ಮ ಕೆಂಪಾಗುವಿಕೆ ಹಾಗೂ ನೋವು-ಉರಿ ಮತ್ತು ಬೊಬ್ಬೆಗಳು ಕಂಡುಬರುತ್ತವೆ (ಉದಾಹರಣೆಗೆ ಕುದಿಯುವ ನೀರು ಅಥವಾ ಎಣ್ಣೆಯಿಂದ ಆದ ಗಾಯಗಳು).
c. ಮೂರನೇ ಹಂತದ ಸುಟ್ಟಗಾಯಗಳು ತೀವ್ರ ಗಂಭೀರ ಸ್ವರೂಪದ್ದಾಗಿದ್ದು ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಇವು ಧರ್ಮವನ್ನು ನಾಶಗೊಳಿಸುತ್ತದೆ ಹಾಗೂ ನರಗಳು ಮತ್ತು ಜೀವಕೋಶಗಳಿಗೆ ಹಾನಿ ಉಂಟು ಮಾಡುತ್ತದೆ ಅಥವಾ ನಾಶಗೊಳಿಸುತ್ತದೆ. d. ಕೆಲವೊಮ್ಮೆ ಮಾಂಸಖಂಡ ಅಥವಾ ಮೂಳೆಗೂ ಹಾನಿಯಾಗುತ್ತವೆ. ಧರ್ಮವು ಬಿಳಿ ಅಥವಾ ಸುಟ್ಟಕರಕಲಾಗಿರುತ್ತದೆ.
ರಾಸಾಯನಿಕ ಸುಟ್ಟಗಾಯಗಳು (ಉದಾ: ಹಾನಿಕಾರಕ ರಾಸಾಯನಿಕಗಳೊಂದಿಗೆ ಸಂಪರ್ಕ) ಚರ್ಮ ಅಥವಾ ಕಣ್ಣುಗಳಿಗೆ ಹಾನಿಯುಂಟು ಮಾಡುತ್ತವೆ.
e. ಪ್ರವಹಿಸುವ ವಿದ್ಯುತ್‍ನೊಂದಿಗೆ ಸಂಭವಿಸುವ ವಿದ್ಯುತ್ ಸುಟ್ಟಗಾಯಗಳು ಧರ್ಮ ಹಾಗೂ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತವೆ.

3. ಕೆಲವು ಸುಟ್ಟಗಾಯಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದು ಅಗತ್ಯವಾಗಿರುತ್ತದೆ
ಮೂರನೇ ಹಂತದ ಎಲ್ಲ ಸುಟ್ಟಗಾಯಗಳಿಗೆ ತಕ್ಷಣ ವೈದ್ಯಕೀಯ ನೆರವು ನೀಡುವ ಅಗತ್ಯವಿರುತ್ತದೆ. ಇವುಗಳಿಂದ ಉಂಟಾಗುವ ಹಾನಿಯು ಅಪಾಯಕಾರಿ ಹಾಗೂ ಮರಣಾಂತಿಕವಾಗಿರುತ್ತದೆ. ನಾಶವಾದ ಮತ್ತು ಲಭ್ಯವಿರದ ಚರ್ಮಕ್ಕೆ ಕಸಿ ಮಾಡುವ ಅಗತ್ಯವಿರುತ್ತದೆ.

