ಎನ್ಯೂರೆಸಿಸ್ ಅಥವಾ ಬೆಡ್ ವೆಟ್ಟಿಂಗ್ ಸ್ವಯಂ ಅಥವಾ ಅರಿವಿಲ್ಲದೇ ಹಾಸಿಗೆ, ಬಟ್ಟೆ ಅಥವಾ ಇತರ ಅಸೂಕ್ತ ಸ್ಥಳಗಳಿಗೆ ಮೂತ್ರ ವಿಸರ್ಜಿಸುವ ಸಮಸ್ಯೆ ಎಂದು ಹೇಳಬಹುದು.ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು ಬೆಳೆಯುತ್ತಿರುವ ಬಹುತೇಕ ಮಕ್ಕಳಲ್ಲಿ ಕಂಡಬರುವ ದೋಷವಾಗಿದೆ.
ಎನ್ಯೂರೆಸಿಸ್‍ನನ್ನು ತೀರಾ ಸಾಮಾನ್ಯವಾಗಿ ಬೆಡ್ ವೆಟ್ಟಿಂಗ್ ಎಂದು ಕರೆಯಲಾಗುತ್ತದೆ. ಇದೊಂದು ರೀತಿಯ ಮೂತ್ರ ವಿಸರ್ಜನೆ ದೋಷವಾಗಿದ್ದು, ಸ್ವಯಂ ಅಥವಾ ಅರಿವಿಲ್ಲದೇ ಹಾಸಿಗೆ, ಬಟ್ಟೆ ಅಥವಾ ಇತರ ಅಸೂಕ್ತ ಸ್ಥಳಗಳಿಗೆ ಮೂತ್ರ ವಿಸರ್ಜಿಸುವ ಸಮಸ್ಯೆ ಎಂದು ಹೇಳಬಹುದು. ಎನ್ಯೂರೆಸಿಸ್ ಅಥವಾ ಬೆಡ್ ವೆಟ್ಟಂಗ್ ಬಗ್ಗೆ ಕ್ರಿ.ಪೂ. 1500ರಲ್ಲೇ ಉಲ್ಲೇಖಿಸಲಾಗಿದೆ. ಎನ್ಯೂರೆಸಿಸ್ ದೋಷವಿರುವ ಮಂದಿ ತಮ್ಮ ಹಾಸಿಗೆಯನ್ನು ಮೂತ್ರದಿಂದ ಒದ್ದೆ ಮಾಡುತ್ತಾರೆ ಅಥವಾ ಇತರ ಅಸೂಕ್ತ ಸಮಯದಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಹಗಲು ವೇಳೆಗಿಂತ ರಾತ್ರಿ ಹೊತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡುವುದು ತೀರಾ ಸಾಮಾನ್ಯ ಲಕ್ಷಣ (ನೊಕ್ಟುಮಲ್ ಎನ್ಯೂರೆಸಿಸ್) ಅಥವಾ ಡಿಯುಮಲ್ ವೆಟ್ಟಿಂಗ್ ಎಂದು ಇದನ್ನು ಕರೆಯಬಹುದು.
ಲಕ್ಷಣಗಳು ಮತ್ತು ಚಿಹ್ನೆಗಳು
ಎನ್ಯೂರೆಸಿಸ್ ಅಥವಾ ಬೆಡ್‍ವೆಟ್ಟಿಂಗ್‍ನ ಲಕ್ಷಣಗಳು ಮತ್ತು ಚಿಹ್ನೆಗಳು ನೇರವಾಗಿರುತ್ತವೆ. ಸರಿಯಲ್ಲದ ಸ್ಥಳದಲ್ಲಿ ಅಥವಾ ಸರಿಯಲ್ಲದ ಸಮಯದಲ್ಲಿ ವ್ಯಕ್ತಿ ಮೂತ್ರವಿಸರ್ಜನೆ ಮಾಡುತ್ತಾನೆ.
