ಡಾ. ನಿರಂತರ ಗಣೇಶ್ ಖ್ಯಾತ ವೈದ್ಯರಾಗಿ ಮತ್ತು ಉತ್ತಮ ಸಮಾಜಸೇವಕರಾಗಿ ಚಿರಪರಿಚಿತರು. ವೈದ್ಯೋ ನಾರಾಯಣೋ ಹರಿ: ಎಂಬಂತೆ ಪವಿತ್ರ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವವರು ಸಮಾಜಸೇವೆಯಲ್ಲಿ ತೊಡಗುವುದು ವಿರಳ. ಆದರೆ, ಡಾ. ನಿರಂತರ ಗಣೇಶ್ ಈ ಎರಡೂ ಕ್ಷೇತ್ರಗಳಲ್ಲಿ ಸಮತೋಲನ ನಡಿಗೆ ಮೂಲಕ ನ್ಯಾಯ ಒದಗಿಸಿ ಹೆಸರುವಾಸಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಹಾಗೂ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರ ಸಹೋದರಿಯ ಮೊಮ್ಮಗರಾದ ಡಾ. ಗಣೇಶ್ ಅವರಿಗೆ ಸಮಾಜಸೇವೆ ರಕ್ತಗತ ಬಳುವಳಿ. ಆರ್ಥೋಪೆಡಿಕ್ ಸರ್ಜನ್ ಆಗಿರುವ ಇವರು ಸಮಾಜಸೇವೆ ಮತ್ತು ಬಡಜನರ ಏಳಿಗೆಗಾಗಿ ಶ್ರಮಿಸುವದರಲ್ಲಿ ಮುಂಚೂಣಿಯಲ್ಲಿದ್ದಾರೆ.
ಡಾ. ಗಣೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು ಬಾಲ್ಯದಿಂದಲೂ ತುಂಬಾ ಪ್ರತಿಭಾವಂತರು. ಚಿಕ್ಕಂದಿನಿಂದಲೂ ಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಇವರಲ್ಲಿತ್ತು. ಇವರು ಬೆಳೆದಂತೆ ಕಷ್ಟದಲ್ಲಿರುವ ಜನರ ನೋವು-ನಲಿವುಗಳಿಗೆ ಸ್ಪಂದಿಸುತ್ತಾ ನಾಯಕತ್ವ ಗುಣಗಳನ್ನೂ ಮೈಗೂಡಿಸಿಕೊಂಡರು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರೆಂದೇ ಹೆಸರಾಗಿದ್ದ ಗಣೇಶ್ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದರು. ಮುಂದೆ ಇವರು ಉತ್ತಮ ಸಮಾಜ ಸುಧಾರಕರಾಗುವ ಎಲ್ಲ ಲಕ್ಷಣಗಳನ್ನು ಆಗಲೇ ಇವರ ಸ್ನೇಹಿತರು ಮತ್ತು ಸಹಪಾಠಿಗಳು ಗುರುತಿಸಿದ್ದರು.
ವೈದ್ಯಕೀಯ ಪದವಿ ಮತ್ತು ಆರ್ಥೋಪೆಡಿಕ್‍ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ಕಡೂರಿನಲ್ಲಿ ಕ್ಲಿನಿಕ್ ಆರಂಭಿಸಿ ಅಲ್ಲಿನ ಬಡಜನರಿಗೆ ಉಚಿತ ಚಿಕಿತ್ಸೆ ನೀಡುತ್ತಾ ಚಿರಪರಿಚಿರತಾದರು. ಅಲ್ಲದೇ ಸಮಾಜ ಸೇವೆಯಲ್ಲಿಯೂ ಸಕ್ರಿಯರಾದರು. ಬಡವರಿಗೆ ಉಚಿತ ವೈದ್ಯಕೀಯ ಮಾರ್ಗದರ್ಶನ, ಚಿಕಿತ್ಸೆ ಹಾಗೂ ಅದಕ್ಕೆ ತಗಲುವ ವೆಚ್ಚಗಳನ್ನು ಇವರೇ ಭರಿಸುತ್ತಾ ವೈದ್ಯೋ ನಾರಾಯಣೋ ಹರಿ ಎಂಬ ವಾಕ್ಯಕ್ಕೆ ಅನ್ವರ್ಥನಾಮದಂತಿದ್ದರು. ಮೂಡಿಗೆರೆ ಮತ್ತು ಕಡೂರಿನ ಅನೇಕ ಗ್ರಾಮಗಳಿಗೆ ಇವರು ಧನ್ವಂತರಿಯಾಗಿದ್ದರು. ಅಲ್ಲದೇ ಕಷ್ಟದಲ್ಲಿರುವ ಗ್ರಾಮಸ್ಥರಿಗೆ ಆಪತ್ಭಾಂದವರಾಗಿದ್ದರು.
