ಕೊರೋನಾ ನೀನು ಮಾಡುತ್ತಿರುವದು ಸರಿನಾ..?

ಕೊರೋನಾ ನೀನು ಮಾಡುತ್ತಿರುವದು ಸರಿನಾ..?ಪತ್ರಿಕೆ ಬಿಚ್ಚಿದರೆ, ಟಿ.ವ್ಹಿ ಆನ್ ಮಾಡಿದರೆ ಮತ್ತು ಮೊಬೈಲ್ ಲಾಕ್ ತೆಗೆದರೆ ಸಾಕು, ಕೊರೋನಾ„ ಕೊರೋನಾ„„ ಕೂಗು ಮತ್ತು ಶಬ್ದದ ಹಾವಳಿ. ಆಗ ಎದೆಯಲ್ಲಿ ಧಡ..ಧಡ ಸೇರಿ, ಗಂಟಲು ಒಣಗಿ ಬರುತ್ತದೆ ಮತ್ತು ಆ ಸಮಯದಲ್ಲಿ ಒಂದು ಸೀನು-ಗೀನು ಬಂದರೆ ಸಾಕು, ಶ್ವಾಸವು ಜೋರಾಗಿ… ಉಫ್, ನನಗೇನು ಕೊರೋನಾವೈರಸ್ ಅಂಟಿಕೊಂಡಿತಾ ಎಂಬ ಭಯ ಪ್ರಾರಂಭ ಆಗುತ್ತದೆ. ಇಲ್ಲಿಯವರೆಗಿನ ಎಲ್ಲಕ್ಕಿಂತ ಸೂಕ್ಷ್ಮವಾದ ಈ ವಿಷಾಣು ಇಡಿ ಜಗತ್ತನ್ನೆ ನಲುಗಿಸಿ ಬಿಟ್ಟಿದೆ. ಲಕ್ಷಾವಧಿ ಜನರಿಗೆ ಅಂಟಿಕೊಂಡು ಸಾವಿರಾರು ಜನರ ಪ್ರಾಣದ ಮೃದಂಗ ನುಡಿಸಿದೆ.
ಚೀನಾದ ವುವಾನ್ ಪಟ್ಟಣದಲ್ಲಿ ಕಾಣಿಸಿಕೊಂಡ ಈ ಮಹಾಮಾರಿ ‘ಕೊರೋನಾ’ ಇಂದು ವಿಶ್ವದ ದೊಡ್ಡಣ್ಣನಾದ ಅಮೇರಿಕಾ, ಬಲಾಢ್ಯ ಐರೋಪ್ಯ ರಾಷ್ಟ್ರಗಳು ಮತ್ತು ಇನ್ನುಳಿದ ಸುಮಾರು 199 ದೇಶಗಳಲ್ಲಿ ಹರಡಿಕೊಂಡಿದೆ. ಬಹುತೇಕ ಜಪಾನ್ ಮೇಲೆ ಅಮೇರಿಕಾ ಪರಮಾಣು ಬಾಂಬ ದಾಳಿಯಲ್ಲಿ ಜಗತ್ತು ಇಷ್ಷು ಭಯ ಪಟ್ಟಿರಲಿಕ್ಕಿಲ್ಲ ಅಷ್ಟು ಜಗತ್ತು ಮತ್ತು ವಿಶೇಷ ಅಮೇರಿಕಾ ಭಯಪಡುತ್ತಿವೆ. ಎಲ್ಲ ದೇಶಗಳು ತಮ್ಮ ಸೀಮೆಗಳನ್ನು ಮುಚ್ಚಿಸಿಕೊಂಡಿವೆ, ಅರ್ಥವ್ಯವಸ್ಥೆ ಎಷ್ಟೆ ಹದಗೆಟ್ಟರು ಸಂಪತ್ತಿಗಿಂತ ಪ್ರಾಣ ಮುಖ್ಯವೆಂದು ಜನರೆಲ್ಲಾ ಬಾಗಿಲು ಹಾಕಿಕೊಂಡು ಮನೆಯ ಒಳಗೆ ಕುಳಿತು ಕೊಂಡಿದ್ದಾರೆ. ಎಲ್ಲ ಕಡೆಗೂ ಲಾಕಡೌವುನ್ ಇದೆ. ಒಂದು ಕಾಲದಲ್ಲಿ ‘ಸೂರ್ಯ ಮುಳಗದ ಸಾಮ್ಯಾಜ್ಯ’ದ ಪ್ರಧಾನ ಮಂತ್ರಿ ಇಂದು ಇದಕ್ಕೆ ತುತ್ತಾಗಿದ್ದಾರೆ.