ಕಾರಣಗಳು
1. ನಿಧಾನವಾದ ದೈಹಿಕ ಬೆಳವಣಿಗೆ : 5 ಮತ್ತು 10 ವರ್ಷಗಳ ನಡುವೆ ಶಾರೀರಿಕ ಪ್ರಗತಿ ವಿಳಂಬವಾಗುವಿಕೆ ಕೂಡ ಇದಕ್ಕೆ ಒಂದು ಕಾರಣವಾಗಬಹುದು. ಸಣ್ಣ ಮೂತ್ರ ಚೀಲದ ಸಾಮಥ್ರ್ಯ, ಸುದೀರ್ಘ ನಿದ್ರೆ ಪರಿಣಾಮವಾಗಿ ಮೂತ್ರವನ್ನು ತಡೆದುಕೊಳ್ಳಲು ಆಗದೆ ಅದು ವಿಸರ್ಜನೆಯಾಗುತ್ತದೆ. ತುಂಬಿದ ಅಥವಾ ಖಾಲಿಯಾದ ಮೂತ್ರ ಚೀಲದ ಬಗ್ಗೆ ಸಿಗ್ನಲ್ ನೀಡುವ ದೇಹ ಎಚ್ಚರಿಕೆಯ ಸಂವೇದನೆ ಪೂರ್ಣಪ್ರಮಾಣದಲ್ಲಿ ಅಭಿವೃದ್ದಿಯಾಗದಿರುವುದು ಕೂಡ ಇದಕ್ಕೆ ಕಾರಣವಾಗಬಹುದು. ಮೂತ್ರ ಚೀಲ ದೊಡ್ಡದಾಗುತ್ತಿದ್ದಂತೆ ಹಾಗೂ ನೈಸರ್ಗಿಕ ಎಚ್ಚರಿಕೆ ಸಂವೇದನೆ ಕಾರ್ಯನಿರ್ವಹಿಸಲು ಆರಂಭಿಸುತ್ತಿದ್ದಂತೆ ಈ ರೀತಿಯ ಮೂತ್ರ ವಿಸರ್ಜನೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲದಿರುವಿಕೆ ಸಮಸ್ಯೆ ಇಳಿಮುಖವಾಗುತ್ತದೆ.
ಪ್ರತಿ ರಾತ್ರಿ ನಿಗದಿತ ಉತ್ತಮ ಅಭ್ಯಾಸಗಳು ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಬಹುದು. ಉದಾಹರಣೆಗೆ, ಮಲಗುವುದಕ್ಕೂ ಮುನ್ನ ಸ್ನಾನ ಮಾಡುವಿಕೆ. ಆನಂತರ ಕೆಲ ಹೊತ್ತು ವಿಶ್ರಾಂತಿ ಪಡೆಯುವಿಕೆ ಹಾಗೂ ಓದುವ ಹವ್ಯಾಸಗಳು ಸಹಕಾರಿ. ನಿಮ್ಮ ಮಗು ಮಲಗುವುದಕ್ಕೆ ಮುನ್ನ ಮೂತ್ರ ವಿಸರ್ಜನೆ ಮಾಡಿ ಶುಷ್ಕವಾಗಿರುವಂತೆ ನೀವು ಪ್ರೇರಣೆ ನೀಡಿ ಮಗುವಿನಲ್ಲಿ ಆ ಬಗ್ಗೆ ಪೂರಕ ಭಾವನೆ ಬೆಳೆಸಬೇಕು. ನೀವು ಕೂಡ ಮಗುವಿನ ಈ ದೋಷದ ಬಗ್ಗೆ ವಿಪರೀತ ಚಿಂತೆ ಮಾಡದೇ ಪ್ರಶಾಂತವಾಗಿದ್ದು, ಪೂರಕ ಆಲೋಚನೆಗಳನ್ನು ಹೊಂದಿ ನಿಮ್ಮ ಮಗುವಿಗೆ ಬೆಂಬಲ ನೀಡಬೇಕು.