4. ಸೂಕ್ತ ವೈದ್ಯಕೀಯ ಗಮನದ ಅಗತ್ಯವಿರುತ್ತದೆ ;
a. ದೊಡ್ಡದಾದ ಅಥವಾ ಕೈಗಳು, ಮುಖ ಅಥವಾ ಜನನಾಂಗಗಳಿಗೆ ಉಂಟಾದ ತೀವ್ರ ಗಾಯಗಳ ಎರಡನೇ ಹಂತದ ಸುಟ್ಟಗಾಯಗಳು
b. ಕಣ್ಣುಗಳು ಮತ್ತು ಚರ್ಮದ ಬೃಹತ್ ಸ್ಥಳಗಳಿಗೆ ಹಾನಿಯುಂಟು ಮಾಡಿರುವ ರಾಸಾಯನಿಕ ಸುಟ್ಟಗಾಯಗಳು
c. ತೀವ್ರ ಗಂಭೀರವಾಗಬಹುದಾದ ವಿದ್ಯುತ್‍ನಿಂದ ಆಗುವ ಸುಟ್ಟಗಾಯಗಳು
d. ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿ, ಆದರೆ, ಮೂರನೇ ಹಂತದ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಬೇಡಿ
e. ಬೆಂಕಿ ಹೊತ್ತಿಕೊಂಡ ಒಬ್ಬ ವ್ಯಕ್ತಿಯನ್ನು ಒಂದು ಕಂಬಳಿ ಅಥವಾ ಬ್ಲಾಂಕೆಟ್ ಅಥವಾ ಕೋಟ್‍ನಿಂದ ಮುಚ್ಚಿ ಅಥವಾ ಆತ/ಆಕೆಯನ್ನು ಕೆಳಗೆ ಮಲಗಿಸಿ ಉರುಳಿಸಿ.
f. ಸುಟ್ಟಗಾಯಗಳ ಮೇಲೆ ಒಂದು ಸ್ವಚ್ಚ ಬಟ್ಟೆಯನ್ನು ಇಡಿ, ಆದರೆ ಅದನ್ನು ತಣ್ಣಗೆ ಮಾಡಲು ಅಥವಾ ಚಿಕಿತ್ಸ ನೀಡಲು ಅಥವಾ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ.
g. ತಕ್ಷಣವೇ ಗಾಯಾಳುವನ್ನು ತುರ್ತು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿ.

5. ಮೊದಲ ಮತ್ತು ದ್ವಿತೀಯ ಹಂತದ ಸುಟ್ಟಗಾಯಗಳು ಹಾಗೂ ವಿದ್ಯುತ್‍ನಿಂದ ಆದ ಸುಟ್ಟಗಾಯಗಳಿಗೆ ಸೂಕ್ತ, ಸಮರ್ಪಕವಾದ ಪ್ರಥಮ ಚಿಕಿತ್ಸೆ ಒದಗಿಸಿ.
a. ಸುಟ್ಟಗಾಯದ ಸ್ಥಳದಿಂದ ಸಡಿಲ ಬಟ್ಟೆಗಳನ್ನು ಕತ್ತರಿಸಿ, ಆದರೆ ಗಾಯಕ್ಕೆ ಅಂಟಿಕೊಂಡಿರುವ ಬಟ್ಟೆಯನ್ನು ಮುಟ್ಟಬೇಡಿ.
b. ದೇಹವನ್ನು ಉಜ್ಜಬೇಡಿ.
c. ಸುಟ್ಟಗಾಯಕ್ಕೆ ಒಳಗಾದ ದೇಹದ ಭಾಗವನ್ನು ತಣ್ಣೀರಿನಲ್ಲಿ ಇಡಿ ಅಥವಾ ಐಸ್ ಪ್ಯಾಕ್‍ಗಳನ್ನು ಸುತ್ತಿ.
d. ಸುಟ್ಟಗಾಯಗಳನ್ನು ಶುದ್ಧ ಬಟ್ಟೆ ಅಥವಾ ಡ್ರೆಸ್ಸಿಂಗ್‍ನಿಂದ ಮುಚ್ಚಿ.
e. ಸುಟ್ಟಗಾಯಕ್ಕೆ ಒಳಗಾದ ಕಾಲುಗಳನ್ನು ಎತ್ತರದಲ್ಲಿರಿಸಿ.
f. ನೋವು ನಿವಾರಣೆ ಆಸ್ಪ್ರಿನ್ ಅಥವಾ ಇಬುಪ್ರೊಪಿನ್ ನೀಡಿ
g. ಬೆಣ್ಣೆ, ಪೆಟ್ರೋಲಿಯಂ ಜೆಲ್ಲಿ, ಮುಲಾಮುಗಳು, ಆಯಿಂಟ್‍ಮೆಂಟ್‍ಗಳು, ಅಥವಾ ಮುಚ್ಚದ ಇರುವ ಐಸ್‍ನನ್ನು ಗಾಯದ ಮೇಲೆ ಹಾಕಬೇಡಿ.
h. ಸಣ್ಣಪುಟ್ಟ ಸುಟ್ಟಗಾಯಕ್ಕೆ ಅಲೋವೆರಾ ಬಳಸುವುದು ಸೂಕ್ತವಾಗಿರುತ್ತದೆ.
i. ಬೊಬ್ಬೆಯೊಂದು ಒಡೆದು ಹೋದರೆ, ಸೋಪು ಮತ್ತು ನೀರಿನೊಂದಿಗೆ ಮೃದುವಾಗಿ ತೊಳೆದು ನಂತರ ಆಂಟಿಬಯೋಟಿಕ್ ಕ್ರಿಮ್ ಮತ್ತು j. ಸ್ಟಿರಿಲ್ ಬ್ಯಾಂಡೇಜ್‍ನೊಂದಿಗೆ ಮುಚ್ಚಿ.
k. ಗಾಯವಾದ ಸ್ಥಳವನ್ನು ಪ್ರತಿದಿನ ತೊಳೆದು ಬ್ಯಾಂಡೇಜ್ ಮಾಡಿ.
l. ದೊಡ್ಡ ಬೊಬ್ಬೆಗಳಿದ್ದರೆ, ವೈದ್ಯರನ್ನು ಸಂಪರ್ಕಿಸಿ.
m. ಮೊದಲ ಮತ್ತು ಎರಡನೇ ಹಂತದಂಥ ವಿದ್ಯುತ್ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡ, ಆದರೆ ವೈದ್ಯಕೀಯ ಆರೈಕೆ ಆಗತ್ಯ.