ಹಿಂದಿ ಸಿನೇಮಾದಲ್ಲಿ ‘ಏಕ್ ಮಚ್ಚರ ಸಾಲಾ ಆದಮಿ ಕೋ ಹಿಜಡಾ ಬನಾ ದೇತಾ ಹೈ’ ಎಂದು ನಾಯಕ ಡಾಯಲಾಗ್ ಹೇಳುತ್ತಾನೆ. ಆದರೆ ಸೊಳ್ಳೆಯಕ್ಕಿಂತಲು ಅದೆಷ್ಟೋ ಪಟ್ಟು ಚಿಕ್ಕದಾದ ಈ ಕೊರೋನಾ ‘ಆದಮಿಕಿ ಜಿಂದಗಿ ಹೀ ರೋನಾ ಬನಾ ದೇತಿ ಹೈ’ ಎಂದು ಹೇಳಬಹುದು. ಇಂದು ಮನುಷ್ಯ ಏನಾಲ್ಲಾ ಶೋಧಿಸಿದ್ದಾನೆ. ಐದೆ ಐದು ನಿಮಿಷದಲ್ಲಿ ಇಡಿ ಜಗತ್ತನ್ನೆ ಸ್ಮಶಾನ ಮಾಡುವ ಶಸ್ತ್ರಾಸ್ತ್ರಗಳಿವೆ. ಅದೇಂತಹ ಆಧುನಿಕ ಉಪಕರಣಗಳನ್ನು ಕಂಡು ಹಿಡಿದಿದ್ದಾನೆ. ಆದರೆ ಈ ಕೊರೋನಾ ಮುಂದೇಕೆ ಕಾಲು ಉರಿದ್ದಾನೆ ಗೊತ್ತಿಲ್ಲಾ..? ಅಂದುಕೊಳ್ಳೋಣ ಚೀನಾ ಈ ವೈರಸ್ ನಿರ್ಮಾಣ ಮಾಡಿದೆ. ಆದರೆ ಅಮೇರಿಕಾದಂತಹ ಬಲಾಢ್ಯ ರಾಷ್ಟ್ರಗಳು ಪ್ರತಿ ಜೈವಿಕಗಳನ್ನು ಶೋಧಿಸಬಹುದಿತ್ತಲ್ಲಾ..? ಸುಮಾರು ಎರಡರಿಂದ ಮೂರು ತಿಂಗಳಿಂದ ನಡೆಯುತ್ತಲಿರುವ ಈ ಹಾವಳಿ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಆಸೆ ಮಾಡೋಣ,, ವೈದ್ಯಲೋಕ ಬಹುಬೇಗ ಇದಕ್ಕೆ ಪ್ರತಿಜೈವಿಕ ಶೋಧಿಸಲಿ. ಅಲ್ಪ ಕಾಲದಲ್ಲಿ ಮನುಷ್ಯಕುಲವನ್ನೆ ಗಡಗಡಿಸಿದ ಈ ಕೊರೋನಾ ಅದೇಷ್ಟೊ ಪಾಠಗಳನ್ನು ಕಲಿಸಿಕೊಡುತ್ತಿದೆ.