2. ರಾತ್ರಿಯಲ್ಲಿ ದೇಹವು ಸಾಕಷ್ಟು ಎಡಿಎಚ್ ಹಾರ್ಮೋನನ್ನು ಉತ್ಪಾದಿಸದಿದ್ದರೆ : ಸಾಮಾನ್ಯವಾಗಿ, ದೇಹವು ಮೂತ್ರ ತಯಾರಾಗುವುದನ್ನು ನಿಧಾನ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್‍ನನ್ನು ಆಂಟಿಡೈಯುರೆಟಿಕ್ ಹಾರ್ಮೋನು ಅಥವಾ ಎಡಿಎಚ್ ಎಂದು ಕರೆಯಲಾಗುತ್ತದೆ. ದೇಹವು ಸಾಮಾನ್ಯವಾಗಿ ಮಲಗಿರುವಾಗ ಅಧಿಕ ಎಡಿಎಚ್‍ನನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಮೂತ್ರ ವಿಸರ್ಜಿಸಬೇಕಾದ ಅಗತ್ಯವು ಕಡಿಮೆಯಾಗುತ್ತದೆ. ರಾತ್ರಿಯಲ್ಲಿ ದೇಹವು ಸಾಕಷ್ಟು ಎಡಿಎಚ್‍ನನ್ನು ಉತ್ಪಾದಿಸದಿದ್ದರೆ, ಮೂತ್ರ ತಯಾರಿಕೆ ನಿಧಾನವಾಗದಿರಬಹುದು. ಇದು ಮೂತ್ರ ಚೀಲ ಅಧಿಕ ಪ್ರಮಾಣದಲ್ಲಿ ತುಂಬುವುದಕ್ಕೆ ಕಾರಣವಾಗುತ್ತದೆ. ಮೂತ್ರ ಚೀಲವು ತುಂಬಿದ್ದು ಮೂತ್ರ ವಿಸರ್ಜನೆ ಮಾಡಲು ಎಚ್ಚರಗೊಳ್ಳಬೇಕು ಎಂಬ ಸಂವೇದನೆ ಮಗುವಿಗೆ ಇಲ್ಲದಿದ್ದರೆ, ಬೆಡ್ ವೆಟ್ಟಿಂಗ್‍ಗೆ ಕಾರಣವಾಗುತ್ತದೆ.
3. ಉದ್ವೇಗ : 2 ರಿಂದ 4 ವಯಸ್ಸಿನ ಮಕ್ಕಳಲ್ಲಿ ಉದ್ವೇಗಕ್ಕೆ ಕಾರಣವಾಗುವ ಘಟನೆಗಳು ನಡೆಯಲಿದ್ದು, ಮಗು ಪೂರ್ಣ ಮೂತ್ರ ಚೀಲದ ಮೇಲೆ ನಿಯಂತ್ರಣ ಸಾಧಿಸುವುದಕ್ಕೂ ಮುನ್ನ ತಡೆದುಕೊಳ್ಳಲಾರದೇ ಮೂತ್ರ ವಿಸರ್ಜನೆ ಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ. 4 ವರ್ಷಗಳಿಗೆ ಮೇಲ್ಪಟ್ಟ ಮಕ್ಕಳಲ್ಲಿ ಅನುಭವಕ್ಕೆ ಬರುವ ಉದ್ವೇಗ ಮಗು 6 ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲದ ಅವಧಿಗೆ ಶುಷ್ಕತೆ ಹೊಂದಿದ ನಂತರ ಬೆಡ್ ವೆಟ್ಟಿಂಗ್‍ಗೆ ಕಾರಣವಾಗಬಹುದು. ಉದ್ವೇಗಕ್ಕೆ ಕಾರಣವಾಗುವ ಘಟನೆಗಳೆಂದರೆ ಕೋಪೋದ್ರಿಕ್ತ ಪೋಷಕರು, ಗೊತ್ತಿರದ ಸಾಮಾಜಿಕ ಪರಿಸ್ಥಿತಿಗಳು ಹಾಗೂ ಸೋದರ ಅಥವಾ ಸೋದರಿಯ ಜನನದಂಥ ಕೌಟುಂಬಿಕ ಘಟನೆಗಳು.
4. ರಚನಾ ವಿನ್ಯಾಸದ ಸಮಸ್ಯೆಗಳು : ಅಂತಿಮವಾಗಿ, ಮಕ್ಕಳಲ್ಲಿನ ಮೂತ್ರ ವಿಸರ್ಜನಾ ವ್ಯವಸ್ಥೆಯಲ್ಲಿನ ದೈಹಿಕ ಸಮಸ್ಯೆಗಳಿಂದ ಮೂತ್ರ ವಿಸರ್ಜನೆಯನ್ನು ತಡೆದುಕೊಳ್ಳಲಾರದಂಥ ಅಲ್ಪ ಸಂಖ್ಯೆಯ ಪ್ರಕರಣಗಳು ನಡೆಯುತ್ತವೆ.
