ಡಯಾಬಿಟಿಸ್‍ನನ್ನು ತಡೆಗಟ್ಟಬಹುದು

ಡಯಾಬಿಟಿಸ್‍ನನ್ನು ತಡೆಗಟ್ಟಬಹುದು ಅಥವಾ ವಿಳಂಬ ಮಾಡಬಹುದು. ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ಆರೋಗ್ಯಕರ ಆಹಾರ, ನಿಯತ ವ್ಯಾಯಾಮ, ಸಾಮಾನ್ಯ ದೇಹ ತೂಕ ನಿರ್ವಹಣೆ,  ತಂಬಾಕು ಬಳಕೆಯನ್ನು ತಪ್ಪಿಸುವುದರಿಂದ ಹಾಗೂ ಸರಳ ಜೀವನಶೈಲಿ ಕ್ರಮಗಳು ಪರಿಣಾಮಕಾರಿ. 

ಡಯಾಬಿಟಿಸ್‍ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು ಮಾಡಲಾಗಿದೆ.ಡಯಾಬಿಟಿಸ್‍ನನ್ನು ತಡೆಗಟ್ಟಬಹುದು ಅಂದಾಜು 1.5 ದಶಲಕ್ಷ ಸಾವುಗಳಿಗೆ ಡಯಾಬಿಟಿಸ್ ನೇರ ಕಾರಣವಾಗಿದೆ. ಶೇಕಡ 80ಕ್ಕಿಂತ ಹೆಚ್ಚು ಡಯಾಬಿಟಿಸ್ ಸಾವುಗಳು ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಸಂಭವಿಸುತ್ತಿದೆ. 2030ರ ವೇಳೆಗೆ ವಿಶ್ವದಲ್ಲಿ ಡಯಾಬಿಟಿಸ್ ಸಾವಿಗೆ 7ನೇ ಪ್ರಮುಖ ಕಾರಣವಾಗಲಿದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೇ ಭವಿಷ್ಯ ನುಡಿದಿದೆ.

ಡಯಾಬಿಟಿಸ್ ಮೆಲ್ಲಿಟಸ್:

ಡಯಾಬಿಟಿಸ್ ಅಥವಾ ಮಧುಮೇಹ (ಸಕ್ಕರೆ ಕಾಯಿಲೆ/ಸಿಹಿ ಮೂತ್ರ ರೋಗ) ಒಂದು ಬಹುಕಾಲ ಬೇರೂರುವ ರೋಗವಾಗಿದ್ದು, ಈ ಕೆಳಕಂಡ ಕಾರಣಗಳಿಂದ ಕಂಡುಬರುತ್ತದೆ.
1. ಮೆದೋಜ್ಜೀರಕವು ಸಾಕಷ್ಟು ಇನ್ಸುಲಿನ್ ತಯಾರಿಸದೆ ಇದ್ದಾಗ ಅಥವಾ
2.ದೇಹವು ತಾವು ಉತ್ಪಾದಿಸಿದ ಇನ್ಸುಲಿನ್‍ನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇದ್ದಾಗ.
ಇನ್ಸುಲಿನ್ ಒಂದು ಹಾರ್ಮೋನು ಆಗಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹೈಪರ್‍ಗ್ಲಿಸಿಮಿಯಾ ಅಥವಾ ರಕ್ತದಲ್ಲಿ ಏರಿಕ ಸಕ್ಕರೆ ಅಂಶವು ಅನಿಯಂತ್ರಿತ ಡಯಾಬಿಟಿಸ್‍ನ ಸಾಮಾನ್ಯ ಪರಿಣಾಮವಾಗಿದೆ ಹಾಗೂ ದೀರ್ಘ ಕಾಲದ ರೋಗವು ವಿಶೇಷವಾಗಿ ನರಗಳು ಮತ್ತು ರಕ್ತನಾಳ ಸೇರಿದಂತೆ ದೇಹದ ಅನೇಕ ವ್ಯವಸ್ಥೆಗಳಿಗೆ ಗಂಭೀರ ಸ್ವರೂಪದ ಹಾನಿಯುಂಟು ಮಾಡುತ್ತದೆ.