ಮನುಷ್ಯಕುಲಕ್ಕೆ ದೊಡ್ಡ ಎಚ್ಚರಿಕೆ ಗಂಟೆ:
ಮೊದಲನೆಯದು ಚೀನಾದಂತಹ ದೇಶಗಳು ಇಂದು ಅನಾಹುತ ಪ್ರಾಣಿ ಹಿಂಸೆ ಮಾಡುತ್ತಿವೆ. ಮನುಷ್ಯ ಪ್ರಾಣಿ ಪಚನವಾಗದ ಪ್ರಾಣಿಗಳನ್ನು ಸಹ ತಿನ್ನುತ್ತಿದ್ದಾನೆ. ಇದರಿಂದ ನಿಸರ್ಗದ ಸಮತೋಲನೆಯನ್ನು ಹಾಳು ಮಾಡುತ್ತಿದ್ದಿಯಾ ಎಂದು ಹೇಳಲಿಕ್ಕೆ ಕೊರೋನಾ ಬಂದಿರಬಹುದಲ್ಲ ಎಂದೆನಿಸುತ್ತದೆ. ಇದರಿಂದ ಜಗತ್ತಿನಲ್ಲಿಯ ದೇಶಗಳು ಪ್ರಾಣಿ ಹಿಂಸೆ ಕಡಿಮೆ ಮಾಡಿ ನಿಸರ್ಗದ ಸಮತೋಲನೆಯನ್ನು ಕಾಪಾಡಬಹುದೆಂಬ ನಂಬಿಕೆ ಉಂಟಾಗಿದೆ. ಇನ್ನೂ ಮುಂದಾದರು ಜಗತ್ತಿನಲ್ಲಿಯ ಜನರು ಸಭ್ಯರಾಗಿ ವ್ಯಯಕ್ತಿಕ ಮತ್ತು ಸಾಮೂಹಿಕ ಸ್ವಚ್ಛತೆ ಕಡೆಗೆ ಬಹು ಸೂಕ್ಷ್ಮವಾಗಿ ಗಮನ ಕೊಡುತ್ತಾರೆ; ಇಲ್ಲದಿದ್ದರೆ ಪುಕ್ಕಟ್ಟೆಯಾಗಿ ಎಲ್ಲರಿಗೆ ಪ್ರಾಣದ ಬಲಿ ಕೊಡಬೇಕಾಗುತ್ತದೆ ಎಂಬುದು ಅರಿವು ಮೂಡಿತ್ತಿರಬಹುದು. ಒಟ್ಟಾರೆ ಗಾಂಧಿ ತತ್ವಕ್ಕೆ ಪರ್ಯಾಯವಿಲ್ಲ ಎಂದು ಹೇಳಬಹುದು.
ಒಂದು ವೇಳೆ ಯಾವುದೊಂದು ದೇಶ ತನ್ನ ಸ್ವಾರ್ಥಕ್ಕಾಗಿ ಪ್ರಯೋಗಾಲಯದಲ್ಲಿ ಇದರ ನಿರ್ಮಿತಿ ಮಾಡಿದ್ದರೆ ಇದೊಂದು ಮನುಷ್ಯಕುಲಕ್ಕೆ ದೊಡ್ಡ ಎಚ್ಚರಿಕೆ ಗಂಟೆ ಎಂದು ಹೇಳಬಹುದು. ಒಂದು ವೇಳೆ ಈ ವಿಚಾರ ಭಯೋತ್ಪಾದಕರ ಕೈಗೆ ಬಂದರೆ ಮನುಕುಲದ ಪರಿಸ್ಥಿತಿ ಏನಾಗುತ್ತದೆ ಎಂಬುದು ಎಚ್ಚರಿಕೆ ವಹಿಸಬೇಕಾಗಿದೆ. ಅದಕ್ಕಾಗಿ ನಮ್ಮೆಲ್ಲರ ಮುಂದೆ ಇರುವದು ಜಗತ್ತಿನಲ್ಲಿ ಶಾಂತಿ ಮತ್ತು ಪ್ರೇಮದ ಭಾವನೆ ಇನ್ನಷ್ಟೂ ದೃಢವಾಗಿ ಅನುಷ್ಠಾಗೊಳಿಸುವದು. ವೈಮನಸ್ಸು ಮತ್ತು ಪೊಳ್ಳು ಪುಂಡಾಡಿಕೆಯನ್ನು ತಕ್ಷಣ ಬಿಡಬೇಕು. ಇಲ್ಲದಿದ್ದರೆ ಇಂದು ಚೀನಾ ತಯಾರಿಸಿದೆ, ನಾಳೆ ನಾವು ತಯಾರಿಸೋಣ ಎಂದು ಅಮೇರಿಕಾದವರು ಅಂದುಕೊಂಡರೆ ಮನುಷ್ಯನಿಲ್ಲದ ಪೃಥ್ವಿ ನೋಡಬೇಕಾಗುತ್ತದೆ.