ತಮ್ಮ ಸೇವೆಯನ್ನೂ ಬೇರೆ ಕಡೆಗೂ ವಿಸ್ತರಿಸಬೇಕೆಂಬುದು ಇವರ ಅಭಿಲಾಷೆಯಾಗಿತ್ತು. ಇದೇ ಕಾರಣವಾಗಿ ಇವರು ತಮ್ಮ ಹಿರಿಯರು ಮತ್ತು ಹಿತೈಷಿಗಳ ಸಲಹೆಯಂತೆ ಬೆಂಗಳೂರಿಗೆ ಬಂದರು. ನಗರದ ಪ್ರತಿಷ್ಠಿತ ರಾಮಯ್ಯ ಆಸ್ಪತ್ರೆಯಲ್ಲಿ ಆರ್ಥೋ ಸರ್ಜನ್ ಆಗಿ ಕಾರ್ಯನಿರ್ವಹಿಸಿದರು. ಜೊತೆಗೆ ತಮ್ಮದೇ ಆದ ಸ್ವಂತ ಕ್ಲಿನಿಕ್ ತೆರೆದು ಬಡವರು ಮತ್ತು ಆರ್ಥಿಕ ದುರ್ಬಲರಿಗೆ ನೆರವಾಗುವ ತಮ್ಮ ಉದಾತ್ತ ಧ್ಯೇಯವನ್ನು ಮುಂದುವರಿಸಿದರು.
ರಾಜಕೀಯ ರಂಗ
ಇವರ ನಾಯಕತ್ವ ಗುಣ ಮತ್ತು ಸಂಘಟನಾ ಚಾತುರ್ಯಗಳನ್ನು ಗಮನಿಸಿದ ಎಸ್.ಎಂ. ಕೃಷ್ಣ ಮತ್ತು ಹಿರಿಯ ಮುಖಂಡರು ರಾಜಕೀಯಕ್ಕೆ ಸೇರಿ ಸಮಾಜ ಸೇವೆಯನ್ನು ಮುಂದುವರಿಸುವಂತೆ ಸಲಹೆ ನೀಡಿದ್ದರು. ಆಗ ದಿನೇಶ್ ಗುಂಡೂರಾವ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿದ್ದರು. ಕಾಂಗ್ರೆಸ್ ಸೇರುವಂತೆ ಡಾ. ಗಣೇಶ್ ಅವರ ಮನವೊಲಿಸಿದರು. ರಾಜಕೀಯ ಬೇರುಗಳು ಬಲವಾಗಿದ್ದ ಕುಟುಂಬದವರಾದ ಇವರು 2017ರ ಏಪ್ರಿಲ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರಿದರು. ಇವರೊಂದಿಗೆ 30ಕ್ಕೂ ಹೆಚ್ಚು ವೈದ್ಯರೂ ಸಹ ಕಾಂಗ್ರೆಸ್‍ಗೆ ಸೇರಿದ್ದರು. ಆದರೂ ಬದಲಾದ ಪರಿಸ್ಥಿತಿಯಲ್ಲಿ ಡಾ. ಗಣೇಶ್ ಪ್ರದಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಮನಸೋತು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಯುವ ನಾಯಕರಾದ ಗಣೇಶ್ ಅವರ ಸೇರ್ಪಡೆಯಿಂದ ಪಕ್ಷದ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಿದೆ. ಪಕ್ಷವನ್ನು ಬೇರು ಮಟ್ಟದಿಂದ ಬಲಗೊಳಿಸುವುದು ನನ್ನ ಉದ್ದೇಶ, ಚುನಾವಣೆ ಅಥವಾ ಪಕ್ಷದ ಉನ್ನತ ಹುದ್ದೆ ನನ್ನ ಉದ್ದೇಶವಲ್ಲ ಎಂದು ಗಣೇಶ್ ಅವರು ಹೇಳುತ್ತಾದರೂ, ಅವರಂತಹ ಉತ್ತಮ ಮನಸ್ಸಿನ ವಿದ್ಯಾವಂತರು, ಹೊಸ ಚಿಂತನೆಯವರು ರಾಜಕೀಯ ಕ್ಷೇತ್ರಕ್ಕೆ ಬರುವುದು ಹೊಸತನಕ್ಕೆ ಕಾರಣವಾಗಬಹುದು.