ಟೈಪ್ 1 ಡಯಾಬಿಟಿಸ್

ಟೈಪ್ 1 ಡಯಾಬಿಟಿಸ್ (ಈ ಹಿಂದೆ ಇನ್ಸುಲಿನ್ ಅವಲಂಬಿತ, ಬಾಲಾವಸ್ಥೆ ಅಥವಾ ಮಕ್ಕಳಲ್ಲಿ ಸಕ್ಕರೆ ರೋಗ ಬರುತ್ತದೆ ಎಂದು ಕರೆಯಲಾಗುತ್ತಿತ್ತು) ಮಧುಮೇಹವು ಕೊರತೆಯ ಇನ್ಸುಲಿನ್ ಉತ್ಪಾದನೆಯಿಂದ ದೋಷವಾಗಿದ್ದು, ಪ್ರತಿದಿನ ಇನ್ಸುಲಿನ್ ನೀಡಬೇಕಾಗುತ್ತದೆ. ಇದರ ರೋಗಲಕ್ಷಣಗಳು ವಿಪರೀತ ಮೂತ್ರ ವಿಸರ್ಜನೆ (ಪಾಲಿಯೂರಿಯಾ), ಬಾಯಾರಿಕೆ (ಪಾಲಿ ಡಿಪಿಸಿಯಾ), ನಿರಂತರ ಹಸಿವು, ತೂಕ ಇಳಿಕೆ, ದೃಷ್ಟಿ ಬದಲಾವಣೆ ಹಾಗೂ ಆಯಾಸ ಇವುಗಳನ್ನು ಒಳಗೊಂಡಿರುತ್ತದೆ. ಈ ರೋಗಲಕ್ಷಣಗಳು ಹಠಾತ್ ಕಂಡುಬರಬಹುದು.

ಟೈಪ್ 2 ಡಯಾಬಿಟಿಸ್

ಟೈಪ್ 2 ಡಯಾಬಿಟಿಸ್ (ಈ ಹಿಂದೆ ಇದನ್ನು ಇನ್ಸುಲಿನ್ ರಹಿತ ಅವಲಂಬನೆ ಅಥವಾ ವಯಸ್ಕರಲ್ಲಿ ಕಂಡುಬರುತ್ತದೆ ಎಂದು ಕರೆಯಲಾಗುತ್ತಿತ್ತು) ಮಧುಮೇಹವು ಇನ್ಸುಲಿನ್ ಬಳಕೆಯಲ್ಲಿ ದೇಹವು ಅಸಮರ್ಥವಾಗುವುದರಿಂದ ಗೋಚರಿಸುತ್ತದೆ. ಅಧಿಕ ದೇಹ ತೂಕ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ವಿಶ್ವದಾದ್ಯಂತ ಡಯಾಬಿಟಿಸ್ ಹೊಂದಿರುವ ರೋಗಿಗಳಲ್ಲಿ ಶೇಕಡ 90ರಷ್ಟು ಮಂದಿ ಟೈಪ್ 2 ಡಯಾಬಿಟಸ್ ಹೊಂದಿರುತ್ತಾರೆ. ಇದರ ಚಿಹ್ನೆ ಮತ್ತು ರೋಗಲಕ್ಷಣಗಳು ಟೈಪ್ 1 ಡಯಾಬಿಟಿಸ್‍ನಂತೆಯೇ ಇರುತ್ತದೆ. ಆದರೆ ಕಡಿಮೆ ಮಟ್ಟದಲ್ಲಿ ಗೋಚರಿಸುತ್ತದೆ. ಈ ರೀತಿಯ ಸಕ್ಕರೆ ರೋಗವು ದೇಹದಲ್ಲಿ ಸೇರಿಕೊಂಡು ಹಲವಾರು ವರ್ಷಗಳ ನಂತರ ಹಾಗೂ ತೊಡಕುಗಳು ಈಗಾಗಲೇ ಉಲ್ಬಣಗೊಂಡ ನಂತರ ರೋಗವು ನಿರ್ಧರಿಸಲ್ಪಡುವುದು ಆತಂಕದ ಸಂಗತಿಯಾಗಿದೆ. ತೀರಾ ಇತ್ತೀಚಿನ ತನಕ, ಈ ರೀತಿ ಮಧುಮೇಹವು ವಯಸ್ಕರಲ್ಲಿ ಮಾತ್ರ ಕಂಡುಬರುತ್ತಿತು. ಈಗ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ.