6. ಮೆಟಿರಿಯಲ್ ಸೆಫ್ಟಿ ಡಾಟಾ ಶೀಟ್ (ಎಂಎಸ್‍ಡಿಎಸ್) ಸೂಚನೆಗಳ ಪ್ರಕಾರ ರಾಸಾಯನಿಕ ಸುಟ್ಟಗಾಯಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು.
a. ಪ್ರಥಮ ಚಿಕಿತ್ಸೆ ಸೂಚನೆಗಳಿಗೆ ಸಬ್‍ಸ್ಟೇನ್ಸ್ ಸೆಫ್ಟಿ ಡಾಟಾ ಶೀಟ್ (ಎಸ್‍ಡಿಎಸ್) ತಪಾಸಣೆ ಮಾಡಿ.
b. ರಾಸಾಯನಿಕ ಕಲುಷಿತ ಬಟ್ಟೆಗಳನ್ನು ತೆಗೆದುಹಾಕಿ.
c. ಹಾನಿಗೀಡಾದ ಕಣ್ಣು ಅಥವಾ ಚರ್ಮ ಪ್ರದೇಶಗಳಿಗೆ 15 ನಿಮಿಷಗಳ ಕಾಲ ತಣ್ಣೀರು ಹರಿಸಿ.
d. ಹಾನಿಗೀಡಾದ ಭಾಗವನ್ನು ಒಂದು ತಣ್ಣನೆಯ ಕಂಪ್ರೆಸ್‍ನೊಂದಿಗೆ ಮುಚ್ಚಿ ವೈದ್ಯಕೀಯ ನೆರವು ಒದಗಿಸಬೇಕು.