ಸಮಾಜ ಸೇವೆ
ಇವರ ಮನಸ್ಸು ಸಮಾಜಸೇವೆಯತ್ತ ಸದಾ ತುಡಿಯುತ್ತಿತ್ತು. ಇದೇ ಕಾರಣಕ್ಕಾಗಿ ಅವರು ವೈದ್ಯ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ಮತ್ತಷ್ಟು ಸಕ್ರಿಯರಾದರು. ಡಾ. ಗಣೇಶ್ ಅವರಿಗೆ ಸಮಾಜ ಸೇವೆ ರಕ್ತಗತ ಬಳುವಳಿ. ಅವರ ಕುಟುಂಬರ ಹಿರೀಕರೂ ಸಹ ಸಮಾಜಸೇವೆ ಮಾಡುತ್ತಾ ಗುರುತಿಸಿಕೊಂಡವರು. ಮುತ್ಸದ್ಧಿ ಎಸ್.ಎಂ. ಕೃಷ್ಣ ಅವರ ಪ್ರಭಾವ ಇವರ ಮೇಲೆ ಸಾಕಷ್ಟಿತ್ತು. ಪರ್ವುತ್ಸಾ ಫೌಂಡೇಷನ್ ಎಂಬ ತಮ್ಮ ಸಂಘಟನೆ ಮೂಲಕ ಡಾ. ಗಣೇಶ್ ತಮ್ಮ ಸಮಾಜ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುತ್ತಾ ಹೋದರು. ಇವರ ಸಮಾಜ ಸೇವೆ ಪಟ್ಟಿ ಬಹು ದೊಡ್ಡದು.
ತಮ್ಮ ವೃತ್ತಿಯ ಒತ್ತಡದ ನಡುವೆಯೂ ಬಡವರ ಆರೋಗ್ಯ ರಕ್ಷಣೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆರೋಗ್ಯಕರ ಜನರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆರೋಗ್ಯಕರ ಸಮಾಜದಿಂದ ಉತ್ತಮ ದೇಶ ನಿರ್ಮಾಣ ಸಾಧ್ಯ ಎಂಬ ಮಾತುಗಳಲ್ಲಿ ಬಲವಾದ ನಂಬಿಕೆ ಹೊಂದಿರುವ ಡಾ. ಗಣೇಶ್ ಜನರ ಆರೋಗ್ಯ ಮತ್ತು ಸಮಾಜದ ಸೌಖ್ಯತೆ ವೃದ್ಧಿಸಲು ಉಚಿನ ಆರೋಗ್ಯ ತಪಾಸಣೆ, ಮಾರ್ಗದರ್ಶನ, ಚಿಕಿತ್ಸಾ ವೆಚ್ಚ ಭರಿಸುವಿಕೆಗೆ ನೆರವಾದರು. ರಕ್ತದಾನ ಶಿಬಿರ, ನೇತ್ರ ದಾನ ಶಿಬಿರ, ಆರೋಗ್ಯ ಶಿಬರಗಳ ಮೂಲಕ ನೂರಾರು ಜನರಿಗೆ ನೆರವಾದರು. ಅನೇಕ ಹೆಲ್ತ್ ಕ್ಯಾಂಪ್‍ಗಳನ್ನು ಡಾ. ಗಣೇಶ್ ಆಯೋಜಿಸಿ ನೂರಾರು ಫಲಾನುಭವಿಗಳಿಗೆ ಅವುಗಳ ಸೌಲಭ್ಯಗಳು ದಕ್ಕುವಂತೆ ಮಾಡಿದರು.
ಸಾಧನೆಗಳು
ನಂದಿನಿ ಲೇಔಟ್‍ನ ಶ್ರೀ ಶಿರಡಿ ಸಾಯಿ ಅನಾಥಾಲಯ ಚಾರಿಟೇಬಲ್ ಟ್ರಸ್ಟ್‍ನ ಅನಾಥರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ. 50 ಸಾವಿರ ಧನಸಹಾಯದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ ಸಹ ನಡೆಸಲಾಯಿತು. ಅನೇಕ ಅನಾಥರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಕಂರೀರವ ನಗರದಲ್ಲಿ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆಗೆ ನೆರವು ನೀಡಿದರು. ಮಹಾಲಕ್ಷ್ಮಿಪುರಂನ ವಿವಿಧ ಸಮುದಾಯಗಳು ಮತ್ತು ಸೌಲಭ್ಯವಂಚಿತ ಜನರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾರ್ಗದರ್ಶನದೊಂದಿಗೆ ಉಚಿತ ಔಷಧಿಗಳ ನೀಡಿ, ತಮ್ಮ ಸಂಘದ ವತಿಯಿಂದ ಚಿಕಿತ್ಸಾ ವೆಚ್ಚ ಭರಿಸಿದರು. ಇವರ ಆರೋಗ್ಯ ರಕ್ಷಣೆ ಮತ್ತು ಉಚಿತ ವೈದ್ಯಕೀಯ ಸೇವೆ ನಿರಂತರವಾಗಿ ಮುಂದುವರಿದಿದೆ.
ಆರೋಗ್ಯ ರಕ್ಷಣೆಯಲ್ಲದೇ ಪರಿಸರ ಸಂರಕ್ಷಣೆ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹದಲ್ಲೂ ಇವರು ಮುಂಚೂಣಿಯಲ್ಲಿದ್ದಾರೆ.
ಪರಿಸರ ಸಂರಕ್ಷಣೆಗೆ ಜಾಗೃತಿ ಶಿಬಿರ. ಹಸಿರು ಉಳಿಸಲು ಅಭಿಯಾನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಪದ್ಮಶ್ರೀ ಪುರಸ್ಕøತರಾದ ಸಾಲುಮರದ ತಿಮ್ಮಕ್ಕ ಅವರ ಸಹಕಾರದೊಂದಿಗೆ ಮಹಾಲಕ್ಷ್ಮಿಪುರಂ ನಾಗಪುರ ವಾರ್ಡ್‍ನಲ್ಲಿ 10,000 ಗಿಡಗಳ ವಿತರಿಸಿ ಹಸಿರು ಮತ್ತು ಆರೋಗ್ಯಕರ ನಗರ ನಿರ್ಮಾಣ ಯೋಜನೆಗೆ ಡಾ. ಗಣೇಶ್ ಸಾಥ್ ನೀಡಿದ್ದಾರೆ.
ಮಹಾಲಕ್ಷ್ಮೀಪುರಂನ ಪ್ರತಿಭಾವಂತ ಕ್ರೀಡಾಪಟುಗಳಿಗೆ ಕ್ರಿಕೆಟ್ ಮತ್ತು ಇತರ ಕ್ರೀಡಾ ಸಾದನ/ಪರಿಕರಗಳನ್ನು ನೀಡಿ ಕ್ರೀಡೆಗಳು ಮತ್ತು ಆಟೋಟ ಚಟುವಟಿಕೆಗಳಿಗೆ ಉತ್ತೇಜನ ಮುಂದುವರಿಸಿದ್ದಾರೆ.