ಗರ್ಭಧಾರಣೆ ವೇಳೆ ಕಂಡುಬರುವ ಡಯಾಬಿಟಿಸ್

ಜೆಸ್ಟೆಷನಲ್ ಡಯಾಬಿಟಿಸ್ ಅಥವಾ ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ಸಮಸ್ಯೆಯಲ್ಲಿ ಹೈಪರ್‍ಗ್ಲಿಸಿಮಿಯಾ ಅಂದರೆ ರಕ್ತದಲ್ಲಿನ ಸಕ್ಕರೆ ಅಂಶವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಡಯಾಬಿಟಿಸ್ ರೋಗನಿರ್ಧಾರ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ಇದು ವಿಶೇಷವಾಗಿ ಗರ್ಭವತಿಯರಲ್ಲಿ ಕಂಡುಬರುತ್ತದೆ. ಜೆಸ್ಟೆಷನಲ್ ಡಯಾಬಿಟಿಸ್ ಹೊಂದಿರುವ ಮಹಿಳೆಯರಲ್ಲಿ ಗರ್ಭಧರಿಸಿದ ವೇಳೆ ಮತ್ತು ಹೆರಿಗೆ ವೇಳೆ ತೊಡಕುಗಳು ಗೋಚರಿಸುವ ಸಾಧ್ಯತೆ ಇರುತ್ತದೆ. ಭವಿಷ್ಯದಲ್ಲಿ ಇಂಥ ಮಹಿಳೆಯರಿಗೆ ಟೈಪ್ 2 ಡಯಾಬಿಟಿಸ್ ಸಂಭವ ಹೆಚ್ಚಾಗಿರುತ್ತದೆ. ಪ್ರಸವಪೂರ್ವ ತಪಾಸಣೆ ಮೂಲಕ ಜೆಸ್ಟೆಷನಲ್ ಡಯಾಬಿಟಿಸ್‍ನ ರೋಗ ನಿರ್ಧರಿಸಬಹುದು.

ಇಂಪೇರ್ಡ್ ಗ್ಲುಕೋಸ್ ಟಾಲೆರೆನ್ಸ್ (ಐಜಿಟಿ) ಮತ್ತು ಇಂಪೇರ್ಡ್ ಫಾಸ್ಟಿಮಗ್ ಗ್ಲೈಸಿಮಿಯಾ (ಐಎಫ್‍ಜಿ)