7. ಸುಟ್ಟಗಾಯಗಳಿಗೆ ಸಂಬಂಧಪಟ್ಟ ಇತರ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ

  • burnಆಘಾತಕ್ಕಾಗಿ ಅಗತ್ಯವಿದ್ದರೆ ಪ್ರಥಮ ಚಿಕಿತ್ಸೆ ನೀಡಿ ಹಾಗೂ ಉಸಿರಾಟದ ಸಮಸ್ಯೆಗಳ ಬಗ್ಗೆ ಪರೀಕ್ಷಿಸಿ
  • ಸೆಫ್ಟಿ ಡಾಟಾ ಶೀಟ್ ಈ ಕೆಳಕಂಡ ಶೀರ್ಷಿಕೆಗಳನ್ನು ಒಳಗೊಂಡಿರಬೇಕು
  • ವಸ್ತು/ತಯಾರಿಕೆ ಹಾಗೂ ಕಂಪನಿ/ಸಂಸ್ಥೆಯ ಗುರುತು
  • ಹಾನಿಕಾರಕಗಳ ಗುರುತು.
  • ಪದಾರ್ಥಗಳ ಸಂಯೋಜನೆ/ಮಾಹಿತಿ
  • ಪ್ರಥಮ ಚಿಕಿತ್ಸೆ ಕ್ರಮಗಳು.
  • ಅಗ್ನಿ ಶಾಮಕ ಕ್ರಮಗಳು.
  • ಅಪಘಾತ ಪರಿಹಾರ ಕ್ರಮಗಳು.
  • ನಿರ್ವಹಣೆ ಹಾಗೂ ಸಂಗ್ರಹ
  • ತೆರೆದುಕೊಳ್ಳುವಿಕೆ ನಿಯಂತ್ರಣಗಳು/ವೈಯಕ್ತಿಕ ಸುರಕ್ಷತೆ.
  • ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳು.
  • ಸ್ಥಿರತೆ ಮತ್ತು ಪ್ರತಿಕ್ರಿಯಾತ್ಮಕತೆ.
  • ವಿಷಯುಕ್ತತೆ ಮಾಹಿತಿ.
  • ಜೈವಿಕ ಮಾಹಿತಿ.
  • ವಿಲೇವಾರಿ ಪರಿಗಣನೆ.
  • ಸಾರಿಗೆ ಮಾಹಿತಿ.
  • ನಿಬಂಧನೆ ಮಾಹಿತಿ.
  • ಇತರ ಮಾಹಿತಿಗಳು

ತುರ್ತು ಪರಿಸ್ಥಿತಿಗಳ ಪ್ರಕರಣದಲ್ಲಿ ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು :
ಮಾಡಬೇಕಾದುದು