corona-virus-janata-curfewರಾಜಕಾರಣವು ಆದರ್ಶ ಆಗಿರಬೇಕು. ಪ್ರತಿಯೊಂದು ದೇಶದ ನಾಯಕನು ಇಂತಹ ವಿಷಮ ಪರಿಸ್ಥಿತಿಯಲ್ಲಿ ದೂರಗಾಮಿ ಉದ್ದೇಶದವನಿರಬೇಕು ಎಂಬುದು ಈ ಸೊಂಕು ತಿಳಿಸಿಕೊಟ್ಟಿತು. ಇನ್ಮೂಂದೆ ಈ ಪ್ರಕಾರದ ಸೊಂಕು ಒಂದು ದೇಶದಲ್ಲಿ ಕಂಡುಬಂದರೆ ಬೇಗ ಮುನ್ನಚ್ಚರಿಕೆ ಕ್ರಮಗಳನ್ನು ಅಲ್ಲಿಯ ನಾಯಕರು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಜೀವದ ಬಲಿ ಅರ್ಪಿಸಬೇಕಾಗುತ್ತದೆ. ಚೀನಾದಲ್ಲಿ ಹಾವಳಿ ಪ್ರಾರಂಭವಾದಾಗ ಜಗತ್ತಿನಲ್ಲಿಯ ಚಿಕ್ಕಪುಟ್ಟ ದೇಶಗಳು ಈ ಸೊಂಕಿನ ಸಿದ್ಧತೆ ಮಾಡಿಕೊಂಡಿದ್ದವು. ಆದರೆ ಬಲಾಢ್ಯ ರಾಷ್ಟ್ರಗಳು ನಮ್ಮ ದೇಶಕ್ಕೆ ಅದು ಬರುವದಿಲ್ಲ, ನಮ್ಮಲ್ಲಿ ಉತ್ಕಷ್ಟವಾದ ಆರೋಗ್ಯ ಇಲಾಖೆ ಇದೆ ಎಂದು ಕೂತವು. ಅಮೇರಿಕಾದಲ್ಲಿ ವೈದ್ಯ ಮಂಡಳಿ ಮತ್ತು ಸಲಹಾ ಮಂಡಳಿಯು ಅವರ ಅಧ್ಯಕ್ಷ ಡೊಲಾಲ್ಡ ಟ್ರಂಪ್‍ರಿಗೆ ತಕ್ಷಣ ನಾವು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ದೇಶದ ಪರಿಸ್ಥಿತಿ ಅನಾಹುತದತ್ತ ಸಾಗುತ್ತದೆ ಎಂದು ಹೇಳಿದರು. ಆದರೆ ಟ್ರಂಪ್‍ರು ತಮ್ಮ ಉಡಾಫೆತನದಿಂದ ಅಲ್ಲಿಯ ಜನರನ್ನು ಸಂಕಟಕ್ಕೆ ನೂಕಿದ್ದಾರೆ. ನಿಜಕ್ಕೂ ಅಮೇರಿಕಾ ದೇಶದ ಜನರು ಚೀನಾ ದೇಶದ ಮೇಲೆ ಮೊಕದ್ದಮೆ ಹೂಡುವದಕ್ಕಿಂತ ಟ್ರಂಪ್‍ರ ಮೇಲೆ ಹೂಡಿದರೆ ಒಳ್ಳೆಯದು.
ಅದನ್ನೆ ಕ್ಯೂಬಾದಂತಹ ಚಿಕ್ಕ ರಾಷ್ಟ್ರದ ನಾಯಕನ ಮುನ್ನಚ್ಚರಿಕೆಯ ಕ್ರಮವನ್ನು ನೋಡಿದರೆ, ಅವರ ದೇಶ ಹತೋಟಿಯಲ್ಲಿದೆ. ಅದಲ್ಲದೆ ಅವರು ತಮ್ಮ ವೈದ್ಯರನ್ನು ಇಟಲಿಯಂತಹ ದೇಶಗಳಿಗೆ ಕಳುಹಿಸಿದ್ದಾರೆ. ಎಲ್ಲಕ್ಕಿಂತ ಮಹತ್ವದ್ದು ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡ ಕ್ರಾಂತಿಕಾರಿ ಮಾರ್ಗಗಳು. ಜನಮತದಿಂದ, ತಜ್ಞರ ಸಲಹೆಯೊಂದಿಗೆ ಉತ್ಕಷ್ಟ ನಿಯೋಜನೆ ಮಾಡಿದ್ದು ಜಗತ್ತಿಗೆ ಒಂದು ಉತ್ತಮ ನಾಯಕತ್ವದ ಗುಣವನ್ನು ತೋರಿಸಿದ್ದಾರೆ. ದೇಶ ಎಂತಹ ಕಠಿಣ ಪರಿಸ್ಥಿತಿಯಲ್ಲಿದ್ದರೂ ಒಬ್ಬ ಒಳ್ಳೆಯ ನಾಯಕ ದೇಶದ ಜನರನ್ನು ಸಂರಕ್ಷಿಸಬಹುದು ಎಂಬುದು ಈ ಸೊಂಕು ಹೇಳಿಕೊಟ್ಟಿತು.