ಇಂಪೇರ್ಡ್ ಗ್ಲುಕೋಸ್ ಟಾಲೆರೆನ್ಸ್ (ಐಜಿಟಿ) ಮತ್ತು ಇಂಪೇರ್ಡ್ ಫಾಸ್ಟಿಮಗ್ ಗ್ಲೈಸಿಮಿಯಾ (ಐಎಫ್‍ಜಿ)-ಇದು ಸಾಮಾನ್ಯ ಮತ್ತು ಡಯಾಬಿಟಿಸ್ ನಡುವೆ ಪರಿವರ್ತನೆಯಲ್ಲಿ ಅಂತರ ಮಧ್ಯಂತರ ಸ್ಥಿತಿಗಳಾಗಿರುತ್ತದೆ. ಐಜಿಟಿ ಅಥವಾ ಐಎಫ್‍ಜಿ ಇರುವ ಜನರಲ್ಲಿ ಟೈಪ್ 2 ಡಯಾಬಿಟಿಸ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಡಯಾಬಿಟಿಸ್ ಪೂರ್ವವು ರಕ್ತದಲ್ಲಿನ ಗ್ಲುಕೋಸ್ (ಸಕ್ಕರೆ) ಮಟ್ಟಗಳು ಸಾಮಾನ್ಯಕ್ಕಿಂತ ಅಧಿಕ ಮಟ್ಟದಲ್ಲಿರುವ ಸ್ಥಿತಿಯಾಗಿರುತ್ತದೆ, ಆದರೆ ಮಧುಮೇಹ ಎಂದು ಕರೆಯುವಷ್ಟು ಹೆಚ್ಚಾಗಿರುವುದಿಲ್ಲ. ಇದನ್ನು ಪತ್ತೆ ಮಾಡದಿದ್ದರೆ, ಇದು ಡಯಾಬಿಟಿಸ್‍ಗೆ ಎಡೆ ಮಾಡಿಕೊಡುತ್ತದೆ. ಮಧುಮೇಹ ಪೂರ್ವ ಸ್ಥಿತಿಯೊಂದಿಗೆ ಇರುವ ವ್ಯಕ್ತಿಗಳಲ್ಲಿ ಟೈಪ್ 2 ಡಯಾಬಿಟಿಸ್, ಅಧಿಕ ರಕ್ತದೊತ್ತಡ ಮತ್ತು ಪಾಶ್ರ್ವವಾಯು ಅಭಿವೃದ್ಧಿಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು (ಓರಲ್ ಗ್ಲುಕೋಸ್ ಟಾಲರೆನ್ಸ್ ಟೆಸ್ಟ್-ಡಯಾಬಿಟಿಸ್/ಡಯಾಬಿಟಿಸ್ ಪೂರ್ವ ರೋಗ ನಿರ್ಧಾರಕ್ಕೆ ಬಳಸುವ ಒಂದು ಪರೀಕ್ಷೆ) ಹಾಗೂ ಗ್ಲೈಕೇಟೆಡ್ ಹೀಮೊಗ್ಲೋಬಿನ್ (ಈ ಪರೀಕ್ಷೆಯು ಕಳೆದ 3 ತಿಂಗಳುಗಳಿಂದ ಗ್ಲುಕೋಸ್ ಮಟ್ಟವನ್ನು ತಿಳಿಸುತ್ತದೆ). ಓರಲ್ ಗ್ಲುಕೋಸ್ ಟಾಲರೆನ್ಸ್ ಟೆಸ್ಟ್‍ಗಾಗಿ ಸ್ಟ್ಯಾಂಡರ್ಡ್ ಗ್ಲುಕೋಸ್‍ನನ್ನು ನೀಡಲಿದ್ದು, ಒಂದು ಕಪ್ ನೀರಿನೊಂದಿಗೆ ಕುಡಿಯಬೇಕಾಗುತ್ತದೆ. ಬಳಿಕ 2 ರಕ್ತ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಅಂದರೆ 0 ನಿಮಿಷ ಮತ್ತು 120 ನಿಮಿಷಗಳು (ಒಟ್ಟು 4 ಎಂಎಲ್). 0 ನಿಮಿಷ ರಕ್ತ ಮಾದರಿಯು ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಮತ್ತು ಗ್ಲೈಕೇಟೆಡ್ ಹೀಮೊಗ್ಲೋಬಿನ್ ತಪಾಸಣೆಗೆ ಬಳಸಲಾಗುತ್ತದೆ ಹಾಗೂ 120 ನಿಮಿಷಗಳ ರಕ್ತ ಮಾದರಿಯನ್ನು ರಕ್ತದಲ್ಲಿನ ಗ್ಲುಕೋಸ್ ತಪಾಸಣೆಗೆ ಉಪಯೋಗಿಸಲಾಗುತ್ತದೆ.ಡಯಾಬಿಟಿಸ್‍ನನ್ನು ತಡೆಗಟ್ಟಬಹುದು

ಡಯಾಬಿಟಿಸ್‍ನ ಸಾಮಾನ್ಯ ಪರಿಣಾಮಗಳು

1. ಡಯಾಬಿಟಿಸ್ ರೋಗವು, ಹೃದಯ, ರಕ್ತ ನಾಳಗಳು, ಕಣ್ಣುಗಳು, ಮೂತ್ರಪಿಂಡಗಳು ಮತ್ತು ದೀರ್ಘಕಾಲ ನಿಲ್ಲುವ ಡಯಾಬಿಟಿಸ್ ರೋಗಿಗಳಲ್ಲಿ ನರಗಳಿಗೆ ಹಾನಿ ಮಾಡುತ್ತದೆ.

2.ಡಯಾಬಿಟಿಸ್ ಹೃದ್ರೋಗ ಮತ್ತು ಪಾಶ್ರ್ವವಾಯುವಿನ ಗಂಡಾಂತರವನ್ನು ಹೆಚ್ಚಿಸುತ್ತದೆ. ಡಯಾಬಿಟಿಸ್ ಇರುವ ಶೇಕಡ 50ರಷ್ಟು ಮಂದಿ ಕ್ಯಾರ್ಡಿಯೋವ್ಯಾಸ್ಕುಲರ್ ರೋಗದಿಂದ ಮೃತರಾಗುತ್ತಾರೆ (ಪ್ರಾಥಮಿಕವಾಗಿ ಹೃದ್ರೋಗ ಮತ್ತು ಪಾಶ್ರ್ವವಾಯು).

