ಪುಟ್ಟ ಮಕ್ಕಳು ಅಗಾಗ ಕಡಿಮೆ ವೋಲ್ಟೇಜ್ ವಿದ್ಯುತ್ ಆಘಾತಕ್ಕೆ ಒಳಗಾಗುತ್ತಾರೆ.
- ವಿದ್ಯುತ್ ವೈರ್ಗಳನ್ನು ಬಾಯಿಂದ ಕಡಿಯುವ ಮೂಲಕ
- ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಅಥವಾ
- ಎಲೆಕ್ಟ್ರಿಕಲ್ ಪವರ್ ಪಾಯಿಂಟ್ಗೆ ವಸ್ತುಗಳನ್ನು ತೂರಿಸುವ ಮೂಲಕ
ತುರ್ತು ಪರಿಸ್ಥಿತಿಗಳ ಪ್ರಕರಣದಲ್ಲಿ ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು :
ಮಾಡಬೇಕಾದುದು
- ವೈದ್ಯಕೀಯ ಸಹಾಯಕ್ಕಾಗಿ ಕರೆದೊಯ್ಯುತ್ತಿರುವುದಾಗಿ ಭರವಸೆ ನೀಡಬೇಕು.
- ಬಟ್ಟೆಗಳನ್ನು ತೆಗದುಹಾಕುವ ಮೂಲಕ ಬೆಂಕಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಸುಟ್ಟಗಾಯದ ನೋವು-ಉರಿಯನ್ನು ಕಡಿಮೆಗೊಳಿಸಬೇಕು.
- ಗಾಯಾಳುವನ್ನು ನೆಲದ ಮೇಲೆ ಉರುಳಿಸುವ ಮೂಲಕ ಅಥವಾ ಒಂದು ಹೊದಿಕೆ ಹಾಕುವ ಮೂಲಕ ಬೆಂಕಿಯನ್ನು ನಂದಿಸಬೇಕು.
- ಸ್ವಚ್ಚ ಬಟ್ಟೆ ಅಥವಾ ಹಾಳೆಯಲ್ಲಿ ಸುತ್ತಿ ಸೂಕ್ತ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಬೇಕು.
- ಗಂಭೀರ ಸ್ವರೂಪದ ಸುಟ್ಟಗಾಯಗಳಿಗಾಗಿ ತಕ್ಷಣ ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ವಾಹನಗಳ ನೆರವಿಗಾಗಿ ಕರೆ ಮಾಡಬೇಕು.
- ಗಾಯಾಳುವಿನ ಆರೋಗ್ಯ ಸ್ಥಿತಿಯನ್ನು ಅಗಾಗ ತಪಾಸಣೆ ಮಾಡುತ್ತಿರಬೇಕು.
- ರಕ್ತಸ್ರಾವ ನಿಲ್ಲಿಸಲು ನೇರ ಒತ್ತಡವನ್ನು ಬಳಸಬೇಕು.
- ರೋಗಿಯ ಉಸಿರಾಟದ ಮಾರ್ಗವು ಸುಗಮವಾಗಿವೆಯೇ ಎಂಬುದನ್ನು ಪರೀಕ್ಷಿಸಬೇಕು.
- ನಾಡಿ ಬಡಿತ ಅಥವಾ ಉಸಿರಾಟಕ್ಕೆ ತೊಂದರೆಯಾಗಿದ್ದರೆ ಸಿಪಿಆರ್ (ಕಾರ್ಡಿಯೋ-ಪಲ್ಮೋನರಿ ರಿಸಸ್ಸಿಟೇಷನ್) ಆರಂಭಿಸಬೇಕು.
- ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಲ್ಯಾಟೆಕ್ಸ್ ಕೈಗವುಸುಗಳನ್ನು ಬಳಸಬೇಕು.
- ಗಾಯಾಳುಗಳನ್ನು ಶಾಕ್ ವಾರ್ಮ್ನಲ್ಲಿ (ಬ್ಲಾಂಕೆಟ್ ಇತ್ಯಾದಿ ಬಳಕೆ) ಇಡಬೇಕು.
- ಮುಂಡದ ಮೇಲ್ಭಾಗದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ತಲೆಯನ್ನು ಎತ್ತಬೇಕು.
- ಮುಂಡದ ಕೆಳಭಾಗದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಪಾದವನ್ನು ಎತ್ತಬೇಕು.
- ಶುದ್ಧ ನೀರಿನೊಂದಿಗೆ ಎಲ್ಲ ಗಾಯಗಳು ಮತ್ತು ರಾಸಾಯನಿಕ ಸುಟ್ಟಗಾಯಗಳನ್ನು ತೊಳೆಯಬೇಕು.
- ರಾಸಾಯನಿಕ ಸೇವನೆಯಾಗಿದ್ದರೆ ವಿಷ ನಿಯಂತ್ರಣ ಕೇಂದ್ರದ ವೈದ್ಯಕೀಯ ಸಿಬ್ಬಂದಿಯ ನೆರವನ್ನು ಪಡೆಯಬೇಕು.