ಜ್ಞಾನ-ಶಿಕ್ಷಣವೇ ಶಕ್ತಿ ಎಂಬ ಮಾತಿನಲ್ಲಿ ಬಲವಾದ ನಂಬಿಕೆ ಇರುವ ಡಾ. ಗಣೇಶ್, ಆರ್ಥಿಕ ದುರ್ಬಲರು ಮತ್ತು ಸೌಲಭ್ಯ ವಂಚಿತ ಮಕ್ಕಳ ಶಿಕ್ಷಣಕ್ಕಾಗಿ ಉದಾರ ನೆರವು ನೀಡುತ್ತಿದ್ದಾರೆ. ಮಹಾಲಕ್ಷ್ಮೀಪುರಂನಲ್ಲಿ ವಿಕಲಚೇತನರು ಮತ್ತು ಅನಾಥ ಮಕ್ಕಳೊಂದಿಗೆ ಆತ್ಮೀಯ ಒಡನಾಟ. ಎಲ್ಲ ಅನಾಥ ಮತ್ತು ವಿಕಲಚೇತನ ಮಕ್ಕಳಿಗೆ ಶಾಲಾ ಶುಲ್ಕ ಮತ್ತು ಇತರ ಸೌಲಭ್ಯಗಳ ನೀಡಿ ನಿಜವಾದ ವಿದ್ಯಾರ್ಥಿಮಿತ್ರ ಎನಿಸಿದ್ದಾರೆ. ಮಹಾಲಕ್ಷ್ಮೀಪುರಂ, ನಾಗವಾರ, ಕುರುಬರ ಹಳ್ಳಿಯ ಅನೇಕ ಬಡಮಕ್ಕಳಿಗೆ ಉಚಿತ ನೋಟ್ ಬುಕ್‍ಗಳು ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿ ಶಿಕ್ಷಣಕ್ಕೆ ನೆರವಾಗಿದ್ದಾರೆ. ಈ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದಾರೆ.
ಸಾಮಾಜಿಕ ಕಳಕಳಿಯ ಜಾಗೃತಿಗಳಲ್ಲೂ ಸಹ ಇವರು ವಿಶೇವಾಗಿ ಗುರುತಿಸಿಕೊಂಡಿದ್ದಾರೆ. ಪವಿತ್ರ ಹಕ್ಕಿನ ಮತದಾನ ಜಾಗೃತಿ, ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿವು, ಪಲ್ಸ್ ಪೋಲಿಯೋ ಅಭಿಯಾನ ಮತ್ತು ಶಿಬಿರ ಆಯೋಜನೆ, ಡೆಂಘಿ, ಚಿಕುನ್ ಗುನ್ಯಾ ಮೊದಲಾದ ರೋಗಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೊದಲಾದ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಇವರು ಆಯೋಜಿಸಿದ್ದಾರೆ.
ಡಾ. ಗಣೇಶ್ ಅಪ್ಪಟ ದೇಶಪ್ರೇಮಿ ಮತ್ತು ಕನ್ನಡಾಭಿಮಾನಿ. ಕನ್ನಡ ನಾಡು ನುಡಿ, ಬಾಷೆ-ಸಂಸ್ಕøತಿ-ಪರಂಪರೆ, ನೆಲ-ಜಲ ರಕ್ಷಣೆಗಾಗಿ ಬೆಂಬಲ ನೀಡುತ್ತಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಣಿವೆ ಪಾಂತ್ಯ ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ನಡೆದ ಭಯೋತ್ಪಾದಕರ ದಾಳಿಯನ್ನು ಉಗ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್‍ನ ಉಗ್ರಗಾಮಿಗಳ ಶಿಬಿರಗಳು ಮತ್ತು ಅಡಗುದಾಣಗಳ ಮೇಲೆ ಭಾರತೀಯ ಯೋಧರ ಪರಾಕ್ರಮವನ್ನು ಮನಸಾರೆ ಹೊಗಳಿ ವೀರಾಗ್ರಣಿಗಳಿಗೆ ಗೌರವ ಸಲ್ಲಿಸಿದ್ದಾರೆ. ಗಣರಾಜೋತ್ಸವ ಮತ್ತು ಸ್ವಾತಂತ್ರೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಅಚರಿಸುತ್ತಾರೆ.