5. ವಂಶವಾಹಿಗಳು : ಕೆಲವು ವಂಶವಾಹಿಗಳಿಂದಲೂ ಬೆಡ್ ವೆಟ್ಟಿಂಗ್ ಅಥವಾ ಮೂತ್ರವನ್ನು ತಡೆದುಕೊಳ್ಳಲಾರದ ಸ್ಥಿತಿ ಕಂಡುಬರುತ್ತದೆ.
ಚಿಕಿತ್ಸೆ
ಎನ್ಯೂರೆಸಿಸ್ ಅಥವಾ ಬೆಡ್ ವೆಟ್ಟಿಂಗ್‍ಗೆ ಚಿಕಿತ್ಸೆ ಸದಾ ಅಗತ್ಯವಿರುವುದಿಲ್ಲ. ಶೇ.15ಕ್ಕಿಂತ ಹೆಚ್ಚು ಮಕ್ಕಳಲ್ಲಿ ಆರು ವರ್ಷಗಳ ನಂತರ ಈ ದೋಷ ತಾನಾಗಿಯೇ ನಿವಾರಣೆಯಾಗುತ್ತದೆ. ಮಗುವಿಗೆ ಚಿಕಿತ್ಸೆ ಬಯಸಿದಾಗ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಹಿನ್ನೆಲೆ ಮೂಲಕ ಎನ್ಯೂರೆಸಿಸ್ನ ದೈಹಿಕ ಕಾರಣಗಳನ್ನು ವೈದ್ಯರು ತಳ್ಳಿ ಹಾಕುತ್ತಾರೆ. ಹಲವಾರು ವಿಭಿನ್ನ ಚಿಕಿತ್ಸಾ ಆಯ್ಕೆಗಳು ಲಭ್ಯವಿದೆ.
ನಡವಳಿಕೆ/ವರ್ತನೆ ಪರಿವರ್ತನೆ : ನಡವಳಿಕೆ/ವರ್ತನೆ ಬದಲಾವಣೆಯು ಎನ್ಯೂರೆಸಿಸ್ ಚಿಕಿತ್ಸೆಗೆ ಕೆಲವೊಮ್ಮೆ ಸೂಕ್ತ ಆಯ್ಕೆಯಾಗಿರುತ್ತದೆ. ಇದು ಖರ್ಚು-ವೆಚ್ಚಗಳಿಲ್ಲದ ಚಿಕಿತ್ಸೆಯಾಗಿದ್ದು, ಫಲಿತಾಂಶ ಶೇ.75ರಷ್ಟು ಫಲಕಾರಿಯಾಗಿರುತ್ತದೆ. ಚೈಲ್ಡ್ಸ್ ಬೆಡ್ಡಿಂಗ್ ಎಂಬ ವಿನೂತನ ವಸ್ತ್ರವನ್ನು ಪ್ಯಾಡ್ ಒದ್ದೆಯಾದಾಗ ಗಂಟೆ ಬಾರಿಸುವ ಸೆನ್ಸೊರ್‍ನೊಂದಿಗೆ ವಿಶೇಷ ಪ್ಯಾಡ್‍ನನ್ನು ಒಳಗೊಂಡಿರುತ್ತದೆ. ಪ್ಯಾಡ್ ತೇವವಾದಾಗ ಗಂಟೆ ಬಾರಿಸುತ್ತದೆ. ಇದರಿಂದ ಮಗುವಿಗೆ ಎಚ್ಚರವಾಗಿ ತನ್ನ ಮೂತ್ರಚೀಲವನ್ನು ಖಾಲಿ ಮಾಡಲು ಬಾತ್‍ರೂಮ್‍ಗೆ ಹೋಗುವಂತೆ ಮಾಡುತ್ತದೆ. ಕಾಲಕ್ರಮೇಣ ಮಗುವಿಗೆ ಮೂತ್ರಚೀಲ ತುಂಬಿದ ಅನುಭವವಾದಾಗ ಅದು ಎಚ್ಚರಗೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಒಮ್ಮೆ ಈ ಪ್ರತಿಕ್ರಿಯೆಯನ್ನು ಕಲಿತುಕೊಂಡರೆ, ಕೆಲವು ಮಕ್ಕಳು ಅಲಾರಾಂ ಸಹಾಯವಿಲ್ಲದೇ ತಾನಾಗಿಯೇ ಎಚ್ಚರಗೊಳ್ಳುವುದನ್ನು ಮುಂದುವರೆಸಿದರೆ, ಇತರ ಮಕ್ಕಳು ಇಡೀ ರಾತ್ರಿ ನಿದ್ರಿಸಲು ಸಮರ್ಥರಾಗುತ್ತಾರೆ ಹಾಗೂ ಶುಷ್ಕವಾಗಿ ಉಳಿಯುತ್ತವೆ. ಒಂದೇ ರೀತಿಯಲ್ಲಿ ಬಳಸಬಹುದಾದ ಅಥವಾ ಪ್ಯಾಡ್ ಮತ್ತು ಅಲಾರಾಂ ವ್ಯವಸ್ಥೆಯೊಂದಿಗೆ ಉಪಯೋಗಿಸಬಹುದಾದ ಇತರ ನಡವಳಿಕೆ/ವರ್ತನೆ ಪರಿವರ್ತನೆಗಳೆಂದರೆ :
- ಮಲಗುವುದಕ್ಕೆ ಹಲವಾರು ಗಂಟೆಗಳ ಮುನ್ನ ದ್ರವರೂಪದ ಪದಾರ್ಥಗಳನ್ನು ನಿರ್ಬಂಧಿಸುವಿಕೆ
- ಶೌಚಾಲಯ ಉಪಯೋಗಿಸಲು ರಾತ್ರಿಯಲ್ಲಿ ಮಗುವನ್ನು ಎಚ್ಚರಗೊಳಿಸುವಿಕೆ
- ಮೂತ್ರ ಧಾರಣ ಕೌಶಲ್ಯಗಳನ್ನು ಕಲಿಸುವಿಕೆ
- ರಾತ್ರಿ ವೇಳೆ ಶುಷ್ಕತೆಯಿಂದ ಇರುವುದರ ಪೂರಕ ಅನುಕೂಲಗಳ ಬಗ್ಗೆ ಮಗುವಿಗೆ ತಿಳಿಹೇಳುವಿಕೆ
- ಮಗುವಿನ ಬಗ್ಗೆ ಅನುಕಂಪ ಹೊಂದುವಿಕೆ ಹಾಗೂ ತೇವಾಂಶದ ರಾತ್ರಿಗಳಿಂದ ಉಂಟಾಗುವ ಕಿರಿಕಿರಿ ಬಗ್ಗೆ ಮಗುವಿಗೆ ಅರ್ಥ ಮಾಡಿಸುವಿಕೆ.
ಔಷಧಿಗಳೊಂದಿಗೆ ಚಿಕಿತ್ಸೆ :
ಎನ್ಯೂರೆಸಿಸ್ ಅಥವಾ ಬೆಡ್ ವೆಟ್ಟಿಂಗ್ ಚಿಕಿತ್ಸೆಗೆ ಮುಖ್ಯವಾಗಿ ಎರಡು ಔಷಧಿಗಳಿವೆ
- ಇಮಿಪ್ರಮೈನ್
- ಡೆಸ್ಮೊಪ್ರೆಸ್ಸಿನ್ ಅಸಿಟೇಟ್(ಡಿಡಿಎವಿಪಿ).1990ರಿಂದ ಎನ್ಯೂರೆಸಿಸ್ ಚಿಕಿತ್ಸೆಗೆ ಈ ಔಷಧಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮೂಗಿನ ಹೊಳ್ಳೆಗೆ ಸಿಂಪಡಿಸುವ ಅಥವಾ ಮಾತ್ರೆ ರೂಪದಲ್ಲಿ ಸೇವಿಸುವ ರೀತಿಯಲ್ಲಿ ಇವು ಲಭ್ಯವಾಗುತ್ತದೆ.