ಎಲ್ಲಕ್ಕಿಂತ ಮಹತ್ವದ್ದು ಜಗತ್ತಿನಲ್ಲಿಯ ಅಂಧ ಧರ್ಮ ಮತ್ತು ದೈವ ಸಂಕಲ್ಪನೆಯ ಜನರ ಕಾಲುಗಳು ಭೂಮಿಯ ಮೇಲೆ ಬಂದಿದ್ದು. ಏಕೆಂದರೆ ಈ ಜನ ಇರುವದು ಭೂಮಿಯ ಮೇಲೆ ಆದರೆ ಊಹಿಸುವದು ಇಲ್ಲದ ಸಂಕಲ್ಪನೆ. ಬಹಳ ಹಿಂದೆನೆ ಬಸವಾದಿ ಶರಣರು ಹೇಳಿದ್ದರು, ದೇವರಿಗಾಗಿ ಅಲ್ಲಿ-ಇಲ್ಲಿ ಎಲ್ಲಿ ತಿರುಗಾಡಬೇಡಿ. ಮನೆಯಲ್ಲಿಯೆ ಇಷ್ಟಲಿಂಗ ಪೂಜೆ ಮಾಡಿ, ದೇವರು ನಿಮ್ಮೊಳಗೆ ಇದ್ದಾನೆಂದರೆ ಯಾರು ಕೇಳಿದರು. ನಿಸರ್ಗವಾದವನ್ನು ನಂಬುವಂತೆ ಈ ಸೊಂಕು ಹೇಳಿಕೊಟ್ಟಿತ್ತು. ಇಲ್ಲಿಯವರೆಗೆ ಅದೆಷ್ಟೊ ದಾನ, ಬಂಗಾರ, ಒಡವೆಗಳನ್ನು ದೇವರ ಸ್ಥಳಗಳಿಗೆ ಭಕ್ತಿಯಿಂದ ದಾನ ಮಾಡಿದ್ದಾರೆ. ಆದರೆ ನೀವಿರುವ ಸ್ಥಳಗಳಲ್ಲಿ ಒಂದು ಒಳ್ಳೆಯ ಆಸ್ಪತ್ರೆ ಅಥವಾ ಒಂದು ಒಳ್ಳೆಯ ಶಾಲೆ ಕಟ್ಟಲು ದಾನ ಮಾಡಿದರೆ ಹೇಗೆಂದು ವಿಚಾರಿಸಲು ಹೇಳಿತು. ಇಲ್ಲದಿದ್ದರೆ ಮುಂದೆ ನನಗಿಂತಲೂ ಭಯಾನಕ ಪರಿಸ್ಥಿತಿ ಬಂದರೆ ಹೇಗೆ ಎಂಬುದನ್ನು ವಿಚಾರಿಸುವಂತೆ ಮಾಡಿತು. ಧರ್ಮ ದೇವರಿಗಾಗಿ ಬಡಿದಾಡುವದನ್ನು ನಿಲ್ಲಿಸಿ. ನಿವೆಲ್ಲಾ ಮನುಷ್ಯರು ಒಂದಾಗಿರಿ.. ಪ್ರೇಮದಿಂದ ಇರಿ. ನಿಮ್ಮವರನ್ನು ನೋಡಿಕೊಳ್ಳಿ ಎಂಬ ಸಂದೇಶವು ನೀಡಿತು.
ಏನೆ ಇರಲಿ, ನಾವು ಇನ್ನಷ್ಟೂ ದಿನ ಮನೆಯಲ್ಲಿರೋಣ, ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ನಮ್ಮ ದೇಶದಲ್ಲಿಯ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸೋಣ. ನಾವು ಬದುಕೋಣ, ದೇಶ ಬದಕಿಸೋಣ ಆವಾಗ ಮನುಕುಲವೆ ಬದುಕುತ್ತದೆ. ಇದುವೇ ದೇಶ ಭಕ್ತಿ, ಇದುವೇ ಮನುಷ್ಯತ್ವದ ಶಕ್ತಿ.


ಮಲಿಕಜಾನ ಶೇಖ
ಅಕ್ಕಲಕೋಟ,ಮಹಾರಾಷ್ಟ್ರ

Mob:9423468808

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!