  • ವೈದ್ಯಕೀಯ ಸಹಾಯಕ್ಕಾಗಿ ಕರೆದೊಯ್ಯುತ್ತಿರುವುದಾಗಿ ರೋಗಿಗೆ ಭರವಸೆ ನೀಡಬೇಕು.
  • ಬಟ್ಟೆಗಳನ್ನು ತೆಗದುಹಾಕುವ ಮೂಲಕ ಬೆಂಕಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಸುಟ್ಟಗಾಯದ ನೋವು-ಉರಿಯನ್ನು ಕಡಿಮೆಗೊಳಿಸಬೇಕು.
  • ಗಾಯಾಳುವನ್ನು ನೆಲವ ಮೇಲೆ ಉರುಳಿಸುವ ಮೂಲಕ ಅಥವಾ ಒಂದು ಹೊದಿಕೆ ಹಾಕುವ ಮೂಲಕ ಬೆಂಕಿಯನ್ನು ನಂದಿಸಬೇಕು.
  • ರೋಗಿಯನ್ನು ಸ್ವಚ್ಚ ಬಟ್ಟೆ ಅಥವಾ ಹಾಳೆಯಲ್ಲಿ ಸುತ್ತಿ ಸೂಕ್ತ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಬೇಕು.
  • ಗಂಭೀರ ಸ್ವರೂಪದ ಸುಟ್ಟಗಾಯಗಳಿಗಾಗಿ ತಕ್ಷಣ ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ವಾಹನಗಳ ನೆರವಿಗಾಗಿ ಕರೆ ಮಾಡಬೇಕು.
  • ಗಾಯಾಳುವಿನ ಆರೋಗ್ಯ ಸ್ಥಿತಿಯನ್ನು ಅಗಾಗ ತಪಾಸಣೆ ಮಾಡುತ್ತಿರಬೇಕು.
  • ರಕ್ತಸ್ರಾವ ನಿಲ್ಲಿಸಲು ನೇರ ಒತ್ತಡವನ್ನು ಬಳಸಬೇಕು.
  • ರೋಗಿಯ ಉಸಿರಾಟದ ಮಾರ್ಗವು ಸುಗಮವಾಗಿವೆಯೇ ಎಂಬುದನ್ನು ಪರೀಕ್ಷಿಸಬೇಕು.
  • ನಾಡಿ ಬಡಿತ ಅಥವಾ ಉಸಿರಾಟಕ್ಕೆ ತೊಂದರೆಯಾಗಿದ್ದರೆ ಸಿಪಿಆರ್ (ಕಾರ್ಡಿಯೋ-ಪಲ್ಮೋನರಿ ರಿಸಸ್‍ಸಿಟೇಷನ್) ಆರಂಭಿಸಬೇಕು.
  • ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಲ್ಯಾಟೆಕ್ಸ್ ಕೈಗವುಸುಗಳನ್ನು ಬಳಸಬೇಕು.
  • ಗಾಯಾಳುಗಳನ್ನು ಶಾಕ್ ವಾರ್ಮ್‍ನಲ್ಲಿ (ಬ್ಲಾಂಕೆಟ್ ಇತ್ಯಾದಿ ಬಳಕೆ) ಇಡಬೇಕು.
  • ಮುಂಡದ ಮೇಲ್ಭಾಗದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ತಲೆಯನ್ನು ಎತ್ತಬೇಕು.
  • ಮುಂಡದ ಕೆಳಭಾಗದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಪಾದವನ್ನು ಎತ್ತಬೇಕು.
  • ಶುದ್ಧ ನೀರಿನೊಂದಿಗೆ ಎಲ್ಲ ಗಾಯಗಳು ಮತ್ತು ಸುಟ್ಟಗಾಯಗಳನ್ನು ತೊಳೆಯಬೇಕು.
  • ರಾಸಾಯನಿಕ ಸೇವನೆಯಾಗಿದ್ದಾರೆ ವಿಷ ನಿಯಂತ್ರಣ ಕೇಂದ್ರದ ವೈದ್ಯಕೀಯ ಸಿಬ್ಬಂದಿಯ ನೆರವನ್ನು ಪಡೆಯಬೇಕು.