ಪರ್ಯಾಯ ಚಿಕಿತ್ಸೆಗಳು
ಹಿಪ್ನಾಸಿಸ್ ಅಥವಾ ಕೃತಿಮ ನಿದ್ರೆ ವಿಧಾನ ಬಳಕೆಯಿಂದ ಬೆಡ್-ವೆಟ್ಟಿಂಗ್ ಚಿಕಿತ್ಸೆಯಲ್ಲಿ ಕೊಂಚ ಮಟ್ಟಿಗೆ ಯಶಸ್ಸು ಕಂಡುಬಂದಿರುವುದು ವರದಿಯಾಗಿದೆ. ಹಿಪ್ನಾಸಿಸ್ ಕೆಲಸ ಮಾಡಿದರೆ, ನಾಲ್ಕರಿಂದ ಆರು ಸೆಷನ್‍ಗಳ ಒಳಗೆ ಫಲಿತಾಂಶವನ್ನು ಕಾಣಬಹುದು.
ಸೈಕೋಥೆರಪಿ
ಪ್ರಾಥಮಿಕ ಎನ್ಯೂರೆಸಿಸ್‍ಗೆ ಸೈಕೋಥೆರಪಿ ಅಗತ್ಯವಿಲ್ಲ. ದ್ವಿತೀಯ ಹಂತದ ಎನ್ಯೂರೆಸಿಸ್‍ಗೆ ಕೆಲವೊಮ್ಮೆ ಈ ಥೆರಪಿಯೊಂದಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು. ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಗೆ ಕಾರಣವಾಗುವ ಒತ್ತಡವನ್ನು ನಿವಾರಿಸುವುದು ಚಿಕಿತ್ಸೆಯ ಗುರಿಯಾಗಿರುತ್ತದೆ.
ದೋಷ ಪರೀಕ್ಷೆ
ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು ಬೆಳೆಯುತ್ತಿರುವ ಬಹುತೇಕ ಮಕ್ಕಳಲ್ಲಿ ಕಂಡಬರುವ ದೋಷವಾಗಿದೆ. ಚಿಕಿತ್ಸೆ ಪಡೆಯದ ಮಕ್ಕಳಲ್ಲಿ, ನಡವಳಿಕೆ ಚಿಕಿತ್ಸೆಯ ಒಟ್ಟಾರೆ ಯಶಸ್ಸಿನ ದರವು ಶೇ.75ರಷ್ಟಿರುತ್ತದೆ.
ಎಲ್ಲಿಂದ ಸಹಾಯ ಪಡೆಯಬೇಕು :
ಮಗು ಚಿಕಿತ್ಸೆಗೆ ಸಿದ್ದವಿದ್ದು, ಶುಷ್ಕವಾಗಿರುವ ಬಯಕೆಯನ್ನು ವ್ಯಕ್ತಪಡಿಸಿದಾಗ ವೈದ್ಯರು ಪ್ರತಿ ಮಗು ಮತ್ತು ಅದರ ಕುಟುಂಬಕ್ಕೆ ಸರಿಹೊಂದುವ ಉತ್ತಮ ರೀತಿಯ ಚಿಕಿತ್ಸಾ ಮಧ್ಯಸ್ಥಿಕೆಯನ್ನು ವೈದ್ಯರು ಗುರುತಿಸುತ್ತಾರೆ.
ಪೋಷಕರು ಏನು ಮಾಡಬೇಕು ?
ಮಗುವಿನ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ದೋಷವನ್ನು ಹೇಗೆ ನಿರ್ವಹಿಸಬಹುದು ಹಾಗೂ ದೋಷವನ್ನು ಹೇಗೆ ಬಗೆಹರಿಸಬಹುದು ಎಂಬ ಬಗ್ಗೆ ಪೋಷಕರಿಗೆ ಇಲ್ಲಿ ಕೆಲವು ಟಿಪ್ಸ್‍ಗಳನ್ನು ನೀಡಲಾಗಿದೆ :
1. ನಿಮ್ಮ ಮಗು ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳದಿರಲು ಚಿಕಿತ್ಸೆಗೆ ಸಿದ್ದವಾದಾಗ ಈ ಸಮಸ್ಯೆಯನ್ನು ದೂರ ಮಾಡಲು ನೆರವು ಮತ್ತು ಸಹಾಯ ಪಡೆಯಬೇಕು.
2. ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವ ಚಿಕಿತ್ಸೆ ಕುರಿತ ನಿರ್ಧಾರಗಳ ಬಗ್ಗೆ ಮಕ್ಕಳು ಸಕ್ರಿಯವಾಗಿರಬೇಕು ಹಾಗೂ ಅಗತ್ಯತೆಗಳಿಗೆ ಅನುಗುಣವಾಗಿ ಸದಾ ಚಿಕಿತ್ಸೆ ಇರಬೇಕು.
3. ಹಗಲಿನಲ್ಲಿ ನಿಯಮಿತವಾಗಿ ತಮ್ಮ ಮೂತ್ರ ಚೀಲವನ್ನು ಖಾಲಿ ಮಾಡಲು ಶೌಚಾಲಯಕ್ಕೆ ಹೋಗುವಂತೆ ನಿಮ್ಮ ಮಗುವಿಗೆ ಪ್ರೇರಣೆ ನೀಡಬೇಕು-ದಿನವಿಡೀ ನಾಲ್ಕರಿಂದ ಏಳು ಸಲದ ನಡುವೆ ಈ ಅಭ್ಯಾಸ ಉತ್ತಮ.
4. ಮಲಗುವುದಕ್ಕೆ ಸಿದ್ದವಾಗುವ ಹಾಗೂ ನಿದ್ರೆಸುವುದಕ್ಕೂ ಮುನ್ನ ಒಂದು ಭಾಗವಾಗಿ ಶೌಚಾಲಯಕ್ಕೆ ಹೋಗುವುದು ಹಾಸಿಗೆ ಸಮಯದ ಅಭ್ಯಾಸವಾಗಬೇಕು ಹಾಗೂ ಮಲಗುವುದಕ್ಕೆ ಮುನ್ನ ಮೂತ್ರ ಚೀಲ ಖಾಲಿಯಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
5. ಬೆಡ್ ವೆಟ್ಟಿಂಗ್‍ಗೆ ಚಿಕಿತ್ಸೆ ಅರಂಭಿಸುವುದಕ್ಕೂ ಮುನ್ನ ರಾತ್ರಿ ವೇಳೆ ಸದಾ ನ್ಯಾಪಿಗಳು ಅಥವಾ ಬಟ್ಟೆಗಳನ್ನು ತೆಗೆಯಬೇಕು.
6. ನಿಮ್ಮ ಮಗು ರಾತ್ರಿಯಲ್ಲಿ ಸುಲಭವಾಗಿ ಶೌಚಾಲಯಕ್ಕೆ ಹೋಗಿ ಬರುವುದನ್ನು ದೃಢಪಡಿಸಿಕೊಳ್ಳಬೇಕು.
7. ಹಾಸಿಗೆ ಬಳಿ ರಾತ್ರಿ ದೀಪ ಅಥವಾ ದೀಪದ ಗುಂಡಿ, ಇಲ್ಲವೇ ಹಾಲ್‍ನಲ್ಲಿ ದೀಪ ಉರಿಯುತ್ತಿದ್ದರೆ ಪ್ರಯೋಜನಕಾರಿ.
8. ಬೆಡ್‍ರೂಮ್‍ನಲ್ಲಿ ಒಂದು ಬಕೆಟ್ ಇಡುವುದರಿಂದ ರಾತ್ರಿ ವೇಳೆ ಹಾಲ್‍ಗೆ ಹೋಗಲು ನಿರಾಕರಿಸುವ ಮಗುವಿಗೆ ಇದರಿಂದ ನೆರವಾಗಬಹುದು.
9. ನಿಮ್ಮ ಮಗು ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಏಳಲು ಪ್ರಯತ್ನಿಸಿದಾಗ ಎಚ್ಚರಗೊಳ್ಳುವಂತೆ ಮಗುವಿಗೆ ತಿಳಿಸಬೇಕು. ಏಕೆಂದರೆ ಮಕ್ಕಳು ಶೌಚಾಲಯಕ್ಕೆ ಹೋಗಲು ಎಚ್ಚರವಾಗಲು ಯತ್ನಿಸುತ್ತವೆ. ಮಗು ಮತ್ತೆ ಮಲಗುವುದಕ್ಕೆ ಅರಂಭಿಸುವ ಬದಲು ಮಗು ಎಚ್ಚರಗೊಂಡು ಶೌಚಾಲಯಕ್ಕೆ ಹೋಗಿ ತಮ್ಮ ಮೂತ್ರ ಚೀಲವನ್ನು ಖಾಲಿ ಮಾಡಲು ಪ್ರಯತ್ನಿಸಲು ಇದರಿಂದ ನೆರವಾಗುತ್ತದೆ.