3. ಪಾದಗಳಿಗೆ ಸಾಕಷ್ಟು ರಕ್ತ ಪೂರೈಕ ಇಲ್ಲದೆ ಇರುವುದರಿಂದ ನ್ಯೂರೋಪಥಿ (ನರ ಹಾನಿ) ದೋಷವು ಪಾದ ಹುಣ್ಣುಗಳಿಗೆ ಕಾರಣವಾಗಿ ಕಾಲು ಕತ್ತರಿಸಬೇಕಾದ ಪರಿಸ್ಥಿತಿಗೂ ಎಡೆ ಮಾಡಿಕೊಡುತ್ತದೆ.

4. ದೀರ್ಘಾವಧಿ ಡಯಾಬಿಟಿಸ್ ರೋಗದ ಪರಿಣಾಮವಾಗಿ ಡಯಾಬಿಟಿಕ್ ರೆಟಿನೋಪಥಿಗೆ ಕಾರಣವಾಗಿ, ರೆಟಿನಾದಲ್ಲಿ ಪುಟ್ಟ ರಕ್ತನಾಳಗಳಿಗೆ ಹಾನಿಯಾಗುವುದರಿಂದ ಅಂಧತ್ವಕ್ಕೆ ಕಾರಣವಾಗುತ್ತದೆ. ಜಗತ್ತಿನ ಶೇಕಡ ಒಂದರಷ್ಟು ಅಂಧತ್ವಕ್ಕೆ ಡಯಾಬಿಟಿಸ್ ಕಾರಣವಾಗುತ್ತದೆ.

5. ಮೂತ್ರಪಿಂಡ ವೈಫಲ್ಯಕ್ಕೆ ಡಯಾಬಿಟಿಸ್ ಪ್ರಮುಖ ಕಾರಣವಾಗುತ್ತದೆ.

6. ಡಯಾಬಿಟಿಸ್ ಇಲ್ಲದ ವ್ಯಕ್ತಿಗಳಿಗಿಂತ ಡಯಾಬಿಟಿಸ್ ಹೊಂದಿರುವ ಜನರಲ್ಲಿ ಸಾವು ಸಂಭವಿಸುವ ಒಟ್ಟಾರೆ ಗಂಡಾಂತರವು ಇಮ್ಮಡಿಯಾಗಿರುತ್ತದೆ.

ಡಯಾಬಿಟಿಸ್ ಹೊರೆಯನ್ನು ಕಡಿಮೆ ಮಾಡುವಿಕೆ

ಡಯಾಬಿಟಿಸ್‍ನನ್ನು ತಡೆಗಟ್ಟಲು ಅಥವಾ ವಿಳಂಬ ಮಾಡುವಲ್ಲಿ ಸರಳ ಜೀವನಶೈಲಿ ಕ್ರಮಗಳು ಪರಿಣಾಮಕಾರಿ ಎಂಬುದು ಸಾಬೀತಾತಿದೆ. ಟೈಪ್ 2 ಡಯಾಬಿಟಿಸ್ ಮತ್ತು ಅದರ ತೊಡಕುಗಳನ್ನು ತಡೆಯಲು ಈ ಕೆಳಕಂಡ ಸಲಹೆಗಳನ್ನು ಪಾಲಿಸಬೇಕು.

1. ಆರೋಗ್ಯಕರ ದೇಹ ತೂಕವನ್ನು ಸಾಧಿಸಿ ಮತ್ತು ನಿರ್ವಹಣೆ ಮಾಡಿ.

2. ದೈಹಿಕವಾಗಿ ಸಕ್ರಿಯವಾಗಿರಿ-ಸಾಮಾನ್ಯ ಜನರಲ್ಲಿ ಬಹುತೇಕ ದಿನಗಳಂದು 30 ನಿಮಿಷಗಳ ಕಾಲ ನಿಯತವಾಗಿ, ಸಾಧಾರಣದಿಂದ ಬಿರುಸಿನ ಚಟುವಟಿಕೆ ಕೈಗೊಳ್ಳಿ. ತೂಕ ನಿಯಂತ್ರಣಕ್ಕೆ ಹೆಚ್ಚು ಚಟುವಟಿಕೆಗಳು ಅಗತ್ಯವಾಗಿರುತ್ತದೆ.