ಮಾಡಬಾರದುದು

  • ನಿಮ್ಮದೇ ಆದ ಸುರಕ್ಷತೆ ಖಾತರಿಯಾಗುವುದಕ್ಕೂ ಮುನ್ನ ಪ್ರಥಮ ಚಿಕಿತ್ಸೆ ಆರಂಭಿಸಬಾರದು (ವಿದ್ಯುತ್ ಪ್ರವಾಹವನ್ನು ಸ್ವಿಚ್ ಆಫ್ ಮಾಡಬೇಕು ಅಥವಾ ರಾಸಾಯನಿ ಸುಟ್ಟ ಗಾಯದೊಂದಿಗೆ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವಾಗ ಗ್ಲೌಸುಗಳನ್ನು ಹಾಕಿಕೊಳ್ಳಬೇಕು)
  • ಸುಟ್ಟ ಗಾಯಗಳ ಮೇಲೆ ಪೇಸ್ಟ್, ಆಯಿಲ್, ಅರಿಶಿಣ ಅಥವಾ ಕಚ್ಚಾ ಹತ್ತಿಯನ್ನು ಲೇಪಿಸಬಾರದು.
  • ಮಂಜುಗಡ್ಡೆಯನ್ನು ಹಾಕಬಾರದು, ಏಕೆಂದರೆ ಅದು ಗಾಯವನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುತ್ತದೆ.
  • ದೀರ್ಘಕಾಲ ನೀರಿನಲ್ಲಿ ಇರುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಹೈಪೋಥರ್ಮಿಯಾಗೆ (ಲಘೂಷ್ಣತೆ) ಎಡೆ ಮಾಡಿಕೊಡುತ್ತದೆ.
  • ವೈದ್ಯರಿಂದ ಆಂಟಿಮೈಕ್ರೋಬಿಯಾಲ್‍ಗಳನ್ನು ಲೇಪಿಸುವ ತನಕ ಬೊಕ್ಕೆಗಳು ಅಥವಾ ಬೊಬ್ಬೆಗಳನ್ನು ತೆರೆಯಬಾರದು.
  • ಯಾವುದೇ ವಸ್ತುವನ್ನು ಗಾಯಕ್ಕೆ ನೇರವಾಗಿ ಲೇಪಿಸಬಾರದು, ಏಕೆಂದರೆ ಅದರಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಸೂಕ್ತ ವೈದ್ಯಕೀಯ ಆರೈಕೆಯಲ್ಲಿ ರೋಗಿಯನ್ನು ಇರಿಸುವ ತನಕ ಸ್ಥಳೀಯ ಔಷಧಿಗಳನ್ನು ತಪ್ಪಿಸಬೇಕು.
  • ತೀರಾ ಅಗತ್ಯವಿರದ ಹೊರತು ಗಾಯಾಳುವನ್ನು ಸ್ಥಳಾಂತರಿಸಬಾರದು.
  • “ಬೆನ್ನುಹುರಿ ಗಾಯ”ವನ್ನು ಯಾವಾಗಲೂ ಶಂಕಿಸಿಬೇಕು-ಗಾಯಾಳುವನ್ನು ಸ್ಥಳಾಂತರಿಸಬಾರದು.
  • ಮೂಳೆ ಮುರಿತ ಅಥವಾ ಮುರಿದಿರುವಿಕೆಯನ್ನು ಕೂಡಿಸಲು ಪ್ರಯತ್ನಿಸಬಾರದು-ಅಂಥ ಸಂದರ್ಭದಲ್ಲಿ ರೋಗಿಯನ್ನು ಚಲನರಹಿತವಾಗಿರಿಸಬೇಕು.
  • ರಕ್ತಬಂಧಕವನ್ನು ಅನ್ವಯಿಸಬಾರದು-ರಕ್ತ ನಿಲುಗಡೆಗೆ ‘ನೇರ’ ಒತ್ತಡ ಮಾತ್ರ ಹಾಕಬೇಕು.
  • ಕಣ್ಣಿನಲ್ಲಿ ಸಿಲುಕಿಕೊಂಡಿರುವ ವಸ್ತುವನ್ನು ತೆಗೆಯಬಾರದು-ಡಿಕ್ಸಿ ಕಪ್‍ನಿಂದ ಕಣ್ಣನ್ನು ಮುಚ್ಚಬೇಕು.
  • ಮುಲಾಮು ಅಥವಾ ಆಯಿಂಟ್‍ಮೆಂಟ್‍ಗಳನ್ನು ಬಳಸಬಾರದು. ಇದು ಗಾಯದ ಆಳ ಮತ್ತು ಸುಟ್ಟ ಗಾಯಗಳ ವಿಸ್ತರಣೆಯ ಬಗ್ಗೆ ತಪ್ಪು ಮೌಲ್ಯಮಾಪನಕ್ಕೆ ಎಡೆ ಮಾಡಿಕೊಡಬಹುದು.
  • ತಕ್ಷಣ ವೈದ್ಯಕೀಯ ಸಿಬ್ಬಂದಿ ಅಥವಾ ರಕ್ಷಣಾ ವಾಹನಗಳನ್ನು ಕರೆಯಲು ಹಿಂದುಮುಂದು ನೋಡಬಾರದು.