ಬೆಡ್‍ವೆಟ್ಟಿಂಗ್ ಹೋಮಿಯೋಪಥಿ ಚಿಕಿತ್ಸೆ
ಹೋಮಿಯೋಪಥಿ ಮೂಲಕ ಬೆಡ್‍ವೆಟ್ಟಿಂಗ್‍ಗೆ ಯಶಸ್ವಿ ಚಿಕಿತ್ಸೆ ನೀಡಬಹುದು. ವಿಶೇಷವಾಗಿ ವಿನ್ಯಾಸಗೊಳಿಸಿದ ಎನುರೆಸಿಸ್ ನಿಯಂತ್ರಣ ವಿಧಾನವನ್ನು ಅಳವಡಿಸಿಕೊಂಡು ಈ ಸಮಸ್ಯೆ ನಿವಾರಿಸಲುವ ಚಿಕಿತ್ಸೆ ಸುರಭಿ ಹೋಮಿಯೋ ಕ್ಲಿನಿಕ್‍ನಲ್ಲಿ ಲಭ್ಯವಿದೆ. ಇಂಥ ದೋಷಗಳಿಗೆ ಈ ವಿಧಾನ ಅನುಸರಿಸಿ ಹಲವಾರು ಪ್ರಕರಣಗಳನ್ನು ಯಶಸ್ವಿಯಾಗಿ ಗುಣಪಡಿಸಲಾಗಿದೆ.
ಈ ವಿಧಾನ ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ.
- ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಲು ಕಾರಣವನ್ನು ಪ್ರಮುಖವಾಗಿ ಅರ್ಥ ಮಾಡಿಕೊಳ್ಳುವಿಕೆ.
- ಬೆಡ್ ವೆಟ್ಟಿಂಗ್ ಸಮಸ್ಯೆ ಇರುವ ಮಕ್ಕಳ ವಿಶಿಷ್ಟ ರೋಗಲಕ್ಷಣ ಮತ್ತು ಚಿಹ್ನೆಯನ್ನು ಗುರುತಿಸುವಿಕೆ.
- ಮಗುವಿನ ವಂಶವಾಹಿ/ಅನುವಂಶೀಯತೆ ಹಿನ್ನೆಲೆ (ಅನುವಂಶೀಯತೆ ಪ್ರಭಾವಗಳು, ಕೌಟುಂಬಿಕ ಹಿನ್ನೆಲೆ)
- ಮಕ್ಕಳು ಮತ್ತು ಪೋಷಕರ ಆಪ್ತ ಸಮಾಲೋಚನೆ
ಹೋಮಿಯೋಪಥಿ ಚಿಕಿತ್ಸೆ ಮೂಲಕ ಮಗುವಿನ ಬೆಡ್‍ವೆಟ್ಟಿಂಗ್ ಸಮಸ್ಯೆಯಿಂದ ಸಂಪೂರ್ಣವಾಗಿ ಉಪಶಮನ ಮಾಡಬಹುದು. ಇದು ಮಕ್ಕಳು ಮಾನಸಿಕವಾಗಿ ಸದೃಢರಾಗಿ ಸದೃಢ ಪ್ರತಿರೋಧಕ ಶಕ್ತಿಯನ್ನು ಹೊಂದಲು ಸಹಕಾರಿಯಾಗುತ್ತದೆ.
ಡಾ. ತೇಜಸ್ವಿ ಕೆ.ಪಿ.
ಭಗವಾನ್ ಬುದ್ಧ ಹೋಮಿಯೋ ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್
ಕನ್ಸಲ್‍ಟಂಟ್ ಹೋಮಿಯೋಪಥಿ ವೈದ್ಯ-ಸುರಭಿ ಹೋಮಿಯೋ ಕ್ಲಿಕಿಕ್
ವಿದ್ಯಾರಣ್ಯಪುರ ಮುಖ್ಯ ರಸ್ತೆ, ಬೆಂಗಳೂರು-560 097
ಮೊ :9731133819
ಇಮೇಲ್: surabhihomoeoclinic@gmail.com