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ್-2 ಸಾಧನೆಗಾಗಿ ಇಸ್ರೋ ವಿಜ್ಞಾನಿಗಳು ಮತ್ತು ಅಧ್ಯಕ್ಷ ಕೆ ಶಿವನ್‍ಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ದೇಶದ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ ಡಾ. ಗಣೇಶ್. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇವರು ದೇಶದ ಮಹಾ ನಾಯಕರು ಮತ್ತು ಪ್ರಾತ:ಸ್ಮರಣೀಯರ ಜನ್ಮದಿನವನ್ನು ಸ್ಮರಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಯುವಕರಲ್ಲಿ ದೇಶಾಭಿಮಾನವನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರ್ರಿ ಅವರ 115ನೇ ಜನ್ಮ ಜಯಂತಿ ಪ್ರಯುಕ್ತ ಅವರು ಉದಾತ್ತ ಸಂದೇಶಗಳು, ತತ್ತ್ವಾದರ್ಶಗಳು ಮತ್ತು ಸೂಕ್ತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಉಲ್ಲೇಖಿಸಿದ್ದಾರೆ.
ಹಿರಿಯ ನಟ ದಿವಂಗತ ರೇಬಲ್ ಸ್ಟಾರ್ ಅಂಬರೀಶ್ ಅವರ 67ನೇ ಜನ್ಮಜಯಂತಿ ಪ್ರಯುಕ್ತ ಆರೋಗ್ಯ ತಪಾಸಣೆ ಮತ್ತು ರಕ್ಷದಾನ ಶಿಬಿರವನ್ನು ಸಂಸದೆ ಸುಮಲತಾ ಅಂಬರೀಶ್ ಸಮ್ಮುಖದಲ್ಲಿ ಆಚರಿಸಿದ್ದರು. ಕನ್ನಡ ನಾಡಿನ ಪರಂಪರೆ, ಸಾಂಸ್ಕøತಿಕ ಹಬ್ಬ-ಹರಿದಿನಗಳನ್ನು ಸಹ ಇವರ ವಿಶೇಷವಾಗಿ ಆಚರಿಸುತ್ತಾರೆ. ಮಹಾಲಕ್ಷ್ಮಿಪುರಂನಲ್ಲಿ ರಾಮನವಮಿ ಆಚರಣೆ. ಕುರುಬರ ಹಳ್ಳಿಯಲ್ಲಿ ಕರಗ ಮಹೋತ್ಸವ, ವಿವಿಧೆಡೆ ಗಣೇಶೋತ್ಸವ ಮತ್ತು ನವರಾತ್ರಿ ಹಬ್ಬಗಳಲ್ಲೂ ಅವರು ಪಾಲ್ಗೊಂಡರು.
ಡಾ. ನಿರಂತರ ಗಣೇಶ್ ಅವರ ಬಳಿ ಸೇವಾ ಮತ್ತು ಸಮರ್ಪಣಾ ಮನೋಭಾವದ ಸಮಾಜಸೇವಕರ ಪಡೆಯೇ ಇದೆ ಇವರು ಸಮಾನಮನಸ್ಕರಾಗಿದ್ದು, ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಇವರೆಲ್ಲರಿಗೂ ಡಾ. ಗಣೇಶ್ ಮಾರ್ಗದರ್ಶನ ನೀಡುತ್ತಾರೆ. ಡಾ. ಗಣೇಶ್ ಅವರಂಥ ಆರೋಗ್ಯ ರಕ್ಷಕರು ಮತ್ತು ಸಮಾಜ ಸೇವಕರ ಅಗತ್ಯ ಈ ಸಮಾಜಕ್ಕಿದ್ದು, ಈ ಕ್ಷೇತ್ರದಲ್ಲಿ ಹೊಸ ಅಭಿವೃದ್ಧಿಯ ಶಖೆ ಮಾಡಲು ಎಲ್ಲಾ ಸಾಧ್ಯತೆಗಳಿವೆ. ಇವರಿಂದ ಸಮಾಜಕ್ಕೆ ಮತ್ತಷ್ಟು ಇಳಿತಾಗಲಿ, ಬಡವರ ಏಳಿಗೆಯಾಗಲಿ, ಡಾ. ಗಣೇಶ್ ಇನ್ನಷ್ಟು ಎತ್ತರಕ್ಕೆ ಬೆಳೆದು ಅವರ ಸೇವೆ ವಿಸ್ತರಣೆಯಾಗಲಿ ಎಂಬುದೇ ನಮ್ಮ ಹಾರೈಕೆ.