ನೀರು – ಪ್ರಥಮ ಚಿಕಿತ್ಸೆ

vydehi-burns-centre.ಜಲ ಮಾರ್ಜನ ಅಥವಾ ನೀರಿನಿಂದ ತೊಳೆಯುವಿಕೆ ಪರಿಣಾಮಕಾರಿಯಾಗಬೇಕಾದರೆ, ನೀರು ಶಿಫಾರಸು ಮಾಡಿದ ತಾಪಮಾನ ಶ್ರೇಣಿಯೊಳಗೆ ಇರಬೇಕು ಹಾಗೂ ಕನಿಷ್ಠ ಕಾಲಾವಧಿಯವರೆಗೆ ಮಾತ್ರ ಇರಬೇಕು. ಸೂಕ್ತ ರೀತಿಯಲ್ಲಿ ಹಾಗೂ ಗಾಯಕ್ಕೆ ಉಪಶಮನ ನೀಡಲು ಸುಟ್ಟಗಾಯವಾದ ಸ್ಥಳವನ್ನು ನೀರಿನಿಂದ ತಣ್ಣಗೆ ಮಾಡುವ ಮೂಲಕ ಗಾಯವು ತೀವ್ರಗೊಳ್ಳದಂತೆ ತಡೆಯುವುದು ಪ್ರಥಮ ಚಿಕಿತ್ಸೆಯ ಗುರಿಯಾಗಿರುತ್ತದೆ. ಸುಟ್ಟಗಾಯಗಳಾದ ನಂತರ ಸೂಕ್ತ ಉಷ್ಣಾಂಶದಲ್ಲಿ ಹರಿಯುವ ತಣ್ಣನೆ ನೀರನ್ನು ಬಳಸುವ ಮೂಲಕ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. 2-15 ಡಿಗ್ರಿ ಸೆಲ್ಷಿಯಸ್ ನಡುವಣ ಉಷ್ಣಾಂಶದೊಳಗೆ ಜಲ ಮಾರ್ಜನ ಅಥವಾ ನೀರಿನಿಂದ ತೊಳೆಯುವಿಕೆಯು ಸುಟ್ಟಗಾಯಗಳಿಗೆ ಅಗತ್ಯವಾದ ಮಾದರಿ ಪ್ರಥಮ ಚಿಕಿತ್ಸೆಯಾಗುತ್ತದೆ.

10 ರಿಂದ 30 ನಿಮಿಷಗಳ ನಡುವಣ ಜಲ ಮಾರ್ಜನವನ್ನು ಮಾಡಬೇಕಾಗುತ್ತದೆ. ಸುಟ್ಟಗಾಯವನ್ನು ನೀರಿನಿಂದ ತೊಳೆಯುವುದರಿಂದ ಜೀವಕೋಶಗಳು ಮತ್ತು ಅಂಗಾಂಶವನ್ನು ತಣ್ಣಗೆ ಮಾಡುವುದಲ್ಲದೇ, ಆಮ್ಲಗಳು ಮತ್ತು ಕ್ಷಾರಗಳಂಥ ಹಾನಿಕಾರಕ ಏಜೆಂಟ್‍ಗಳನ್ನು ನಿರ್ಮೂಲನೆಗೊಳಿಸಲು ಅಥವಾ ತೆಳ್ಳಗೆ ಮಾಡಲು ನೆರವಾಗುತ್ತದೆ. ಜಲ ಮಾರ್ಜನದಿಂದ ಇವುಗಳ ಪ್ರಭಾವ ಫಲಕಾರಿಯಾಗುವುದಿಲ್ಲ, ಉರಿಯ ಪ್ರತಿಕ್ರಿಯೆಗಳು ಕಡಿಮೆಯಾಗುತ್ತದೆ. ಊತ ಇಳಿಮುಖವಾಗುತ್ತದೆ ಹಾಗೂ ನಂತರ ಗಾಯವು ಗುಣಮುಖವಾಗಿ ಸುಟ್ಟಗಾಯದ ಸಿಪ್ಪೆಯು ಹೊರಬರಲು ಸಹಾಯವಾಗುತ್ತದೆ. ಸುಟ್ಟಗಾಯಗಳಿಗೆ ಪ್ರಥಮ ಚಿಕಿತ್ಸೆಯಲ್ಲಿ ತೃಪ್ತಿಕರ ಜಲ ಮಾರ್ಜನದ ನಿರ್ದಿಷ್ಟತೆಗಳನ್ನು ಗುರುತಿಸಲು ಸಾಧ್ಯವಾಗುವಂತೆ ಜನರಿಗೆ ಸೂಕ್ತ ಆರೋಗ್ಯ ಶಿಕ್ಷಣ ನೀಡಬೇಕು.