ಮಾಡಬಾರದುದು
ನಿಮ್ಮದೇ ಆದ ಸುರಕ್ಷತೆ ಖಾತರಿಯಾಗುವುದಕ್ಕೂ ಮುನ್ನ ಪ್ರಥಮ ಚಿಕಿತ್ಸೆ ಆರಂಭಿಸಬಾರದು (ವಿದ್ಯುತ್ ಪ್ರವಾಹವನ್ನು ಸ್ವಿಚ್ ಆಫ್ ಮಾಡಬೇಕು ಅಥವಾ ರಾಸಾಯನಿ ಸುಟ್ಟ ಗಾಯದೊಂದಿಗೆ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವಾಗ ಗ್ಲೌಸುಗಳನ್ನು ಹಾಕಿಕೊಳ್ಳಬೇಕು)/
- ಸುಟ್ಟ ಗಾಯಗಳ ಮೇಲೆ ಪೇಸ್ಟ್, ಆಯಿಲ್, ಅರಿಶಿಣ ಅಥವಾ ಕಚ್ಚಾ ಹತ್ತಿಯನ್ನು ಲೇಪಿಸಬಾರದು.
- ಮಂಜುಗಡ್ಡೆಯನ್ನು ಹಾಕಬಾರದು, ಏಕೆಂದರೆ ಅದು ಗಾಯವನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುತ್ತದೆ.
- ದೀರ್ಘಕಾಲ ನೀರಿನಲ್ಲಿ ಇರುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಹೈಪೋಥರ್ಮಿಯಾಗೆ (ಲಘೂಷ್ಣತೆ) ಎಡೆ ಮಾಡಿಕೊಡುತ್ತದೆ.
- ವೈದ್ಯರಿಂದ ಆಂಟಿಮೈಕ್ರೋಬಿಯಾಲ್ಗಳನ್ನು ಲೇಪಿಸುವ ತನಕ ಬೊಕ್ಕೆಗಳು ಅಥವಾ ಬೊಬ್ಬೆಗಳನ್ನು ತೆರೆಯಬಾರದು.
- ಯಾವುದೇ ವಸ್ತುವನ್ನು ಗಾಯಕ್ಕೆ ನೇರವಾಗಿ ಲೇಪಿಸಬಾರದು, ಏಕೆಂದರೆ ಅದರಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಸೂಕ್ತ ವೈದ್ಯಕೀಯ ಆರೈಕೆಯಲ್ಲಿ ರೋಗಿಯನ್ನು ಇರಿಸುವ ತನಕ ಸ್ಥಳೀಯ ಔಷಧಿಗಳನ್ನು ತಪ್ಪಿಸಬೇಕು.
- ತೀರಾ ಅಗತ್ಯವಿರದ ಹೊರತು ಗಾಯಾಳುವನ್ನು ಸ್ಥಳಾಂತರಿಸಬಾರದು.
- “ಬೆನ್ನುಹುರಿ ಗಾಯ”ವನ್ನು ಯಾವಾಗಲೂ ಶಂಕಿಸಿಬೇಕು-ಗಾಯಾಳುವನ್ನು ಸ್ಥಳಾಂತರಿಸಬಾರದು.
- ಮೂಳೆ ಮುರಿತ ಅಥವಾ ಮುರಿದಿರುವಿಕೆಯನ್ನು ಕೂಡಿಸಲು ಪ್ರಯತ್ನಿಸಬಾರದು-ಅಂಥ ಸಂದರ್ಭದಲ್ಲಿ ರೋಗಿಯನ್ನು ಚಲನರಹಿತವಾಗಿರಿಸಬೇಕು.
- ರಕ್ತಬಂಧಕವನ್ನು ಅನ್ವಯಿಸಬಾರದು-ರಕ್ತ ನಿಲುಗಡೆಗೆ ‘ನೇರ’ ಒತ್ತಡ ಮಾತ್ರ ಹಾಕಬೇಕು.
- ಕಣ್ಣಿನಲ್ಲಿ ಸಿಲುಕಿಕೊಂಡಿರುವ ವಸ್ತುವನ್ನು ತೆಗೆಯಬಾರದು-ಡಿಕ್ಸಿ ಕಪ್ನಿಂದ ಕಣ್ಣನ್ನು ಮುಚ್ಚಬೇಕು.
- ಸುಟ್ಟಗಾಯಗಳ ಮುಲಾಮು ಅಥವಾ ಆಯಿಂಟ್ಮೆಂಟ್ಗಳನ್ನು ಬಳಸಬಾರದು. ಇದು ಗಾಯದ ಆಳ ಮತ್ತು ಸುಟ್ಟ ಗಾಯಗಳ ವಿಸ್ತರಣೆಯ ಬಗ್ಗೆ ತಪ್ಪು ಮೌಲ್ಯಮಾಪನಕ್ಕೆ ಎಡೆ ಮಾಡಿಕೊಡಬಹುದು.
- ತಕ್ಷಣ ವೈದ್ಯಕೀಯ ಸಿಬ್ಬಂದಿ ಅಥವಾ ರಕ್ಷಣಾ ವಾಹನಗಳನ್ನು ಕರೆಯಲು ಹಿಂದುಮುಂದು ನೋಡಬಾರದು.
ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 ಮೊ.: 97422 74849