3. ಪ್ರತಿ ದಿನ 3 ರಿಂದ 5 ಬಾರಿ ಹಣ್ಣು ಮತ್ತು ತರಕಾಗಿಗಳು ಸೇರಿದಂತೆ ಆರೋಗ್ಯಕರ ಆಹಾರ ಸೇವಿಸಿ ಹಾಗೂ ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್‍ನಂಥ ಕೊಬ್ಬಿನಂಶ ಸೇವನೆಯನ್ನು ಕಡಿಮೆ ಮಾಡಿ.

4. ತಂಬಾಕು ತಪ್ಪಿಸಿ, ಏಕೆಂದರೆ ಧೂಮಪಾನ ಮಾಡುವುದರಿಂದ ಹೃದ್ರೋಗಗಳ ಸಾಧ್ಯತೆಯು ಹೆಚ್ಚಾಗುತ್ತದೆ.

ರೋಗ ನಿರ್ಧಾರ ಮತ್ತು ಚಿಕಿತ್ಸೆ

ತುಂಬಾ ಕಡಿಮೆ ವೆಚ್ಚದ ರಕ್ತ ಪರೀಕ್ಷೆ ಮೂಲಕ ಮುನ್ನವೇ ಡಯಾಬಿಟಿಸ್ ರೋಗವನ್ನು ನಿರ್ಧಾರ ಮಾಡಬಹುದು. ಮಧುಮೇಹ ರೋಗದ ಚಿಕಿತ್ಸೆಯು ರಕ್ತದಲ್ಲಿನ ಗ್ಲುಕೋಸ್ (ಸಕ್ಕರೆ) ಅಂಶವನ್ನು ಕಡಿಮೆ ಮಾಡುವುದು ಹಾಗೂ ರಕ್ತ ನಾಳಗಳಿಗೆ ಹಾನಿಯಾಗುವ ಸಂಭವಾಂಶಗಳಿಂದ ತಪ್ಪಿಸುವುದನ್ನು ಒಳಗೊಂಡಿರುತ್ತದೆ. ತೊಡಕುಗಳನ್ನು ತಪ್ಪಿಸಲು ತಂಬಾಕು ಬಳಕೆಯನ್ನು ನಿಲ್ಲಿಸಬೇಕಾಗುತ್ತದೆ. ಈ ಕ್ರಮಗಳೊಂದಿಗೆ ಆರೋಗ್ಯಕರ ಆಹಾರ, ನಿಯತ ದೈಹಿಕ ಚಟುವಟಿಕೆ, ಸಾಮಾನ್ಯ ದೇಹ ತೂಕ ನಿರ್ವಹಣೆ  ಪಾಲಿಸಬೇಕು.

1. ಟೈಪ್ 1 ಡಯಾಬಿಟಿಸ್ ಹೊಂದಿರುವ ಜನರಿಗೆ ಇನ್ಸುಲಿನ್ ಅಗತ್ಯವಾಗಿರುತ್ತದೆ.

2. ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರಿಗೆ ಔಷಧಿಗಳಿಂದ ಚಿಕಿತ್ಸೆ ನೀಡಬಹುದಾಗಿದೆ. ಆದರೆ ಅವರಿಗು ಇನ್ಸುಲಿನ್ ಅಗತ್ಯವಿರಬಹುದು.

3. ಅಧಿಕ ರಕ್ತದೊತ್ತಡವನ್ನು ಸಂಪೂರ್ಣ ನಿಯಂತ್ರಣ

4. ಪಾದ ಆರೈಕೆ

5. ಅಂಧತ್ವಕ್ಕೆ ಕಾರಣವಾಗುವ ರೆಟಿನೊಪಥಿಗಾಗಿ ತಪಾಸಣೆ ಮತ್ತು ಚಿಕಿತ್ಸೆ

6. ಕೊಲೆಸ್ಟರಾಲ್ ಮಟ್ಟಗಳ ನಿಯಂತ್ರಣ

7. ಮಧುಮೇಹಕ್ಕೆ ಸಂಬಂಧಿಸಿದ ಮೂತ್ರಪಿಂಡ ರೋಗದ ಆರಂಭಿಕ ಚಿಹ್ನೆಗಳ ತಪಾಸಣೆ

Dr-Chalapathi ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066 080-28413384/82/83.    www.vims.ac.in

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   

www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!