ಪ್ರಥಮ ಚಿಕಿತ್ಸೆಗಾಗಿ ಬಳಸುವ ಬಹುತೇಕ ಜಲ ರಹಿತ ವಸ್ತುಗಳು ಆರಂಭಿಕ ನುರಿತ ಮೌಲ್ಯಾಂಕನ, ಗಾಯ ಆರೈಕೆಯ ವಿಧಾನದ ಆಯ್ಕೆ, ನಂತರದ ಗಾಯದ ತೊಡಕುಗಳು ಮತ್ತು ಗಾಯಗಳ ಫಲಿತಾಂಶ ಇವುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸುಟ್ಟಗಾಯಗಳಾದಾಗ ಐಸ್ ಬ್ಲಾಕ್‍ಗಳು, ಮಂಜುಗಡ್ಡೆಗಳು ಹಾಗೂ ವಿಪರೀತ ತಣ್ಣನೆ ನೀರಿನ ಬಳಕೆಯನ್ನು ನಿಯಂತ್ರಿಸಬೇಕಾಗುತ್ತದೆ. ಏಕೆಂದರೆ ಇದು ವ್ಯಾಸೋಕಾನ್‍ಸ್ಟ್ರಿಕ್ಷನ್‍ಗೆ (ರಕ್ತನಾಳಗಳ ಸಂಕೋಚನ ಅಥವಾ ಕುಗ್ಗುವಿಕೆ) ಕಾರಣವಾಗಲಿದ್ದು, ಇದು ಸುಟ್ಟಗಾಯದ ಸ್ಥಳದ ಹೆಪ್ಪುಗಟ್ಟುವಿಕೆ ವಲಯದ ತನಕ ವಿಸ್ತರಿಸಲಿದ್ದು, ಗಾಯದ ತೀವ್ರತೆಯನ್ನು ಹೆಚ್ಚಿಸುತ್ತದೆ.

ಸುಟ್ಟಗಾಯಗಳ ಆರೈಕೆಯಲ್ಲಿ ಪ್ರಥಮ ಚಿಕಿತ್ಸೆಯ ಅನುಕೂಲಗಳು ಮತ್ತು ಪ್ರಯೋಜನಗಳನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಸುಟ್ಟಗಾಯಾಳುಗಳ ಸಮಗ್ರ ನಿರ್ವಹಣೆಯಲ್ಲಿ ಪ್ರಥಮ ಚಿಕಿತ್ಸೆಯ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಹಾಗೆಯೇ ಎಲ್ಲ ರೀತಿಯ ಆಘಾತಗಳಿಗಾಗಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ವಿವಿಧ ಶಸ್ತ್ರಕ್ರಿಯೆಗಳ ಕೇಂದ್ರಗಳಲ್ಲಿ ಜಲ ಮಾರ್ಜನಕ್ಕಾಗಿ ಸೌಲಭ್ಯಗಳನ್ನು ಒದಗಿಸಬೇಕು. ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರಗಳಲ್ಲಿ ಜಲಚಿಕಿತ್ಸೆಗಾಗಿ ಸೌಲಭ್ಯಗಳನ್ನು ಇದೇ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ:

ವೈದೇಹಿ ಬರ್ನ್ ಸೆಂಟ‌ರ್ – ವೈದೇಹಿ ಆಸ್ಪತ್ರೆ
ವೈಟ್‍ಫೀಲ್ಡ್, ಬೆಂಗಳೂರು-66
ದೂ.:  +91-80-49069000 Extn: 1147/1366
www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!